Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಜಾಕಿಸ್ತಾನದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಏಷ್ಯಾನ್ ಕ್ಲಾಸಿಕ್ ಪವರ್ ಲಿಪ್ಟ್ಂಗ್ ಸ್ಪರ್ಧೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಕುಂದಾಪುರದ ಸತೀಶ್ ಖಾವಿ೯ ಅವರು ಮೂರು ಚಿನ್ನ ಹಾಗೂ ಒಂದು ಬೆಳ್ಳಿಯ ಪದಕವನ್ನು ಗೆದ್ದುಕೊಂಡಿದ್ದಾರೆ. ಸತೀಶ್ ಖಾರ್ವಿ ಕುಂದಾಪುರದಲ್ಲಿ ನ್ಯೂ ಹರ್ಕ್ಯುಲಸ್ ಜಿಮ್ ನಡೆಸುತ್ತಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಭವಿಷ್ಯದ ಸಾಧನೆಗಳಿಗೆ ಶಿಕ್ಷಣವೇ ಅಡಿಪಾಯ. ಶಿಕ್ಷಣ ಸಂಸ್ಥೆಗಳಿಗೆ ಆಡಳಿತ ಮತ್ತು ಸರ್ಕಾರ ಒದಗಿಸುವ ಸೌಲಭ್ಯಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕಾದ ಹೊಣೆ ಶಾಲೆಗಳ ಮೇಲಿದೆ ಎಂದು ಕುಂದಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಎಸ್. ಕುಂದರ್ ಹೇಳಿದರು. ಈಚೆಗೆ ನಡೆದ ಅರೆಶಿರೂರಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪ್ರೌಢಶಾಲೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ, ಶಾಲೆಯ ನೂತನ ಅಡುಗೆಕೋಣೆಯನ್ನು ಉದ್ಘಾಟಿಸಿದ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ ಶಾಲೆಗೆ ದೇವಳ ಆಡಳಿತದಿಂದ ಎಲ್ಲ ಅಗತ್ಯ ಬೆಂಬಲ ನೀಡಲಾಗುವುದು ಎಂದರು. ಬೈಂದೂರು ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ರಘು ನಾಯ್ಕ್ ಶಿಕ್ಷಣದ ಮಹತ್ವದ ಕುರಿತು ಮಾತನಾಡಿದರು. ಶಾಲೆಯ ಮೊದಲ ಎಸ್ಸೆಸ್ಸೆಲ್ಸಿ ತರಗತಿಯ ವಿದ್ಯಾರ್ಥಿ ಜಾನ್ಸನ್ ಫೆರ್ನಾಂಡೀಸ್ ಸ್ವಸ್ತಿವಾಚನ ಮಾಡಿದರು. ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಡಾ. ಅತುಲ್‌ಕುಮಾರ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇತ್ತಿಚಿಗೆ ಹಾಸನದಲ್ಲಿ ನಡೆದ ಅಖಿಲ ಭಾರತ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಉಡುಪಿ ಜಿಲ್ಲೆಯಿಂದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಬೈಂದೂರು ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಅವರನ್ನು ಸನ್ಮಾನಿಸಲಾಯಿತು. ಶ್ರೇಯಸ್‌ನ ಕರಾಟೆ ಹಾಗೂ ನೃತ್ಯ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. ಈತ ಬೈಂದೂರು ತಾಲೂಕಿನ ಯಡ್ತರೆ ಸಸಿಹಿತ್ಲು ಮನೆಯ ಶೋಭಾ ಹಾಗೂ ಸುಧಾಕರ ದಂಪತಿಗಳ ಪುತ್ರ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ಫ್ಲೈ ಓವರ್‌ನ ವಿಳಂಭ ಕಾಮಗಾರಿಯನ್ನು ವಿರೋಧಿಸಿ ಮಂಗಳವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ನೇತ್ರತ್ವದಲ್ಲಿ ಧರಣಿ ಹಾಗೂ ಪ್ರತಿಭಟನಾ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ವಿಸ್ತರಣೆಯ ಮೂಲ ಯೋಜನೆಯಲ್ಲಿ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ರಸ್ತೆಗೆ ಎಂಬ್ಯಾಕ್‌ಮೆಂಟ್ ನಿರ್ಮಾಣ ಮಾಡಿ ಸಣ್ಣ ಪ್ರಮಾಣದ ಅಂಡರ್ ಪಾಸ್ ನಿರ್ಮಾಣ ಮಾಡುವ ಉದ್ದೇಶ ಇತ್ತು. ಸ್ಥಳೀಯರ ಒತ್ತಾಯದಂತೆ ಕೇಂದ್ರ ಸರ್ಕಾರದ ಗಮನ ಸೆಳೆದು ಫ್ಲೈ ಓವರ್ ನಿರ್ಮಾಣದ ಪ್ರಾಸ್ತಾವನೆಗೆ ಒಪ್ಪಿಗೆ ಪಡೆಯಲಾಗಿತ್ತು ಎಂದು ತಿಳಿಸಿದ್ದಾರೆ. 2016ರಲ್ಲಿ ಬದಲಾದ ಪ್ರಾಸ್ತಾವಿತ ಯೋಜನೆಗೆ 22.24 ಕೋಟಿ ರೂ. ವೆಚ್ಚದಲ್ಲಿ ಮಂಜೂರಾತಿ ದೊರಕಿತ್ತು. ಇದೀಗ ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗೆ ಹಲವು ಕಾರಣಗಳಿವೆ. ಇದರ ನಿವಾರಣೆಗೆ ದೆಹಲಿ ಹಾಗೂ ಸ್ಥಳೀಯ ಮಟ್ಟದಲ್ಲಿ ಹೋರಾಟ ನಡೆಸಬೇಕಾದ ಅನೀವಾರ್ಯತೆ ಇದೆ. ಹಿಂದೆ ಸಂಸದನಾಗಿದ್ದಾಗ ನಡೆಸಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಆಲೂರು ಗ್ರಾಮದ ಕಳಿ ಎಂಬಲ್ಲಿನ ನದಿಯಲ್ಲಿ ಆಮೆ ಹಾಗೂ ಕೂಮಾಗಳನ್ನು ಹಿಡಿದು ಕೊಲ್ಲಲು ಪ್ರಯತ್ನ ನಡೆಸುತ್ತಿರುವಾಗ ದಾಳಿ ನಡೆಸಿದ್ದ ಕೊಲ್ಲೂರು ವನ್ಯಜೀವಿ ಇಲಾಖೆಯ ಸಿಬ್ಬಂದಿಗಳು ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. 50 ಕೂಮಾ ಮತ್ತು ಆಮೆಗಳನ್ನು ವಶಪಡಿಸಿಕೊಂಡಿದ್ದು ಆ ಪೈಕಿ 25 ಕೂಮಾ ಹಾಗೂ 9 ಆಮೆಗಳನ್ನು ಸಂರಕ್ಷಿಸಲಾಗಿದೆ. ಆರೋಪಿಗಳನ್ನು ಕೊಲ್ಲೂರು ನಿವಾಸಿಗಳಾದ ಶೀನ ಕೊರಗ, ಚಂದ್ರ ಹಾಗೂ ಗಣೇಶ್ ಎಂದು ಗುರುತಿಸಲಾಗಿದ್ದು, ಅರಣ್ಯ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಮೂವರ ವಿರುದ್ಧ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿಕೊಂಡ ದ್ವಿಚಕ್ರ ವಾಹನ, ಕತ್ತಿ, ಕೊಲ್ಲಲಾದ 15 ಆಮೆಗಳ ಚಿಪ್ಪು ಹಾಗೂ ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೋಮವಾರ ರಾತ್ರಿ ಗಸ್ತು ನಡೆಸುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಂಗಳವಾರ ಮುಂಜಾನೆ ಆರೋಪಿಗಳು ನಡೆಸುತ್ತಿದ್ದ ಕೃತ್ಯದ ಮಾಹಿತಿ ದೊರೆತು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಗಣಪತಿ ನಾಯ್ಕ್ ಅವರ ನಿರ್ದೇಶನದಂತೆ, ಉಪ ವಲಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾಗೂರಿನ ಕುಸುಮಾ ಫೌಂಡೇಶನ್‌ನ ಬ್ಲಾಸಂ ಸಂಗೀತ ನೃತ್ಯಶಾಲೆಯ ಆಶ್ರಯದಲ್ಲಿ ತಿಂಗಳ ಸಂಗೀತ ಕಾರ್ಯಕ್ರಮ ’ಗಾನಯಾನ-3’ ಅಲ್ಲಿನ ಕೆಎಎಸ್ ಆಡಿಟೋರಿಯಂನಲ್ಲಿ ನಡೆಯಿತು. ಪ್ರಾಸ್ತಾವಿಕ ನುಡಿಗಳನ್ನಾಡಿದ ಫೌಂಡೇಶನ್‌ನ ಕಾರ್ಯನಿರ್ವಾಹಕ ವಿಶ್ವಸ್ಥ ನಳಿನ್‌ಕುಮಾರ ಶೆಟ್ಟಿ ಪರಿಸರದ ಕಲಾಸಕ್ತ ಮಕ್ಕಳಿಗೆ ಪರಿಣತರಿಂದ ಸಂಗೀತ, ನೃತ್ಯ ತರಗತಿಗಳನ್ನು ನಡೆಸಲಾಗುತ್ತಿದೆ. ಅದರೊಂದಿಗೆ ಪರಿಸರದ ಜನರಲ್ಲಿ ಲಲಿತ ಕಲೆಗಳತ್ತ ಒಲವು ಮೂಡಿಸಲು ಪ್ರತಿ ತಿಂಗಳು ಸಂಗೀತ, ನೃತ್ಯ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಇದಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು. ಆ ಬಳಿಕ ನಡೆದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಚೇರಿಯಲ್ಲಿ ಭಟ್ಕಳ ಮಾರುಕೇರಿಯ ವಿದ್ವಾನ್ ಅನಂತ ಹೆಬ್ಬಾರ್ ಗಾಯನ ಪ್ರಸ್ತುತಪಡಿಸಿದರು. ಶಿರಾಲಿಯ ಮಹಾಬಲೇಶ್ವರ ಹೆಗಡೆ ಹಾರ್ಮೋನಿಯಂ ಮತ್ತು ಭಟ್ಕಳ ಕೊಣಾರದ ಬಾಲಚಂದ್ರ ಹೆಬ್ಬಾರ್ ತಬಲಾ ಸಹವಾದನ ನೀಡಿದರು. ಸಂಗೀತ ಶಿಕ್ಷಕಿ ಶ್ವೇತಾ ಮತ್ತು ಸುಬ್ರಹ್ಮಣ್ಯ ತಾನಪುರಾದಲ್ಲಿ ಸಹಕರಿಸಿದರು. ಕಿರಿಮಂಜೇಶ್ವರದ ಸುಮಾ-ಅರುಣ್‌ಕುಮಾರ್ ಶ್ಯಾನುಭೋಗ್ ದಂಪತಿ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು. ಕಲಾವಿದರನ್ನು ಮತ್ತು ಪ್ರಾಯೋಜಕರನ್ನು ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು. ಡಾ. ಬಾಲಚಂದ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮದುಮಗನೊಂದಿಗೆ ಹಸೆಮಣೆ ಏರಬೇಕಿದ್ದ ವಧವೊಬ್ಬಳು ಪ್ರಿಯಕರನೊಂದಿಗೆ ಪರಾರಿಯಾಗಿ ಮದುವೆಯಾದ ಘಟನೆ ಮರವಂತೆಯಲ್ಲಿ ನಡೆದಿದೆ. ಮುಹೂರ್ತದ ಸಮಯವಾದರೂ ಮದುಮಗಳು ಬಾರದಿದ್ದರಿಂದ ತ್ರಾಸಿ ಕೊಂಕಣ ಖಾರ್ವಿ ಸಭಾಭವನದಲ್ಲಿ ನಡೆಯಬೇಕಿದ್ದ ಮದುವೆ ನಿಂತುಹೋಗಿದೆ. ತಾಲೂಕಿನ ಮರವಂತೆಯ ಯುವತಿಯೊಂದಿಗೆ ತ್ರಾಸಿ ಯುವಕನ ಮದುವೆ ನಿಶ್ಚಿತಾರ್ಥವಾಗಿ ಇಂದು ಮದುವೆ ನಡೆಯುವುದಿತ್ತು. ಮದುಮಗಳ ಮನೆಯಲ್ಲಿ ಅದ್ದೂರಿಯಾಗಿ ಮೆಹಂದಿ ಕಾರ್ಯಕ್ರಮವೂ ನಡೆದಿತ್ತು. ಆದರೆ ಬೆಳಗಾಗುತ್ತಿದ್ದಂತೆ ಮದುಮಗಳು ಮಾತ್ರ ಕಾಣೆಯಾಗಿದ್ದಳು. ಮದುವೆ ತಯಾರಿಯಲ್ಲಿದ್ದ ಕುಟುಂಬ ಬೆಳಿಗ್ಗೆ ಐದು ಗಂಟೆಗೆ ಎದ್ದು ನೋಡಿದಾಗ ಯುವತಿ ಕಾಣೆಯಾಗಿರುವುದು ಗೊತ್ತಾಗಿತ್ತು. (ಕುಂದಾಪ್ರ ಡಾಟ್ ಕಾಂ) ಬೆಳಿಗ್ಗೆ ಮದುವೆಗೆ ತಯಾರಾಗಿ ಸಭಾಭವನಕ್ಕೆ ಬಂದಿದ್ದ ವರನ ಕಡೆಯವರಿಗೆ ವಧು ನಾಪತ್ತೆಯಾಗಿರುವ ಬಗ್ಗೆ ತಿಳಿದು ದಿಕ್ಕುತೋಚದಂತಾಗಿದ್ದರು. ಮದುವೆಗೆ ಬಂದಿದ್ದ ಯುವತಿಯೋರ್ವಳು ಆತನನ್ನು ಮದುವೆಯಾಗುವುದಾಗಿ ತಿಳಿಸಿದ್ದಾಳೆ ಎನ್ನಲಾಗುತ್ತಿದೆ. ಪ್ರಿಯಕರನೊಂದಿಗೆ ಮದುವೆ? ಬೆಳಿಗ್ಗೆಯೇ ನಾಪತ್ತೆಯಾಗಿದ್ದ ಯುವತಿ ಗಂಗೊಳ್ಳಿಯ ತನ್ನ ಪ್ರಿಯಕರನೊಂದಿಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾಳೆ ಎನ್ನಲಾಗಿದೆ. ಈ ಮೊದಲೇ ಅವರು ಪ್ರೀತಿಸುತ್ತಿದ್ದ ವಿಚಾರ ಮನೆಯವರಿಗೆ ತಿಳಿದಿತ್ತು. ಅದನ್ನು ವಿರೋಧಿಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತಲ್ಲೂರು ಗ್ರಾಮದ ನಾರಾಯಣ ವಿಶೇಷ ಮಕ್ಕಳ ಶಾಲೆಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯರು ಸೋಮವಾರ ಭೇಟಿ ನೀಡಿ ಸಂಸ್ಥೆಗೆ ದೇಣಿಗೆ ಹಸ್ತಾಂತರಿಸಿದರು. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿ ಅವರು ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟಿ ಸುರೇಶ್ ತಲ್ಲೂರು ಅವರಿಗೆ ರೂ. 25,000ದ ಚೆಕ್ ಹಸ್ತಾಂತರಿಸಿದರು. ಶಾಲೆಯ ವಿದ್ಯಾರ್ಥಿಗಳಿಗೆ ಬೆಡ್‌ಶೀಟ್ ವಿತರಿಸಿದರಲ್ಲದೇ ಮಧ್ಯಾಹ್ನದ ಭೊಜನ ವ್ಯವಸ್ಥೆಯನ್ನು ಮಾಡಿಸಿದ್ದರು. ಈ ಸಂದರ್ಭ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಮಾಲತಿ ಗೋವಿಂದ ಪೂಜಾರಿ, ರಾಮ ಬಿಜೂರು, ಸದಸ್ಯರಾದ ಸುಧಾಕರ ಪೂಜಾರಿ, ರಾಘವೇಂದ್ರ ಪೂಜಾರಿ, ನರಸಿಂಹ ಬಿ. ನಾಯಕ್, ಪಾರ್ವತಿ ಪೂಜಾರಿ, ನಾಗರಾಜ್, ವಿಲಿಯಂ, ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಟ್ರಸ್ಟಿ ಮನೊರಮಾ ತಲ್ಲೂರು ಮತ್ತಿತರರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಮುಖ ಮಂಟಪದ ಹತ್ತಿರ ಶ್ರೀ ಮಾತಾ ಫರ್ನಿಚರ‍್ಸ್ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲಯನ್ಸ್‌ಸಸ್ ಇದರ ನವೀಕೃತ ಶೋರೂಮ್‌ನ್ನು ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭ ಸಾಹಿತಿ ಓಂ ಗಣೇಶ್ ಉಪ್ಪುಂದ, ಜಿಪಂ ಸದಸ್ಯರಾದ ಕೆ. ಬಾಬು ಶೆಟ್ಟಿ, ಸುರೇಶ್ ಬಟವಾಡಿ, ಗೌರಿ ದೇವಾಡಿಗ, ಜಿ.ಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ತಾ.ಪಂ ಸದಸ್ಯರಾದ ಪ್ರಮೀಳಾ ದೇವಾಡಿಗ, ಜಗದೀಶ ದೇವಾಡಿಗ, ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ, ಸುಮುಖ ಗ್ರೂಪ್‌ನ ಬಿ. ಎಸ್. ಸುರೇಶ್ ಶೆಟ್ಟಿ, ನಾಗೂರು ಸಂದೀಪನ್ ಶಾಲೆಯ ಮುಖ್ಯೋಪಧ್ಯಾಯ ವಿಶ್ವೇಶ್ವರ ಅಡಿಗ, ಜಿ.ಪಂ ಮಾಜಿ ಸದಸ್ಯ ಮದನಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಶ್ರೀ ಮಾತಾ ಫರ್ನಿಚರ‍್ಸ್‌ನ ಆನಂದ ಪೂಜಾರಿ ಹಾಗೂ ದೀಪಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಂಘಟಿತ ಪ್ರಯತ್ನ ಹಾಗೂ ಜನರ ಪಾಲ್ಗೊಳ್ಳುವಿಕೆಯಲ್ಲಿ ಸಹಕಾರಿ ಸಂಸ್ಥೆಗಳ ಯಶಸ್ಸು ಅಡಗಿದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಭಾನುವಾರ ಶಿರೂರು ಕೆಳಪೇಟೆಯ ಎಸ್‌ಡಿಪಿ ಕಾಂಪೆಕ್ಸ್‌ನಲ್ಲಿ ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಶಿರೂರು ಶಾಖೆಯನ್ನು ಉದ್ಘಾಟಿಸಿ ಬಳಿಕ ಮಾತನಾಡಿ ಸಂಸ್ಥೆ ಲಾಭ ಗಳಿಸುವುದರ ಜೊತೆಗೆ ಮೂರ್ತೆದಾರರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಹಂತ ಹಂತವಾಗಿ ಬೆಳೆದ ಈ ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು. ಬ್ರಹ್ಮಾವರ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಕೆ. ಕೊರಗ ಪೂಜಾರಿ ದೀಪ ಬೆಳಗಿ ಉದ್ಘಾಟಿಸಿದರು. ಕರ್ನಾಟಕ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಭದ್ರತಾ ಕೊಠಡಿ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್. ರಾಜು ಪೂಜಾರಿ ಗಣಕಯಂತ್ರ ಉದ್ಘಾಟಿಸಿದರು. ಸಹಕಾರಿ ಸಂಘಗಳ ಉಪನಿಬಂಧಕಿ ಚಂದ್ರಪ್ರತಿಮಾ ಎಂ. ಜೆ ಸಂಘದ ಗಣಕೀಕೃತ ಪಾಸ್‌ಬುಕ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಅತಿಥಿಗಳನ್ನು…

Read More