ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಹೊಸಾಡಿನ ಡಾನ್ ಬಾಸ್ಕೊ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಶಾಲೆಯ ಮನೋವಿಜ್ಞಾನ ವಿಭಾಗದ ‘ಕ್ಲಬ್ ಆಫ್ ಲೈಫ್’ ಆಶ್ರಯದಲ್ಲಿ ಆತ್ಮಹತ್ಯೆ ತಡೆ ಅರಿವು ಸಪ್ತಾಹ ಆಚರಿಸಲಾಯಿತು. ಆರೊಗ್ಯ ಕ್ಷಮತೆ ಶಿಕ್ಷಕಿ ರಕ್ಷಿತಾ ಮಾತನಾಡಿ, ಸೆ.10ರಂದು ಆತ್ಮಹತ್ಯೆ ಕುರಿತು ಅರಿವು ಮೂಡಿಸಲು ವಿಶ್ವ ಆತ್ಮಹತ್ಯೆ ತಡೆ ದಿನ ಆಚರಿಸಲಾಗುತ್ತದೆ. ಸೆಂಪ್ಟಂಬರ್‌ನ್ನು ಆತ್ಮಹತ್ಯೆ ತಡೆ ಅರಿವು ಮಾಸ ಎಂದು ಪರಿಗಣಿಸಲಾಗುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ 2015ರ ವರದಿಯಲ್ಲಿ ಭಾರತದಲ್ಲಿ ಪ್ರತಿ ಒಂದು ಗಂಟೆಗೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ಹೇಳಿದೆ. ಆದುದರಿಂದ ಆತ್ಮಹತ್ಯೆ ತಡೆ ಅರಿವು ಮೂಡಿಸುವ ಕೆಲಸ ಶಾಲೆಗಳಲ್ಲಿ ಆಗಬೇಕಾಗಿದೆ ಎಂದರು. ಅವರ ಮಾರ್ಗದರ್ಶನದಲ್ಲಿ 11ನೆ ತರಗತಿಯ ಮನೋವಿಜ್ಞಾನ ವಿದ್ಯಾರ್ಥಿಗಳು 6ರಿಂದ 11ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು. ಕಾರ್ಯಕ್ರಮ ಸಂಯೋಜನಾ ತಂಡ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಧನಾತ್ಮಕ ಮನೋಧರ್ಮ ಉತ್ತೇಜಿಸುವಂತಹ ಚಿತ್ರ ರಚನಾ ಸ್ಪರ್ಧೆ, 10 ಮತ್ತು 11ನೇ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ಜನ ಸಾಮಾನ್ಯರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ತಿಳಿಸಿದರು. ಅವರು ನಗರದ ತಮ್ಮ ಕಛೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ 66 ಮತ್ತು 169ಎ ಗೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ವಾಹನಗಳ ಹಾಗೂ ಜನಸಾಮಾನ್ಯರು ಸುರಕ್ಷಿತ ಹಾಗೂ ಸುಗಮವಾಗಿ ಸಂಚಾರಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ರಸ್ತೆ ಕಾಮಗಾರಿಗಳನ್ನು ಕೈಗೊಂಡಾಗ ಮಾತ್ರ ಅಪಘಾತ ಮುಕ್ತವಾಗುದರ ಜೊತೆಗೆ ಜನರು ಯಾವುದೇ ತೊಂದರೆ ಇಲ್ಲದೆ ಸಂಚರಿಸಬಹುದು ಇದಕ್ಕೆ ಒತ್ತು ನೀಡಬೇಕು ಎಂದರು. ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರದ ಸಂಗಂ ಹತ್ತಿರ ಮಳೆಯ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ, ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆಯನ್ನು ಸ್ಥಳೀಯ ಹಾಗೂ ರಾಷ್ಟ್ರೀಯ ಹೆದ್ದಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯುಜಿಡಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದರೆ ನನ್ನ ತನಿಖೆಗೆ ಬೆಂಬಲವಿದೆ. ತನಿಖೆ ಯಾರಿಂದ ಆಗಬೇಕು ಅನ್ನೊದನ್ನ ಸಭೆ ನಿರ್ಧರಿಸಲಿ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು. ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಅವರು ಯುಜಿಡಿ ಕಾಮಗಾರಿ ನಿಮಿತ್ತ ಭೂಮಿ ವಿಕ್ರಯದಲ್ಲಿ ಅವ್ಯವಹಾರ ಆಗಿದೆ ಎಂದು ಸದಸ್ಯ ಗಿರೀಶ್ ದೇವಾಡಿಗ ಮಾಡಿದ ಆರೋಪದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರಿಗೆ ನೀವು ಏನೇ ಹೇಳುವುದಿದ್ದರೂ ಬರವಣಿಗೆ ಮೂಲಕ ಕೊಡಿ ಎಂದು ಸೂಚಿಸಿದರು. ಭೂಮಿ ವಿಕ್ರಯ ಬಗ್ಗೆ ಹಿಂದಿನ ಸಭೆಯಲ್ಲಿ ತನಿಖೆಗೆ ಸರ್ವಾನುಮತದ ನಿರ್ಣಯ ಮಾಡಲಾಗಿದೆ ಎಂದು ಬರೆಯಲಾಗಿದ್ದು, ಅದಕ್ಕೆ ವಿರೋಧವಿದೆ ಎಂದು ಹೇಳಿದರು ಸರ್ವಾನುಮತ ನಿರ್ಣಯ ಸರಿಯಲ್ಲ. ವಿರೋಧದ ಬಗ್ಗೆ ಪತ್ರ ಕೊಟ್ಟಿದ್ದು, ಸರ್ವಾನು ಮತ ಬದಲು ಬಹುಮತ ನಿರ್ಣಯ ಎಂದು ತಿದ್ದುಪಡಿ ಮಾಡುವಂತೆ ಸದಸ್ಯ ಚಂದ್ರಶೇಖರ ಖಾರ್ವಿ ಒತ್ತಾಯಿಸಿದ್ದು, ಇದಕ್ಕೆ ಕೋಡಿ ಸದಸ್ಯ ಅಶ್ಪಕ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಡುಪಿ ಜಿ.ಪಂ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಡುಪಿ ಜಿಲ್ಲೆ, ಪಶು ಆಸ್ಪತ್ರೆ ಬಂದೂರು ಹಾಗೂ ಪಟ್ಟಣ ಪಂಚಾಯತ್ ಬಂದೂರು, ಆಜಾದಿ ಕಾ ಅಮೃತ ಮಹೋತ್ಸವ ಇದರ ವತಿಯಿಂದ ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ಉಚಿತ ಹುಚ್ಚುನಾಯಿ ರೋಗ (ರೇಬಿಸ್)ನಿರೋಧಕ ಲಸಿಕಾ ಶಿಬಿರ ಉದ್ಘಾಟನೆ ಕಾರ್ಯಕ್ರಮ ಪಶು ಆಸ್ಪತ್ರೆ ಬಂದೂರು ಆವರಣದಲ್ಲಿ ನಡೆಯಿತು. ಬೈಂದೂರು ತಹಶೀಲ್ದಾರ ಶೋಭಾಲಕ್ಷ್ಮಿ ಎಚ್. ಎಸ್. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೆಲವು ರೋಗ ತಡೆಗಟ್ಟುವುದು ಅತ್ಯಗತ್ಯ. ರೇಬಿಸ್ ಹಾಗೂ ಕೊರೋನಾದಂತಹ ರೋಗಗಳ ವಿರುದ್ದ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಇಂತಹ ಅಭಿಯಾನಗಳು ಇಲಾಖೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ. ಪಶುಸಂಗೋಪನಾ ಇಲಾಖೆ ತಾಲೂಕಿನ ವಿವಿಧ ಕಡೆಗಳಲ್ಲಿ ಉಚಿತ ಹುಚ್ಚುನಾಯಿ ರೋಗ ನಿರೋಧಕ ಶಿಬಿರಗಳನ್ನು ನಡೆಸುತ್ತಿದೆ ಎಂದರು. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧಿಕಾರಿ ನವೀನ್ ಕುಮಾರ್, ಹಿರಿಯ ಪಶು ವೈದ್ಯ ಪರೀಕ್ಷಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಾಮಾಕ್ಷಿ ಸೌಹಾರ್ದ ಕ್ರೆಡಿಟ್ ಸಹಕಾರಿ ನಿ. ಬೈಂದೂರು ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆ ಸಹಕಾರಿಯ ಕಛೇರಿ ಆವರಣದಲ್ಲಿ ನಡೆಯಿತು. ಸಹಕಾರಿ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ವಹಿಸಿ ಮಾತನಾಡಿ ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೋವಿಡ್ ಸಮಸ್ಯೆಯ ನಡುವೆಯೂ ಉತ್ತಮ ಸಾಧನೆ ಮಾಡಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯುತ್ತಿರುವುದು ಸದಸ್ಯರ ಪ್ರೋತ್ಸಾಹದಿಂದ ಸಾಧ್ಯವಾಗಿದೆ. ಈ ವರ್ಷದಲ್ಲಿ ಸದಸ್ಯರಿಗೆ ಶೇ. 8% ಡಿವಿಡೆಂಡ್ ಘೋಷಿಸಲಾಗಿದೆ ಎಂದರು. ಉಪಾಧ್ಯಕ್ಷ ಗೋಪಾಲಕೃಷ್ಣ ಕೆ, ನಿರ್ದೇಶಕರಾದ ಭೀಮೇಶ ಕುಮಾರ್ ಎಸ್. ಜಿ, ಪ್ರಸಾದ ಪ್ರಭು, ಅರುಣ ಕುಮಾರ, ಯು. ಪ್ರಕಾಶ ಭಟ್ ಉಪ್ಪುಂದ, ರಾಜೇಶ ಪೈ, ಬಾಲಕೃಷ್ಣ ಪ್ರಭು, ಗೌರಿ ಮಂಗೇಶ್, ಮೋಹಿನಿ ಜಿ. ಶೆಟ್ಟಿ, ಗಣೇಶ ಗಾಣಿಗ ಹಾಜರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಎಂ. ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು.
ಬೈಂದೂರು: ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಇಂದು ನಿನ್ನೆಯದಲ್ಲ! ಚತುಷ್ಪಥ ರಸ್ತೆ ನಿರ್ಮಾಣವಾಗುವುದಕ್ಕೂ ಮುಂಚೆಯೇ ಇಲ್ಲಿನ ತಿರುವು ಅಪಘಾತದ ಹೆದ್ದಾರಿಯಾಗಿ ಮಾರ್ಪಟ್ಟಿತ್ತು. ಪ್ರಪಾತ ಹಾಗೂ ಗುಡ್ಡದ ನಡುವಿನ ತಿರುವಿನ ಭೂ ಪ್ರದೇಶದಲ್ಲಿ ರಸ್ತೆ ಹಾದು ಹೋಗಿದ್ದು, ಆಗಾಗ ಭೀಕರ ಅಪಘಾತಗಳು ಸಂಭವಿಸಿ ರಾಷ್ಟ್ರೀಯ ಹೆದ್ದಾರಿ ಸಾವಿನ ಹೆದ್ದಾರಿಯಾಗಿ ಮಾರ್ಪಟ್ಟಿದೆ ಇಲ್ಲಿ ಟ್ಯಾಂಕರ್ ಅಪಘಾತದಲ್ಲಿ ಹೊತ್ತಿ ಉರಿದು ಚಾಲಕ ಸಜೀವ ದಹನವಾದ ಘಟನೆ, ಶಾಲಾ ವಾಹನ ಪಲ್ಟಿಯಾಗಿ ಇನ್ನೇನು ಪ್ರಪಾತಕ್ಕೆ ಬೀಳುವಲ್ಲಿ ತಪ್ಪಿದ ಅನಾಹುತ ಇಂತಹ ಹಲವಾರು ಗಂಭೀರ ಘಟನೆಗಳು ನಡೆಯುತ್ತಲೇ ಇದೆ. ಚತುಷ್ಪಥ ಹೆದ್ದಾರಿಯಾದ ನಂತರವು ತಪ್ಪದ ಗೋಳು:ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಗೆ ಚಾಲನೆ ಸಿಕ್ಕ ನಂತರ ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ ತಿರುವಿನ ದಿಕ್ಕನ್ನೆ ಬದಲಾಯಿಸಿ ಒತ್ತಿನೆಣೆ ರಾಘವೇಂದ್ರ ಮಠದ ಎದುರಿನಿಂದ ಗುಡ್ಡದ ಮೇಲೆ ಹಾದು ಹೋಗುತ್ತಿದ್ದ ರಾಷ್ಟ್ರೀಯ ಹೆದ್ದಾರಿಯನ್ನು ಗುಡ್ಡವನ್ನು ಮದ್ಯ ಭಾಗದಲ್ಲಿ ಕೊರೆದು ಸಮತಟ್ಟಾದ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವಂತೆ ಮಾಡಲಾಯಿತು. ಈ ಕಾಮಗಾರಿ ಅವೈಜ್ಞಾನಿಕ ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿಜಯ ಸೇವಾ ಟ್ರಸ್ಟ್ – ಯಕ್ಷಶ್ರೀ ಸಾಗರ ಸಂಯೋಜನೆಯಲ್ಲಿ ಯಕ್ಷಗಾನದ ವಿನೂತನ ಹೊಸ ಪ್ರಯೋಗ ಅನಿಲಾನಲ ಸಂಯೋಗ ಅ.1ರಂದು ನಾದಾಂಜಲಿ -ಫೇಸ್‌ಬುಕ್ ಪೇಜ್‌ನಲ್ಲಿ, ಅ.3ರಂದು ಧಾರೇಶ್ವರ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ. ಹೊಸ ಪರಿಕಲ್ಪನೆಯಲ್ಲಿ ಹೊಸ ಪ್ರಸಂಗವನ್ನು ವಿನ್ಯಾಸಗೊಳಿಸಲಾಗಿದ್ದು ಭೀಮ – ದ್ರೌಪದಿಯರ ಕಥಾನಕವು ಮಹಾಭಾರತ ಯಾನದ ಕಲ್ಪನೆಯಲ್ಲಿ ಸುದೀರ್ಘ ಆಖ್ಯಾನವಾಗಿ 3 ಭಾಗದಲ್ಲಿ ಪ್ರಸಾರವಾಗಲಿದೆ. ಅ.1 ಶುಕ್ರವಾರ ಸಂಜೆ 6.30 ರಿಂದ ಭಾಗ 1 ನಾದಾಂಜಲಿ ಫೇಸ್ ಬುಕ್ ಪೇಜ್‌ನಲ್ಲಿ ಪ್ರಸಾರವಾಗಿ, ಅ.3ರಂದು ಸಂಜೆ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ. ಇದರ ಪರಿಕಲ್ಪನೆ, ಸಂಯೋಜನೆ ಸಂಘಟಕ ಡಾ. ಎಚ್. ಎಸ್. ಮೋಹನ್, ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರದ್ದಾಗಿದ್ದು ಪ್ರಸಂಗ ಜೋಡಣೆ, ನಿರ್ವಹಣೆ ಮತ್ತು ನಿರ್ದೇಶನದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ ಅವರ ಪಾತ್ರ ಪ್ರಧಾನವಾಗಿದೆ. ಸಂಯೋಜನೆ ವೇಳೆ ಕುಮಾರವ್ಯಾಸ, ಹೊಸ್ತೋಟ ಮಂಜುನಾಥ ಭಾಗವತರು, ವಿಷ್ಣು ಭಾಗವತರು ಬ್ರಹ್ಮಾವರ, ದೇವಿದಾಸ, ತಿಮ್ಮಣ್ಣ ಕವಿ ಅವರ ಪ್ರಸಂಗದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವೊಡಾಫೋನ್ ಫೌಂಡೇಶನ್ ವತಿಯಿಂದ ವೊಡಾಫೋನ್ ಐಡಿಯಾ ಲಿಮಿಟೆಡ್ ಸಂಸ್ಥೆಯ ಸಹಯೋಗದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಶಿಕ್ಷಕರಿಗಾಗಿ ಕೊಡಮಾಡುವ 2021ನೇ ಸಾಲಿನ ರಾಷ್ಟ್ರೀಯ ಶಿಕ್ಷಕ ವೇತನ ಪುರಸ್ಕಾರವನ್ನು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್. ಗಂಗೊಳ್ಳಿ ಅವರು ಪಡೆದುಕೊಂಡಿದ್ದಾರೆ. ಈ ಬಾರಿ ಭಾರತದ 