Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರಪಂಚದಲ್ಲಿ ಯಾರು ಯಾರಿಗಿಂತಲೂ ಕಡಿಮೆಯೂ ಅಲ್ಲ. ಹೆಚ್ಚು ಅಲ್ಲ. ಜಾತಿ, ಧರ್ಮ, ಭಾಷೆಗಳ ಗಡಿಯನ್ನು ಮೀರಿ ಮನುಷ್ಯನನ್ನು ಮನುಷ್ಯನಂತೆ ಕಾಣುವುದು ಮುಖ್ಯವಾದುದೆಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರದೀಪ ಕುಮಾರ್ ಶೆಟ್ಟಿ ಕೆಂಚನೂರು ಹೇಳಿದರು. ಅವರು ನೆಹರು ಯುವ ಕೇಂದ್ರ ಉಡುಪಿ ಹಾಗೂ ಸುರಭಿ ರಿ. ಬೈಂದೂರು ಸಂಯುಕ್ತಾಶ್ರಯದಲ್ಲಿ ಇಲ್ಲಿನ ರೋಟರಿ ಭವನದಲ್ಲಿ ಮಂಗಳವಾರ ಜರುಗಿದ ಸದ್ಭಾವನಾ ದಿನಾಚರಣೆಯಲ್ಲಿ ಮಾತನಾಡಿ ಬಣ್ಣ, ತಿನಿಸು, ಪ್ರಕೃತಿ ಎಲ್ಲದರಲ್ಲಿಯೂ ಭಿನ್ನತೆ ಇರುವಾಗ ಪ್ರಕೃತಿಯ ಭಾಗವೇ ಆಗಿರುವ ಮನುಷ್ಯರೆಲ್ಲರೂ ಒಂದೇ ರೀತಿಯಾಗಿ ಬದುಕಬೇಕು ಎಂಬುದರಲ್ಲಿ ಅರ್ಥವಿಲ್ಲ. ವಿವಿಧತೆಯನ್ನು ಗೌರವಿಸುತ್ತಲೇ ಏಕತೆಯನ್ನು ಸಾರುವುದು ಅಗತ್ಯ ಎಂದರು. ಸುರಭಿ ರಿ. ಬೈಂದೂರು ಅಧ್ಯಕ್ಷ ಸತ್ಯನಾ ಕೊಡೇರಿ ಅಧ್ಯಕ್ಷತೆ ವಹಿಸಿದ್ದರು. ಭರತನಾಟ್ಯ ಗುರು ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ಅತಿಥಿಗಳಾಗಿದ್ದರು. ನೆಹರು ಯುವ ಕೇಂದ್ರದ ಸ್ವಯಂಸೇವಕ ಸುನಿಲ್ ಹೆಚ್. ಜಿ. ಬೈಂದೂರು ಪ್ರಾಸ್ತಾವಿಕ ಮಾತನಾಡಿ ಬಳಿಕ ಸದ್ಭಾವನಾ ಪ್ರತಿಜ್ಞಾ ವಿಧಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕ್ರಾಂತಿಕಾರಿ ಹಾವನೂರು ಆಯೋಗದ ರಚನೆಯ ಮೂಲಕ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ, ರಾಜಕೀಯ ಪುನಶ್ಚೇತನಕ್ಕೆ ನಾಂದಿ ಹಾಡಿದವರು ಮಾಜಿ ಮುಖ್ಯ ಮಂತ್ರಿ ದೇವರಾಜ ಅರಸುರವರು. ಉಳುವವನೇ ಹೊಲದೊಡೆಯ ಎಂಬ ಘೋಷ ವಾಕ್ಯದೊಂದಿಗೆ ಜಾರಿಗೆ ತಂದ ಭೂಸುಧಾರಣಾ ಖಾಯ್ದೆ ಬಡ, ಶೋಷಿತ ಗೇಣಿದಾರರ ಕುಟುಂಬದ ಭವಿಷ್ಯವನ್ನು ಉಜ್ವಲವಾಗಿಸಿತು. ಉಳ್ಳವರೇ ಅಧಿಕಾರಕ್ಕೆ ಬಂದು ದರ್ಪ ಪ್ರದರ್ಶಿಸುತ್ತಿದ್ದ ಕಾಲದಲ್ಲಿ ಸಮಾಜದ ದುರ್ಬಲ ವರ್ಗದ ಜನರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ಜೀತ ಪದ್ಧತಿಯನ್ನು ನಿರ್ಮೂಲ ಮಾಡಿದ ಮಹಾನ್ ಪುರುಷ ಅರಸು ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಮಾಣಿ ಗೋಪಾಲ ಹೇಳಿದ್ದಾರೆ. ಅವರು ಆ.20 ರಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸುರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಾಹಿತಿ ತಂತ್ರಜ್ಞಾನವನ್ನು ಈ ದೇಶಕ್ಕೆ ಪರಿಚಯಿಸಿದ ಕೀರ್ತಿ ಮಾಜಿ ಪ್ರಧಾನಿ ರಾಜೀವ ಗಾಂಧಿಯವರಿಗೆ ಸಲ್ಲುತ್ತದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯ ಬಿಜೆಪಿ ಸರಕಾರದ ಸಚಿವ ಸಂಪುಟದಲ್ಲಿ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಭಾರಿಯೂ ಮಂತ್ರಿಗಿರಿಯ ಅವಕಾಶ ಕೈತಪ್ಪಿದ್ದು, ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಐದನೇ ಭಾರಿಗೆ ಕುಂದಾಪುರದ ಶಾಸಕರಾಗಿ ಅತ್ಯಧಿಕ ಅಂತರದಿಂದ ಗೆಲುವು ಸಾಧಿಸಿದ್ದ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಭಾರಿ ಮಂತ್ರಿ ಪದವಿ ಸಿಗಬಹುದೆಂದು ಹಲವರು ನಿರೀಕ್ಷಿಸಿದ್ದರು. ಆದರೆ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಬಿಜೆಪಿಯ ಗೆಲುವಿನ ಪತಾಕೆ ಹಾರಿಸಿದ್ದರೂ ಬಿಜೆಪಿ ಹೈಕಮಾಂಡ್ ಅಂತಿಮವಾಗಿ ಓರ್ವರನ್ನು ಮಾತ್ರ ಮಂತ್ರಿ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಶೆಟ್ಟರ್ ಸಂಪುಟದಲ್ಲಿಯೂ ಕೈತಪ್ಪಿತ್ತು: 2012ರಲ್ಲಿ ಸಿಎಂ ಜಗದೀಶ ಶೆಟ್ಟರ್ ಅವರ ಸಂಪುಟದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಕೊನೆಯ ಕ್ಷಣದಲ್ಲಿ ಮಂತ್ರಿಗಿರಿ ಕೈತಪ್ಪಿತ್ತು. ಇದು ಹಾಲಾಡಿ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿ ಪ್ರತಿಭಟನೆಗಳು ನಡೆದಿದ್ದವು, ಮಂದೆ ಹಾಲಾಡಿಯವರೇ ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿ ಪಕ್ಷೇತರರಾಗಿ ಸ್ವಧರ್ಿಸಿ ಅತ್ಯಧಿಕ ಬಹುಮತದಿಂದಲೇ ಗೆದ್ದು ಬಂದಿದ್ದರು., ಗೆಲುವಿನ ಸರದಾರ: ಹಾಲಾಡಿ…

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ರಾಜ್ಯ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಮಂತ್ರಿಮಂಡಲದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸ್ಥಾನ ದೊರೆತಿದ್ದು, ಅವರು ಇಂದು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು ಈ ಹಿಂದೆ ಬಿಜೆಪಿ ಸರಕಾರದ ಕೊನೆಯ ಅವಧಿಯಲ್ಲಿ ಮುಜರಾಯಿ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. 2015ರಲ್ಲಿ ವಿಧಾನ ಪರಿಷತ್ಗೆ ಪಂಚಾಯತ್ ಪ್ರತಿನಿಧಿಯಾಗಿ ಬಿಜೆಪಿ ಪಕ್ಷದಿಂದ ಸ್ವರ್ಧಿಸಿ ಆಯ್ಕೆಯಾಗಿದ್ದ, ಅವರು 2018ರ ಜೂನ್ ತಿಂಗಳಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದರು. ರಾಜಕಾರಣದಲ್ಲಿ ಸರಳ, ಸಜ್ಜನಿಕೆಗೆ ಅನ್ವರ್ಥ ಎಂಬಂತೆ ತನ್ನನ್ನು ತೊಡಗಿಕೊಂಡು ಎಲ್ಲರೊಂದಿಗೂ ಬೆರತು ವಿಶ್ವಾಸ ಹಾಗೂ ಘನತೆಯನ್ನು ಉಳಿಸಿಕೊಂಡ ಅಪರೂಪದ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿ. ಒಬ್ಬ ಸಾಮಾನ್ಯ ಛಾಯಾಗ್ರಾಹಕನಾಗಿದ್ದ ವ್ಯಕ್ತಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನ ಪರಿಷತ್ಗೆ ಆಯ್ಕೆಯಾಗಿ, ಮುಜರಾಯಿ ಮಂತ್ರಿಯೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಜಿ. ಜಗದೀಶ್ (ಐಎಎಸ್)ಅವರು ನೇಮಕಗೊಂಡಿದ್ದು, ಹಾಲಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ವಗರ್ಾವಣೆಗೊಂಡಿದ್ದಾರೆ. ಕೊಲಾರ ಜಿಲ್ಲಾ ಪಂಚಾಯತ್ ಸಿಇಓ ಆಗಿದ್ದ ಜಗದೀಶ್ ಅವರನ್ನು ರಾಜ್ಯ ಸರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಉಡುಪಿ ಜಿಲ್ಲಾಧಿಕಾರಿಯನ್ನಾಗಿ ವಗರ್ಾವಣೆ ಮಾಡಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಯ್ಯಾಡಿ ಇದರ 41ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಮಹೇಶ್ ಎಂ. ಪಿ, ಕಾರ್ಯದರ್ಶಿಯಾಗಿ ಸತೀಶ್ ಗದ್ದೆಮನೆ ಆಯ್ಕೆಯಾಗಿದ್ದಾರೆ. ಸಮಿತಿಯ ಗೌರವಾಧ್ಯಕ್ಷರಾಗಿ ಬಿ. ಸುರೇಶ್ ನಾಯ್ಕ್, ಮಂಜುನಾಥ ಎಸ್., ಉಪಾಧ್ಯಕ್ಷರಾಗಿ ಹನುಮಂತ ಹೆಚ್., ಬಿ. ಗಣೇಶ್ ನಾಯ್ಕ್, ಮೂರ್ತಿ ಆರ್., ಮಂಜುನಾಥ ಜಿ., ರಾಜೇಶ್ ಕೋಟೆ, ಜೊತೆ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಎ., ಸುರೇಶ್ ಎಸ್., ಜಿ. ಸುಬ್ರಹ್ಮಣ್ಯ, ರಾಜಶೇಖರ ಆರ್., ಲಕ್ಷ್ಮಿಕಾಂತ ನಾಯ್ಕ್, ಸುಬ್ರಹ್ಮಣ್ಯ ಹೆಚ್., ನಾಗೇಂದ್ರ ಹೆಚ್., ಮಂಜುನಾಥ ಎಂ.ಕೆ., ಸಂಘಟನಾ ಕಾರ್ಯದರ್ಶಿಯಾಗಿ ಸಣ್ಣಯ್ಯ ಎಂ. ಪಿ., ತುಳಸಿದಾಸ್ ಎಂ., ಶಿವಾನಂದ ಡಿ., ಎಂ. ಎನ್. ನಾಗೇಂದ್ರ, ವಿಜಯ ಕೆ., ರಾಜೇಶ್ ಹೆಚ್., ಪ್ರದೀಪ್ ಜಿ., ವರುಣ್ ಹೆಚ್., ಶ್ರೀಪಾದ್ ಎ. ಕೆ., ರಾಘವೇಂದ್ರ ಬಾಣ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಘವೇಂದ್ರ ಎನ್., ಕೆ. ನಾಗರಾಜ, ಗೋವಿಂದರಾಯ ಬಿ., ನಾಗೇಂದ್ರ, ನಾಗಭೂಷಣ ಜಿ., ಕ್ರೀಡಾ ಕಾರ್ಯದರ್ಶಿಯಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ‘ನಮ್ಮ ಪ್ರೀತಿ’ ಎಂಬ ಗೆಳೆಯರ ತಂಡ ಬೆಂಗಳೂರಿನ “ಜನಸೇವಾ ಸಮೃದ್ಧಿ ಎಜುಕೇಶನ್ ಹಾಗೂ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಮಕ್ಕಳ ಜೊತೆ ಸ್ವಾತಂತ್ರ್ಯೋತ್ಸವ ಆಚರಿಸಿ ಅನ್ನದಾನ ಮಾಡಿದರು. ಜೊತೆಗೆ ತಮ್ಮ ಕೈಯಲ್ಲಿ ಆದಷ್ಟು ದೇಣಿಗೆ ನೀಡಿದರು. ಅಲ್ಲದೇ ಮನೆಯಲ್ಲೇ ಆಹಾರ ತಯಾರಿಸಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಭಿಕ್ಷುಕರಿಗೆ ಆಹಾರ ವಿತರಿಸಿದರು. ‘ನಮ್ಮ ಪ್ರೀತಿ’ ತಂಡದ ನಾಯಕ ರಾಜ್ ಅವರ ನೇತೃತ್ವದಲ್ಲಿ ನಡೆದು ಬರುತ್ತಿರುವ ಉತ್ತಮ ಕಾರ್ಯಕ್ಕೆ ಸದಸ್ಯರಾದ ಸತೀಶ್, ಅನಿತಾ ಹೊನ್ನಪ್ಪ, ಗೀತಾ, ಪ್ರತಾಪ್, ಮಂಜುನಾಥ ಪಿ, ಪವನ್, ರಂಜಿತ್, ಅನಿತಾ ಎಂ, ಪ್ರವೀಣ್ ಜೆ.ಎಸ್, ಗಣೇಶ್, ದಿನೇಶ್, ಬ್ರಿಜೇಶ್, ಪ್ರಿಯಾಂಕ, ವಿಜಿತ್, ಕುಶಾಲ್, ರವಿಕಿರಣ್, ಬಿಂದು, ಜ್ಯೋತಿ, ಜವಾಜ್, ವಿದ್ಯಾ, ಶಿವರಾಜ್, ಚಂದ್ರ ಪಿ, ನಾಗೇಶ್, ಚೇತನ ಕುಮಾರ್, ನಿಖಿಲ್ ಕುಮಾರ್, ತಾಜ್, ಶಿವು ನಾಯಕ್, ಮಂಜುನಾಥ ಜಿ.ಕೆ, ಗುರಪ್ಪ, ಭವ್ಯ, ಅರುಣ್, ಉಮೇಶ್ ಜೆ.ಆರ್, ಮಹೇಶ್, ಸಚಿನ್, ಉಮಾ, ರಮ್ಯಾ, ಮಂಜುನಾಥ ಕೆ.ಎಸ್,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನೃತ್ಯವನ್ನು ಹೇಗೆ ಮಾಡುವುದು ಎಂಬುದನ್ನು ಎಂಬುದನ್ನು ಕಲಿಯುತ್ತಾರೆ. ಆದರೆ ಯಾಕೆ ಮಾಡಬೇಕೆನ್ನುವುದನ್ನು ತಿಳಿದುಕೊಳ್ಳುವುದಿಲ್ಲ. ಅದೊಂದು ತಾತ್ವಿಕ ಪ್ರಶ್ನೆಯಾಗಿದೆ. ನೃತ್ಯ ಯಾಕೆ ಮಾಡಬೇಕು ಎಂಬುದು ಅರ್ಥವಾದರೆ ಮಾತ್ರ ಅದರೊಂದಿಗೆ ಜೀವಿಸಲು ಸಾಧ್ಯವಿದೆ ಎಂದು ರಂಗ ನಿರ್ದೇಶಕ ಡಾ. ಶ್ರೀಪಾದ್ ಭಟ್ ಹೇಳಿದರು. ಅವರು ಇಲ್ಲಿನ ರೋಟರಿ ಭವನದಲ್ಲಿ ಗುರುವಾರ ಸುರಭಿ ರಿ. ಬೈಂದೂರು ಹಾಗೂ ರೋಟರಿ ಕ್ಲಬ್ ಬೈಂದೂರು ಆಶ್ರಯದಲ್ಲಿ ಆಶ್ರಯದಲ್ಲಿ ಸುರಭಿ ವಿಶಂತಿ ಸಂಭ್ರಮದ ಭಾಗವಾಗಿ ಆಯೋಜಿಸಲಾಗಿದ್ದ ಏಕವ್ಯಕ್ತಿ ರಂಗ ಪ್ರದರ್ಶನ ’ನೃತ್ಯಗಾಥಾ’ದ ಪೂರ್ವದಲ್ಲಿ ಮಾತನಾಡಿ ಜಗತ್ತಿನ ರೋದನವನ್ನು ತನ್ನದೆನ್ನುವ ಶಿವ ಕಲಾವಿದರ ಆರಾಧ್ಯ ದೈವ. ಹಾಗಾಗಿಯೇ ಜಗತ್ತಿನ ಸಂಕಟಗಳು ಕಲಾವಿದರ ಸಂಕಟವೂ ಆಗಿದೆ. ಜಗತ್ತಿನ ಪ್ರತಿ ಜೀವಿಯೂ ಕಲಾವಿದರಿಗೆ ಬಂಧುವಾಗುತ್ತದೆ ಎಂದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಯು. ಪ್ರಕಾಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೆನಡಾ ಸಂಶೋಧಕ ಗ್ರಾಂಟ್ ಡೆಂಪ್ಸೆ, ರಂಗಕರ್ಮಿ ಶೀತಲ್ ಭಟ್, ರೋಟರಿ ಕ್ಲಬ್ ಬೈಂದೂರು ಕಾರ್ಯದರ್ಶಿ ಮಂಜುನಾಥ ಮಹಲೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಆಸಕ್ತ ಯುವಕರುಗಳಿಗೆ ವಿಪತ್ತು ನಿರ್ವಹಣೆಯ ತರಬೇತಿಯನ್ನು ಆಯೋಜಿಸಿದ್ದು, ಪ್ರತಿ ತಾಲೂಕು ಹಂತದಲ್ಲಿ ಸ್ವಯಂ ಸೇವಕರುಗಳನ್ನೊಳಗೊಂಡ ವಿಪತ್ತು ನಿರ್ವಹಣಾ ತಂಡವನ್ನು ರಚಿಸಲು ನಿರ್ಧರಿಸಲಾಗಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಸೆಪ್ಟೆಂಬರ್ ಮೊದಲ ವಾರದಿಂದ ಆಯ್ಕೆಯಾಗುವ ಪ್ರತಿ ತಂಡಕ್ಕೆ 6 ದಿನಗಳ ತರಬೇತಿ ನಡೆಯಲಿದ್ದು, ಉಡುಪಿ ಜಿಲ್ಲೆಯಿಂದ ತರಬೇತಿಗೆ ಆಯ್ಕೆಯಾಗುವ ಸ್ವಯಂ ಸೇವಾ ಯುವಕರುಗಳ ಪ್ರಯಾಣ ಭತ್ಯೆ, ಊಟ ಹಾಗೂ ವಸತಿ ವೆಚ್ವವನ್ನು ನೆಹರು ಯುವಕೇಂದ್ರದಿಂದಲೇ ಭರಿಸಲಾಗುತ್ತದೆ. ಜಿಲ್ಲೆಯ ಪ್ರತಿ ತಾಲೂಕುಗಳಿಂದ ಸ್ವಯಂ ಸೇವಾ ಮನೋಭಾವವುಳ್ಳ ಯುವಕರುಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಉಡುಪಿ ರಜತಾದ್ರಿಯಲ್ಲಿರುವ ನೆಹರು ಯುವ ಕೇಂದ್ರದಿಂದ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ತರಬೇತಿಯಲ್ಲಿ ಭಾಗವಹಿಸುವವರು 22 ರಿಂದ 29 ವರ್ಷ ವಯಸ್ಸಿನ ಸೇವಾ ಮನೋಭಾವದ ಯುವಕರಾಗಿದ್ದು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ತರಬೇತಿಯಲ್ಲಿ ಭಾಗವಹಿಸುವ ಯುವಕರು ದೈಹಿಕವಾಗಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ತಾಲೂಕು ಆಡಳಿತದ ವತಿಯಿಂದ ಬೈಂದೂರು ಗಾಂಧಿ ಮೈದಾನದಲ್ಲಿ ಮೊದಲ ಭಾರಿಗೆ ಸ್ವಾತಂತ್ರ್ಯ ದಿನಾಚರಣೆ ಜರುಗಿತು. ಬೈಂದೂರು ತಹಶೀಲ್ದಾರ್ ಬಸಪ್ಪ ಪಿ. ಪೂಜಾರ್ ಧ್ವಜಾರೋಹಣ ನೇರವೇರಿಸಿ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಕೆಚ್ಚೆದೆಯಿಂದ ಹೋರಾಡಿದ ಧೀರರನ್ನು, ಅಸಂಖ್ಯಾತ ಹೋರಾಟಗಾರರನ್ನು ಅಗತ್ಯವಾಗಿ ಸ್ಮರಿಸಿಕೊಳ್ಳಬೇಕಿದೆ. ಎಲ್ಲರ ತ್ಯಾಗವನ್ನು ಮರೆಯದೇ, ನಾವುಗಳು ಭವ್ಯ ರಾಷ್ಟ್ರ ನಿರ್ಮಾಣದಲ್ಲಿ ತೊಡಿಸಿಕೊಳ್ಳಬೇಕಿದೆ. ಕರ್ತವ್ಯದ ಪ್ರಾಮಾಣಿಕ ನಿರ್ವಹಣೆ ಹಾಗೂ ಜವಾಬ್ದಾರಿಯನ್ನು ಅರಿತು ಮುನ್ನಡೆಯಬೇಕಾದ ಸಂದರ್ಭವಿದು. ಯುವ ಜನತೆ ಎಲ್ಲಾ ಕ್ಷೇತ್ರದಲ್ಲಿಯೂ ಅರ್ಪಣಾ ಭಾವದಿಂದ ತೊಡಗಿಸಿಕೊಳ್ಳಬೇಕು. ಸಹಬಾಳ್ವೆ ಸಾಮರಸ್ಯವೇ ನಮ್ಮ ಜೀವನದ ಗುರಿಯಾಗಬೇಕು ಎಂದವರು. ಸಂದೇಶವಿತ್ತರು. ಈ ಸಂದರ್ಭ ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಕುಂದರ್, ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೂಕಾಂಬು ದೇವಾಡಿಗ, ಪೊಲೀಸ್ ವೃತ್ತನಿರೀಕ್ಷಕ ಪರಮೇಶ್ವರ ಗುನಗ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಶಂಕರ ಪೂಜಾರಿ, ಗೌರಿ ದೇವಾಡಿಗ, ಸುರೇಶ ಬಟವಾಡಿ, ತಾಲೂಕು ಪಂಚಾಯತ್ ಸದಸ್ಯರುಗಳಾದ ಸುಜಾತ ದೇವಾಡಿಗ, ಮಾಲಿನಿ ಕೆ, ಜಗದೀಶ ದೇವಾಡಿಗ, ಪುಪ್ಪರಾಜ…

Read More