Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ ಮತ್ತು ರೆಡ್ ರಿಬ್ಬನ್ ಕ್ಲಬ್, ಎನ್.ಸಿ.ಸಿ., ಎನ್.ಎಸ್.ಎಸ್., ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ಕುಂದಾಪುರ ಹಾಗೂ ಲಯನ್ಸ್ ಕ್ಲಬ್, ಕುಂದಾಪುರದ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಜರುಗಿತು. ಶಿಬಿರದಲ್ಲಿ ಸುಮಾರು124 ಯುನಿಟ್‌ಗಳಷ್ಟು ರಕ್ತವನ್ನು ರಕ್ತದಾನಿಗಳಿಂದ ಸಂಗ್ರಹಿಸಲಾಯಿತು. ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಡಿಸ್ಟ್ರಿಕ್ ಗವರ್ನರ್ ಲಯನ್ ಎಮ್. ಎಮ್. ಹೆಗ್ಡೆ, ಅವರ ಪತ್ನಿ ಸಂಧ್ಯಾ ಹೆಗ್ಡೆ, ಲಯನ್ಸ್ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ಚಂದ್ರಶೇಖರ್ ಕೆ., ಕಾರ್ಯದರ್ಶಿಗಳಾದ ರಾಜೇಂದ್ರ, ಖಜಾಂಚಿ ಕಿರಣ್ ಕುಮಾರ್ ಮತ್ತು ಸದಸ್ಯರು ಹಾಗೂ ಕುಂದಾಪುರ ರೆಡ್‌ಕ್ರಾಸ್ ಘಟಕದ ಚೇರ್‌ಮನ್ ಜಯಕರ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕ್ರಮ ಅಧಿಕಾರಿ ಸತ್ಯನಾರಾಯಣ ಪುರಾಣಿಕ್, ಜನೌಷಧಿ ಉಸ್ತುವಾರಿ ಗಣೇಶ್ ಆಚಾರ್, ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ, ಡಾ. ಸೋನಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತೀಯ ಅಂಚೆ ಇಲಾಖೆಯು ನೀಡುವ ರಾಷ್ಟ್ರ ಪ್ರಶಸ್ತಿಯನ್ನು ಬೈಂದೂರು ಅಂಚೆ ಕಛೇರಿಯಲ್ಲಿ ಅಂಚೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಸುರೇಂದ್ರ ಡಿ. ಅವರು ಪಡೆದುಕೊಂಡಿದ್ದಾರೆ. ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಜೀವ ವಿಮಾ ವಿಭಾಗದಲ್ಲಿ 2019-20ನೇ ಸಾಲಿಗೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದಲ್ಲಿ ಅತಿ ಹೆಚ್ಚಿನ ವಹಿವಾಟನ್ನು ಮಾಡಿಸಿರುವ ಸುರೇಂದ್ರ ಅವರಿಗೆ ಭಾರತೀಯ ಅಂಚೆ ಇಲಾಖೆಯಿಂದ ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸಿನಲ್ಲಿರುವ ಮೇಘಧೂತ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯ ಜೊತೆಗೆ ನಗದು ಬಹುಮಾನವನ್ನು ನೀಡಿ ಗೌರವಿಸಲಾಗಿದೆ. ಅವರು ತಮ್ಮ ಹನ್ನೇರಡು ವರ್ಷದ ಸೇವಾ ಅವಧಿಯಲ್ಲಿ ಏಳು ಬಾರಿ ವಿಭಾಗಿಯ ಮಟ್ಟದ ಮತ್ತು ಮೂರು ಬಾರಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸಮಾರಂಭದಲ್ಲಿ ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್, ಡೈರೆಕ್ಟರ್ ಆಫ್ ಪೋಸ್ಟಲ್ ಸರ್ವಿಸ್ ಮಹೇಂದ್ರ ಗಜ್ಭಾಯ್, ಹಾಗೂ ಕರ್ನಾಟಕ ವೃತ್ತದ ಇಲಾಖೆಯ ಮೇಲಾಧಿಕಾರಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಸ್ನಾತಕೋತ್ತರ ಕಾಲೇಜಿನ ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿ ಸಂಘ ‘ತನು – ಮನ’ದ 2021ರ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಕುರಿಯನ್, ಉತ್ತಮ ನಡವಳಿಕೆ ನಮ್ಮ ಅಸ್ತಿತ್ವವನ್ನು ರೂಪಿಸುತ್ತದೆ, ನಾವು ಮಾಡುವ ಕಾರ್ಯಗಳೇ ನಮ್ಮ ಅಸ್ತಿತ್ವ ಎಂದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ‘ಮನೋವಿಜ್ಞಾನದ ವಿಚಾರಗಳನ್ನು ಅರ್ಥೈಸಿಕೊಳ್ಳುವುದು ಸವಾಲಿನ ಕೆಲಸ ಅದರಲ್ಲೂ ಅಸ್ತಿತ್ವವನ್ನು ರೂಪಿಸಿಕೊಳ್ಳಬೇಕಾದರೆ ಹವ್ಯಾಸಗಳನ್ನು ಉದ್ಯೋಗವನ್ನಾಗಿ ಪರಿವರ್ತಿಸಬೇಕು’ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಘದ ನೂತನ ಸದಸ್ಯರಿಗೆ ಪದಗ್ರಹಣ ಮಾಡಿದರು. ಸಂಘದ ಅಧ್ಯಕ್ಷೆ ವೈಶಾಲಿ ಹೆಗ್ಡೆ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿಭಾಗದ ಸಂಯೋಜಕರಾದ ಡಾ. ಆಡ್ರಿ ಪಿಂಟೋ, ಉಪನ್ಯಾಸಕರಾದ ರಶ್ಮಿ ,ಮೇಘಾ ಮತ್ತು ಸಾರ್ಥಕ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರುಕ್ಸಾನ ಸ್ವಾಗತಿಸಿದರು. ಶೀಬಾ ವಂದಿಸಿದರು ಹಾಗೂ ಜೆಮ್ಶೆರಾ ಸುಲ್ತಾನ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ನಗರದ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವಾಗ ಪಾರ್ಕಿಂಗ್‌ಗೆ ಜಾಗ ಮೀಸಲಿಟ್ಟು, ನಿರ್ಮಾಣದ ನಂತರ ಪಾರ್ಕಿಂಗ್‌ಗೆ ಜಾಗ ಬಿಡದೇ ಆ ಸ್ಥಳವನ್ನು ಅತಿಕ್ರಮಿಸಿರುವವರ ಟ್ರೇಡ್ ಲೈಸೆನ್ಸ್ ರದ್ದುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಸಭೆಯ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ನಗರದಲ್ಲಿ ಪಾರ್ಕಿಂಗ್ ಸಮಸ್ಯೆಯಿಂದ ವಾಹನಗಳ ಸುಗಮ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ಮತ್ತು