ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಣಿ ಹೆಚ್. ಎಂ.ಟಿ ರಸ್ತೆಯ ಅಂಗನವಾಡಿ ಕಟ್ಟಡಕ್ಕೆ ಶಿಲನ್ಯಾಸ ನೆರವೇರಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಎನ್, ಬಸ್ರೂರು ವಲಯದ ಮೇಲ್ವಿಚಾರಕಿ ಸುಜಯ ಅವರು ಕಟ್ಟಡಕ್ಡೆ ಶಿಲನ್ಯಾಸ ನೆರವೇರಿಸಿದರು. ಈ ಸಂದರ್ಭ ಕೋಣಿ ಗ್ರಾಮ ಪಂಚಾಯತ್ ಅದ್ಯಕ್ಷೆ ವಸಂತಿ, ಸದಸ್ಯರಾದ ದಿವಾಕರ ಶೆಟ್ಟಿ,ರಾಘವೇಂದ್ರ ಶೆಟ್ಟಿ, ಸೌಮ್ಯ, ಅಂಗನವಾಡಿ ಶಿಕ್ಷಕಿ ಗುಲಾಬಿ, ಸಹಾಯಕಿ ವೆರೊನಿಕಾ, ಊರಿನ ಪ್ರಮುಖರಾದ ನಾರಾಯಣ ಆಚಾರ್ ಕೋಣಿ, ರಾಜೇಶ್ ಮಯ್ಯ, ಬಾಲವಿಕಾಸನ ಸಮಿತಿಯ ಗಿರೀಶ್ ಪೂಜಾರಿ, ಗಜೇಂದ್ರ ಆಚಾರ್ ಕೋಣಿ, ಕಟ್ಟಡದ ಗುತ್ತಿಗೆದಾರರಾದ ಮುರುಳಿ ಗಾಣಿಗ ಕೋಟೇಶ್ವರ ಹಾಗೂ ಎಚ್.ಎಂ.ಟಿ.ಪ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ನವರಾತ್ರಿಯ ಅಂಗವಾಗಿ ಪ್ರಸಿದ್ಥ ಯಾತ್ರಾಸ್ಥಳ ಕೊಲ್ಲೂರಿಗೆ ಆಗಮಿಸಿದ್ದ ಸಹಸ್ರಾರು ಭಕ್ತರು ವಿಜಯದಶಮಿಯಂದು ತಮ್ಮ ಮಕ್ಕಳಿಗೆ ವಿದ್ಯಾರಂಭ ಮಾಡಿಸಿದರು. ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಾಂಗಣದ ಸರಸ್ವತಿ ಮಂಟಪದ ಮುಂಭಾಗದಲ್ಲಿ ಮಕ್ಕಳಿಗೆ ಪ್ರಾಥಃಕಾಲದಿಂದಲೇ ಅಕ್ಷರಾಭಾಸ ಮಾಡಿಸಲಾಯಿತು. ಹೆತ್ತವರು ಕಾಲಿನ ಮೇಲೆ ಮಕ್ಕಳನ್ನು ಕುರಿಸಿಕೊಂಡು ವಿದ್ಯಾರಂಭ ಮಾಡಿಸಲಾಗುತ್ತದೆ. ಅರ್ಚಕರು ಚಿನ್ನದಿಂದ ಮಗುವಿನ ನಾಲಗೆಯ ಮೇಲೆ ಓಂ ಎಂದು ಬರೆಯುತ್ತಾರೆ, ಬಳಿಕ ಹೆತ್ತವರು ಮಗುವಿನ ಬೆರಳಿಂದ ಅಕ್ಕಿ ತುಂಬಿದ ಹರಿವಾಣದಲ್ಲಿ ಓಂ ಎಂದು ಬರೆಯಿಸಿ ಬಳಿಕ ಮಾತೃಭಾಷೆಯಲ್ಲಿ ಅ,ಆ,ಇ ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಇದರಿಂದ ಮಕ್ಕಳ ನಾಲಿಗೆಯ ಮೇಲೆ ಸರಸ್ವತಿ ದೇವಿ ನೆಲೆಸಿ ಅವರ ಶೈಕ್ಷಣಿಕ ಭವಿಷ್ಯ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಕುಂದಾಪ್ರ ಡಾಟ್ ಕಾಂ ಸುದ್ದಿ. ನವಾನ್ನಪ್ರಾಶನ: ಎಳೆಯ ಕಂದಮ್ಮಗಳಿಗೆ ನವಾನ್ನಪ್ರಾಶನದ ಮೂಲಕ ಮೊದಲ ಭಾರಿಗೆ ಅನ್ನವನ್ನು ತಿನ್ನಿಸಲಾಗುತ್ತದೆ. ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ಅನ್ನಾಹಾರ ಆರಂಭಿಸಿದ ಮಗು ಮುಂದೆ ಯಾವುದೇ ರೀತಿಯ ಅನಾರೋಗ್ಯದಿಂದ ಬಳಲುವುದಿಲ್ಲ ಎಂಬುದು ನಂಬಿಕೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದಲ್ಲಿ ಅ.07ರಿಂದ ಆರಂಭಗೊಂಡ ನವರಾತ್ರಿ ಉತ್ಸವ ಒಂಭತ್ತು ದಿನಗಳ ಕಾಲ ದೇವಳದ ಪ್ರಧಾನ ಅರ್ಚಕ ಹಾಗೂ ತಂತ್ರಿ ಡಾ. ಕೆ. ರಾಮಚಂದ್ರ ಅಡಿಗ ನೇತೃತ್ವದಲ್ಲಿ ಸರಳವಾಗಿ ಆಚರಿಸಲಾಯಿತು. ಗುರುವಾರ ಮಹಾನವಮಿಯಂದು ಮಧ್ಯಾಹ್ನ ಶತಚಂಡಿಕಾ ಯಾಗ, ರಾತ್ರಿ ೮ಕ್ಕೆ ಪುಷ್ಪರಥೋತ್ಸವ ಜರುಗಿತು. ಈ ಬಾರಿ ಕೋವಿಡ್ ಮಾರ್ಗಸೂಚಿಯಂತೆ ಗುರುವಾರ ಸಂಜೆ ಆರರ ನಂತರ ಭಕ್ತಾದಿಗಳಿಗೆ ದೇವಳದ ಪ್ರವೇಶ ನಿರ್ಭಂದಿಸಲಾಗಿತ್ತು. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ದೇವಳದ ಆಡಳಿತ ಮಂಡಳಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಅರ್ಚಕರು, ಕ್ಷೇತ್ರ ಪುರೋಹಿತರು, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಮಾತ್ರ ರಥೋತ್ಸವದಲ್ಲಿ ಭಾಗಿಯಾದರು. ಆಯುಧ ಪೂಜೆ: ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ದೇವರ ಆಯುಧಗಳನ್ನಿಡುವ ಉಗ್ರಾಣದಲ್ಲಿ ಆಯುಧ ಪೂಜೆ, ಶ್ರೀ ಶಾರದಾ ಪೂಜೆ ಹಾಗೂ ಅನ್ನಪ್ರಸಾದ (ಅಡುಗೆಮನೆ)ಯಲ್ಲಿ ವಿಶೇಷವಾಗಿ ಪಲ್ಲಪೂಜೆ…
ಕುಂದಾಪ್ರ ಡಾಟ್ ಕಾಂ ಸುದ್ದಿ,ಕುಂದಾಪುರ: ಶಂಕರನಾರಾಯಣ ವಲಯದ ಹೆಂಗವಳ್ಳಿ ಗ್ರಾಮ ದೊಡ್ಡಬೆಳಾರು ಪ್ರದೇಶದಲ್ಲಿ ಹೆಣ್ಣು ಕಾಡುಕೋಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವ್ರಾಡಿ ಗ್ರಾಮದ ಕಂಡ್ಲೂರು ನಿವಾಸಿ ಗವಂಜಿ ಶಾಹಿದ್ ಬಿನ್ ಗವಂಜಿ ಮಹಮ್ಮದ್ (31) ಎಂಬಾತನನ್ನು ಕುಂದಾಪುರ ಡಿಎಫ್ಓ ಆಶಿಸ್ ರೆಡ್ಡಿ ಮಾರ್ಗದರ್ಶನದಲ್ಲಿ ಶಂಕರನಾರಾಯಣ ಹಾಗೂ ಕುಂದಾಪುರ ಅರಣ್ಯಾಧಿಕಾರಿಗಳ ತಂಡ ಬಂಧಿಸಿದೆ. ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದ್ದು, ಉಳಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ಶಂಕರನಾರಾಯಣ ವಲಯದ ವಲಯ ಅರಣ್ಯಾಧಿಕಾರಿ ಚಿದಾನಂದ, ಉಪ ವಲಯ ಅರಣ್ಯಾಧಿಕಾರಿಗಳಾದ ಕೀರ್ತನ್ ಶೆಟ್ಟಿ, ಮಂಜುನಾಥ ನಾಯಕ್, ಅಭಿನಂದನ್ ಹೆಗಡೆ ಅರಣ್ಯ ರಕ್ಷಕರಾದ ರವಿ, ಪ್ರಶಾಂತ್, ರವೀಂದ್ರ ಅರಣ್ಯ ವೀಕ್ಷಕರಾದ ಶಿವಣ್ಣ ಆರ್. ವೇಷಗಾರ್, ಚಂದ್ರು