ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಧಿಕಾರಿಗಳು ಸಭೆಗೆ ಬಾರದಿದ್ದರೆ ಅವರು ಉಡುಪಿ ಜಿಲ್ಲೆಯನ್ನೇ ಬಿಟ್ಟುಹೋಗುವುದು ಒಳಿತು. ತಾಲೂಕಿನಲ್ಲಿ ಜನರಿಗೆ ನೂರಾರು ಸಮಸ್ಯೆಗಳಿವೆ. ಪ್ರತಿ ಇಲಾಖೆಯಲ್ಲಿಯೇ ಒಂದಿಲ್ಲೊಂದು ಸಮಸ್ಯೆ ಇದ್ದೇ ಇದೆ. ಇದರ ಬಗ್ಗೆ ಸರಿಯಾದ ಮಾಹಿತಿ ನೀಡಲು ಕೆಡಿಪಿ ಸಭೆಗೂ ಅಧಿಕಾರಿಗಳು ಸರಿಯಾಗಿ ಭಾಗವಹಿಸದಿದ್ದರೆ ಅವರ ಬಗ್ಗೆ ಸೂಕ್ತ ಕ್ರಮಕ್ಕೆ ಶಿಪಾರಸ್ಸು ಮಾಡಲಾಗುವುದು ಎಂದು ಬೈಂದೂರು ವಿಧಾನಸಭಾ ಕ್ಷೇತ್ರ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ತಾಲೂಕು ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ (ಕೆಡಿಪಿ) ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ ಅವರು ತಾಲೂಕಿನಲ್ಲಾಗುತ್ತಿರುವ ಮರಳು ಸಮಸ್ಯೆಗಳ ಬಗೆಗೆ ಪ್ರಸ್ತಾಪಿಸಿ, ಅದರ ಬಗೆಗೆ ಸ್ಪಷ್ಟನೆ ಕೇಳಲು ಅಧಿಕಾರಿಗಳೇ ಇಲ್ಲದಿರುವುದನ್ನು ಸಭೆಯ ಗಮನಕ್ಕೆ ತಂದ ಸಂದರ್ಭ ಅವರು ಹೀಗೆ ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಗೆಯ ಸಿಬ್ಬಂಧಿಗಳಿಂದ ರೋಗಿಗಳಿಗೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾಸ್ಟರ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಮಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟಡ ಈಜು ಸ್ವರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಾಗರಾಜ ಖಾರ್ವಿ ಅವರು ೫೦ ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಚಿನ್ನದ ಪದಕ, ೧೦೦ಮೀ ಬ್ಯಾಕ್ ಸ್ಟ್ರೋಕ್‌ನಲ್ಲಿ ಚಿನ್ನದ ಪದಕ ಹಾಗೂ ೨೦೦ಮೀ ವೈಯಕ್ತಿಕ ಮೆಡ್ಲೆಯಲ್ಲಿ ಚಿನ್ನದ ಪದಕ ವಿಜೇತರಾಗಿ ಗುಜರಾತಿನ ವಡೋದರದಲ್ಲಿ ೨೦೨೦ರ ಫೆಬ್ರವರಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಈಜುಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ. ಪ್ರಸ್ತುತ ಬಂಟ್ವಾಳ ಸ.ಹಿ.ಪ್ರಾ ಶಾಲೆಯಲ್ಲಿ ಪದವೀಧರ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ನಾಗರಾಜ ಖಾರ್ವಿ ಅವರು ಸ.ಹಿ.ಪ್ರಾ.ಶಾಲೆ ಕಂಚುಗೋಡು, ಸ.ಹಿ.ಪ್ರಾ ಶಾಲೆ ಗುಜ್ಜಾಡಿ ಮತ್ತು ಸರಸ್ವತಿ ವಿದ್ಯಾಲಯ ಗಂಗೊಳ್ಳಿಯ ಹಳೆವಿದ್ಯಾರ್ಥಿಯಾಗಿದ್ದಾರೆ. ರೇಷ್ಮೆ ಇಲಾಖೆಯ ಬಿ. ಕೆ. ನಾಯ್ಕ್ ರವರು ತರಬೇತಿ ನೀಡಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಅಕ್ರೂಟ್ ಕಿರುಚಿತ್ರದ ಮುಹೂರ್ತ ಸಮಾರಂಭ ಶ್ರೀ ಬ್ರಾಹ್ಮೀ ಕಲಾ ವೇದಿಕೆ ಶಿರಿಯಾರ ಇಲ್ಲಿ ನೆರವೇರಿತು. ಶ್ರೀ ವಿಘ್ನೇಶ್ವರ ಕ್ಯಾಶ್ಯು ಇಂಡಸ್ಟ್ರಿಯ ಮಾಲಕ ಯು ಪ್ರಸಾದ್ ಭಟ್ ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದರು. ಅಧ್ಯಾಪಕ, ಸಾಹಿತಿ ನರೇಂದ್ರ ಕುಮಾರ್ ಕೋಟ, ಶಿರಿಯಾರ ಹಿ ಪ್ರಾ ಶಾಲಾ ಮುಖ್ಯೋಪಾಧ್ಯಾಯ ಸಾಧು ಸೇರೆಗಾರ್, ನಿವೃತ್ತ ಪೊಲೀಸ್ ಅಧಿಕಾರಿ ಆನಂದ ಶೆಟ್ಟಿ, ಶಿವರಾಮ ಕಾರ್ಕಡ, ಕೃಷ್ಣ ಭಟ್, ದರ್ಶನ್ ಶೆಟ್ಟಿ ಉಪಸ್ಥಿತರಿದ್ದರು. ಕಿರುಚಿತ್ರದ ಕಥೆ, ಚಿತ್ರ ಕಥೆ, ನಿರ್ದೇಶನ-ರಾಘವೇಂದ್ರ ಶಿರಿಯಾರ, ಛಾಯಾಗ್ರಹಣ-ರೋಹಿತ್ ಅಂಪಾರ್, ಸಂಕಲನ-ಸುಮಂತ್ ಭಟ್, ಸಂಭಾಷಣೆ-ಸತೀಶ ವಡ್ಡರ್ಸೆ, ಕಲೆ-ಶಶಿ ಶೆಟ್ಟಿ ಹಲ್ತೂರು, ಸಹ ನಿರ್ದೇಶನ-ಸುರೇಶ ಶೆಟ್ಟಿ ಮಂದಾರ್ತಿ, ಆದರ್ಶ ಕೆ ಜೆ. ಪ್ರಮುಖ ಕಲಾವಿದರಾಗಿ ಯೋಗೇಶ್ ಬಂಕೇಶ್ವರ್, ಕರಾವಳಿಯ ಬಹುಮುಖ ಪ್ರತಿಭೆ ಬಾಲನಟ ರೋಶನ್ ಗಿಳಿಯಾರು, ಪ್ರಭಾಕರ ಬಿ ಕುಂದರ್, ಗುಂಡ್ಮಿ ರಾಮಚಂದ್ರ ಐತಾಳ್,ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಕೋಟ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರ್ಟೂನು ಹಬ್ಬದ ’ಸ್ಕೂಲ್‌ಟೂನ್ ಚಾಂಪಿಯನ್‌ಶಿಪ್’ ಸ್ಪರ್ಧೆಯ ಪ್ರಯುಕ್ತ ನವೆಂಬರ್ 23ರಂದು ಬೋರ್ಡ್ ಹೈಸ್ಕೂಲ್, ರೋಟರಿ ಕಲಾಮಂದಿರ ಕುಂದಾಪುರ ಇಲ್ಲಿ ಮಧ್ಯಾಹ್ನ 2 ಗಂಟೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ವ್ಯಂಗ್ಯಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ. 