ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಆಸ್ಕರ್ ಫೆರ್ನಾಂಡಿಸ್ ಅವರು ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದರು. ಪಕ್ಷ ಕಟ್ಟುವ ಸಂಘಟನಾ ಚತುರತೆ ಹಾಗೂ ಸಾಕಷ್ಟು ಯುವ ನಾಯಕರನ್ನು ಹುಟ್ಟುಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಜಾತಶತ್ರುವಿನಂತೆ ಬದುಕಿದ್ದ ಅವರನ್ನು ಪಕ್ಷಾತೀತವಾಗಿ ಎಲ್ಲರೂ ಮೆಚ್ಚುತ್ತಿದ್ದರು ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಸೋಮವಾರ ಬೈಂದೂರು ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಕಾಂಗ್ರೆಸ್ ನಾಯಕ ದಿ. ಆಸ್ಕರ್ ಫೆರ್ನಾಂಡಿಸ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ಈ ಸಂದರ್ಭ ಕಾಂಗ್ರೆಸ್ ಪಕ್ಷದ ನಾಯಕರುಗಳಾದ ಮಂಜುನಾಥ್ ಹೆಬ್ಬಾರ್, ಪಿ.ಎಲ್. ಜೋಸ್, ಅಶೋಕ್ ಶೆಟ್ಟಿ, ಎಸ್. ಕುಮಾರ್, ಲಿಂಗಪ್ಪ, ಲೋಕೇಶ್ ಖಾರ್ವಿ ಅವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಕೆಪಿಸಿಸಿ ಸದಸ್ಯ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ ಮೊದಲಾದವರು ನುಡಿನಮನ ಸಲ್ಲಿಸಿದರು. ಕಾಂಗ್ರೆಸ್ ಮುಖಂಡರಾದ ವಾಸುದೇವ ಯಡಿಯಾಳ್,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ, ಸೆ.20: ಇನ್ಸ್ಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ದೇಶಕ್ಕೆ 21ನೇ ರ್ಯಾಂಕ್ ಹಾಗೂ ಸಿಎ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ದೇಶಕ್ಕೆ 29ನೇ ರ್ಯಾಂಕ್ ಗಳಿಸಿದ ವಿದ್ಯಾರ್ಥಿನಿ ವೈಷ್ಣವಿ ಎಂ.ವಿ. ಅವರನ್ನು ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಿಎ/ಸಿಎಸ್/ ಸಿಎಂಎ ಹಾಗೂ ಬ್ಯಾಂಕಿಂಗ್ ತರಬೇತಿ ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು. ಶಿಕ್ಷ ಪ್ರಭಾ ಅಕಾಡೆಮಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಪ್ರತಾಪ್ಚಂದ್ರ ಶೆಟ್ಟಿ ಹಾಗೂ ಭರತ್ ಶೆಟ್ಟಿ ಮಾತನಾಡಿ, ವೈಷ್ಣವಿ ಸಾಧನೆ ಗ್ರಾಮೀಣ ಪ್ರದೇಶದ ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿದೆ. ದೇಶದ ಒಟ್ಟಾರೆ ಸಿಎ ಇಂಟರ್ಮೀಡಿಯೇಟ್ ಹಾಗೂ ಸಿಎ ಫೌಂಡೇಶನ್ ಫಲಿತಾಂಶಕ್ಕೆ ಹೋಲಿಸಿದರೆ ನಮ್ಮ ಸಂಸ್ಥೆಯ ಸಾಧನೆ ಕೊರೊನಾ ಕಾಲದಲ್ಲೂ ಶ್ರೇಷ್ಠವಾದುದು. ಪ್ರಥಮ ಪ್ರಯತ್ನದಲ್ಲೇ ಸಿಎ ಫೌಂಡೇಶನ್ನ 41 ವಿದ್ಯಾರ್ಥಿಗಳು ಹಾಗೂ ಸಿಎ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ 15 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ ಎಂದರು. 50…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲಾ ಪಂಚಾಯತ್ ಉಡುಪಿ, ಆಯುಷ್ ಇಲಾಖೆ ಉಡುಪಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು ಇವರ ಸಂಯುಕ್ತ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಕಾಲ್ತೋಡು ಸರಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಜರಗಿತು. ಕಾಲ್ತೋಡು ಗ್ರಾಮ ಪಂಚಾಯತ್ ಪಿಡಿಒ ಸತೀಶ ತೋಳಾರ್ ಕಾರ್ಯಕ್ರಮ ಉದ್ಘಾಟಿಸಿ ಶುಭಾಶಂಸನೆಗೈದರು. ಕಾಲ್ತೋಡು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ವೀಣಾ ಕಾರಂತ್ ಅವರು ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಹದಿಹರೆಯದ ಹೆಣ್ಣು ಮಕ್ಕಳು, ಗರ್ಭಿಣಿಯರ ಆಹಾರ-ವಿಹಾರದ ಬಗ್ಗೆ, ಕಡಿಮೆ ತೂಕದ ಮಕ್ಕಳ ಆರೋಗ್ಯ ವರ್ಧನೆಯ ಬಗ್ಗೆ, ನಮ್ಮ ಸುತ್ತಮುತ್ತಲಿನ ತರಕಾರಿ, ಹಣ್ಣು ಬೇಳೆಕಾಳುಗಳನ್ನುಉಪಯೋಗಿಸಿ ಉತ್ತಮ ಆರೋಗ್ಯ ಪಡೆಯುವ ಬಗ್ಗೆ ವಿವರಿಸಿದರು. ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಶೆಡ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸಹಾಯಕಿ ಪ್ರತಿಮಾ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಸ್ವಂತಿಕೆಯಿಂದ ಪಾತ್ರಗಳಿಗೆ ಜೀವತುಂಬುವ ಸಹೃದಯಿ ಕಲಾವಿದ ಉಳ್ಳೂರು ಶಂಕರ ದೇವಾಡಿಗ ಅವರಿಗೆ ಹಟ್ಟಿಯಂಗಡಿ ಮೇಳ ಹಾಗೂ ಬೋಳಂಬಳ್ಳಿ ಮೇಳದ ಕಲಾವಿದರ ಪೋಷಣೆಗಾಗಿ ಹಮ್ಮಿಕೊಂಡ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅರೆಹೊಳೆ ಕ್ರಾಸ್ ಮಾಲಸ ಮಾಂಗಲ್ಯ ಆರ್ಕೆಡ್ ನಲ್ಲಿ ನಾವುಂದ ಲಯನ್ಸ್ ಕ್ಲಬ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮರವಂತೆ-ಬಡಾಕೆರೆ ವ್ಯ.ಸೇ.ಸ.ಸಂಘದ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಸನ್ಮಾನಿಸಿದರು. ಖಂಬದಕೋಣೆ ರೈ.ಸೇ.ಸ.ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಸ್ಥಾಪಕಾಧ್ಯಕ್ಷ ವಕ್ವಾಡಿ ಭಾಸ್ಕರ ಶೆಟ್ಟಿ ಸಮಾರೋಪ ಮಾತುಗಳನ್ನಾಡಿದರು,ಲಯನ್ಸ್ ಅಧ್ಯಕ್ಷ ನರಸಂಹ ದೇವಾಡಿಗ ಅತಿಥಿ ಸತ್ಕರಿಸಿದರು, ಮುಂಬಯಿ ಗೆಳೆಯರ ಸ್ವಾವಲಂಬನಾ ಕೇಂದ್ರದ ಅಧ್ಯಕ್ಷ ವೆಂಕಟೇಶ ಪೈ, ನಿವೃತ್ತ ಅಧ್ಯಾಪಕ ಸದಾಶಿವ ಶ್ಯಾನುಬೋಗ, ಬೈಂದೂರು ಕ್ಷೇ.ಶಿ.ಕಛೇರಿ ಸಮನ್ವಯಾಧಿಕಾರಿ ಅಬ್ದುಲ್ ರವೂಫ್, ಅಧ್ಯಾಪಕ ಕರುಣಾಕರ ಶೆಟ್ಟಿ, ಬೈಂದೂರು ಅರ್ಬನ್ ಕೋಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಮಣಿಕಂಠ ದೇವಾಡಿಗ, ಉದ್ಯಮಿಗಳಾಗ ಪ್ರದೀಪ್ ಶೆಟ್ಟಿ, ಸಮರ ಶೆಟ್ಟಿ, ಕೃಷ್ಣಾನಂದ ಕಾಮತ್ ಮುಂತಾದವರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರಿನ ರಾಷ್ಟ್ರೀಯ ಹೆದ್ದಾರಿಯಿಂದ ಸೀತಾರಾಮಚಂದ್ರ ದೇವಾಲಯದ ಎದುರಿನ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ನಾಕಟ್ಟೆ ರಸ್ತೆಯ ಕಳೆದ ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ಹಾಳು ಕೊಂಪೆಯಾದಂತಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ತೀರಾ ತಗ್ಗು ಪ್ರದೇಶದಲ್ಲಿರುವ ಈ ರಸ್ತೆಯು ಸಂಪೂರ್ಣ ಕಿತ್ತು ಹೋಗಿದ್ದು ಮೊಳಕಾಲು ಮಟ್ಟಕ್ಕೆ ನೀರು ತುಂಬಿ ಹೊಳೆಯಂತೆ ಭಾಸವಾಗುತ್ತದೆ. ಕಿತ್ತು ಹೋದ ಕಾಂಕ್ರೀಟ್ ರಸ್ತೆ ಕೆಸರುಮಯವಾಗಿದ್ದು, ರಸ್ತೆಯ ಬದಿಯಂಚು ಗಮನಿಸದೆ ಎಷ್ಟೊ ಬೈಕ್ ಸವಾರರು ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಅರ್ಧ ಮಾರ್ಗ ಮಾತ್ರವೇ ಕಾಂಟ್ರಿಕ್ ಮಾಡಲಾಗಿದ್ದು, ಸ್ವಲ್ಪ ಭಾಗವನ್ನು ಹಾಗೇಯೇ ಬಿಡಲಾಗಿದೆ. ನಾಕಟ್ಟೆಯಿಂದ ಬೈಂದೂರು ಸೀತಾರಾಮಚಂದ್ರ ದೇವಾಲಯ ಹಾಗೂ ಮುಸ್ಲಿಂ ಕೇರಿಗೆ ನೇರ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಇದನ್ನು ಬಿಟ್ಟರೆ ಜನ ಬೈಂದೂರು ಪೇಟೆ ಇಲ್ಲವೇ ಯಡ್ತರೆ ಜಂಕ್ಷನ್ ಮೂಲಕ ಸುತ್ತಿ ಬಳಸಿ ಹೋಗಬೇಕಾದ ಅನಿವಾರ್ಯತೆ ಇದೆ. ರಸ್ತೆಯ ಅವ್ಯವಸ್ಥೆಯ ಕುರಿತು ಈಗಾಗಲೇ ಹಲವಾರು ಬಾರಿ ಸ್ಥಳೀಯಾಡಳಿತದ ಗಮನಕ್ಕೆ ತಂದರೂ ಎನು ಪ್ರಯೋಜನವಾಗಿಲ್ಲ ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿಎ/ಸಿಎಸ್/ ಸಿಎಮ್ಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ಸಂಸ್ಥೆಯ ವಿದ್ಯಾರ್ಥಿನಿ ವೈಷ್ಣವಿ ಅವರು 543 ಅಂಕ ಗಳಿಸುವುದರೊಂದಿಗೆ ಅಖಿಲ ಭಾರತಕ್ಕೆ 29ನೇ ರ್ಯಾಂಕ್ ಗಳಿಸಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ರಕ್ಷಿತ್ ಶೆಟ್ಟಿ 246, ಸಿಂಚನ ಶೆಟ್ಟಿ 239, ಸುದರ್ಶನ್ ಅಡಿಗ 232, ಸುಚಿನ್ ಕುಮಾರ್ ಶೆಟ್ಟಿ 228, ಗಣೇಶ್ ಮಧ್ಯಸ್ಥ 213, ಅಖಿಲ ಹೆಬ್ಬಾರ್ 210, ಸಹನಾ 206, ಆಯೆಷ ತುಬಾ 203, ಭೂಮಿಕ 202, ಮೈತ್ರಿ 201 ಹೊಸ ಪಠ್ಯಕ್ರಮದ ಇಂಟರ್ಮೀಡಿಯೇಟ್ ಪರೀಕ್ಷೆ ಉತ್ತೀರ್ಣರಾದರೆ, ರಕ್ಷಿತ್ ಶೆಟ್ಟಿ 246, ರೋಹನ್ 178, ಮೇಘರಾಜ್ 150, ಹಳೆ ಪಠ್ಯಕ್ರಮದ ಇಂಟರ್ಮೀಡಿಯೇಟ್ ಪರೀಕ್ಷೆಯನ್ನು ಉತ್ತೀರ್ಣರಾಗಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳು ಈಗಾಗಲೇ ಅಖಿಲ ಭಾರತ ಮಟ್ಟದಲ್ಲಿ ಫೌಂಡೇಶನ್ ಪರೀಕ್ಷೆ ಇಂಟರ್ಮೀಡಿಯೇಟ್ ಪರೀಕ್ಷೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯದ್ವಾತದ್ವ ಕಂಟೈನರ್ ಚಲಾಯಿಸಿ, 4 ಕಿ.ಮೀ ತನಕ ಬ್ಯಾರಿಕೇಡ್ ಎಳೆದೊಯ್ದು ಕೆಲಹೊತ್ತು ಆತಂಕ ಸೃಷ್ಠಿಸಿದ ಘಟನೆ ತಾಲೂಕಿನ ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಡೆದಿದೆ. ಕುರುಚಲು ಹುಲ್ಲು ಸಾಗಿಸುತ್ತಿದ್ದ ಛತ್ತೀಸ್ಗಢ್ ನೋಂದಣಿಯ ಕಂಟೇನರ್ ಚಾಲಕ ಮದ್ಯ ಸೇವಿಸಿ ಕಂಟೇನರ್ ಚಲಾಯಿಸಿದ ಪರಿಣಾಮ ಮುಳ್ಳಿಕಟ್ಟೆ ಜಂಕ್ಷನ್ನಲ್ಲಿ ಇದ್ದ ಬ್ಯಾರಿಕೇಡ್ ಅನ್ನು ಬರೋಬ್ಬರಿ ನಾಲ್ಕು ಕಿ.ಮೀ ದೂರದವರೆಗೂ ಎಳೆದು ತಂದಿದ್ದಾನೆ. ಮುಳ್ಳಿಕಟ್ಟೆಯ ರಿಕ್ಷಾ ಚಾಲಕರು ಕಂಟೇನರ್ ನಿಲ್ಲಿಸುವಂತೆ ಸೂಚನೆ ನೀಡಿದರೂ ಮದ್ಯದ ನಶೆಯಲ್ಲಿದ್ದ ಚಾಲಕ ಒಂದೇ ಸಮನೆ ವಾಹನ ಚಲಾಯಿಸಿ ಅರಾಟೆ ಸೇತುವೆಯ ತಡೆಗೋಡೆಗೂ ಢಿಕ್ಕಿ ಹೊಡೆದಿದ್ದಾನೆ. ಅನಾಹುತ ತಪ್ಪಿಸಿದ ಮುಳ್ಳಿಕಟ್ಟೆ ರಿಕ್ಷಾ ಚಾಲಕರು:ಲಾರಿ ಯದ್ವಾ ತದ್ವಾ ಚಲಿಸುವುದನ್ನು ಗಮನಿಸಿದ ಮುಳ್ಳಿಕಟ್ಟೆಯ ರಿಕ್ಷಾ ಚಾಲಕರಾದ ಪ್ರದೀಪ್ ಬಿಲ್ಲವ, ಮಾಣಿ, ಶಶಿ ಮುಂತಾದವರು ಕೂಡಲೇ ಹೆಮ್ಮಾಡಿ ರಿಕ್ಷಾ ಚಾಲಕರಿಗೆ ಮಾಹಿತಿ ನೀಡಿ ಕಂಟೇನರ್ ಅನ್ನು ಓವರ್ ಟೇಕ್ ಮಾಡಿಕೊಂಡು ಬಂದಿದ್ದು, ಹೆಮ್ಮಾಡಿಯಲ್ಲೂ ಕಂಟೇನರ್ ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದ ಕಾರಣ ಕಂಟೇನರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನದಿಯಲ್ಲಿ ಈಜಲು ತೆರಳಿದ್ದ ಯುವಕ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ತಾಲೂಕಿನ ಮೊವಾಡಿ ಸೇತುವೆ ಬಳಿ ಭಾನುವಾರ ಸಂಜೆ ಸಂಭವಿಸಿದೆ. ತ್ರಾಸಿ ಹೋಲಿಕ್ರಾಸ್ ಸಮೀಪದ ನಿವಾಸಿ ಮಹೇಂದ್ರ (24) ಮೃತ ಯುವಕ. ಭಾನುವಾರ ಸಂಜೆಯ ವೇಳೆಗೆ ಮೊವಾಡಿಯ ಸೇತುವೆ ಬಳಿಯ ಸೌಪರ್ಣಿಕಾ ನದಿ ತೀರಕ್ಕೆ ತೆರಳಿದ್ದ ಮಹೇಂದ್ರ ಹಾಗೂ ಆಶಿಕ್ ನೀರಿಗೆ ಇಳಿದಿದ್ದು ಇನ್ನೋರ್ವ ಸ್ನೇಹಿತ ಶರತ್ ಸೇತುವೆ ಮೇಲೆ ನಿಂತು ವೀಕ್ಷಿಸುತ್ತಿದ್ದ. ಈ ವೇಳೆ ನೀರಿನ ಸೆಳೆತ ಜಾಸ್ತಿ ಇದ್ದುದರಿಂದ ಮಹೇಂದ್ರ ನೀರುಪಾಲಾಗಿದ್ದಾನೆ. ಆಶಿಕ್ ನನ್ನು ಸ್ಥಳೀಯರಾದ ರತ್ನಾಕರ್ ಕಾಂಚನ್ ಮತ್ತು ಯೋಗೇಂದ್ರ ಕಾಂಚನ್ ರಕ್ಷಿಸಿದ್ದಾರೆ. ನೀರುಪಾಲಾದ ಯುವಕನಿಗಾಗಿ ರಾತ್ರಿಯ ತನಕವೂ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದ್ದು, ಮೃತದೇಹ ಪತ್ತೆಯಾಗಿರಲಿಲ್ಲ. ಸೋಮವಾರವೂ ಹುಡುಕಾಟ ಮುಂದುವರಿಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ, ಸ್ಥಳೀಯರು ದೋಣಿ ಮೂಲಕ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಗಂಗೊಳ್ಳಿ ಠಾಣಾಧಿಕಾರಿ ನಂಜಾ ನಾಯ್ಕ್ ಹಾಗೂ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ಇಲ್ಲಿನ ಶಾಸ್ತ್ರೀ ವೃತ್ತದ ಬಳಿಯ ಫ್ಲೈಓವರ್ ಕೆಳಭಾಗದಲ್ಲಿದ್ ನವಯುಗ ಕಂಪೆನಿಗೆ ಸೇರಿದ ಸಾಮಾಗ್ರಿಗಳನ್ನು ಮುಂದಿನ ನಾಲ್ಕು ದಿನಗಳಲ್ಲಿ ತೆರವುಗೊಳಿಸಲು ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು ನವಯುಗ ಕಂಪೆನಿಗೆ ಸೂಚನೆ ನೀಡಿದ್ದಾರೆ. ಅವರು ಕುಂದಾಪುರ ಫ್ಲೈಓವರ್ ಕೆಳಗಿನ ಸಾಮಾಗ್ರಿ ತೆರವು ಕಾರ್ಯಾಚರಣೆ ವೀಕ್ಷಿಸಿದ ಬಳಿಕ ಕುಂದಾಪುರ ಮಿನಿ ವಿಧಾನಸೌಧದಲ್ಲಿ ನವಯುಗ ಇಂಜಿನಿಯರ್ ಜೊತೆ ಸಭೆ ನಡೆಸಿದರು. ನಾಲ್ಕು ದಿನಗಳಲ್ಲಿ ಸಾಮಾಗ್ರಿ ತೆರವು ಮಾಡುವುದು, ಕುಂದಾಪುರ ನಗರಕ್ಕೆ ಸಂಪರ್ಕಿಸುವ ದುರ್ಗಾಂಬ ಮೋಟಾರ್ ಎದುರು ‘ಕುಂದಾಪುರ’ ಎಂದು ನಾಮಫಲಕ ಅಳವಡಿಕೆ, ಅಲ್ಲಲ್ಲಿ ಸೂಚನಾಫಲಕ, ನಾಮಫಲಕ ಅಳವಡಿಕೆ, ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಸಂಪರ್ಕಿಸುವಲ್ಲಿ ಡಾಂಬಾರು ಹಾಕುವುದು, ಅಂಡರ್ ಪಾಸ್ ಸಮೀಪದ ಸಮಸ್ಯೆಗಳ ಪರಿಹಾರ, ಬೀದಿ ದೀಪಗಳ ನಿರ್ವಹಣೆ ಮಾಡಬೇಕು ಎಂದರು. ಅಲ್ಲದೆ ಇದೇ ತಿಂಗಳ 29ರೊಳಗೆ ಶಾಸ್ತ್ರೀ ವೃತ್ತದ ಸಮೀಪ ಡಾಮರು ರಸ್ತೆ ಕೆಲಸ ಮುಗಿಸಬೇಕು ಎಂದು ಸಂಬಂದಪಟ್ಟವರಿಗೆ ಗಡುವು ನೀಡಿದರು. ಡಿವೈಎಸ್ಪಿ ಶ್ರೀಕಾಂತ್ ಕೆ. ಮಾತನಾಡಿ, ನವಯುಗ ಕಂಪೆನಿಯವರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದ ಸಂದರ್ಭ ಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿಬಿದ್ದಿದ್ದ ದೋಣಿಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಮೃತದೇಹ ಶನಿವಾರ ಪತ್ತೆಯಾಗಿದೆ. ಚರಣ್ ಖಾರ್ವಿ (27) ಅವರ ಮೃತದೇಹ ಬೆಳಿಗ್ಗೆ ಅಮ್ಮನವರ ತೊಪ್ಲು ಓಲಗ ಮಂಟಪ ಸಮೀಪದ ಸಮುದ್ರ ತೀರದಲ್ಲಿ ದೊರೆತಿದ್ದರೇ, ಅಣ್ಣಪ್ಪ ಖಾರ್ವಿ ಅವರ ಮೃತದೇಹ ಮಧ್ಯಾಹ್ನ ಕರ್ಕಿಕಳಿ ಬಳಿ ದೊರೆತಿದೆ. ಘಟನಾ ಸ್ಥಳಕ್ಕೆ ಬೈಂದೂರು ಕರಾವಳಿ ಕಾವಲು ಪಡೆಯ ಡಿವೈಎಸ್ಪಿ ಟಿ.ಎಸ್. ಸುಲ್ಪಿ, ಪೊಲೀಸ್ ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ, ಠಾಣಾಧಿಕಾರಿ ಪವನ್ ನಾಯ್ಕ್, ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಎಸ್ಪೈ ವಿಜಯ ಅಮೀನ್, ಸ್ಥಳೀಯ ಮೀನುಗಾರರು ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದರು. ಬೈಂದೂರು ಶಾಸಕರ ಭೇಟಿ:ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರು ಘಟನಾ ಸ್ಥಳಕ್ಕೆ ಭೇಟಿ ನಿಡಿ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಬೈಂದೂರು ಕ್ಷೇತ್ರದ ಮೀನುಗಾರರಿಗೆ ಮೂರು ಸಾವಿರ ಜೀವರಕ್ಷಕ ಜಾಕೆಟ್ ಒದಗಿಸುವಂತೆ ಮೀನುಗಾರಿಕಾ ಇಲಾಖೆಎ ಕೋರಲಾಗಿದೆ ಎಂದರಲ್ಲದೇ, ಮೃತರ ಕುಟುಂಬಕ್ಕೆ…
