ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನದಿಯಲ್ಲಿ ಈಜಲು ತೆರಳಿದ್ದ ಯುವಕ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ತಾಲೂಕಿನ ಮೊವಾಡಿ ಸೇತುವೆ ಬಳಿ ಭಾನುವಾರ ಸಂಜೆ ಸಂಭವಿಸಿದೆ. ತ್ರಾಸಿ ಹೋಲಿಕ್ರಾಸ್ ಸಮೀಪದ ನಿವಾಸಿ ಮಹೇಂದ್ರ (24) ಮೃತ ಯುವಕ. ಭಾನುವಾರ ಸಂಜೆಯ ವೇಳೆಗೆ ಮೊವಾಡಿಯ ಸೇತುವೆ ಬಳಿಯ ಸೌಪರ್ಣಿಕಾ ನದಿ ತೀರಕ್ಕೆ ತೆರಳಿದ್ದ ಮಹೇಂದ್ರ ಹಾಗೂ ಆಶಿಕ್ ನೀರಿಗೆ ಇಳಿದಿದ್ದು ಇನ್ನೋರ್ವ ಸ್ನೇಹಿತ ಶರತ್ ಸೇತುವೆ ಮೇಲೆ ನಿಂತು ವೀಕ್ಷಿಸುತ್ತಿದ್ದ. ಈ ವೇಳೆ ನೀರಿನ ಸೆಳೆತ ಜಾಸ್ತಿ ಇದ್ದುದರಿಂದ ಮಹೇಂದ್ರ ನೀರುಪಾಲಾಗಿದ್ದಾನೆ. ಆಶಿಕ್ ನನ್ನು ಸ್ಥಳೀಯರಾದ ರತ್ನಾಕರ್ ಕಾಂಚನ್ ಮತ್ತು ಯೋಗೇಂದ್ರ ಕಾಂಚನ್ ರಕ್ಷಿಸಿದ್ದಾರೆ. ನೀರುಪಾಲಾದ ಯುವಕನಿಗಾಗಿ ರಾತ್ರಿಯ ತನಕವೂ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದ್ದು, ಮೃತದೇಹ ಪತ್ತೆಯಾಗಿರಲಿಲ್ಲ. ಸೋಮವಾರವೂ ಹುಡುಕಾಟ ಮುಂದುವರಿಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ, ಸ್ಥಳೀಯರು ದೋಣಿ ಮೂಲಕ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಗಂಗೊಳ್ಳಿ ಠಾಣಾಧಿಕಾರಿ ನಂಜಾ ನಾಯ್ಕ್ ಹಾಗೂ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ಇಲ್ಲಿನ ಶಾಸ್ತ್ರೀ ವೃತ್ತದ ಬಳಿಯ ಫ್ಲೈಓವರ್ ಕೆಳಭಾಗದಲ್ಲಿದ್ ನವಯುಗ ಕಂಪೆನಿಗೆ ಸೇರಿದ ಸಾಮಾಗ್ರಿಗಳನ್ನು ಮುಂದಿನ ನಾಲ್ಕು ದಿನಗಳಲ್ಲಿ ತೆರವುಗೊಳಿಸಲು ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು ನವಯುಗ ಕಂಪೆನಿಗೆ ಸೂಚನೆ ನೀಡಿದ್ದಾರೆ. ಅವರು ಕುಂದಾಪುರ ಫ್ಲೈಓವರ್ ಕೆಳಗಿನ ಸಾಮಾಗ್ರಿ ತೆರವು ಕಾರ್ಯಾಚರಣೆ ವೀಕ್ಷಿಸಿದ ಬಳಿಕ ಕುಂದಾಪುರ ಮಿನಿ ವಿಧಾನಸೌಧದಲ್ಲಿ ನವಯುಗ ಇಂಜಿನಿಯರ್ ಜೊತೆ ಸಭೆ ನಡೆಸಿದರು. ನಾಲ್ಕು ದಿನಗಳಲ್ಲಿ ಸಾಮಾಗ್ರಿ ತೆರವು ಮಾಡುವುದು, ಕುಂದಾಪುರ ನಗರಕ್ಕೆ ಸಂಪರ್ಕಿಸುವ ದುರ್ಗಾಂಬ ಮೋಟಾರ್ ಎದುರು ‘ಕುಂದಾಪುರ’ ಎಂದು ನಾಮಫಲಕ ಅಳವಡಿಕೆ, ಅಲ್ಲಲ್ಲಿ ಸೂಚನಾಫಲಕ, ನಾಮಫಲಕ ಅಳವಡಿಕೆ, ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಸಂಪರ್ಕಿಸುವಲ್ಲಿ ಡಾಂಬಾರು ಹಾಕುವುದು, ಅಂಡರ್ ಪಾಸ್ ಸಮೀಪದ ಸಮಸ್ಯೆಗಳ ಪರಿಹಾರ, ಬೀದಿ ದೀಪಗಳ ನಿರ್ವಹಣೆ ಮಾಡಬೇಕು ಎಂದರು. ಅಲ್ಲದೆ ಇದೇ ತಿಂಗಳ 29ರೊಳಗೆ ಶಾಸ್ತ್ರೀ ವೃತ್ತದ ಸಮೀಪ ಡಾಮರು ರಸ್ತೆ ಕೆಲಸ ಮುಗಿಸಬೇಕು ಎಂದು ಸಂಬಂದಪಟ್ಟವರಿಗೆ ಗಡುವು ನೀಡಿದರು. ಡಿವೈಎಸ್ಪಿ ಶ್ರೀಕಾಂತ್ ಕೆ. ಮಾತನಾಡಿ, ನವಯುಗ ಕಂಪೆನಿಯವರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದ ಸಂದರ್ಭ ಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿಬಿದ್ದಿದ್ದ ದೋಣಿಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಮೃತದೇಹ ಶನಿವಾರ ಪತ್ತೆಯಾಗಿದೆ. ಚರಣ್ ಖಾರ್ವಿ (27) ಅವರ ಮೃತದೇಹ ಬೆಳಿಗ್ಗೆ ಅಮ್ಮನವರ ತೊಪ್ಲು ಓಲಗ ಮಂಟಪ ಸಮೀಪದ ಸಮುದ್ರ ತೀರದಲ್ಲಿ ದೊರೆತಿದ್ದರೇ, ಅಣ್ಣಪ್ಪ ಖಾರ್ವಿ ಅವರ ಮೃತದೇಹ ಮಧ್ಯಾಹ್ನ ಕರ್ಕಿಕಳಿ ಬಳಿ ದೊರೆತಿದೆ. ಘಟನಾ ಸ್ಥಳಕ್ಕೆ ಬೈಂದೂರು ಕರಾವಳಿ ಕಾವಲು ಪಡೆಯ ಡಿವೈಎಸ್ಪಿ ಟಿ.ಎಸ್. ಸುಲ್ಪಿ, ಪೊಲೀಸ್ ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ, ಠಾಣಾಧಿಕಾರಿ ಪವನ್ ನಾಯ್ಕ್, ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಎಸ್ಪೈ ವಿಜಯ ಅಮೀನ್, ಸ್ಥಳೀಯ ಮೀನುಗಾರರು ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದರು. ಬೈಂದೂರು ಶಾಸಕರ ಭೇಟಿ:ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರು ಘಟನಾ ಸ್ಥಳಕ್ಕೆ ಭೇಟಿ ನಿಡಿ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಬೈಂದೂರು ಕ್ಷೇತ್ರದ ಮೀನುಗಾರರಿಗೆ ಮೂರು ಸಾವಿರ ಜೀವರಕ್ಷಕ ಜಾಕೆಟ್ ಒದಗಿಸುವಂತೆ ಮೀನುಗಾರಿಕಾ ಇಲಾಖೆಎ ಕೋರಲಾಗಿದೆ ಎಂದರಲ್ಲದೇ, ಮೃತರ ಕುಟುಂಬಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ದಾನಿಗಳು ಸಹಕಾರ ನೀಡುತ್ತಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ಕೂಡ ಸರಕಾರಿ ಶಾಲೆಗಳಲ್ಲಿ ದೊರೆಯುತ್ತಿದೆ. ಶಾಲಾ ವಾಹನ ಸೌಲಭ್ಯ ಇರುವ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇಂತಹ ಕಾಲಘಟ್ಟದಲ್ಲಿ ದಾನಿಗಳ ಸಹಕಾರದೊಂದಿಗೆ ಶಾಲೆಗೆ ಸುಸಜ್ಜಿತ ಹೊಸ ಶಾಲಾ ವಾಹನವನ್ನು ಹೊಂದುವ ಮೂಲಕ ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಮೈಲಿಗಲ್ಲನ್ನು ನೆಟ್ಟಿದೆ ಎಂದು ಗಂಗೊಳ್ಳಿಯ ಉದ್ಯಮಿ ಎಚ್. ಗಣೇಶ ಕಾಮತ್ ಹೇಳಿದರು. ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಂಚಾಡಿ ಸಬಿತಾ ಶೆಣೈ ಹಾಗೂ ದಾನಿಗಳು ಕೊಡಮಾಡಿದ ಹೊಸ ಶಾಲಾ ವಾಹನವನ್ನು ಶನಿವಾರ ಹಸ್ತಾಂತರಿಸಿ ಅವರು ಮಾತನಾಡಿದರು. ದಿ.ಕೊಂಚಾಡಿ ಗಣಪತಿ ಶೆಣೈ ಅವರು ಶಾಲೆಯ ಬೆನ್ನೆಲುಬಾಗಿ ನಿಂತು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು. ಅವರು ಸುಮಾರು 12 ವರ್ಷಗಳ ಹಿಂದೆ ಶಾಲಾ ವಾಹನವನ್ನು ಕೊಡುಗೆಯಾಗಿ ನೀಡಿದ್ದು,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮುಂದಿನ 2 ವರ್ಷದ ಅವಧಿಯಲ್ಲಿ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಉತ್ಪಾದನೆ ಮಾಡುವುದರ ಜೊತೆಗೆ, ಉತ್ತಮ ಗುಣಮಟ್ಟದ, ನೈಸರ್ಗಿಕ ಅಂಶಗಳನ್ನು ಒಳಗೊಂಡ ಸಿರಿಧಾನ್ಯಗಳನ್ನು ವಿದೇಶಕ್ಕೆ ರಫ್ತು ಮಾಡುವುದರ ಮೂಲಕ, ಭಾರತವು ಇಡೀ ವಿಶ್ವಕ್ಕೆ ಸಿರಿಧಾನ್ಯಗಳನ್ನು ರಫ್ತು ಮಾಡುವ ಹಬ್ ಆಗಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಶಿವಮೊಗ್ಗ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ, ಅಂತಾರಾಷ್ಟಿçÃಯ ಸಿರಿಧಾನ್ಯ ವರ್ಷ 2023 ಪೌಷ್ಠಿಕತೋಟ ಮತ್ತು ವೃಕ್ಷಾರೋಪಣ ಪ್ರಚಾರಾಂದೋಲನ ಕಾರ್ಯಕ್ರಮವನ್ನು, ಮಹಿಳೆಯರ ಮಡಿಲಿಗೆ ಸಿರಿಧಾನ್ಯಗಳನ್ನು ತುಂಬಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಭಾರತ ಮಳೆಯಾಧಾರಿತ ಕೃಷಿಯನ್ನು ಅವಲಂಬಿಸಿರುವ ರಾಷ್ಟçವಾಗಿದ್ದು, ಇಲ್ಲಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಸೆ.18: ಹೊಳೆಗೆ ಮೀನು ಹಿಡಿಯಲೆಂದು ತೆರಳಿ ನಾಪತ್ತೆಯಾಗಿದ್ದ ಮೀನುಗಾರ ದೇವೇಂದ್ರ ಖಾರ್ವಿ (35) ಮೃತದೇಹ ಗಂಗೊಳ್ಳಿ ಕಳುವಿನ ಬಾಗಿಲು ಎಂಬಲ್ಲಿ ಇಂದು ಬೆಳಿಗ್ಗೆ ದೊರೆತಿದೆ. ಗಂಗೊಳ್ಳಿ ಬಂದರು ಸಮೀಪ ಗುರುವಾರ ಸಂಜೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ರಾತ್ರಿ ಮನೆಯವರು ಕರೆ ಮಾಡಿದಾಗ ಪ್ರತಿಕ್ರಿಯೆ ಬಾರದಿದ್ದಾಗ ಹುಡುಕಾಟ ನಡೆಸಿದ್ದು ಬಂದರು ಬಳಿ ಹೊಳೆಯಲ್ಲಿ ದೋಣಿ ಸಿಕ್ಕಿತ್ತು. ಮೀನುಗಾರಿಕೆ ನಡೆಸುವಾಗ ಆಯತಪ್ಪಿ ನೀರಿಗೆ ಬಿದ್ದಿರುವ ಶಂಕೆಯಿಂದ ರಾತ್ರಿಯಿಂದ ಶುಕ್ರವಾರ ಸಂಜೆ ತನಕವೂ ಹುಡುಕಾಡ ನಡೆಸಲಾಯಿತು. ಮುಳುಗು ತಜ್ಞರು, ಅಗ್ನಿಶಾಮಕ ದಳದವರು ಕೂಡ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದರು. ಮೃತ ದೇವೇಂದ್ರ ಖಾರ್ವಿಯವರು ತಂದೆ, ತಾಯಿ, ಇಬ್ಬರು ಸೋದರ, ಮೂರು ಸೋದರಿಯರನ್ನು ಅಗಲಿದ್ದಾರೆ. ಇದನ್ನೂ ಓದಿ:► ಅಳುವೆಕೋಡಿಯಲ್ಲಿ ದೋಣಿ ಮಗುಚಿ ಇಬ್ಬರು ಮೀನುಗಾರರು ನಾಪತ್ತೆ – https://kundapraa.com/?p=52541 .
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ, ಸೆ.17: ಮೀನುಗಾರಿಕೆ ಮುಗಿಸಿ ಹಿಂದಿರುಗುತ್ತಿದ್ದ ದೋಣಿಗೆ ತೆರೆ ಬಡಿದು ಮಗುಚಿದ ಪರಿಣಾಮ ಇಬ್ಬರು ಮೀನುಗಾರರು ನಾಪತ್ತೆಯಾಗಿರುವ ಘಟನೆ ಶುಕ್ರವಾರ ರಾತ್ರಿ 8 ಗಂಟೆಗೆ ವೇಳೆಗೆ ನಡೆದಿದೆ. ಬೈಂದೂರು ತಾಲೂಕಿನ ತಾರಾಪತಿಯಲ್ಲಿ ಘಟನೆ ನಡೆದಿದ್ದು, ನಾಪತ್ತೆಯಾದ ಮೀನುಗಾರರು ಚರಣ ಖಾರ್ವಿ ಹಾಗೂ ಅಣ್ಣಪ್ಪ ಮೊಗವೀರ ಎಂದು ಹೇಳಲಾಗಿದೆ. ಮಧ್ಯಾಹ್ನದ ಬಳಿಕ ಅಳುವೆಕೋಡಿಯಿಂದ ಮೀನುಗಾರಿಕೆಗೆ ಜೈಗುರೂಜಿ ಹೆಸರಿನ ನಾಡದೋಣಿಯಲ್ಲಿ 8 ಮಂದಿ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ತಾರಾಪತಿ ಸಮೀಪಿಸುತ್ತಿದ್ದಂತೆ ಸಮುದ್ರದ ಅಲೆಯ ಹೊಡೆತಕ್ಕೆ ದೋಣಿ ಮುಗುಚಿದ್ದು, ಬಲೆಯ ಅಡಿಗೆ ಸಿಲುಕಿದ್ದ ಇಬ್ಬರು ನಾಪತ್ತೆಯಾಗಿದ್ದರು. ಉಳಿದ ಆರು ಮಂದಿ ಪಕ್ಕದ ದೋಣಿಯವರು ರಕ್ಷಿಸಿ ದಡಕ್ಕೆ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ./ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಬೈಂದೂರು ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿಗಳು ಹಾಗೂ ಮೀನುಗಾರರು ಶೋಧಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಗಂಗೊಳ್ಳಿಯಲ್ಲಿ ಓರ್ವ ಮೀನುಗಾರ ನಾಪತ್ತೆ:ಹೊಳೆಯಲ್ಲಿ ಕಿರು ದೋಣಿಯ ಮೂಲಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರದ ಒಳಗಾದ ರಾಬಿಯಾ ಸೈಫಿಯಾ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲು ಜಿಲ್ಲಾ ಮುಸ್ಲಿಮ್ ಒಕ್ಕೂಟ ಪ್ರಧಾನ ಮಂತ್ರಿ ಅವರಿಗೆ ಬೈಂದೂರು ತಾಲೂಕು ದಂಡಾಧಿಕಾರಿ ಎಚ್. ಎಸ್. ಶೋಭಾಲಕ್ಷ್ಮಿ ಅವರ ಮೂಲಕ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾದ ಹಸನ್ ಮಾವಡ್, ಉಪಾಧ್ಯಕ್ಷರಾದ ಎಚ್. ಎಸ್ ಸಿದ್ದಿಕ್ ಸಾಹೇಬ್ ಶಿರೂರು, ಕೋಶಾಧಿಕಾರಿಗಳಾದ ಶೇಖ್ ಫಯಾಜ್ ಅಲಿ, ಕಾರ್ಯದರ್ಶಿಗಳಾದ ತಬ್ರೇಜ್ ನಾಗೂರ್ ಜೊತೆ ಕಾರ್ಯದರ್ಶಿಗಳಾದ ಅಬು ಅಹಮದ್ ಖೋಕಾ ಹಾಗೂ ಸದಸ್ಯರುಗಳಾದ ಮನೆಗಾರ್ ಜಿಫ್ರಿ ಸಾಹೇಬ್ ಶಿರೂರು, ಸಯ್ಯದ್ ಅಜಮಲ್ ಶಿರೂರು, ಬುವಾಜಿ ಮೊಹಸಿನ್ ಶಿರೂರು, ಮುಗಡಿ ಫಹೀಮ್, ದಬಾಪು ಅಬ್ದುಲ್ ಕಾದಿರ್ ಬೈಂದೂರು, ಝಕರಿಯ ಉಪ್ಪುಂದ, ಸಿರಾಜ್ ಹಲಗೇರಿ, ಸಮಿ ಹಲಗೇರಿ, ಉಪಸ್ಥಿತರಿದ್ದರು
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಂದು ವಿಶ್ವಕರ್ಮ ದಿನ, ವಿಶ್ವಕರ್ಮನು ಪಂಚಬ್ರಹ್ಮರ ಮೂಲಕ, ಲೋಕಕ್ಕೆ ಪಂಚಶಿಲ್ಪ ಕಾರ್ಯಗಳ ಮೂಲಕ ಸೃಷ್ಟಿಯಲ್ಲಿ ಸೃಜನಶೀಲತೆ ನಿರಂತರವಾಗಿ ನಡೆಯುತ್ತಿರುವಂತೆ ನೋಡಿಕೊಂಡವನು. ಇಡೀ ವಿಶ್ವವೇ ವಿಶ್ವಕರ್ಮನಿಗೆ ಋಣಿಯಾಗಿದ್ದೇವೆ ಎಂದು ಬೈಂದೂರು ತಾಲೂಕು ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್. ಹೇಳಿದರು. ಅವರು ಶುಕ್ರವಾರ ಬೈಂದೂರು ತಾಲೂಕು ತಹಶೀಲ್ದಾರ್ ಕಛೇರಿಯಲ್ಲಿ ಸರ್ಕಾರದ ಆದೇಶದಂತೆ ಸರಳವಾಗಿ ವಿಶ್ವಕರ್ಮ ಜಯಂತಿ ಆಚರಿಸಿ, ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿ ವಿಶ್ವಕರ್ಮ ಜಯಂತಿಯು ವಿಶ್ವಕರ್ಮ ಸಮುದಾಯದವನ್ನು ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಅದೇ ರೀತಿ ಸಮುದಾಯದ ಮೂಲಕ ಪಂಚ ಕಸಬನ್ನು ಇನ್ನೂ ಅತ್ಯಂತ ಜನಪ್ರಿಯಗೊಳಿಸಲು ಮತ್ತು ಕಲಾ ಕೌಶ್ಯಲಗಳನ್ನು ಮುಂದಿನ ಪೀಳಿಗೆಗೆ ನೀಡುವಂತಾಗಬೇಕು ಹಾಗೂ ಈ ಸಮಾಜವರು ಶಿಸ್ತು ಸಂಯಮ ತಾಳ್ಮೆ ಜಾಣತನ, ಸಾಮಾಜಿಕ ಬದ್ದತೆಯನ್ನು ರೂಢಿಸಿಕೊಂಡು ಬಂದಿದ್ದಾರೆ ಎಂದರು. ವಿಶ್ವಕರ್ಮ ಭಾವಚಿತ್ರವನ್ನು ಬೈಂದೂರು ವಿಶ್ವಕರ್ಮ ಯುವ ಸಂಘದ ವತಿಯಿಂದ ಬೈಂದೂರು ತಹಶೀಲ್ದಾರ್ ಕಛೇರಿಗೆ ಕೊಡುಗೆಯಾಗಿ ನೀಡಿದರು. ಈ ಸಂದರ್ಭ ಉಪತಹಶೀಲ್ದಾರ್ ಲತಾ ಶೆಟ್ಟಿ, ಯಡ್ತರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಜೆಇಇ ಮೈನ್ಸ್ 2021 ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 495 ವಿದ್ಯಾರ್ಥಿಗಳು ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆಯುವ ಮೂಲಕ ರಾಜ್ಯದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಗೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ ಕೆಟಗರಿ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಜಯಸೂರ್ಯ ಎಂ. ಎಸ್ 147ನೇ ರ್ಯಾಂಕ್, ಹರ್ಷಿತಾ ಗಂಗಾದರಪ್ಪ 172ನೇ ರ್ಯಾಂಕ್, ಧನರಾಜ 206ನೇ ರ್ಯಾಂಕ್, ಶೈಕ್ಷಾ ನಾಯಕ್ 213ನೇ ರ್ಯಾಂಕ್, ಪ್ರಜ್ವಲ್ ಆರ್ 350ನೇ ರ್ಯಾಂಕ್, ಐಶ್ವರ್ಯ ಎಂ. ಗಸ್ತಿ 955ನೇ ರ್ಯಾಂಕ್, ಮಂಜುನಾಥ ಎಸ್ 993 ರ್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿ ಕಿರಣ್ ರೆಡ್ಡಿ ಜೆಇಇ ಆರ್ಕ್ ಹಾಗೂ ಜೆಇಇ ಮೈನ್ಸ್ ನಲ್ಲಿ ಕ್ರಮವಾಗಿ 99.48 ಹಾಗೂ 99.26 ಪರ್ಸನ್ಟೈಲ್ ಗಳಿಸಿದ್ದಾರೆ. ವರುಣ್ ಅನ್ನಸಾಬ್ ಶಿಪುರೆ 99.04, ಸುಜ್ಞಾನ್ ಆರ್ ಶೆಟ್ಟಿ 98.95, ಗುರುರಾಜ್ ಮಹಾದೇವ್ ಮಾದನ್ನಾವರ್ 98.75 ಪರ್ಸನ್ಟೈಲ್ ಪಡೆದಿದ್ದಾರೆ. 95 ಪರ್ಸನ್ಟೈಲ್ಗಿಂತಲೂ ಅಧಿಕ 52 ವಿದ್ಯಾರ್ಥಿಗಳು, 90 ಪರ್ಸನ್ಟೈಲ್ ಗಿಂತ ಅಧಿಕ 172 ವಿದ್ಯಾರ್ಥಿಗಳು,…
