Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಡಾ| ಶಿವರಾಮ ಕಾರಂತರು ಸಾಹಿತ್ಯ ಲೋಕದ ಮುತ್ತು, ಅವರ ಸಾಹಿತ್ಯ ಲೋಕದ ಕೊಡುಗೆ ಕನ್ನಡ ಭಾಷೆಯ ಹಿರಿಮೆಯನ್ನು ಎತ್ತಿ ಹಿಡಿದಿದೆ, ಅವರ ಈ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪಸರಿಸುವ ಉದ್ದೇಶದಿಂದ ಕಾರಂತ ಥೀಮ್ ಪಾರ್ಕ್‌ನ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ಬ್ಯಾಂಕ್ ಕೋಟ ಶಾಖೆಯ ಪ್ರಬಂಧಕ ಗಣೇಶ್ ಹೊಳ್ಳ ತಿಳಿಸಿದರು. ಅವರು ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಕಾರಂತೋತ್ಸವ ಪುನರ್ವಸು-೨೦೧೯ (ಮಳೆಬಿಲ್ಲಿನ ಕನವರಿಕೆ) ಕಾರ್ಯಕ್ರಮದ ಎರಡನೇ ದಿನ ರಾಜ್ಯಮಟ್ಟದ ಚಲನಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವೈದ್ಯ ಭಾಸ್ಕರ್ ಆಚಾರ್ಯ ಮಾತಾನಾಡಿ ಕಾರಂತರ ಬದುಕು ಬರಹ ಯುವ ಜನಾಂಗಕ್ಕೆ ಪ್ರೇರಕವಾಗಿದ್ದು,ನಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಲು ಪ್ರಯತಿಸಬೇಕು ಎಂದರು. ಕ.ಸಾ.ಪ ಕೋಟ ಹೋಬಳಿ ಘಟಕದ ಅಧ್ಯಕ್ಷ ಶ್ರೀ ಸತೀಶ್ ವಡ್ಡರ್ಸೆ ಮಾತನಾಡಿ ಕಾರಂತರ ಕಾದಂಬರಿಗಳು ಪ್ರಕೃತಿ ಮತ್ತು ಮಾನವ ಸಂಬಂಧಗಳ ಒಳಸುಳಿಗಳನ್ನು ಬಿಚ್ಚಿಡುತ್ತಾ ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳುವ ಅಗತ್ಯತೆ ತಿಳಿಸುತ್ತಾ ಸರ್ವಕಾಲಕ್ಕೂ ಸಲ್ಲುವಂತವುಗಳು ಎಂದು ಹೇಳಿದರು. ಕೋಟತಟ್ಟು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಇಂದಿನ ಆಧುನಿಕ ಜಗತ್ತಿನಲ್ಲಿ ನಡೆಯುತ್ತಿರುವ ಡಿಜಿಟಲ್ ಅಪರಾಧಗಳು ಮತ್ತು ಅವುಗಳ ತನಿಖಾ ವಿಧಾನ ಮತ್ತು ಸಾಕ್ಷ್ಯ ಸಂಗ್ರಹದ ಬಗ್ಗೆ ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಸೂಕ್ತ ಅರಿವು ಹೊಂದಿರಬೇಕು ಎಂದು ರಾಜ್ಯ ಹೈಕೋರ್ಟ್ ನ ನ್ಯಾಯಾಧೀಶ ಹಾಗೂ ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಗವರ್ನರ್ ನ್ಯಾ. ಕೆ.