5ನೇ ತರಗತಿಯ ತನಕ ಸ್ಪರ್ಧೆಯ ವಿಷಯವಾಗಿ ’ಗಾಂಧೀಜಿ’ಯವರ ಚಿತ್ರ ರಚನೆ – ಪ್ರಥಮ ಬಹಮಾನ ರೂ.6000-, ದ್ವಿತೀಯ ರೂ.4000/-. ತೃತೀಯ ರೂ. 2000/- ಮತ್ತು 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪರ್ಧೆಯ ವಿಷಯ ’ಈಶ್ವರ ಅಲ್ಲಾ ತೇರೋ ನಾಮ್’ ಕೋಮು ಸೌಹಾರ್ದತೆ ಬಗ್ಗೆ ಕಾರ್ಟೂನು ರಚನೆ – ಪ್ರಥಮ ಬಹುಮಾನ 8000/- ದ್ವಿತೀಯ ರೂ.6000/-, ತೃತೀಯ ರೂ. 3000/- ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಕೂಡ ’ಈಶ್ವರ ಅಲ್ಲಾ ತೇರೋ ನಾಮ್’ ಕೋಮು ಸೌಹಾರ್ದತೆ ಬಗ್ಗೆ ಚಿತ್ರರಚನೆ ಇದ್ದು – ಪ್ರಥಮ ರೂ. 10000/-, ದ್ವಿತೀಯ ರೂ. 7000/-, ತೃತೀಯ ರೂ. 4000/- ಆಗಿರುತ್ತದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಶಂಕರನಾರಾಯಣ: ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸಬೇಕಾಗಿರುವುದು ಕನ್ನಡಿಗರಾದ ನಮ್ಮ ಕರ್ತವ್ಯವಾಗಿದೆ. ವರ್ಷದುದ್ದಕ್ಕೂ ಮಾತ್ರವಲ್ಲ, ಜೀವನದುದ್ದಕ್ಕೂ ಕನ್ನಡವನ್ನು ನಾವು ಅನುಭವಿಸುತ್ತಾ, ಅದರ ಸವಿಯನ್ನು ಸವಿಯುವುದು ನಾವು ನಾಡಿಗೆ ಸಲ್ಲಿಸುವ ಅತೀ ದೊಡ್ಡ ಸೇವೆಯಾಗಿದೆ ಎಂದು ಮೊಳಹಳ್ಳಿ-ಹುಣ್ಸೆಮಕ್ಕಿ ಶಿವಶಾಂತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಮೋಹನ್‌ದಾಸ್ ಶೆಟ್ಟಿ ಹೇಳಿದರು. ಅವರು ಬಿದ್ಕಲ್‌ಕಟ್ಟೆಯಲ್ಲಿ ಕಳೆದ ೧೪ ವರ್ಷಗಳಿಂದ ಸ್ಥಳೀಯ ಕನ್ನಡ ರಾಜ್ಯೋತ್ಸವ ಸಮಿತಿ ಏರ್ಪಡಿಸಿಕೊಂಡು ಬರುತ್ತಿರುವ ಕನ್ನಡ ದಿನಾಚರಣೆಯ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷರಾದ ದೀನಪಾಲ ಶೆಟ್ಟಿ, ಸಂಘಟಕರಾದ ವಿಶ್ವನಾಥ ಶೆಟ್ಟಿ, ಸ್ಥಳೀಯ ಉದ್ಯಮಿ ಹಾಗೂ ಇನ್ನೀರ್ವ ಮುಖ್ಯ ಅತಿಥಿಗಳಾದ ಶಂಕರ ಹೆಗ್ಡೆ, ಕಾರ್ಯದರ್ಶಿ ಉದಯಕುಮಾರ ಶೆಟ್ಟಿ, ಕಾಳಾವರ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಮಳೆಗಾಲದಲ್ಲಿ ಮರವಂತೆ ಮೀನುಗಾರಿಕಾ ಹೊರಬಂದರು ಪ್ರದೇಶದಲ್ಲಿ ಸಂಭವಿಸಿದ್ದ ಕಡಲ್ಕೊರೆತ ಅಲ್ಲಿನ ನಿವಾಸಿಗಳಾದ ಮೀನುಗಾರರನ್ನು ಕಂಗೆಡಿಸಿತ್ತು. ಈಚಿಗಿನ ಗಾಳಿಮಳೆಯಿಂದ ಹೊರಬಂದರಿನ ಉತ್ತರದ ತಡೆಗೋಡೆಯ ಉತ್ತರ ದಿಕ್ಕಿನಲ್ಲಿ ಮತ್ತೆ ನಡೆಯುತ್ತಿರುವ ಕೊರೆತ ಅವರನ್ನು ಚಿಂತೆಗೀಡುಮಾಡಿದೆ. ಸುಮಾರು ೨೦೦ ಮೀಟರು ಉದ್ದದ ತೀರಪ್ರದೇಶದಲ್ಲಿ ಐದಾರು ಮೀಟರು ಭೂಭಾಗ ಇಷ್ಟರಲ್ಲೇ ಸಮುದ್ರ ಸೇರಿದೆ. ಹತ್ತಾರು ತೆಂಗಿನ ಮರಗಳು ಉರುಳಿವೆ. ಕೆಲವೆಡೆ ಆ ವಸತಿ ಪ್ರದೇಶದ ಸಂಪರ್ಕದ ಕೊಂಡಿಯಾಗಿರುವ ಕರಾವಳಿ ಮಾರ್ಗದ ತನಕವೂ ಕೊರೆತ ಆಗುತ್ತಿದೆ. ಕೊರೆತ ನಿಲ್ಲದೆ ಮುಂದುವರಿದರೆ ರಸ್ತೆ ಹಾಗೂ ಅದರಾಚೆಗಿನ ಮನೆಗಳಿಗೂ ಅಪಾಯ ತಟ್ಟಬಹುದು ಎಂಬ ಭೀತಿ ಆವರಿಸಿದೆ. ಈ ವರೆಗೆ ಬಂದರಿನ ಒಳಭಾಗದ ಪ್ರದೇಶದ ದಂಡೆ ಕೊರೆಯಲ್ಪಡುತ್ತಿತ್ತು. ಅಲ್ಲಿ ಬಂದರು ಮತ್ತು ಮೀನುಗಾರಿಕಾ ಇಲಾಖೆ ಕಲ್ಲುಗಳನ್ನು ಪೇರಿಸಿ ಕೊರೆತ ತಡೆಗಟ್ಟುವ ಪ್ರಯತ್ನ ನಡೆಸಿತ್ತು. ಅದನ್ನೂ ಮೀರಿ ಅಲೆಗಳು ದಾಳಿ ನಡೆಸಿ ತೀವ್ರ ಅಪಾಯ ಸೃಷ್ಟಿಸಿದಾಗ ಮೀನುಗಾರರೇ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮರಳು ತುಂಬಿಸಿದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪೊಲೀಸರಿಗೆ ಅಪರಾಧ ನಿಯಂತ್ರಣದ ಹೊಣೆಯ ಜತೆಗೆ ಸಾಮಾಜಿಕ ಜವಾಬ್ದಾರಿಯೂ ಇದೆ. ಆ ಹಿನ್ನೆಲೆಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಸಮಾಜಮುಖಿಯಾಗಿ ಮಾಡುವತ್ತ ಸರ್ಕಾರ ಗಮನ ಹರಿಸಲಿದೆ ಎಂದು ರಾಜ್ಯ ಗೃಹ ಹಾಗೂ ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಶುಕ್ರವಾರ ರೂ. 