ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಡಿ ಕನ್ಯಾಣದ ಶ್ರೀ ಶನೀಶ್ವರ ದೇಗುಲದ ವಠಾರದಲ್ಲಿ ನಡೆದ ಉಂಜಲೋತ್ಸವದ ಪ್ರಯುಕ್ತ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದಿಂದ ಕಾರ್ಯಕ್ರಮ ನಡೆಯುವ ಕೋಡಿ ಕನ್ಯಾಣದ ಉಂಜಲೋತ್ಸವದವರೆಗೆ ವೈಭವದ ಮೆರವಣಿಗೆ ಹಮ್ಮಿಕೊಂಡಿತು.
ಈ ಸಂದರ್ಭದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ಸ್ವಚ್ಛತಾ ಸೇನಾನಿಗಳು ಸುಮಾರು ಐದು ಕೀ.ಮಿ ವರೆಗಿನ ಮೆರವಣಿಗೆಯಲ್ಲಿ ನೀರು ಬಾಟಲಿಗಳನ್ನು ತೆರವುಗೊಳಿಸುವ ಮೂಲಕ ಸ್ವಚ್ಛತಾ ಕೈಂಕರ್ಯ ಕೈಗೊಂಡಿತು.

ಕಾರ್ಯಕ್ರಮಕ್ಕೆ ಆಗಮಿಸಿದ ನಾಡೋಜ ಡಾ. ಜಿ. ಶಂಕರ್ ಅವರು ಪಂಚವರ್ಣ ಸ್ವಚ್ಛತಾ ಕಾರ್ಯವನ್ನು ಪ್ರಶಂಸಿದರು. ಈ ಸಂದರ್ಭದಲ್ಲಿ ಪಂಚವರ್ಣ ಸಂಘಟನೆ ಪದಾಧಿಕಾರಿಗಳು ಸದಸ್ಯರು ಇದ್ದರು.