ಎನ್. ಫಣೀಂದ್ರ ಹೇಳಿದ್ದಾರೆ. ಅವರು ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಕರ್ನಾಟಕ ನ್ಯಾಯಂಗ ಅಕಾಡೆಮಿ ಬೆಂಗಳೂರು, ಉಡುಪಿ ಜಿಲ್ಲಾ ನ್ಯಾಯಾಲಯ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ , ಜಿಲ್ಲೆಯ ನ್ಯಾಯಾಂಗ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು , ವಕೀಲರು ಮತ್ತು ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳಿಗೆ ನಡೆದ ಎಲೆಕ್ಟ್ರಾನಿಕ್ಸ್ ಪುರಾವೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ೨೦೦೦ ಇಸವಿಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಜಾರಿಗೆ ಬಂದಿದ್ದರೂ ಸಹ ಇದುವರೆಗೆ ಈ ಕುರಿತು ಸೂಕ್ತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಹೊಸ ಬಸ್ ನಿಲ್ದಾಣದ ಸಮೀಪ ನೂತನವಾಗಿ ಪ್ರಾರಂಭಗೊಂಡ ನಮ್ಮನೆ ಮಾಂಸಾಹಾರಿ ಊಟದ ಹೋಟೆಲ್‌ನ್ನು ಮುಂಬೈ ಉದ್ಯಮಿ, ಹಂಗಳೂರು ಪ್ರಸನ್ನ ಆಂಜನೇಯ ದೇವಸ್ಥಾನದ ಸ್ಥಾಪಕರಾದ ಸುರೇಶ ಡಿ ಪಡುಕೋಣೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕುಂದಾಪುರದ ತಹಶೀಲ್ದಾರ್ ತಿಪ್ಪೇಸ್ವಾಮಿ, ಕಟ್ಟಡದ ಮಾಲೀಕರದ ಪ್ರೇಮಾನಂದ ಶೆಟ್ಟಿ, ಕುಂದಾಪುರ ವಲಯ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ರಾಜಾ ಮಠದ ಬೆಟ್ಟು, ದತ್ತಾತ್ರೆಯ ದೇವಾಡಿಗ, ಚಂದ್ರಶೇಖರ ದೇವಾಡಿಗ, ಆನಂದ್ ಕೆ ಏನ್, ದಿನೇಶ್ ವಿ ದೇವಾಡಿಗ, ಉದಯ ಹೇರಿಕೇರಿ, ರಾಮ ದೇವಾಡಿಗ, ಸಂಸ್ಥೆಯ ಪಾಲುದಾರರಾದ ನಾಗರಾಜ್ ರಾಯಪ್ಪನಮಠ, ನವೀನ್, ಚಂದ್ರ ರಾಯಪ್ಪನಮಠ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಲೇಷ್ಯಾದ ಕೌಲಾಲಂಪುರದಲ್ಲಿರುವ ಎಸ್‌ಜಿಎಸ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಫೌಂಡೇಶನ್ ಕಾಲೇಜ್ ಎಂಡ್ ರಿಸರ್ಚ್ ಸೆಂಟರ್‌ನಲ್ಲಿ ಅ. ೧೨, ೧೩ರಂದು ನಡೆದ ಟ್ರ್ಯಾಕ್ಸ್ ಇಂಟರ್‌ನ್ಯಾಶನಲ್ ಯೋಗ ಕಾರ್ನಿವಲ್‌ನಲ್ಲಿ ಮರವಂತೆಯ 11ರ ಹರೆಯದ ಚುರುಕಿನ ಬಾಲೆ ಧನ್ವಿ ಪೂಜಾರಿ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಪಡೆದು ವಿಕ್ರಮ ಮೆರೆದಿದ್ದಾಳೆ. ಅಥ್ಲೆಟಿಕ್ ಯೋಗ ಚಾಂಪಿಯನ್‌ಶಿಪ್ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿ ಚಿನ್ನದ ಪದಕ ಮತ್ತು ಆರ್ಟಿಸ್ಟಿಕ್ ಯೋಗ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಗೆದ್ದುಕೊಂಡಿದ್ದಾಳೆ. ಹತ್ತಾರು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ, ಪ್ರಶಸ್ತಿ ಗಳಿಸಿರುವ ಧನ್ವಿ ಕಳೆದ ತಿಂಗಳ ೧೮ರಂದು ಬೆಂಗಳೂರಿನ ಫ್ರೀಡಮ್ ಪಾರ್ಕ್‌ನಲ್ಲಿ ನಡೆದ ಐದನೆಯ ರಾಷ್ಟ್ರೀಯ ಅಥ್ಲೆಟಿಕ್ಸ್ ಯೋಗಾಸನ ಸ್ಫರ್ಧೆಯ ೧೦-೧೨ ವಯೋವಿಭಾಗದಲ್ಲಿ ಅರ್ಹತಾ ಪತ್ರ ಗಳಿಸಿದ್ದಳು. ೨೪, ೨೫ರಂದು ಚೆನ್ನೈನಲ್ಲಿ ನಡೆದ ಜಾಗತಿಕ ಯೋಗೋತ್ಸವದಲ್ಲಿ ನಾಲ್ಕನೆಯ ಸ್ಥಾನ ಗಳಿಸುವುದರ ಜತೆಗೆ ಜಾಗತಿಕ ದಾಖಲೆ ಪ್ರಯತ್ನದಲ್ಲಿ ಒಂದೂವರೆ ನಿಮಿಷ ಕಾಲ ವೀರಭದ್ರಾಸನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳೂರಿನ ಬಿಜೈ ಚರ್ಚ್ ಹಾಲ್‌ನಲ್ಲಿ ನಡೆದ ಜೇಸಿ ವಲಯ ಸಮ್ಮೇಳನದಲ್ಲಿ ಕೆ. ಕಾರ್ತಿಕೇಯ ಮಧ್ಯಸ್ಥ 2020 ರ ಸಾಲಿನ ಜೇಸಿ ವಲಯ 15ರ ನೂತನ ವಲಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಯುವ ಉದ್ಯಮಿಯಾಗಿರುವ ಇವರು ಸಂಘಟನಾ ಚತುರರಾಗಿದ್ದು, 2006ರಲ್ಲಿ ಜೇಸಿಐ ಕುಂದಾಪುರ ಸಿಟಿಯ ಸದಸ್ಯರಾಗಿ ಸೇರ್ಪಡೆಗೊಂಡು, ಜೇಸಿ ವಲಯದಲ್ಲಿ ಹೊಸ ಚೈತ್ಯನ್ಯ ಮೂಡಿಸಿದರು. ೨೦೦೮ ರಲ್ಲಿ ನಿರ್ದೇಶಕರಾಗಿ 2009ರಲ್ಲಿ ಉಪಾಧ್ಯಕ್ಷರಾಗಿ 2010 ರಲ್ಲಿ ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷರಾಗಿ ಮಾಡಿದ ದಾಖಲೆ ಕಾರ್ಯಕ್ರಮಗಳ ಸರಣಿ ಸಾಧನೆಗಾಗಿ ವಲಯ ಮಟ್ಟದ ಪ್ರಶಸ್ತಿಗಳ ಮಹಾಪೂರವೇ ಕುಂದಾಪುರಕ್ಕೆ ಹರಿದು ಬಂದಿತ್ತು. 2018ರ ವಲಯ ಅಭಿವೃದ್ಧಿ ಮತ್ತು ಬೆಳವಣಿಗೆಯ ನಿರ್ದೇಶಕರಾಗಿ ಕೆ. ಕಾರ್ತಿಕೇಯ ಮಧ್ಯಸ್ಥರ ನೇತೃತ್ವದಲ್ಲಿ ವಲಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಯನ್ನು ಗಳಿಸಿದ್ದು, 2019ರ ವಲಯ ಉಪಾಧ್ಯಕ್ಷರಾಗಿ ಇವರು ಮಾಡಿದ ಸಾಧನೆಗೆ ಇವರನ್ನು ವಲಯ 15ರ ಅಧ್ಯಕ್ಷ ಗಾಧಿ ಅಲಂಕರಿಸುವಂತೆ ಮಾಡಿತು. ಇವರು ೧೨ ವಲಯ ಸಮ್ಮೇಳನ ೩ ರಾಷ್ಟ್ರೀಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಸ್ವಯಂ ಘೋಷಣೆಯಿಂದ ಅಥವಾ ಧರ್ಮ, ಜಾತಿಯ ಕಾರಣದಿಂದ ನಾಯಕರಾಗಲು ಸಾಧ್ಯವಿಲ್ಲ. ಬದಲಿಗೆ ಜನರು ಒಪ್ಪಿದರೆ ಮಾತ್ರ ನಿಜವಾದ ನಾಯಕರಾಗಲು ಸಾಧ್ಯ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಅವರು ಶುಕ್ರವಾರ ಬ್ರಹ್ಮಗಿರಿಯ ಎನ್‌ಐಎಸ್‌ಟಿ ನೆಹರು ಯುವ ಕೇಂದ್ರ ಸಂಘಟನಾ ಬೆಂಗಳೂರು, ನೆಹರು ಯುವ ಕೇಂದ್ರ ಉಡುಪಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ೧೫ ದಿನಗಳ ರಾಷ್ಟ್ರೀಯ ಯುವ ಸ್ವಯಂಸೇವಕರ ಪ್ರವೇಶ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು. ಭಾರತದಲ್ಲಿನ ಯುವ ಸಂಪತ್ತಿಗೆ ವಿಶ್ವವೇ ಹೆದರುತ್ತದೆ. ಇಲ್ಲನ ಶಿಕ್ಷಣ ಪದ್ಧತಿ ಹಾಗೂ ವಿಶ್ವದ ಪ್ರಮುಖ ಉದ್ಯೋಗಗಳಲ್ಲಿ ಭಾರತೀಯರೇ ಹೆಚ್ಚಿರುವುದು ಇದಕ್ಕೆ ಕಾರಣ. ಯುವ ಶಕ್ತಿ ಇಂತಹ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು, ಮೊಬೈಲ್ ವ್ಯಸನದಿಂದ ದೂರವಾಗಿ ಧನಾತ್ಮಕ ಚಿಂತನೆಯಿಂದ ದೇಶ ಕಟ್ಟಲು ಮುಂದಾಗಲಿ ಎಂದವರು ಆಶಿಸಿದರು. ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಜಿ. ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಉಡುಪಿ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ…

Read More

ಕುಂದಾಪ್ರ ಡಾಟ್ ಕಾಂ ವರದಿ. ಈಗ ಆನ್ಲೈನ್ ಶಾಪಿಂಗ್ ಭರಾಟೆ ಹೆಚ್ಚಿದೆ. ಯುವಜನರು ಆನ್ಲೈನ್ ಮೂಲಕವೇ ತಮಗೆ ಬೇಕಾದ್ದನ್ನು ಕೊಳ್ಳಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಅದೇ ಆನ್ಲೈನ್ ಮೂಲಕ ತನ್ನೂರಿನ ತಿಂಡಿಗಳು, ಸ್ಥಳೀಯ ಸಂಸ್ಕೃತಿ ಬಿಂಬಿಸುವ ವಸ್ತುಗಳು ದೊರೆಯುವಂತಾಗಿದ್ದರೆ ಅನ್ನುವ ಕನಸು ಎಷ್ಟೋ ಜನರಲ್ಲಿರುತ್ತದೆ. ಇಂತಾ ಕನಸನ್ನ ನನಸು ಮಾಡಲೆಂದೇ ಹುಟ್ಟಿಕೊಂಡಿದ್ದು – oormaniangadi.com ಎಂಬ ಕುಂದಾಪುರ ಮೂಲದ ಆನ್ಲೈನ್ ಶಾಪಿಂಗ್ ತಾಣ. ಈಗಾಗಲೇ ಕರ್ನಾಟಕ ಕರಾವಳಿ ಪ್ರದೇಶ ದಲ್ಲಿ ಸಾಫ್ಟ್ವೇರ್ ಡೆವಲಪ್ಮೆಂಟ್ , ವೆಬ್ ಡೆವಲಪ್ಮೆಂಟ್ , ಆಪ್ ಡೆವಲಪ್ಮೆಂಟ್ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿರುವ ಫೋರ್ಥ್ ಫೋಕಸ್ ಗ್ರೂಪ್ ತಂಡದ ಇನ್ನೊಂದು ಕೊಡುಗೆಯೇ ಈ “ಊರ್ಮನಿ ಅಂಗಡಿ” ಆರಂಭಗೊಂಡ ತಿಂಗಳೊಳಗೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆಯೇ ಸಿಕ್ಕಿದೆ. ನ್ಯಾಯಯುತ ಬೆಲೆಯೊಂದಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ತಲುಪಿಸುವ ಮೂಲಕ ಗ್ರಾಹಕರಿಂದ ವ್ಯಾಪಕ ಪ್ರಶಂಸೆಯನ್ನು ಪಡೆಯುತ್ತಿದೆ. ಭಾರತದೊಳಗೆ ಎಲ್ಲಾ ಪ್ರದೇಶಕ್ಕೂ 5 – 6 ದಿನಗಳೊಳಗೆ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಮರುಕಳಿಸಬೇಕೆನ್ನುವ ಸಂಸ್ಥೆ ಆಳ್ವಾಸ್. ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕøತಿಕವಾದ ಆಸಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ ಸಮಾಜಕ್ಕೆ ನಿಜವಾದ ಆಸ್ತಿಗಳನ್ನಾಗಿ ರೂಪಿಸುವ ಕನಸು, ಅದಕ್ಕೆ ಪೂರಕವಾದ ಕೆಲಸವನ್ನು ಮಾಡುವ ಮೂಲಕ ರಾಜ್ಯದಲ್ಲಿ ಅತ್ಯಂತ ಅನುಕರಣೀಯ ವ್ಯಕ್ತಿ ಮೋಹನ ಆಳ್ವ ಮತ್ತು ಸಂಸ್ಥೆ ಆಳ್ವಾಸ್ ಆಗಿದ್ದು ವಾರ್ಷಿಕವಾಗಿ ರೂ. 33.85 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿಗಳು ಹಾಗೂ ಸಮಾಜದ ಸೇವೆಯನ್ನು ಮಾಡುವಂತಹ ಉತ್ತಮ ಹಾಗೂ ಅಪರೂಪದ ಕೆಲಸವನ್ನು ಮಾಡುತ್ತಿರುವ ಆಳ್ವಾಸ್‍ಗೆ ಸದಾ ಬೆಂಬಲ ನೀಡುತ್ತೇವೆ ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. ಅವರು ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಸೋಮವಾರ ಆಯೋಜಿಸಲಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 50ಲಕ್ಷ ನೆರವು ಘೋಷಣೆ ಹಾಗೂ ಪ್ರತಿಷ್ಠಾನದ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕೊಡುಗೆಗಳ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಸಮಾರಂಭದಲ್ಲಿ ಆಶೀರ್ವಚನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸೆ.29ರಿಂದ ಅ8ರ ತನಕ ನಡೆಯಲಿರುವ ನವರಾತ್ರಿ ಉತ್ಸವಕ್ಕೆ ಸಕಲ ಸಿದ್ದತೆಗಳು ನಡೆದಿದೆ. ದೇವಳವು ಸಂಪೂರ್ಣ ಹೊಸ ವಿನ್ಯಾಸಗಳಿಂದ ಕೂಡಿದ ಪುಷ್ಪಾಲಂಕಾರ ಹಾಗೂ ವಿದ್ಯುದ್ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದೆ. ಮಹಾನವಮಿಯಂದು