ಎರೇಶಿಮೆ ಮತ್ತು ವಾಹನ ಚಾಲಕ ರವಿ ಭಾಗವಹಿಸಿದ್ದರು. ಇದನ್ನೂ ಓದಿ:► ಕಡವೆ ಕೊಂದು ಸಾಗಿಸುತ್ತಿದ್ದ ಇಬ್ಬರ ಬಂಧನ -…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಯುವ ದಸರಾ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕುಂದಾಪುರದ ಕೆಡಿಎಫ್ ಕರಾಟೆ & ಫಿಟ್ನೆಸ್ ಅಕಾಡೆಮಿ ಕುಂದಾಪುರ ವಿದ್ಯಾರ್ಥಿಗಳು ಕ್ರಮವಾಗಿ 4 ಚಿನ್ನ 3 ಬೆಳ್ಳಿ ಹಾಗೂ 5 ಕಂಚಿನ ಪದಕ ಪಡೆದುಕೊಂಡಿದ್ದಾರೆ. ಚಿನ್ನದ ಪದಕ ಪಡೆದುಕೊಂಡ ವಿದ್ಯಾರ್ಥಿಗಳಾದ ನವಮಿ ಎಸ್ ಶೆಟ್ಟಿ, ಶ್ರೀಪ್ರಿಯ ಕೆಎಸ್, ಸುಜನ್, ಮಹಮ್ಮದ್ ಅನೀಸ್. ಬೆಳ್ಳಿ ಪದಕ ಗಳಿಸಿದ ವಿದ್ಯಾರ್ಥಿಗಳಾದ ನೋಹ ಮೆಂಡೊನ್ಸಾ, ಆಯುಷ್ ಪುತ್ರನ್, ಸಾಯಿ ವಿಘ್ನೇಶ್ ಹಾಗೇಯೇ ದಕ್ಷ ಕುಮಾರ್ ಶೇರಿಗಾರ್, ಸಚಿನ್, ವಿವೇಕ್ ರಾಮ್ ರಾಯ್ ಪ್ರಭು, ಅರ್ಜುನ್ ಎಸ್ ಶೆಟ್ಟಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಪ್ರೀತೇಶ್, ವಿಶ್ವನಾಥ್ ಉಪ್ಪುಂದ, ಕಿರಣ್ ಕುಂದಾಪುರ, ಸಂದೀಪ್ ವಿ ಕಿರಣ್, ಸಿಹಾನ್ ಶೇಕ್ ಮತ್ತು ಮೊಹಮ್ಮದ್ ಅಫಜಲ್ ಇವರಲ್ಲಿ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದುಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಅಖಿಲ ಭಾರತ ನಿಮಾ೯ಣ ಕಾರ್ಮಿಕರ ಫೆಡರೇಶನ್ (CWFI) ಸಂಯೋಜಿಸಲ್ಪಟ್ಟ ಕನಾ೯ಟಕ ರಾಜ್ಯ ಕಟ್ಟಡ ಮತ್ತು ಇತರೆ ನಿಮಾ೯ಣ ಕಾರ್ಮಿಕರ ಫೆಡರೇಶನ್ ರಾಜ್ಯ ಸಮಿತಿ ಕರೆಯ ಮೇರೆಗೆ ರಾಜ್ಯ ವ್ಯಾಪಿ ಜರಗುವ ಕಟ್ಟಡ ಕಾರ್ಮಿಕರ ಬೇಡಿಕೆ ದಿನಾಚರಣೆಯ ಅಂಗವಾಗಿ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿಮಾ೯ಣ ಕಾರ್ಮಿಕರ ಸಂಘ ರಿ. ಇದರ ನೇತೃತ್ವದಲ್ಲಿ ಇಂದು ಬೈಂದೂರು ಸಿಐಟಿಯು ಕಚೇರಿ ಬಳಿ ಕಟ್ಟಡ ಕಾರ್ಮಿಕರ ಬೃಹತ್ ಪ್ರತಿಭಟನೆ ನಡೆಯಿತು. ಮದುವೆ ಸಹಾಯಧನದ ಮೊತ್ತ ರೂಪಾಯಿ ಒಂದು ಲಕ್ಷಕ್ಕೆ ಹೆಚ್ಚಿಸಬೇಕು,ಸಹಜ ಮರಣ ಪರಿಹಾರ ರೂಪಾಯಿ ಎರಡು ಲಕ್ಷಕ್ಕೆ ಹೆಚ್ಚಿಸಬೇಕು. ಮನೆ ನಿಮಾ೯ಣಕ್ಕೆ ರೂಪಾಯಿ ಐದು ಲಕ್ಷ ಸಹಾಯಧನ ನೀಡಬೇಕು.