ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತಿಹಾಸ ಪ್ರಸಿದ್ದ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಶ್ರೀಕ್ಷೇತ್ರದ ದೀಪೋತ್ಸವವು ಕಾರ್ತಿಕ ಸಂಕಷ್ಟಹರ ಚತುರ್ಥಿಯ ಸಂದರ್ಭ ಸಕಲ ಧಾರ್ಮಿಕ ವಿಧಿ ವಿದಾನಗಳೊಂದಿಗೆ ಸಾಂಗವಾಗಿ ಜರುಗಿತು. ದೇವಳದ ಆಡಳಿತ ಧರ್ಮದರ್ಶಿ ಹೆಚ್. ಬಾಲಚಂದ್ರ ಭಟ್ ನೇತ್ರತ್ವದಲ್ಲಿ ಬೆಳಿಗ್ಗೆ ಶ್ರೀದೇವರಲ್ಲಿ ಗಣಹವನ ಮಹಾಪೂಜೆ ರಾತ್ರಿ ಮಹಾಪೂಜೆ ಮಹಾರಂಗಪೂಜೆ ಹಾಗೂ ದೀಪೋತ್ಸವ ಸಡಗರದಿಂದ ನಡೆಯಿತು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಡಚಾದ್ರಿ ಬೆಟ್ಟದ ಚಿತ್ರಮೂಲ ಗಣಪತಿ ಗುಹೆ ಪ್ರವೇಶಕ್ಕೆ ನಿರ್ಬಂಧ ಹೇರಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ ಆ ಭಾಗದಲ್ಲಿ ತಡೆಬೇಲಿ ಅಳವಡಿಸಿ ಭಕ್ತರ ಪ್ರವೇಶವನ್ನು ತಡೆಹಿಡಿಯಲಾಗಿದೆ ಅರಣ್ಯ ಇಲಾಖೆ ಕೈಗೊಂಡ ಈ ಕ್ರಮವು ಚರ್ಚೆಗೆ ಗ್ರಾಸವಾಗಿದೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೊಡಚಾದ್ರಿ, ವನ್ಯ ಜೀವಿಗಳು ಸಹಿತ ಔಷದೀಯ ಗಿಡಮೂಲಿಕೆಗಳ ತಾಣವಾಗಿದೆ. ಅರಣ್ಯ ಇಲಾಖೆಗೆ ಬಂದ ದೂರಿನಂತೆ ಕಬ್ಬಿಣದ ತಡೆಬೇಲಿ ನಿರ್ಮಿಸಲಾಗಿದೆ ಹಾಗಾಗಿ ಭಕ್ತರಿಗೆ ಇಷ್ಟಾರ್ಥ ಪೂರೈಕೆಗೆ ತೊಡಕಾಗಿದೆ ಎಂಬ ಭಾವನೆ ಮೂಡಿಬಂದಿದೆ. ಸರ್ವಜ್ಞ ಪೀಠ, ಚಿತ್ರಮೂಲ ಗಣಪತಿ ಗುಹೆ ಆಧ್ಯಾತ್ಮಿಕ ಚಿಂತಕರು ಸಹಿತ ಸಾಧು ಸಂತರಿಗೆ ಧ್ಯಾನ ಕೇಂದ್ರವಾಗಿದೆ. ಈ ದಿಸೆಯಲ್ಲಿ ಕೊಡಚಾದ್ರಿ ಪರಿಸರ ಸಂರಕ್ಷಣ ಟ್ರಸ್ಟ್ಟ್ನ ಗೌರವಾಧ್ಯಕ್ಷ ಕೇಮಾರು ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿಯವರು ಧಾರ್ಮಿಕ ಭಾವನೆಯ ಮೇಲೆ ಧಕ್ಕೆ ಉಂಟುಮಾಡಿರುವ ಇಲಾಖೆ ಕ್ರಮವನ್ನು ಖಂಡಿಸಿದ್ದು ಗೇಟ್ ತೆರವುಗೊಳಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಲಾಖಾ ಅಧಿಕಾರಿಗಳು, ಪರಿಸರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕುಂದೇಶ್ವರ ದೇಗುಲದ ಹಾಲ್ನಲ್ಲಿ ಕುಂದಗನ್ನಡ ಜಿಲ್ಲೆ ಸ್ಥಾಪನೆ ಕುರಿತು ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಸಮಾನ ಮನಸ್ಕರ ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಸಭೆ ಇತ್ತಿಚೆಗೆ ನಡೆಯಿತು. ಮಾಜಿ ಶಾಸಕರ ನೇತೃತ್ವದಲ್ಲಿ ಸಭೆ ನಡೆದು ಸಮಿತಿ ಕೂಡ ಅವರದ್ದೇ ನೇತೃತ್ವದಲ್ಲಿ ರೂಪಿಸಲಾಗಿದೆ. ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕರಾಗಿ ಮುಂಬಾರು ದಿನಕರ ಶೆಟ್ಟಿ, ಜಿಲ್ಲಾ ಹೋರಾಟ ಸಮಿತಿ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ಜಿ.