ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯವು ಕರಾವಳಿ ನಿಯಂತ್ರಣ ವಲಯ(CRZ) ಅಧಿಸೂಚನೆಯಂತೆ National Centre for Sustainable Coastal Management (NCSCM), ಚೆನ್ನೈ, ಸಂಸ್ಥೆಯು ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆ (CZMP) ಕರಡು ನಕಾಶೆಯನ್ನು ತಯಾರಿಸಿರುತ್ತದೆ. ಆದರಂತೆ ಸದರಿ ಕರ್ನಾಟಕ ರಾಜ್ಯ ಕಡಲತೀರ ವಲಯ, ನಿರ್ವಹಣಾ ಯೋಜನ ಕರಡು ನಕಾಶೆಯನ್ನು ಸಾರ್ವಜನಿಕರು ಪರಿಶೀಲಿಸಿ , ತಕರಾರುಗಳು, ಸಲಹೆಗಳು ಮತ್ತು ಅನಿಸಿಕೆಗಳೇನಾದರೂ ಇದ್ದಲ್ಲಿ,, ಪ್ರಾದೇಶಿಕ ನಿರ್ದೇಶಕರು (ಪರಿಸರ) ಉಡುಪಿ ರವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. ಕರ್ನಾಟಕ ರಾಜ್ಯ ಕಡಲತೀರ ವಲಯ, ನಿರ್ವಹಣಾ ಯೋಜನೆ ಕುರಿತ ಸರ್ಕಾರದ ಅಧಿಸೂಚನೆಗಳು ಹಾಗೂ ಕರಡು CZMP ನಕಾಶೆಯನ್ನು, ಜಿಲ್ಲೆಯ ಸಂಬಂಧಪಟ್ಟ ತಹಶೀಲ್ದಾರರು, ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಪಂಚಾಯತ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕಛೇರಿಯಲ್ಲಿ ವೀಕ್ಷಿಸಬಹುದಾಗಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಮೇ 14 ರಿಂದ ಮುಂದಿನ ಆದೇಶದವರೆಗೆ 18-44 ವಯೋಮಿತಿಯವರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಸರ್ಕಾರದ ಆದೇಶದನ್ವಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಮೇ 14 ರಿಂದ 17 ರ ವರೆಗೆ ಈಗಾಗಲೇ ಲಸಿಕೆ ಪಡೆದುಕೊಳ್ಳಲು ಲಸಿಕೆ ಶೆಡ್ಯೂಲ್ ನಿಗಧಿಪಡಿಸಿಕೊಂಡಿರುವವರಿಗೆ ಸಹ ಲಸಿಕೆ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಮುಂದಿನ ಸೂಚನೆವರೆಗೆ ಲಸಿಕಾ ಸ್ಥಳಕ್ಕೆ ಆಗಮಿಸಬಾರದು. 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಪ್ರಥಮ ಡೋಸ್ ನೀಡುವುದನ್ನು ಸರ್ಕಾರದ ಆದೇಶದನ್ವಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ 2 ನೇ ಡೋಸ್ ನೀಡುವದನ್ನು ಸಹ ಮೇ 14 ರಿಂದ ಮುಂದಿನ ಸೂಚನೆವರೆಗೆ ಸ್ಥಗಿತಗೊಳಿಸಿದ್ದು, ಲಸಿಕೆ ಲಭ್ಯತೆ ಹಾಗೂ ದಿನಾಂಕದ ಕುರಿತು ಪತ್ರಿಕಾ ಪ್ರಕಟಣೆ ನೀಡಲಾಗುವುದು, ಸಾರ್ವಜನಿಕರು ಸಹಕರಿಸುವಂತೆ ಡಿಹೆಚ್ಓ ಡಾ.ಸುಧೀರ್ ಚಂದ್ರ ಸೂಡಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ವ್ಯಾಪ್ತಿಯ ಕಿರಿಮಂಜೇಶ್ವರ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬುಧವಾರ ಸಂಘದ ವತಿಯಿಂದ ವೈದ್ಯಕೀಯ ಕಿಟ್ ಹಾಗೂ ಸಲಕರಣೆಗಳನ್ನು ದೇಣಿಗೆಯಾಗಿ ನೀಡಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಮಾತನಾಡಿ ಎಲ್ಲೆಡೆ ಕೋವಿಡ್ ವ್ಯಾಪವಾಗಿ ಹರಡುತ್ತಿದ್ದು, ಆರೋಗ್ಯ ಸಿಬ್ಬಂದಿಗಳು ಶ್ರಮವಹಿಸಿ ದುಡಿಯುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭ ನಮ್ಮ ಸಂಘದಿಂದ ಕಳೆದ ವರ್ಷ 2.35 ಲಕ್ಷ ರೂ.