ಕೊರಗ ಸಮುದಾಯದ ಆರಾಧ್ಯ ದೈವ ಕಾಡ್ಯಾನಾಗ

Call us

Call us

Call us

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಆ ದೈವ ಸನ್ನಿಧಿ ಕೊರಗ ಸಮುದಾಯಕ್ಕೇ ಮೀಸಲು. ಅಲ್ಲಿ ಪೂಜಾರಿಯೂ ಅವರೇ, ನಂಬಿ ನಡೆಯುವವರೂ ಅವರೇ. ನೂರಾರು ವರ್ಷಗಳ ಹಿಂದೆ ಇದ್ದ ದೇವಸ್ಥಾನ ಪ್ರವೇಶ ನಿಷೇಧವನ್ನು ಧಿಕ್ಕರಿಸಿದ್ದ ಕೊರಗ ಸಮುದಾಯದ ಸ್ವಾಭಿಮಾನದ ಪ್ರತೀಕವಾಗಿ ಮೂರೂರಿನಲ್ಲಿ ಪ್ರತಿಷ್ಠಾಪಿಸಲ್ಪಟ್ಟ ದೈವ ಸನ್ನಿಧಿಯೇ ಶ್ರೀ ಕಾಡ್ಯಾನಾಗ ಮತ್ತು ಪರಿವಾರ ದೈವಸ್ಥಾನ.

Call us

Click Here

ಐತಿಹ್ಯ:
ಸುಮಾರು 700 ವರ್ಷಗಳ ಹಿಂದೆ ಮೂರೂರು ಗುಂಡ್ವಾಣದಲ್ಲಿ ಕಾಡ್ಯನಾಗ ಹಾಗೂ ಪರಿವಾರ ದೈವಸ್ಥಾನ ಸ್ಥಾಪನೆಗೊಂಡಿದೆ ಎಂದು ಹೇಳಲಾಗುತ್ತದೆ. ಮೂರೂರು ಹಾಂತಾರ ಕುಟುಂಬ ಈ ದೈವಸ್ಥಾನವನ್ನು ನಂಬಿಕೊಂಡು ಬಂದಿದೆ. ಅಂದು ಗುಂಡ್ವಾಣದ ಸುತ್ತಲು ಕಬ್ಬು ಬೆಳೆಯಲಾಗುತ್ತಿದೆ. ಪ್ರತಿ ಬೆಳೆಯ ಸಮಯದಲ್ಲಿಯೂ ಈ ದೈವಸ್ಥಾನ ಸುತ್ತಮುತ್ತ ನೆಲೆಸಿದ್ದ ಇತರೆ ಸಮುದಾಯದವರು ಸುಮಾರು ೨೦ ಕುಟುಂಬಗಳು ದೇವರಿಗೆ ಹಾಲು ಒಪ್ಪಿಸುತ್ತಿದ್ದದಲ್ಲದೇ ಪೂಜಾ ಸಾಮಾಗ್ರಿಗಳನ್ನೂ ಒದಗಿಸುತ್ತಿದ್ದರು. ವರ್ಷಕ್ಕೆ ಒಂದು ಭಾರಿ ನಡೆಯುವ ಹಬ್ಬದಲ್ಲಿ ಸ್ಥಳೀಯರು ನೀಡಿದ ಪೂಜಾ ಸಾಮಾಗ್ರಿಗಳಿಂದ ಪೂಜೆ ನೆರವೇರಿಸುತ್ತಿದ್ದರು. ಹಬ್ಬದ ಸಂದರ್ಭ ದೇವರಿಗೆ ಹರಕೆಯಾಗಿ ಕೋಳಿ ಕೊಯ್ದು ಬಳಿಕ ಅಲ್ಲಿಯೇ ಊಟ ಮಾಡಿ ಹಿಂದಿರುಗುತ್ತಿದ್ದರು.

