Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹೊಸಾಡು ಗ್ರಾಮದ ಅರಾಟೆಯ ಸುಬ್ರಹ್ಮಣ್ಯ ಭಜನಾ ಮಂಡಳಿಯ ಉದ್ಘಾಟನೆ ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಂಗಮಂಟಪದಲ್ಲಿ ನಡೆಯಿತು. ಹಿರಿಯ ಭಜನಾ ಕಲಾವಿದ ಕೃಷ್ಣ ಮೊಗವೀರ ನೂತನ ಭಜನಾ ಮಂಡಳಿಯನ್ನು ಉದ್ಘಾಟಿಸಿದರು. ಎಂ. ಎಂ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲ್ಲೂಕು ಭಜನಾ ಮಂಡಳಿಗಳ ಸಮಿತಿ ಅಧ್ಯಕ್ಷ ಜಯಕರ ಪೂಜಾರಿ ಗುಲ್ವಾಡಿ, ವಂಡ್ಸೆ ವಲಯ ಅಧ್ಯಕ್ಷ ವಸಂತ ಶೆಟ್ಟಿ ದೇವಲ್ಕುಂದ, ರಘು ಶೆಟ್ಟಿ ಅರಾಟೆ, ಅರಾಟೆ ಸುಬ್ರಹ್ಮಣ್ಯ ಭಜನಾ ಮಂಡಳಿಯ ಅಧ್ಯಕ್ಷ ಸುರೇಶ ಪೂಜಾರಿ, ಕಾರ್ಯದರ್ಶಿ ರಾಮ ಪೂಜಾರಿ ಇದ್ದರು. ಶಶಿಕಲಾ ಸ್ವಾಗತಿಸಿದರು. ಸ್ವಾತಿ ಪ್ರದೀಪ್ ಆಚಾರ್ಯ ಪ್ರಾಸ್ತವಿಕವಾಗಿ ಮಾತನಾಡಿದರು. ಸ್ಮಿತಾ ರಾಘವೇಂದ್ರ ಆಚಾರ್ಯ ನಿರೂಪಿಸಿದರು. ರೇಖಾ ಸತೀಶ್ ನಾಯ್ಕ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಬೈಂದೂರು ಶಾಖೆಯು ನೂತನ ಕಟ್ಟಡ ಮಂಜುಶ್ರೀ ಬಿಲ್ಡಿಂಗ್ಗೆ ಸ್ಥಳಾಂತರ ಸಮಾರಂಭ ಜರುಗಿತು. ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಬ್ಯಾಂಕಿನ ಮಂಗಳೂರು ಪ್ರಾದೇಶಿಕ ಕಛೇರಿಯ ವ್ಯವಸ್ಥಾಪಕರಾದ ಸೂರ‍್ಯನಾರಾಯಣ ರಾವ್ ವಹಿಸಿದ್ದರು. ಬ್ಯಾಂಕಿನ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮತ್ತು ಶಾಖೆಯ ಪ್ರಗತಿ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕಟ್ಟಡದ ಮಾಲೀಕರಾದ ಮಂಜುನಾಥ ಶೆಟ್ಟಿ ಮಾತನಾಡಿ, ಬ್ಯಾಂಕಿನ ಸೇವೆಯನ್ನು ಕೊಂಡಾಡಿದರು ಮತ್ತು ಸಾರ್ವಜನಿಕರಿಗೆ ಈ ಬ್ಯಾಂಕಿನಲ್ಲಿ ತಮ್ಮ ವ್ಯವಹಾರ ನಡೆಸುವಂತೆ ಹೇಳಿದರು. ಮತ್ತೋರ್ವ ಮುಖ್ಯ ಅತಿಥಿಗಳಾದ ವಿಠಲರವರು ಆರ್ಥಿಕ ಸಾಕ್ಷರತೆಯ ಬಗ್ಗೆ ವಿಸ್ತೃತ ಮಾಹಿತಿ ನೀಡಿ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಶಾಖೆಯ ಭದ್ರತಾ ಕೋಶದ ಸೌಲಭ್ಯ ಉದ್ಘಾಟಿಸಿ ಸಾಂಕೇತಿಕವಾಗಿ ಕೀಲಿಕೈ ಗ್ರಾಹಕರಿಗೆ ಹಸ್ತಾಂತರಿಸಲಾಯಿತು. ಗುರುನಾಥ ಭಟ್ ನಿರೂಪಿಸಿದರು. ಶಾಖಾ ವ್ಯವಸ್ಥಾಪಕರಾದ ಸುರೇಶ್ ಕುಮಾರ್ ಉಪಾಧ್ಯ ಸ್ವಾಗತಿಸಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಆಳ್ವಾಸ್ ಎನ್‌ಸಿಸಿ ಘಟಕ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಹಯೋಗದೊಂದಿಗೆ ನಡೆದ 3 ದಿನಗಳ ಕ್ಯಾಂಪ್‌ನ ಸಮಾರೋಪ ಸಮಾರಂಭ ಇತ್ತೀಚೆಗೆ ಮಿಜಾರ್‌ನಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಮಂಗಳೂರು ಗ್ರೂಪ್ ಹೆಡ್‌ಕ್ವಾರ್ಟರ‍್ಸ್‌ನ ಗ್ರೂಪ್ ಕಮಾಂಡರ್ ಕರ್ನಲ್ ಎ.ಕೆ. ಶರ್ಮ, ಪ್ರತಿಯೊಬ್ಬರೂ ಇನ್ನೊಬ್ಬರ ಕುರಿತು ಕಾಳಜಿವಹಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಅಲ್ಲದೆ ಸಹಾನುಭೂತಿ, ಭರವಸೆ, ಧೈರ್ಯದಿಂದ ಜೀವನ ನಡೆಸಬೇಕು ಎಂದರು. ಜೀವನದಲ್ಲಿ ಸಾವಿರ ಸಮಸ್ಯೆಗಳು ಬಂದರು ಅದನ್ನು ತಾಳ್ಮೆಯಿಂದ ಎದುರಿಸಿ, ಇತರರ ಸಮಸ್ಯೆಗೂ ಸ್ಪಂದಿಸುವ ಹೃದಯ ಶ್ರೀಮಂತಿಕೆ ಹೊಂದಿರಬೇಕು ಎಂದರು. ನಂತರ ಮಾತಾನಾಡಿದ ಆಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಎನ್‌ಸಿ.ಸಿ. ಕೆಡೆಟ್ ಆಗಿರುವಾಗ ಮಾತ್ರ ಶಿಸ್ತನ್ನು ಪಾಲಿಸದೇ ಇತರ ಸಂದರ್ಭಗಳಲ್ಲಿಯೂ ಶಿಸ್ತನ್ನು ಕಾಪಾಡಬೇಕು. ಯಾವಾಗ ನಾವು ನಮ್ಮ ಸ್ವಂತ ಬುದ್ಧಿ ಶಕ್ತಿಯನ್ನು ಉಪಯೋಗಿಸುವುದಿಲ್ಲವೋ, ಆವಾಗ ನಾವು ನಮ್ಮತನವನ್ನು ಕಳೆದುಕೊಳ್ಳುತ್ತವೆ. ಈ ಮೂರು ದಿನಗಳ ಕ್ಯಾಂಪ್‌ನಲ್ಲಿs ಸಿದ್ದಾಂತದ ಕಲಿಕೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಹೇರಂಜಾಲಿನ ರಜತಾದ್ರಿ ಫಾರ್ಮ್‌ನಲ್ಲಿ ಜೇನು ಸಾಕಣೆ ಪರಿಣತ ಉದಯಶಂಕರ ಭಟ್ ಅವರು 50 ಜೇನು ಪೆಟ್ಟಿಗೆಗಳೊಂದಿಗೆ ಆರಂಭಿಸಿರುವ ಪರಾಗ ಜೇನು ಸಾಕಣೆ ಘಟಕದ ಉದ್ಘಾಟನೆ ಇತ್ತಿಚಿಗೆ ನಡೆಯಿತು. ಹಿರಿಯ ತೋಟಗಾರಿಕಾ ಅಧಿಕಾರಿ ಕುಚೇಲಯ್ಯ ಮಾತನಾಡಿ, ಜೇನು ಸಾಕಣೆಯಿಂದ ಮನುಷ್ಯನ ಆರೋಗ್ಯ ರಕ್ಷಣೆಗೆ, ಔಷಧಕ್ಕೆ ಅಗತ್ಯವಿರುವ ಜೇನು ಸಿಗುತ್ತದೆ. ಅದು ಪ್ರಕೃತಿಯ ಉಳಿವು ಮತ್ತು ಸಮೃದ್ಧಿಗೂ ಕಾರಣವಾಗುತ್ತದೆ. ಕೃಷಿಯ ಜತೆಗೆ ಜೇನು ಸಾಕುವುದರಿಂದ ರೈತರ ಆದಾಯ ಹೆಚ್ಚುತ್ತದೆ ಎಂದು ಹೇಳಿದರು. ಅತಿಥಿ, ಕೃಷಿ ಅಧಿಕಾರಿ ಪರಶುರಾಮ ಮಾತನಾಡಿ, ಜೇನುನೊಣಗಳು ಹೂವುಗಳಿಂದ ಮಕರಂದ ಸಂಗ್ರಹಿಸುವಾಗ ಪರಾಗ ಸ್ಪರ್ಷ ಏರ್ಪಟ್ಟು ಕೃಷಿಯ ಫಲವರ್ಧನೆ ಆಗುತ್ತದೆ. ಅದಕ್ಕಾಗಿ ಜೇನನ್ನು ರೈತಮಿತ್ರ ಕೀಟ ಎಂದು ಪರಿಗಣಿಸಲಾಗುತ್ತದೆ. ತೋಟಗಳಲ್ಲಿ ಜೇನು ಸಾಕಣೆ ಮಾಡುವುದರಿಂದ ಅಲ್ಲಿ ಹೆಚ್ಚು ಫಸಲು ದೊರೆತು, ರೈತರಿಗೆ ಲಾಭವಾಗುತ್ತದೆ ಎಂದರು. ಫಾರ್ಮ್ ಮಾಲೀಕ ಸುಧೀರ ರಾವ್ ಅಧ್ಯಕ್ಷತೆ ವಹಿಸಿದ್ದರು. ಜೇನು ಕೃಷಿ ಕುರಿತು ಮಾರ್ಗದರ್ಶನ ನೀಡಿದ ಪರಿಣತ ಉದಯಶಂಕರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತ್ರಾಸಿ ಬಳಿಯ ಹೊಸಾಡು ಗ್ರಾಮೀಣ ಪ್ರದೇಶದಲ್ಲಿ ಹತ್ತು ವರ್ಷಗಳಿಂದ ವಿದ್ಯಾದಾನ ಮಾಡುತ್ತಿರುವ ಡಾನ್ ಬೋಸ್ಕೊ ಸ್ಕೂಲ್‌ಗೆ ಸೀನಿಯರ್ ಸೆಕೆಂಡರಿ ಸ್ಕೂಲ್ ಆಗಿ ಮೇಲ್ದರ್ಜೆಗೇರಲು ಅನುಮೋದನೆ ದೊರೆತಿದೆ. ಇದರಿಂದ ಸುತ್ತಲಿನ ಹತ್ತಾರು ಹಳ್ಳಿ ಮತ್ತು ಪಟ್ಟಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶ ಲಭಿಸಿದೆ ಎಂದು ಶಾಲೆಯ ಮುಖ್ಯಸ್ಥ ಫಾ. ಮ್ಯಾಕ್ಸಿಮ್ ಡಿಸೋಜ ತಿಳಿಸಿದ್ದಾರೆ. ಉತ್ತಮ ಶೈಕ್ಷಣಿಕ ಸಾಧನೆಯಿಂದ ಜನಮೆಚ್ಚುಗೆ ಗಳಿಸಿರುವ ಈ ಸಂಸ್ಥೆ ಇದೀಗ ದಶಮಾನೋತ್ಸವ ಆಚರಣೆಯ ಹೊಸ್ತಿಲಲ್ಲಿ ನಿಂತಿದೆ. ಈ ಸಂಸ್ಥೆಯಿಂದ ಸಿಬಿಎಸ್‌ಸಿಯ ಹತ್ತನೆ ತರಗತಿ ಪರೀಕ್ಷೆ ಎದುರಿಸಿದ ನಾಲ್ಕು ತಂಡಗಳು ಶೇ100 ಫಲಿತಾಂಶ ದಾಖಲಿಸಿವೆ. ಸಂಸ್ಥೆ ಇದೀಗ ಸೀನಿಯರ್ ಸೆಕೆಂಡರಿ ಸ್ಕೂಲ್ ದರ್ಜೆಗೇರಿರುವ ಕಾರಣ ಬೈಂದೂರು ಮತ್ತು ಕುಂದಾಪುರ ತಾಲ್ಲೂಕುಗಳ ಮಕ್ಕಳಿಗೆ ಹೊಸ ಅವಕಾಶದ ಬಾಗಿಲು ತೆರೆದಂತಾಗಿದೆ. ಇಲ್ಲಿ ಸಿಬಿಎಸ್‌ಸಿ 12ನೇ ತರಗತಿ ತನಕ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಶಿಕ್ಷಣ ಪಡೆಯುವ ಅವಕಾಶ…

Read More

ಕುಂದಾಪುರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿವೇಕಾನಂದರ ಜಯಂತಿ ಕೇವಲ ಜಯಂತಿಗಷ್ಟೇ ಸೀಮಿತವಾಗದೆ ವಿದ್ಯಾರ್ಥಿಗಳು ವಿವೇಕಾನಂದರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಆ ಮೂಲಕ ರಾಷ್ಟ್ರೀಯ ಯುವದಿನಾಚರಣೆಗೆ ಅರ್ಥಬರುವಂತಾಗಬೇಕು ಎಂದು ಕೆನರಾ ಕಿಡ್ಸ್‌ನ ಸಂಚಾಲಕರಾದ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು. ಅವರು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಯುವ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಶಿವರಾಜ್ ಸಿ. ನಾವುಂದ ವಂದಿಸಿದರು. ವಾಣಿಜ್ಯ ಉಪನ್ಯಾಸಕರಾದ ಯೋಗೀಶ್ ಶ್ಯಾನುಭೋಗ್ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಲ್ಲಿನ ಜಿ.ಎಸ್.ವಿ.ಎಸ್ ಅಸೋಷಿಯೇಷನ್, ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳು ಮತ್ತು ಬಾಲಚಂದ್ರ ನಾಯ್ಕನಕಟ್ಟೆ ಟ್ರಸ್ಟ್ ಬೆಂಗಳೂರಿನ ಉದಯ್ ಉಳ್ಳಾಲ್ ಪ್ರಾಯೋಜಕತ್ವದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಜಿ.ಎಸ್.ವಿ.ಎಸ್ ಅಸೋಷಿಯೇಷನ್ ವತಿಯಿಂದ ಕೊಡಲ್ಪಡುವ ವಿದ್ಯಾರ್ಥಿ ವೇತನಾ ವಿತರಣಾ ಕಾರ‍್ಯಕ್ರಮವು ಕಳೆದ ಇಲ್ಲಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳ ಸಭಾಂಗಣದಲ್ಲಿ ನಡೆಯಿತು. ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಉಮೇಶ್ ಪುತ್ರನ್ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿವೇಕಾನಂದರ ಜೀವನಾದರ್ಶಗಳನ್ನು ಪಾಲಿಸಿ ಜೀವನವನ್ನು ಸುಂದರವಾಗಿಸಿಕೊಳ್ಳುವಂತೆ ಕರೆ ನೀಡಿದರು. ಸಂದರ್ಭದಲ್ಲಿ ಪ್ರತೀ ವರುಷದಂತೆ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಪಿಸಿಎಮ್‌ಬಿ ಮತ್ತು ಪಿಸಿಎಮ್‌ಸಿ ವಿಭಾಗಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದವರಿಗೆ ತಮ್ಮ ವತಿಯಿಂದ ನೀಡುವ ತಲಾ ಇಪ್ಪತೈದು ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ಈ ಬಾರಿಯ ಟಾಪರ್‌ಗಳಾದ ಹಫ್ಸಾ ಮತ್ತು ವಿನಾಯಕ್ ನಾಯಕ್ ಇವರಿಗೆ ನೀಡಿದರು. ಮುಂಬೈನ ದೇವೂ ಟೂಲ್ಸ್ ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 158ನೇ ಜಯಂತಿಯ ಪ್ರಯುಕ್ತ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು. ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟೇಶ್ವರ ಇಲ್ಲಿನ ಸಹಾಯಕ ಪ್ರಾಧ್ಯಾಪಕರಾದ ವೆಂಕಟರಾಮ್ ಭಟ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಸ್ತುತತೆ ಎಂಬ ವಿಷಯದ ಬಗ್ಗೆ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರೂ, ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಚಾಲಕರೂ ಆದ ಮೀನಾಕ್ಷಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ರಾಘವೇಂದ್ರ ಸ್ವಾಗತಿಸಿದರು. ವಿದ್ಯಾರ್ಥಿನಿ ಕು. ರಮ್ಯಾ ವಂದಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತಿರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವರನಟ ಡಾ. ರಾಜ್ ಕುಮಾರ್ ಅಭಿನಯದ ಅದೇ ಕಣ್ಣು ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಅಣ್ಣಾವ್ರ ನಟನೆಗೆ ಜನರು ಫಿದಾ ಆಗಿದ್ದರು. ಚಿತ್ರವೂ ಹಿಟ್ ಆಗಿತ್ತು. ಸಸ್ಪೆನ್ಸ್ ಹೊಂದಿದ್ದ ಈ ಚಲನಚಿತ್ರ ಇಂದಿಗೂ ಜನಮಾನಸದಲ್ಲಿ ಹಾಗೆಯೇ ಉಳಿದಿದೆ. ಈ ವಿಚಾರ ಯಾಕೆ ಅಂತೀರಾ. ಈಗ ”ಅದೇ ಮುಖ” ಎಂಬ ಸಿನಿಮಾದ ಟೈಟಲ್. ಗಾಂಧಿನಗರದಲ್ಲಿ ಈ ಚಿತ್ರ ಹೇಗಿರಬಹುದು ಎಂಬ ಕುತೂಹಲ ಗರಿಗೆದರುವಂತೆ ಮಾಡಿದೆ. ಹೊಸತನ ಹುಡುಕಾಟದ ನಿರ್ದೇಶಕ ಹಾಗೂ ಉದಯೋನ್ಮುಖ ನಟ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶಿಸಿ, ನಟಿಸುತ್ತಿರುವ ಅದೇ ಮುಖ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದೂ ಸಿನಿಮಾದ ಟೈಟಲ್ ನಿಂದ. ಆಶ್ಚರ್ಯವಾದರೂ ಇದು ಸತ್ಯ. ಸಿನಿಮಾ ಸೆಟ್ ಏರುವ ಮುನ್ನವೇ ಸಾಕಷ್ಟು ಸದ್ದು ಮಾಡಿದ ಚಿತ್ರದ ಟೈಟಲ್ ”ಅದೇ ಮುಖ”. ಪ್ರತಿಯೊಬ್ಬ ಮನುಷ್ಯನಿಗೆ ತನ್ನದೇ ಆದ ಮುಖ ಇರುತ್ತದೆ. ಹಾಗೆಂದು ಇದು ಕೇವಲ ಒಂದು ಪಾತ್ರವಲ್ಲ. ಬರೋಬ್ಬರಿ ಏಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಡ್ತರೆ ಗ್ರಾಮದ ನಾಕಟ್ಟೆಯಲ್ಲಿ ಜೀರ್ಣೋದ್ಧಾರಗೊಂಡು ಲೋಕಾರ್ಪಣೆಗಾಗಿ ಸಿದ್ಧಗೊಂಡ ಕೋಟಿ ಚೆನ್ನಯ್ಯ, ಪಂಜುರ್ಲಿ ಗರಡಿಯ ಮುಹೂರ್ತ ನಿಗದಿಯ ಪೂರ್ವಭಾವಿ ಸಭೆ ಗುರುವಾರ ನಡೆಯಿತು. ಸಭೆಯಲ್ಲಿ ಎ.22ರಿಂದ 29ರ ವರೆಗೆ ಪ್ರತಿಷ್ಟಾ ಮಹೋತ್ಸವಕ್ಕೆ ದಿನ ನಿಗದಿಪಡಿಸಲಾಗಿದ್ದು, ಎ.25ರಂದು ಕೋಟಿ – ಚೆನ್ನಯ್ಯ ಪಂಜುರ್ಲಿ, ಬ್ರಹ್ಮಬೈದರ್ಕಳ ದೈವಗಳ ಪುನಃಪ್ರತಿಷ್ಟೆ, ಎ.26ರಂದು ಬ್ರಹ್ಮಕುಂಭಾಭಿಷೇಕ, ಎ.27ರಂದು ಬ್ರಹ್ಮಬೈದರ್ಕಳ ಜಾತ್ರಾ ಮಹೋತ್ಸವ ಹಾಗೂ ಎ.28ರಂದು ಪಂಜುರ್ಲಿ ದೈವದ ನೇಮೋತ್ಸವ ಮತ್ತು ಗೆಂಡಸೇವೆ ಮಾಡುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು. ತಂತ್ರಿಗಳಾದ ಕೇಂಜ ಶ್ರೀಧರ ತಂತ್ರಿ ಅವರು ಮಾತನಾಡಿ ಕೋಟಿಚೆನ್ನಯ್ಯರು ಎಲ್ಲರಿಗೂ ಆದರ್ಶ ಪುರುಷರಾದವರು. ಈ ಗರೋಡಿಯ ಜೀರ್ಣೋದ್ಧಾರಕ್ಕಾಗಿ ಶ್ರಮವಹಿಸಿ ಅತ್ಯಂತ ಮುತುವರ್ಜಿಯಿಂದ ಕೆಲಸ ಮಾಡಿದವರಿಗೂ ಮತ್ತು ಭಕ್ತವರ್ಗಕ್ಕೂ ದೈವ-ದೇವರ ಕೃಪೆ ದೊರೆಯುವಂತಾಗಲಿ. ಗರಡಿಯ ಮುಂದಿನ ಧಾರ್ಮಿಕ ಕಾರ್ಯವೂ ನಿರ್ವಿಘ್ನವಾಗಿ ನಡೆಯಲಿ ಎಂದು ಆಶೀರ್ವದಿಸಿದರು. ಈ ಸಂದರ್ಭ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ಸಸಿಹಿತ್ಲು ವೆಂಕಟ ಪೂಜಾರಿ,…

Read More