ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಮಂಗಳೂರಿನ ಕರ್ನಾಟಕ ಪವರ್ ಲಿಫ್ಟಿಂಗ್ ಸಂಸ್ಥೆ ಹಾಗೂ ಸಾಲಿಗ್ರಾಮದ ವೀರಮಾರುತಿ ಜಿಮ್ ಸಹಯೋಗದಲ್ಲಿ ನಡೆದ 24 ನೇ ರಾಜ್ಯಮಟ್ಟದ ಜೂನಿಯರ್ ಮತ್ತು ಸಬ್ ಜೂನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ಮಹಿಳಾ ವಿಭಾಗದಲ್ಲಿ ಆಳ್ವಾಸ್ ತಂಡವು ಪ್ರಥಮ ಸ್ಥಾನ ಪಡೆದರೆ, ಪುರುಷರ ವಿಭಾಗದಲ್ಲಿ ರನ್ನರ್‌ಅಪ್ ಸ್ಥಾನ ಗಳಿಸಿದೆ. ಈ ಮೂಲಕ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಧಾರವಾಡದ ಕರ್ನಾಟಕ ಬಾಲವಿಕಾಸ ಆಕಾಡೆಮಿಯ 2020-21 ಸಾಲಿನ ಅಕಾಡೆಮಿ ಬಾಲಗೌರವ ಪ್ರಶಸ್ತಿಯನ್ನು ಆಳ್ವಾಸ್ ವಿದ್ಯಾರ್ಥಿ ಅಥರ್ವ ಹೆಗ್ಡೆ ಪಡೆದುಕೊಂಡಿದ್ದಾರೆ. ಇವರು ಮೂಡುಬಿದಿರೆಯ ಪ್ರಸನ್ನ ಹೆಗ್ಡೆ ಹಾಗೂ ಶ್ರೇಯಾ ದಂಪತಿ ಪುತ್ರ ಆಳ್ವಾಸ್ ಸಿ.ಬಿ.ಎಸ್.ಸಿ. ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಯಾಗಿರುವ ಇವರ ಚಿತ್ರಕಲೆ, ಸಾಹಿತ್ಯ ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ವಿಜ್ಞಾನ, ಅಬಕಾಸ್, ಸ್ಪೆಲ್‌ಬಿ, ಕ್ಲೇ ಮಾಡೆಲಿಂಗ್ ಮುಂತಾದ ಕ್ಷೇತ್ರದ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಮಾದರಿಯಾಗಿ ರೂಪಿಸುವಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಕೊಲ್ಲೂರಿನಲ್ಲಿಯೂ ಒಳಚರಂಡಿ, ಕುಡಿಯುವ ನೀರು, ರಿಂಗ್ ರೋಡ್ ಯೋಜನೆ ಪ್ರಗತಿಯಲ್ಲಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು. ಉಡುಪಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಅಮ್ಮ ವಿಶ್ರಾಂತಿಗೃಹವನ್ನು ಬುಧವಾರ ಲೋಕಾರ್ಪಣೆಗೊಳಿಸಿ ಬಳಿಕ ಮಾತನಾಡಿ ಜಿ. ಶಂಕರ್ ಅವರು ನೂರಾರು ಸೇವಾ ಕಾರ್ಯಗಳನ್ನು ಕೈಗೊಂಡು ಜನರಿಗೆ ನೆರವಾಗುತ್ತಲೇ ಬಂದಿದ್ದಾರೆ. ಇದೀಗ ಅಮ್ಮ ವಿಶ್ರಾಂತಿಗೃಹ ನಿರ್ಮಿಸಿಕೊಡುವ ತಾಯಿಯ ಸೇವೆಗೈದಿದ್ದಾರೆ ಎಂದರು. ಬಾಲ್ಯದಲ್ಲಿ ತಂದೆ ತಾಯಿಯೊಂದಿಗೆ ಕೊಲ್ಲೂರು ಕ್ಷೇತ್ರಕ್ಕೆ ಬರುತ್ತಿದ್ದೆ. ಇಂದು ಅದೇ ಕ್ಷೇತ್ರದಲ್ಲಿ ಸೇವೆ ಮಾಡುವ ಅವಕಾಶವನ್ನು ತಾಯಿ ಕರುಣಿಸಿದ್ದಾಳೆ ಎಂದ ಅವರು ಕೇಬಲ್ ಕಾರ್ ಯೋಜನೆಯನ್ನು ಜಾರಿಗೊಳಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೋಡಲಾಗುವುದು ಎಂದರು. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಎಷ್ಟೇ ದುಡಿದರೂ ಕೊನೆಯಲ್ಲಿ ಎಲ್ಲವನ್ನು ಬಿಟ್ಡು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದಶಕದಿಂದ ರಕ್ಷಣೆ, ಪ್ರಚಲಿತ ವಿದ್ಯಮಾನ, ಕಲೆ, ಸಂಸ್ಕೃತಿ ಕುರಿತು ಪತ್ರಿಕಾ ಅಂಕಣ ಬರಹಗಳಿಂದ ಪರಿಚಿತರಾಗಿರುವ ಮಾಜಿ ಸೈನಿಕ ಬೈಂದೂರು ಚಂದ್ರಶೇಖರ ನಾವಡರ ಸೈನಿಕ ಜೀವನಾನುಭವದ ‘ಸೇನಾನುಭವ’ ಕೃತಿ ಬಿಡುಗಡೆ ಮಾ.13ರಂದು ಸಂಜೆ 4 ಗಂಟೆಗೆ ಉಡುಪಿಯ ಸುಹಾಸಂ ಆಶ್ರಯದಲ್ಲಿ ಕಿದಿಯೂರು ಹೋಟೆಲ್‌ನ ಪವನ್ ರೂಫ್‌ಟಾಪ್‌ನಲ್ಲಿ ನಡೆಯಲಿದೆ. ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಬಿಡುಗಡೆ ಮಾಡಲಿದ್ದಾರೆ. ಸಾಲಿಗ್ರಾಮದ ಲೇಖಕರ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಕೃತಿ ಪರಿಚಯ ಮಾಡಲಿದ್ದಾರೆ. ಸುಹಾಸಂನ ಅಧ್ಯಕ್ಷ ಶಾಂತರಾಜ ಐತಾಳರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕುಂದಪ್ರಭದ ಸಂಪಾದಕ ಯು. ಎಸ್. ಶೆಣೈ ಪಾಲ್ಗೊಳ್ಳಲಿದ್ದಾರೆ. ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರು ಇರುವಂತೆ ಸುಹಾಸಂ ಕಾರ್ಯದರ್ಶಿ ಎಚ್. ಗೋಪಾಲ ಭಟ್ ತಿಳಿಸಿದ್ದಾರೆ. ಪ್ರಸ್ತುತ ಚಂದ್ರಶೇಖರ ನಾವಡ ಅವರು ಸಾರ್ವಜನಿಕ ರಂಗದ ಯೂನಿಯನ್ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಕ್ಷಣೆ, ವಿದೇಶಾಂಗ, ನೀತಿ, ಬ್ಯಾಂಕಿಂಗ್ ಸಂಬಂಧಿಸಿದ ಲೇಖನ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಲಲಿತ ಕಲಾ ಸಂಘದ ಆಶ್ರಯದಲ್ಲಿ ‘ಹರಿಕಥಾ ಕಲಾಕ್ಷೇಪ’ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಹರಿಕಥಾ ಯುವ ಕಲಾವಿದೆ ಬೆಂಗಳೂರು ರಾಜಾಜಿನಗರದ ಇ.ಎಸ್.ಐ.ಸಿ. ವೈದ್ಯಕೀಯ ಕಾಲೇಜಿನ ಅಂತಿಮ ವೈದ್ಯಕೀಯ ವಿದ್ಯಾರ್ಥಿನಿ ತುಷಾರಾ ಎಲ್. ಆಚಾರ್ಯ ಶ್ರೀ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದ ಐತಿಹ್ಯದ ಕುರಿತಾಗಿ ಹರಿಕಥೆ ಪ್ರಸ್ತುತ ಪಡಿಸಿದರು. ವಿದ್ವಾನ್ ಪ್ರದೀಪ್ ಉಪಾಧ್ಯ ಹಾಗೂ ವಿದ್ವಾನ್ ಅನಂತ ಪದ್ಮನಾಭ ಭಟ್ ಕ್ರಮವಾಗಿ ತಬಲ ಮತ್ತು ಹಾರ್ಮೋನಿಯಂನಲ್ಲಿ ಸಹಕರಿಸಿದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ, ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಲಲಿತ ಕಲಾ ಸಂಘದ ಸಂಯೋಜಕರಾದ ಅಮೃತಾ, ಮಾಲತಿ ಉಪಸ್ಥಿತರಿದ್ದರು. ಸಹ ಸಂಯೋಜಕರಾದ ರಸಿಕ್ ಕುಮಾರ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ಶುಭಾ ಅಡಿಗ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ರಾಯಚೂರು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಇದರ ಆಶ್ರಯದಲ್ಲಿ ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಮುಕ್ತಾಯಗೊಂಡ ರಾಜ್ಯ ಮಟ್ಟದ ಪುರುಷರ ಆಹ್ವಾನಿತ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೂಡಬಿದ್ರೆ ಆಳ್ವಾಸ್ ಪುರುಷರ ತಂಡ ಪ್ರಶಸ್ತಿಯನ್ನು ಗೆದ್ದುಕೊಂತು. ರಾಜ್ಯದ ಸುಮಾರು ೨೦ ಆಹ್ವಾನಿತ ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಫೈನಲ್ಸ್‌ನಲ್ಲಿ ಆಳ್ವಾಸ್ ತಂಡ ಸ್ಕಲ್ವಿ ಅಸ್ತ್ರ ಬೆಂಗಳೂರು ತಂಡವನ್ನು 35-30 ಹಾಗೂ 35-21 ನೇರ ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಜಯಿಸಿಕೊಂಡಿತು. ಲೀಗ್ ಹಾಗೂ ಸೂಪರ್ ಲೀಗ್ ಮಾದರಿಯಲ್ಲಿ ಜರುಗಿದ ಪಂದ್ಯಾಟದಲ್ಲಿ ಸ್ಕಲ್ವಿ ಅಸ್ತ್ರ ಬೆಂಗಳೂರು ತಂಡ ದ್ವಿತೀಯ ಸ್ಥಾನವನ್ನು, ಕಾಮಧೇನು ಸ್ಪೋರ್ಟ್ಸ್ ಕ್ಲಬ್ ಬೆಂಗಳೂರು ತಂಡ ತೃತೀಯ ಸ್ಥಾನವನ್ನು ಹಾಗೂ ಅತಿಥೇಯ ರಾಯಚೂರು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಯೂತ್ ರೆಡ್‌ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ (ಆರ್ಮಿ ಮತ್ತು ನೇವಲ್) ಮತ್ತು ರೋವರ್ಸ್ ಮತು ರೇಂಜರ್ಸ್ ಮಣಿಪಾಲದ ಕೆ. ಎಂ. ಸಿ ಆಸ್ಪತ್ರೆ ಹಾಗೂ ಕುಂದಾಪುರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ. ನಾರಾಯಣ ಶೆಟ್ಟಿ ವಹಿಸಿದ್ದರು. ಶಿಬಿರದ ಉದ್ಘಾಟನೆಯನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ಇದರ ಸಭಾಪತಿಗಳಾದ ಎಸ್. ಜಯಕರ ಶೆಟ್ಟಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕೆ. ಎಂ.ಸಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯರಾದ ಡಾ. ವೇಣು ರಾಜೇಂದ್ರನ್ ಮತ್ತು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ವೈದ್ಯೆಯಾದ ಡಾ. ಸೋನಿ ಡಿ. ಕೋಸ್ಟ ಆಗಮಿಸಿ ರಕ್ತದಾನದ ಮಹತ್ವವನ್ನು ತಿಳಿಸಿದರು. ಈ ಶಿಬಿರದಲ್ಲಿ ೧೭೫ ಯೂನಿಟ್‌ಗಳಷ್ಟು ರಕ್ತ ಸಂಗ್ರಹವಾಗಿದ್ದು, ಕೆ. ಎಂ.ಸಿಯ ಮತ್ತು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಕ್ತ ನಿಧಿ ಕೇಂದ್ರಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಇತ್ತ್ತಿಚೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗುವಂತೆ ಕಂಡು ಬರುತ್ತಿದ್ದು, ಈ ಕುರಿತಂತೆ ಜಿಲ್ಲಾ ಪರಿಣಿತ ಸಲಹಾ ಸಮಿತಿ ಅಭಿಪ್ರಾಯದಂತೆ , ಸಾರ್ವಜನಿಕರು ಕೋವಿಡ್ ಸುರಕ್ಷತಾ ನಿಯಮಗಳಾದ ಮಾಸ್ಟ್ ಬಳಕೆ, ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮಗಳನ್ನು ತಪ್ಪದೆ ಪಾಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ , ಜಿಲ್ಲಾ ಪರಿಣಿತ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ ಶಿಕ್ಷಣ ಸಂಸ್ಥೆಗಳು ತೆರೆದಿದ್ದು, ಅಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕೋವಿಡ್ ಸುರಕ್ಷತಾ ನಿಯಮಗಳ ಪಾಲನೆ ಕಂಡುಬರುತ್ತಿಲ್ಲ, ನಿಯಮ ಉಲ್ಲಂಘಿಸುವ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲೆಗೆ ಕೇರಳ ಮತ್ತು ಮಹಾರಾಷ್ಟçದಿಂದ ಆಗಮಿಸುವರು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿ ನೀಡಬೇಕು, ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ವರದಿ ಇಲ್ಲದೇ ಆಗಮಿಸುವವರ ವಿರುದ್ದ ಎಪಿಡಮಿಕ್ ಕಾಯ್ದೆಯನವಯ ಕ್ರಿಮಿನಲ್ ಮೊಕದ್ದಮೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ದಿನನಿತ್ಯ ಬದುಕಿನ ಜಂಜಾಟದಲ್ಲಿ ಸಿಲುಕುವ ನಮಗೆ ಕ್ರೀಡೆಗಳಿಂದ ಮಾನಸಿಕ ನೆಮ್ಮದಿ ದೊರಕುತ್ತದೆ, ಯುವಕ ಮಂಡಲವು ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು , ಈ ನಿಟ್ಟಿನಲ್ಲಿ ಶ್ರೀವಿನಾಯಕ ಯುವಕ ಮಂಡಲವು ಸಾಂಸ್ಕೃತಿಕ-ಸಾಹಿತ್ಯಿಕ ಕಾರ್ಯಕ್ರಮದ ಜೊತೆ ಸಾಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ ಹೇಳಿದರು. ಅವರು