ಪಂ ಮಾಜಿ ಸದಸ್ಯ ಗಣಪತಿ ಶ್ರೀಯಾನ್, ಜಿಲ್ಲಾ ಹೋರಾಟ ಸಮಿತಿ ವೇದಿಕೆಯ ಉಪಾಧ್ಯಕ್ಷರಾಗಿ ದಸ್ತಗೀರಿ ಸಾಹೇಬ್ ಕಾವ್ರಾಡಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಸತೀಶ್ ನಾಯ್ಕ್ ನಾಡಗುಡ್ಡೆಯಂಗಡಿ, ನವೀನ ಚಂದ್ರ ಶೆಟ್ಟಿ ಬೆಳ್ಳೂರು, ರತ್ನಾಕರ ಶೆಟ್ಟಿ ಆವರ್ಸೆ, ಚಿಟ್ಟೆ ರಾಜಗೋಪಾಲ ಹೆಗ್ಡೆ, ವಿನಯ ಶೇಟ್ ಕಾವ್ರಾಡಿ, ಕೆ. ಆರ್. ನಾಯ್ಕ್ ಹಂಗಳೂರು ಡಾ. ಕುಮಾರ್ ಶೆಟ್ಟಿ, ಭರತ್ ಶೆಟ್ಟಿ ಹರ್ಕೂರು ಅವರನ್ನು ಸಮೀತಿಗೆ ನೇಮಕ ಮಾಡಿಕೊಳ್ಳಲಾಯಿತು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿರಿಯ ಬಿಜೆಪಿ ಮುಖಂಡೆ, ಕೋಟೇಶ್ವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜಾನಕಿ ಬಿಲ್ಲವ ಗುರುವಾರ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರೊಂದಿಗೆ ಸ್ಥಳೀಯ 20ಕ್ಕೂ ಅಧಿಕ ಮಂದಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಕೋಟೇಶ್ವರ ಭಾಗದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತೆಯಾಗಿದ್ದ ಜಾನಕಿ ಬಿಲ್ಲವ ತಾಲೂಕು ಪಂಚಾಯತ್ ಸದಸ್ಯೆಯಾಗಿ 2 ಬಾರಿ, ಗ್ರಾ.ಪಂ ಸದಸ್ಯೆಯಾಗಿ 2 ಬಾರಿ, ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿಯೂ ಪಕ್ಷಕ್ಕಾಗಿ ಕೆಲಸ ಮಾಡಿದ್ದರು. ಈ ಹಿಂದಿನ ಅವಧಿಯಲ್ಲಿ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದ ಜಾನಕಿ ಬಿಲ್ಲವರನ್ನು ಸ್ವಪಕ್ಷದವರೇ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅವರನ್ನು ಗಾದಿಯಿಂದ ಇಳಿಸಿದ್ದರು. ಆ ಬಳಿಕ ಜಾನಕಿ ಬಿಲ್ಲವ ಪಕ್ಷದ ಚಟಿವಟಿಕೆಯಿಂದ ದೂರ ಉಳಿದಿದ್ದರು. ಪಕ್ಷ ಸೇರ್ಪಡೆ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಮುಖಂಡರಾದ ಅಶೋಕ್ ಪೂಜಾರಿ ಬೀಜಾಡಿ, ವಿಕಾಸ್ ಹೆಗ್ಡೆ, ಶಂಕರ್ ಪೂಜಾರಿ, ಸುನೀಲ್ ಪೂಜಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಬೆಂಬಲಿಗರ ಮನಸ್ಸಿನಲ್ಲಿ ಭಾರತೀಯ ಜನತಾ ಪಕ್ಷ ಭಾವನಾತ್ಮಕ ವಿಚಾರಗಳನ್ನು ಮತ್ತು ಸುಳ್ಳುಗಳನ್ನು ತುಂಬಿ ತನ್ನತ್ತ ಸೆಳೆದಿದೆ. ಇಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗಲು ಇದು ಪ್ರಮುಖ ಕಾರಣ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ ಕೊಡವೂರು ಹೇಳಿದರು. ಗುರುವಾರ ಮರವಂತೆಯಲ್ಲಿ ನಡೆದ ಬೈಂದೂರು ಬ್ಲಾಕ್ ಕಾಂಗ್ರೆಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಜಿಲ್ಲೆಗಳಲ್ಲಿನ ಗೇಣಿದಾರರ ಮತ್ತು ಮೀನುಗಾರರ ಅಭಿವೃದ್ಧಿಗೆ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಕ್ರಾಂತಿಕಾರಕ ಕ್ರಮಗಳನ್ನು ಜಾರಿಗೊಳಿಸಿದ್ದುವು. ಈಚಿನ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ, ಬಡವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಿಸಿತು. ಆದರೆ ಅವು ಇಲ್ಲಿ ಕಾಂಗ್ರೆಸ್ಗೆ ಮತ ತಂದುಕೊಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಕ್ಷದ ಕಾರ್ಯಕರ್ತರು ಜನರೊಂದಿಗೆ ಬೆರೆತು ಅವರಿಗೆ ವಾಸ್ತವಾಂಶಗಳನ್ನು ಮನದಟ್ಟು ಮಾಡಬೇಕು ಎಂದು ಅವರು ಹೇಳಿದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಈ ತಿಂಗಳಿನಲ್ಲಿ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ‘ಭಾಷೆಯನ್ನು ಉಳಿಸಿ, ಬೆಳೆಸುವುದು ಸಾಹಸ ಕಾರ್ಯವೇನೂ ಅಲ್ಲ. ಅದನ್ನು ಎಲ್ಲ ಆಯಾಮಗಳಲ್ಲಿ ಬಳಸಿದರೆ ಅದು ಸದಾ ಜೀವಂತವಾಗಿರುತ್ತದೆ’ ಎಂದು ಬೈಂದೂರು ರೋಟರಿ ಮಾಜಿ ಅಧ್ಯಕ್ಷ ಗೋವಿಂದ ಎಂ. ಹೇಳಿದರು. ಬೈಂದೂರು ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಕ್ಕಮ್ಮ ಮತ್ತು ಪರಮೇಶ್ವರ ಹೆಬ್ಬಾರ್ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು. ತಾಯ್ನುಡಿಯನ್ನು ಉಳಿಸಿ ಬೆಳೆಸುವ ಜವಬ್ದಾರಿ ಅದರ ವಾರಸುದಾರರ ಮೇಲಿದೆ. ಅದರ ಬಗೆಗೆ ಅಭಿಮಾನ ತಾಳಿ ಮಾತು, ಬರಹಗಳಲ್ಲಿ ಬಳಸಿದರೆ ಅದು ಮುಂದಿನ ತಲೆಮಾರಿಗೆ ವರ್ಗಾವಣೆಯಾಗುತ್ತದೆ. ಕುಂದಗನ್ನಡವು ಅತ್ಯಂತ ಸುಲಭ ಹಾಗೂ ಸಂಕ್ಷಿಪ್ತ ಪದಗಳಿಂದ ಕೂಡಿದ್ದು ಮಾತೃಭಾಷೆಯಾಗಿರುವವರು ಅದರ ಮೂಲ ಸ್ವರೂಪದಲ್ಲಿ ಅದನ್ನು ಬಳಸಬೇಕು ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬೈಂದೂರು ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರ ಎಚ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಸುಬ್ರಹ್ಮಣ್ಯ ಭಟ್, ಶಿಕ್ಷಣ ಸಂಯೋಜಕ ಅಬ್ದುಲ್ ರವೂಫ್, ದತ್ತಿದಾನಿ ಪ್ರಕಾಶ ಹೆಬ್ಬಾರ್ ಮುಖ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಕಾರ್ಯಕ್ರಮ(ಎನ್ಪಿಇಪಿ)ಅಡಿಯಲ್ಲಿ ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಆನ್ಲೈನ್ ಜನಪದ ನೃತ್ಯ ಸ್ಪರ್ಧೆಯಲ್ಲಿ ಆಲೂರು ಪ್ರೌಢ ಶಾಲೆ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ವಿಜೇತ ವಿದ್ಯಾರ್ಥಿಗಳಾದ ಅಂಕಿತಾ, ಸುರಕ್ಷಾ, ಸುಜನಾ, ದೀಪಿಕಾ, ಸಿಂಚನಾ, ಸಹನಾ ಅವರು ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ಪಡೆದಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂಭಾಶಿಯ ಫ್ರೆಂಡ್ಸ್ ಕ್ರಿಕೆಟರ್ಸ್ ಆಶ್ರಯದಲ್ಲಿ ನಡೆದ 40 ಗಜಗಳ ಕ್ರಿಕೆಟ್ ಪಂದ್ಯಾಟ ‘ಕುಂಭಾಶಿ ಪ್ರೀಮಿಯರ್ ಲೀಗ್’ನ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿಯಾಗಿ ಸುಧೀರ್ ಶೆಟ್ಟಿ, ಅರ್ಜುನ್ ದಾಸ್, ದಯಾಶಂಕರ್, ಗಿರೀಶ್ ಗಾಣಿಗ, ಶರತ್, ಪ್ರಸನ್ನ ದೇವಾಡಿಗ ಹಾಗೂ ವಸಂತ ಭಾಗವಹಿಸಿದ್ದರು. ಪ್ರಥಮ ಸ್ಥಾನ ಪಡೆದುಕೊಂಡ ‘ರೈನಸ್ ಹೀರೋಸ್’ ಹಾಗೂ ದ್ವಿತೀಯ ಸ್ಥಾನ ಪಡೆದುಕೊಂಡ ‘ಸ್ಯಾಮ್ ಕ್ರಿಕೆಟರ್ಸ್’ ತಂಡಗಳಿಗೆ ಪ್ರಶಸ್ತಿ ಹಾಗೂ ಬಹುಮಾನ ನೀಡಲಾಯಿತು. ರೈನಸ್ ಹಿರೋಸ್ ತಂಡದ ಅಶ್ವಿನ್ ಆಚಾರ್ ಸರಣಿ ಶ್ರೇಷ್ಠ, ಸ್ಯಾಮ್ ಕ್ರಿಕೆಟರ್ಸ್ ತಂಡದ ಶಾನ್ ಉತ್ತಮ ದಾಂಡಿಗ ಹಾಗೂ ದೀಪಕ್ ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಪಡೆದುಕೊಂಡರು. ಪ್ರದೀಪ್ ಆಚಾರ್ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ನೋಂದಣಿ ಆಗದ ರಿಕ್ಷಾದಲ್ಲಿ ಶ್ರೀಗಂಧದ ಕೊರಡುಗಳನ್ನು ಆಕ್ರಮವಾಗಿ ದಾಸ್ತಾನು ಇರಿಸಿದ್ದ ಆರೋಪಿ ವಂಡ್ಸೆ ಗ್ರಾಮದ ಹಕ್ಲುಮನೆ ರಾಜೇಶ್ ಎಂಬುವರನ್ನು ಅರಣ್ಯಾಧಿಕಾರಿಗಳ ತಂಡ ಬಂಧಿಸಿದೆ. 3.8 ಕೆ.ಜಿ. ಶ್ರೀಗಂಧ, ರಿಕ್ಷಾ ಮುಟ್ಟುಗೋಲು ಹಾಕಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್, ಉಪವಲಯ ಅರಣ್ಯಾಧಿಕಾರಿ ಹೇಮಾ, ಶರತ್ ಗಾಣಿಗ, ಅರಣ್ಯ ರಕ್ಷಕ ದೇವಿಪ್ರಸಾದ್, ಉದಯ್ ವಂಡ್ಸೆ ಹಾಗೂ ಚಾಲಕ ಅಶೋಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಡಿಸೆಂಬರ್ 22 ಮತ್ತು 27 ರಂದು ನಡೆಯುವ ಎರಡು ಹಂತದ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯು, ಸುಗಮವಾಗಿ ಮತ್ತು ಯಾವುದೇ ಲೋಪಗಳಿಲ್ಲದೇ ನಡೆಸಲು ಚುನಾವಣಾ ಆಯೋಗ ಸೂಚಿಸಿರುವ ಮಾರ್ಗಸೂಚಿಯಂತೆ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ , ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿಸೆಂಬರ್ 22 ರಂದು ನಡೆಯುವ ಮೊದಲನೇ ಹಂತದಲ್ಲಿ ಉಡುಪಿ, ಹೆಬ್ರಿ, ಬೈಂದೂರು ಮತ್ತು ಬ್ರಹ್ಮಾವರ ವ್ಯಾಪ್ತಿಯ 67 ಗ್ರಾಮ ಪಂಚಾಯತ್ ಗಳ 415 ಕ್ಷೆತ್ರಗಳಿಗೆ , ಒಟ್ಟು 553 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, 377308 ಮಂದಿ ಮತದಾರರ ಮತ ಚಲಾಯಿಸಲಿದ್ದಾರೆ. ಡಿಸೆಂಬರ್ 27 ರಂದು ನಡೆಯುವ ಎರಡನೇ ಹಂತದಲ್ಲಿ ಕುಂದಾಪುರ, ಕಾರ್ಕಳ ಮತ್ತು ಕಾಪು ವ್ಯಾಪ್ತಿಯ 87 ಗ್ರಾಮ ಪಂಚಾಯತ್ ಗಳ 451 ಕ್ಷೆತ್ರಗಳಿಗೆ , ಒಟ್ಟು 576 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, 794872…
