Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು 1 ಕಿ.ಮೀ.ದೂರವನ್ನು 25 ನಿಮಿಷ 16 ಸೆಕೆಂಡುಗಳಲ್ಲಿ ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಿವಾಸಿ, ಪದವೀಧರ ಶಿಕ್ಷಕ ನಾಗರಾಜ ಖಾರ್ವಿ ಅವರನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಈಜು ತರಬೇತುದಾರರಾದ ಬಿ.ಕೆ.ನಾಯ್ಕ್, ಕಾರ್ಪೋರೇಟರ್ಗಳಾದ ಶೋಭ ರಾಜೇಶ್, ಜಯಲಕ್ಷ್ಮೀ ಶೆಟ್ಟಿ, ಶರತ್, ಮಾಜಿ ಕಾರ್ಪೋರೇಟರ್ ರಾಧಾಕೃಷ್ಣ, ಈಜುಕೊಳದ ವ್ಯವಸ್ಥಾಪಕರಾದ ರಮೇಶ್ ಬಿಜೈ, ನಿಜಗುಣ ದೊಡ್ಡಮನಿ, ನಾಗೇಂದ್ರನಾಥ್ ಉಪಸ್ಥಿತರಿದ್ದರು. ನಾಗರಾಜ ಖಾರ್ವಿ ಸ.ಹಿ.ಪ್ರಾ.ಶಾಲೆ ಕಂಚುಗೋಡು, ಸ.ಹಿ.ಪ್ರಾ.ಶಾಲೆ ಗುಜ್ಜಾಡಿ, ಸರಸ್ವತಿ ವಿದ್ಯಾಲಯ ಗಂಗೊಳ್ಳಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು, ಡಾ.ಟಿ.ಎಂ.ಎ.ಪೈ, ಶಿಕ್ಷಣ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೀದರ್ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಹಾಗೂ ಬೆಂಗಳೂರಿನ ಕವಿ ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಪ್ಪುಂದ ರೈತಸಿರಿ ಸಭಾಭವನದಲ್ಲಿ ನಡೆದ ಕವಿ ಕೆ.ಪುಂಡಲೀಕ ನಾಯಕ ಅವರ ಕವನ ಸಂಕಲನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರವೀಣ್ ಬಿ. ಶೆಟ್ಟಿ ಬೈಂದೂರು ಅವರಿಗೆ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಬೀದರ್ ವತಿಯಿಂದ ರಾಜ್ಯ ಮಟ್ಟದ  ‘ಸಂಗೀತ ಚೂಡಾಮಣಿ ರತ್ನ ರಾಜ್ಯ ಪ್ರಶಸ್ತಿ’ನೀಡಿ ಗೌರವಿಸಲಾಯಿತು. ಡಾ| ಎಂ.ಜಿ.ದೇಶಪಾಂಡೆಯವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಎ.ಎಸ್. ಎನ್ ಹೆಬ್ಬಾರ್,ಎಸ್ ಪ್ರಕಾಶ್ಚಂದ್ರ ಶೆಟ್ಟಿ, ಬೆಳಗೋಡು ರಮೇಶ್ ಭಟ್ಟ್, ಡಾ. ಪಾರ್ವತಿ ಜಿ.ಐತಾಳ್, ಪ್ರೋ. ಉಪೇಂದ್ರ ಸೋಮಯಾಜಿ, ಎಸ್.ಜನಾರ್ದನ ಮರವಂತೆ, ಓಂ ಗಣೇಶ್ ಉಪ್ಪುಂದ, ಯ.ಎಸ್ ಶೆಣೈ, ಕೆ.ಪುಂಡಲೀಕ ನಾಯಕ್ ಉಪಸ್ಥಿತಿತರಿದ್ದರು. ಅವರು ಪ್ರಸ್ತುತ ಪ್ರತಿಷ್ಟಿತ ಅಮೇರಿಕನ್ ಕಂಪೆನಿ ಒರಾಕಲ್ ಕಾರ್ಪೊರೇಶನ್ ನಲ್ಲಿ ಸೀನಿಯರ್ ಕ್ಲೌಡ್ ಆರ್ಕಿಟೆಕ್ಟ್ ಆಗಿದ್ದು ಸಾಹಿತ್ಯ ರಚನೆ…

