Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಷತ್ ಚುನಾವಣೆಯಲ್ಲಿ ತಾಂತ್ರಿಕವಾಗಿ ಗೆಲುವು ಸಾಧ್ಯವಿದ್ದರೂ ತಲೆಯೆತ್ತಿ ನಿಲ್ಲುವ ಗೆಲುವು ನಮ್ಮದಾಗಬೇಕು ಎಂದು ವಿಧಾನ ಪರಿಷತ್ ನ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ಹೇಳಿದರು. ಇಲ್ಲಿನ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ಕುಂದಾಪುರ ಸೋಮವಾರ ಆಯೋಜಿಸಿದ್ದ ಮತದಾರರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ 6 ಸಾವಿರ ಮತಗಳಿವೆ. ಬಿಜೆಪಿ ಬೆಂಬಲಿತ ಸ್ಥಳೀಯ ಪ್ರತಿನಿಧಿಗಳು 3,600 ಇದ್ದಾರೆ. ಕಾಂಗ್ರೆಸ್ ಪಕ್ಷ ಮತ ಹೊಂದಿದೆ. ಎಸ್ಡಿಪಿಐಗೆ 200 ಮತ ಇದೆ. 6 ಸಾವಿರದಲ್ಲಿ 2 ಸಾವಿರ ಮತ ಗೆದ್ದವರು ವಿಜಯ ಸಾಧಿಸಿದಂತೆ, 2 ಸಾವಿರಕ್ಕಿಂತ ಕಡಿಮೆಯಾದಲ್ಲಿ ಪ್ರಿಪರೆನ್ಸಿಯಲ್ ಸಿಸ್ಟಮ್ನಡಿ ಆಯ್ಕೆ ನಡೆಯುತ್ತದೆ. ತಾಂತ್ರಿಕವಾಗಿ ನಮಗೆ ಗೆಲುವು ಆಗಲಿದ್ದರೂ, ಪಕ್ಷೇತರ 27 ಮತಗಳು ಸಹಿತ ಕಾಂಗ್ರೆಸ್ನಲ್ಲಿ ಹಿಂದೆ ಸಾಕಷ್ಟು ಬೆಳೆದು, ಬಳಿಕ ಕಾರಣಾಂತರ ದಿಂದ ಅನ್ಯಪಕ್ಷದಲ್ಲಿರು ವವರ ಮನವೊಲಿಸಿ ಮತ ಪಡೆಯುವ ಮೂಲಕ ತಲೆಯೆತ್ತುವ ಗೆಲುವು ನಮ್ಮದಾಗಬೇಕಾಗಿದೆ ಎಂದರು. ಪ್ರತಾಪ್ಚಂದ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ನಾಗಪುರದ ಸಿಂಬಯೋಸಿಸ್ ಲಾ ಸ್ಕೂಲ್ ಆಯೋಜಿಸಿದ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ರೆಶೆಲ್ ಫೆನಾಂಡಿಸ್ ತೃತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ.ಎಸ್ ಅಭಿನಂದನೆ ಸಲ್ಲಿಸಿದ್ದಾರೆ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಮಣಿಕಂಠ ಎಸ್ . ಅವರು ಆಯ್ಕೆಯಾಗಿದ್ದಾರೆ. ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರ ಶಿಪಾರಸ್ಸಿನ ಮೇರೆಗೆ ರಾಜ್ಯ ಹಿಂದುಳಿದ ವರ್ಗದ ಅಧ್ಯಕ್ಷರ ಆದೇಶದ ಮೇರೆಗೆ, ರೋಟರಿ ಭವನದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಆದೇಶ ಪ್ರತಿ ನೀಡುವುದರ ಮೂಲಕ ಪದಪ್ರಧಾನ ಮಾಡಿದರು. ಈ ಸಂಧರ್ಭದಲ್ಲಿ ಮಾಜಿ ಸಭಾಪತಿಗಳಾದ ಪ್ರತಾಪಚಂದ್ರ ಶೆಟ್ಟಿ, ವಿಧಾನ ಪರಿಷತ್ ಅಭ್ಯರ್ಥಿ ಮಂಜುನಾಥ ಭಂಡಾರಿ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸೈನಿಕರು ಯುದ್ಧವನ್ನು ಗೆಲ್ಲುತ್ತಾರೆ. ಆದರೆ ಅದರ ಕೀರ್ತಿ ದಂಡನಾಯಕನ ಪಾಲಾಗುತ್ತದೆ ಎಂಬ ಮಾತಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ದುಡಿದು ಕೀರ್ತಿ, ಗೌರವ ಗಳಿಸುವವರಿಗೂ ಇದೇ ಮಾತು ಅನ್ವಯಿಸುತ್ತದೆ. ಏಕೆಂದರೆ ಸಾಧನೆ ಎಂದೂ ಒಬ್ಬರದ್ದಾಗಿರದೇ ಅವರೊಂದಿಗೆ ದುಡಿದ ಹಲವರದಾಗಿರುತ್ತದೆ ಎಂದು ಈ ಸಾಲಿನ ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಹೇಳಿದರು. ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ನಡೆದ ರೋಟರಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಬಿ. ರಾಮ ಟೈಲರ್ ಅವರ ಜತೆ ರೋಟರಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸನ್ಮಾನವು ಕೇವಲ ಸಾಂಕೇತಿಕವಾಗಿರುತ್ತದೆ. ಅದು ತಮಗೊಬ್ಬರಿಗೇ ಅಲ್ಲ; ಬದಲಾಗಿ ತಮ್ಮ ಸಾಧನೆಗೆ ಬೆಂಬಲವಾಗಿ ನಿಂತ ಎಲ್ಲರಿಗೆ ಸಲ್ಲುತ್ತದೆ ಎಂಬ ವಿನೀತ ಭಾವದೊಂದಿಗೆ ಸನ್ಮಾನವನ್ನು ಸ್ವೀಕರಿಸಬೇಕು ಎಂದು ಅವರು ಹೇಳಿದರು. ತಮಗೆ ನೀಡಿದ ಸನ್ಮಾನಕ್ಕಾಗಿ ಬಿ. ರಾಮ ಟೈಲರ್ ಕೃತಜ್ಞತೆ ಸಲ್ಲಿಸಿದರು. ಉಭಯರನ್ನು ಜಿಪಂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಜಿಲ್ಲಾಡಳಿತದ ಹೊಸ ಧ್ಯೇಯ ವಾಕ್ಯದೊಂದಿಗೆ ‘ನಮ್ಮ ಕಷ್ಟ ನಮ್ಮ ಜವಾಬ್ದಾರಿ’ ಎಂಬ ಶಿರ್ಷಿಕೆಯಡಿ ಸಾರ್ವಜನಿಕರಲ್ಲಿ ಸ್ವಚ್ಛತಾ ಅರಿವು ಮೂಡಿಸುವ ಕೆಲಸಸಕ್ಕೆ ಈಗಾಗಲೇ ಜಿಲ್ಲಾಡಳಿತ ವತಿಯಿಂದ ಕೋಟೇಶ್ವರದಲ್ಲಿ ಚಾಲನೆ ನೀಡಲಾಗಿದೆ. ನಮಗೆ ಕಷ್ಟಗಳನ್ನು ನಾವೇ ಸರಿಪಡಿಸಿಕೊಂಡು ನಡೆಯಬೇಕಾಗಿದೆ. ಇನ್ನು ಮುಂದೆ ಎಸ್‌ಎಲ್‌ಆರ್‌ಎಂ ಘಟಕ ಬಾಗಿಲಿಗೆ ಬಾರದೇ ಇದ್ದರೂ ಕೂಡ ನಮ್ಮ ಮನೆಯ ಕಸಗಳನ್ನು ಎಸ್‌ಎಲ್‌ಆರ್‌ಎಂ ಘಟಕಗಳ ಕಡೆ ಹೋಗಿ ನೀಡುವ ಪರಿಪಾಠವನ್ನು ರೂಡಿಸಿಕೊಳ್ಳಬೇಕಾಗಿದೆ. ಈ ಕ್ರಮವನ್ನು ಸಮರ್ಪಕವಾಗಿ ಜಾರಿಗೆ ತರುವುದು ಜಿಲ್ಲಾಡಳಿತದ ಆಶಯವಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಹೇಳಿದರು. ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಜಿಲ್ಲಾ ಪಂಚಾಯಿತಿ ಉಡುಪಿ, ಕರಾವಳಿ ಕಾವಲು ಪೊಲೀಸ್ ಪಡೆ ಗಂಗೊಳ್ಳಿ, ಕೋಟೇಶ್ವರ ಗ್ರಾಮ ಪಂಚಾಯತ್, ಲಯನ್ಸ್ ಕ್ಲಬ್ ಕುಂದಾಪುರ, ಕುಂದಾಪುರ ಅಮೃತಧಾರಾ, ಕುಂದಾಪುರ ಅಮೃತಧಾರಾ, ರಾಷ್ಟ್ರ ಸೇವಿಕಾ ಸಮಿತಿ ಉಡುಪಿ ಆಶ್ರಯದಲ್ಲಿ ಭಾನುವಾರ ಕೋಟೇಶ್ವರ ಹಳಅಳಿವೆ ಬೀಚ್ನಲ್ಲಿ ಜರುಗಿದ ಕಡಲ ತೀರ ಸ್ವಚ್ಛಗೊಳಿಸುವುದರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾಗರ ಸಿದ್ಧಿವಿನಾಯಕ ವುಡ್ ಇಂಡಸ್ಟ್ರೀಸ್ ಮತ್ತು ಆಶಾವಾಣಿ ಟ್ರಸ್ಟ್ ರಿ. ಸಾಲಿಗ್ರಾಮ ಇವರ ಸಹಭಾಗಿತ್ವದಲ್ಲಿ ವಕ್ವಾಡಿ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಕುಂದಾಪುರ ಸ್ವಾತಿ ಕ್ಲಿನಿಕ್‌ನ ಡಾ. ಶ್ರೀಪತಿ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಾಗರ ಸಿದ್ಧಿ ವಿನಾಯಕ ವುಡ್ ಇಂಡಸ್ಟ್ರೀಸ್ ಮಾಲಕ ಗಣೇಶ್ ಆಚಾರ್ಯ, ವಕ್ವಾಡಿ ವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷ ಆನಂದ ಆಚಾರ್ಯ, ಸದ್ಗುರು ಆಯುರ್ವೇದ ಸಂಸ್ಥೆಯ ಗಣೇಶ್ ಶೆಟ್ಟಿ, ಸಾಲಿಗ್ರಾಮ ಆಶಾವಾಣಿ ಟ್ರಸ್ಟ್‌ನ ಟ್ರಸ್ಟಿಗಳಾದ ಡಾ. ವಾಣಿಶ್ರೀ ಐತಾಳ್, ಆಶಾ ಹೆಗ್ಡೆ ಉಪಸ್ಥಿತರಿದ್ದರು. ಆರೋಗ್ಯದಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ನಡೆಸಲಾಯಿತು. ಸುಮಾರು 100 ಶಿಬಿರಾರ್ಥಿಗಳು ಶಿಬಿರದಲ್ಲಿ ಭಾಗಿಯಾಗುವುದರ ಮೂಲಕ ಉಚಿತ ಆರೋಗ್ಯ ಶಿಬಿರ ಪ್ರಯೋಜನ ಪಡೆದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ಕಚೇರಿಗಳ ಕಡತಗಳನ್ನು ಕಾಲಮಿತಿಯಲ್ಲಿ ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಎಲ್ಲಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ ಸಂವಿಧಾನ ದಿನದ ಅಂಗವಾಗಿ ಸಂವಿಧಾನ ಪೀಠಿಕೆ ಬೋಧಿಸಿ, ನಂತರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾಧಿಕಾರಿ ಕಚೇರಿ, ಎಲ್ಲಾ ತಾಲೂಕು ಕಚೇರಿಗಳು ಹಾಗೂ ಕುಂದಾಪುರ ಉಪ ವಿಭಾಗಾಧಿಕಾರಿ ಕಚೇರಿಗೆ ಸಂಬಧಿಸಿದ ಕಡತಗಳನ್ನು ಇ-ಕಚೇರಿ ಮೂಲಕವೇ ತ್ವರಿತವಾಗಿ ವಿಲೇವಾರಿ ಮಾಡುವಂತೆ ಹಾಗೂ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು 2 ತಿಂಗಳ ಒಳಗೆ ಸಂಪೂರ್ಣ ಇ-ಕಚೇರಿ ಮೂಲಕ ಕಡತಗಳನ್ನು ನಿರ್ವಹಣೆ ಮಾಡಬೇಕು. ಈ ಕುರಿತಂತೆ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ಮತ್ತಿತರ ಮೂಲ ಸೌಕರ್ಯಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚನೆ ನೀಡಿದರು. ಜಿಲ್ಲೆಯ ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಈ ನಿಟ್ಟಿನಲ್ಲಿ ಎಲ್ಲಾ ಕಡತಗಳನ್ನು ಸೂಕ್ತ ರೀತಿಯಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು,ನ.29: ರಾಜ್ಯದಲ್ಲಿ ಲಾಕ್ಡೌನ್ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಲಾಕ್ಡೌನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್ಡೌನ್ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ಸರ್ಕಾರ ಹೇಳುವ ತನಕ ಜನತೆ ಗೊಂದಲಕ್ಕೊಳಗಾಗಬಾರದು. ಲಾಕ್ಡೌನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. 12 ದೇಶಗಳಲ್ಲಿ ಓಮ್ರಿಕಾನ್ ವೈರಸ್ ಪತ್ತೆಯಾಗಿದ್ದು, 12 ದೇಶಗಳಿಂದ ಬಂದವರ ಮೇಲೆ ನಿಗಾ ವಹಿಸಲಾಗಿದೆ. ಆಫ್ರಿಕನ್ ದೇಶಗಳಲ್ಲಿ ರಾಜ್ಯಕ್ಕೆ ಬಂದವರ ಮೇಲೆ ನಿಗಾವಹಿಸಲಾಗಿದೆ. ಓಮ್ರಿಕಾನ್ ವೈರಸ್ ಬಹಳ ವೇಗವಾಗಿ ಹರಡುತ್ತಿದೆ. ಆದರೆ, ಇದು ಅಷ್ಟೊಂದು ಗಂಭೀರವಾಗಿಲ್ಲ ಎಂದಿದ್ದಾರೆ. ಲಾಕ್ಡೌನ್ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿತ್ತು. ಲಾಕ್ಡೌನ್ ಬಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಬಂದ ಬಳಿಕ ಜನರು ನಂಬಬೇಕು. ನಾಳೆ ಬೆಳಗ್ಗೆ 10 ಗಂಟೆಗೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ತಾಂತ್ರಿಕಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರೋಟರಿ ವಲಯ 1ರ ಸಾಂಸ್ಕೃತಿಕ ಕಾರ್ಯಕ್ರಮ ‘ಕುಂದ ಕಲಾ ವೈಭವ’ ಅಂಗವಾಗಿ ಕುಂದಾಪುರ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆದ ಸ್ಪರ್ಧೆಯಲ್ಲಿ ಬೈಂದೂರು ರೋಟರಿ ಒಟ್ಟು 7 ಪ್ರಶಸ್ತಿ (3 ಪ್ರಥಮ ಹಾಗೂ 4 ದ್ವಿತೀಯ) ಗಳಿಸುವ ಮೂಲಕ ಸಮಗ್ರ ವಲಯ ಚಾಂಪಿಯನ್‌ಶಿಫ್‌ಗೆ ಅರ್ಹ ತಂಡವಾಗಿ ಮೂಡಿಬಂದಿದೆ. ಈ ಪ್ರಶಸ್ತಿಯನ್ನು ರೋಟರಿ ಅಧ್ಯಕ್ಷ ಡಾ. ಪ್ರವೀಣ್ ಶೆಟ್ಟಿ ಇವರಿಗೆ ಜಿಲ್ಲಾ ರೆಡ್‌ಕ್ರಾಸ್‌ನ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಹಸ್ತಾಂತರಿಸಿದರು. ವಲಯ ಸಹಾಯಕ ಗವರ್ನರ್ ಜೆ. ಪಿ. ಶೆಟ್ಟಿ, ವಲಯ ಸೇನಾನಿ ಡಾ. ರಾಜಾರಾಮ ಶೆಟ್ಟಿ ಹಾಗೂ ಎಲ್ಲಾ ರೋಟರಿ ಪದಾಧಿಕಾರಿಗಳು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬಿಲ್ಲವ ಅಸೋಸಿಯೇಷನ್ ರಿ. ಬೆಂಗಳೂರು ಹಾಗೂ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘ, ಬೈಂದೂರು ಇವರ ಸಹಯೋಗದೊಂದಿಗೆ ಬಿಲ್ಲವ ವಧುವರರ ಮುಖಾಮುಖಿ ಕಾರ್ಯಕ್ರಮ ನಂದನವನ ದೇವಕಿ ಬಿ. ಆರ್. ಆಡಿಟೋರಿಯಂ (ಪರಿಚಯ) ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಇವರು ನಡೆಸಿಕೊಂಡು ಬರುತ್ತಿರುವ ಹಲವಾರು ಕಾರ್ಯಕ್ರಮಗಳಲ್ಲಿ ಈ ವಧುವರಾನ್ವೇಷಣೆ ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿದ್ದು, ತಾಲ್ಲೂಕಿನ ಸಮಾಜದ ಎಲ್ಲಾ ವಧು ವರ ಆಕಾಂಕ್ಷಿಗಳು ಇದರ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು. ಬೈಂದೂರು ತಾಲ್ಲೂಕು ಬಿಲ್ಲವ ಸಂಘಕ್ಕೆ ಸಮುದಾಯ ಭವನದ ಅಗತ್ಯವಿದ್ದು, ಇದರ ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು. ಬೆಂಗಳೂರು ಬಿಲ್ಲವ ಅಸೋಸಿಯೇಶನ್ ಅದ್ಯಕ್ಷ ಎಂ. ವೇದಕುಮಾರ ಮಾತನಾಡಿ , ಸಮಾಜದ ಒಗ್ಗಟ್ಟಿನ ಅಗತ್ಯತೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದ ಅವರು ರಾಜಕೀಯವಾಗಿ ನಾವು ನಮ್ಮ ಸಮಾಜದ ನಾಯಕರನ್ನು ಆಯ್ಕೆ ಮಾಡುವಲ್ಲಿ ಪಕ್ಷಭೇದ ಮರೆತು ಹೋರಾಡಬೇಕಾಗಿದೆ ಎಂದು ಕರೆ…

Read More