ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜನರಲ್ಲಿ ಸಾತ್ವಿಕತೆ ಬೆಳೆಯುವ ಉದ್ದೇಶದಿಂದ ಯುವಜನತೆಗೆ ಗುರುಗಳ ಸಂದೇಶವನ್ನು ತಿಳಿಸುವ ಮೂಲಕ ಮುಂದಿನ ಪೀಳಿಗೆಗೂ ವಿಸ್ತರಿಸಬೇಕಾಗಿದೆ. ಪ್ರೀತಿ, ವಿಶ್ವಾಸ ಹಾಗೂ ಮನುಷ್ಯತ್ವದ ಸದೃಢ ವಿಚಾರಗಳಿಂದ ಬಲಿಷ್ಠ ರಾಷ್ಟ್ರ ನಿರ್ಮಿಸಲು ಎಲ್ಲರನ್ನು ಒಟ್ಟುಗೂಡಿಸಲು ಸಾಧ್ಯವಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಯಡ್ತರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಭಾನುವಾರ ಸ್ಥಳೀಯ ಬಿಲ್ಲವ ಸಮಾಜ ಸೇವಾ ಸಂಘ ಆಯೋಜಿಸಿದ ಬ್ರಹ್ಮಶ್ರೀ ನಾರಾಯಣ ಗುರು ಜನ್ಮದಿನಾಚರಣೆಯಲ್ಲಿ ಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎನ್ನುವ ಸರಳ ಸಂದೇಶವನ್ನು ವಿಶ್ವಕ್ಕೆ ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಸಾರ್ವಕಾಲಿಕ ಸಿದ್ಧಾಂತ, ಸಾಮಾಜಿಕ ನ್ಯಾಯ ಪರಿಕಲ್ಪನೆಯೊಂದಿಗೆ ಇಂದಿನ ಯುವ ಪೀಳಿಗೆ ಹೆಜ್ಜೆ ಇಡಬೇಕು. ಮನುಷ್ಯ ಮನುಷ್ಯರ ನಡುವೆ ಬಾಂದ್ಯವ ವೃದ್ಧಿಸಬೇಕು. ಪ್ರೀತಿ ವಿಶ್ವಾಸಗಳಿಂದ ಬಾಳಬೇಕು ಎಂದರು. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟಿ ಗೋವಿಂದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಂಗಳೂರಿನ ಹಾಸ್ಯ ತರಂಗ ಮತ್ತು ವೈ. ಸತ್ಯನಾರಾಯಣ ಕಾಸರಗೋಡು-೮೦ ಅಭಿನಂದನಾ ಸಮಿತಿ ಜಂಟಿಯಾಗಿ ನೀಡಲಿರುವ ರಾಘವಾಂಕ ರಾಜ್ಯ ಪ್ರಶಸ್ತಿಗೆ ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆಯ ಕವಿ, ಲೇಖಕ ಪುಂಡಲೀಕ ನಾಯಕ್ ಅವರನ್ನು ಆಯ್ಕೆ ಮಾಡಿದೆ. ಅಕ್ಟೋಬರ್ ೫ರಂದು ಕಾಸರಗೋಡು ಬೀರಂತಬೈಲಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯುವ ಅಭಿನಂದನಾ ಕಾರ್ಯಕ್ರಮ, ನೂತನ ಕೃತಿಗಳ ಬಿಡುಗಡೆ, ಹಾಸ್ಯ ರಸಾಯನ, ಪ್ರಶಸ್ತಿ ಪ್ರದಾನ, ಸನ್ಮಾನ ಮತ್ತು ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನೆರವೇರುವುದು ಎಂದು ಪ್ರಕಟಿಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಕ್ರಿಕೆಟಿಗ ಹಾಗೂ ನಟ ಶ್ರೀಶಾಂತ್ ಅವರು ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಪತ್ನಿ ಭುವನೇಶ್ವರಿ ಕುಮಾರಿ ಅವರೊಂದಿಗೆ ಭೇಟಿ ನೀಡಿದ ಅವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ. ರಮೇಶ್ ಗಾಣಿಗ ಗೌರವಿಸಿದರು. ಈ ಸಂದರ್ಭ ಆರ್. ಎಸ್. ವೆಂಚರ್ಸ್ ಪ್ರವರ್ತಕ ರಾಜೀವ ಕುಮಾರ್, ಪಾಲುದಾರರಾದ ಕೆ. ವೆಂಕಟೇಶ್ ಕಿಣಿ, ಸಾಜು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ ಇದರ ಮುಖ್ಯೋಪಧ್ಯಾಯ ಕೆ. ರಾಮಣ್ಣ ನಾಯ್ಕ್ ಅವರಿಗೆ ಪ್ರಸಕ್ತ ಸಾಲಿನ ಉಡುಪಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಒಲಿದು ಬಂದಿದೆ. ಬ್ರಹ್ಮಾವರದ ಚೇರ್ಕಾಡಿಯವರಾದ ರಾಮಣ್ಣ ನಾಯ್ಕ್ ಅವರು ಎಸ್‌ಡಿಎಂ ಶಿಕ್ಷಣ ಸಂಸ್ಥೆಯಿಂದಶಿಕ್ಷಕ ವೃತ್ತಿ ಆರಂಭಿಸಿದ್ದರು. ಕಳೆದ ೩೦ ವರ್ಷಗಳಿಂದ ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಬಸ್ರೂರು ಶಾರದಾ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕುಸ್ತಿ ಪಂದ್ಯಾವಳಿಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ಬಿ. ಎನ್. ಶ್ರೇಯಸ್ 79 ಕೆ.ಜಿ ವಿಭಾಗದ ಕುಸ್ತಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿಗೆ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ ತರಬೇತಿ ನೀಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮುಂಬೈ: ಸಾಯಿ ಲೀಲಾ ಕ್ಯಾಟರರ‍್ಸ್‌ನ ಹೊಸ ಉತ್ಪನ್ನ ಸ್ವೇಝೋನ್ ಚಾಕಲೇಟ್ ಉತ್ಪಾದನಾ ಘಟಕವು ಇಲ್ಲಿನ ಪೂರ್ವ ಅಂಧೇರಿ ಸಕಿವಿಹಾರ್ ರಸ್ತೆಯ ಅನ್ಸಾ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಲೋಕಾರ್ಪಣೆಗೊಂಡಿತು. ನೂತನ ಉತ್ಪನ್ನದ ಕಛೇರಿಯನ್ನು ಉದ್ಯಮಿ ಸುಧಾಕರ ಕಸ್ತೂರಿ ದಂಪತಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಸಾಯಿ ಕೇರ್ ಲಾಜಿಸ್ಟಿಕ್ಸ್‌ನ ಸುರೇಂದ್ರ ಪೂಜಾರಿ, ಸಾನ್ವಿ ಸ್ಟಾರ್ ಹಾಸ್ಪಿಟಾಲಿಟಿಯ ಸಂತೋಷ್ ಶೆಟ್ಟಿ, ಗೋವಾ ರಚನಾ ಗ್ರಾಫಿಕ್ಸ್‌ನ ಸಂಜಯ್ ಉಪಾಧ್ಯ, ಯಶವಂತ್ ಪೂಜಾರಿ, ಮಹಾಬಲ ದೇವಾಡಿಗ, ಜಯರಾಮ್ ಕೆ. ಪೂಜಾರಿ, ಹರೀಶ್ ಮೆಂಡನ್, ಉಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಾಯಿ ಲೀಲಾ ಕ್ಯಾಟರರ‍್ಸ್‌ನ ನಿರ್ದೇಶಕ, ಬೈಂದೂರು ಮೂಲದ ಮಂಜುನಾಥ ಕೆ. ಪೂಜಾರಿ ಅವರು ಸರ್ವರನ್ನು ಸ್ವಾಗತಿಸಿಕೊಂಡರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬಿಸಿಸಿಐ ವಿಧಿಸಿರುವ ನಿರ್ಬಂಧ ಶೀಘ್ರವೇ ತೆರವುಗೊಳಿಸಲಿದ್ದು ಬಳಿಕ ಕ್ರಿಕೆಟ್‌ಗೆ ವಾಪಾಸಾಗಲಿದ್ದೇನೆ ಎಂದು ಕ್ರಿಕೆಟಿಗ ಹಾಗೂ ನಟ ಎಸ್. ಶ್ರೀಶಾಂತ್ ಹೇಳಿದರು. ಅವರು ಬೈಂದೂರು ರುಪೀ ಮಾಲ್ ಉದ್ಘಾಟನೆಯ ಬಳಿಕ ಬೈಂದೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕುಂದಾಪ್ರ ಡಾಟ್ ಕಾಂ ಪ್ರಶ್ನೆಗೆ ಉತ್ತರಿಸಿದ ಪ್ರತಿಕ್ರಿಯಿಸಿದ ಆರು ವರ್ಷಗಳಿಂದ ಬದುಕಿನ ಭಾಗವಾಗಿದ್ದ ಕ್ರಿಕೆಟ್‌ನಿಂದ ದೂರವಿದ್ದೇನೆ. ಆದರೆ ಮತ್ತೆ ಕ್ರಿಕೆಟ್ ಆಟಲಿರುವ ಬಗ್ಗೆ ಸಂತಸವಿದೆ. 2012ರಲ್ಲಿ ಕೇರಳ ರಣಜಿ ಮತ್ತು ಅನ್ಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಲಿದ್ದು ಫೆಬ್ರವರಿಯಿಂದಲೇ ಪ್ರಾಕ್ಟಿಸ್‌ನಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಂದರು. ಕನ್ನಡ ಚಿತ್ರರಂಗದಲ್ಲಿ ನಟಸುತ್ತಿರುವ ಬಗ್ಗೆ ಮಾತನಾಡಿ ಕೆಂಪೆಗೌಡ -2 ಚಿತ್ರ ನನಗೆ ಚಿತ್ರರಂಗದಲ್ಲಿ ಬದ್ರ ತಳಪಾಯ ಹಾಕಿಕೊಟ್ಟಿದೆ. ಈಗ ಧೂಮ್ ಅಗೇನ್ ಚಿತ್ರದಲ್ಲಿ ನಡೆಸುತ್ತಿದ್ದೇನೆ. ಇನ್ನು ಕೆಲವು ಸಿನೆಮಾಗಳಲ್ಲಿ ನಟಿಸಲು ಆಹ್ವಾನ ಬಂದಿದೆ. ಬೆಂಗಳೂರು ಈಗ ನನ್ನ ಎರಡನೇ ಮನೆಯಾಗಿದೆ. ಕರ್ನಾಟಕ ಹಾಗೂ ಕನ್ನಡಿಗರ ಬಗ್ಗೆ ಅಪಾರ ಪ್ರೀತಿ ಗೌರವ ಹೊಂದಿದ್ದೇನೆ ಎಂದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದಿದ್ದು, ತಂಡದ ಮೂರು ವಿದ್ಯಾರ್ಥಿನಿಯರು ಧಾರವಾಡದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ತಂಡದ ದಿವ್ಯ ದ್ವಿತೀಯ ವಾಣಿಜ್ಯ ವಿಭಾಗ, ದೀಪ್ತಿ ದ್ವಿತೀಯ ವಾಣಿಜ್ಯ ವಿಭಾಗ ಹಾಗೂ ಸ್ವಾತಿ ಪ್ರಥಮ ವಾಣಿಜ್ಯ ವಿಭಾಗ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾದವರು. ವಿದ್ಯಾರ್ಥಿನಿಯರಿಗೆ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ, ದೈಹಿಕ ಶಿಕ್ಷಣ ಶಿಕ್ಷಕ ಸಚಿನ್ ಕುಮಾರ್ ಶೆಟ್ಟಿ ಹುಂಚನಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದಿಂದ ಶಿವಮೊಗ್ಗ ಮಾರ್ಗವಾಗಿ ಚಲಿಸುತ್ತಿದ್ದ ಗೂಡ್ಸ್ ಲಾರಿಯ ಹಿಂಭಾಗದಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಲಾರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಬಿಸ್ಕೆಟ್ ಭಸ್ಮವಾದ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಬಳಿ ನಡೆಯಿದೆ. ಸಿದ್ದಾಪುರ ಮಾರ್ಗದಲ್ಲಿ ತೆರಳುತ್ತಿದ್ದ ಲಾರಿ ಹಿಂಭಾಗದ ಲೈಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹತ್ತಿಕೊಂಡಿದೆ. ಕುಂದಾಪುರದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಗಳಿಗೆ ಇದುವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಗುರುವಾರ ಕುಂದಾಪುರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಕುಂದಾಪುರ ತಹಶೀಲ್ದಾರರಿಗೆ ಮನವಿ ನೀಡಿ ಸರ್ಕಾರಕ್ಕೆ ಈಗೀಂದಗಲೇ ಪರಿಹಾರ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಆಗ್ರಹಿಸಲಾಯಿತು. ಪ್ರವಾಹದಿಂದ ಲಕ್ಷಾಂತರ ಜನಸಾಮಾನ್ಯರ ಮನೆಗಳು ಹಾಗೂ ಬದುಕು ನೆಲಕಚ್ಚಿದೆ. ಹತ್ತಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಆಪರೇಶನ್ ಕಮಲಕ್ಕೆ ಸಾವಿರ ಕೋಟಿ ಖರ್ಚು ಮಾಡುವ ಬಿಜೆಪಿ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಅವರದ್ದೆ ಸರ್ಕಾರ ಆಡಳಿತ ನಡೆಸುತ್ತಿದ್ದರೂ ಈ ತನಕ ಬಿಡಿಗಾಸು ಪರಿಹಾರವನ್ನು ಬಿಡುಗಡೆ ಮಾಡಿಲ್ಲ. ಚಂದ್ರಯಾನ ವಿಕ್ಷಣೆಗೆ ರಾಜ್ಯಕ್ಕೆ ಬಂದಿದ್ದ ಪ್ರದಾನಿ ಮೋದಿ ಕಾಟಾಚಾರಕ್ಕೂ ನೆರೆಪೀಡಿತ ಪ್ರದೇಶದ ವೀಕ್ಷಣೆ ಮಾಡಿಲ್ಲ. ನೆರೆಪೀಡಿತ ಪ್ರದೇಶದಲ್ಲಿ ಮಾನವೀಯ ನೆಲೆಯಲ್ಲಿ ಆಹಾರ ಸಾಮಾಗ್ರಿಗಳ ವಿತರಣೆ ಕೂಡಾ ನಡೆಯುತ್ತಿಲ್ಲ. ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಉಟ್ಟ ಬಟ್ಟೆಯಲ್ಲಿ ಓಡಿದ ಜನರಿಗೆ ಅಕ್ಕಿ ವಿತರಿಸಲು…