Read More

ಕುಂದಾಪ್ರ ಡಾಟ್ ಕಾಂ‌ ಸುದ್ದಿ. ಕುಂದಾಪುರ: ಕಳೆದ ಹಲವು ವರ್ಷಗಳಿಂದ ಆಮೆನಡಿಗೆಯಂತೆ ಸಾಗಿದ್ದ ಕುಂದಾಪುರ ಪ್ಲೈಓವರ್ ಕಾಮಗಾರಿ ಅಂತ್ಯಗೊಂಡಿದ್ದು ಭಾನುವಾರ ಸಂಜೆಯಿಂದ ಸಂಚಾರಕ್ಕೆ ಮುಕ್ತವಾಗಿದೆ. ಕುಂದಾಪುರ ಪ್ಲೈಓವರ್ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಕುಂದಾಪುರ ಹೆದ್ದಾರಿ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಹಲವು ಭಾರಿ ಪ್ರತಿಭಟನೆ ನಡೆಸಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದಿದ್ದರು. ಕುಂದಾಪುರ ಪುರಸಭೆ‌ಯ ಸಾಮಾನ್ಯ ಸಭೆ ಹಾಗೂ ವಿವಿಧೆಡೆ ಈ ಬಗ್ಗೆ ಸಾಕಷ್ಟು ಭಾರಿ ಚರ್ಚೆ ನಡೆದಿದ್ದವು. ಅಂತಿಮವಾಗಿ ಪ್ಲೈಓವರ್ ಸಂಚಾರಕ್ಕೆ ಮುಕ್ತಗೊಂಡಿರುವುದು ಕಳೆದೊಂದು ದಶಕದಿಂದ ಸಂಚಾರ ಅಡಚಣೆ ಎದುರಿಸುತ್ತಿದ್ದ ನಾಗರಿಕರು ಸದ್ಯ ನಿಟ್ಟುಸಿರು ಬಿಡುವಂತಾಗಿದೆ. ಈ ನಡುವೆ ಪ್ಲೈಓವರ್ ಕಾಮಗಾರಿಯನ್ನು ತರಾತುರಿಯಲ್ಲಿ ನಡೆಸಿರುವ ಗುತ್ತಿಗೆದಾರ ಸಂಸ್ಥೆಯ ನಡೆಯ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಕುಂದಾಪುರದ ನಾಗರಿಕರು ವಾರದ ಹಿಂದೆ ಹೆದ್ದಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಸಭೆ ಸೇರಿ ಪ್ಲೈಓವರ್ ಕಾಮಗಾರಿಯ ಲೋಪದೋಷ, ಅಸಮರ್ಕಪವಾಗಿರುವ ಸರ್ವಿಸ್ ರಸ್ತೆ, ಬಸ್ರೂರು ಅಂಡರ್‌ ಪಾಸ್, ಶಾಸ್ತ್ರಿ ವೃತ್ತದ ಬಳಿಯ ರಸ್ತೆ ದುರಸ್ತಿ ಮೊದಲಾದ ಅಂಶಗಳ‌…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನವದೆಹಲಿಯ ಜಿ-ಟೌನ್ ಸೊಸೈಟಿ ನಡೆಸಿದ 2020ರ ಭಾರತದ ಅಗ್ರ 50 ಪ್ರಭಾವಿ ವ್ಯಕ್ತಿಗಳ ಸಮೀಕ್ಷೆಯಲ್ಲಿ ಮಣಿಪಾಲ ಎಂಐಟಿ ಉಪನ್ಯಾಸಕ ಡಾ. ಬಾಲಕೃಷ್ಣ ಎಸ್. ಮದ್ದೋಡಿ ಅವರು ಆಯ್ಕೆಯಾಗಿದ್ದು, ಪರಿಸರ ಸಂರಕ್ಷಣೆ ವಿಭಾಗದಲ್ಲಿ ಡಾ. ಬಾಲಕೃಷ್ಣ ಎಸ್. ಮದ್ದೋಡಿ ಅವರನ್ನು ಆಯ್ಕೆ ಮಾಡಲಾಗಿದ್ದು, ಇತ್ತಿಚಿಗೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಳೆದ ಕೆಲವು ವರ್ಷಗಳಲ್ಲಿ ಬಾಲಕೃಷ್ಣ ಮದ್ದೋಡಿ ಅವರು ಕೈಗೊಂಡ ಪರಿಸರ ಸಂರಕ್ಷಣೆ ಬಗೆಗಿನ ಕಾರ್ಯಗಳು, 100 ವರ್ಷಗಳಿಗಿಂತ ಹೆಚ್ಚು ಹಳೆಯದಾದ 5 ಮರಗಳನ್ನು ಮರು ನೆಡುವಿಕೆ, 