ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳೂರಿನ ಬಿಜೈ ಚರ್ಚ್ ಹಾಲ್‌ನಲ್ಲಿ ನಡೆದ ಜೇಸಿ ವಲಯ ಸಮ್ಮೇಳನದಲ್ಲಿ ಕೆ. ಕಾರ್ತಿಕೇಯ ಮಧ್ಯಸ್ಥ 2020 ರ ಸಾಲಿನ ಜೇಸಿ ವಲಯ 15ರ ನೂತನ ವಲಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಯುವ ಉದ್ಯಮಿಯಾಗಿರುವ ಇವರು ಸಂಘಟನಾ ಚತುರರಾಗಿದ್ದು, 2006ರಲ್ಲಿ ಜೇಸಿಐ ಕುಂದಾಪುರ ಸಿಟಿಯ ಸದಸ್ಯರಾಗಿ ಸೇರ್ಪಡೆಗೊಂಡು, ಜೇಸಿ ವಲಯದಲ್ಲಿ ಹೊಸ ಚೈತ್ಯನ್ಯ ಮೂಡಿಸಿದರು. ೨೦೦೮ ರಲ್ಲಿ ನಿರ್ದೇಶಕರಾಗಿ 2009ರಲ್ಲಿ ಉಪಾಧ್ಯಕ್ಷರಾಗಿ 2010 ರಲ್ಲಿ ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷರಾಗಿ ಮಾಡಿದ ದಾಖಲೆ ಕಾರ್ಯಕ್ರಮಗಳ ಸರಣಿ ಸಾಧನೆಗಾಗಿ ವಲಯ ಮಟ್ಟದ ಪ್ರಶಸ್ತಿಗಳ ಮಹಾಪೂರವೇ ಕುಂದಾಪುರಕ್ಕೆ ಹರಿದು ಬಂದಿತ್ತು. 2018ರ ವಲಯ ಅಭಿವೃದ್ಧಿ ಮತ್ತು ಬೆಳವಣಿಗೆಯ ನಿರ್ದೇಶಕರಾಗಿ ಕೆ. ಕಾರ್ತಿಕೇಯ ಮಧ್ಯಸ್ಥರ ನೇತೃತ್ವದಲ್ಲಿ ವಲಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಯನ್ನು ಗಳಿಸಿದ್ದು, 2019ರ ವಲಯ ಉಪಾಧ್ಯಕ್ಷರಾಗಿ ಇವರು ಮಾಡಿದ ಸಾಧನೆಗೆ ಇವರನ್ನು ವಲಯ 15ರ ಅಧ್ಯಕ್ಷ ಗಾಧಿ ಅಲಂಕರಿಸುವಂತೆ ಮಾಡಿತು. ಇವರು ೧೨ ವಲಯ ಸಮ್ಮೇಳನ ೩ ರಾಷ್ಟ್ರೀಯ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಸ್ವಯಂ ಘೋಷಣೆಯಿಂದ ಅಥವಾ ಧರ್ಮ, ಜಾತಿಯ ಕಾರಣದಿಂದ ನಾಯಕರಾಗಲು ಸಾಧ್ಯವಿಲ್ಲ. ಬದಲಿಗೆ ಜನರು ಒಪ್ಪಿದರೆ ಮಾತ್ರ ನಿಜವಾದ ನಾಯಕರಾಗಲು ಸಾಧ್ಯ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಅವರು ಶುಕ್ರವಾರ ಬ್ರಹ್ಮಗಿರಿಯ ಎನ್‌ಐಎಸ್‌ಟಿ ನೆಹರು ಯುವ ಕೇಂದ್ರ ಸಂಘಟನಾ ಬೆಂಗಳೂರು, ನೆಹರು ಯುವ ಕೇಂದ್ರ ಉಡುಪಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ೧೫ ದಿನಗಳ ರಾಷ್ಟ್ರೀಯ ಯುವ ಸ್ವಯಂಸೇವಕರ ಪ್ರವೇಶ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು. ಭಾರತದಲ್ಲಿನ ಯುವ ಸಂಪತ್ತಿಗೆ ವಿಶ್ವವೇ ಹೆದರುತ್ತದೆ. ಇಲ್ಲನ ಶಿಕ್ಷಣ ಪದ್ಧತಿ ಹಾಗೂ ವಿಶ್ವದ ಪ್ರಮುಖ ಉದ್ಯೋಗಗಳಲ್ಲಿ ಭಾರತೀಯರೇ ಹೆಚ್ಚಿರುವುದು ಇದಕ್ಕೆ ಕಾರಣ. ಯುವ ಶಕ್ತಿ ಇಂತಹ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು, ಮೊಬೈಲ್ ವ್ಯಸನದಿಂದ ದೂರವಾಗಿ ಧನಾತ್ಮಕ ಚಿಂತನೆಯಿಂದ ದೇಶ ಕಟ್ಟಲು ಮುಂದಾಗಲಿ ಎಂದವರು ಆಶಿಸಿದರು. ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಜಿ. ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಉಡುಪಿ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ…