ಬೆಳಿಗ್ಗೆ ಚಂಡಿಕಾಯಾಗ, ಮಧ್ಯಾಹ್ನ  ರಥೋತ್ಸವ ನಡೆಯಲಿದೆ. ವಿಜಯದಶಮಿಯಂದು ಬೆಳಿಗ್ಗೆ 4ರಿಂದ ವಿದ್ಯಾರಂಭ, ಅಪರಾಹ್ನ ನವಾನ್ನಪ್ರಾಶನ ಸಂಜೆ  ಶ್ರೀ ಮೂಕಾಂಬಿಕೆಯ ವಿಜಯೋತ್ಸವ ಜರುಗಲಿದೆ. ಪ್ರತಿದಿನ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೇವಳದ ಸೌಪರ್ಣಿಕಾ ಮತ್ತು ಕಾಶೀ ಸ್ನಾನ ಘಟ್ಟದಲ್ಲಿ ಹೆಚ್ಚಿನ ಬೆಳಕಿನ ವ್ಯವಸ್ಥೆ ಹಾಗೂ ಭದ್ರತಾ ಸಿಬ್ಬಂದಿಗಳ ನಿಯೋಜನೆ, ಸಭಾಭವನದಲ್ಲಿ ಹೆಚ್ಚುವರಿ ಊಟದ ವ್ಯವಸ್ಥೆ ಜೊತೆಗೆ ವಾಹನ ನಿಲುಗಡೆ ಹಾಗೂ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು, ಸಿಸಿ ಕ್ಯಾಮೆರಾ ಮೇಲೆ ಹದ್ದಿನ ಕಣ್ಗಾವಲು ಇಂತಹ ಹಲವಾರು ವಿಚಾರಗಳ ಬಗ್ಗೆ ಈಗಾಗಲೇ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅವೈಜ್ಞಾನಿಕ ದಂಡ ವಿಧಿಸುವಿಕೆಗೆ ನಾಂದಿ ಹಾಡಿದ ಐಎಂವಿ ವಿಧೇಯಕ ತಿದ್ದುಪಡಿ ಮಸೂದೆ, ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ನೆನೆಗುದಿಗೆ ಬಿದ್ದಿರುವ ಪ್ಲೈ ಓವರ್ ಕಾಮಗಾರಿಯ ನಿರ್ಲಕ್ಷ್ಯತನಗಳನ್ನು ವಿರೋಧಿಸಿ ಕುಂದಾಪುರದ ಎಲ್ಲಾ ವಾಹನ ಚಾಲಕರು ಮತ್ತು ಮಾಲಕರು ಸಂಘಟಿತ ಹೋರಾಟ ನಡೆಸಿದ್ದಾರೆ. ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ(ಸಿಐಟಿಯು) ಕುಂದಾಪುರ. ಭಾರತೀಯ ಆಟೋ ರಿಕ್ಷಾ ಮಜ್ದೂರ್ ಸಂಘ(ಬಿಎಂಎಸ್) ಕುಂದಾಪುರ ಹಾಗೂ ಆಟೋ ರಿಕ್ಷಾ, ಟ್ಯಾಕ್ಸಿ, ಮೆಟಾಡೋರ್ ಡ್ರೈವರ್ಸ್ ಅಸೋಸಿಯೇಷನ್ಸ್ (ಇಂಟಕ್) ಕುಂದಾಪುರ ಇವರ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಕುಂದಾಪುರ ತಾಲುಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘಟನೆಗಳ ಸಮನ್ವಯ ಸಮಿತಿ ಪ್ರತಿಭಟನೆ ಆಯೋಜಿಸಿದ್ದರು. ರಾಜ್ಯ ಸರ್ಕಾರದ ದುಬಾರಿ ದಂಡ ಹಾಗೂ ಕೇಂದ್ರ ಮೋಟಾರು ವಾಹನ ಕಾಯ್ದೆ ೨೦೧೯ರ ತಿದ್ದುಪಡಿ ಮಸೂದೆಯನ್ನು ವಾಪಾಸ್ಸು ಪಡೆಯಬೇಕು. ೧೫ ವರ್ಷಗಳ ಹಳೆಯ ಆಟೋಗಳನ್ನು ರದ್ದುಪಡಿಸುತ್ತಿದ್ದು, ಹಳೆಯ ಆಟೋಗಳಿಗೆ ಕಂಪೆನಿಗಳಿಂದ ದರ ನಿಗಧಿಪಡಿಸಬೇಕು. ಸರ್ಕಾರ ಪ್ರೋತ್ಸಾಹಧನ ೫೦ ಸಾವಿರಗಳನ್ನು…

Read More