2000ಕ್ಕಿಂತ ಹೆಚ್ಚಿನ ಸಸಿಗಳನ್ನು ನೆಡುವುದು, 60 ಮರಗಳನ್ನು ಕಡಿಯುವುದನ್ನು ತಡೆಗಟ್ಟುವಲ್ಲಿ ಅವರ ಕೊಡುಗೆಯನ್ನು ಸಮೀಕ್ಷೆ ತೀರ್ಪುಗಾರರು ಪರಿಗಣಿಸಿ ಆಯ್ಕೆಮಾಡಲಾಗಿದೆ. ಹಸಿರು ಅಭಿವೃದ್ಧಿ, ಗ್ರೀನಥಾನ್ ಕಾರ್ಯಕ್ರಮದ ಮೂಲಕ ಕರ್ನಾಟಕದ ಸುಮಾರು 20,000 ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಕಾರ್ಯಕ್ರಮ ಅವರು ಸಂಘಟಿಸಿದ್ದಾರೆ. ವಿಶ್ವ ಜಲ ದಿನ, ವಿಶ್ವ ಪರಿಸರ ದಿನ, ವಿಶ್ವ ಭೂ ದಿನ, ವಿಶ್ವ ಓಝೋನ್ ದಿನವನ್ನು ಆಯೋಜಿಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಭಾನುವಾರ 319 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 156, ಕುಂದಾಪುರ, ಬೈಂದೂರು ತಾಲೂಕಿನ 103, ಕಾರ್ಕಳ, ಹೆಬ್ರಿ ತಾಲೂಕಿನ 59 ಮಂದಿಗೆ ಹಾಗೂ ಹೊರ ಜಿಲ್ಲೆಯಿಂದ ಬಂದ ಓರ್ವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 319 ಪ್ರಕರಣಗಳಲ್ಲಿ 127 ಸಿಂಟಮಿಕ್ ಹಾಗೂ 192 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 35 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ 284 ಮಂದಿ ಹೋಮ್ ಐಸೊಲೇಷನ್ ಆಗಿದ್ದಾರೆ. ಜಿಲ್ಲೆಯಲ್ಲಿ ಇಂದು ಒಟ್ಟು 3820 ಮಂದಿಯನ್ನು ಪರೀಕ್ಷಿಸಲಾಗಿದೆ. ಒಟ್ಟು 1565 ಸಕ್ರಿಯ ಪ್ರಕರಣಗಳಿದ್ದು,  245 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದಲ್ಲಿ ಕೊರೋನಾ ಅಬ್ಬರದಿಂದ ಕಾನೂನು ಬಿಗಿಗೊಳಿಸಿರುವ ಹೊತ್ತಲ್ಲೇ ಹಲವು ತಿಂಗಳ ಹಿಂದೆ ನಿಗದಿಯಾಗಿದ್ದ ಮದುವೆ ಮುಂತಾದ ಖಾಸಗಿ ಕಾರ್ಯಕ್ರಮಗಳು ಕೊರೋನಾ ಮಾರ್ಗಸೂಚಿಯಂತೆ ನಡೆಯುತ್ತಿವೆ. ವಾರದ ಕರ್ಪ್ಯೂ ನಡುವೆಯೂ ಇಂದು ಹಾಗೂ ನಾಳೆ ಶುಭ ಮುಹೂರ್ತವಿರುವುದರಿಂದ ಕೋವಿಡ್ ನಿಯಮ ಪಾಲಿಸಿಕೊಂಡು, ಅನುಮತಿ ಪಡೆದ ನೂರಾರು ಕಾರ್ಯಕ್ರಮಗಳು ಕರಾವಳಿ ಭಾಗದಲ್ಲಿ ನಡೆಯುತ್ತಿದೆ. ಎ.25ರಂದು ಕುಂದಾಪುರ ತಾಲೂಕಿನಲ್ಲಿ ಮದುವೆ ಮೊದಲಾದ 91 ಖಾಸಗಿ ಕಾರ್ಯಕ್ರಮಗಳಿಗೆ  ಅನುಮತಿ ನೀಡಲಾಗಿದ್ದರೇ, ಬೈಂದೂರು ತಾಲೂಕಿನಲ್ಲಿ 54 ಹಾಗೂ ಬ್ರಹ್ಮಾವರ ತಾಲೂಕಿನ 55 ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ. ಕಾರ್ಕಳದಲ್ಲಿ 41, ಹೆಬ್ರಿಯಲ್ಲಿ 12, ಉಡುಪಿಯಲ್ಲಿ 71, ಕಾಪುವಿನಲ್ಲಿ 55 ಕಾರ್ಯಕ್ರಗಳಿಗೆ ಅನುಮತಿ ನೀಡಲಾಗಿದೆ. ಎ.26ರಂದು ಕುಂದಾಪುರದಲ್ಲಿ ಗರಿಷ್ಠ ಕಾರ್ಯಕ್ರಮಗಳು ನಡೆಯಲಿದ್ದು ತಾಲೂಕಿನಲ್ಲಿ ಒಟ್ಟು 152 ಮದುವೆ ಮೊದಲಾದ ಸಮಾರಂಭಗಳು, ಬೈಂದೂರು ತಾಲೂಕಿನಲ್ಲಿ 25, ಬ್ರಹ್ಮಾವರ ತಾಲೂಕಿನ್ಲಲಿ 24, ಕಾರ್ಕಳದಲ್ಲಿ 17, ಹೆಬ್ರಿಯಲ್ಲಿ 4, ಉಡುಪಿಯಲ್ಲಿ 51 ಹಾಗೂ ಕಾಪುವಿನಲ್ಲಿ 17 ಸಮಾರಂಭಗಳಿಗೆ ಅನುಮತಿ ನೀಡಲಾಗಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಶನಿವಾರ 403 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಉಡುಪಿ 208, ಕುಂದಾಪುರ 143, ಕಾರ್ಕಳ ತಾಲೂಕಿನ 48 ಹಾಗೂ ಹೊರ ಜಿಲ್ಲೆಯಿಂದ ಬಂದ 4 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 403 ಪ್ರಕರಣಗಳಲ್ಲಿ 171 ಸಿಂಟಮಿಕ್ ಹಾಗೂ 232 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 25 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ 378 ಮಂದಿ ಹೋಮ್ ಐಸೊಲೇಷನ್ ಆಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 1491 ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 3421 ಮಂದಿಯನ್ನು ಪರೀಕ್ಷಿಸಲಾಗಿದ್ದು, 177 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ  ಹಿನ್ನೆಲೆಯಲ್ಲಿ,ರಾಜ್ಯ ಸರ್ಕಾರ ಕಟ್ಟುನಿಟ್ಟಿನ ವಾರಾಂತ್ಯದ ಕರ್ಫ್ಯೂ ವಿಧಿಸಿದ ನಂತರ, ಸಾಮಾನ್ಯ ಜೀವನ ಸ್ಥಗಿತಗೊಂಡಿದೆ. ಅಗತ್ಯ ವಸ್ತುಗಳ ಖರೀದಿ ಸಮಯ ಮುಗಿಯುತ್ತಿದ್ದಂತೆ ಜನರು ತಮ್ಮ ಅನಗತ್ಯವಾಗಿ ಹೊರಗೆ ಬರದಂತೆ ತಡೆಯಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದರೇ, ಜನರೂ ಕೂಡ ಅನಗತ್ಯವಾಗಿ ಹೊರಬರದೇ ಸ್ಪಂದಿಸುತ್ತಿರುವುದು ಕಂಡುಬಂದಿದೆ. ವಾರಾಂತ್ಯದ ಕರ್ಪ್ಯೂ ಹಿನ್ನೆಲೆಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ಪೇಟೆ ಭಾಗದಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದವು. 