Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಉಡುಪಿ ಜಿಲ್ಲೆಯಲ್ಲಿ ಅಕ್ಟೋಬರ್ 1ರಿಂದ ಅನ್ವಯ ಆಗುವಂತೆ ಆಟೋ ರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಿ ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆದೇಶಿಸಿದೆ. ಈ ಪರಿಷ್ಕೃತ ದರದಂತೆ 1.5ಕಿ.ಮೀ.ವರೆಗೆ ಕನಿಷ್ಠ ದರವನ್ನು 40 ರೂ.ಗೆ ಏರಿಸಲಾಗಿದೆ. ನಂತರದ ಪ್ರತಿ ಕಿ.ಮೀ.ಗೆ 20ರೂ. ದರ ನಿಗದಿ ಪಡಿಸಲಾಗಿದ್ದು ಅಟೋರಿಕ್ಷಾ ಚಾಲಕ, ಮಾಲಕರಿಗೂ ಪ್ರಮುಖ ಸೂಚನೆಯನ್ನು ನೀಡಲಾಗಿದೆ. ಜಿಲ್ಲೆಯ ಎಲ್ಲಾ ಅಟೋರಿಕ್ಷಾ ಚಾಲಕ, ಮಾಲಕರು ತಮ್ಮ ಅಟೋರಿಕ್ಷಾಗಳಿಗೆ ಕಾನೂನಿನ ಪ್ರಕಾರ ಅನುಮತಿ ಇರುವ ಫ್ಲಾಗ್ ಮೀಟರ್ ಕಡ್ಡಾಯವಾಗಿ ಅಳವಡಿಸಿಕೊಂಡು ಪರಿಷ್ಕೃತ ದರಕ್ಕೆ ಅನುಗುಣವಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಸೆ.31ರೊಳಗೆ ಕಡ್ಡಾಯವಾಗಿ ರಿಕ್ಯಾಲೀಬರೇಷನ್ ಹಾಗೂ ಸೀಲ್ ಮಾಡಿಸಿಕೊಳ್ಳುವಂತೆ, ತಪ್ಪಿದರೆ ಕಾನೂನು ಕ್ರಮ ಎದುರಿಸುವಂತೆ ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿ ರವಿಶಂಕರ್ ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read More

ನಾಗೂರಿನಲ್ಲಿ ಯಕ್ಷಗಾನ ತಾಳಮದ್ದಲೆ ಸಪ್ತಾಹ ಉದ್ಘಾಟಿಸಿ ಅಭಿಮತ ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಯಕ್ಷಗಾನ, ತಾಳಮದ್ದಲೆಯಂತಹ ಹತ್ತಾರು ಕಲಾ ಪ್ರಾಕಾರಗಳು ಸಾಂಸ್ಕೃತಿಕ ತಳಹದಿಯಲ್ಲಿ ಬೆಳೆದು ಬಂದಿದೆ. ಕಾಲದ ಆಘಾತಗಳನ್ನು ತಡೆದು ನಿಲ್ಲುವ ಶಕ್ತಿ ಸತ್ವಭರಿತ ಕಲೆಯಾದ ಯಕ್ಷಗಾನಕ್ಕಿದೆ ಎಂದು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಧಾರೇಶ್ವರ ಯಕ್ಷಬಳಗ ಚಾರಿಟೇಬಲ್ ಟ್ರಸ್ಟ್ ಪ್ರಸ್ತುತಿಯಲ್ಲಿ ಕಿರಿಮಂಜೇಶ್ವರ-ನಾಗೂರು ಸುತ್ತಲಿನ ನಾಗರಿಕರ ಸಹಯೋಗದಲ್ಲಿ ನಾಗೂರು ಒಡೆಯರ ಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದ ಕೋಟ ವೈಕುಂಠ ನಾಯ್ಕರ ಸ್ಮರಣ ವೇದಿಕೆಯಲ್ಲಿ ನಡೆದ ೮ನೇ ವರ್ಷದ ಯಕ್ಷಗಾನ ತಾಳಮದ್ದಲೆ ಸಪ್ತಾಹ ಉದ್ಘಾಟಿಸಿ ಮಾತನಾಡಿದರು. ಹಿಂದಿನ ಪರಂಪರೆಯ ಪ್ರದರ್ಶನಗಳಿಗೆ ಹೋಲಿಸಿದಾಗ ಈಗಿನವು ಅಂತ:ಸತ್ವ ಕಳೆದುಕೊಂಡಿವೆ ಎಂಬ ಟೀಕೆ ಇದೆ. ಯಕ್ಷಗಾನ ತಾಳಮದ್ದಲೆ ಪುರಾಣಗಳನ್ನು ಪ್ರತಿಪಾದಿಸುವ ತತ್ವಾದರ್ಶಗಳನ್ನು ತೆರೆದಿಡುತ್ತದೆ. ಪುರಾಣಗಳ ಮರು ಅವಲೋಕನ ಮತ್ತು ಮರುಸೃಷ್ಟಿಯ ಮೂಲಕ ಅವುಗಳಲ್ಲಿ ಸಮಕಾಲೀನ ಸನ್ನಿವೇಶಗಳಿಗೆ ಮತ್ತು ಬದುಕಿಗೆ ಅನ್ವಯವಾಗುವ ವಿಚಾರಗಳನ್ನು ಹೊರಗೆಡವಲಾಗುತ್ತದೆ. ಆದುದರಿಂದ ಅದು ನಿಜ ಅರ್ಥದಲ್ಲಿ ಒಂದು ಜ್ಞಾನಯಜ್ಞವಾಗಿದೆ ಎಂದರು. ಬೈಂದೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಕುಂದಾಪುರದ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆಯಿದೆ. ಸಂಘದ ಅಧ್ಯಕ್ಷರಾದ ಜಾನ್ಸನ್ ಡಿ’ಅಲ್ಮೇಡಾ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು 2022ರ ಆಗಸ್ಟ್ ಅಂತ್ಯಕ್ಕೆ ಒಟ್ಟು ರೂ.130 ಕೋಟಿ ಠೇವಣಿ ಹಾಗೂ ರೂ.106 ಕೋಟಿ ಸಾಲ ಹೊಂದಿದೆ. ಒಟ್ಟು ರೂಪಾಯಿ 500 ಕೋಟಿ ವ್ಯವಹಾರ ಮಾಡಲಾಗಿದ್ದು, ರೂ. 2.11 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ. ಸಂಘದ ಸದಸ್ಯರಿಗೆ ಶೇ. 20% ಡಿವಿಡೆಂಡ್ ಘೋಷಿಸಲಾಗುತ್ತಿದೆ ಎಂದರು. ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೊಸೈಟಿಯನ್ನು ಮುಂದಿನ ದಿನಗಳಲ್ಲಿ ಇತರ ಜಿಲ್ಲೆಗಳಿಗೆ ವಿಸ್ತರಿಸಲು ಹಾಗೂ ಬಾಕಿ ಇರುವ ಶಾಖೆಗಳಿಗೆ ಸ್ವಂತ ಕಟ್ಟಡ, ಗ್ರಾಹಕರ ಅನುಕೂಲಕ್ಕಾಗಿ ಹೊಸ ಶಾಖೆ, ಸಂಘದ ಮುಂದಿನ ಭವಿಷ್ಯಕ್ಕಾಗಿ ಕುಂದಾಪುರದ ಆಸುಪಾಸಿನಲ್ಲಿ ಒಂದು ಸ್ವಂತ ಜಾಗ ಖರೀದಿ, ಸಂಘದ ಪ್ರಧಾನ ಕಛೇರಿಯ ಮೂರನೇ ಅಂತಸ್ತಿನಲ್ಲಿ ಸಭಾಂಗಣ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಸಂಘದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಶಾಲೆಬಾಗಿಲು ಮಾತ್ರಶ್ರೀ ಸಭಾಭವನದಲ್ಲಿ 18ನೇ ಜೇಸಿ ಸಪ್ತಾಹ ‘ಸಮ್ಮಿಲನ-2022’ ಭಾನುವಾರ ಉದ್ಘಾಟನೆಗೊಂಡಿತು. ಶಾಸಕರಾದ ಬಿ.ಎಮ್.ಸುಕುಮಾರ್ ಶೆಟ್ಟಿ ಅವರು ಸಪ್ತಾಹವನ್ನು ಉದ್ಘಾಟಿಸಿ ಶುಭಹಾರೈಸಿದರು. ಜೆಸಿಐ ಉಪ್ಪುಂದದ ಅಧ್ಯಕ್ಷರಾದ ನಾಗರಾಜ್ ಪೂಜಾರಿ ಉಬ್ಜೇರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ಬೈಂದೂರು ಬಂಟರ ಸಂಘದ ಅಧ್ಯಕ್ಷರಾದ ನಾಕಟ್ಟೆ ಜಗನ್ನಾಥ ಶೆಟ್ಟಿ, ನಿವೃತ್ತ ಶಿಕ್ಷಕರಾದ ಶ್ರೀನಿವಾಸ ಪೂಜಾರಿ ಉಬ್ಜೇರಿ, ಉಪ್ಪುಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮಿ, ಜಿಲ್ಲಾ ರೋಟರಿ ಝೋನಲ್ ಲೆಫ್ಟಿನೆಂಟ್ ಡಾ. ಪ್ರವೀಣ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಜಗನ್ನಾಥ. ಎಂ., ಬೈಂದೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿಯಾದ ಅರುಣ್ ಕುಮಾರ್ ಶಿರೂರು, ವಲಯ 15ರ ಸೀನಿಯರ್ ಮೆಂಬರ್ ಅಷೋಶಿಯೇಷನ್ ಉಪಾಧ್ಯಕ್ಷ ಯು. ಪ್ರಕಾಶ್ ಭಟ್, ಸಪ್ತಾಹ ಸಭಾಪತಿ ಜೆಸಿ ಪುರಂದರ್ ಖಾರ್ವಿ, ನಿಕಟ ಪೂರ್ವಾಧ್ಯಕ್ಷರಾದ ಜೆಸಿ ಪುರುಷೋತ್ತಮದಾಸ್, ಮಂಗೇಶ ಶ್ಯಾನುಭಾಗ್, ಸಪ್ತಾಹ ಖಜಾಂಜಿ ಪ್ತದೀಪ್ ಕುಮಾರ್ ಶೆಟ್ಟಿ, ಜೇಸಿರೇಟ್ ಅಧ್ಯಕ್ಷೆ ಸುಪರ್ಣ ಯೋಜನಾಧಿಕಾರಿಗಳಾದ ಗಣೇಶ್ ಗಾಣಿಗ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಎಲ್ಲಾ ವೃತ್ತಿಯವರನ್ನು ಪ್ರತಿವರ್ಷ ಗುರುತಿಸಿ ಗೌರವಿಸುತ್ತಿರುವುದರ ಜೊತೆಗೆ ಗ್ರಾಹಕರ ಬೇಡಿಕೆಯಂತೆ ಉತ್ತಮ ಸೇವೆ ನೀಡುತ್ತಿರುವುದು ಶ್ಲಾಘನೀಯ. ಕಳೆದ ೧೦೦ ವರ್ಷಗಳಿಂದ ಪಾರದರ್ಶಕ ಆಡಳಿತ ಮೂಲಕ ಮನೆ ಮಾತಾಗಿರುವ ಸಹಕಾರಿಯು ಉತ್ತಮ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳನ್ನು ಹೊಂದಿ ಜನಪರ ಕಾರ್ಯಕ್ರಮಗಳ ಮೂಲಕ ಉತ್ತಮ ಸೇವೆ ನೀಡುತ್ತಿರುವುದು ಅಭಿನಂದನೀಯ ಎಂದು ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಸುಗುಣಾ ಆರ್. ಕೆ. ಹೇಳಿದರು. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಗಂಗೊಳ್ಳಿ ಪ್ರಧಾನ ಕಛೇರಿಯ ಬೈಲೂರು ಮಂಜುನಾಥ ಶೆಣೈ ಸಭಾಭವನದಲ್ಲಿ ಜರಗಿದ ಅಭಿನಂದನಾ ಸಮಾರಂಭದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎಚ್.