Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾನು ಬದುಕಿನಲ್ಲಿ ಪ್ರಾಮಾಣಿಕವಾಗಿ ಆರಾಧಿಸಿ ಸರ್ವಸ್ವವೆಂದು ನಂಬಿಕೊಂಡು ಬಂದ ಜಗನ್ಮಾತೆ ತಾಯಿ ಮೂಕಾಂಬಿಕೆ ಸನ್ನಿಧಿಯಲಲ್ಇ ನನ್ನ ಬಗೆಗೆ ಆರೋಪ ಬಂದಿದ್ದು ಈ ಎಲ್ಲಾ ಆರೋಪಗಳ ಸತ್ಯಾಸತ್ಯೆಯನ್ನು ತಾಯಿ ಮೂಕಾಂಬಿಕೆಯ ಚಿತ್ತಕ್ಕೆ ಬಿಡುತ್ತೇನೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದ್ದಾರೆ. ಬೈಂದೂರು ಶಾಸಕರ ಮೇಲೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರ ಅವರ ಮಾಡಿರುವ ಆರೋಪಕ್ಕೆದ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕರು ಪ್ರತಿಕ್ರಿಯಿಸಿದ್ದಾರೆ. ಅರ್ಥಿಕ ಸಂಕಷ್ಟದಲ್ಲಿ ಇದ್ದಾರೆ ಎನ್ನುವ ಕಾರಣಕ್ಕೆ ಫೆಬ್ರವರಿ 2018ರ ಸಮಯದಲ್ಲಿ ಸ್ವಲ್ಪ ನಗದು ಹಣವನ್ನು ಮತ್ತು ಚೆಕ್ ಮೂಲಕ ಐದು ಲಕ್ಷ ಹಣವನ್ನು ನೀಡಿದ್ದೇನೆ. ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದರ ಬಗ್ಗೆ ನನ್ನ ಬಳಿ ದಾಖಲೆ ಇದೆ. ಶ್ರೀ ಕ್ಷೇತ್ರ ಕೊಲ್ಲೂರಿನ ಪಾವಿತ್ರ್ಯಕ್ಕೆ ಧಕ್ಕೆ ತರುವಂತೆ ಆಣೆ ಪ್ರಮಾಣದ ಮಾತನಾಡಿರುವ ಸದಾನಂದ ಉಪ್ಪಿನಕುದ್ರು ಮತ್ತು ಅವರ ಕುಟುಂಬದವರೇ ಕೊಲ್ಲೂರು ಮೂಕಾಂಬಿಕೆಯಲ್ಲಿ ನಿಂತು ನನ್ನಿಂದ ಹತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಿಯ ಉತ್ಸವ ಮೂರ್ತಿಯೊಂದಿಗೆ ಜಾತ್ರಾ ಸಮಯದಲ್ಲಿ ರಥ ಬೀದಿಯಲ್ಲಿ ಸಾಗುವ ಬ್ರಹ್ಮರಥವು ಸರಿಸುಮಾರು 600 ವರ್ಷದ ಹಿಂದೆ ವಿಜಯ ನಗರ ಸಂಸ್ಥಾನದ ಕೊಡುಗೆ ಆಗಿದ್ದು ಸದ್ಯದ ಪರಿಸ್ಥಿತಿಯಲ್ಲಿ ಶ್ರೀ ದೇವಿಯ ಜಾತ್ರೆಗೆ ಬಳಸಲು ಯೋಗ್ಯವಲ್ಲದ ಪರಿಸ್ಥಿತಿಯಲ್ಲಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಶಿಥೀಲಗೊಂಡ ಬ್ರಹ್ಮರಥದ ಬದಲಾಗಿ ನೂತನ ಬ್ರಹ್ಮರಥದ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕಾಗಿ ಮಾನ್ಯ ಶಾಸಕರಿಗೆ ಹಾಗೂ ದೇವಾಲಯದ ಆಡಳಿತ ವರ್ಗ, ಕಾರ್ಯನಿರ್ವಹಣಾಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷತ್ -ಬಜರಂಗದಳ, ಭಕ್ತಾಭಿಮಾನಿಗಳು ಹಾಗೂ ಊರಿನ ಸಮಸ್ತರ ಪರವಾಗಿ ಮನವಿ ಸಲ್ಲಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿಕೊರೋನಾಎರಡನೇಅಲೆಯನ್ನು ನಿಯಂತ್ರಿಸಲು ಸರ್ಕಾರದ ಸೂಚನೆಯಂತೆ ಹೆಚ್ಚಿನ ಸಂಖ್ಯೆಯಲ್ಲಿ ಟೆಸ್ಟಿಂಗ್ಗಳನ್ನು ನಡೆಸಿ, ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನುಕೂಡಲೇ ಪತ್ತೆ ಹಚ್ಚಿ ಪರೀಕ್ಷೆ ನಡೆಸಿ, ಪಾಸಿಟಿವಿಟಿ ಪ್ರಮಾಣವನ್ನುಕಡಿಮೆ ಮಾಡುವಂತೆಜಿಲ್ಲಾಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ಟಿರೇಜು ಹೇಳಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿಕೋವಿಡ್ಎರಡನೇ ಅಲೆಯಲ್ಲಿ ಯುವಜನತೆ ಮತ್ತು ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿದ್ದು, ಇವರಿಂದ ಕುಟುಂಬದ ಹಿರಿಯ ನಾಗರೀಕರೂ ಸೇರಿದಂತೆ ಪ್ರತಿಯೊಬ್ಬರರಿಗೂ ಸೋಂಕು ಹರಡುವ ಸಾಧ್ಯತೆಗಳಿದ್ದು, ಸರ್ಕಾರ ನಿಗದಿಪಡಿಸಿದಂತೆ ಪ್ರತಿದಿನ 4000 ಟೆಸ್ಟಿಂಗ್ಗಳನ್ನು ನಡೆಸಿ, ಶೀಘ್ರದಲ್ಲಿ ಸೋಂಕಿತರನ್ನು ಪತ್ತೆಹಚ್ಚಿ, ಸೋಂಕು ಹರಡುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಿ ಎಂದು ಡಾ. ರೇಜು ತಿಳಿಸಿದರು. ಪ್ರಸ್ತುತ ಪಾಸಿಟಿವ್ ಪ್ರಕರಣ ಕಂಡು ಬರುತ್ತಿರುವ ಹೆಚ್ಚಿನ ಪ್ರಕರಣಗಳಲ್ಲಿರೋಗ ಲಕ್ಷಣಗಳು ಇಲ್ಲವಾಗಿದ್ದು, ಇಂತಹವರನ್ನು ಹೋಂ ಐಸೋಲೇಷನ್ಗೆ ಒಳಪಡಿಸಿ, ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆಯಾಗದಂತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಭಾರತೀಯ ಬಾಲ್ ಬ್ಯಾಡ್ಮಿಂಟನ್ ಫೆಡರೇ?ನ್ ಕೊಡಮಾಡಲ್ಪಡುವ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿಗೆ ಭಾಜನರಾಗಿದ್ದಾರೆ . ರಾಜಸ್ಥಾನದ ಜೈಪುರದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 66ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಉತ್ತಮ ನಿರ್ವಹಣೆ ನೀಡಿದ ಪುರುಷರ ವಿಭಾಗದಲ್ಲಿ ಚೇತನ್ ಬಿ. ಕೆ ಹಾಗೂ ಮಹಿಳೆಯರ ವಿಭಾಗದಲ್ಲಿ ಕವನ ಎಂ. ಎಂ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ . ಪ್ರಶಸ್ತಿ ವಿಜೇತ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗುಲ್ವಾಡಿಯ ಮೆಹರಾಜ್ ಜುಮ್ಮಾ ಮಸೀದಿಯ ನವೀಕೃತ ಮೊದಲ ಮಹಡಿ ಉದ್ಘಾಟನೆ ಕಾರ್ಯಕ್ರಮ ಮತ್ತು 15ನೇ ವಾರ್ಷಿಕ ಸ್ವಲಾತ್ ಮಜ್ಲಿಸ್ ಮತ್ತು ದುವಾ ಹಾಗೂ ಸೌಹಾರ್ದ ಸಮಾವೇಶ ಗುರುವಾರ ನಡೆಯಿತು. ನವೀಕೃತ ಕಟ್ಟಡವನ್ನು ಉಡುಪಿ ಜಿಲ್ಲಾ ಖಾಝಿ ಬಹುಃ ಶೈಖುನಾ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ (ಮಾಣಿ ಉಸ್ತಾದ್) ಉದ್ಘಾಟಿಸಿ ಆಶೀರ್ವದಿಸಿದರು. ಕಥೋಲಿಕ್ ಸಭಾ ಉಡುಪಿ ಪ್ರದೇಶದ ಮಾಜಿ ಅಧ್ಯಕ್ಷ ಎಲ್ರಾಯ್ ಕಿರಣ್ ಕ್ರಾಸ್ಟೊ ಮಾತನಾಡಿ, ಧರ್ಮಗಳ ನಡುವಿನ ಸೌಹಾರ್ದತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ನಮ್ಮ ನಡುವಿನ ಗೋಡೆಗಳ ಕೆಡವಿ ಸೌಹರ್ದತೆಯನ್ನು ಕಾಪಾಡಿಕೊಳ್ಳೋಣ, ಮಾನವೀಯ ಸ್ಪಂದನೆ, ಮನುಷ್ಯತ್ವವನ್ನು ಎತ್ತಿ ಹಿಡಿಯೋಣ ಎಂದರು. ಬಸ್ರೂರು ನಿವೇದಿತಾ ಪ್ರೌಢಶಾಲೆ ಅಧ್ಯಾಪಕ ದಿನಕರ ಶೆಟ್ಟಿ ಮಾತನಾಡಿ, ನಾವು ಎಲ್ಲರನ್ನು ಮನುಷ್ಯರು ಎಂಬುದಾಗಿ ಪರಿಗಣಿಸಬೇಕು. ಶಾಲೆಯಲ್ಲಿ ಮಗುವೊಂದು ಬಿದ್ದಾಗ ಇನ್ನೊಂದು ಮಗು ಆ ಮಗುವನ್ನು ಎತ್ತುತ್ತದೆ. ಆಗ ಅದು ಜಾತಿ ಕೇಳುವುದಿಲ್ಲ. ಹಾಗೆಯೇ ನಾವು ನಮ್ಮ ಧರ್ಮವನ್ನು ಪಾಲಿಸೋಣ, ನೆರೆಹೊರೆಯವರನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರ ದಬ್ಬಾಳಿಕೆಯಿಂದಾಗಿ ನಮ್ಮ ಕುಟುಂಬ ರೋಸಿ ಹೋಗಿದೆ. ನನ್ನ ವಿರುದ್ಧ ಚೆಕ್ ಬೌನ್ಸ್ ಕೇಸ್ ಹಾಕಿಸಿರುವ ಶಾಸಕರಿಗೆ ನಾನು ಚೆಕ್ ನೀಡಿರುವುದು ನಿಜವಾಗಿದ್ದರೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಸವಾಲೆಸೆದಿದ್ದಾರೆ. ಕೊಲ್ಲೂರು ದೇವಸ್ಥಾನದ ಎದುರು ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿ ನನ್ನ ಕುಟುಂಬಕ್ಕೆ ಬೈಂದೂರು ಶಾಸಕ ಬಿ. ಎಂ ಸುಕುಮಾರ ಶೆಟ್ಟಿ, ಕುಂದಾಪುರ ಬೋರ್ಡ್ ಹೈಸ್ಕೂಲ್ನ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶಚಂದ್ರ ಶೆಟ್ಟಿ ಹಾಗೂ ವಕೀಲ ಸದಾನಂದ ಶೆಟ್ಟಿಯವರಿಂದ ಆಗುತ್ತಿರುವ ನಿರಂತರ ಮಾನಸಿಕ ಹಿಂಸೆಗಳಿಂದ ರೋಸಿ ಹೋಗಿ ಕೊಲ್ಲೂರು ಸನ್ನಿಧಿಯಲ್ಲಿ ಬಂದು ನನ್ನ ನೋವು ತೋಡಿಕೊಳ್ಳುತ್ತಿದ್ದೇನೆ ಎಂದರು. ಮುಂದುವರಿದು ಮಾತನಾಡಿ ಕಳೆದ ಹದಿನೆಂಟು ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೆಸಿಐ ಬೈಂದೂರು ಸಿಟಿ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆಯನ್ನು ಇಲ್ಲಿನ ನ್ಯೂ ಶಾಂತಿ ಕಾಂಪ್ಲೆಕ್ಸ್ ನಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಮರವಂತೆ ಆರೋಗ್ಯ ಕೇಂದ್ರದ ಫಾರ್ಮೇಸಿ ಆಫೀಸರ್ ರಾಘವೇಂದ್ರ ಹೊಳ್ಳ ಇವರಿಂದ ಉಚಿತ ಮಧುಮೇಹ ತಪಾಸಣೆ ನಡೆಯಿತು. ಈ ಸಂದರ್ಭದಲ್ಲಿ ಬೈಂದೂರು ಜೆಸಿಐ ಅಧ್ಯಕ್ಷ ಶ್ರೀಧರ ಆಚಾರ್ಯ, ಕಾರ್ಯದರ್ಶಿ ಸವಿತಾ ದಿನೇಶ್, ವಲಯಾಧಿಕಾರಿ ಮಣಿಕಂಠ ದೇವಾಡಿಗ, ಪೂರ್ವಾಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರ್, ಜೆಸಿ ರೇಟ್ ಅಧ್ಯಕ್ಷೆ ಅನಿತಾ ಆರ್ ಕೆ , ಉಪಾಧ್ಯಕ್ಷೆ ಸೌಮ್ಯ ಬಿ,  ಖಜಾಂಚಿ ಪ್ರೇಮ ವಿ ಶೆಟ್ಟಿ, ಸದಸ್ಯರಾದ ನರೇಂದ್ರ ಶೇಟ್, ಮಹಮ್ಮದ್ ಅಶ್ರಫ್, ರಾಘವೇಂದ್ರ ಪೂಜಾರಿ, ಪ್ರಶಾಂತ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫೂ ಜಾರಿಗೊಳಿಸಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸಭೆ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಘೋಷಣೆ ಮಾಡಿದ್ದಾರೆ. ಏಪ್ರಿಲ್ 10 ರಿಂದ 20ರವರೆಗೆ ಕೊರೊನಾ ಕರ್ಫ್ಯೂ ಜಾರಿಗೆ ಬರಲಿದೆ. ರಾಜ್ಯದ ಉಡುಪಿ, ಮಂಗಳೂರು, ಬೆಂಗಳೂರು, ಮೈಸೂರು, ಬಳ್ಳಾರಿ, ಕಲಬುರಗಿ, ತುಮಕೂರು, ಬೀದರ್ ನಗರಗಳಲ್ಲಿ ಪ್ರಾಯೋಗಿಕವಾಗಿ ಕೊರೊನಾ ಕರ್ಫ್ಯೂ ಬರಲಿದೆ. ಅಗತ್ಯ ಸೇವೆಗಳನ್ನ ಹೊರತುಪಡಿಸಿ ಎಲ್ಲ ಕಮರ್ಷಿಯಲ್ ಚಟುವಟಿಕೆಗಳ ಮೇಲೆ ನಿರ್ಬಂಧ ಹಾಕಲಾಗ್ತಿದೆ. ಲಾಕ್ಡೌನ್ ಬೇಡ ಅಂದ್ರೆ ಜನರು ಕೊರೊನಾ ನಿಯಮಗಳನ್ನ ಪಾಲಿಸಬೇಕು. ನಾಳೆಯಿಂದ ಮಾಸ್ಕ್ ಧರಿಸದಿದ್ದರೆ ದಂಡಾಸ್ತ್ರ ಪ್ರಯೋಗಿಸಲು ಸೂಚನೆ ನೀಡಲಾಗಿದೆ ಎಂದು ಸಿಎಂ ಎಚ್ಚರಿಸಿದ್ದಾರೆ. ನಗರಗಳಲ್ಲಿ10 ದಿನ ಪ್ರಾಯೋಗಿಕವಾಗಿ ಕೊರೊನಾ ಕರ್ಫ್ಯೂವನ್ನ ಸರ್ಕಾರ ಘೋಷಣೆ ಮಾಡಿದೆ. ಕರ್ಫ್ಯೂ ಅವಧಿ ವೇಳೆ ಹೊಟೇಲ್, ಬಾರ್, ಪಬ್, ನೈಟ್ ಪಾರ್ಟಿ, ರೆಸ್ಟೋರೆಂಟ್, ಸಿನಿಮಾಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿಯ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಎನ್ನುವ ಸುದ್ಧಿ ಸತ್ಯಕ್ಕೆ ದೂರವಾಗಿದ್ದು, ಸೇರ್ಪಡೆಗೊಂಡಿದ್ದಾರೆ ಎನ್ನುವವರು ಈ ಹಿಂದಿನ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡವರಾಗಿರುತ್ತಾರೆ. ಶಾಸಕರ ಅಭಿವೃದ್ಧಿ ಕೆಲಸಗಳನ್ನು ಸಹಿಸದೆ ಹತಾಶರಾಗಿ ಅಪಪ್ರಚಾರ ಮಾಡಲು ಮಾಜಿ ಶಾಸಕರು ಸೇರ್ಪಡೆಯ ನಾಟಕ ಮಾಡುತ್ತಿದ್ದು, ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಶೆಟ್ಟಿಗಾರ್ ಆರೋಪಿಸಿದ್ದಾರೆ. ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ ಅವರು ಶಾಸಕತ್ವದ ಅವಧಿಯಲ್ಲಿ ಗಂಗೊಳ್ಳಿ ಮೀನುಗಾರಿಕಾ ಬಂದರು ಪುನರ್ ನಿರ್ಮಾಣಕ್ಕೆ ಸುಮಾರು 12 ಕೋಟಿ, ವಿವಿಧ ರಸ್ತೆಗಳ ಕಾಂಕ್ರೀಟಿಕರಣ ಹಾಗೂ ಅಭಿವೃದ್ಧಿಗೆ ಸುಮಾರು 3 ಕೋಟಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸುಮಾರು 20ಕೋಟಿ ಅನುದಾನ ತಂದು ಗಂಗೊಳ್ಳಿಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್ ಮುಖಂಡರು ಗಂಗೊಳ್ಳಿ ಭಾಗದಲ್ಲಿ ಅಪಪ್ರಚಾರ ನಡೆಸಿ, ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಶಾಸಕರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಗಂಗೊಳ್ಳಿ ದಾಕುಹಿತ್ಲುವಿನ 30 ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕ ಗೋಪಾಲ ಪೂಜಾರಿ ಅವರ ಕಟ್ಬೆಲ್ತೂರು ನಿವಾಸದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ತ್ರಾಸಿ ಜಿಲ್ಲಾ ಪಂಚಾಯತ್ ಉಸ್ತುವಾರಿ ಶರತ್ ಕುಮಾರ್ ಶೆಟ್ಟಿ ಸಾರಥ್ಯದಲ್ಲಿ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳ ದೇವಾಡಿಗ, ಗ್ರಾಮೀಣ ಕಾಂಗ್ರೆಸ್ ಗಂಗೊಳ್ಳಿಯ ಸುರೇಂದ್ರ ಖಾರ್ವಿ, ಯುತ್ ಕಾಂಗ್ರೆಸ್ ಅದ್ಯಕ್ಷ ಪ್ರದೀಪ್ ಗಂಗೊಳ್ಳಿ, ವಂಡ್ಸೆ ಬ್ಲಾಕ್ನ ಉಪಾಧ್ಯಕ್ಷ ಜಾಹೀರ್ ಗಂಗೊಳ್ಳಿ ಉಪಸ್ಥಿತಿರಿದ್ದರು. ಇತ್ತಿಚಿಗಷ್ಟೇ ಗಂಗೊಳ್ಳಿಯ 70 ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಇದನ್ನೂ ಓದಿ: ► ಕಟ್‌ಬೆಲ್ತೂರು: 70ಕ್ಕೂ ಅಧಿಕ ಯುವಕರು ಕಾಂಗ್ರೆಸ್ ಸೇರ್ಪಡೆ – https://kundapraa.com/?p=46874 . ►ಕಾಂಗ್ರೆಸ್ ಸೇರ್ಪಡೆ ಎಂಬುದು ಮಾಜಿ ಶಾಸಕರ ನಾಟಕ: ಬಿಜೆಪಿ ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಶೆಟ್ಟಿಗಾರ್ ಆರೋಪ – https://kundapraa.com/?p=47076 .

Read More