10 ಗಂಟೆಯ ಬಳಿಕ ದಿನಸಿ ಹಾಗೂ ಅಗತ್ಯ ವಸ್ತುಗಳ ಅಂಗಡಿಗಳ ವರ್ತಕರು ಬಾಗಿಲು ಹಾಕಿದ್ದರಿಂದ ಜನಸಂಚಾರ ವಿರಳವಾಗಿತ್ತು. ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದ್ದರೆ, ಸರ್ಕಾರಿ ಬಸ್ ಸಂಚಾರ ವಿರಳವಾಗಿತ್ತು. ಕುಂದಾಪುರ ನಗರದಲ್ಲಿ ವಾರದ ಸಂತೆಗೆ ನಿಷೇಧವಿದ್ದುದರಿಂದ ಅಲ್ಲಿಗೆ ಬಂದಿದ್ದ ಹಣ್ಣಿನ ವ್ಯಾಪಾರಿಗಳನ್ನು ವಾಪಾಸ್ ಕಳುಹಿಸಲಾಯಿತು.  ಬೆಳಿಗ್ಗೆ 10 ಗಂಟೆಯ ನಂತರ ನಗರದೊಳಕ್ಕೆ ತೆರಳುವ ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿತ್ತು. ಕುಂದಾಪುರ ನಗರದಲ್ಲಿ ಉಪವಿಭಾಗಾಧಿಕಾರಿ ರಾಜು…

Read More

ಕುಂದಾಪ್ರ ಡಾಟ್ ಕಾಂ ವರದಿ. ಶಂಕರನಾರಾಯಣ: ಶಂಕರನಾರಾಯಣ ಮೆಸ್ಕಾಂ ಉಪ ವಿಭಾಗ ಕಛೇರಿಗೆ ಅವಶ್ಯವಿರುವ ಸರಕಾರಿ ಜಮೀನು ಲಭವಿಲ್ಲವೆಂಬ ನೆಪವಿರಿಸಿಕೊಂಡು, ಇಲಾಖಾ ಅನುದಾನಗಳಿದ್ದರೂ ಸ್ವಂತ ಕಟ್ಟಡ ನಿರ್ಮಿಸದೇ ಉಪವಿಭಾಗ ಕೇಂದ್ರವನ್ನು ಎತ್ತಂಗಡಿ ಮಾಡುವ ಕಾರ್ಯ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. 2013ರಿಂದ ಶಂಕರನಾರಾಯಣದ ಬಾಡಿಗೆ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಮೆಸ್ಕಾಂ ಉಪವಿಭಾಗ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಡಿಮ್ಡ್ ರಹಿತ ಸರಕಾರಿ ಜಮೀನು ಲಭ್ಯವಿಲ್ಲ ಎಂದು ಕಂದಾಯ ಇಲಾಖೆ ಪತ್ರ ಬರೆದಿದೆ. ಮೆಸ್ಕಾಂ ಉಪ ವಿಭಾಗಕ್ಕೆ ಸ್ವಂತ ಕಚೇರಿ, ಅಧಿಕಾರಿಗಳ ಕ್ವಾಟ್ರರ್ಸ್, ಕಂಬ ಟಿಸಿ ವಯರು ದಾಸ್ತಾನು ಇಡಲು ಗೋದಾಮು, ವಿದ್ಯುತ್ ಬಿಲ್ಲು ಕಟ್ಟಲು ಕೌಂಟರ್ ಅವಶ್ಯಕತೆ ಇದೆ. ಸಹಾಯಕ ಕಾರ್ಯನಿರ್ವಾಹಕ (ಎಇಇ) ಇಂಜಿನಿಯರ್ ಹುದ್ದೆಯನ್ನು ಹೊಂದಿರುವ ಈ ಉಪ ವಿಭಾಗವು ಬೆಳ್ವೆ, ಹಾಲಾಡಿ, ಸಿದ್ದಾಪುರ, ಅಂಪಾರು, ಹೊಸಂಗಡಿಯಲ್ಲಿ ಜೆ.ಇ ಕಚೇರಿ ಶಾಖೆಯನ್ನು ಹೊಂದಿ ಹಳ್ಳಿಹೊಳೆಯಿಂದ ಕಾವ್ರಾಡಿ, ಹಳ್ಳಾಡಿ – ಹರ್ಕಾಡಿ, ಅಮವಸೆಬೈಲ್, ಶೇಡಿಮನೆ, ಮಾಡಾಮಕ್ಕಿವರೆಗೆ ಸುಮಾರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಕೊರೋನಾ ಲಕ್ಷಣಗಳು ಕಂಡಬಂದ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ. ಶಾಸಕರನ್ನು ಸದ್ಯ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Read More