ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು 3,49,599 ಮತಗಳ ಅಂತರದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರ ವಿರುದ್ಧ ಜಯ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 7,18,916, ಮೈತ್ರಿಕೂಟದ ಅಭ್ಯರ್ಥಿ ಪ್ರಮೋದ್ ಅವರು 3.69.317 ಪಡೆದಿದ್ದಾರೆ. 7,510 ನೋಟಾ ಮತಗಳು ಬಿದ್ದಿದ್ದು, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಲೀಡ್ ಪಡೆದುಕೊಂಡಿದೆ. ಬಿಜೆಪಿ ಗೆಲುವಿನ ಸೂಚನೆ ದೊರೆಯುತ್ತಿದ್ದಂತೆ ಕ್ಷೇತ್ರದ ವಿವಿಧೆಡೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಲಿದರು. ► ಶಿವಮೊಗ್ಗ ಲೋಕಸಭಾ ಕ್ಷೇತ್ರ: ಬಿ.ವೈ. ರಾಘವೇಂದ್ರಗೆ ವಿಜಯಮಾಲೆ – https://kundapraa.com/?p=32250
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಯಡಿಯೂರಪ್ಪ ಪುತ್ರ ಹಾಲಿ ಸಂಸದ ಬಿ. ವೈ ರಾಘವೇಂದ್ರ ಅವರು 2,22,706 ಮತಗಳ ಅಂತರದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ವಿರುದ್ಧ ಜಯ ಸಾಧಿಸಿದ್ದಾರೆ. ರಾಘವೇಂದ್ರ ಅವರ ಗೆಲುವಿನಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ 73,613 ಮತಗಳ ಅಂತರದ ಗರಿಷ್ಠ ಲೀಡ್ ನೀಡಿದ್ದರೇ, ಸೊರಬ ಕ್ಷೇತ್ರ 2,821 ಮತಗಳ ಕನಿಷ್ಠ ಲೀಡ್ ನೀಡಿದೆ. ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ – 7,29,051, ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ – 5,06,345 ಪಡೆದಿದ್ದಾರೆ. 6866 ನೋಟಾ ಮತಗಳು ಬಿದ್ದಿದ್ದು, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಲೀಡ್ ಪಡೆದುಕೊಂಡಿದ್ದಾರೆ. ಬಿಜೆಪಿ ಗೆಲುವಿನ ಸೂಚನೆ ದೊರೆಯುತ್ತಿದ್ದಂತೆ ಕ್ಷೇತ್ರದ ವಿವಿಧೆಡೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಲಿದರು. ಎಲ್ಲೆಲ್ಲಿ ಲೀಡ್ ಎಷ್ಟು? *ಸಾಗರ – 22,996. *ಸೊರಬ – 2,821. *ಬೈಂದೂರು – 73,612. *ಶಿವಮೊಗ್ಗ ನಗರ – 47,908.