ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಹಾಗೂ ಮಹಿಳಾ ಸಬಲೀಕರಣ ಘಟಕ ಜಂಟಿ ಆಶ್ರಯದಲ್ಲಿ “ವಿದ್ಯಾರ್ಥಿನಿಯರಿಗಾಗಿ ಜಾಗೃತಿ ಕಾರ್ಯಕ್ರಮ”ವನ್ನು ಆಯೋಜಿಸಲಾಯಿತು
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅವರು, ವಿದ್ಯಾರ್ಥಿನಿಯರ ಸರ್ವಾಂಗೀಣ ವಿಕಾಸಕ್ಕೆ ದೈಹಿಕ, ಮಾನಸಿಕ ಆರೋಗ್ಯ ಮತ್ತು ನೈರ್ಮಲ್ಯವೇ ಬುನಾದಿ. ಶುದ್ಧ ಆಹಾರ ಹಾಗೂ ವ್ಯಾಯಾಮವನ್ನು ಮೈಗೂಡಿಸಿಕೊಂಡು, ಮೊಬೈಲ್ ದಾಸ್ಯ ಮತ್ತು ನಿದ್ರಾಹೀನತೆಯಿಂದ ದೂರವಿದ್ದು ಸ್ವಾವಲಂಬಿಗಳಾಗಬೇಕು. ಕೀಳರಿಮೆ, ಖಿನ್ನತೆಯಂತಹ ಭಾವನೆಗಳನ್ನು ತೊರೆದು ಅಧ್ಯಯನ ಹಾಗೂ ಕೌಶಲ್ಯಾಭಿವೃದ್ಧಿಯತ್ತ ಗಮನಹರಿಸಿ, ಮನಸ್ಸು ಮತ್ತು ದೇಹ ಪರಸ್ಪರ ಪೂರಕವಾಗಿದ್ದು, ಧನಾತ್ಮಕ ಚಿಂತನೆಗಳೊAದಿಗೆ ಮುನ್ನಡೆಯಿರಿ,” ಎಂದು ಪ್ರೇರೇಪಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಸ್ವಾಗತಿಸಿದರು. ಮಹಿಳಾ ಸಬಲೀಕರಣ ಘಟಕದ ಸಂಯೋಜಕಿ ವೀಣಾ ವಿ. ಭಟ್ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
