ವಾಹನಗಳ ಪಾರ್ಕಿಂಗ್‌ಗೆ ತೀವ್ರ ಸಮಸ್ಯೆಯಾಗುತ್ತಿದ್ದು, ವಾಣಿಜ್ಯ ಕಟ್ಟಡಗಳು ಮತ್ತು ವಸತಿ ಸಮುಚ್ಛಯಗಳನ್ನು ನಿರ್ಮಿಸುವಾಗ, ಪಾರ್ಕಿಂಗ್‌ಗೆ ಜಾಗ ಮೀಸಲಿಟ್ಟು, ನಿರ್ಮಾಣದ ನಂತರ ಆ ಸ್ಥಳವನ್ನು ಅತಿಕ್ರಮಿಸಿ, ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಿರುವ ಸಂಬಂದಪಟ್ಟ ಮಾಲೀಕರಿಗೆ 15 ದಿನದಲ್ಲಿ ತೆರವುಗೊಳಿಸುವ ಕುರಿತು ನೊಟೀಸ್ ನೀಡಿ, ಅತಿಕ್ರಮಣ ತೆರವು ಆಗದಿದಲ್ಲಿ ಸಂಬಂದಪಟ್ಟ ವಾಣಿಜ್ಯ ಸಂಸ್ಥೆಯ ಟ್ರೇಡ್ ಲೈಸೆನ್ಸ್ ರದ್ದುಗೊಳಿಸುವುದು ಸೇರಿದಂತೆ ಅತಿಕ್ರಮಣ ಪ್ರದೇಶವನ್ನು ನಗರಸಭೆ ವತಿಯಿಂದ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್‌ನಲ್ಲಿ ವಾರ್ಷಿಕ ಹಬ್ಬ ತೆರಾಲಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಮುಖ್ಯ ಧರ್ಮಗುರುಗಳಾಗಿ ಮಾತನಾಡಿದ ಪಾಂಗಾಳ ಚರ್ಚಿನ ಸಹಾಯಕ ಧರ್ಮಗುರು ರೆ. ಫಾ ರೋಶನ್ ಡಿ ಕುನ್ನಾ, ಈ ಸಮಾಜದಲ್ಲಿ ನಾವೆಲ್ಲರೂ ಸಹೋದರ ಸಹೋದರಿಯರು ಎಂದು ಹೇಳಿದರು. ಈ ಸಂದರ್ಭದಲ್ಲಿ ಕುಂದಾಪುರ ವಲಯ ಧರ್ಮಗುರು ರೆ. ಫಾ. ಸ್ಟ್ಯಾನಿ ತ್ರಾವ್ರೂ, ಗಂಗೊಳ್ಳಿಯ ರೆ. ಫಾ. ಆಲ್ಪರ್ಟ್ ಕ್ರಾಸ್ತಾ, ರೆ. ಫಾ ಚಾರ್ಲ್ಸ್ ನೊರೆನ್ಹೆ, ಮುಂತಾದವರು ಉಪಸ್ಥಿತರಿದ್ದರು. ಬೈಂದೂರು ಚರ್ಚಿನ ಧರ್ಮಗುರು ರೆ. ಫಾ ವಿನ್ಸೆಂಟ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೊಶ ಆಶ್ರಯದಲ್ಲಿ ರಾಮಕೃಷ್ಣ ಮಿಶನ್ ಮಂಗಳೂರು ಇವರ ಸಹಯೋಗದಲ್ಲಿ ವಿವೇಕಾನಂದ ಮತ್ತು ಯುವಜನತೆ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮಾಜಿ ಸೈನಿಕ ಗೋಪಿನಾಥ್ ರಾವ್ ಮಾತನಾಡಿ, ನಮ್ಮ ಬದುಕು ನಾವು ಏಣಿಸಿದಂತೆ ಆಗುತ್ತದೆ, ವಿವೇಕಾನಂದರ ಆಲೋಚನೆಗಳು ಪ್ರತಿಯೊಬ್ಬರ ಬದುಕಿನುದ್ದಕ್ಕೂ ಆದರ್ಶ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ. ಅಲ್ಲದೇ ನಮ್ಮ ಯಶಸ್ವಿ ಬದುಕಿನ ನೆಲೆಗಳು ನಾವೆ ಎಣಿಸಿದಂತೆ ಆಗುತ್ತದೆ. ನಾವು ಒಳ್ಳೆಯ ದಾರಿಯನ್ನೇ ಕಂಡುಕೊಂಡರೆ ಒಳ್ಳೆಯ ದಾರಿಗಳೆ ಸಿಗುತ್ತದೆ. ಹಾಗೆಯೇ ಒಳ್ಳೆಯ ಯಶಸ್ಸು ಸಿಗುತ್ತದೆ. ನಾವು ದುರ್ಬಲರೆಂದು ಭಾವಿಸಿದರೆ ದುರ್ಬಲತೆ ನಮ್ಮನ್ನು ಆವರಿಸುತ್ತದೆ. ಆದರೆ ಸಬಲತೆಯನ್ನು