ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವವರು ಕೀಳರಿಮೆ ಹೊಂದಬೇಕಾಗಿಲ್ಲ. ಅಲ್ಲಿ ಓದಿದ ಅದೆಷ್ಟೋ ಮಂದಿ ದೊಡ್ಡ ಸಾಧನೆ ಮಾಡಿದ್ದಾರೆ ಎನ್ನುವುದಕ್ಕೆ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಐ.ಪಿ.ಎಸ್ ಅಧಿಕಾರಿಯಾಗಿರುವ ನಾನು ಉದಾಹರಣೆ ಎಂದು ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ್ ಹೇಳಿದರು. ಈಚೆಗೆ ನಡೆದ ಉಪ್ಪುಂದ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಎರಡನೆಯ ದಿನದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು. ವಿದ್ಯಾರ್ಥಿಗಳು ಸಾಧನೆಯ ಆಕಾಂಕ್ಷೆ ಇರಿಸಿಕೊಂಡು ಅಧ್ಯಯನ ನಡೆಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕು. ಅಂತವರಿಗೆ ಅವಕಾಶದ ಹಲವು ಬಾಗಿಲುಗಳು ತೆರೆದುಕೊಳ್ಳುತ್ತವೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದೂ ಅವುಗಳಲ್ಲಿ ಒಂದು ಎಂದು ಅವರು ಹೇಳಿದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಯ ಗಣಪತಿ ಎಸ್. ಭಟ್ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಂ. ರಾಜಶೇಖರ ಹೆಬ್ಬಾರ್ ಸಂಸ್ಥೆಯ ಈ ವರೆಗಿನ ಪ್ರಗತಿಯನ್ನು ವಿವರಿಸಿ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಟಾರ್ ರಸ್ತೆಯ ಬಾಳಿಕೆ ಹೆಚ್ಚಿಸಲು ಟಾರ್‌ಗೆ ಪ್ಲಾಸ್ಟಿಕ್ ಹುಡಿ ಸೇರಿಸುವ ಕೆರಳ ಮಾದರಿಯ ಪ್ರಯೋಗ ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಈಚೆಗೆ ಅಲ್ಲಿನ 160 ಮೀಟರ್ ಉದ್ದದ ರಸ್ತೆಗೆ ಟಾರ್ ಹಾಕುವಾಗ ಈ ಪ್ರಯೋಗ ನಡೆಸಲಾಗಿದೆ. ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಟಾರ್ ರಸ್ತೆಯ ಮೇಲ್ಮೈ ಸವಕಳಿಯಾಗಿ, ಎರಡು, ಮೂರು ವರ್ಷಗಳಲ್ಲಿ ಕಿತ್ತುಹೋಗಿ ಗುಂಡಿಗಳು ಬೀಳುತ್ತವೆ. ಕೇರಳದಲ್ಲಿ ಟಾರ್‌ಗೆ ಪ್ಲಾಸ್ಟಿಕ್ ಸೇರಿಸಿ ರಸ್ತೆ ನಿರ್ಮಿಸುವ ಪ್ರಯೋಗ ನಡೆದಿದ್ದು, ಅದು ಯಶಸ್ವಿಯಾಗಿದೆ ಎನ್ನಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಅಲ್ಲಿ ಈ ಪ್ರಯೋಗ ನಡೆಸಿ ಯಶಸ್ಸು ಕಂಡ ಸ್ವಾಮಿನಾಥನ್ ಎಂಬವರನ್ನು ಈಚೆಗೆ ಉಡುಪಿಗೆ ಕರೆಸಿ ಜಿಲ್ಲೆಯ ಎಂಜಿನಿಯರ್‌ಗಳಿಗೆ ತರಬೇತಿ ನೀಡಲಾಗಿತ್ತು. ಉಡುಪಿಯ ಅಲೆವೂರು ಗ್ರಾಮ ಪಂಚಾಯಿತಿ ಈ ಕ್ರಮವನ್ನು ಅನುಸರಿಸಿ ಮೊದಲಾಗಿ ರಸ್ತೆ ನಿರ್ಮಿಸಿತ್ತು. ಅದರಿಂದ ಪ್ರೇರಿತವಾದ ಮರವಂತೆ ಗ್ರಾಮ ಪಂಚಾಯಿತಿ ಹೆಚ್ಚು ಮಳೆನೀರಿನ ಬಾಧೆಗೆ ಒಳಗಾಗುವ ಊರಿನ ಒಂದು ರಸ್ತೆಯಲ್ಲಿ ಅದನ್ನು ಮಾಡಿದೆ. ಅಲೆವೂರಿನಲ್ಲಿ ಬಳಸಿ ಉಳಿದಿದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸುನಿಲ್ ಪುರಾಣಿಕ ಅವರು ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶಿಸಿರುವ ಬ್ಯಾರಿ ಭಾಷೆಯ ‘ಟ್ರಿಪಲ್ ತಲಾಖ್ ‘ ಸಿನಿಮಾದ ಫಸ್ಟ್‌ಲುಕ್/ಪೋಸ್ಟರನ್ನು ಬೆಂಗಳೂರಿನ ಅಕಾಡೆಮಿಯ ಕಛೇರಿಯಲ್ಲಿ ಬಿಡುಗಡೆ ಮಾಡಿದರು. ಯಾಕೂಬ್ ಖಾದರ್ ಗುಲ್ವಾಡಿ ಅವರು ಈ ಮೊದಲು ರಾಷ್ಟ್ರಪ್ರಶಸ್ತಿ ಪುರಸ್ಕೃತ ರಿಸರ್ವೇಶನ್ ಸಿನೆಮಾವನ್ನು ನಿರ್ಮಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿದ್ಯಾರ್ಥಿಗಳು ಕೇವಲ ಅಕ್ಷರಸ್ಥರಾದರೆ ಸಾಲದು. ಸಮಾಜವನ್ನು ಮಾನವೀಯ ಅಂತಕರಣದಿಂದ ನೋಡುವ ವಿದ್ಯಾವಂತರಾಗಬೇಕಿದೆ. ವಿದ್ಯಾರ್ಥಿಗಳ ನಡವಳಿಕೆ, ಹಾವಭಾವ, ವೇಷಭೂಷಣಗಳು ಅವರಲ್ಲಿನ ಶಿಸ್ತು, ಹಾಗೂ ಪ್ರಜ್ಞೆಯನ್ನು ಪ್ರತಿಫಲಿಸುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಅಪ್ಪಾಜಿ ಗೌಡ ಹೇಳಿದರು. ಅವರು ಶನಿವಾರ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾದ ಅಂತರ್ ಕಾಲೇಜು ಪ್ರತಿಭಾ ಪ್ರದರ್ಶನ ಸ್ವರ್ಧೆ ಚಿಲುಮೆ – ೨೦೨೦ ಉದ್ಘಾಟಿಸಿ ಮಾತನಾಡಿ ಬದುಕಿನಲ್ಲಿ ಸಮಯದ ಮಹತ್ವ ದೊಡ್ಡದು. ವಿದ್ಯಾರ್ಥಿ ಜೀವನವೂ ಮಹತ್ವದ್ದು. ಇವೆರಡನ್ನೂ ವ್ಯಥ್ಯವಾಗಿ ಕಳೆಯದೇ ಸರಿಯಾಗಿ ಬಳಸಿಕೊಂಡರೆ ಭವಿಷ್ಯದಲ್ಲಿ ಸಾಧಕರಾಗಲು ಸಾಧ್ಯವಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯೆ ಮಾಲಿನಿ ಕೆ., ಬೈಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾಗೀರಥಿ ಎಸ್., ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮುತ್ತಯ್ಯ ಪೂಜಾರಿ, ಉದ್ಯಮಿಗಳಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನೆಹರು