ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಸೋಮವಾರ ಸಂಪನ್ನಗೊಂಡಿತು. ಬೆಳಗ್ಗೆ ಶ್ರೀದೇವರ ರಥಾರೋಹಣ ಪೂರ್ವ ವಿಧಿಗಳು ಆರಂಭಗೊಂಡವು. ತಂತ್ರಿಗಳು ಧಾರ್ಮಿಕ ವಿಧಿ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀದೇವರಿಗೆ ಶತರುದ್ರಾಭಿಷೇಕ ಇನ್ನಿತರ ಧಾರ್ಮಿಕ ವಿಧಿ ನಡೆದ ಬಳಿಕ ಭಕ್ತರ ಜಯಘೋಷದೊಂದಿಗೆ ಭವ್ಯ ರಥೋತ್ಸವ ನಡೆಯಿತು. ಸಂಜೆ ಬಸವನಗುಡಿ ಸನ್ನಿಧಿಯಿಂದ ಶ್ರೀದೇವರಿಗೆ ಅಭಿಮುಖವಾಗಿ ರಥ ಏಳೆದ ಬಳಿಕ ರಥಾಅವರೋಹಣದ ವಿಧಿ ಸಮಾಪನಗೊಳ್ಳುತ್ತದೆ. ಕೋವಿಡ್ ನಿರ್ಬಂಧದ ಹಿನ್ನೆಲೆಯಲ್ಲಿ ಭಕ್ತರಿಗೆ ಸೀಮಿತ ಸಂಖ್ಯೆಯಲ್ಲಿ ಪ್ರವೇಶಕ್ಕೆ ಅವಕಾಶ ಎಂದು ಹೇಳಲಾಗಿದ್ದರೂ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ನವ ವಧುವರರು ವಾಡಿಕೆಯಂತೆ ಹಬ್ಬಕ್ಕೆ ಬಂದು ಕೊಡಿ(ಕಬ್ಬು) ಕೊಂಡು ದೇವರಿಗೆ ಪೂಜೆ ಸಲ್ಲಿಸಿದರು. ಧಾರ್ಮಿಕ ವಿಧಿ ವಿಧಾನಗಳನ್ನು ಹೊರತುಪಡಿಸಿ ಬೇರಾವುದೇ ಜಾತ್ರೆಯ ಸಂಭ್ರಮ ಕಂಡು ಬರಲಿಲ್ಲ. ಜಾತ್ರೆಯ ಅಂಗಡಿಗಳು, ಆಟಿಕೆ ಸಾಮಾಗ್ರಿಗಳು ಯಾವುದೂ ಇಲ್ಲದಿರುವುದರಿಂದ ಹಬ್ಬ ಎಂದಿನಂತೆ ಕಳೆಗಟ್ಟಲಿಲ್ಲ. ಯುವಕರು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮರವಂತೆ ಗ್ರಾಮ ಪಂಚಾಯಿತಿಯ ಸುವರ್ಣ ಭವನದಲ್ಲಿ ನಡೆದ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಮತ್ತು ಮಕ್ಕಳ ಹಕ್ಕುಗಳ ಗ್ರಾಮಸಭೆ ನಡೆಯಿತು. ಬೈಂದೂರು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಮಾತನಾಡಿ, ಭಾರತದ ಸಂವಿಧಾನವು ದೇಶದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುತ್ತದೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಜನಾರ್ದನ ಮರವಂತೆ, ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳಿಂದ ಸಂವಿಧಾನ ಪೀಠಿಕೆಯನ್ನು ಓದಿಸಲಾಯಿತು ಮತ್ತು ಫಲಕದ ಮೇಲೆ ಬರೆಸಲಾಯಿತು. ಪೀಠಿಕೆಯ ಪ್ರಧಾನ ಅಂಶಗಳ ಕುರಿತು ಸ್ಪರ್ಧೆ ನಡೆಸಿ ಬಹುಮಾನಿತರ ಹೆಸರು ಪ್ರಕಟಿಸಲಾಯಿತು. ಶಿಕ್ಷಕಿ ಚೈತ್ರಾ ಶೆಟ್ಟಿ ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಿದರು. ಪಂಚಾಯಿತಿ ಕಾರ್ಯದರ್ಶಿ ದಿನೇಶ್ ಶೇರೆಗಾರ್ ಅಧ್ಯಕ್ಷತೆ ವಹಿಸಿದ್ದರು. ಕರ ಸಂಗ್ರಾಹಕ ಶೇಖರ್ ಮರವಂತೆ ಸ್ವಾಗತಿಸಿದರು. ಗಣಕಯಂತ್ರ ನಿರ್ವಾಹಕ ಗುರುರಾಜ್ ಬಿಲ್ಲವ ವಂದಿಸಿದರು. ಶಿಕ್ಷಕ…
ಕುಂಧಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರಿಂದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಈ ಸಂಧರ್ಭದಲ್ಲಿ ಸಂಘದ ಕಾರ್ಯಕರ್ತರಾದ ಉಮೇಶ ಸುವರ್ಣಾ, ರಾಜು, ಸೀತಾ, ಗೀತಾ, ದೀಪಕ ಶೆಟ್ಟಿ, ರಿತೇಶ ಶೆಟ್ಟಿ, ಸುಧಾಕರ ಪೂಜಾರಿ , ಪ್ರಶಾಂತ ಪೂಜಾರಿ ಬೇಕರಿ, ಮಣಿಕಂಠ ಪೂಜಾರಿ , ಶರತ ಆಚಾರ್ಯ, ಸಂಪತ್ ಶೆಟ್ಟಿ, ಪ್ರಮೋಧ ಅಯ್ಯಂಗಾರ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಬೀದರ್ ಜಿಲ್ಲೆಯ ದೇಶಪಾಂಡೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಮಂದಾರ ಕಲಾವಿದರ ವೇದಿಕೆ ಜಂಟಿಯಾಗಿ ನೀಡುವ ಕರ್ನಾಟಕ ಜಾನಪದ ಭೂಷಣ ಪ್ರಶಸ್ತಿಗೆ ಗಂಗೊಳ್ಳಿಯ ಖ್ಯಾತ ಗಾಯಕ ಹಾಗೂ ಉಡುಪಿ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಗಣೇಶ ಗಂಗೊಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಮಾರ್ಚ್ನಲ್ಲಿ ಬೀದರ್ನಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಜಿ. ದೇಶಪಾಂಡೆ ಪ್ರಕಟಿಸಿದ್ದಾರೆ
ನಾಡಿನ ಪ್ರಸಿದ್ದ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ, ಕರಾವಳಿಯ ಅತ್ಯಂತ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ‘ಕೊಡಿ ಹಬ್ಬ’ದ ಮನ್ಮಹಾರಥೋತ್ಸವ ಈ ಬಾರಿ ಕಾರ್ತಿಕ ಮಾಸದ ಹುಣ್ಣಿಮೆಯಂದು (ನ.30 ಸೋಮವಾರ) ಜರುಗಲಿದೆ. ಕೋಟೇಶ್ವರ ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ರಥೋತ್ಸವಕ್ಕೆ ಸಕಲ ಸಿದ್ದತೆಗಳು ನಡೆದಿದೆ. ಏಳು ದಿವಸಗಳ ಕಾಲ ನಡೆಯುವ ಉತ್ಸಕ್ಕೆ 60 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಗರ್ನಪಠಾರೋಹಣ ಮಾಡುವುದರ ಮೂಲಕ ಚಾಲನೆ ನೀಡಲಾಗಿದೆ. ಈ ಸಂದಂರ್ಭದಲ್ಲಿ ಜರುಗುವ ಧಾರ್ಮಿಕ ಆಚರಣೆಗಳು, ಕಟ್ಟೆಪೂಜೆ, ರಥೋತ್ಸವ ಮರುದಿನ ನಡೆಯುವ ಓಕುಳಿ ಆಟ ಹಬ್ಬಕ್ಕೆ ಮತ್ತಷ್ಟು ಕಳೆಗಟ್ಟಲಿದೆ. ಜಾತ್ರಾ ಪ್ರಯುಕ್ತ ಇಡೀ ಕೋಟೇಶ್ವರ ಪಟ್ಟಣ ಸಿಂಗರಿಸಿಕೊಂಡಿದೆ. ಭಾವೈಕ್ಯತೆಯ ಸಂಗಮ: ಇಲ್ಲಿನ ಬ್ರಹ್ಮರಥವನ್ನು ನಿರ್ಮಿಸುವಲ್ಲಿ ಮುಸ್ಲಿಂ ಬಾಂಧವರ ಕೊಡುಗೆಯೂ ಇದೆ. ಪಾರಂಪರಿಕವಾದ ಧಾರ್ಮಿಕ ಕಾರ್ಯವನ್ನು ಸ್ಥಳೀಯ ಮುಸ್ಲಿಂ ಬಂಧುಗಳು ಅತ್ಯಂತ ಭಯ ಭಕ್ತಿಯಿಂದ ನೆರವೇರಿಸುತ್ತಾರೆ. ಮೈಸೂರು ರಾಜ್ಯದ ದೊರೆ ಟಿಪ್ಪು ಸುಲ್ತಾನ್ ಕಾಲದಿಂದ ನಡೆದು ಬಂದಿರುವ `ದೀವಿಟಿಗೆ ಸಲಾಮ್` ಎನ್ನುವ ವಿಶಿಷ್ಠ ಧಾರ್ಮಿಕ ಸೇವೆ ಇಂದಿಗೂ ಮುಂದುವರೆಯುತ್ತಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀಮೂಕಾಂಬಿಕಾ ದೇವಳಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭಾನುವಾರ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಸಲ್ಲಿಸಿದರು. ದೇವಳದ ವತಿಯಿಂದ ಡಿ. ಕೆ ಶಿವಕುಮಾರ್ ಅವರನ್ನು ಗೌರವಿಸಲಯಿತು. ಈ ಸಂದರ್ಭ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು , ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಉದ್ಯಮಿ ಯು. ಬಿ. ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎಸ್. ರಾಜು ಪೂಜಾರಿ , ಯು.ಆರ್. ಸಭಾಪತಿ , ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ , ವಂಡ್ಸೆ ಬಾಕ್ಲ ಕಾಂಗ್ರೆಸ್ ಅಧ್ಯಕ ಪ್ರದೀಪ್ ಕುಮಾರ್ ಶೆಟ್ಟಿ , ಮಾಜಿ ಅಧ್ಯಕ್ಷ ಕೆ. ರಮೇಶ್ ಗಾಣಿಗ ಕೊಲ್ಲೂರು , ತಾಲೂಕು ಪಂಚಾಯತ್ ಸದಸ್ಯೆ ಗ್ರೀಷ್ಮಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶನಿವಾರ ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಧರ್ಮದರ್ಶಿ ಶೆಟ್ಟಿಪಾಲ್ ಸಚ್ಚಿದಾನಂದ ಚಾತ್ರ ಅವರು ಶಿ.ಕೆ. ಶಿವಕುಮಾರ್ ಅವರನ್ನು ಗೌರವಿಸಿದರು. ಈ ಸಂದರ್ಭ ಮಾಜಿ ಸಚಿವ ವಿನಯಕುಮಾರ ಸೊರಕೆ, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಯು. ಆರ್. ಸಭಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ಎಸ್ ರಾಜು ಪೂಜಾರಿ, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಮೊದಲಾದವರು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಕೋಟದ ಕೃಷ್ಣಭವನ ಹೋಟೆಲ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಶನಿವಾರ ನಡೆದ ಅಪಘಾತದಲ್ಲಿ ಒಬ್ಬರು ಯುವತಿ ಮೃತರಾಗಿದ್ದು, ಇನ್ನೊಬ್ಬರು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೇಳೂರು ನಿವಾಸಿ ಶ್ರೇಯಾ ಶಾನುಭಾಗ್ (24) ಮೃತರು. ಉಜಿರೆ ಮೂಲದ ಪ್ರಜ್ಞಾ (25) ಗಾಯಾಳು. ಕುಂದಾಪುರದಿಂದ ಬ್ರಹ್ಮಾವರ ಕಡೆಗೆ ಸ್ಕೂಟಿಯಲ್ಲಿ ಬರುತ್ತಿದ್ದಾಗ ಫಾರ್ಚೂನ್ ವಾಹನ ಡಿಕ್ಕಿ ಹೊಡೆದು ಇಬ್ಬರೂ ರಸ್ತೆಗೆ ಬಿದ್ದಿದ್ದರು ಎಂದು ತಿಳಿಸಲಾಗಿದೆ. ಪರಾರಿಯಾಗಲೆತ್ನಿಸಿದ ಫಾರ್ಚೂನ್ ವಾಹನವನ್ನು ಕೋಟದ ಜೀವನ್ ಮಿತ್ರ ಆಂಬುಲನ್ಸ್ ಮಾಲೀಕ ನಾಗರಾಜ್ ಪುತ್ರನ್ ಅವರ ಸಮಯ ಪ್ರಜ್ಞೆಯಿಂದ ಸಾಸ್ತಾನ ಟೋಲ್ ಬಳಿ ವಾಹನ ತಡೆದು ಕೋಟ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು. ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಬಿ.ಎಸ್.ಡಬ್ಲೂ ಹಾಗೂ ಫುಡ್ ಆಂಡ್ ನ್ಯೂಟ್ರೀಷನ್ ವಿಭಾಗದ ವತಿಯಿಂದ ‘ಅನ್ವೇಷಣಾ’ ರಿಸರ್ಚ್ ಫೋರಂ ಉದ್ಘಾಟನಾ ಕಾರ್ಯಕ್ರಮವು ಸುಂದರಿ ಆನಂದ ಆಳ್ವ ಕ್ಯಾಂಪಸ್ನಲ್ಲಿ ಜರುಗಿತು. ಆಳ್ವಾಸ್ ಕಾಲೇಜಿನ ಸಂಶೋಧನಾ ವಿಭಾಗದ ಸಂಯೋಜಕ ಡಾ. ಸುಕೇಶ್ ಮಾತನಾಡಿ, ಸಂಶೋಧನೆಯ ಹಲವು ಆಯಾಮಗಳ ಬಗ್ಗೆ ಮಾಹಿತಿ ನೀಡಿದರು. ಸಂಶೋಧನೆಯ ಕೌಶಲ್ಯ ತರಗತಿಯಲ್ಲಿ ಪಾಠ ಕೇಳುವುದರಿಂದ ಬರುವುದಲ್ಲ, ಪರಸ್ಪರ ಚರ್ಚಿಸಿ ಪ್ರಶ್ನೆಗಳು ಹುಟ್ಟಿಕೊಂಡಾಗ, ಉತ್ತರವನ್ನು ಸಂಶೋಧನೆಯ ಮೂಲಕ ಕಂಡುಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು. ಸಂಶೋಧನೆಯ ಪ್ರಕ್ರಿಯೆಗೆ ಹೆಚ್ಚಿನ ಒದು ಅಗತ್ಯ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್ ವಿದ್ಯಾರ್ಥಿಗಳು ಪರಸ್ಪರ ಚರ್ಚೆ ನಡೆಸುವುದರಿಂದ ಯಾವುದೇ ವಿಷಯದ ಆಳ-ಅಗಲ ತಿಳಿಯಲು ಸಾಧ್ಯ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ತಿಳಿಸಿದರು. ಪದವಿ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲ ಕೆ. ಹಾಗೂ ಫುಡ್ ಆಂಡ್ ನ್ಯೂಟ್ರೀಷನ್ ವಿಭಾಗದ ಮುಖ್ಯಸ್ಥೆ ಆಶಿತಾ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಉಡುಪಿ, ರಾಷ್ಟೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿ, ಕುಂದಾಪುರ, ತಾಲೂಕು ಆಯುಷ್ ಘಟಕ, ಕುಂದಾಪುರ ಇವರ ಆಶ್ರಯದಲ್ಲಿ ಮತ್ತು ರೋಟರಿ ಕುಂದಾಪುರ ರಿವರ್ ಸೈಡ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಸಹಭಾಗಿತ್ವದಲ್ಲಿ ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ಯೋಗ ತರಬೇತಿ ಶಿಬಿರ ಕುಂದಾಪುರದ ಮಿನಿ ವಿಧಾನ ಸೌಧದ ಆವರಣದಲ್ಲಿ ಜರಗಿತು. ಶಿಬಿರ ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಯೋಗ ಭಾರತೀಯ ಸಂಸ್ಕೃತಿಯಲ್ಲಿ ಅಮೂಲ್ಯ ವಾದ ಪದ್ಧತಿ, ಜಗತ್ತಿಗೆ ಮಹತ್ತರ ಕೊಡುಗೆಯನ್ನು ದೇಶ ಕೊಟ್ಟಿದೆ. ವಿಜ್ಞಾನ, ತಂತ್ರಜ್ಞಾನ, ಗಣಿತದಿಂದ ಹಿಡಿದು ಹಲವು ವಲಯಗಳಲ್ಲಿ ಕೊಡುಗೆಯನ್ನು ಕೊಟ್ಟಿದೆ. ಅದರಲ್ಲಿ ಯೋಗವು ಒಂದು, ಆಧ್ಯಾತ್ಮ ಯೋಗದ ಒಂದು ಭಾಗ. ನಮಗೆ ಏಕಾಗ್ರತೆ, ಸಕಾರಾತ್ಮಕ ಯೋಚನೆ ಮಾಡಲು ಮತ್ತು ಲವಲವಿಕೆಯಿಂದಿರಲು ಸಹಾಯ ಮಾಡುತ್ತವೆ. ಯೋಗಾಸನವು ಸೌಮ್ಯವಾದ ವ್ಯಾಯಾಮವಾಗಿದ್ದು ಅದು ನಿಮ್ಮ ಮನಸ್ಸನ್ನು ಶಾಂತ…