ಸ್ವೀಕರಿಸಿ ಅಚಲ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ತಾನಾಗೆ ನಮ್ಮೊಳಗಾಗುತ್ತದೆ ಎಂದು ತಿಳಿಸಿದರಲ್ಲದೇ ಸೈನ್ಯದ ಕೆಲವು ಉದಾಹರಣೆಗಳನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಪಿ. ನಾರಾಯಣ ಶೆಟ್ಟಿ ವಹಿಸಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಪೆಟ್ರೋಲ್ ಬಂಕ್ ಸಮೀಪದ ದೀಪಾ ಕಾಂಪ್ಲೆಕ್ಸ್‌ನ ಮೊದಲನೆ ಮಹಡಿಯಲ್ಲಿ ಫೆ. 17ರ ಬುಧವಾರ ‘ಸ್ಪೀಡ್ ಮೊಬೈಲ್’ ಮಳಿಗೆ ಶುಭಾರಂಭಗೊಳ್ಳಲಿದೆ. ಸ್ಪೀಡ್ ಮೊಬೈಲ್ ಮಳಿಗೆಯು ಉಡುಪಿ ಜಿಲ್ಲೆಯಲ್ಲಿ ಕಳೆದ 7 ವರ್ಷಗಳಿಂದ ಮೊಬೈಲ್ ಮತ್ತು ಮೊಬೈಲ್ ಬಿಡಿಭಾಗಗಳ ಮಾರಾಟದಲ್ಲಿ ಉತ್ಕೃಷ್ಟ ಹಾಗೂ ತ್ವರಿತ ಸೇವೆ, ಉತ್ತಮ ಗುಣಮಟ್ಟ, ಸ್ಪರ್ಧಾತ್ಮಕ ಬೆಲೆ ನೀಡಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿದೆ. ಕುಂದಾಪುರದಲ್ಲಿ ಮೂರು ಶಾಖೆಗಳು, ಸಾಲಿಗ್ರಾಮ ಉಡುಪಿ, ಗಂಗೊಳ್ಳಿ, ನಾವುಂದ, ತೀರ್ಥಹಳ್ಳಿಯಲ್ಲಿ ಶಾಖೆಗಳನ್ನು ಹೊಂದಿರುವ ಸಂಸ್ಥೆಯು ಇದೀಗ ಬೈಂದೂರಿನಲ್ಲಿ ನೂತನ ಶಾಖೆಯನ್ನು ತೆರೆಯುತ್ತಿದೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಿಡಬ್ಲ್ಯು ಪ್ರಥಮ ದರ್ಜೆ ಗುತ್ತಿಗೆದಾರರು ಹಾಗೂ ಕಟ್ಟಡ ಮಾಲೀಕರಾದ ಎನ್. ಜಗನ್ನಾಥ್ ಶೆಟ್ಟಿ, ಬೈಂದೂರು ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷರಾದ ಎಮ್. ಗೋವಿಂದ, ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಎ. ಕಾಯ್ಕಿಣಿ, ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ್, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷರಾದ ಗೋಪಾಲ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನೇತೃತ್ವದಲ್ಲಿ ಸುಗ್ಗಿ – ಹುಗ್ಗಿ ಜಾನಪದ ಉತ್ಸವ – 2021 ಇಲ್ಲಿನ ಶ್ರೀ ಸೇನೇಶ್ವರ ದೇವಸ್ಥಾನದ ಎದುರಿನ ವೇದಿಕೆಯಲ್ಲಿ ಫೆ.13ರ ಸಂಜೆ 5.30ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ, ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿರಲಿದ್ದು, ಕಾರ್ಯಕ್ರದ ಉದ್ಘಾಟನೆ ಹಾಗೂ ಅಧ್ಯಕ್ಷತೆಯನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ಅವರು ನೇರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯಸಭೆ ಸಂಸದರಾದ ಓಸ್ಕರ್ ಫೆರ್ನಾಂಡಿಸ್, ಶಿವಮೊಗ್ಗ ಲೋಕಸಭಾ ಸಂಸದರಾದ ಬಿ. ವೈ. ರಾಘವೆಂದ್ರ, ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಚಂದ್ರ ಶೆಟ್ಟಿ, ಆಯನೂರು ಮಂಜುನಾಥ್, ಎಲ್. ಎಸ್. ಭೋಜೇಗೌಡ, ಡಾ. ತೇಜಸ್ವಿನಿ ಗೌಡ, ಬೈಂದೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹೇಂದ್ರ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಂಕರ ಪೂಜಾರಿ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಇಲ್ಲಿನ ಶಿರೂರು ಸಮೀಪದ ಅಳ್ವೆಗದ್ದೆ ಕ್ರಾಸ್ ಬಳಿ ವೇಗವಾಗಿ ಬಕ್ ಚಲಾಯಿಸಿದ ಬಾಲಕನೋರ್ವ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲೆ ಸಾವನ್ನಪ್ಪಿದ್ದ ಘಟನೆ ಗುರುವಾರ ಮುಂಜಾನೆ ನಡೆದಿದೆ. ಬಕ್ ಸವಾರ ಹಡವಿನಕೋಣೆ ನಿವಾಸಿ ಅರಾನ್ (೧೫) ಮೃತ ದುರ್ದೈವಿ. ಕಳೆದ ವಾರವಷ್ಟೆ ಪೊಲೀಸರು ಈತನ ಚಾಲನೆ ಪರವಾನಿಗೆ ಇಲ್ಲದೆ ಬಕ್ ಚಲಾಯಿಸುತ್ತಿದ್ದ ವೇಳೆ ಪತ್ತೆ ಹಚ್ಚಿ ದಂಡ ವಿಧಿಸಿದ್ದರು. ಆ ನಂತರವೂ ಗುರುವಾರ ಮುಂಜಾನೆ ಬಕ್ ಚಲಾಯಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬೈಂದೂರು ಪಿಎಸೈ ಸಂಗೀತಾ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಬಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಪೊಲೀಸ್ ಠಾಣೆ ಆಶ್ರಯದಲ್ಲಿ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಹೆದ್ದಾರಿ ಜಂಕ್ಷನ್ನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಡೆಯಿತು. ಠಾಣಾಧಿಕಾರಿ ಭೀಮಾಶಂಕರ್ ಎಸ್. ಮಾತನಾಡಿ, ಈ ಸಾಲಿನ ಸಪ್ತಾಹವು ರಸ್ತೆ ಸುರಕ್ಷತೆ, ಜೀವದ ರಕ್ಷೆ ಕುರಿತು ಅರಿವು ಮೂಡಿಸುವ ಗುರಿಯೊಂದಿಗೆ ಇದೇ 17ರ ವರೆಗೆ ನಡೆಯುತ್ತಿದೆ ಎಂದರು. ಎಎಸ್ಐ ವೆಂಕೇಶ ಗೊಲ್ಲ, ಠಾಣಾ ಸಿಬ್ಬಂದಿ ಯೋಗೀಶ್, ದಿನೇಶ ಹಾಗೂ ಮುಳ್ಳಿಕಟ್ಟೆ ಆಟೊಶಂಕರ್ ರಿಕ್ಷಾ ಚಾಲಕ ಪ್ರದೀಪ್ ಬಿಲ್ಲವ, ಯೊಗೀಶ್ ಮೊಗವೀರ, ಗಣೇಶ್ ದೇವಾಡಿಗ, ಲೊಕೇಶ್ ಪೂಜಾರಿ ಇದ್ದರು.

Read More