ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ಒಂದು ವರ್ಷದಿಂದ ತಾಲೂಕು ಆಸ್ಪತ್ರೆ ಕುರಿತು ಪ್ರಶ್ನೆ ಕೇಳುತ್ತಿದ್ದರೂ, ಉತ್ತರಿಸಬೇಕಾದ ಜಿಲ್ಲಾ ಆರೋಗ್ಯಾಧಿಕಾರಿ ಸಭೆಗೆ ಬಂದಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿ ಸಭೆಗೆ ಹಾಜರಾಗದೆ ತಾಪಂ ಸದಸ್ಯರ ಕಡೆಗಣಿಸಿದ್ದಾರೆ. ಸಭೆಗೆ ಬಾರದ ಜಿಲ್ಲಾ ಆರೋಗ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ನಿರ್ಣಯ ಮಾಡಿ, ಜಿಲ್ಲಾಧಿಕಾರಿ, ಜಿಪಂ ಸಿಎಸ್, ಆರೋಗ್ಯ ಸಚಿವರು ಮತ್ತು ಸರ್ಕಾರಕ್ಕೆ ನಿರ್ಣಯ ಪ್ರತಿ ಕಳುಹಿಸಿಕೊಡುವಂತೆ ತಾಲೂಕು ಪಂಚಾಯಿತಿ ಸದಸ್ಯರು ಒತ್ತಾಯಿಸಿದರು. ಕುಂದಾಪುರ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ 22ನೇ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯ ಕರಣ್ ಪೂಜಾರಿ ಮಾತನಾಡಿ, ಕಳೆದ ಒಂದು ವರ್ಷದಿಂದ ತಾಲೂಕು ಪಂಚಾಯಿತಿ ಸಮಾನ್ಯ ಸಭೆಯಲ್ಲಿ ಕುಂದಾಪುರ ತಾಲೂಕು ಆಸ್ಪತ್ರೆ ಕುರಿತು ಕೇಳಲಾದ ಪ್ರಶ್ನೆಗೆ ಜಿಲ್ಲಾ ಆರೋಗ್ಯಾಧಿಕಾರಿ ಸಭೆಗೆ ಉತ್ತರಿಸುವಂತೆ 143ರ ಪ್ರಕಾರ ಕೇಳಲಾಗಿದ್ದರೂ ಸಭೆಗೆ ಬಂದಿಲ್ಲ. ಈ ಬಗ್ಗೆ ಕಾನೂನು ಕ್ರಮ ತಗೆದುಕೊಳ್ಳಲು ನಿರ್ಣಯ ಮಾಡುವಂತೆ ಒತ್ತಾಯಿಸಿದರು. ತಾಪಂ ಸದಸ್ಯೆ ಜ್ಯೂತಿ ಪುತ್ರನ್ ಮಾತನಾಡಿ, ಸಭೆಗೆ ಆರೋಗ್ಯಾಧಿಕಾರಿ ಹಾಜರಾಗಿ ಉತ್ತರಿಸಬೇಕಿದ್ದರೂ ಕಳೆದ ಒಂದು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕು ಘಟಕ ಸಾರಥ್ಯದಲ್ಲಿ ಶ್ರೀ ವಿನಾಯಕ ಯುವಕ ಮಂಡಲ ಸಾಬ್ರಕಟ್ಟೆ – ಯಡ್ತಾಡಿ ಇವರ ಸಹಯೋಗದಲ್ಲಿ ನಡೆಯುವ ಬ್ರಹ್ಮಾವರ ತಾಲೂಕು ಮಟ್ಟದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಮಲಸಾವರಿ ದೇವಸ್ಥಾನ ಯಡ್ತಾಡಿಯಲ್ಲಿ ನಡೆಯಿತು. ಕಾರ್ಯಕ್ರಮದ ಬಗ್ಗೆ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ನರೇಂದ್ರ ಕುಮಾರ್ ವಿವರಿಸಿದರು. ಜ.24ರಂದು ಮಹಾತ್ಮಗಾಂಧಿ ಫ್ರೌಡಶಾಲೆ ಸಾಬ್ರಕಟ್ಟೆಯಲ್ಲಿ ಬ್ರಹ್ಮಾವರ ತಾಲೂಕು ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಆನ್ ಲೈನ್ ಮೂಲಕ ನಡೆಸುವ ಬಗ್ಗೆ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾರಾಯಣ ಮಡಿ ತಿಳಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಾವರ ತಾಲೂಕು ಪರಿಷತ್ತಿನ ಸಂಘಟನ ಕಾರ್ಯದರ್ಶಿ ಅಲ್ತಾರು ನಾಗರಾಜ್, ವಿನಾಯಕ ಯುವಕ ಮಂಡಲದ ಅಧ್ಯಕ್ಷ ರತ್ನಾಕರ ಪೂಜಾರಿ, ಕಾರ್ಯದರ್ಶಿ ಪ್ರಶಾಂತ ಸೂರ್ಯ, ಹಾಗೂ ಸದಸ್ಯರು ಉಪಸ್ಥಿರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಸ್ಟಾಫ್ ಸೆಲೆಕ್ಷನ್ ಕಮೀಷನ್ ಕೇಂದ್ರ ನೇಮಕಾತಿ ಪ್ರಾಧಿಕಾರವು ಸಂಯೋಜಿತ ಪದವಿ ಮಟ್ಟದ ಪರೀಕ್ಷೆ – 2020 ಹುದ್ದೆಗಳಿಗೆ ಕಂಪ್ಯೂಟರ್ ಆನ್ಲೈನ್ ಸ್ಪರ್ಧಾತ್ಮಕ ಪರೀಕ್ಷಾ ನೇಮಕಾತಿಗೆ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ಪದವಿ ಶಿಕ್ಷಣ ಅಥವಾ ತತ್ಸಮಾನ ಪರೀಕ್ಷೆ ಹೊಂದಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳ ಮೂಲಕ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ https://ssc.nic.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ನೊಂದಣಿಗೆ ಜನವರಿ 31 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 080-25502520, 0820-2574869 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ಮೂರೂವರೆ ವರ್ಷಗಳಿಂದ ಸಂಚರಿಸುತ್ತಿದ್ದ ಕುಂದಾಪುರ – ಬೈಂದೂರು – ಶಿವಮೊಗ್ಗ – ಬೆಂಗಳೂರು ಮಾರ್ಗದ ಕೆಎಸ್ಆರ್ಟಿಸಿ ರಾತ್ರಿ ಬಸ್ ಸಂಚಾರ ಲಾಕ್ಡೌನ್ ಬಳಿಕ ಆರಂಭಗೊಳ್ಳದಿರುವುದು ಈ ಮಾರ್ಗದ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದೆ. ಕುಂದಾಪುರ ಡಿಪೋಗೆ ಸೇರಿದ ಬಸ್ಸು ಸಂಜೆ 6:30ಕ್ಕೆ ಕುಂದಾಪುರದಿಂದ ಹೊರಟು ಬೈಂದೂರು ಕೊಲ್ಲೂರು ಹೊಸನಗರ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು. ಅದೇ ದಿನ ರಾತ್ರಿ ಬೆಂಗಳೂರಿನಿಂದ ಹೊರಡುವ ಇನ್ನೊಂದು ಬಸ್ಸು ಬೆಳಿಗ್ಗೆ ಬೈಂದೂರು ತಲುಪುತ್ತಿತ್ತು. ಸಂಜೆಯ ವೇಳೆಗೆ ಬೈಂದೂರಿನಿಂದ ಕೊಲ್ಲೂರು, ಹೊಸನಗರ, ಶಿವಮೊಗ್ಗ ಹಾಗೂ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಹಾಗೂ ಬೆಂಗಳೂರಿನಿಂದ ರಾತ್ರಿ ಬರುವವರಿಗೆ ಇದು ಅನುಕೂಲಕರವಾಗಿತ್ತು. ಲಾಕ್ಡೌನ್ ಸಂದರ್ಭ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಮತ್ತೆ ಬಸ್ ಸೇವೆ ಆರಂಭಕ್ಕೆ ಕೆಎಸ್ಆರ್ಟಿಸಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದು, ನಷ್ಟದ ಕಾರಣವೊಡುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಸನ್ನು ಲಾಕ್ಡೌನ್ ಬಳಿಕ ನಿಲ್ಲಿಸಿರುವುದು ಸರಿಯಾದ ಕ್ರಮವಲ್ಲ. ಎಲ್ಲಾ ಮಾರ್ಗದ ಬಸ್ಸುಗಳಲ್ಲಿಯೂ ಆರಂಭದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಕರ್ನಾಟಕ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಮಾಜಿ ಅಧ್ಯಕ್ಷ ನೇರಂಬಳ್ಳಿಯ ಎನ್. ಆರ್ ನಾರಾಯಣ ರಾವ್(94) ಬೆಂಗಳೂರು ನಿವಾಸದಲ್ಲಿ ಜ.12ರಂದು ನಿಧನರಾದರು. ಕುಂದಾಪುರ ತಾಲೂಕಿನ ನೇರಂಬಳ್ಳಿ ಗ್ರಾಮದಲ್ಲಿ ಹುಟ್ಟಿ, ಕೋಟೇಶ್ವರದಲ್ಲಿ ವಿಧ್ಯಾಭ್ಯಾಸ ನಡೆಸಿ, ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ನಡೆಸಿದರು. ಹೋಟೆಲ್ ದ್ವಾರಕ ಸಹಿತ ಪ್ರಸಿದ್ದ ಹೋಟೆಲ್ಗಳನ್ನು ಸ್ಥಾಪಿಸಿ, ಕೋಟೇಶ್ವರ ಮಾಗಣಿಯವರು ಉದ್ಯಮದಲ್ಲಿ ಮುನ್ನಡೆಯಲು ಮಾರ್ಗದರ್ಶನ ಮಾಡಿದ್ದರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ದಾನಿಗಳಾಗಿಯೂ ಊರ ಅಭಿವೃದ್ಧಿಗೆ ನೆರವು ನೀಡಿದವರು. ಕೋಟೇಶ್ವರದ ಅಭಿವೃಧ್ದಿಯಲ್ಲಿ ಇವರ ಕೊಡುಗೆ ದೊಡ್ಡದಿದೆ. ಕುಂದಾಪುರದ ಎನ್. ಆರ್ಸ್ ನಂದಿನಿ ಹೋಟೇಲ್ ಮಾಲಕ ಎನ್. ರಾಘವೇಂದ್ರ ರಾವ್, ಬೆಂಗಳೂರಿನ ಹೋಟೆಲ್ ಉದ್ಯಮಿ ಎನ್. ಶ್ರೀನಿವಾಸ ರಾವ್ ಸೇರಿದಂತೆ ಇಬ್ಬರು ಪುತ್ರರು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಾದ ಉಡುಪಿ, ಕಾಪು, ಕುಂದಾಪುರ, ಬೈಂದೂರು ಮತ್ತು ಕಾರ್ಕಳ ವ್ಯಾಪ್ತಿಗಳಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ (ಓಐಒ) ಯೋಜನೆಯಡಿ 500 ಜಾನುವಾರುಗಳ ವಿಮೆಗಾಗಿ ಸಾಮಾನ್ಯ ವರ್ಗದ ಎ.ಪಿ.ಎಲ್./ ಬಿ.ಪಿ.ಎಲ್ ವರ್ಗದ ಫಲಾನುಭವಿಗಳಿಗೆ ವಿಮಾ ಕಂತಿನ ಮೊತ್ತವನ್ನು ಸಹಾಯಧನದಲ್ಲಿ ವಿತರಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಗ್ರಾಮೀಣ ಹಿತ್ತಲ ಮೇಕೆ ಘಟಕದಡಿ 1 ಘಟಕ ಹಾಗೂ ಗ್ರಾಮೀಣ ಹಂದಿ ಘಟಕದಡಿ 2 ಘಟಕ ಸಹಾಯಧನದೊಂದಿಗೆ ನಿಗದಿಯಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಉಡುಪಿ, ಬ್ರಹ್ಮಾವರ, ಕಾಪು, ಕುಂದಾಪುರ, ಬೈಂದೂರು, ಕಾರ್ಕಳ ಮತ್ತು ಹೆಬ್ರಿ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಂಡ್ಸೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಝಹೀರ್ ಅಹಮ್ಮದ್ ನಾಖುದಾ ಅವರನ್ನು ಆಯ್ಕೆ ಮಾಡಲಾಗಿದೆ. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರ ಶಿಫಾರಸ್ಸಿನ ಮೇರೆಗೆ ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಕುಮಾರ ಶೆಟ್ಟಿ ಅವರು ನೇಮಕ ಮಾಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 5ನೇ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ಗೊಂಬೆ ಮನೆಯಲ್ಲಿ ಜರುಗಿತು . ಅಧ್ಯಕ್ಷೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು, ಗೊಂಬೆಯಾಟದಂತಹ ಅಪರೂಪದ ಜಾನಪದ ಕಲೆಯನ್ನು ಎಲ್ಲರೂ ಸೇರಿ ಉಳಿಸಬೇಕು. ಈ ಕಲೆಯನ್ನು ನಶಿಸಿ ಹೋಗಲು ಬಿಡಬಾರದು. ಸಣ್ಣ ಮಕ್ಕಳನ್ನು ತರಬೇತುಗೊಳಿಸಿ ತಂಡವನ್ನು ಕಟ್ಟಬೇಕು. ಗೊಂಬೆಯಾಟ ಟ್ರಸ್ಟ್ ನ ಬೆಳ್ಳಿ ಹಬ್ಬ ಮತ್ತು ಕೊಗ್ಗ ಕಾಮತ್ ಜನ್ಮ ಶತಮಾನೋತ್ಸವದ ಅಂಗವಾಗಿ ಹಳ್ಳಿಯೆಡೆಗೆ ಗೊಂಬೆ ನಡಿಗೆ ಗೆ ಚಾಲನೆ ನೀಡುವುದಾಗಿ ಅಭಿಪ್ರಾಯ ಪಟ್ಟರು. ಸೂತ್ರ ಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2020ನ್ನು ಖ್ಯಾತ ಹಿಂದೂಸ್ಥಾನಿ ಗಾಯಕ ವಿದ್ವಾನ್ ಗಜಾನನ ಹೆಬ್ಬಾರ್ ಇವರಿಗೆ ಪ್ರದಾನ ಮಾಡಲಾಯಿತು. ಕೊಗ್ಗ ದೇವಣ್ಣಕಾಮತ್ ಪ್ರಶಸ್ತಿ -2021ನ್ನು ಶ್ರೀ ಗಣೇಶಂ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಇದರ ಖ್ಯಾತ ಅರ್ಥಧಾರಿ ಹೆಚ್. ನಾರಾಯಣ ಬಿಲ್ಲವ, ಹೆಮ್ಮಾಡಿ ಇವರಿಗೆ ನೀಡಲಾಯಿತು. ನಿವೃತ್ತ ಉಪನ್ಯಾಸಕರಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ನವಶಕ್ತಿ ಮಹಿಳಾ ವೇದಿಕೆ ಕೊಲ್ಲೂರು ಇವರ ವತಿಯಿಂದ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ರತ್ನ ಪೂಜಾರಿ ಉದ್ಘಾಟಿಸಿದರು. ನವಶಕ್ತಿ ಮಹಿಳಾ ವೇದಿಕೆ ಅಧ್ಯಕ್ಷೆ ಗ್ರೀಷ್ಮಾಗಿರಿಧರ ಭಿಡೆ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತದ ಅತ್ಯಂತ ಶ್ರೇಷ್ಠ ಆದ್ಯಾತ್ಮಿಕ ನಾಯಕರು ತಮ್ಮ ತತ್ವ ಶಾಸ್ತ್ರದ ವೈಭವವನ್ನು ಇಡೀ ಜಗತ್ತಿಗೆ ಸಾರಿದ ಕೀರ್ತಿ ಹೊಂದಿರುವ ಮಹಾನ್ ವ್ಯಕ್ತಿ. ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ಇವರ ಚಿಂತನೆಗಳು ಸಂದೇಶಗಳು ಎಂದಿಗೂ ಪ್ರಸ್ತುತ. ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳು ಯುವಜನತೆಯ ಮೇಲೆ ಪ್ರಭಾವ ಬೀರುವ ಬಾಳು ಬೆಳಗುವ ಅಂಶಗಳು ಇದೆ ಕಾರಣಕ್ಕೆ ಇವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ವಿವೇಕಾನಂದರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದರು. ಕಾರ್ಯಕ್ರಮವನ್ನು ಸದಸ್ಯರಾದ ಜ್ಯೋತಿ ರಾಘವೇಂದ್ರ ಸ್ವಾಗತಿಸಿ ನಿರೂಪಿಸಿದರು. ಉಷಾ ವಂದಿಸಿದರು. ನವಶಕ್ತಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಸುಜಾತ ಆಚಾರಿ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಜ್ಞಾನಪೀಠ ಪುರಸ್ಕೃತ ಡಾ ಶಿವರಾಮ ಕಾರಂತ ಥೀಮ್ ಪಾರ್ಕ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರು ಭೇಟಿ ನೀಡಿ ಕಾರಂತರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ರಂಗಮಂದಿರ, ಗ್ರಂಥಾಲಯ, ಅಂಗನವಾಡಿ ವೀಕ್ಷಿಸಿದರು. ಕಾರಂತರು ಸಾಹಿತ್ಯ ಲೋಕದಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡರು, ಅಲ್ಲದೇ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕೋಟತಟ್ಟು, ಕೋಟ ಗ್ರಾಮ ಪಂಚಾಯತ್ ಗ್ರಂಥಾಲಯದ ಸಿಬ್ಬಂದಿಗಳಾದ ಶೈಲಜ ಕೆ.ಎನ್, ಜ್ಯೋತಿ ಅವರು ಗೌರವಧನ ಹೆಚ್ಚಿಸುವಂತೆ ವಿನಂತಿಸಿಕೊಂಡರು ಇದಕ್ಕೆ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮೀನುಗಾರಿಕೆ, ಬಂದರು ದ.ಕ ಉಸ್ತುವಾರಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ , ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಬಿ.ಎನ್ ಶಂಕರ್…
