ಮುದೂರು: ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಭೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಜಡ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುದೂರು ಗ್ರಾಮದ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಭೆಯು ಸ್ಥಳೀಯಕಾಮಿ೯ಕ ಮುಖಂಡ ಜೊಸೆಪ್ ಸಾಮ್ಯುಯಲ್ ರವರ ಮನೆ ವಠಾರದಲ್ಲಿ ನಡೆಯಿತು.

Call us

Click Here

ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಂಘದ ಪ್ರಧಾನ ಕಾಯ೯ದಶಿ೯ಗಣೇಶ ತೊಂಡೆಮಕ್ಕಿ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ, ಕಾಮಿ೯ಕ ಇಲಾಖೆಯಿಂದ ಕೊರೊನ ಪರಿಹಾರದ ಅಹಾರ ಕಿಟ್ ವಿತರಣೆಯಲ್ಲಾಗಿರುವ ತಾರತಮ್ಯ ಹಾಗೂ ಎಲ್ಲಾ ಕಟ್ಟಡ ಕಾಮಿ೯ಕರನ್ನು ಗುರುತಿಸದೇ ಏಕಪಕ್ಷೀಯವಾಗಿ ವಿತರಣೆ ಮಾಡಿ. ಅಹಾರ ಕಿಟ್ ಬದಲಿಗೆ ಎಲ್ಲಾ ನೊಂದಾಯಿತ ಕಟ್ಟಡ ಕಾಮಿ೯ಕರಿಗೆ ಕೊರೊನಾ ಪರಿಹಾರ ರುಪಾಯಿ ಹತ್ತು ಸಾವಿರ ನಗದು ಬ್ಯಾಂಕ್ ಖಾತೆಗೆ ವಗಾ೯ವಣೆ ಮಾಡಬೇಕು ಎಂದು ಈಗಾಗಲೆ ಹಲವಾರು ಭಾರಿ ಕಾಮಿ೯ಕ ಕಲ್ಯಾಣ ಮಂಡಳಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿದ್ದರೂ ಗಣನೆಗೆ ತೆಗೆದು ಕೊಳ್ಳದ ಇಲಾಖಾ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಕಾಮಿ೯ಕ ಮುಖಂಡ ವೆಂಕಟೇಶ್ ಕೋಣಿ ಮಾತನಾಡಿ, ಗ್ರಾಮೀಣ ಪ್ರದೇಶದ ಬಡರೈತ, ಕೃಷಿಕೂಲಿ ಕಾರರು ಅನಧಿಕೃತವಾಗಿ ಆಕ್ರಮಿಸಿದ ಸರಕಾರಿ ಜಮೀನುಗಳಿಗೆ ಅಕ್ರಮ ಸಕ್ರಮೀಕರಣ ಕೋರಿ ಸಲ್ಲಿಸಿದ, ಅಜಿ೯ಗಳನ್ನು ಡೀಮ್ಡ್ ಅರಣ್ಯ ನೆಪ ಹೇಳಿ ತಿರಸ್ಕರಿಸಿರುವುದನ್ನು, ರೈತಪರ ಕಾನೂನು ತಿದ್ದುಪಡಿ ಮಾಡಿ,ಹಕ್ಕು ಪತ್ರ ಕೊಡಿಸಬೇಕು ಎಂದು ಸರಕಾರವನ್ನು ಆಗ್ರಹಿದರು.ಈ ಹಿನ್ನಲೆಯಲ್ಲಿ ರೈತ, ಕೃಷಿಕೂಲಿ, ಕಾಮಿ೯ಕ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬೈಂದೂರು ತಹಶೀಲ್ದಾರ್ ಕಚೇರಿ ಎದುರು ಆಗಸ್ಟ್ 9ರಂದು ಬೆಳಿಗ್ಗೆ ಜರಗುವ ಬೃಹತ್ ಧರಣಿ ಮುಷ್ಕರದ ಹೋರಾಟ ಯಶಸ್ವಿಗೊಳಿಸಲು ಸಭೆಯಲ್ಲಿ ತೀಮಾ೯ನಿಸಲಾಯಿತು. ಮುದೂರು ಕಟ್ಟಡ ಕಾಮಿ೯ಕರ ಸಂಘದ ನೂತನ ಕಾಯ೯ಕಾರಿ ಸಮಿತಿಗೆ ಶಂಕರ್ ಭೋವಿ ಅಧ್ಯಕ್ಷರಾಗಿ, ಇಮ್ಯಾನುವೆಲ್ ಯಾಕೂಬ್ ಕಾಯ೯ದಶಿ೯ಯನ್ನಾಗಿ ಸವಾ೯ನುಮತದಿಂದ ಆಯ್ಕೆಮಾಡಲಾಯಿತು.ಶಂಕರ್ ಭೋವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆನಂದ ಭೋವಿ ವಂದಿಸಿದರು.

Leave a Reply