41 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಬೈಂದೂರು ಪೊಲೀಸ್ ವೃತ್ತ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಮಾತನಾಡಿ ಸಮಾಜದಲ್ಲಿ ಕೆಲವೇ ಜನರು ಅಪರಾಧ ಪ್ರವೃತ್ತಿಯ ಜನರು ಇರುತ್ತಾರೆ. ಪೊಲೀಸರು ನಾಗರಿಕರ ಜತೆ ನಿಕಟ ಸಂಪರ್ಕ, ಸಂಬಂಧ ಸಾಧಿಸಿದರೆ ಅಪರಾಧ ನಿಯಂತ್ರಣ ಮತ್ತು ಪತ್ತೆ ಸುಲಭವಾಗುತ್ತದೆ. ಇದರ ಇನ್ನೊಂದು ಮುಖವಾಗಿ ಸರ್ಕಾರವು ಪೊಲೀಸ್ ಸಿಬ್ಬಂದಿಯ ಸೇವಾ ಸ್ಥಿತಿ, ಕರ್ತವ್ಯದ ಸ್ಥಳ, ಅಗತ್ಯ ಸೌಲಭ್ಯಗಳ ಸುಧಾರಣೆಯನ್ನೂ ಮಾಡಲಿದೆ ಎಂದರು. ಯಾಂತ್ರಿಕ ಉಪಕರಣಗಳ ಬಳಕೆಯ ಹೆಚ್ಚಳದ ಪರಿಣಾಮವಾಗಿ ಅವುಗಳಿಗೆ ಸಂಬಂಧಿಸಿದ ಅಪರಾಧ ಹೆಚ್ಚಿದೆ. ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲಾಗುತ್ತಿದೆ. ಬ್ಯಾಂಕ್ ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳ ಸಭೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಬ್ಲಡ್ ಕ್ಯಾನ್ಸರ್‌ಗೆ ತುತ್ತಾಗಿರುವ ಬೈಂದೂರು ತಾಲೂಕಿನ ಕಳವಾಡಿಯ ನಿವಾಸಿ ಸುಜನ್ ದೇವಾಡಿಗ ಅವರ ಚಿಕಿತ್ಸೆಗೆ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅವರು ರೂ. 50,000 ನೆರವು ನೀಡಿದರು. ಸುಜನ್ ಅವರ ತಂದೆ ಸಂಜೀವ ಅವರಿಗೆ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶೆಫ್‌ಟಾಕ್ ಸಂಸ್ಥೆಯ ಅಕೌಂಟೆಂಟ್ ರಾಜೇಶ್ ಪೂಜಾರಿ ಹಾಗೂ ಇತರರು ಇದ್ದರು.
ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಬೈಂದೂರು ತಾಲೂಕು ಪಡುವರಿ ಗ್ರಾಮದ ಸೋಮೇಶ್ವರ ಬೀಚ್ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ಮೊದಲ ಹಂತದ ಅನುದಾನ ಮಂಜೂರಾಗಿದ್ದು, ಸೋಮೇಶ್ವರದಲ್ಲಿ ಸೀವಾಕ್, ರೋಪ್ ಬ್ರಿಜ್ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಚಾಲನೆ ದೊರೆಯಲಿದೆ. ಬೈಂದೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮೊದಲ ಹಂತದಲ್ಲಿ ಸೋಮೇಶ್ವರ ಬೀಚ್ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಮಂಜೂರಾಗಿದೆ. ಈ ಅನುದಾನದಲ್ಲಿ ರೋಪ್‌ಬ್ರಿಜ್ (ತೂಗು ಸೇತುವೆ) ಶೌಚಾಲಯ, ಸೀವಾಕ್, ಪಾರ್ಕಿಂಗ್, ವಾಣಿಜ್ಯ ಸಂಕೀರ್ಣ ಕಾಮಗಾರಿಗಳು ನಡೆಯಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರಿಗೆ ಸೋಮೇಶ್ವರ ಕಡಲ ಕಿನಾರೆ ಬಗ್ಗೆ ಮಾಹಿತಿ ನೀಡಲು ಶಿರೂರಿನಲ್ಲಿ ದೊಡ್ಡ ಸ್ವಾಗತ ಕಮಾನು ನಿರ್ಮಿಸಲಾಗುತ್ತದೆ. ಕಾಮಗಾರಿ ಎರಡು ವರ್ಷದೊಳಗೆ ಪೂರ್ಣಗೊಳ್ಳಲಿದ್ದು, ಎರಡನೇ ಹಂತದ ಕಾಮಗಾರಿಗೆ 20 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಬೈಂದೂರು ತಾಲೂಕಿನ ಪ್ರವಾಸಿ ತಾಣಗಳನ್ನೊಮ್ಮೆ ನೋಡಿ (Video) ಬೈಂದೂರು ತಾಲೂಕಿನ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 2019ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗೊಂಡಿದ್ದು, ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಎಂಟು ಮಂದಿ ಸಾಧಕರು ಸೇರಿದಂತೆ ಜಿಲ್ಲೆಯ 32 ಸಾಧಕರಿಗೆ ಪ್ರಶಸ್ತಿ ಘೋಷಣೆಯಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಹಕ್ಲಾಡಿಯ ಆನಂದ ಶೆಟ್ಟಿ, ಶಿಲ್ಪಕಲೆ ಕ್ಷೇತ್ರದಲ್ಲಿ ಅರಾಟೆಯ ಎಸ್. ಸುಬ್ರಹ್ಮಣ್ಯ ಆಚಾರ್ಯ, ಕರಕುಶಲ ಕಲೆ ಕ್ಷೇತ್ರದಲ್ಲಿ ಕೊರವಡಿಯ ಲಲಿತಾ ಕೊರವಡಿ, ಛಾಯಾಗ್ರಹಣ ಕ್ಷೇತ್ರದಲ್ಲಿ ಕುಂದಾಪುರದ ಸಂತೋಷ ಕುಂದೇಶ್ವರ, ವೈದ್ಯಕೀಯ ಕ್ಷೇತ್ರದಲ್ಲಿ ಬೇಳೂರಿನ ಡಾ. ಕುಸುಮಾಕರ ಶೆಟ್ಟಿ, ಯೋಗ, ನೃತ್ಯ ಕ್ಷೇತ್ರದಲ್ಲಿ ಮರವಂತೆಯ ಧನ್ವಿ ಪೂಜಾರಿ, ಕೃಷಿ, ಹೈನುಗಾರಿಕೆ ಕ್ಷೇತ್ರದಲ್ಲಿ ಶಂಕರನಾರಾಯಣದ ದಯಾನಂದ ರಾವ್, ಸಮಾಜ ಸೇವೆ ಕ್ಷೇತ್ರದಲ್ಲಿ ಕೋಟೇಶ್ವರದ ಡೇವಿಡ್ ಸಿಕ್ವೇರಾ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. 2019ರ ಪ್ರಶಸ್ತಿ ಪುರಸ್ಕೃತ ಜಿಲ್ಲೆಯ ಸಾಧಕರು: ಯಕ್ಷಗಾನ: ಪುಂಡರೀಕಾಕ್ಷ ಉಪಾಧ್ಯಾಯ, ಆನಂದ್ ಶೆಟ್ಟಿ, ಬಡಾನಿಡಿಯೂರು ಕೇಶವರಾವ್ ದೈವಾರಾಧನೆ: ನಾರಾಯಣ ನಲಿಕೆ, ಕೋಟಿ ಪೂಜಾರಿ, ಸಾಧು ಪಾಣರ ರಂಗಭೂಮಿ: ವಿಜಯ್ ನಾಯಕ್, ದಿನೇಶ್ ಪ್ರಭು ಕಲ್ಲೊಟ್ಟೆ ಪತ್ರಿಕೋದ್ಯಮ: ಎಸ್.ಜಿ.ಕುರ್ಯ ಸಂಗೀತ:…