ಗಳ ವೈದ್ಯಕೀಯ ಸಲಕರಣೆಗಳನ್ನು ವಿತರಿಸಲಾಗಿದ್ದು, ಈ ವರ್ಷವೂ ಕೂಡ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಪಿಪಿಇ ಕಿಟ್, ವೈದ್ಯರಿಗೆ ಗ್ಲೌಸ್, ಮಾಸ್ಕ್, ಗೌನ್ ಮೊದಲಾದ ಉಪಕರಣಗಳನ್ನು ವಿತರಿಸಲಾಗಿದೆ. ಆರೋಗ್ಯ ಕೇಂದ್ರದ ಸಿಬ್ಬಂದಿಯ ಸಂಚಾರಕ್ಕೆ ಅನುಕೂಲವಾಗುವಂತೆ ಕೋವಿಡ್ ಅಲೆ ತಗ್ಗುವ ತನಕ ಸಂಘದ ವತಿಯಿಂದ ವಾರದಲ್ಲಿ ನಾಲ್ಕು ದಿನಗಳ ಕಾಲ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದರು. ಕಿರಿಮಂಜೇಶ್ವರ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆಯಲ್ಲಿ ಮಂಗಳವಾರ ಆರಂಭವಾದ ಕಡಲ್ಕೊರೆತ ಬುಧವಾರ ಇನ್ನಷ್ಟು ತೀವ್ರ ಗತಿ ಪಡೆದುಕೊಂಡಿದೆ. ಇಲ್ಲಿನ ಮೀನುಗಾರಿಕಾ ಹೊರಬಂದರಿನ ಉತ್ತರ ತಡೆಗೋಡೆಯ ಉತ್ತರ ದಿಕ್ಕಿನ 500 ಮೀಟರ್ ಉದ್ದದ ತೀರಕ್ಕೆ ಅಪ್ಪಳಿಸುತ್ತಿರುವ ಅಲೆಗಳು ಈಗಾಗಲೇ ಎರಡು ಮೀಟರು ಅಗಲದ ಭೂಪ್ರದೇಶವನ್ನು ಕೊರೆದು ಸಮುದ್ರಕ್ಕೆ ಸೇರಿಸಿವೆ. ಪಕ್ಕುಮನೆ ದಿನಕರ ಖಾರ್ವಿಗೆ ಸೇರಿದ ಮೀನುಗಾರಿಕಾ ಶೆಡ್ ಉರುಳಿದ್ದು, ಅದರ ಸಮೀಪದಲ್ಲಿರುವ ಪಕ್ಕುಮನೆ ಚಂದ್ರ ಖಾರ್ವಿ ಅವರ ಶೆಡ್ಅನ್ನು ಉಳಿಸಿಕೊಳ್ಳಲು ಅವರು ಮರಳಿನ ಚೀಲಗಳನ್ನು ಪೇರಿಸುವ ಕೆಲಸ ಮಾಡುತ್ತಿದ್ದಾರೆ. ಕೊರೆತ ನಡೆಯುತ್ತಿರುವ ಸ್ಥಳದಿಂದ 10 ರಿಂದ 15 ಮೀಟರ್ ಅಂತರದಲ್ಲಿ ಮೂರು ತಿಂಗಳ ಹಿಂದೆ ರಾಜ್ಯ ನೀರಾವರಿ ನಿಗಮದ ಲೆಕ್ಕ ಶೀರ್ಷಿಕೆಯ ರೂ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆ, ಅದರಾಚೆಗೆ ಸುಮಾರು 25 ಮೀನುಗಾರರ ಮನೆಗಳಿವೆ. ಕೊರೆತ ಉಲ್ಬಣಿಸಿದರೆ ಇವುಗಳಿಗೆ ಅಪಾಯ ಇದೆ ಎಂದು ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಮೋಹನ ಖಾರ್ವಿ ಆತಂಕ ವ್ಯಕ್ತ ಪಡಿಸಿದ್ದಾರೆ. ►…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿರುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಿದ್ದು, ಮುಂಜಾಗ್ರತಾ ಕ್ರಮ ವಹಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಹವಾಮಾನ ಇಲಾಖೆಯ ವರದಿಯಂತೆ, ಮೇ 14 ರಿಂದ 16ರವರೆಗೆ ಮೂರು ದಿನಗಳ ಅವಧಿಯಲ್ಲಿ ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಹೆಚ್ಚಿನ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಅಥವಾ ತಾಲೂಕು ಮಟ್ಟದ ಅಧಿಕಾರಿಗಳು, ನಿಯೋಜನೆಗೊಂಡ ನೋಡೆಲ್ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಕೋಪವನ್ನು ನಿಭಾಯಿಸಲು ತಯಾರಿ ಮಾಡಿಕೊಳ್ಳಬೇಕು. ಮೀನುಗಾರರು ನದಿ, ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು. ಮಕ್ಕಳು, ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಹತ್ತಿರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣೆಯ ನೂತನ ಉಪನಿರೀಕ್ಷಕರಾಗಿ ನಂಜಾ ನಾಯ್ಕ್ ಎನ್. ಅಧಿಕಾರ ಸ್ವೀಕರಿಸಿದ್ದಾರೆ. ಚಿಕ್ಕಮಂಗಳೂರು ಜಿಲ್ಲೆಯ ಸಖರಾಯಪಟ್ಟಣದವರಾದ ನಂಜಾ ನಾಯ್ಕ್ ಅವರು ಈ ಹಿಂದೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 6 ತಿಂಗಳು ಪ್ರೊಬೆಷನರಿ ಎಸ್ಐ ಆಗಿ ಸೇವೆ ಸಲ್ಲಿಸಿದ್ದು, ಬಳಿಕ ಪಿಎಸ್ಐ ಆಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ವರ್ಷ ಮತ್ತು ಶಿರಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ. ಪಿಎಸ್ಐ ಭೀಮಾಶಂಕರ ಅವರು ಶಿರಸಿ ಮಾರ್ಕೆಟ್ ಠಾಣೆಗೆ ವರ್ಗಾವಣೆಗೊಂಡ ನಂಜಾ ನಾಯ್ಕ್ ಎನ್. ಅವರು ಗಂಗೊಳ್ಳಿ ಠಾಣೆಯ ಪಿಎಸ್ಐಯಾಗಿ ನಿಯುಕ್ತಿಗೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 919 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 6 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 576, ಕುಂದಾಪುರ, ಬೈಂದೂರು ತಾಲೂಕಿನ 257, ಕಾರ್ಕಳ, ಹೆಬ್ರಿ ತಾಲೂಕಿನ 83 ಮಂದಿಗೆ ಹಾಗೂ ಹೊರ ಜಿಲ್ಲೆಯ 3 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 919 ಪ್ರಕರಣಗಳಲ್ಲಿ 237 ಸಿಂಟಮಿಕ್ ಹಾಗೂ 682 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 13 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 906 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ. ಇಂದು ಉಡುಪಿಯ 80 ವರ್ಷದ ವೃದ್ಧ, 75 ವರ್ಷದ ವೃದ್ಧ 88 ವರ್ಷದ ವೃದ್ಧೆ, ಕುಂದಾಪುರದ 77, ವರ್ಷದ ವೃದ್ಧ 68 ವರ್ಷದ ವೃದ್ಧ ಹಾಗೂ 58 ವರ್ಷದ ಪುರುಷ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 837 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 6952…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಲಸಿಕೆ ನೀಡುವುದರಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದು ಈ ವಿಚಾರದಲ್ಲಿ ಹಿರಿಯ ನಾಗರಿಕರು ಮತ್ತು 45 ವರ್ಷ ಮೇಲ್ಪಟ್ಟವರು ಆತಂಕಕ್ಕೀಡಾಗಿದ್ದು, ಈ ಕುರಿತು ಸರಕಾರ ಮತ್ತು ಆರೋಗ್ಯ ಇಲಾಖೆ ಜನರಲ್ಲಿ ಇರುವ ಗೊಂದಲ ಮತ್ತು ಆತಂಕ ನಿವಾರಿಸಬೇಕು ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಆಗ್ರಹಿಸಿದ್ಧಾರೆ. ಬಹಳಷ್ಟು ಹಿರಿಯ ನಾಗರಿಕರು ಒಂದು ಡೋಸ್ ಲಸಿಕೆ ತೆಗೆದುಕೊಂಡು 60 ದಿನವಾದರೂ ಇನ್ನೊಂದು ಡೋಸ್ ಲಸಿಕೆ ಲಭ್ಯವಾಗಿಲ್ಲ.ಆರೋಗ್ಯ ಇಲಾಖೆಯ ಪ್ರಕಟಣೆ ಪ್ರಕಾರ ಒಂದು ಡೋಸ್ ಲಸಿಕೆ ಪಡೆದು 4 ವಾರದಲ್ಲಿ 2 ನೇ ಡೋಸ್ ಲಸಿಕೆ ಪಡೆಯಬೆೇಕು.ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು ಲಾಕ್ಡೌನ್ ನಡುವೆ ಲಸಿಕಾ ಕೇಂದ್ರಕ್ಕೆ ಅಲೆದಾಡುತಿದ್ದಾರೆ. ಮೊದಲ ಡೋಸ್ ಕೋ ವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಸದ್ಯಕ್ಕೆ ಲಭ್ಯವಿಲ್ಲ ಎಂದು ಲಸಿಕಾ ಕೇಂದ್ರದಲ್ಲಿ ತಿಳಿಸುತ್ತಿದ್ದಾರೆ. ಈ ಬಗ್ಗೆ ಹಿರಿಯ ನಾಗರಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ನಿಗದಿತ ಸಮಯಕ್ಕೆ 2 ನೇ ಡೋಸ್ ಲಸಿಕೆ ತೆಗೆದುಕೊಳ್ಳದ ಕಾರಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 1084 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 3 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 519, ಕುಂದಾಪುರ, ಬೈಂದೂರು ತಾಲೂಕಿನ 388, ಕಾರ್ಕಳ, ಹೆಬ್ರಿ ತಾಲೂಕಿನ 169 ಮಂದಿಗೆ ಹಾಗೂ ಹೊರ ಜಿಲ್ಲೆಯ 8 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 1084 ಪ್ರಕರಣಗಳಲ್ಲಿ 229 ಸಿಂಟಮಿಕ್ ಹಾಗೂ 855 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 18 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 1066 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ. ಇಂದು ಉಡುಪಿಯ 48 ವರ್ಷದ ಮಹಿಳೆ ಹಾಗೂ ಕುಂದಾಪುರದ 72 ವರ್ಷದ ವೃದ್ಧ ಹಾಗೂ 67 ವರ್ಷದ ವೃದ್ಧ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 787 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 6876 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 3094 ಮಂದಿಗೆ ಕೋವಿಡ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾರಾಪತಿ, ಅಳ್ವೆಕೋಡಿ, ಬೆಸ್ಕೂರು, ಸುಬ್ಬರಾಡಿ ಭಾಗದ ಸುಮಾರು 350 ಮನೆಗಳಿಗೆ ಮಳೆಗಾಲ ಆರಂಭದ ತನಕ ಉಚಿತ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಮಂಗಳವಾರ ಚಾಲನೆ ನೀಡಲಾಯಿತು. ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನವೀನ್ ಈ ಯೋಜನೆಗೆ ಚಾಲನೆ ನೀಡಿ ಮಾತನಾಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಮುದ್ರ ತಟದ ಬೆಸ್ಕೂರಿನಿಂದ ತಾರಾಪತಿಯ ತನಕ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಅಗತ್ಯವಿದ್ದು, ಪಂಚಾಯತ್ ಮೂಲಕ ಮಾಡುವ ಕಾರ್ಯವನ್ನು ಟ್ರಸ್ಟ್ ಸ್ವಇಚ್ಛೆಯಿಂದ ಪೂರೈಸುತ್ತಿರುವುದು ನಿಜಕ್ಕೂ ಶ್ಲಾಘನಾರ್ಹ ಕಾರ್ಯವಾಗಿದೆ. ಟ್ರಸ್ಟ್ನ ಅಧ್ಯಕ್ಷರಾದ ಗೋವಿಂದ ಬಾಬು ಪೂಜಾರಿ ಅವರ ಕಾರ್ಯಕ್ಕೆ ಗ್ರಾಮಸ್ಥರ ಪರವಾಗಿ ಅಭಿನಂದಿಸಲಾಗುವುದು ಎಂದರು. ಈ ಸಂದರ್ಭ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ನ ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಮಾತನಾಡಿ ಕಳೆದ ಭಾರಿ ಬಿಜೂರು ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾದಾಗ…
