Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮರವಂತೆ ಜುಮ್ಮಾ ಮಸೀದಿ ಎದುರು ಶುಕ್ರವಾರ ನಾವುಂದ-ಮರವಂತೆ ಜಮಾತ್‌ನ ಸದಸ್ಯರು ಪ್ರತಿಭಟನೆ ನಡೆಸಿದರು. ಮಾತನಾಡಿದ ಜಮಾತ್ ಅಧ್ಯಕ್ಷ ಹಾಜಿ ತೌಫೀಕ್ ಅಬ್ದುಲ್ಲಾ ಈ ಕಾಯ್ದೆಯು ಸಂವಿಧಾನದ ಜಾತ್ಯತೀತ ಸ್ವರೂಪಕ್ಕೆ ಅಪಚಾರವೆಸಗುತ್ತದೆ. ಇದು ಒಂದು ನಿರ್ದಿಷ್ಟ ವರ್ಗವನ್ನು ಗುರಿಯಾಗಿರಿಸಿಕೊಂಡು ರಚಿಸಿದಂತೆ ಕಂಡುಬರುತ್ತದೆ. ಯಾವುದೇ ಕಾರಣಕ್ಕೂ ಇದನ್ನು ಜಾರಿಗೊಳಿಸಬಾರದು ಎಂದರು. ಉಪಾಧ್ಯಕ್ಷ ಮನ್ಸೂರ್ ಇಬ್ರಾಹಿಂ ಮರವಂತೆ, ಕಾರ್ಯದರ್ಶಿ ಸತ್ತಾರ್, ಖಜಾಂಚಿ ಕೆ. ಪಿ. ಹುಸೇನ್ ಹಾಜಿ, ಮುತವಲ್ಲಿ ಬಿ.ಎ. ಸಯ್ಯದ್, ಪ್ರಮುಖರಾದ ಅಬ್ದುಲ್ ಹಮೀದ್ ಬಿ. ಎಚ್, ಮಾಣಿಕೊಳಲು ಅಬ್ಬಾಸ್, ಇರ್ಷಾದ್ ಕೋಯಾನಗರ, ಎನ್. ಸಿ. ಮೊಯ್ದಿನ್, ಬಿ. ಎಚ್. ಮೊಯ್ದಿನ್, ಸುಲೇಮಾನ್, ಇಮಾಮ್ ಅಬ್ದುಲ್ ಲತೀಫ್ ಫಾಲಿಲಿ, ವಕೀಲ ಇಲ್ಯಾಸ್ ನೇತೃತ್ವ ವಹಿಸಿದ್ದರು. ಜಮಾತ್‌ನ ಸರ್ವ ಸದಸ್ಯರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇತಿಹಾಸ ಪ್ರಸಿದ್ಧ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಮನ್ಮಹಾ ರಥೋತ್ಸವ ಉಪ್ಪುಂದ ಕೊಡಿಹಬ್ಬ ಶುಕ್ರವಾರ ಸಂಭ್ರಮ, ಸಡಗರದಿಂದ ಜರುಗಿತು. ತಂತ್ರಿಗಳ ನೇತೃತ್ವದಲ್ಲಿ ದೇವಳದಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಭೂತ ಬಲಿ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನ ನಡೆಯಿತು. ಮಧ್ಯಾಹ್ನ ದೇವಳದ ಸಭಾಭವನದಲ್ಲಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಬಳಿಕ ದೇವಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಬಹಿರಂಗ ಹರಾಜು ಮಾಡಲಾಯಿತು. ವಿಶೇಷ ಆಸಕ್ತಿಯಿಂದ ಹೆಚ್ಚಿನ ಮಹಿಳೆಯರು ಏಲಂನಲ್ಲಿ ಭಾಗವಹಿಸಿ ಪ್ರಸಾದ ರೂಪದಲ್ಲಿ ಸೀರೆಗಳನ್ನು ಖರೀದಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ರಥ ಎಳೆದು ಸಂಭ್ರಮಿಸಲಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದ್ವಿತೀಯ ಜಾತ್ರೆ ಉಪ್ಪುಂದ ಕೊಡಿಹಬ್ಬವಾಗಿದ್ದು, ಇಲ್ಲಿನ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ರಥೋತ್ಸವದ ಪ್ರಯುಕ್ತ ತಮ್ಮ ಅಂಗಡಿ ಮುಂಗಟ್ಟು, ಮನೆ, ಬೀದಿಗಳನ್ನು ವಿಶೇಷವಾದ ವಿದ್ಯುದ್ದೀಪಗಳಿಂದ ಅಲಂಕರಿಸಿದ್ದರು. ರಾತ್ರಿ ದೇವರ ಅವಭ್ರತಸ್ನಾನ ನಡೆಯಲಿದೆ. ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯ ೨೦೧೯ರ ಏಪ್ರಿಲ್‌ನಲ್ಲಿ ನಡೆಸಿದ ಅಂತಿಮ ಪದವಿ ಪರೀಕ್ಷೆಯಲ್ಲಿ ಇಲ್ಲಿನ ಭಂಡಾರ್ಕಾರ‍್ಸ್ ಕಾಲೇಜಿಗೆ ಏಳು ರ‍್ಯಾಂಕ್‌ಗಳು ಬಂದಿವೆ. ಕಾಲೇಜಿನ ಬಿ.ಸಿ.ಎ ಪದವಿಯಲ್ಲಿ ನಾಲ್ಕು ರ‍್ಯಾಂಕ್‌ಗಳು, ಮತ್ತು ಬಿ.ಎಸ್.ಸಿ, ಬಿ.ಬಿ.ಎ ಮತ್ತು ಬಿ.ಎ ಪದವಿಗೆ ತಲಾ ಒಂದು ರ‍್ಯಾಂಕ್‌ಗಳು ಬಂದಿವೆ. ಕಾಲೇಜಿನ ಬಿ.ಎಸ್.ಸಿ. ಪದವಿಯಲ್ಲಿ 3ನೇ ರ‍್ಯಾಂಕ್ ಪಡೆದಿರುವ ಸಹನಾ ಕುಂದಾಪುರದ ಬೀಜಾಡಿ ಗ್ರಾಮದ ನಾರಾಯಣ ದೇವಾಡಿಗ ಅವರ ಪುತ್ರಿಯಾಗಿದ್ದಾರೆ. ಕಾಲೇಜಿನ ಬಿ.ಸಿ.ಎ ಪದವಿಯಲ್ಲಿ ಕುಂದಾಪುರದ ವಡೆರಹೋಬಳಿಯ ಸುರೇಶ ಬಿ. ಬಂಗೇರ ಮತ್ತು ಪಾರ್ವತಿ ದಂಪತಿಗಳ ಪುತ್ರ ಪ್ರತ್ವಿಕ್ ಎಸ್.ಬಂಗೇರ ನಾಲ್ಕನೇ ರ‍್ಯಾಂಕ್, ಮೇಲ್‌ಹೊಸೂರು ಗ್ರಾಮದ ಚಂದ್ರಶೇಖರ ಅವರ ಪುತ್ರಿ ಸ್ವಾತಿ ಎಂಟನೇ ರ‍್ಯಾಂಕ್, ಚಿತ್ತೂರು ಗ್ರಾಮದ ನಾರಾಯಣ ಶೆಟ್ಟಿ ಮತ್ತು ರುದ್ರಮ್ಮ ದಂಪತಿಯ ಪುತ್ರಿ ರಮ್ಯ ಒಂಬತ್ತನೇ ರ‍್ಯಾಂಕ್, ಮತ್ತು ಆಲೂರು ಗ್ರಾಮದ ಭಾಸ್ಕರ ಅವರ ಪುತ್ರ ಸುಜನ್ 10ನೇ ರ‍್ಯಾಂಕ್ ಬಂದಿವೆ. ಬಿ.ಬಿ.ಎ ಪದವಿಯಲ್ಲಿ ಕುಂದಾಪುರದ ಕೆದೂರು ಗ್ರಾಮದ ಶಂಕರ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದಿ. ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಲ್ಲೂರಿನಿಂದ ಶಿರೂರು ವರೆಗಿನ ಚತುಷ್ಪಥ ಹೆದ್ದಾರಿ ಕಾಮಗಾರಿ ತೀರ ಅವ್ಯವಸ್ಥಿತವಾಗಿ ನಡೆದಿದೆ. ಅದೇ ಕಾರಣದಿಂದ ಇಷ್ಟರಲ್ಲೇ ಹತ್ತಾರು ಸಂಚಾರಿಗಳು ಜೀವತೆತ್ತಿದ್ದಾರೆ. ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ 14ರಂದು ಮರವಂತೆಯಿಂದ ಬೈಂದೂರು ವರೆಗೆ ಪಾದಯಾತ್ರೆ ನಡೆಸಿ ಸಂಬಂಧಿಸಿದವರ ಗಮನ ಸೆಳೆಯಲಾಗುವುದು ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಗುರುವಾರ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಹೆದ್ದಾರಿ ಬದಿ ಸೂಕ್ತ ಚರಂಡಿ ಇಲ್ಲವಾದುದರಿಂದ ಮಳೆಗಾಲದಲ್ಲಿ ಹೆದ್ದಾರಿ ಮೇಲೆ ನೀರು ಹರಿಯುತ್ತದೆ. ಕೆಲವೆಡೆ ಕೃತಕ ನೆರೆ ಏರ್ಪಟ್ಟು ಕೃಷಿ ಭೂಮಿಗೆ, ಮನೆಗಳಿಗೆ ನುಗ್ಗಿ ಅನಾಹುತ ಸೃಷ್ಟಿಸುತ್ತಿದೆ. ಅದು ಸರಿಯಾಗಬೇಕು. ಪ್ರತೀ ಮೂರು ಕಿಲೋಮೀಟರಿಗೆ ಒಂದರಂತೆ ನಿರ್ಮಿಸಿರುವ ಯು ತಿರುವುಗಳು ರಾಷ್ಟ್ರೀಯ ಹೆದ್ದಾರಿ ವಿನ್ಯಾಸ ಹಾಗೂ ಗುಣಮಟ್ಟದವುಗಳಲ್ಲ. ಅಲ್ಲಿಯೇ ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಅವುಗಳನ್ನು ಅಪಾಯಹಿತ ಸ್ಥಿತಿಗೆ ತರಬೇಕು. ಬೈಂದೂರು-ಕೊಲ್ಲೂರು ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿತವಾಗಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮಂಕಿ: ನಾವುಗಳು ಕುಟುಂಬ, ಸಂಬಂಧಿಕರಷ್ಟಕ್ಕೇ ಸೀಮಿತವಾಗಿರಬಾರದು. ಮನುಷ್ಯ ಸಮಾಜ ಜೀವಿ. ಎಲ್ಲಾ ಕಡೆಯೂ ಆತ ತನ್ನದೇ ಆದ ಸಮುದಾಯವೊಂದನ್ನು ಕಟ್ಟಿಕೊಂಡಿರುತ್ತಾನೆ. ಭಾರತದಲ್ಲಿ ಮಾತ್ರ ಅದು ಜಾತಿ, ಸಮುದಾಯ ಎಂಬ ಹೆಸರಿನೊಂದಿಗೆ ಬೆಳೆದು ಬಂದಿದೆ. ಜಾತಿಯನ್ನು ವಿಘಟನೆಗೆ ಬಳಸದೇ ಸಕಾರಾತ್ಮಕವಾಗಿ ಬಳಸಿಕೊಳ್ಳುವುದು ಆಗತ್ಯ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಅವರು ಮಂಕಿ ಕೊಕ್ಕೇಶ್ವರ ಶಂಭುಲಿಂಗ ದೇವಸ್ಥಾನದಲ್ಲಿ ಜರುಗಿದ ರಾಮಕ್ಷತ್ರಿಯ ಬೃಹತ್ ಸಮಾವೇಶ ಹಾಗೂ ರಾಮತಾರಕ ಮಂತ್ರ ಯಜ್ಞದ ಪೂರ್ವಭಾವಿಯಾಗಿ ಹಮ್ಮಕೊಂಡ ಸಭೆಯಲ್ಲಿ ಆಶಿರ್ವಚನವಿತ್ತರು. ಸಮಾಜವಿದ್ದರೆ ಅಪಾತ್ಕಾಲದಲ್ಲಿ ಸಹಾಯ ದೊರೆಯುತ್ತದೆ. ಆರೋಗ್ಯ, ಮಕ್ಕಳ ಶಿಕ್ಷಣ ಮುಂತಾದ ಸಂದರ್ಭಗಳಲ್ಲಿ ಸಮಾಜ ಸಹಾಯಕ್ಕೆ ಬರುತ್ತದೆ. ಸಮಾಜವಿದ್ದರೆ ನಾನು ಮತ್ತು ನನ್ನ ಕುಟುಂಬ ಇರಲಿದೆ ಎಂದು ಪ್ರತಿಯೊಬ್ಬರೂ ಅರಿಯಬೇಕಿದೆ. ರಾಮಕ್ಷತ್ರಿಯ ಸಮಾಜ ಸಂಘಟಿತರಾಗಬೇಕಾಗಿದ್ದು, ರಾಮಕ್ಷತ್ರಿಯರ ಸಮಾವೇಶದ ಮೂಲಕ ಇದನ್ನು ಸಾಧಿಸಿ ಐತಿಹಾಸಿಕ ಕಾರ್ಯಕ್ರಮವನ್ನಾಗಿಸಬೇಕು. ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಸಮುದಾಯ ಸಂಘಟಿತವಾಗಿ ಮುನ್ನಡೆಯಬೇಕಾದರೆ ಎಲ್ಲರೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಗುರುವಾರ ಬೆಳಗ್ಗೆ ಶ್ರೀದೇವರ ರಥಾರೋಹಣ ಪೂರ್ವ ವಿಧಿಗಳು ಆರಂಭಗೊಂಡವು. ತಂತ್ರಿಗಳು ಧಾರ್ಮಿಕ ವಿಧಿ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀದೇವರಿಗೆ ಶತರುದ್ರಾಭಿಷೇಕ ಇನ್ನಿತರ ಧಾರ್ಮಿಕ ವಿಧಿ ನಡೆದ ಬಳಿಕ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭವ್ಯ ರಥೋತ್ಸವ ನಡೆಯಿತು. ಸಂಜೆ ಬಸವನಗುಡಿ ಸನ್ನಿಧಿಯಿಂದ ಶ್ರೀದೇವರಿಗೆ ಅಭಿಮುಖವಾಗಿ ರಥ ಏಳೆದ ಬಳಿಕ ರಥಾಅವರೋಹಣದ ವಿಧಿ ಸಮಾಪನಗೊಳ್ಳುತ್ತದೆ. ಅಪಾರ ಸಂಖ್ಯೆಯ ಜನಸ್ತೋಮ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಕೋಟಿಲಿಂಗೇಶ್ವರ ದೇವರ ದರ್ಶನ ಪಡೆದು ಪುನೀತರಾದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ದೇವಳದ ರಥೋತ್ಸವದ ಸಂದರ್ಭ ಗರುಡ ದರ್ಶನ ಆಗುವುದು ವಾಡಿಕೆ. ಸಂಜೆಯ ರಥೋತ್ಸವಕ್ಕೆ ಚಾಲನೆ ಸಿಗುತ್ತಿರುವಂತೆಯೇ ಗರುಡ ದರ್ಶನ ಆಗಿದ್ದು ರಥಕ್ಕೆ ಎರಡು ಸುತ್ತು ಬಂದು ನಿರ್ಗಮಿಸಿದೆ. ಗರುಡದರ್ಶನ ವೀಕ್ಷಿಸಲು ಸಹಸ್ರಾರು ಭಕ್ತರು ನೆರೆದಿದ್ದು ಗರುಡ ರಥಕ್ಕೆ ಸುತ್ತು ಹೊಡೆಯುತ್ತಿರುವಂತೆಯೇ ರೋಮಾಂಚನಗೊಂಡರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತ್ತಿಚಿಗೆ ಕಜಕಿಸ್ತಾನದಲ್ಲಿ ನಡೆದ ಏಷ್ಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೂರು ಚಿನ್ನ ಹಾಗೂ ಒಂದು ಬೆಳ್ಳಿಯ ಪದಕ ಗೆದ್ದ ಕುಂದಾಪುರದ ಸತೀಶ್ ಖಾರ್ವಿ ಹಾಗೂ ಪವರ್ ಲಿಫ್ಟಿಂಗ್ ಸಬ್ ಜ್ಯೂನಿಯರ್ ವಿಭಾಗದಲ್ಲಿ ಒಂದು ಚಿನ್ನ ಹಾಗೂ ಮೂರು ಬೆಳ್ಳಿಯ ಪದಕವನ್ನು ಗೆದ್ದ ಉಪ್ಪಿನಕುದ್ರುವಿನ ನಾಗಶ್ರೀ ಶೇರುಗಾರ್ ಅವರನ್ನು ಕುಂದಾಪುರದಲ್ಲಿ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು. Video ಮಂಗಳೂರಿನಿಂದ ಆಗಮಿಸಿದ ಈರ್ವರನ್ನು ಸಾಲಿಗ್ರಾಮದಲ್ಲಿ ಸ್ವಾಗತಿಸಿಕೊಳ್ಳಲಾಯಿತು. ಅಲ್ಲಿಂದ ಮೆರವಣಿಗೆಯಲ್ಲಿ ಸಾಗಿಬಂದ ಅವರನ್ನು ಕುಂದಾಪುರದ ಶಾಸ್ತ್ರೀವೃತ್ತದ ಬಳಿ ಸ್ವಾಗತಿಸಿಕೊಳ್ಳಲಾಯಿತು. ಬಳಿಕ ಸತೀಶ್ ಖಾರ್ವಿ ಅವರ ನ್ಯೂ ಹರ್ಕ್ಯೂಲಸ್ ಜಿಮ್ ಬಳಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ನಾಗರಿಕರು ಈರ್ವರನ್ನು ಅಭಿನಂದಿಸಿದರು. ಜಿಮ್‌ನಲ್ಲಿ ಸತೀಶ್ ಖಾರ್ವಿ ಹಾಗೂ ನಾಗಶ್ರೀ ಅವರಿಗೆ ಸನ್ಮಾನಿಸಿ ಬಳಿಕ ಮೆರವಣಿಗೆಯಲ್ಲಿ ಕುಂದಾಪುರ ಖಾರ್ವಿಕೇರಿಗೆ ತಲುಪಿದರು. ಮಾರ್ಗಮಧ್ಯೆ ವಿಜೇತರಿಗೆ ಹಾರ ಹಾಕಿ ಗೌರವಿಸಿದ್ದು, ಶಾಸ್ತ್ರೀ ವೃತ್ತದ ಬಳಿ ಖಾರ್ವಿಕೇರಿಯ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿಕೊಂಡದ್ದ ವಿಶೇಷವಾಗಿತ್ತು. ಕುಂದಾಪುರದ ಬಳಿಕ ಉಪ್ಪಿನಕುದ್ರುವಿನಲ್ಲಿಯೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ, ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಹಾಗೂ ನಕಲಿ ಟಿವಿ ಚಾನೆಲ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಕಾಯಿದೆಯ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ( ಟ್ರಾಯ್) ಅಡಿ ಚಾನೆಲ್‌ಗಳು ನೋಂದಣಿಯಾಗಿರಬೇಕಿದೆ. ಆದರೆ, ಇತ್ತೀಚೆಗೆ ಟಿವಿ ಚಾನೆಲ್‌ಗಳ ಹೆಸರಿನಲ್ಲಿ ಸರಕಾರಿ ಕಚೇರಿಗಳು ಸೇರಿದಂತೆ ಸಾರ್ವಜನಿಕರನ್ನು ಬ್ಲಾಕ್‌ಮೇಲ್ ಮಾಡುತ್ತಿರುವ ಕೆಲವು ನಕಲಿ ಚಾನೆಲ್‌ಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಅಸ್ತಿತ್ವದಲ್ಲಿರುವ ಸ್ಥಳೀಯ ಚಾನೆಲ್‌ಗಳ ದಾಖಲೆ ಪರಿಶೀಲನೆ ನಡೆಸಿ, ನಕಲಿ ಚಾನೆಲ್‌ಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಅವರು ವಾರ್ತಾ ಇಲಾಖೆಗೆ ಸೂಚಿಸಿದರು. ಕೇಬಲ್ ಆಪರೇಟರ್‌ಗಳ ನೋಂದಣಿ ಕಡ್ಡಾಯ: ಜಿಲ್ಲೆಯಲ್ಲಿರುವ ಎಲ್ಲಾ ಕೇಬಲ್ ಆಪರೇಟರ್‌ಗಳು ನಿಯಮನುಸಾರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಿರಂತರ ಕೃಷಿ ಕಾಯಕದ ನಡುವೆ ಕೃಷಿಕರ ಜೀವಾಳ ಸಾಕು ಪ್ರಾಣಿಗಳು. ಅವುಗಳನ್ನು ಸಲಹಿ ಕ್ರೀಡೆಯಲ್ಲಿ ಭಾಗವಹಿಸುವಂತೆ ತರಬೇತಿ ನೀಡಿ ಊರಿನ ಜನರೆಲ್ಲಾ ಸಂಭ್ರಮಿಸುವ ಕಂಬಳೋತ್ಸವವು ನಿರಂತರವಾಗಿ ನಡೆಯುತ್ತಿರಲಿ ಎಂದು ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಹೇಳಿದರು. ಅವರು ತಗ್ಗರ್ಸೆ ಹೆಗ್ಡೆಯವರ ಮನೆ ಕಂಬಳಗದ್ದೆಯಲ್ಲಿ ಭಾನುವಾರ ನಡೆದ ಸಾಂಪ್ರದಾಯಿಕ ಕಂಬಳೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಐಎಫ್‌ಎಸ್ ಅಧಿಕಾರಿ ಜಗನ್ನಾಥ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ, ಕಂಬಳ ಸಮಿತಿ ಬೈಂದೂರು ತಾಲೂಕು ಅಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು ಉಪಸ್ಥಿತರಿದ್ದರು. ತಗ್ಗರ್ಸೆ ಹೆಗ್ಡೆ ಕುಟುಂಬದ ಟಿ. ನಾರಾಯಣ ಹೆಗ್ಡೆ ತಗ್ಗರ್ಸೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜನ್ಮನೆ ರತ್ನಾಕರ ಶೆಟ್ಟಿ ಅರೆಶಿರೂರು ಧನ್ಯವಾದ ಸಲ್ಲಿಸಿದರು. ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ವರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ವರ್ಧೆಗಳ ವಿಜೇತರು: ಕಂಬಳೋತ್ಸವ ಹಲಗೆ ವಿಭಾಗದಲ್ಲಿ ಆತ್ಮಜ &…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಬೈಂದೂರು ತಾಲ್ಲೂಕು ಭಾರತ ಸೇವಾ ದಳದ ಆಶ್ರಯದಲ್ಲಿ ಇಲ್ಲಿನ ಗಾಧಿ ಮೈದಾನದಲ್ಲಿ ಸೋಮವಾರ ಭಾರತ ಸೇವಾದಳದ ರಾಷ್ಟ್ರೀಯ ಭಾವೈಕ್ಯತಾ ಮೇಳ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ಭಾವೈಕ್ಯತೆ ಮೂಡಿಸುವ ಉದ್ದೇಶ ಹೊಂದಿರುವ ರಾಷ್ಟ್ರೀಯ ಭಾವೈಕ್ಯತಾ ಮೇಳದಲ್ಲಿ ಭಾಗವಹಿಸುವ ಮಕ್ಕಳಲ್ಲಿ ದೇಶಭಕ್ತಿ, ದೇಶದ ಎಲ್ಲರೂ ಒಂದೇ ಎಂಬ ಭಾವನೆ ಮೂಡುವಂತಾದರೆ ಕಾರ್ಯಕ್ರಮ ಸಾರ್ಥಕವೆನಿಸುತ್ತದೆ. ಮೇಳದ ಜತೆಗೆ ಶಾಲೆಗಳಲ್ಲಿ ಮಕ್ಕಳಿಗೆ ಸೇವಾದಳದ ಧ್ಯೇಯವನ್ನು ರೂಢಿಸಿಕೊಳ್ಳಲಾಗುವ ತರಬೇತಿ ನೀಡಬೇಕು ಎಂದು ಹೇಳಿದರು. ಮಕ್ಕಳ ಭವಷ್ಯ ರೂಪಿಸುವ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಶಾಲೆಗಳಿಗೆ ಸರ್ಕಾರದಿಂದ ಅನುದಾನ ಇಲ್ಲದಿರುವುದು ಸರಿಯಲ್ಲ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುವ ಭರವಸೆ ನೀಡಿದ ಅವರು ಶೀಘ್ರದಲ್ಲಿ ಬೈಂದೂರಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದರು. ತಾಲ್ಲೂಕು ಸೇವಾದಳದ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಉಬ್ಜೇರಿ ಸ್ವಾಗತಿಸಿದರು. ಜಿಲ್ಲಾ…

Read More