22 ರಾಜ್ಯಗಳಲ್ಲಿನ ಒಟ್ಟು 110 ಶಿಕ್ಷಕರಿಗೆ ಈ ಪುರಸ್ಕಾರವನ್ನು ನೀಡಲಾಗಿದೆ. ಶಿಕ್ಷಕರ ಶೈಕ್ಷಣಿಕ ಮತ್ತು ಇತರ ಕ್ಷೇತ್ರಗಳಲ್ಲಿನ ಬಹುಮುಖ ಪ್ರತಿಭೆಯ ಸಾಧನೆಗಳನ್ನು ಗಮನಿಸಿ ಹಾಗು ಅವರ ಶೈಕ್ಷಣಿಕ ಕೌಶಲ್ಯವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗುಜ್ಜಾಡಿಯ ಮಾರಿಕಾಂಬ ಮಹಿಳಾ ಸಹಕಾರಿ ಸಂಘದ 2020-21ನೇ ಸಾಲಿನ ಮಹಾಸಭೆ ತ್ರಾಸಿಯ ಅಂಬೇಡ್ಕರ್ ಸಭಾಭವನದಲ್ಲಿ ಜರಗಿತು. ಸಂಘದ ಅಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕರಾದ ವಿಜಯ ಬಿ.ಗಾಣಿಗ, ಸುರೇಖಾ ಕಾನೋಜಿ, ಮಹಾಲಕ್ಷ್ಮೀ, ಶಾರದಾ, ಶಾಂತ, ಚೌಕಿ ಪುಷ್ಪಾ ಖಾರ್ವಿ, ಲಲಿತಾ ಖಾರ್ವಿ, ಶ್ಯಾಮಲಾದೇವಿ, ರತ್ನಾ ಟಿ.ದೇವಾಡಿಗ, ಶಾಂತ ಮರಾರಿ ನಾಯ್ಕ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವಾಮಿಲಿಂಗೇಶ್ವರ 2020-21ನೇ ಸಾಲಿನ ಲೆಕ್ಕಪರಿಶೋಧನೆ ವರದಿ ಮಂಡಿಸಿದರು. ಸಂಘದ ಸಿಬ್ಬಂದಿ ಶ್ರೀಲವಿ ಸ್ವಾಗತಿಸಿದರು. ಭಾಸ್ಕರ ಗಾಣಿಗ ಕೊಡಪಾಡಿ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕಿ ರೇಖಾ ಖಾರ್ವಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಗೋಶಾಲೆಗಳಲ್ಲಿನ ಗೋವುಗಳ ಪಾಲನೆಯನ್ನು ಸೇವಾ ಮನೋಭಾವದಿಂದ ಯಾವುದೇ ಪ್ರತಿಫಲಗಳನ್ನು ಬಯಸದೇ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಹೇಳಿದರು. ಅವರು ತಮ್ಮ ಕಛೇರಿಯಲ್ಲಿ ನಡೆದ ಪ್ರಾಣಿ ದಯಾ ಸಂಘದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದಲ್ಲಿ ಸರಕಾರ ಜಾನುವಾರು ಹತ್ಯ ಪ್ರತಿಬಂಧಕ ಕಾಯ್ದೆ ಹಾಗೂ ಸಂರಕ್ಷಣೆ ಕಾನೂನು ಜಾರಿಗೆ ತಂದಿದೆ. ಗೋರಕ್ಷಣೆಗಾಗಿ ಸರಕಾರ ಜಿಲ್ಲೆಗೊಂದರಂತೆ ಗೋಶಾಲೆ ಆರಂಭಿಸಲು ಮುಂದಾಗಿದ್ದು ಪ್ರತಿ ಜಿಲ್ಲೆಗೆ ಮೊದಲನೇ ಹಂತದಲ್ಲಿ ೨೪ ಲಕ್ಷ ರೂಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು. ಜಿಲ್ಲೆಯಲ್ಲಿ ಅನೇಕ ದಾನಿಗಳು ಇದ್ದಾರೆ, ಅವರ ಸಹಕಾರ ಹಾಗೂ ಜನರ ಸಹಭಾಗಿತ್ವದೊಂದಿಗೆ ಗೋಶಾಲೆಗಳನ್ನು ನಿರ್ವಹಣೆ ಮಾಡಬೇಕು ಎಂದ ಅವರು ಸರಕಾರ ಪಶುಗಳ ನಿರ್ವಹಣೆಗೆ ದಿನಕ್ಕೆ 17.50 ರೂಗಳನ್ನು ನೀಡಲು ನಿಗದಿಪಡಿಸಿದೆ. ಆದರೆ ಪಶುಗಳ ನಿರ್ವಹಣೆಗೆ ಇದು ಸಾಕಾಗುವುದಿಲ್ಲ ಹೆಚ್ಚಿನ ಅನುದಾನ ಬೇಕು ಎಂಬ ಬಗ್ಗೆ ಸಂಘ ಸಂಸ್ಥೆಗಳಿಂದ…
