ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ರಾಜ್ಯದಲ್ಲಿ ಕಂಡು ಕೇಳರಿಯದ ಪ್ರವಾಹ ಎದುರಾಗಿದ್ದರೂ ಈವರೆಗೆ ಕೇಂದ್ರದಿಂದ ಸೂಕ್ತ ಪರಿಹಾರ ದೊರೆತಿಲ್ಲ. ಅರ್ಧ ದೇಶವೇ ನೀರಿನಲ್ಲಿ ಮುಳುಗಿದ್ದರೂ ಇಂದಿನ ಪ್ರಧಾನಿಯವರು ವಿದೇಶ ಪ್ರವಾಸದ ಮೂಡಿನಲ್ಲಿರುವುದು ಖೇದಕರ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು. ಅವರು ಬುಧವಾರ ಉಡುಪಿ ಜಿಲ್ಲೆಯಲ್ಲಾದ ಆಸ್ತಿ ಪಾಸ್ತಿ ನಷ್ಟದ ಸಮೀಕ್ಷೆಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ರಚಿಸಿದ ನಿಯೋಗದ ನೇತೃತ್ವ ವಹಿಸಿ ಕುಂದಾಪುರ ಹಾಗೂ ಬೈಂದೂರಿನಲ್ಲಿ ನೆರೆ ನಷ್ಟದ ಬಗೆಗೆ ಅಹವಾಲು ಸ್ವೀಕರಿಸಿ ಬಳಿಕ ಮಾತನಾಡಿದರು. ಈ ಹಿಂದೆಯೂ ಕೆಂದ್ರದಲ್ಲಿ ಯುಪಿಎ ಸರಕಾರವಿದ್ದಾಗ, ರಾಜ್ಯದಲ್ಲಿ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದ ಸಂದರ್ಭ ರಾಜ್ಯದಲ್ಲಿ ನೆರೆ ಪರಿಸ್ಥಿತಿ ಎದುರಾದಾಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ವೈಮಾನಿಕ ಸಮೀಕ್ಷೆ ನಡೆಸಿ ಸ್ಥಳದಲ್ಲಿಯೇ ರಾಜ್ಯಕ್ಕೆ ಪರಿಹಾರ ಘೋಷಿಸಿದ್ದರು. ಇಂದಿನ ಪ್ರಧಾನಿಗೆ ವೈಮಾನಿಕ ಸಮೀಕ್ಷೆ ನಡೆಸಲು ಸಮಯವಿಲ್ಲ ಎಂದರು. ಕರಾವಳಿಯ ಉಭಯ ಜಿಲ್ಲೆಯಳಲ್ಲಿಯೂ ಅಪಾರವಾದ ಮಳೆ ಹಾನಿಯಾಗಿದ್ದು, ಜಿಲ್ಲೆಯ ಬೈಂದೂರಿನಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಹಾಗಾಗಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಹಾಗೂ ಕುಂದಾಪುರ ಭಂಡಾರ್‌ಕರ‍್ಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ‘ರಂಗಕಲಾ ಸ್ಪರ್ಧೆ-ರಂಗೋತ್ಸವ 2019’’ಯಲ್ಲಿ ಆಳ್ವಾಸ್ ಕಾಲೇಜು ಸತತವಾಗಿ 12ನೇ ಬಾರಿಗೆ ಸಮಗ್ರ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ಬಹುಮಾನ ವಿತರಿಸಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಕ್ಷೇಮಪಾಲನಾ ನಿರ್ದೇಶನಾಲಯಇದರ ನಿದೇಶಕರಾದ ಪ್ರೊ. ಬಾರ್ಕೂರು ಉದಯ ಮಾತನಾಡಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ರಂಗಭೂಮಿಯ ಬಗ್ಗೆ ಪಠ್ಯಕ್ರಮದಲ್ಲಿ ಅಧ್ಯಯನ ಮಾಡುವುದಕ್ಕೆ ಪೂರಕವಾಗಿ ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್‌ನಲ್ಲಿ ವಿಷಯ ಮಂಡಿಸುತ್ತೇನೆ. ವಿದ್ಯಾರ್ಥಿ ಸ್ನೇಹಿ ಅಧ್ಯಯನವನ್ನುಕಾರ್ಯರೂಪಕ್ಕೆತರಲು ಪ್ರಯತ್ನಸುತ್ತೇನೆಎಂದು ಹೇಳಿದರು. ಅಧ್ಯಕ್ಷತೆಯನ್ನುಕಾಲೇಜಿನ ಪಾಂಶುಪಾಲರಾದ ಡಾ. ಎನ್. ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ರಂಗೋತ್ಸವದಕುರಿತು ನಿರ್ಣಾಯಕರಾಗಿ ಆಗಮಿಸಿದ್ದ ಬಾಸುಮ ಕೊಡಗು ಮತ್ತು ಸತೋಶ ಮರವಂತೆ ತಮ್ಮ್ ಅಭಿಪ್ರಾಯ ಹಂಚಿಕೊಂಡರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನಿರ್ಣಾಯಕರಾಗಿ ಆಗಮಿಸಿದ್ದ ಪೂರ್ಣಿಮಾ ಸುರೇಶ್, ಸಂತೋಷ್ ಶೆಟ್ಟಿ ಹಿರಿಯಡ್ಕ, ಪ್ರವೀಣಕೊಡವೂರು, ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜು ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ, ರಂಗೋತ್ಸವ ಕಾರ್ಯಕ್ರಮ ಸಂಯೋಜಕರಾದ ಅರ್ಚನಾ ಅರವಿಂದ್ ಉಪಸ್ಥಿತರಿದ್ದರು. ರಂಗೋತ್ಸವದಲ್ಲಿ ಭಾಗವಹಿಸಿದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರಪಂಚದಲ್ಲಿ ಯಾರು ಯಾರಿಗಿಂತಲೂ ಕಡಿಮೆಯೂ ಅಲ್ಲ. ಹೆಚ್ಚು ಅಲ್ಲ. ಜಾತಿ, ಧರ್ಮ, ಭಾಷೆಗಳ ಗಡಿಯನ್ನು ಮೀರಿ ಮನುಷ್ಯನನ್ನು ಮನುಷ್ಯನಂತೆ ಕಾಣುವುದು ಮುಖ್ಯವಾದುದೆಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರದೀಪ ಕುಮಾರ್ ಶೆಟ್ಟಿ ಕೆಂಚನೂರು ಹೇಳಿದರು. ಅವರು ನೆಹರು ಯುವ ಕೇಂದ್ರ ಉಡುಪಿ ಹಾಗೂ ಸುರಭಿ ರಿ. ಬೈಂದೂರು ಸಂಯುಕ್ತಾಶ್ರಯದಲ್ಲಿ ಇಲ್ಲಿನ ರೋಟರಿ ಭವನದಲ್ಲಿ ಮಂಗಳವಾರ ಜರುಗಿದ ಸದ್ಭಾವನಾ ದಿನಾಚರಣೆಯಲ್ಲಿ ಮಾತನಾಡಿ ಬಣ್ಣ, ತಿನಿಸು, ಪ್ರಕೃತಿ ಎಲ್ಲದರಲ್ಲಿಯೂ ಭಿನ್ನತೆ ಇರುವಾಗ ಪ್ರಕೃತಿಯ ಭಾಗವೇ ಆಗಿರುವ ಮನುಷ್ಯರೆಲ್ಲರೂ ಒಂದೇ ರೀತಿಯಾಗಿ ಬದುಕಬೇಕು ಎಂಬುದರಲ್ಲಿ ಅರ್ಥವಿಲ್ಲ. ವಿವಿಧತೆಯನ್ನು ಗೌರವಿಸುತ್ತಲೇ ಏಕತೆಯನ್ನು ಸಾರುವುದು ಅಗತ್ಯ ಎಂದರು. ಸುರಭಿ ರಿ. ಬೈಂದೂರು ಅಧ್ಯಕ್ಷ ಸತ್ಯನಾ ಕೊಡೇರಿ ಅಧ್ಯಕ್ಷತೆ ವಹಿಸಿದ್ದರು. ಭರತನಾಟ್ಯ ಗುರು ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ಅತಿಥಿಗಳಾಗಿದ್ದರು. ನೆಹರು ಯುವ ಕೇಂದ್ರದ ಸ್ವಯಂಸೇವಕ ಸುನಿಲ್ ಹೆಚ್. ಜಿ. ಬೈಂದೂರು ಪ್ರಾಸ್ತಾವಿಕ ಮಾತನಾಡಿ ಬಳಿಕ ಸದ್ಭಾವನಾ ಪ್ರತಿಜ್ಞಾ ವಿಧಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕ್ರಾಂತಿಕಾರಿ ಹಾವನೂರು ಆಯೋಗದ ರಚನೆಯ ಮೂಲಕ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ, ರಾಜಕೀಯ ಪುನಶ್ಚೇತನಕ್ಕೆ ನಾಂದಿ ಹಾಡಿದವರು ಮಾಜಿ ಮುಖ್ಯ ಮಂತ್ರಿ ದೇವರಾಜ ಅರಸುರವರು. ಉಳುವವನೇ ಹೊಲದೊಡೆಯ ಎಂಬ ಘೋಷ ವಾಕ್ಯದೊಂದಿಗೆ ಜಾರಿಗೆ ತಂದ ಭೂಸುಧಾರಣಾ ಖಾಯ್ದೆ ಬಡ, ಶೋಷಿತ ಗೇಣಿದಾರರ ಕುಟುಂಬದ ಭವಿಷ್ಯವನ್ನು ಉಜ್ವಲವಾಗಿಸಿತು. ಉಳ್ಳವರೇ ಅಧಿಕಾರಕ್ಕೆ ಬಂದು ದರ್ಪ ಪ್ರದರ್ಶಿಸುತ್ತಿದ್ದ ಕಾಲದಲ್ಲಿ ಸಮಾಜದ ದುರ್ಬಲ ವರ್ಗದ ಜನರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ಜೀತ ಪದ್ಧತಿಯನ್ನು ನಿರ್ಮೂಲ ಮಾಡಿದ ಮಹಾನ್ ಪುರುಷ ಅರಸು ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಮಾಣಿ ಗೋಪಾಲ ಹೇಳಿದ್ದಾರೆ. ಅವರು ಆ.20 ರಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸುರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಾಹಿತಿ ತಂತ್ರಜ್ಞಾನವನ್ನು ಈ ದೇಶಕ್ಕೆ ಪರಿಚಯಿಸಿದ ಕೀರ್ತಿ ಮಾಜಿ ಪ್ರಧಾನಿ ರಾಜೀವ ಗಾಂಧಿಯವರಿಗೆ ಸಲ್ಲುತ್ತದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯ ಬಿಜೆಪಿ ಸರಕಾರದ ಸಚಿವ ಸಂಪುಟದಲ್ಲಿ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಭಾರಿಯೂ ಮಂತ್ರಿಗಿರಿಯ ಅವಕಾಶ ಕೈತಪ್ಪಿದ್ದು, ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಐದನೇ ಭಾರಿಗೆ ಕುಂದಾಪುರದ ಶಾಸಕರಾಗಿ ಅತ್ಯಧಿಕ ಅಂತರದಿಂದ ಗೆಲುವು ಸಾಧಿಸಿದ್ದ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಭಾರಿ ಮಂತ್ರಿ ಪದವಿ ಸಿಗಬಹುದೆಂದು ಹಲವರು ನಿರೀಕ್ಷಿಸಿದ್ದರು. ಆದರೆ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಬಿಜೆಪಿಯ ಗೆಲುವಿನ ಪತಾಕೆ ಹಾರಿಸಿದ್ದರೂ ಬಿಜೆಪಿ ಹೈಕಮಾಂಡ್ ಅಂತಿಮವಾಗಿ ಓರ್ವರನ್ನು ಮಾತ್ರ ಮಂತ್ರಿ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಶೆಟ್ಟರ್ ಸಂಪುಟದಲ್ಲಿಯೂ ಕೈತಪ್ಪಿತ್ತು: 2012ರಲ್ಲಿ ಸಿಎಂ ಜಗದೀಶ ಶೆಟ್ಟರ್ ಅವರ ಸಂಪುಟದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಕೊನೆಯ ಕ್ಷಣದಲ್ಲಿ ಮಂತ್ರಿಗಿರಿ ಕೈತಪ್ಪಿತ್ತು. ಇದು ಹಾಲಾಡಿ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿ ಪ್ರತಿಭಟನೆಗಳು ನಡೆದಿದ್ದವು, ಮಂದೆ ಹಾಲಾಡಿಯವರೇ ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿ ಪಕ್ಷೇತರರಾಗಿ ಸ್ವಧರ್ಿಸಿ ಅತ್ಯಧಿಕ ಬಹುಮತದಿಂದಲೇ ಗೆದ್ದು ಬಂದಿದ್ದರು., ಗೆಲುವಿನ ಸರದಾರ: ಹಾಲಾಡಿ…
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ರಾಜ್ಯ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಮಂತ್ರಿಮಂಡಲದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸ್ಥಾನ ದೊರೆತಿದ್ದು, ಅವರು ಇಂದು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು ಈ ಹಿಂದೆ ಬಿಜೆಪಿ ಸರಕಾರದ ಕೊನೆಯ ಅವಧಿಯಲ್ಲಿ ಮುಜರಾಯಿ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. 2015ರಲ್ಲಿ ವಿಧಾನ ಪರಿಷತ್ಗೆ ಪಂಚಾಯತ್ ಪ್ರತಿನಿಧಿಯಾಗಿ ಬಿಜೆಪಿ ಪಕ್ಷದಿಂದ ಸ್ವರ್ಧಿಸಿ ಆಯ್ಕೆಯಾಗಿದ್ದ, ಅವರು 2018ರ ಜೂನ್ ತಿಂಗಳಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದರು. ರಾಜಕಾರಣದಲ್ಲಿ ಸರಳ, ಸಜ್ಜನಿಕೆಗೆ ಅನ್ವರ್ಥ ಎಂಬಂತೆ ತನ್ನನ್ನು ತೊಡಗಿಕೊಂಡು ಎಲ್ಲರೊಂದಿಗೂ ಬೆರತು ವಿಶ್ವಾಸ ಹಾಗೂ ಘನತೆಯನ್ನು ಉಳಿಸಿಕೊಂಡ ಅಪರೂಪದ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿ. ಒಬ್ಬ ಸಾಮಾನ್ಯ ಛಾಯಾಗ್ರಾಹಕನಾಗಿದ್ದ ವ್ಯಕ್ತಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನ ಪರಿಷತ್ಗೆ ಆಯ್ಕೆಯಾಗಿ, ಮುಜರಾಯಿ ಮಂತ್ರಿಯೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಜಿ. ಜಗದೀಶ್ (ಐಎಎಸ್)ಅವರು ನೇಮಕಗೊಂಡಿದ್ದು, ಹಾಲಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ವಗರ್ಾವಣೆಗೊಂಡಿದ್ದಾರೆ. ಕೊಲಾರ ಜಿಲ್ಲಾ ಪಂಚಾಯತ್ ಸಿಇಓ ಆಗಿದ್ದ ಜಗದೀಶ್ ಅವರನ್ನು ರಾಜ್ಯ ಸರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಉಡುಪಿ ಜಿಲ್ಲಾಧಿಕಾರಿಯನ್ನಾಗಿ ವಗರ್ಾವಣೆ ಮಾಡಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಯ್ಯಾಡಿ ಇದರ 41ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಮಹೇಶ್ ಎಂ. ಪಿ, ಕಾರ್ಯದರ್ಶಿಯಾಗಿ ಸತೀಶ್ ಗದ್ದೆಮನೆ ಆಯ್ಕೆಯಾಗಿದ್ದಾರೆ. ಸಮಿತಿಯ ಗೌರವಾಧ್ಯಕ್ಷರಾಗಿ ಬಿ. ಸುರೇಶ್ ನಾಯ್ಕ್, ಮಂಜುನಾಥ ಎಸ್., ಉಪಾಧ್ಯಕ್ಷರಾಗಿ ಹನುಮಂತ ಹೆಚ್., ಬಿ. ಗಣೇಶ್ ನಾಯ್ಕ್, ಮೂರ್ತಿ ಆರ್., ಮಂಜುನಾಥ ಜಿ., ರಾಜೇಶ್ ಕೋಟೆ, ಜೊತೆ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಎ., ಸುರೇಶ್ ಎಸ್., ಜಿ. ಸುಬ್ರಹ್ಮಣ್ಯ, ರಾಜಶೇಖರ ಆರ್., ಲಕ್ಷ್ಮಿಕಾಂತ ನಾಯ್ಕ್, ಸುಬ್ರಹ್ಮಣ್ಯ ಹೆಚ್., ನಾಗೇಂದ್ರ ಹೆಚ್., ಮಂಜುನಾಥ ಎಂ.ಕೆ., ಸಂಘಟನಾ ಕಾರ್ಯದರ್ಶಿಯಾಗಿ ಸಣ್ಣಯ್ಯ ಎಂ. ಪಿ., ತುಳಸಿದಾಸ್ ಎಂ., ಶಿವಾನಂದ ಡಿ., ಎಂ. ಎನ್. ನಾಗೇಂದ್ರ, ವಿಜಯ ಕೆ., ರಾಜೇಶ್ ಹೆಚ್., ಪ್ರದೀಪ್ ಜಿ., ವರುಣ್ ಹೆಚ್., ಶ್ರೀಪಾದ್ ಎ. ಕೆ., ರಾಘವೇಂದ್ರ ಬಾಣ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಘವೇಂದ್ರ ಎನ್., ಕೆ. ನಾಗರಾಜ, ಗೋವಿಂದರಾಯ ಬಿ., ನಾಗೇಂದ್ರ, ನಾಗಭೂಷಣ ಜಿ., ಕ್ರೀಡಾ ಕಾರ್ಯದರ್ಶಿಯಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ‘ನಮ್ಮ ಪ್ರೀತಿ’ ಎಂಬ ಗೆಳೆಯರ ತಂಡ ಬೆಂಗಳೂರಿನ “ಜನಸೇವಾ ಸಮೃದ್ಧಿ ಎಜುಕೇಶನ್ ಹಾಗೂ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಮಕ್ಕಳ ಜೊತೆ ಸ್ವಾತಂತ್ರ್ಯೋತ್ಸವ ಆಚರಿಸಿ ಅನ್ನದಾನ ಮಾಡಿದರು. ಜೊತೆಗೆ ತಮ್ಮ ಕೈಯಲ್ಲಿ ಆದಷ್ಟು ದೇಣಿಗೆ ನೀಡಿದರು. ಅಲ್ಲದೇ ಮನೆಯಲ್ಲೇ ಆಹಾರ ತಯಾರಿಸಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಭಿಕ್ಷುಕರಿಗೆ ಆಹಾರ ವಿತರಿಸಿದರು. ‘ನಮ್ಮ ಪ್ರೀತಿ’ ತಂಡದ ನಾಯಕ ರಾಜ್ ಅವರ ನೇತೃತ್ವದಲ್ಲಿ ನಡೆದು ಬರುತ್ತಿರುವ ಉತ್ತಮ ಕಾರ್ಯಕ್ಕೆ ಸದಸ್ಯರಾದ ಸತೀಶ್, ಅನಿತಾ ಹೊನ್ನಪ್ಪ, ಗೀತಾ, ಪ್ರತಾಪ್, ಮಂಜುನಾಥ ಪಿ, ಪವನ್, ರಂಜಿತ್, ಅನಿತಾ ಎಂ, ಪ್ರವೀಣ್ ಜೆ.ಎಸ್, ಗಣೇಶ್, ದಿನೇಶ್, ಬ್ರಿಜೇಶ್, ಪ್ರಿಯಾಂಕ, ವಿಜಿತ್, ಕುಶಾಲ್, ರವಿಕಿರಣ್, ಬಿಂದು, ಜ್ಯೋತಿ, ಜವಾಜ್, ವಿದ್ಯಾ, ಶಿವರಾಜ್, ಚಂದ್ರ ಪಿ, ನಾಗೇಶ್, ಚೇತನ ಕುಮಾರ್, ನಿಖಿಲ್ ಕುಮಾರ್, ತಾಜ್, ಶಿವು ನಾಯಕ್, ಮಂಜುನಾಥ ಜಿ.ಕೆ, ಗುರಪ್ಪ, ಭವ್ಯ, ಅರುಣ್, ಉಮೇಶ್ ಜೆ.ಆರ್, ಮಹೇಶ್, ಸಚಿನ್, ಉಮಾ, ರಮ್ಯಾ, ಮಂಜುನಾಥ ಕೆ.ಎಸ್,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನೃತ್ಯವನ್ನು ಹೇಗೆ ಮಾಡುವುದು ಎಂಬುದನ್ನು ಎಂಬುದನ್ನು ಕಲಿಯುತ್ತಾರೆ. ಆದರೆ ಯಾಕೆ ಮಾಡಬೇಕೆನ್ನುವುದನ್ನು ತಿಳಿದುಕೊಳ್ಳುವುದಿಲ್ಲ. ಅದೊಂದು ತಾತ್ವಿಕ ಪ್ರಶ್ನೆಯಾಗಿದೆ. ನೃತ್ಯ ಯಾಕೆ ಮಾಡಬೇಕು ಎಂಬುದು ಅರ್ಥವಾದರೆ ಮಾತ್ರ ಅದರೊಂದಿಗೆ ಜೀವಿಸಲು ಸಾಧ್ಯವಿದೆ ಎಂದು ರಂಗ ನಿರ್ದೇಶಕ ಡಾ. ಶ್ರೀಪಾದ್ ಭಟ್ ಹೇಳಿದರು. ಅವರು ಇಲ್ಲಿನ ರೋಟರಿ ಭವನದಲ್ಲಿ ಗುರುವಾರ ಸುರಭಿ ರಿ. ಬೈಂದೂರು ಹಾಗೂ ರೋಟರಿ ಕ್ಲಬ್ ಬೈಂದೂರು ಆಶ್ರಯದಲ್ಲಿ ಆಶ್ರಯದಲ್ಲಿ ಸುರಭಿ ವಿಶಂತಿ ಸಂಭ್ರಮದ ಭಾಗವಾಗಿ ಆಯೋಜಿಸಲಾಗಿದ್ದ ಏಕವ್ಯಕ್ತಿ ರಂಗ ಪ್ರದರ್ಶನ ’ನೃತ್ಯಗಾಥಾ’ದ ಪೂರ್ವದಲ್ಲಿ ಮಾತನಾಡಿ ಜಗತ್ತಿನ ರೋದನವನ್ನು ತನ್ನದೆನ್ನುವ ಶಿವ ಕಲಾವಿದರ ಆರಾಧ್ಯ ದೈವ. ಹಾಗಾಗಿಯೇ ಜಗತ್ತಿನ ಸಂಕಟಗಳು ಕಲಾವಿದರ ಸಂಕಟವೂ ಆಗಿದೆ. ಜಗತ್ತಿನ ಪ್ರತಿ ಜೀವಿಯೂ ಕಲಾವಿದರಿಗೆ ಬಂಧುವಾಗುತ್ತದೆ ಎಂದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಯು. ಪ್ರಕಾಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೆನಡಾ ಸಂಶೋಧಕ ಗ್ರಾಂಟ್ ಡೆಂಪ್ಸೆ, ರಂಗಕರ್ಮಿ ಶೀತಲ್ ಭಟ್, ರೋಟರಿ ಕ್ಲಬ್ ಬೈಂದೂರು ಕಾರ್ಯದರ್ಶಿ ಮಂಜುನಾಥ ಮಹಲೆ…