ಕುಂದಾಪ್ರ ಡಾಟ್ ಕಾಂ ವರದಿ. ಈಗ ಆನ್ಲೈನ್ ಶಾಪಿಂಗ್ ಭರಾಟೆ ಹೆಚ್ಚಿದೆ. ಯುವಜನರು ಆನ್ಲೈನ್ ಮೂಲಕವೇ ತಮಗೆ ಬೇಕಾದ್ದನ್ನು ಕೊಳ್ಳಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಅದೇ ಆನ್ಲೈನ್ ಮೂಲಕ ತನ್ನೂರಿನ ತಿಂಡಿಗಳು, ಸ್ಥಳೀಯ ಸಂಸ್ಕೃತಿ ಬಿಂಬಿಸುವ ವಸ್ತುಗಳು ದೊರೆಯುವಂತಾಗಿದ್ದರೆ ಅನ್ನುವ ಕನಸು ಎಷ್ಟೋ ಜನರಲ್ಲಿರುತ್ತದೆ. ಇಂತಾ ಕನಸನ್ನ ನನಸು ಮಾಡಲೆಂದೇ ಹುಟ್ಟಿಕೊಂಡಿದ್ದು – oormaniangadi.com ಎಂಬ ಕುಂದಾಪುರ ಮೂಲದ ಆನ್ಲೈನ್ ಶಾಪಿಂಗ್ ತಾಣ. ಈಗಾಗಲೇ ಕರ್ನಾಟಕ ಕರಾವಳಿ ಪ್ರದೇಶ ದಲ್ಲಿ ಸಾಫ್ಟ್ವೇರ್ ಡೆವಲಪ್ಮೆಂಟ್ , ವೆಬ್ ಡೆವಲಪ್ಮೆಂಟ್ , ಆಪ್ ಡೆವಲಪ್ಮೆಂಟ್ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿರುವ ಫೋರ್ಥ್ ಫೋಕಸ್ ಗ್ರೂಪ್ ತಂಡದ ಇನ್ನೊಂದು ಕೊಡುಗೆಯೇ ಈ “ಊರ್ಮನಿ ಅಂಗಡಿ” ಆರಂಭಗೊಂಡ ತಿಂಗಳೊಳಗೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆಯೇ ಸಿಕ್ಕಿದೆ. ನ್ಯಾಯಯುತ ಬೆಲೆಯೊಂದಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ತಲುಪಿಸುವ ಮೂಲಕ ಗ್ರಾಹಕರಿಂದ ವ್ಯಾಪಕ ಪ್ರಶಂಸೆಯನ್ನು ಪಡೆಯುತ್ತಿದೆ. ಭಾರತದೊಳಗೆ ಎಲ್ಲಾ ಪ್ರದೇಶಕ್ಕೂ 5 – 6 ದಿನಗಳೊಳಗೆ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಮರುಕಳಿಸಬೇಕೆನ್ನುವ ಸಂಸ್ಥೆ ಆಳ್ವಾಸ್. ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕøತಿಕವಾದ ಆಸಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ ಸಮಾಜಕ್ಕೆ ನಿಜವಾದ ಆಸ್ತಿಗಳನ್ನಾಗಿ ರೂಪಿಸುವ ಕನಸು, ಅದಕ್ಕೆ ಪೂರಕವಾದ ಕೆಲಸವನ್ನು ಮಾಡುವ ಮೂಲಕ ರಾಜ್ಯದಲ್ಲಿ ಅತ್ಯಂತ ಅನುಕರಣೀಯ ವ್ಯಕ್ತಿ ಮೋಹನ ಆಳ್ವ ಮತ್ತು ಸಂಸ್ಥೆ ಆಳ್ವಾಸ್ ಆಗಿದ್ದು ವಾರ್ಷಿಕವಾಗಿ ರೂ. 33.85 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿಗಳು ಹಾಗೂ ಸಮಾಜದ ಸೇವೆಯನ್ನು ಮಾಡುವಂತಹ ಉತ್ತಮ ಹಾಗೂ ಅಪರೂಪದ ಕೆಲಸವನ್ನು ಮಾಡುತ್ತಿರುವ ಆಳ್ವಾಸ್‍ಗೆ ಸದಾ ಬೆಂಬಲ ನೀಡುತ್ತೇವೆ ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. ಅವರು ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಸೋಮವಾರ ಆಯೋಜಿಸಲಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 50ಲಕ್ಷ ನೆರವು ಘೋಷಣೆ ಹಾಗೂ ಪ್ರತಿಷ್ಠಾನದ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕೊಡುಗೆಗಳ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಸಮಾರಂಭದಲ್ಲಿ ಆಶೀರ್ವಚನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸೆ.29ರಿಂದ ಅ8ರ ತನಕ ನಡೆಯಲಿರುವ ನವರಾತ್ರಿ ಉತ್ಸವಕ್ಕೆ ಸಕಲ ಸಿದ್ದತೆಗಳು ನಡೆದಿದೆ. ದೇವಳವು ಸಂಪೂರ್ಣ ಹೊಸ ವಿನ್ಯಾಸಗಳಿಂದ ಕೂಡಿದ ಪುಷ್ಪಾಲಂಕಾರ ಹಾಗೂ ವಿದ್ಯುದ್ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದೆ. ಮಹಾನವಮಿಯಂದು ಬೆಳಿಗ್ಗೆ ಚಂಡಿಕಾಯಾಗ, ಮಧ್ಯಾಹ್ನ ರಥೋತ್ಸವ ನಡೆಯಲಿದೆ. ವಿಜಯದಶಮಿಯಂದು ಬೆಳಿಗ್ಗೆ 4ರಿಂದ ವಿದ್ಯಾರಂಭ, ಅಪರಾಹ್ನ ನವಾನ್ನಪ್ರಾಶನ ಸಂಜೆ ಶ್ರೀ ಮೂಕಾಂಬಿಕೆಯ ವಿಜಯೋತ್ಸವ ಜರುಗಲಿದೆ. ಪ್ರತಿದಿನ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೇವಳದ ಸೌಪರ್ಣಿಕಾ ಮತ್ತು ಕಾಶೀ ಸ್ನಾನ ಘಟ್ಟದಲ್ಲಿ ಹೆಚ್ಚಿನ ಬೆಳಕಿನ ವ್ಯವಸ್ಥೆ ಹಾಗೂ ಭದ್ರತಾ ಸಿಬ್ಬಂದಿಗಳ ನಿಯೋಜನೆ, ಸಭಾಭವನದಲ್ಲಿ ಹೆಚ್ಚುವರಿ ಊಟದ ವ್ಯವಸ್ಥೆ ಜೊತೆಗೆ ವಾಹನ ನಿಲುಗಡೆ ಹಾಗೂ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು, ಸಿಸಿ ಕ್ಯಾಮೆರಾ ಮೇಲೆ ಹದ್ದಿನ ಕಣ್ಗಾವಲು ಇಂತಹ ಹಲವಾರು ವಿಚಾರಗಳ ಬಗ್ಗೆ ಈಗಾಗಲೇ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅವೈಜ್ಞಾನಿಕ ದಂಡ ವಿಧಿಸುವಿಕೆಗೆ ನಾಂದಿ ಹಾಡಿದ ಐಎಂವಿ ವಿಧೇಯಕ ತಿದ್ದುಪಡಿ ಮಸೂದೆ, ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ನೆನೆಗುದಿಗೆ ಬಿದ್ದಿರುವ ಪ್ಲೈ ಓವರ್ ಕಾಮಗಾರಿಯ ನಿರ್ಲಕ್ಷ್ಯತನಗಳನ್ನು ವಿರೋಧಿಸಿ ಕುಂದಾಪುರದ ಎಲ್ಲಾ ವಾಹನ ಚಾಲಕರು ಮತ್ತು ಮಾಲಕರು ಸಂಘಟಿತ ಹೋರಾಟ ನಡೆಸಿದ್ದಾರೆ. ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ(ಸಿಐಟಿಯು) ಕುಂದಾಪುರ. ಭಾರತೀಯ ಆಟೋ ರಿಕ್ಷಾ ಮಜ್ದೂರ್ ಸಂಘ(ಬಿಎಂಎಸ್) ಕುಂದಾಪುರ ಹಾಗೂ ಆಟೋ ರಿಕ್ಷಾ, ಟ್ಯಾಕ್ಸಿ, ಮೆಟಾಡೋರ್ ಡ್ರೈವರ್ಸ್ ಅಸೋಸಿಯೇಷನ್ಸ್ (ಇಂಟಕ್) ಕುಂದಾಪುರ ಇವರ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಕುಂದಾಪುರ ತಾಲುಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘಟನೆಗಳ ಸಮನ್ವಯ ಸಮಿತಿ ಪ್ರತಿಭಟನೆ ಆಯೋಜಿಸಿದ್ದರು. ರಾಜ್ಯ ಸರ್ಕಾರದ ದುಬಾರಿ ದಂಡ ಹಾಗೂ ಕೇಂದ್ರ ಮೋಟಾರು ವಾಹನ ಕಾಯ್ದೆ ೨೦೧೯ರ ತಿದ್ದುಪಡಿ ಮಸೂದೆಯನ್ನು ವಾಪಾಸ್ಸು ಪಡೆಯಬೇಕು. ೧೫ ವರ್ಷಗಳ ಹಳೆಯ ಆಟೋಗಳನ್ನು ರದ್ದುಪಡಿಸುತ್ತಿದ್ದು, ಹಳೆಯ ಆಟೋಗಳಿಗೆ ಕಂಪೆನಿಗಳಿಂದ ದರ ನಿಗಧಿಪಡಿಸಬೇಕು. ಸರ್ಕಾರ ಪ್ರೋತ್ಸಾಹಧನ ೫೦ ಸಾವಿರಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕುಂಭಾಸಿ ಆನೆಗುಡ್ಡೆ ದೇವಸ್ಥಾನದ ಮುಖಮಂಟಪದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದ ಸಂದರ್ಭ ಗಾಯಗೊಂಡ ಮಹಿಳೆಯೊಬ್ಬರನ್ನು ಉಪಚರಿಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಲ್ಲದೇ ಅಸ್ತವ್ಯಸ್ತಗೊಂಡಿದ್ದ ವಾಹನ ಸಂಚಾರವನ್ನು ಸುಗಮಗೊಳಿಸುವ ಮೂಲಕ ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಮಾನವೀಯತೆ ಮೆರೆದ ಘಟನೆ ಶನಿವಾರ ನಡೆದಿದೆ. ಆರೋಗ್ಯ ಸಚಿವ ಶ್ರೀರಾಮುಲು ಉಡುಪಿಯಿಂದ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಉದ್ಘಾಟನೆಗಾಗಿ ಕಾಯುತ್ತಿದ್ದ ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನಿಂದ ನಿರ್ಮಿಸಲಾದ ನೂತನ ಹೆರಿಗೆ ಆಸ್ಪತ್ರೆಯನ್ನು ಉದ್ಘಾಟಿಸಲು ಆಗಮಿಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಬರುತ್ತಿದ್ದ ವೇಳೆ ಕುಂಭಾಸಿ ಶ್ರೀ ಆನೆಗುಡ್ಡೆ ದೇವಸ್ಥಾನದ ದ್ವಾರಬಾಗಿಲಿನಲ್ಲಿ ಲಾರಿ ಬೈಕ್ ಹಾಗೂ ರಿಕ್ಷಾಗಳ ನಡುವೆ ಸಚಿವರ ಕಣ್ಣೆದುರೆ ಅಪಘಾತ ನಡೆದಿದೆ. ಕುಂಭಾಶಿ ರಸ್ತೆಯಲ್ಲಿ ಬೈಕ್ ಸವಾರರೋರ್ವರು ಲಾರಿಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದರು. ಇದೇ ಸಮಯದಲ್ಲಿ ಹಿಂದಿನಿಂದ ಬರುತ್ತಿದ್ದ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ಪಲ್ಟಿಯಾಯಿತು. ಆಗ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಗಾಯಗೊಂಡಿದ್ದರು. ಹೆದ್ದಾರಿಯ ನಡುವೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿರುವ ಕೆರೆಗೆ ಅಲಂಕಾರಿಕ ಮೀನು ಸಾಕಣಕೆಗೆ ಮೀನುಕಾರಿಕೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಸೆ.೨೫ ರಂದು ಮೀನುಗಳನ್ನು ಬಿಡುವುದರ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿ ಪ್ರವಾಸಿ ಸ್ಥಳದ ಕೆರೆಗಳಿಗೆ ಅಲಂಕಾರಿಕ ಮೀನುಗಳನ್ನು ಸಾಕಣಿಕೆ ಮಾಡುವುದರಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ,ಮುಂದಿನ ದಿನಗಳಲ್ಲಿ ಪ್ರವಾಸಿ ತಾಣದ ಕೆರೆ,ದೇಸ್ಥಾನದ ಕೆರೆಗಳಿಗೆ ಅಲಂಕಾರಿಕ ಮೀನು ಬಿಡುವ ಯೋಜನೆ ರೂಪಿಸಲಾಗುವುದೆಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು. ಇಲಾಖೆಯ ಉಪ ನಿರ್ದೇಕ ಗಣೇಶ್ ಮೀನು ಸಾಕಣಕೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಇಲಾಖೆಯ ಮುಖ್ಯಸ್ಥ ಶಿವಕುಮಾರ್, ಕಿರಣ್, ಚಂದ್ರಶೇಖರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ, ಪಿ.ಡಿ.ಓ ಶೈಲಾ ಎಸ್ ಪೂಜಾರಿ, ಕಾರಂತ ಪ್ರತಿಷ್ಥಾನದ ಟ್ರಸ್ಟಿ ಸುಬ್ರಾಯ್ ಆಚಾರ್ಯ, ಹಾಗೂ ಕಾರಂತ ಥೀಮ್ ಪಾರ್ಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಕಳವಾಡಿ ಯುವ ಗಾಯಕ ಸತೀಶ್ ರಾಮ್ ಕುಮಾರ್ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮಣಿಪಾಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸೆ.26ರಂದು ನಿಧನರಾದರು. ಸವಿ ಸವಿ ನೆನಪು ಕಲಾತಂಡವನ್ನು ಕಟ್ಟಿ ಸಾವಿರಾರು ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದ ಅವರು ಕಾರ್ಯಕ್ರಮ ಸಂಘಟನೆ, ನಿರೂಪಣೆ ಸೇರಿದಂತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಸೌಂಡ್ಸ್ & ಲೈಟಿಂಗ್ಸ್ ಉದ್ಯಮವನ್ನು ಮಾಡಿಕೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಾಲಾ ಕಾಲೇಜಿನಲ್ಲಿ ಉತ್ತಮ ಶಿಕ್ಷಣದ ಮೂಲಕ ಉತ್ತಮ ಬದುಕು ರೂಪಿಸುವ ಶಿಕ್ಷಕರಿಗೆ ಗೌರವ ಕೊಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಆದ್ಯ ಕರ್ತವ್ಯ. ತಂದೆ-ತಾಯಿಯ ಸಂಬಂಧದಂತೆ ಗುರು-ಶಿಷ್ಯರ ಸಂಬಂಧ ಅತ್ಯಂತ ಗೌರವಯುತವಾದುದು ಹಾಗೆಯೇ ಸಂಸ್ಥೆಯ ಶ್ರೇಯೋಭಿವೃದ್ಧಿಯಲ್ಲಿ ಪ್ರಾಕ್ತನ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು ಎಂದು ಬೈಂದೂರು ಶಾಸಕ, ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ದಶಮಾನೋತ್ಸವ ವರ್ಷಾಚರಣೆಯ ಭಾಗವಾಗಿ ರಚಿಸಲಾದ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಹಳೆ ವಿದ್ಯಾರ್ಥಿ, ಉಡುಪಿ ಎಮ್.ಜಿ.ಎಮ್. ಕಾಲೇಜಿನ ಉಪನ್ಯಾಸಕ ರಾಮಚಂದ್ರ ಭಟ್ ದಿಕ್ಸೂಚಿ ಭಾಷಣ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲ ಚೇತನ್ ಶಟ್ಟಿ ಕೋವಾಡಿ, ಊರ್ಮನಿ ಅಂಗಡಿ ಡಾಟ್‌ಕಾಮ್‌ನ ಸಂಸ್ಥಾಪಕ ವಿ. ಗೌತಮ್ ನಾವಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅರ್ಜುನ್ ಬಿ. ನಾಯ್ಕ್, ಕಾರ್ಯದರ್ಶಿ ಸುದೀಪ್…