…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಮರವಂತೆಯ ಮೀನುಗಾರಿಕಾ ಹೊರಬಂದರು ಕಾಮಗಾರಿ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಲಾರಿಯೊಂದು ಬ್ರೇಕ್ ವೈಫಲ್ಯದಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ಕಡಲಿಗೆ ಇಳಿದಿದೆ. ಲಾರಿಯ ಮುಂಭಾಗ ನೀರಿನಲ್ಲಿ ಮುಳುಗುವ ಮುನ್ನ ಚಾಲಕ ವಾಹನದಿಂದ ಹೊರಕ್ಕೆ ಜಿಗಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸುಮಾರು ಎಂಟು ವರ್ಷಗಳ ಹಿಂದೆ ಆರಂಭವಾದ ಬಂದರಿನ ಕಾಮಗಾರಿ ದೀರ್ಘ ಸಮಯದಿಂದ ಸ್ಥಗಿತವಾಗಿದೆ. ಮಾಡಿದ ಕಾಮಗಾರಿಯೂ ಸಮರ್ಪಕವಾಗಿಲ್ಲ ಎಂದು ಇಲ್ಲಿನ ಮೀನುಗಾರರು ದೂರುತ್ತಿದ್ದಾರೆ. ಕಾಮಗಾರಿಯ ವಿನ್ಯಾಸದಲ್ಲಿ ಬದಲಾವಣೆ ಮಾಡಿದ ಕಾರಣ ಅದಕ್ಕೆ ತಗಲುವ ಹಣವನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲವಾದ್ದರಿಂದ ಗುತ್ತಿಗೆ ವಹಿಸಿಕೊಂಡ ತಮಿಳುನಾಡಿನ ಎನ್‌ಎಸ್‌ಕೆ ಬಿಲ್ಡರ‍್ಸ್ ಎಂಬ ಸಂಸ್ಥೆ ಒಂದು ವರ್ಷದ ಹಿಂದೆಯೇ ಕೆಲಸ ನಿಲ್ಲಿಸಿತ್ತು. ಅದರ ಪರಿಣಾಮವಾಗಿ ಸಂಸ್ಥೆಯ ಯಂತ್ರೋಪಕರಣಗಳು, ವಾಹನಗಳು ತುಕ್ಕು ಹಿಡಿದು ಬಳಸಲಾರದ ಸ್ಥಿತಿಗೆ ತಲಪಿವೆ. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಸಂಸದ ಬಿ. ವೈ. ರಾಘವೇಂದ್ರ ಈ ಹಿಂದೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳಿಗೆ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಬಸ್ರೂರು ಮಾರ್ಕೋಳಿ ಪಾಳುಬಿದ್ದ ಚಿತ್ತೇರಿ ಬ್ರಹ್ಮಗುಂಡದಲ್ಲಿ ತುಳು ನಾಡ ಸಿರಿಯ ಬದುಕಿನ ಪೂರ್ವಾಧ ಭಾಗದ ಪ್ರಾಚೀನ ಕಾಲದ ಬ್ರಹ್ಮ (ಬೆರ್ಮರ್) ಮೂರ್ತಿ ಹತ್ತೆಯಾಗಿದ್ದು, ಹಿಂದೆ ಬ್ರಹ್ಮನ ಆರಾಧನೆ ಮಾಡುತ್ತಿದ್ದರು ಎನ್ನೋದಕ್ಕೆ ಮೂರ್ತಿ ಸಾಕ್ಷಿಯಾಗಿದೆ. ಪತ್ತೆಯಾದ ಬ್ರಹ್ಮನ ಶಿಲಾಮೂರ್ತಿ ಕುದುರೆಯೇರಿದ ಯೋಧನಂತಿದ್ದು, ಕೈಯಲ್ಲಿ ಛಾವಟಿ ಹಿಡಿದಿ ಭಂಗಿಯಲ್ಲಿದೆ. ಕಾಲಬಳಿಯಲ್ಲಿ ಹುಲಿಯಿದೆ. ಯೋಧ ಕಿರೀಟ ಧರಿಸಿದ್ದು.ಯೋಗ್ಯವಾದ ಉಡುಗೆ ತೊಡಿಗೆ ಧರಿಸಿದ್ದಾನೆ. ಕುದುರೆ ಏರಿದ ಬ್ರಹ್ಮನ ಕೈಯಲ್ಲಿ ಛಾವಟಿಯಿದ್ದು, ಪ್ರಭಾವಳಿಯಲ್ಲಿ ನಾಗನಂತೆ ಗುರುತಿಸುವ ಕೆತ್ತನೆ ಇದೆ. ಕಾಲಬಳಿ ಹುಲಿ ಸಹಿತ ಈ ಎಲ್ಲಾ ಕುರುಹುಗಳು ಜೈನ ಬ್ರಹ್ಮ ಹಾಗೂ ಯಕ್ಷ ಬ್ರಹ್ಮನ ಕಲ್ಪನೆಯಿಂದ ಭಿನ್ನವಾಗಿದ್ದು ಪುರಾತನ ತುಳು ಕ್ರಮ ಎಂದು ಗುರುತಿಸಬಹುದು. ಲಾಂಛನದಲ್ಲಿ ಅವಳಿ ನಾಗನ ಹೆಡೆಯಿದ್ದು, ನಾಗ ಹಾಗೂ ಬ್ರಹ್ಮನ ಸಂಯಕ್ತವಾಗಿ ಆರಾಧನ ಮಾಡುತ್ತಿರುವ ಪದ್ದತಿಗೆ ಪೂರಕವಾಗಿದೆ ಎಂದು ಬಸ್ರೂರು ಶ್ರೀ ಶಾರದಾ ಕಾಲೇಜ್ ಪ್ರೊ. ಪುರುಷೋತ್ತಮ ಬಲ್ಲಾಯ ಹೇಳಿದ್ದಾರೆ. ಸುಮಾರು ಎಂಟನೇ ಶತಮನಾದ ಕಾಲದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಳಜಿತ ಶ್ರೀ ರಾಮಕೃಷ್ಣ ಕುಟೀರದ ಸ್ವಾಮಿ ಸತ್ಯಸ್ವರೂಪಾನಂದ ಅವರ ಗೀತಾ ಮಾಧುರ್ಯ ಕೃತಿ ಶನಿವಾರ ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು. ಶ್ರೀಮದ್ಭಗವದ್ದೀತಾ ಜಯಂತಿ ಆಚರಣಾ ಸಮಿತಿ ಪ್ರಧಾನ ಸಂಚಾಲಕ ಬಿ. ರಾಮಕೃಷ್ಣ ಶೇರುಗಾರ್ ಪುಸ್ತಕವನ್ನು ಬಿಡುಗಡೆಗೊಳಿಸಿ ಬಳಿಕ ಮಾತನಾಡಿ ಭಗವದ್ಗೀತೆಯ ಅರ್ಥವನ್ನು ಅರಿತು ಮತ್ತೆ ಮನನ ಮಾಡಿಕೊಳ್ಳುವವರಿಗೆ ಈ ಕೃತಿ ಅತ್ಯುತ್ತಮ ಆಯ್ಕೆಯಾಗಿದೆ. ಸತ್ಸಂಗಗಳ ಮೂಲಕ ಭಗವದ್ಗೀತೆಯ ಸಾರವನ್ನು ಭೋಧಿಸಿ ಅದರ ಮಹತ್ವವನ್ನು ಪ್ರಚುರ ಪಡಿಸುತ್ತಿರುವ ಸ್ವಾಮಿ ಸತ್ಯಸ್ವರೂಪಾನಂದರು ಈ ವರೆಗೆ ಹಲವು ಪುಸ್ತಕಗಳನ್ನು ಬರೆದು ಪ್ರಕಟಿಸಿರುವುದು ಶ್ಲಾಘನಾರ್ಹ ಎಂದರು. ಈ ಸಂದರ್ಭ ಕೃತಿಕಾರರಾದ ಸ್ವಾಮಿ ಸತ್ಯಸ್ವರೂಪಾನಂದರು, ಯಶೋದಾ ಎಮ್. ಅಡಿಗ ನೈಕಂಬ್ಳಿ, ಶಿಕ್ಷಕ ಹಮನುಂತ ಜಿ. ಮಯ್ಯಾಡಿ, ಶ್ರೀ ರಾಮಕ್ಷತ್ರಿಯ ಮಹಿಳಾ ಮಂಡಳಿ ಅಧ್ಯಕ್ಷೆ ಸುಂದರಿ ಗಣಪತಿ ಇದ್ದರು. ಉಪನ್ಯಾಸಕ ಕೇಶವ ನಾಯಕ್ ಬಿಜೂರು ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜಾಗದ ತಕರಾರಿನ ಕಾರಣ 6 ಜನರ ತಂಡ ಶನಿವಾರ ಕಿರಿಮಂಜೇಶ್ವರದ ಮನೆಯೊಂದಕ್ಕೆ ನುಗ್ಗಿ ತಲವಾರಿನಿಂದ ಹಲ್ಲೆ ನಡೆಸಿ ಐದು ಮಂದಿಯ ಮೇಲೆ ಗಂಭೀರ ಹಲ್ಲೆ ನಡೆಸಿದ ಘಟನೆ ನಡೆದಿದೆ. ಕಿರಿಮಂಜೇಶ್ವರದ ಗಂಗೆಬೈಲು ಗಾಂಧಿನಗರದ ಕೋಣೆಗದ್ದೆಮನೆಯ ಶಾರದಾ(32) ಗಂಭೀರವಾಗಿ ಗಾಯಗೊಂಡಿದ್ದು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಶೀಲಾ (52), ಗಣೇಶ(45), ಉಷಾ (52), ಶಾರದಾ(45) ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋಣೆಗದ್ದೆ ಮನೆಯವರು ಕಿರಿಮಂಜೇಶ್ವರ ಜಾತ್ರೆಗೆ ಹೋಗಿ ಮನೆಗೆ ಬಂದು ಊಟ ಮಾಡುತ್ತಿದ್ದಾಗ ನಾಣನ ಮನೆಯ ಶೋಭಾ, ಅವರ ಸಹೋದರರಾದ ಸತೀಶ, ದಾಮೋದರ, ರತ್ನಾಕರ, ಶಿವರಾಮ ಮತ್ತು ಪತಿ ನವೀನಚಂದ್ರ ಇದ್ದ ತಂಡ ಮನೆಗೆ ನುಗ್ಗಿ ತಲವಾರ, ದೊಣ್ಣೆ, ಕತ್ತಿಯಿಂದ ದಾಳಿ ನಡೆಸಿದೆ. ಗಾಬರಿಗೊಂಡ ಮನೆಯವರು ದಿಕ್ಕುಪಾಲಾಗಿ ಓಡುತ್ತಿದ್ದಾಗ ಮಹಿಳೆಯರೆಂದು ನೋಡದೆ ತಲವಾರು ಬೀಸಿದ ಪರಿಣಾಮ ಶಾರದಾ ಅವರ ತಲೆ, ಕುತ್ತಿಗೆಗೆ ತೀವ್ರವಾದ ಗಾಯವಾಗಿದ್ದು, ಮೂಗಿನಲ್ಲಿ ರಕ್ತ ಸ್ರಾವವಾಗಿದೆ. ಸುಶೀಲಾ, ಶಾರದಾ ಅವರ ಕೈ…
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಆ ದೈವ ಸನ್ನಿಧಿ ಕೊರಗ ಸಮುದಾಯಕ್ಕೇ ಮೀಸಲು. ಅಲ್ಲಿ ಪೂಜಾರಿಯೂ ಅವರೇ, ನಂಬಿ ನಡೆಯುವವರೂ ಅವರೇ. ನೂರಾರು ವರ್ಷಗಳ ಹಿಂದೆ ಇದ್ದ ದೇವಸ್ಥಾನ ಪ್ರವೇಶ ನಿಷೇಧವನ್ನು ಧಿಕ್ಕರಿಸಿದ್ದ ಕೊರಗ ಸಮುದಾಯದ ಸ್ವಾಭಿಮಾನದ ಪ್ರತೀಕವಾಗಿ ಮೂರೂರಿನಲ್ಲಿ ಪ್ರತಿಷ್ಠಾಪಿಸಲ್ಪಟ್ಟ ದೈವ ಸನ್ನಿಧಿಯೇ ಶ್ರೀ ಕಾಡ್ಯಾನಾಗ ಮತ್ತು ಪರಿವಾರ ದೈವಸ್ಥಾನ. ಐತಿಹ್ಯ: ಸುಮಾರು 700 ವರ್ಷಗಳ ಹಿಂದೆ ಮೂರೂರು ಗುಂಡ್ವಾಣದಲ್ಲಿ ಕಾಡ್ಯನಾಗ ಹಾಗೂ ಪರಿವಾರ ದೈವಸ್ಥಾನ ಸ್ಥಾಪನೆಗೊಂಡಿದೆ ಎಂದು ಹೇಳಲಾಗುತ್ತದೆ. ಮೂರೂರು ಹಾಂತಾರ ಕುಟುಂಬ ಈ ದೈವಸ್ಥಾನವನ್ನು ನಂಬಿಕೊಂಡು ಬಂದಿದೆ. ಅಂದು ಗುಂಡ್ವಾಣದ ಸುತ್ತಲು ಕಬ್ಬು ಬೆಳೆಯಲಾಗುತ್ತಿದೆ. ಪ್ರತಿ ಬೆಳೆಯ ಸಮಯದಲ್ಲಿಯೂ ಈ ದೈವಸ್ಥಾನ ಸುತ್ತಮುತ್ತ ನೆಲೆಸಿದ್ದ ಇತರೆ ಸಮುದಾಯದವರು ಸುಮಾರು ೨೦ ಕುಟುಂಬಗಳು ದೇವರಿಗೆ ಹಾಲು ಒಪ್ಪಿಸುತ್ತಿದ್ದದಲ್ಲದೇ ಪೂಜಾ ಸಾಮಾಗ್ರಿಗಳನ್ನೂ ಒದಗಿಸುತ್ತಿದ್ದರು. ವರ್ಷಕ್ಕೆ ಒಂದು ಭಾರಿ ನಡೆಯುವ ಹಬ್ಬದಲ್ಲಿ ಸ್ಥಳೀಯರು ನೀಡಿದ ಪೂಜಾ ಸಾಮಾಗ್ರಿಗಳಿಂದ ಪೂಜೆ ನೆರವೇರಿಸುತ್ತಿದ್ದರು. ಹಬ್ಬದ ಸಂದರ್ಭ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸಿಟಿ ಪಾಯಿಂಟ್ ಕಟ್ಟಡದಲ್ಲಿ ಪವರ್ ಮಲ್ಟಿ ಜಿಮ್‌ನ ನೂತನ ಶಾಖೆ ನ್ಯೂ ಪವರ್ ಮಲ್ಟಿ ಜಿಮ್ ಇತ್ತಿಚಿಗೆ ಶುಭಾರಂಭಗೊಂಡಿತು. ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಪ್ರೇಮಾನಂದ ಶೆಟ್ಟಿ ನೂತನ ಶಾಖೆಯನ್ನು ಉದ್ಘಾಟಿಸಿದರು. ಸಿಟಿ ಪಾಯಿಂಟ್‌ನ ಪ್ರಮುಖರಾದ ಕೆ. ವೆಂಕಟೇಶ ಕಿಣಿ ದೀಪ ಬೆಳಗಿಸಿ ಶುಭಕೋರಿದರು. ಈ ಸಂದರ್ಭ ರುಪೀ ಮಾಲ್ ಎಂ.ಡಿ ಸಾಜು ಕೆ. ಎ., ಕಾರ್ಪೋರೇಷನ್ ಬ್ಯಾಂಕ್ ಕೊಲ್ಲೂರು ಶಾಖಾ ಪ್ರಬಂಧಕ ರಾಮಕೃಷ್ಣ ದೇವಾಡಿಗ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಪವರ್ ಮಲ್ಟಿ ಜಿಮ್‌ನ ಮುಖ್ಯಸ್ಥ ವಿಘ್ನೇಶ್ ಪೂಜಾರಿ ಸ್ವಾಗತಿಸಿ, ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕೋಟೇಶ್ವರ (ಹಾಲಾಡಿ- ಕೋಟೇಶ್ವರ ರಸ್ತೆ) – ಸೋಮೇಶ್ವರ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ನಡೆಸಬೇಕಾಗಿರುವುದರಿಂದ ಮೇ 16 ರಿಂದ ಜುಲೈ 16 ರ ವರೆಗೆ ಸೋಮೇಶ್ವರ- ಕೋಟೇಶ್ವರ (ಹಾಲಾಡಿ- ಕೋಟೇಶ್ವರ ರಸ್ತೆ) ರಸ್ತೆಯಲ್ಲಿ ಸಂಚರಿಸುವ ಭಾರೀ ವಾಹನ ಹಾಗೂ ಬಸ್ಸುಗಳ ಸಂಚಾರದ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿರುತ್ತಾರೆ. ಈ ಆದೇಶದನ್ವಯ ಕುಂದಾಪುರ ಹಾಗೂ ಉಡುಪಿ ಕಡೆಯಿಂದ ಹಾಲಾಡಿ ಕಡೆಗೆ ಹೋಗುವ ಬಸ್‌ಗಳು ಹಾಗೂ ಇತರೆ ವಾಹನಗಳಿಗೆ ಹಳೆ ಗೋಪಾಡಿ ಪಂಚಾಯತ್ (ಹೂವಿನಕೆರೆ ಸ್ವಾಗತ ಗೋಪುರ) ಮುಖೇನ ರಾ. ಹೆ 66 ಯಿಂದ ಪೂರ್ವ ದಿಕ್ಕಿಗೆ ಚಲಿಸಿ ಬೀಜಾಡಿ- ವಕ್ವಾಡಿ-ಕಾಳಾವರ ರಸ್ತೆಯಲ್ಲಿ ಚಲಿಸಿ, ವಕ್ವಾಡಿಯ ಗುರುಕುಲ ಶಾಲೆಗೆ ಹೋಗುವ ಕಾಂಕ್ರೀಟ್ ರಸ್ತೆಗೆ (ರಸ್ತೆ ಎಡಕ್ಕೆ) ಚಲಿಸಿದಲ್ಲಿ ಗುರುಕುಲ ಶಾಲೆಯ ಬಳಿ 2 ರಸ್ತೆಗಳು ಕವಲೊಡೆದು ಹೋಗುತ್ತಿದ್ದು, ಈ ಎರಡು ರಸ್ತೆಗಳ ಪೈಕಿ ರಸ್ತೆಯ ಎಡಕ್ಕೆ (ಪಶ್ಚಿಮ) ಚಲಿಸಿದರೆ…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಇಲ್ಲಿನ ರೋಟರಿ ಲಕ್ಷ್ಮಿನರಸಿಂಹ ಕಲಾ ಮಂದಿರದಲ್ಲಿ ಮೇ. ೧೮ರ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ವಿಲೇಜ್ ಲೈಫ್ ಚಿತ್ರಕಲಾ ಪ್ರದರ್ಶನ ಉದ್ಘಾಟನೆಗೊಳ್ಳಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಚಿತ್ರಕಲಾ ಪ್ರದರ್ಶನವನ್ನು ಕೋಟ ಗೀತಾನಂದ ಫೌಂಡೇಶನ್ನಿನ ಪ್ರವರ್ತಕ ಆನಂದ ಸಿ. ಕುಂದರ್ ಉದ್ಘಾಟಿಸಲಿದ್ದಾರೆ. ಕುಂದಾಪುರ ರೋಟರಿ ಕ್ಲಬ್‌ನ ಅಧ್ಯಕ್ಷ ಗೋಪಾಲ್ ಶೆಟ್ಟಿ ಶೇಡಿಮನೆ ಅಧ್ಯಕ್ಷತೆ ವಹಿಸಲಿದ್ದು, ರೋಟರಿ ಜಿಲ್ಲಾ ಗವರ್ನರ್ ರೋ. ಅಭಿನಂದನ್ ಶೆಟ್ಟಿ, ಚಿನ್ಮಯಿ ಆಸ್ಪತ್ರೆಯ ವೈದಕೀಯ ನಿರ್ದೇಶಕ ಡಾ. ಉಮೇಶ್ ಪುತ್ರನ್, ಕುಂದಾಪುರ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರಾದ ಕೆ. ರತ್ನಾಕರ್ ನಾಯ್ಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕುಂದಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತ್ರಿವರ್ಣ ಕಲಾ ಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗಾ ಮಾಹಿತಿ ನೀಡಿ ಕಲೆಯನ್ನು ಪ್ರದರ್ಶಿಸುವ ವಿಧಾನ ಮತ್ತು ಹೃದಯಿಯನ್ನು ಅರಿತುಕೊಳ್ಳುವ ರೀತಿ ಸಮನಾಗಿದ್ದರೆ ಇನ್ನಷ್ಟು ಬಲಿಷ್ಟವಾಗುತ್ತದೆ ಎನ್ನುವ ಉದ್ದೇಶದಿಂದ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗುತ್ತಿದೆ. ರೋಟರಿ ಕುಂದಾಪುರ ಸಾರಥ್ಯದೊಂದಿಗೆ ಕುಂದಾಪುರ ಮತ್ತು…