ಹೆರಿಗೆ ಭತ್ಯೆಯನ್ನು ಪುರುಷ ಫಲಾನುಭವಿಯ ಪತ್ನಿಗೂ ವಿಸ್ತರಿಸಬೇಕು, ಅಡುಗೆ ಅನಿಲ, ಕನ್ನಡಕ, ಅಂಗವಿಕಲ ಪರಿಕರ ಕೊಳ್ಳಲು ಸಹಾಯಧನ, ಕಾರ್ಮಿಕರ ಮಕ್ಕಳಿಗೆ ಮೆರಿಟ್ ವಿದ್ಯಾಥಿ೯ ವೇತನ ಜಾರಿಮಾಡಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಯಿತು. ಮುಖಂಡರಾದ ರಾಜೀವ ಪಡುಕೋಣೆ, ರೊನಾಲ್ಡ್ ರಾಜೇಶ್ ಕ್ವಾಡ್ರಸ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಉಚಿತ ಕಾನೂನು ನೆರವನ್ನು ಪಡೆಯಲು ಅರ್ಹರಾದ ವ್ಯಕ್ತಿಗಳನ್ನು ಗುರುತಿಸಿ ಕಾನೂನಾತ್ಮಕ ಸೇವೆಯನ್ನು ಉಚಿತವಾಗಿ ನೀಡಬೇಕು. ಲೋಕ ಅದಾಲತ್ ಏರ್ಪಡಿಸಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಳಿಸಿ, ಕಾನೂನು ಅರಿವು ಮೂಡಿಸಬೇಕು ಎಂದು ಉಡುಪಿ ಜಿಲ್ಲಾ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಶರ್ಮಿಳಾ ಎಸ್. ಹೇಳಿದರು. ಅವರು ಯು. ಕಮಲಾ ಬಾಯಿ ಪ್ರೌಢಶಾಲೆಯಲ್ಲಿ ನಡೆದ ಉಡುಪಿ ವಲಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯರಾದ ವಿಜಯ ವಾಸು ಪೂಜಾರಿ ಕಾನೂನಿನ ಕುರಿತು ಮಾಹಿತಿಯನ್ನು ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಿವಕುಮಾರ್ ಕಣ್ಣನ್, ಸುಮಿತ್ ಅಣ್ಣಾಮಲೈ, ಪ್ರವೀಣ್ ಮಾಹೆ ಮಣಿಪಾಲ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾದ ಮಲ್ಲಿಕ, ಡೊಮಿಯನ್ ನೊರೋಹ್ನ, ರಮೇಶ್ ದೇವಾಡಿಗರನ್ನು ಗೌರವಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವಿಜಯೇಂದ್ರ ವಸಂತ್, ಜಿಲ್ಲಾ ದೈ.ಶಿಕ್ಷಣ ಅಧಿಕಾರಿ ರಘನಾಥ್,…
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಎರಡು ವರ್ಷಗಳಿಂದ ಮುದ್ದಾಗಿ ಸಾಕಿದ ಹಸುವಿಗೆ ಅದ್ದೂರಿ ಸೀಮಂತ ಶಾಸ್ತ್ರ ನೆರವೇರಿಸಿದ ವೈಶಿಷ್ಟ್ಯಪೂರ್ಣ ಘಟನೆ ತಾಲೂಕಿನ ಗುಲ್ವಾಡಿ ಗ್ರಾಮದ ಕೌಂಜೂರು ಎಂಬಲ್ಲಿ ನಡೆದಿದೆ. ಕೌಂಜೂರು ನಿವಾಸಿ ಬಾಲಕೃಷ್ಣ ಆಚಾರ್ಯ ಅವರ 2 ವರ್ಷದ ಹಿಂದೆ ಮುದ್ದಾದ ಹೆಣ್ಣು ಕರುವನ್ನು ತಂದು ನಂದಿನಿ ಎಂಬ ಹೆಸರಿಟ್ಟು ಪ್ರೀತಿಯಿಂದ ಸಾಕಿದ್ದರು. ಈ ಕರು ಮನೆಯೊಳಗೆಯೇ ಹೆಚ್ಚಾಗಿ ಇರುತ್ತಿತ್ತು. ರಾತ್ರಿ ಹೊತ್ತು ಮಾತ್ರ ಕೊಟ್ಟಿಗೆಯೊಳಗೆ ಇರುತ್ತಿದ್ದು, ಮನೆಯ ಸದಸ್ಯರಿಗೆ ಅಚ್ಚುಮೆಚ್ಚಿನದಾಗಿತ್ತು. ಈ ನಂದಿನಿ ಈಗ ಗರ್ಭ ಧರಿಸಿದ್ದು 7 ತಿಂಗಳ ಗರ್ಭಿಣಿಗೆ ಮನೆಯವರು ಸೀಮಂತ ಕಾರ್ಯಕ್ರಮ ಮಾಡುವ ಮೂಲಕ ಬಯಕೆ ಶಾಸ್ತ್ರ ಮಾಡಿದ್ದಾರೆ. ಸೀಮಂತಕ್ಕೆ ನಂದಿನಿ ಹಸುವನ್ನು ಮದುಮಗಳಂತೆ ಸಿಂಗರಿಸಲಾಗಿತ್ತು. ಚಿನ್ನದ ಸರ, ತಲೆಗೆ ಬಿಂದಿ ಹಾಕಿ ಸೀರೆ ಉಡಿಸಿ, ಸಿಂಗಾರ ಮೊದಲಾದ ಹೂಗಳಿಂದ ಸಿಂಗರಿಸಲಾಗಿತ್ತು. ಬಯಕೆ ಶಾಸ್ತ್ರವನ್ನು ಮನುಷ್ಯರಿಗೆ ಹೇಗೆ ಮಾಡಬೇಕೋ ಅದೇ ರೀತಿ ನಾನಾ ರೀತಿಯಲ್ಲಿ ಭಕ್ಷ್ಯಗಳನ್ನು (ಸಿಹಿತಿಂಡಿ, ಚಕ್ಕುಲಿ ಮೊದಲಾದ ತಿನಿಸು) ಬಡಿಸಿ 15ಕ್ಕೂ ಅಧಿಕ…
ಕುದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ, ಅ.13: ಬಡಗು ತಿಟ್ಟಿನ ಹಿರಿಯ ವೇಷಧಾರಿ ಅನಂತ ಕುಲಾಲ (66) ಅವರು ಮಂಗಳವಾರ ರಾತ್ರಿ ಮೊಳಹಳ್ಳಿಯಲ್ಲಿ ನಿಧನ ಹೊಂದಿದರು. ಅವರು ಕಳೆದ ಆರು ತಿಂಗಳಿನಿಂದ ಅಸೌಖ್ಯದಲ್ಲಿದ್ದರು. ಅಮೃತೇಶ್ವರೀ, ಹಿರಿಯಡಕ, ಸಾಲಿಗ್ರಾಮ, ಪೆರ್ಡೂರು, ಹಾಲಾಡಿ, ಮಾರಣಕಟ್ಟೆ ಮೇಳಗಳಲ್ಲಿ ಕಲಾವಿದರಾಗಿ ದುಡಿದಿದ್ದರು. ಮಾರಣಕಟ್ಟೆ ಮೇಳವೊಂದರಲ್ಲೇ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಅವರು ಯಕ್ಷಗಾನ ಕಲಾರಂಗ ಪ್ರಶಸ್ತಿ ಹಾಗೂ ಎಮ್. ಎಮ್. ಹೆಗಡೆ ಪ್ರಶಸ್ತಿ ಪಡೆದುಕೊಂಡಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಡಿಸೆಂಬರ್ 3ರಂದು ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ ಸರ್ಕಾರದ ವತಿಯಿಂದ ವಿಕಲಚೇತನರ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಾಲೆಗಳಲ್ಲಿ 15 ವರ್ಷಗಳಿಗೂ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ / ಸಲ್ಲಿಸಿರುವ ವಿಶೇಷ ಶಿಕ್ಷಕರಿಗೂ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ನಮೂನೆಯನ್ನು ಉಡುಪಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳು, ಸಿ ಬ್ಲಾಕ್, ತಳಮಹಡಿ, ಜಿಲ್ಲಾ ಪಂಚಾಯತ್ ವಿಭಾಗ, ಜಿಲ್ಲಾಧಿಕಾರಿ ಕಛೇರಿ, ಮಣಿಪಾಲ ಆಥವಾ ಇಲಾಖಾ ವೆಬ್ ಸೈಟ್ www.dwdsc.kar,nic.in ನಿಂದ ಪಡೆದು ಅಕ್ಟೋಬರ್ 25ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0820-2574810/811 ನ್ನು ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