ಗಣೇಶ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ವತಿಯಿಂದ ಗಂಗೊಳ್ಳಿ ಅಂಚೆ ಕಛೇರಿಯ ಪೋಸ್ಟ್‌ಮ್ಯಾನ್‌ಗಳಾದ ಶ್ವೇತಾ, ಶಶಿಕಲಾ ಮತ್ತು ಶರಧಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಹಕಾರಿಯ ಉಪಾಧ್ಯಕ್ಷ ಜಿ. ವಿಶ್ವನಾಥ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪುಟ್ಟಪುಟ್ಟ ಕಲಾಕೃತಿಗಳು ಮಕ್ಕಳ ಕಲಿಕೆ ಮತ್ತು ಕ್ರಿಯಾಶೀಲತೆ ವೃದ್ಧಿಗೆ ಪೂರಕವಾಗಿವೆ. ಅಂತಹ ನೂರಾರು ಕೃತಿಗಳನ್ನು ನೋಡುವುದೆಂದರೆ ಕಣ್ಣಿಗೆ ಹಬ್ಬ ಎಂದು ಗಂಗೊಳ್ಳಿ ಕಾರ್ಮೆಲ್ ಕಾನ್ವೆಂಟಿನ ಸಿ. ಕೆರೋನಾ ಎ.ಸಿ ಹೇಳಿದರು. ತ್ರಾಸಿಯ ಡಾನ್ ಬೋಸ್ಕೊ ಕಿಂಡರ್‌ಗಾರ್ಟನ್ ಶಾಲೆಯ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಆಕರ್ಷಕ ವಸ್ತುಪ್ರದರ್ಶನವನ್ನು ಉದ್ಘಾಟಿಸಿದ ಅವರು ತಮ್ಮ ಮೆಚ್ಚುಗೆ ಸೂಚಿಸಿದರು. ಶಾಲೆಯ ಪ್ರಾಂಶುಪಾಲ ಹಾಗೂ ರೆಕ್ಟರ್ ಫಾ. ಮ್ಯಾಕ್ಸಿಂ ಡಿಸೋಜ, ಆಡಳಿತಗಾರ ಫಾ. ರೋಶನ್ ಡಿಸೋಜ ಮತ್ತು ಮಕ್ಕಳ ಪೋಷಕರು ಇದ್ದರು. ಸಿ. ಕೆರೋನಾ ಮತ್ತು ಗಂಗೊಳ್ಳಿಯ ಪ್ರೀತಿ ಪ್ರದರ್ಶಿನಿಗಳ ಮೌಲ್ಯ ಮಾಪನ ಮಾಡಿದರು. ವ್ಯರ್ಥ ಎಂದು ಎಸೆಯುವ ವಸ್ತುಗಳಿಂದ ಕೆ.ಜಿ ತರಗತಿಯ ಮಕ್ಕಳು ಮತ್ತು ಪೋಷಕರು ಈ ಕಲಾಕೃತಿಗಳನ್ನು ತಯಾರಿಸಿದ್ದರು. ಅವುಗಳಲ್ಲಿ ಹಲವು ಪರಿಸರ ಕುರಿತಾದ ವಿಷಯಗಳಿಗೆ ಸಂಬಂಧಿಸಿದ್ದರೆ, ಇನ್ನುಳಿದವು ನಿತ್ಯೋಪಯೋಗಿ ಎನಿಸುವ ವಸ್ತುಗಳು ಹಾಗೂ ಸಾಮಾನ್ಯ ಕಲಾಕೃತಿಗಳಾಗಿದ್ದುವು. ಪ್ರದರ್ಶನವನ್ನು ಕೆ.ಜಿ ತರಗತಿಯ ಶಿಕ್ಷಕಿಯರಾದ ಶೀತಲ್ ಒಲಿವೇರಾ, ಸುಜಾತಾ ಡಯಾಸ್, ಫಿಲೋಮಿನಾ ಒಲಿವೇರಾ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತ್ರಾಸಿ ಕಂಚಗೋಡು ಶ್ರೀರಾಮ್ ದೇವಸ್ಥಾನದಲ್ಲಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ವೀರ ಸಾವರ್ಕರ್ ಅವರ ಬಗೆಗಿನ ಪುಸ್ತಕ ವಿತರಣೆ ಮಾಡಲಾಯಿತು. ಬೈಂದೂರು ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಪ್ರಣಯ ಕುಮಾರ್ ಶೆಟ್ಟಿ ಸ್ಥಳೀಯರಿಗೆ ಪುಸ್ತಕ ವಿತರಿಸಿದರು. ದೇವಸ್ಥಾನದ ಅಧ್ಯಕ್ಷ ಮೋಹನ್ ಖಾರ್ವಿ, ಹಿಂದೂ ಮುಖಂಡ ರಾಘು ಆರಾಟೆ. ರಾಮದಾಸ್ ಕಂಚಕೊಡು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಸೆ.18: ಕೇಂದ್ರದ ಪ್ರವಾಸೋದ್ಯಮ ಇಲಾಖೆ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಕುಂದಾಪುರ ಪುರಸಭೆ, ತ್ರಾಸಿ, ಮರವಂತೆ ಗ್ರಾ.ಪಂ. ಬೈಂದೂರು ಪಟ್ಟಣ ಪಂಚಾಯತ್, ಸೇವಾ ಸಂಗಮ ಟ್ರಸ್ಟ್, ರಾಷ್ಟ್ರಸೇವಿಕಾ ಸಮಿತಿ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ, ಎಫ್ಎಸ್ಎಲ್ ಇಂಡಿಯಾ, ಕರಾವಳಿ ಕಾವಲು ಪೊಲೀಸ್ ಪಡೆ, ಅರಣ್ಯ ಇಲಾಖೆ, ಇನ್ನಿತರ ಸಂಘ-ಸಂಸ್ಥೆಗಳ ಜತೆಗೂಡಿ ಬೈಂದೂರು ಸೋಮೇಶ್ವರ ಕಡಲ ತೀರದಲ್ಲಿ ಶನಿವಾರ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಸೋಮೇಶ್ವರ ಕಡಲ ತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಬಾಟಲಿಗಳು, ಚಪ್ಪಲಿ ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಿಸಿ ಕಡಲ ತೀರವನ್ನು ಸ್ವಚ್ಛಗೊಳಿಸಿದರು. ವಿವಿಧ ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳ 300 ಅಧಿಕ ಮಂದಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಬೈಂದೂರು ಪಟ್ಟಣ ಪಂಚಾಯತ್ ಪೌರ ಕಾರ್ಮಿಕರಾದ ಕಮಲ, ಸುವರ್ಣ, ಉಮೇಶ್, ಹರೀಶ್ ಹಾಗೂ ಗಿರೀಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಸೆ.17: ತಾಲೂಕಿನ ಶಿರೂರು ಟೋಲ್ ಬಳಿ ವಿಶ್ರಾಂತಿಗಾಗಿ ಚಾಲಕ ಲಾರಿ ನಿಲ್ಲಿಸಿದ್ದ ಸಂದರ್ಭ ಅದರ ಟಯರ್’ಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಮತ್ತು ತಂಡ ಮೂವರು ಆರೋಪಿಗಳನ್ನು ಶನಿವಾರ ಬಂಧಿಸಿದೆ. ಸೆ.14ರ ರಾತ್ರಿ ಶಿರೂರು ಟೋಲ್ ಬಳಿ ನಿಲ್ಲಿಸಲಾಗಿದ್ದ 16 ಚಕ್ರದ ಟಾಟಾ ಲಾರಿಯ, 1.85 ಲಕ್ಷ ಮೌಲ್ಯದ 5 ಚಕ್ರಗಳನ್ನು ಕಳವುಗೈಯಲಾಗಿತ್ತು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು ಎರಡೇ ದಿನದಲ್ಲಿ ಆರೋಪಿಗಳಾದ ಮಹಾರಾಷ್ಟದ ಶ್ಯಾಮ ಶಂಕರ ಶಿಂಧೆ (24), ಆಕಾಶ್ ಬಪ್ಪ ಶಿಂಧೆ (19), ಅಮೂಲ್ ರಾಮ ಕಾಳೆ (22) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಇತರ ಠಾಣೆಗಳಲ್ಲಿ ಬೇರೆ ಬೇರೆ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಆರೋಪಿತರಿಂದ ಕಳವಾದ ಚಕ್ರ 5 ಒಟ್ಟು ಮೌಲ್ಯ 1,85,000/- ಹಾಗೂ ಕೃತ್ಯಕ್ಕೆ ಬಳಸಿದ ಅಶೋಕ್ ಲೈಲ್ಯಾಂಡ್ ಲಾರಿ ಮೌಲ್ಯ 35,00,000/- ವಶಪಡಿಸಿಕೊಂಡ ಒಟ್ಟು ಸ್ವತ್ತುಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಸೆ.17: ಕೇಂದ್ರದ ಪ್ರವಾಸೋದ್ಯಮ ಇಲಾಖೆ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಕುಂದಾಪುರ ಪುರಸಭೆ, ತ್ರಾಸಿ, ಮರವಂತೆ ಗ್ರಾ.ಪಂ. ಬೈಂದೂರು ಪಟ್ಟಣ ಪಂಚಾಯತ್, ಸೇವಾ ಸಂಗಮ ಟ್ರಸ್ಟ್, ರಾಷ್ಟ್ರಸೇವಿಕಾ ಸಮಿತಿ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ, ಎಫ್ಎಸ್ಎಲ್ ಇಂಡಿಯಾ, ಕರಾವಳಿ ಕಾವಲು ಪೊಲೀಸ್ ಪಡೆ, ಅರಣ್ಯ ಇಲಾಖೆ, ಇನ್ನಿತರ ಸಂಘ-ಸಂಸ್ಥೆಗಳ ಜತೆಗೂಡಿ ಕೋಡಿ ಹಾಗೂ ಮರವಂತೆಯಲ್ಲಿ ಶನಿವಾರ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕೋಡಿ ಹಾಗೂ ಮರವಂತೆಯ ಕಡಲ ತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಬಾಟಲಿಗಳು, ಚಪ್ಪಲಿ ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಿಸಿ ಕಡಲ ತೀರವನ್ನು ಸ್ವಚ್ಛಗೊಳಿಸಿದರು. ಪ್ರವಾಸೋದ್ಯಮ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಮಹಮ್ಮದ್ ಫಾರೂಕ್ ಮಾತನಾಡಿ, ಎಲ್ಲ ಕಡಲ ತೀರ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ನಮ್ಮ ಆದ್ಯತೆ. ಪ್ರಧಾನಿ ಮೋದಿಯವರು ಕರೆ ನೀಡಿದ ಸ್ವಚ್ಛಾ ಭಾರತ ಅಭಿಯಾನದ ಜಾಗೃತಿ ಎಲ್ಲೆಡೆ ಮೂಡಿದೆ. ಮುಖ್ಯವಾಗಿ ಯುವಕ- ಯುವತಿಯರು, ಸಂಘ-ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದವರು…

Read More