ಶ್ರೀ ವಿನಾಯಕ ಯುವಕ ಮಂಡಲ (ರಿ) ಸಾಬ್ರಕಟ್ಟೆ-ಯಡ್ತಾಡಿ ಇವರ ಆಶ್ರಯದಲ್ಲಿ ದಿ. ವೈ ಕೃಷ್ಣ ಪೂಜಾರಿ ಅವರ ಸ್ಮರಣಾರ್ಥ ಹಾಗೂ ದಶಮಾನೋತ್ಸವ ಸಂಭ್ರಮ ತಿಂಗಳ ತಿರುಳು ಅಂಗವಾಗಿ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಶ್ರೀ ಕೃಷ್ಣ ಟ್ರೋಫಿ-2021 ( ನೆನಪಿನ ತಿರುಗಣಿ ) ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಪಂದ್ಯಾಕೂಟದಲ್ಲಿ 40ತಂಡಗಳು ಭಾಗವಹಿಸಿ ಸಿ.ಎಫ್.ಕೆ ಫ್ರೆಂಡ್ಸ್ ಸಾಬ್ರಕಟ್ಟೆ ತಂಡ ಪ್ರಥಮ ಪ್ರಶಸ್ತಿ ಗೆದ್ದು ,ಎಚ್.ಎಫ್.ಸಿ ಹೊನ್ನಾಳ ತಂಡವು ದ್ವಿತೀಯ ಪ್ರಶಸ್ತಿ ಗೆದ್ದುಕೊಂಡಿತು. ಯಡ್ತಾಡಿ ಗ್ರಾಮ ಪಂಚಾಯತ್‌ನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡಬಿದರೆ: ವಿಜ್ಞಾನ ಕ್ಷೇತ್ರವು ತುಂಬಾ ವಿಶಾಲವಾಗಿದ್ದು, ವಿದ್ಯಾರ್ಥಿಗಳು ತಮ್ಮ ಯೋಚನಾ ವಿಧಾನವನ್ನು ಕೂಡ ವಿಸ್ತರಿಸಿಕೊಳ್ಳಬೇಕಿದೆ. ಇಂದಿನ ವಿದ್ಯಾರ್ಥಿಗಳು ಕೇವಲ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ವಿಭಾಗಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಿದ್ದಾರೆ. ಇವುಗಳಿಗೆ ಹೊರತಾದ ವಿಜ್ಞಾನದ ವಿವಿಧ ಕ್ಷೇತ್ರಗಳನ್ನು ವಿದ್ಯಾರ್ಥಿಗಳು ಆಯ್ದುಕೊಳ್ಳಬೇಕಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ರಾಷ್ಟ್ರೀಯ ವಿಜ್ಞಾನದ ದಿನದ ಪ್ರಯುಕ್ತ ಆಳ್ವಾಸ್ ಪದವಿ ವಿಜ್ಞಾನ ವಿಭಾಗದಿಂದ ಆಯೋಜಿಸಲಾದ ‘ಆವಿರ್ಭವ 2020-21’ ಸೈನ್ಸ್ ಫೆಸ್ಟ್‌ನ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ವಿದ್ಯಾರ್ಥಿಯಲ್ಲಿರುವ ಆಸಕ್ತಿ ಬದಲಾವಣೆಗಳನ್ನು ತರಬಲ್ಲದು. ವಿಜ್ಞಾನದ ಆವಿಷ್ಕಾರ, ಸಂಶೋಧನೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುವ ಅವಶ್ಯಕತೆಯಿದೆ. ಸಂಶೋಧನಾಕ್ಷೇತ್ರದಲ್ಲಿ ಅಪಾರ ಅವಕಾಶಗಳಿದ್ದು, ಭಾರತಕ್ಕಾಗಿ ಕೆಲಸ ಮಾಡಬಲ್ಲ ನುರಿತ ವಿಜ್ಞಾನಿಗಳು ಬೇಕಾಗಿದ್ದಾರೆ ಎಂದರು. ಪದವಿ ವಿಭಾಗದಲ್ಲಿ6 ಸ್ಪರ್ಧೆಗಳು , ಪದವಿಪೂರ್ವ ವಿಭಾಗದಲ್ಲಿ 6 ಸ್ಪರ್ಧೆಗಳು ಸೇರಿದಂತೆ ಒಟ್ಟು 12 ಸ್ಪರ್ಧೆಗಳನ್ನು ಆಯೋಜಿಲಾಯಿತು. ಪದವಿ ಪೂರ್ವ ವಿಭಾಗದಲ್ಲಿ ಆಳ್ವಾಸ್ ಪದವಿ ಪೂರ್ವಕಾಲೇಜಿನ ವೇಗ ತಂಡ ಪ್ರಥಮ, ಕ್ಯಾನೋಪಸ್…
