ವಾರದಿಂದ ನಾಪತ್ತೆಯಾಗಿದ್ದ ಯಕ್ಷಗಾನ ಕಲಾವಿದ ಉದಯ ಹೆಗಡೆ ಬೆಂಗಳೂರಿನಲ್ಲಿ ಪತ್ತೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಪೆರ್ಡೂರು ಮೇಳದ ಖ್ಯಾತ ಯಕ್ಷಗಾನ ಕಲಾವಿದ, ಮತ್ಯಾಡಿ ಗ್ರಾಮದ ಗುಡ್ಡೆಯಂಗಡಿ ಪ್ರಧಾನನಗರ ನಿವಾಸಿ ಉದಯ ಹೆಗಡೆ ಕಡಬಾಳ (37) ಅವರು ಬೆಂಗಳೂರಿನಲ್ಲಿ ಪತ್ತೆಯಾಗಿರುವುದು ತಿಳಿದುಬಂದಿದೆ. ಅವರು ನಾಪತ್ತೆಯಾಗಿರುವ ಬಗ್ಗೆ ಇಂದು ದೂರು ದಾಖಲಾಗಿತ್ತು.

Call us

Click Here

ಯಕ್ಷಗಾನ ಕಲಾವಿದೆಯಾದ ಅಶ್ವಿನಿ ಹೆಗಡೆ ನಾಲ್ಕು ವರ್ಷದ ಹಿಂದೆ ಕಲಾವಿದ ಉದಯ ಹೆಗಡೆ ಅವರನ್ನು ಮದುವೆಯಾಗಿದ್ದರು. ಏ.21ರ ಸಂಜೆ 6 ಗಂಟೆಗೆ ಉದಯ ಹೆಗಡೆ ತಮ್ಮ ಕಾರಿನಲ್ಲಿ ಮನೆಯಿಂದ ಹೋದವರು ಮತ್ತೆ ಹಿಂತಿರುಗಿಲ್ಲ. ಮೊಬೈಲ್’ಗೆ ಕರೆ ಮಾಡಿದಾಗ ಸಂಪರ್ಕ ಸಾಧ್ಯವಾಗಿಲ್ಲ. ಸಂಬಂಧಿಕರು ಹಾಗೂ ಪತಿಯ ಸ್ನೇಹಿತರಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ. ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಬಗ್ಗೆ ಪತ್ನಿ ಅಶ್ವಿನಿ ಹೆಗಡೆ ದೂರು ದಾಖಲಿಸಿದ್ದರು.

ಒಂದು ವಾರಗಳ ಕಾಲ ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿರುವ ಕಾರಣ ತನಿಕೆಯಿಂದಲಷ್ಟೇ ತಿಳಿದುಬರಬೇಕಿದೆ.

Leave a Reply