ಯುವ ಕೇಂದ್ರ ಉಡುಪಿ ಹಾಗೂ ಸಮ್ಮಿಲನ ರಿ. ಯಳಜಿತ ಸಂಸ್ಥೆಯ ಸಹಯೋಗದೊಂದಿಗೆ ರಾಷ್ಟ್ರೀಯ ಯುವ ದಿನದ ಅಂಗವಾಗಿ ಶನಿವಾರ ಬೈಂದೂರಿನ ಪ್ರಮುಖ ಬೀದಿಗಳಲ್ಲಿ ಸೈಕಲ್ ರ‍್ಯಾಲಿ ಹಮ್ಮಿಕೊಳ್ಳಲಾಯಿತು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಭಟ್ ಸೈಕಲ್ ರ‍್ಯಾಲಿಗೆ ಚಾಲನೆ ನೀಡಿದರು. ಈ ಸಂದರ್ಭ ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯರಾದ ಜನಾರ್ದನ್, ಸಮ್ಮಿಲನ ರಿ. ಯಳಜಿತದ ಅಧ್ಯಕ್ಷರಾದ ರಂಗು ಮರಾಠಿ, ಕಾರ್ಯದರ್ಶಿ ವೆಂಕಟರಮಣ ಮರಾಠಿ, ಹಿರಿಯ ಶಿಕ್ಷಕರುಗಳಾದ ಮುಕ್ತ, ನಾರಾಯಣ ದೇವಾಡಿಗ, ವೀಣಾ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಬೈಂದೂರು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು. ನೆಹರು ಯುವ ಕೇಂದ್ರ ಸುನಿಲ್ ಹೆಚ್. ಜಿ ಸೈಕಲ್ ರ‍್ಯಾಲಿಯ ಉದ್ದೇಶವನ್ನು ವಿವರಿಸಿದರು. ಬೈಂದೂರು ಸರಕಾರಿ ಜ್ಯೂನಿಯರ್ ಕಾಲೇಜು ಹಾಗೂ ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಸೈಕಲ್ ರ‍್ಯಾಲಿಯಲ್ಲಿ ಭಾಗವಹಿಸಿ ಸಾರ್ವಜನಿಕರಲ್ಲಿ ಜಾಗೃತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಿ.ಸಿ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಚೊಚ್ಚಲ ಚಿತ್ರ ’ದಿ ಸ್ಟ್ರೆಂಜ್ ಕೇಸ್ ಆಫ್ ಕುಂದಾಪುರ’ ಇದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಜರುಗಿತು. ಚಿತ್ರದ ಮೊದಲ ಪೋಸ್ಟರನ್ನು ಸದಾಚಂದ್ರ ಬಸ್ರೂರು ಸಂಸ್ಥೆಯ ಸುರೇಶ್ ನಾಯಕ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭ ಉದ್ಯಮಿ ಪ್ರವೀಣ ಕುಮಾರ್, ದಿ ಸ್ಟ್ರೆಂಜ್ ಕೇಸ್ ಆಫ್ ಕುಂದಾಪುರ ಚಿತ್ರದ ನಿರ್ದೇಶಕ, ನಿರ್ಮಾಪಕ ಓಂಗುರು ಬಸ್ರೂರು, ಇನ್ನೋರ್ವ ನಿರ್ಮಾಪಕ ಚಂದ್ರಶೇಖರ ಬಸ್ರೂರು, ಸಂಗೀತ ನಿರ್ದೇಶಕ ಉತ್ತಮ್ ಸಾರಂಗ ಸೇರಿದಂತೆ ಚಿತ್ರತಂಡದ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೌಮ್ಯ ಓಂಗುರು ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಗ್ಗರ್ಸೆ ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಇಲ್ಲಿನ ಕಂಬಳಗದ್ದೆಯ ಹತ್ತಿರ ನಡೆದ ದ್ವಿತೀಯ ವರ್ಷದ ಹಗಲು-ರಾತ್ರಿಯ ’ಶ್ರೀ ಬ್ರಹ್ಮಲಿಂಗೇಶ್ವರ ಟ್ರೋಫಿ 2020’ ಕ್ರಿಕೆಟ್ ಪಂದ್ಯಾಟದಲ್ಲಿ 8 ಸ್ಟಾರ್ ಉಪ್ಪುಂದ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಓಂ ಕಲಾ ಮೊಗೇರಿ ತಂಡ ದ್ವಿತೀಯ ಸ್ಥಾನವನ್ನು ಪಡೆದು ಬಹುಮಾನ ಸ್ವೀಕರಿಸಿದರು. ಕ್ರಿಕೆಟ್ ಪಂದ್ಯಾಟದಲ್ಲಿ 60ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ, ಉತ್ತಮ ಎಸೆತಗಾರ, ಗೂಟರಕ್ಷಕ, ದಾಳಿಗಾರ, ಕ್ಷೇತ್ರರಕ್ಷಕ ಮತ್ತು ಬೆಸ್ಟ್ ರನೌಟ್ ಪ್ರಶಸ್ತಿಗಳನ್ನು ಆಟಗಾರರಿಗೆ ನೀಡಲಾಯಿತು. ಈ ಸಂದರ್ಭ ಆಯೋಜಕರಾದ ಪ್ರಮೋದ್ ಆಚಾರ್ಯ, ಹರ್ಷೆಂದ್ರ ಆಚಾರ್ಯ, ರವಿ ಗಾಣಿಗ, ಶ್ರೀನಿವಾಸ ಆಚಾರ್ಯ, ಸಂತೋಷ ಆಚಾರ್ಯ, ಪ್ರವೀಣ ಆಚಾರ್ಯ, ಅಣ್ಣಪ್ಪ ಮೊದಲಾದವರು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮರವಂತೆ: ನಾವುಂದ, ಮರವಂತೆ, ಬಡಾಕೆರೆ, ಹೇರೂರು ಗ್ರಾಮಗಳ ವ್ಯಾಪ್ತಿಯ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಯ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಸಕ್ತ ಅಧ್ಯಕ್ಷ ಎಸ್. ರಾಜು ಪೂಜಾರಿ ನೇತೃತ್ವದ ತಂಡ ಅವಿರೋಧವಾಗಿ ಚುನಾಯಿತವಾಗಿದೆ. ಹಾಲಿ ಉಪಾಧ್ಯಕ್ಷ ಎಂ. ಚಂದ್ರಶೀಲ ಶೆಟ್ಟಿ, ಜಗದೀಶ ಪಿ. ಪೂಜಾರಿ, ನರಸಿಂಹ ದೇವಾಡಿಗ, ಎಂ. ಅಣ್ಣಪ್ಪ ಬಿಲ್ಲವ, ವಾಸು ಪೂಜಾರಿ, ರಾಮಕೃಷ್ಣ ಖಾರ್ವಿ, ನಾರಾಯಣ ಶೆಟ್ಟಿ, ಎಂ. ನಾಗಮ್ಮ, ಸರೋಜಾ, ಪ್ರಕಾಶ ದೇವಾಡಿಗ, ರಾಮ ಗಾಂಧಿನಗರ, ಭೋಜ ನಾಯ್ಕ್ ಆಯ್ಕೆಯಾದ ಇತರರು. ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಅರುಣಕುಮಾರ ಎಸ್. ವಿ. ಇದನ್ನು ಪ್ರಕಟಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರತಿಯೊಬ್ಬರಲ್ಲಿಯೂ ಅಗಾಧವಾದ ಚೈತನ್ಯವಿದೆ. ಅದನ್ನು ರಚನಾತ್ಮಕವಾಗಿ ಬಳಸಿಕೊಂಡರೆ ಗುರಿ ತಲುಪಲು ಸಾಧ್ಯ ಎಂಬುದನ್ನು ಜಗತ್ತಿಗೆ ಸಾರಿದ್ದ ಸ್ವಾಮಿ ವಿವೇಕಾನಂದರು ಸರ್ವರಿಗೂ, ಸರ್ವಕಾಲಕ್ಕೂ ಸ್ಫೂರ್ತಿಯ ಚೇತನ ಎಂದು ಎಳಜಿತ ರಾಮಕೃಷ್ಣ ಕುಠೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಹೇಳಿದರು. ಅವರು ವಸ್ರೆ- ಮೈಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಯಾವುದೇ ಕಾರ್ಯವನ್ನು ಶ್ರದ್ಧೆ, ಗುರಿ ಇಟ್ಟುಕೊಂಡು ಮಾಡಿದರೆ ಫಲ ಖಂಡವಾಗಿಯು ದೊರೆಯುತ್ತದೆ. ನಮ್ಮ ಶಕ್ತಿಯನ್ನು ಉತ್ತಮ ಉದ್ದೇಶಕ್ಕಾಗಿ ತೊಡಗಿಸಿದರೆ ಅದು ರಾಷ್ಟ್ರ ನಿರ್ಮಾಣ ಮಾಡಿದಂತೆಯೇ ಎಂದರು. ಶಾಲಾ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಬಗೆಗೆ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ವಸ್ರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಧ್ಯಾಯಿನಿ ಮಹಾದೇವಿ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರುಗಳಾದ ಭಾಗೀರಥಿ ಎಚ್., ನಿತ್ಯಾನಂದ, ಶಶಿಕಲಾ, ಪ್ರಮೋದಾ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಭಾರತ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನದ ಅಧ್ಯಯನ ನಡೆಸಲು ಪ್ರವಾಸ ಕೈಗೊಂಡಿರುವ ನೇಪಾಳ ಸರ್ಕಾರದ ಫೆಡರಲ್ ವ್ಯವಹಾರಗಳ ಸಚಿವಾಲಯದ ತಂಡವು ವಂಡ್ಸೆ ಮತ್ತು ಮರವಂತೆ ಗ್ರಾಮ ಪಂಚಾಯಿತಿಗೆ ಸೋಮವಾರ ಭೇಟಿ ನೀಡಿತು. ಇಲ್ಲಿನ ಘನ, ದ್ರವ ಸಂಪನ್ಮೂಲ ನಿರ್ವಹಣಾ ಘಟಕಗಳನ್ನು ಪರಿಶೀಲಿಸಿ, ಆ ಮಾದರಿಯನ್ನು ತಮ್ಮ ದೇಶದಲ್ಲಿ ಅಳವಡಿಸಿಕೊಳ್ಳುವ ಸಾಧ್ಯಾಸಾಧ್ಯತೆಯನ್ನು ಅರಿಯುವುದು ಈ ಭೇಟಿಯ ಉದ್ದೇಶವಾಗಿತ್ತು. ವಂಡ್ಸೆಯಲ್ಲಿ ತಂಡವನ್ನು ಸ್ವಾಗತಿಸಿದ ಪಂಚಾಯಿತಿ ಅಧ್ಯಕ್ಷ ಉದಯಕುಮಾರ ಶೆಟ್ಟಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ, ಅಂಗಡಿಗಳ ಕಸ ಸಂಗ್ರಹಣೆ, ಗ್ರಾಮ ಸ್ವಚ್ಛತೆ, ತ್ಯಾಜ್ಯದ ವೈಜ್ಞಾನಿಕ ವಿಂಗಡಣೆ, ಮೌಲ್ಯವರ್ಧಿಸಿ ಮಾರಾಟ, ಹಸಿಕಸ ಗೊಬ್ಬರವಾಗಿ ಮಾರ್ಪಾಡು, ಗೋಶಾಲೆಯಲ್ಲಿ ಬಳಕೆ, ದಾಖಲಾತಿ ನಿರ್ವಹಣೆ, ಘಟಕ ನಿರ್ವಹಣೆ, ಲಾಭಾಂಶ ಇತ್ಯಾದಿ ಮಾಹಿತಿ ನೀಡಿದರು. ಗ್ರಾಮದ ಜತೆಗೆ ಚಿತ್ತೂರು, ಇಡೂರು-ಕುಂಜ್ಞಾಡಿ ಪಂಚಾಯಿತಿಗಳ ತ್ಯಾಜ್ಯವನ್ನೂ ಇಲ್ಲಿ ನಿರ್ವಹಿಸಲಾಗುತ್ತದೆ ಎಂದು ಅವರಿಗೆ ತಿಳಿಸಿದರು. ಜಿಲ್ಲೆಯಲ್ಲಿ ಈ ಮಾದರಿಯ ಘಟಕಗಳ ಆರಂಭಕ್ಕೆ ಕಾರಣರಾದ ಗ್ರೀನ್ ಇಂಡಿಯಾ ಸರ್ವೀಸ್‌ನ ಯೋಜನಾ…
