Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೊಸಂಗಡಿ ಗ್ರಾಮದ ಸುರೇಂದ್ರ ಅವರು ಚಲಾಯಿಸುತ್ತಿದ್ದ ಬೈಕ್‌ಗೆ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿದೆ. ಪರಿಣಾಮ ಸಹಸವಾರೆ ನಾಗರತ್ನಾ ಅವರು ಗಾಯಗೊಂಡಿದ್ದಾರೆ, ಸಿದ್ದಾಪುರ-ಅಮಾಸೆಬೈಲು ರಸ್ತೆಯಲ್ಲಿ ಜಡ್ಡಿನಬೈಲು ನಂದಿಕೇಶ್ವರ ದೇವಸ್ಥಾನದ ಬಳಿ ಅಪಘಾತ ಸಂಭವಿಸಿದೆ. ಗಾಯಾಳು ನಾಗರತ್ನಾ ಅವರಿಗೆ ಸಿದ್ದಾಪುರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕೊರ್ಗಿ ಗ್ರಾಮದ ಕಾಡಿನಬೆಟ್ಟು ನಿವಾಸಿ ವಿಶ್ವನಾಥ ಅವರ ಪತ್ನಿ ಸುಶೀಲಾ (56) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರದಂದು ನಡೆದಿದೆ. ಪತಿ ವಿಶ್ವನಾಥ ಅವರು ಬೆಳಗ್ಗೆ 8 ಗಂಟೆಗೆ ಮನೆಯಿಂದ ಮೊಳಹಳ್ಳಿಗೆ ತೆರಳಿದ್ದು, ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಮನ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂದು ತಿಳಿಯಲಾಗಿದೆ. ಅವರ ಸಹೋದರ ಕುಶಲ ಹಳ್ನಾಡು ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಆನಗಳ್ಳಿಯ ಸೇತುವೆ ಬಳಿ ವಾರಾಹಿ ಹೊಳೆಗೆ ಬಲೆ ಹಾಕಿ ಮೀನು ಹಿಡಿಯಲು ಹೋದ ಸಹದೇವ (69) ಅವರು ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮುಳುಗಿ ಸಾವನ್ನಪ್ಪಿದ ಘಟನೆ ಬುಧವಾರದಂದು ನಡೆದಿದೆ. ಅವರ ಅಳಿಯ ಉದಯ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್, ಉಡುಪಿ ಜಿಲ್ಲಾ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ನಡೆದ ಕುಂದಾಪುರ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸ. ವಿ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಆರಾಧ್ಯ ಎನ್. ಖಾರ್ವಿ ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಿರಿಕ್ ಪಾರ್ಟಿ ಸಿನಿಮಾಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಕುಂದಾಪುರ ಮೂಲದ ಬೀಜಾಡಿಯ ನಾಗೇಂದ್ರ ಗಾಣಿಗ ಇವರ ನಿರ್ದೇಶನದ ಕನ್ನಡ ಚಲನಚಿತ್ರ ಕುಂದಾಪುರ ಭಾಷೆಯ ಜತೆಗೆ ಕರಾವಳಿ ಸಂಸ್ಕೃತಿಯ ಸೊಗಡನ್ನು ಬಿಂಬಿಸುವ ದಿಂಸೋಲ್ ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ತಲ್ಲೂರಿನ ರಾಜಾಡಿಯ ರಕ್ತೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಅಭಿರಾಮಚಂದ್ರ ಸಿನಿಮಾ ಮೂಲಕ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ ಆ ಚಿತ್ರದಲ್ಲಿ ಬಾಲ್ಯ, ಸ್ನೇಹದ ಜೊತೆಗೆ ತ್ರಿಕೋನ ಪ್ರೇಮ ಕಥೆ ಹೇಳಿದ್ದ ಅವರಿಗೆ ಕರಾವಳಿ ಸಂಸ್ಕೃತಿಯ ಸೊಗಡನ್ನು ದಿಂಸೋಲ್ ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ. ದಿಂಸೋಲ್ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಅನ್ನು ವಕೀಲರಾದ ಟಿ.ಬಿ.ಶೆಟ್ಟಿ ಅವರು ಅನಾವರಣ ಮಾಡಿದ್ದಾರೆ. ನಟರಾದ ರಘು ಪಾಂಡೇಶ್ವರ್, ಯತೀಶ್ ಬೈಕಂಪಾಡಿ, ಸ್ಥಳೀಯ ಪ್ರಮುಖರು, ಗೋಪಾಡಿಯ ಮಹಿಳಾ ಭಜನಾ ಕುಣಿತ ತಂಡದವರು ಮತ್ತು ಕುಂದಾಪುರದ ಚಂಡೆ ತಂಡದ ಸದಸ್ಯರು ಉಪಸ್ಥಿತರಿದ್ದರು. ನಾಗೇಂದ್ರ ಗಾಣಿಗ ಇವರ ನಿರ್ದೆಶನದಲ್ಲಿ ಮೂಡಿಬಂದ ಈ ಸಿನಿಮಾಕ್ಕೆ ಕೆಜಿಎಫ್ ಮ್ಯೂಸಿಕ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕುಂಭಾಸಿಯ ಮಕ್ಕಳ ಮನೆಯಲ್ಲಿ ಕೊರಗ ಸಮುದಾಯದ ಸಂಸ್ಕೃತಿ ಹಾಗೂ ಸಂಪ್ರಾದಾಯ ಬೆಳಕಿನ ಹಬ್ಬ ದೀಪಾವಳಿ ಬೊಲ್ಪು ಎನ್ನುವ ಕಾರ್ಯಕ್ರಮದ ಮೂಲಕ ವಿಶಿಷ್ಟವಾಗಿ ಅನಾವರಣಗೊಂಡಿತು. ಆದಿವಾಸಿಗಳಾದ ಕೊರಗ ಸಮುದಾಯ ಕಾಡಿನ ಜೊತೆಗಿನ ನಂಟು, ಕರಾವಳಿಯ ಬದುಕಿನ ಜೊತೆ ಹಾಸುಹೊಕ್ಕಾದ ಅವರ ನಡೆ ನುಡಿ ಆಚಾರ ವಿಚಾರ ಪರಿಶುದ್ಧ ಸಂಪ್ರಾದಾಯಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಆಯೋಜಿಸಲಾದ ಕಾರ್ಯಕ್ರದಲ್ಲಿ ಕೊರಗ ಸಮುದಾಯದ ಯುವ ಪೀಳಿಗೆಗೆ ಸಮುದಾಯದ ಸಂಸ್ಕೃತಿ ಸಂಪ್ರದಾಯಗಳನ್ನು ಬೆಳಕು ಚೆಲ್ಲುವ ಮೂಲಕ ಹಿರಿಯರು ಈ ಹಿಂದೆ ನಡೆಸಿದ ಜೀವನದ ಪದ್ಧತಿ ಹಾಗೂ ದೈವಗಳ ಆರಾಧನೆ ಮತ್ತು ಅವರ ಕಟ್ಟಿಕೊಂಡ ಕಾನನದೊಳಗಿನ ಮಾನವೀಯ ಮೌಲ್ಯಗಳ ಪ್ರಕೃತಿಕ ಸಂಬಂಧಗಳು ಮತ್ತು ಬದುಕಿನ ಬುತ್ತಿಗೆ ದಾರಿ ತೋರಿಸಿದ ಪರಿಕರಗಳನ್ನು ತಯಾರಿಸುವ ಅವರ ಕರಕುಶಲ ಕಲೆಗಳ ವೈಶಿಷ್ಟ್ಯವನ್ನು ಪೂಜಿಸುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು. ಹಿಂದಿನ ಕಾಲದಲ್ಲಿ ಕೊರಗ ಸಮುದಾಯ ಕೃಷಿ ಕುಟುಂಬವಾಗಿಲ್ಲವಾದರೂ ಕೂಡ ಕೃಷಿ ಬೆಳೆದ ಸಂದರ್ಭದಲ್ಲಿ ಹಾಗೂ ಭತ್ತ ಕಟಾವು ಮಾಡಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಸಂಘಟಿತ ವಲಯವಾದ ಮೀನುಗಾರಿಕೆ ವಲಯವನ್ನು ಸಂಘಟಿತ ವಲಯವಾಗಿ ರೂಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ-ಮತ್ಸ್ಯ ಕಿಸಾನ್ ಸಮೃದ್ಧಿ ಸಹ ಯೋಜನೆಯಡಿ ಮೀನುಗಾರರು, ಮೀನು ಕೃಷಿಕರು, ಮೀನು ಕಾರ್ಮಿಕರು, ಮೀನು ಮಾರಾಟಗಾರರು, ಮೀನು ಸಾಗಾಣಿಕೆ ಮಾಡುವವರು, ಮೀನು ಸಂಸ್ಕರಣಾ ಘಟಕಗಳು, ಮೀನು ಆಧಾರಿತ ಸೂಕ್ಷ್ಮ ಅಥವಾ ಸಣ್ಣ ಉದ್ಯಮಗಳು, ಐಸ್ ಪೂರೈಕೆದಾರರು ಹಾಗೂ ಮೀನುಗಾರಿಕೆ ವಲಯಕ್ಕೆ ಸಂಬಂಧಿಸಿದ ಇತರೆ ಚಟುವಟಿಕೆಗಳಲ್ಲಿ ನಿರತರಾದ ಪ್ರತಿಯೋರ್ವರೂ ನ್ಯಾಶನಲ್ ಫಿಶರೀಸ್ ಡಿಜಿಟಲ್ ಪ್ಲಾಟ್ ಫಾರ್ಮ್ (ಓಈಆP) ಪೋರ್ಟಲ್ ನಲ್ಲಿ ನೇರವಾಗಿ ಅಥವಾ ಮೀನುಗಾರಿಕೆ ಸಹಕಾರಿ ಸಂಘಗಳ ಮೂಲಕ ಅಥವಾ ಸಾಮಾನ್ಯ ಸೇವಾ ಕೇಂದ್ರದ (ಅSಅ) ಮೂಲಕ ಶುಲ್ಕ ರಹಿತವಾಗಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನ್ಯಾಶನಲ್ ಫಿಶರೀಸ್ ಡಿಜಿಟಲ್ ಪ್ಲಾಟ್ ಫಾರ್ಮ್ (ಓಈಆP) ಪೋರ್ಟಲ್ ನಲ್ಲಿ ನೋಂದಾಯಿಸಲು ಹೆಚ್ಚುವರಿ ಶುಲ್ಕ ವಿಧಿಸುವ/ ವಿಧಿಸಿರುವ/ ವಿಧಿಸುತ್ತಿರುವ ಮೀನುಗಾರಿಕೆ ಸಹಕಾರಿ ಸಂಘಗಳು ಹಾಗೂ ಸಾಮಾನ್ಯ ಸೇವಾ ಕೇಂದ್ರಗಳ ಮೇಲೆ ಉಡುಪಿ, ಕುಂದಾಪುರ ಮತ್ತು ಕಾರ್ಕಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮಂಗಳೂರು ಹಾಗೂ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಯ ಇವರ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಸುಳ್ಯ ತಾಲೂಕನ್ನು ಪ್ರತಿನಿಧಿಸಿದ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ತಂಡವನ್ನು 35-20, 35-5 ಅಂಕಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಸುಳ್ಯ ತಾಲೂಕನ್ನು ಪ್ರತಿನಿಧಿಸಿದ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಯ ತಂಡವನ್ನು 35-12, 35-10 ಅಂಕಗಳಿಂದ ಸೋಲಿಸಿ 19ನೇ ಬಾರಿಗೆ ಅವಳಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಆಳ್ವಾಸ್ ಬಾಲಕರ ವಿಭಾಗದಲ್ಲಿ ಆಕಾಶ್ ಉತ್ತಮ ರಕ್ಷಣಾಕಾರ, ಲಿಖಿತ್ ಉತ್ತಮ ಆಕ್ರಮಣಕಾರ ಹಾಗೂ ಬಾಲಕಿಯರ ವಿಭಾಗದಲ್ಲಿ ಲಾಂಛನ ಉತ್ತಮ ರಕ್ಷಣಾಕರ್ತಿ, ಶಾಲಿನಿ ಉತ್ತಮ ಆಕ್ರಮಣಕಾರ್ತಿ ಪ್ರಶಸ್ತಿ ಪಡೆದರು.  ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಶಿಕ್ಷಕರ ಸಂಘದ ಸಹಯೋಗದಲ್ಲಿ “ಹೊಸ ಪೀಳಿಗೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಸಲಹೆ ನೀಡುವ ಕಲೆ” ಕುರಿತು ಕಾರ್ಯಾಗಾರ ನಡೆಯಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಎನ್.ಎಮ್.ಎ.ಎಮ್.ಐ.ಟಿ ಇದರ ಆಪ್ತ ಸಮಾಲೋಚಕರೋದ ಅಂಕಿತ್ ಎಸ್.ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಕರು ಹೇಳುವ ವಿಚಾರಗಳು ಪರಿಣಾಮಕಾರಿಯಾಗಿ ಅವರಿಗೆ ತಲುಪುವ ಮತ್ತು ಅರ್ಥವಾಗುವ ರೀತಿಯಲ್ಲಿ ಇರಬೇಕು. ವಿದ್ಯಾರ್ಥಿ ಸಮುದಾಯದ ಮನಸ್ಥಿತಿಯನ್ನು ಅರಿಯುವ ಪ್ರಯತ್ನವನ್ನು ಮೊದಲು ಮಾಡಬೇಕು. ಅವರು ಆಸಕ್ತಿಯನ್ನು ಅರಿತು ಅದಕ್ಕೆ ತಕ್ಕ ರೀತಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪಾಠಗಳನ್ನು ಮಾಡಬೇಕು. ಈ ನೆಲೆಯಲ್ಲಿ ಶಿಕ್ಷಕರ ಸಾಕಷ್ಟು ಹೊಸ ನೆಲೆಯಲ್ಲಿ ಯೋಚಿಸಬೇಕು. ಮತ್ತು ಅದೇ ರೀತಿ ತಯಾರಿ ನಡೆಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಯು.ಎಸ್.ಶೆಣೈ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸತ್ಯನಾರಾಯಣ, ಶಿಕ್ಷಕರ ಸಂಘದ ಉಪಾಧ್ಯಕ್ಷ ವಿದ್ಯಾಧರ ಉಪಸ್ಥಿತರಿದ್ದರು. ಭಂಡಾರ್ಕಾರ್ಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವೇಗದಲ್ಲಿ ಚಲಿಸುತ್ತಿದ್ದ ಟಿಪ್ಪರ್ ಅಭಿಮುಖವಾಗಿ ಬರುತ್ತಿದ್ದ ಈಚರ್ ವಾಹನ, ಕಾರು ಹಾಗೂ ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದ ಘಟನೆ ಇಲ್ಲಿನ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಣ್ಸೆಮಕ್ಕಿ – ಹಾಲಾಡಿ ಪ್ರಮುಖ ಸಂಪರ್ಕ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ಹುಣ್ಸೆಮಕ್ಕಿಯಿಂದ ತೆಕ್ಕಟ್ಟೆ ಕಡೆಗೆ ಅತೀ ವೇಗದಿಂದ ಚಲಿಸುತ್ತಿದ್ದ ಟಿಪ್ಪರ್ ಮೊದಲು ಎದುರಿನಿಂದ ಬರುತ್ತಿದ್ದ ಈಚರ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಅನಂತರ ಮುಂಭಾಗದಲ್ಲಿ ಚಲಿಸುತ್ತಿದ್ದ ಸ್ಯಾಂಟ್ರೋ ಝಿಂಗ್ ಕಾರಿಗೆ ಢಿಕ್ಕಿ ಹೊಡೆದುಕೊಂಡು ಎಳೆದು ಸಾಗಿದೆ. ಇದೇ ವೇಳೆ ಕೋಟೇಶ್ವರದಿಂದ ಬಿದ್ಕಲ್‌ಕಟ್ಟೆ ಕಡೆಗೆ ಸಾಗುತ್ತಿದ್ದ ಮಾರುತಿ ಸುಜುಕಿ ಸೂಪರ್ ಕ್ಯಾರಿ ಪಿಕ್‌ಅಪ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರು ಹಾಗೂ ಪಿಕಪ್ ವಾಹನಗಳು ನಜ್ಜುಗುಜ್ಜಾಗಿದೆ. ಪಿಕಪ್ ವಾಹನ ಆಯತಪ್ಪಿ ಚರಂಡಿಗೆ ಉರುಳಿ ಬಿದ್ದಿದೆ. ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದೆ. ಟಿಪ್ಪರ್ ಚಾಲಕ ಅತಿವೇಗದಿಂದ ಬಂದು ಈಚರ್ ಹಾಗೂ ಸ್ಯಾಂಟ್ರೋ ಝಿಂಗ್ ಕಾರಿಗೆ ಢಿಕ್ಕಿ…

Read More