ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ತಾಲೂಕು ಪಂಚಾಯಿತಿ ಡಾ ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಪಂಚಾಯತ್ 19ನೇ ಸಾಮಾನ್ಯ ಸಭೆ ಆಡಳಿತ ಪಕ್ಷದ ಸದಸ್ಯರು ಹಾಗೂ ಅಧ್ಯಕ್ಷರ ನಡುವಿನ ಸಮನ್ವಯತೆಯ ಕೊರತೆಯಿಂದಾಗಿ ಗಲಾಟೆ-ಗದ್ದಲದಲ್ಲೇ ಮುಗಿಯಿತು. ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳ ಅಸಮರ್ಪಕ ಉತ್ತರ, ಕುಂದಾಪುರ ತಾಲೂಕು ಆಸ್ಪತ್ರೆ ಆರೋಗ್ಯಾಧಿಕಾರಿ ವಿರುದ್ಧದ ನಿರ್ಣಯ ಜಿಪಂಗೆ ಕಳುಹಿಸದ್ದಕ್ಕೆ ಅಸಮಾಧಾನ, ತಾಪಂ ಸಾಮಾನ್ಯ ಸಭೆಯ ಕಾರ್ಯಸೂಚಿ ವಿಳಂಬಕ್ಕೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಮೊದಲ್ಗೊಂಡು ಎಲ್ಲವೂ ಅಪೂರ್ಣ ಚರ್ಚೆಯೊಂದಿಗೆ ಕೊನೆಗೊಂಡಿತು. ತಾಲೂಕು ಪಂಚಾಯತಿಯನ್ನು ಶಾಸಕರಿಗೆ ಅಡವಿಟ್ಟಿದ್ದೀರಾ? ತಾಪಂ ಅಧ್ಯಕ್ಷೆ ಶ್ಯಾಮಲಾಕುಂದರ್, ಸರ್ಕಾರಿ ಆಸ್ಪತ್ರೆಯ ಬಗ್ಗೆ ನಿರ್ಣಯವನ್ನು ಜಿಪಂ ಹಾಗೂ ಆರೋಗ್ಯ ಸಚಿವರಿಗೆ ಕಳುಹಿಸುವ ಬಗ್ಗೆ ಶಾಸಕರ ಅಭಿಪ್ರಾಯ ಕೇಳಲಾಗಿತ್ತು. ಅವರು ಮೌಖಿಕವಾಗಿ ನಿರ್ಣಯ ಕಳುಹಿಸುವುದು ಬೇಡ ಎಂದಿದ್ದರಿಂದ ಕಳುಹಿಸಿರಲಿಲ್ಲ ಎಂದರು. ಇದರಿಂದ ಆಡಳಿತ ಪಕ್ಷದ ಸದಸ್ಯರೇ ಅಧ್ಯಕ್ಷರ ವಿರುದ್ಧ ತಿರುಗಿಬಿದ್ದರು.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಲಾಕ್ ಕುರಿತಾಗಿ ಸಾರ್ವಜನಿಕ ವಲಯದಲ್ಲಿರುವ ಅಭಿಪ್ರಾಯ, ಕುರಾನ್‌ನಲ್ಲಿ ತಿಳಿಸಲಾಗಿರುವ ಅಂಶ ಹಾಗೂ ಇತ್ತಿಚಿಗೆ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪಿನ ಸುತ್ತ ಹೆಣೆಯಲಾಗಿರುವ ಕಥಾಹಂದರ ‘ಟ್ರಿಪಲ್ ತಲಾಕ್’ ಸಿನೆಮಾದ ಪ್ರಿಮೀಯರ್ ಶೋ ಜ.25ರ ಶನಿವಾರ ಸಂಜೆ 5:45ಕ್ಕೆ ಕೋಟೇಶ್ವರದ ಯುವ ಮೆರೀಡಿಯನ್‌ನಲ್ಲಿ ಜರುಗಲಿದೆ. ಈ ಬಗ್ಗೆ ಟ್ರಿಪಲ್ ತಲಾಕ್ ಸಿನೆಮಾದ ನಿರ್ದೇಶಕ ಯಾಕುಬ್ ಖಾದರ್ ಗುಲ್ವಾಡಿ ಕುಂದಾಪುರದಲ್ಲಿ ಜರುಗಿದ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿ, ಬ್ಯಾರಿ ಹಾಗೂ ಕನ್ನಡ ಭಾಷೆಯನ್ನು ಒಳಗೊಂಡು ನಿರ್ಮಾಣಗೊಂಡಿರುವ ಸಿನೆಮಾವನ್ನು ಕುಂದಾಪುರದ ಪರಿಸರದಲ್ಲಿಯೇ ಚಿತ್ರೀಕರಿಸಲಾಗಿದ್ದು, ಹಲವು ಸ್ಥಳೀಯ ಪ್ರತಿಭಾನ್ವಿತರು ಹಾಗೂ ಕುಂದಾಪುರದ ಗಣ್ಯರುಗಳು ಚಿತ್ರದಲ್ಲಿ ನಟಿಸಿದ್ದಾರೆ. ಒಂದೂವರೆ ಗಂಟೆಗಳ ಅವಧಿಯ ಸಿನೆಮಾ ಇದಾಗಿದೆ ಎಂದರು. ಮುಂದವರಿದು ಮಾತನಾಡಿ, ಸಿನೆಮಾ ಎಂಬುದು ನನ್ನ ಕನಸಾಗಿತ್ತು. ಆ ಕಾರಣಕ್ಕಾಗಿ ರಿಸರ್ವೇಶನ್ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದೆ. ಅದು ರಾಷ್ಟ್ರಪ್ರಶಸ್ತಿಯನ್ನು ತಂದುಕೊಟ್ಟಿತು. ರಿಸರ್ವೇಶನ್ ಹಾಗೂ ಹಿಂದಿನ ಎಲ್ಲಾ ಚಿತ್ರಗಳ ಅನುಭವವನ್ನು ಇರಿಸಿಕೊಂಡು ಟ್ರಿಪಲ್ ತಲಾಕ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎನ್.ಸಿ.ಸಿ ಜ್ಯೂನಿಯರ್ ಅಂಡರ್ ಆಫೀಸರ್ ಆಳ್ವಾಸ್ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ ನವದೆಹಲಿಯಲ್ಲಿ ಜ.26ರಂದು ಗಣರಾಜ್ಯೋತ್ಸವ ಕಾರ್ಯಕ್ರಮಗಳಾದ ‘ರಾಜಪತ್ ಗಣರಾಜ್ಯೋತ್ಸವ ಪಥ ಸಂಚಲನ’ದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಈಕೆ ಎನ್.ಸಿ.ಸಿ ಎಸ್.ಡಬ್ಲ್ಯು ಕಂಟಿಂಜೆಂಟ್ ಆಗಿ ಕರ್ನಾಟಕ-ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಲಿದ್ದಾರೆ. ಇವರು ಸತತ ನಾಲ್ಕು ತಿಂಗಳಿನಿಂದ ಎಂಟು ತರಬೇತಿ ಶಿಬಿರಗಳಲ್ಲಿ ಅಭ್ಯಾಸ ನಡೆಸಿದ್ದಾರೆ. ಈಕೆ ಗಂಗೊಳ್ಳಿ ನಿವಾಸಿ ಗೋಪಾಲ ಚಂದನ್ ಹಾಗೂ ಡಾ. ವೀಣಾ ಕಾರಂತ್ ದಂಪತಿ ಪುತ್ರಿ. ಇದನ್ನೂ ಓದಿ: ► ವೈಷ್ಣವಿ ಗೋಪಾಲ್‌ಗೆ ರಾಜ್ಯಮಟ್ಟದ ಎನ್‌ಸಿಸಿ ಚಿನ್ನದ ಪದಕ – https://kundapraa.com/?p=33662 . ► ವೈಷ್ಣವಿ ಗೋಪಾಲ್ ರಾಜ್ಯ ಮಟ್ಟಕ್ಕೆ ಆಯ್ಕೆ- https://kundapraa.com/?p=27195 . ► ಕನ್ನಡ ಚರ್ಚಾ ಸ್ವರ್ಧೆ: ವೈಷ್ಣವಿ ಗೋಪಾಲ್ ಪ್ರಥಮ – https://kundapraa.com/?p=20472 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು ಹೊಂಬಾಡಿ-ಮೊಂಡಾಡಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ. ಜಗದೀಶ್ ಗುರುವಾರ ಅನಿರೀಕ್ಷಿತ ಭೇಟಿ ನೀಡಿ, ಅಂಗನವಾಡಿಯ ಸ್ವಚ್ಛತೆ, ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದರು. ಈ ಸಂದರ್ಭ ಅವರು ಅಂಗನವಾಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅಂಗನವಾಡಿಯಲ್ಲಿ ಅವರ ದಿನಚರಿಯ ಬಗೆಗೆ ತಿಳಿದುಕೊಂಡರು. ಕಾರ್ಯದೋತ್ತಡದ ನಡುವೆಯೂ ಜಿಲ್ಲಾಧಿಕಾರಿಗಳ ದಿಢೀರ್ ಅಂಗನವಾಡಿ ಭೇಟಿಯ ಬಗ್ಗೆ ನಾಗರಿಕರು ಮೆಚ್ಚುಗೆ ಸೂಚಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಸ್ವಿಟ್ಸರ್ಲಂಡ್‌ನ ದಾವೋಸ್‌ನಲ್ಲಿ 21ರಿಂದ 24ರ ವರೆಗೆ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ೫೦ನೆ ವಾರ್ಷಿಕ ಅಧಿವೇಶನದಲ್ಲಿ ಭಾಗವಹಿಸಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ರಾಜ್ಯದ ತಂಡಕ್ಕೆ ಬೈಂದೂರು ತಾಲ್ಲೂಕಿನ ಕಿರಿಮಂಜೇಶ್ವರ ಮೂಲದ ಅಪರ್ಣಾ ಮಾರ್ಗದರ್ಶಿ ಹುದ್ದೆ ನಿರ್ವಹಿಸುತ್ತಿದ್ದಾರೆ. ಆಕೆ ಕಿರಿಮಂಜೇಶ್ವರ ರಥಬೀದಿಯಲ್ಲಿರುವ ಶ್ಯಾನುಭಾಗ್ ಕುಟುಂಬದ ’ನಮ್ಮನೆ’ಯ ಸುಧಾಕರ ಶ್ಯಾನುಭಾಗ್ ಅವರ ಪುತ್ರಿ. ಮುಂಬೈಯಲ್ಲಿ ಜನಿಸಿ ತಂದೆಯೊಂದಿಗೆ ಅಲ್ಲಿಯೇ ವಾಸವಾಗಿರುವ ಅಪರ್ಣಾ ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಗಳಿಸಿರುವರು. ಭಾರತ ಮತ್ತು ದಕ್ಷಿಣ ಏಷ್ಯಾ ಸಮುದಾಯ ಕುರಿತು ಪರಿಣತರಾಗಿರುವ ಅವರು ಮುಂಬಯಿಯ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯಲ್ಲಿ ಉದ್ಯೋಗದಲ್ಲಿದ್ದಾರೆ. ಎರಡು ವರ್ಷಗಳ ಅವಧಿಗೆ ವಿಶ್ವ ಆರ್ಥಿಕ ಒಕ್ಕೂಟದ ಜತೆ ಕೆಲಸ ಮಾಡಲು ನಿಯುಕ್ತರಾಗಿ, ೪ ತಿಂಗಳಿನಿಂದ ಅದರ ಜಿನೇವಾ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಧಾಕರ ಶ್ಯಾನುಭಾಗ್ ವಿವಿಧೆಡೆ ಉದ್ಯೋಗ ನಡೆಸಿ, ನಿವೃತ್ತಿಯ ಬಳಿಕ ಮುಂಬೈಯಲ್ಲಿ ನೆಲೆಸಿದ್ದಾರೆ. ಅಪರ್ಣಾ ಅವರ ಪತಿ ಸಾಫ್ಟ್‌ವೇರ್ ಎಂಜಿನಿಯರ್.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನಿಂದ ಬೈಂದೂರು ರತ್ತೂಬಾಯಿ ಜನತಾ ಹೈಸ್ಕೂಲು ಹಾಗೂ ಬಿಜೂರು ಸರಕಾರಿ ಪ್ರೌಢಶಾಲೆಗೆ ಒಟ್ಟು 60,000ರೂ. ಮೌಲ್ಯದ ಎರಡು ಗ್ಯಾಸ್ ರೇಂಜ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರು ಬೈಂದೂರು ರತ್ತೂಬಾಯಿ ಜನತಾ ಹೈಸ್ಕೂಲಿನಲ್ಲಿ ಶಾಲೆಯ ಮುಖ್ಯೋಪಧ್ಯಾಯರಾದ ಮಂಜು ಕಾಳವಾರ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಟ್ರಸ್ಟಿ ರಾಮ ಬಿಜೂರು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಬಿಜೂರು ರತ್ತೂಬಾಯಿ ಜನತಾ ಹೈಸ್ಕೂಲಿನಲ್ಲಿ ಶಾಲಾ ಮುಖ್ಯೋಪಧ್ಯಾಯರಾದ ಸುಬ್ರಹ್ಮಣ್ಯ ಮದ್ದೋಡಿ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಟ್ರಸ್ಟೀ ರಾಮ ಬಿಜೂರು, ಎಸ್‌ಡಿಎಂಸಿ ಅಧ್ಯಕ್ಷ ರಾಜೇಂದ್ರ ಬಿಜೂರು, ಎಸ್‌ಡಿಎಂಸಿ ಸದಸ್ಯರುಗಳಾ ಸುರೇಶ್ ಬಿಜೂರು, ಉಮೇಶ್ ದೇವಾಡಿಗ, ತಿಮ್ಮಪ್ಪ ದೇವಾಡಿಗ ಹಾಗೂ ಇತರರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ರೋಟರಿ ಭವನದಲ್ಲಿ ಮಂಗಳವಾರ ವಿಂಶತಿ ಸಂಭ್ರಮದಲ್ಲಿರುವ ಸುರಭಿ ರಿ. ಬೈಂದೂರು ಸಂಸ್ಥೆಯು ಫೆ.2 ರಿಂದ ಫೆ.4ರ ತನಕ ಆಯೋಜಿಸಿರುವ ’ಸುರಭಿ ಜೈಸಿರಿ’ ಹಾಗೂ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಭಾರತೀಯ ಜೀವ ವಿಮಾದ ಅಭಿವೃದ್ಧಿ ಅಧಿಕಾರಿ ಸೋಮನಾಥನ್ ಆರ್. ಬಿಡುಗಡೆಗೊಳಿಸಿದರು. ಬಳಿಕ ಅವರು ಮಾತನಾಡಿ ಬದುಕಿನಲ್ಲಿ ಗುರಿ ತಲುಪಲು ಹಲವು ಅಡೆತಡೆಗಳು ಎದುರಾಗುತ್ತವೆ. ಆದರೆ ಎಲ್ಲವನ್ನೂ ಸಮಚಿತ್ತದಿಂದ ಎದುರಿಸುತ್ತಾ ಮುನ್ನುಗ್ಗಿದಾಗ ಸಾಧನೆ ಸಾಧ್ಯವಿದೆ. ಯಾವುದೇ ಸಂಘಟನೆಯಲ್ಲಿ ಪ್ರತಿಯೊಬ್ಬರ ತೊಡಗಿಸಿಕೊಳ್ಳುವಿಕೆ ಇದ್ದಾಗ ಅದು ಯಶಸ್ಸಿನತ್ತ ಸಾಗುತ್ತದೆ ಎಂದರು. ಸುರಭಿ ಬೈಂದೂರು ಅಧ್ಯಕ್ಷ ಸತ್ಯನಾ ಕೊಡೇರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಆನಂದ ಮದ್ದೋಡಿ, ಸಲಹೆಗಾರರಾದ ಜಿ. ತಿಮ್ಮಪ್ಪಯ್ಯ, ನಿರ್ದೇಶಕ ಸುಧಾಕರ ಪಿ., ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಂಪ್ರದಾಯಿಕ ಶಕ್ತಿಮೂಲಗಳು ಕ್ಷಯಿಸುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಪರ್ಯಾಯ ಮೂಲಗಳ ಅವಲಂಬನೆ ಅನಿವಾರ್ಯವೆನಿಸಿದೆ. ಧಾರಾಳವಾಗಿ, ಉಚಿತವಾಗಿ ಲಭ್ಯವಿರುವ ಹಾಗೂ ಪರಿಸರ ಸ್ನೇಹಿಯಾಗಿರುವ ಸೌರಶಕ್ತಿಯನ್ನು ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಲು ಸಾಧ್ಯವಿರುವುದರಿಂದ ಜನರು ಅದರತ್ತ ಹೊರಳಬೇಕು ಎಂದು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಅಧ್ಯಕ್ಷ ಪಿ. ಗೋಪಿಕೃಷ್ಣ ಹೇಳಿದರು. ಗೋಳಿಹೊಳೆಯ ಮಹಿಷಾಸುರ ಮರ್ಧಿನಿ ಸಭಾಭವನದಲ್ಲಿ ಬ್ಯಾಂಕ್ ಮತ್ತು ಸೆಲ್ಕೋ ಸೋಲಾರ್ ಲೈಟ್ ಜಂಟಿ ಆಶ್ರಯದಲ್ಲಿ ಬುಧವಾರ ನಡೆದ ’ವಿಕಾಸ ಸೌರ ಸ್ವಾವಲಂಬನೆಯ ಮೊದಲ ಸಾಧನೆ’ಯನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮೆಲ್ಲ ದಿನಬಳಕೆಯ ಉಪಕರಣಗಳಿಗೆ ಈಗ ವಿದ್ಯುತ್ ಅನಿವಾರ್ಯ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸುಲಭ ಲಭ್ಯವಲ್ಲ. ಆದುದರಿಂದ ಸೆಲ್ಕೋ ಸೋಲಾರ್ ಲೈಟ್ಸ್ ಸಂಸ್ಥೆ ಬೆಳಕಿಗೆ ಮಾತ್ರವಲ್ಲದೆ ಸ್ವೋದ್ಯೋಗ ನಡೆಸಲು ಅಗತ್ಯವಿರುವ ೬೦ ಯಂತ್ರಗಳಿಗೆ ಸೌರಶಕ್ತಿ ಅಳವಡಿಸುತ್ತಿದೆ. ಅವುಗಳನ್ನು ಅಳವಡಿಸಿಕೊಳ್ಳಲು ಗ್ರಾಮೀಣ ಬ್ಯಾಂಕ್ ಸಹಾಯಧನ ಸಹಿತವಾದ ಸಾಲ ನೀಡುತ್ತದೆ. ಜನರು ಈ ಸೌಲಭ್ಯದ ಗರಿಷ್ಠ ಲಾಭ ಪಡೆಯಬೇಕು ಎಂದ ಅವರು, ಸ್ಥಳೀಯರ ಕೋರಿಕೆಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ನೆಹರು ಯುವ ಕೇಂದ್ರ ಉಡುಪಿ ಹಾಗೂ ನವಶಕ್ತಿ ಮಹಿಳಾ ವೇದಿಕೆ ರಿ. ಕೊಲ್ಲೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ಕೊಲ್ಲೂರಿನಲ್ಲಿ ರಾಷ್ಟ್ರೀಯ ಯುವ ಸಪ್ತಾಹ ಅಂಗವಾಗಿ ಸೈಕಲ್ ರ‍್ಯಾಲಿಗೆ ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ಚಾಲನೆ ನೀಡಿದರು. ಕೊಲ್ಲೂರು ದೇವಳದ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಅರುಣ್ ಕುಮಾರ್ ಶೆಟ್ಟಿ ಮಾತನಾಡಿ ವ್ಯಾಯಾಮದ ಮೂಲಕ ಶರೀರದ ಫಿಟ್ನೆಸ್‌ಗೆ ಸೈಕ್ಲಿಂಗ್ ಅತ್ಯಂತ ಉಪಯೋಗಕಾರಿದೆ. ಈಗಿನ ಕಾಲದಲ್ಲಿ ಎಲ್ಲರೂ ಕುಳಿತಲ್ಲೇ ಕೆಲಸ ಮಾಡುವುದು, ವ್ಯಾಯಾಮ ಮಾಡದೆ ಇರುವುದು ಸರಿಯಾದ ಸಮಯಕ್ಕೆ ಆಹಾರ ಸೇವಿಸದೆ ಇರುವುದರಿಂದ ಖಾಯಿಲೆಗಳು ಅವರನ್ನು ಕಾಡುತ್ತಿದೆ. ಸದೃಢ ದೇಹದಿಂದ, ಸದೃಢ ಮನಸ್ಸು, ಸದೃಢ ಭಾರತ ಸೃಷ್ಟಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮೂಕಾಂಬಿಕ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಹರೀಶ್ ಕುಮಾರ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಗ್ರೀಷ್ಮಾ ಗಿರಿಧರ ಭಿಡೆ, ಶಾಲಾ ಮುಖ್ಯೋಪಾಧ್ಯಾಯರಾದ…
ಕುಂದಾಪ್ರ ಡಾಟ್ ಕಾಂ’ ಸುದ್ದಿ ಕೊಲ್ಲೂರು: ಸ್ಯಾಂಡಲ್‍ವುಡ್ ನಟಿ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದರು. ಶೃಂಗೇರಿ ಶಾರದಾಂಬೆಯ ದರ್ಶನ ಪಡೆದ ಬಳಿಕ ರಚಿತಾ ರಾಮ್ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದರು. ಶ್ರೀ ಮೂಕಾಂಬಿಕೆ ದೇವರಿಗೆ ವಿಶೇಷ ಸೇವೆ ಸಲ್ಲಿಸಿದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ರಚಿತಾ ರಾಮ್ ಅವರಿಗೆ ಫಲ-ಪ್ರಸಾದಗಳನ್ನು ನೀಡಿ ಗೌರವ ಸಲ್ಲಿಸಿದರು.