ಈ ನಡುವೆ ಅಂದು ಕೃಷಿ ಹಾಗೂ ಕಂಬಳಕ್ಕಾಗಿ ಕೋಣಗಳನ್ನು ಸಾಕುತ್ತಿದ್ದ ಒಡೆಯರು ಗುಂಡ್ವಾಣದಿಂದ ಸ್ವಲ್ಪವೇ ದೂರದಲ್ಲಿರುವ ಮೂರೂರಿಗೆ ಬಂದಿದ್ದರಿಂದ ಕೋಣಗಳ ಚಾಖರಿಗಾಗಿ ಕೊರಗರನ್ನೂ ಮೂರೂರಿಗೆ ಕರೆದುಕೊಂಡು ಬಂದರು. ಹಾಗಾಗಿ ಗುಂಡ್ವಾಣದಲ್ಲಿ ಕಾಡ್ಯಾನಾಗ ಮೂಲಸ್ಥಾನವಿದ್ದರೇ, ಮೂರೂರಿನ ಕಾಡಿನ ಮಧ್ಯ ಹಾಗೂ ಹಿರಿಯ ಕುಟುಂಬದ ಜಾಗದಲ್ಲಿಯೂ ಕಾಡ್ಯಾನಾಗ ಹಾಗೂ ಪರಿವಾರ ದೈವಗಳನ್ನು ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರ ಮಾಡುತ್ತಾ ಬಂದಿದ್ದರು.

Click here

Click here

Click here

Click Here

Call us

Call us

ಕ್ರಮೇಣ ಮೂರೂರು ಹಾಂತಾರ ಕುಟುಂಬಿಕರಲ್ಲಿನ ವೈಮನಸ್ಸು ಹಾಗೂ ಉದ್ಯೋಗದ ನಿಮಿತ್ತ ಕೊರಗರು ಮೂರೂರಿನಿಂದ ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ವಿವಿಧ ಭಾಗಗಳಿಗೆ ಒಲಸೆ ಹೋದರು. ಈಗಲೂ ಈ ಹಾಂತಾರ ಕುಟುಂಬದವರು ಭಟ್ಕಳ, ಶಿರಸಿ, ಕುಮಟಾ, ನಗರ, ಸಿದ್ಧಾಪುರ, ಹೊಸನಗರ ಹಾಗೂ ಇತರೆ ಊರುಗಳಲ್ಲಿ ನೆಲೆಸಿದ್ದು ತಮ್ಮ ಮೂಲ ದೈವಸ್ಥಾನಕ್ಕೆ ಬರುವುದನ್ನು ನಿಲ್ಲಿಸಿದ್ದರು. ಮೂರೂರಿನಲ್ಲಿಯೇ ನೆಲೆಸಿದ್ದ ಕುಟುಂಬಗಳು ವರ್ಷಪ್ರತಿ ಪೂಜಿಸಿಕೊಂಡು ಬಂದಿದ್ದಾರೆ.

ಕೊರಗರೇ ಪೂಜಾರಿಗಳು:
ಕಾಡ್ಯನಾಗ ಹಾಗೂ ಪರಿವಾರ ದೈವಸ್ಥಾನದ ಮೂಲ ಗುಂಡ್ವಾದ ನಂದಿಕೇಶ್ವರ ದೇವಸ್ಥಾನದ ಹತ್ತಿರ ಮರದ ಬಡದಲ್ಲಿದೆ. ಇನ್ನು ಉಳಿದಂತೆ ಮೂರೂರು ಕಾಡಿನ ನಡುವಲ್ಲಿಯೂ ದೇವರು, ದೈವದ ಕಲ್ಲುಗಳಿವೆ. ಎಲ್ಲದರಕ್ಕೂ ಕೊರಗ ಸಮುದಾಯದ ಹಿರಿಕರೇ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಬರುತ್ತಿರುವುದು ವಿಶೇಷ.

ಮೇ 20ರಿಂದ 22 ಪುನರ್ ಪ್ರತಿಷ್ಠೆ:
ಕೊರಗ ಸಮುದಾಯದ ಹಿರಿಕರು ಮರದ ಬುಡದಲ್ಲಿ ದೇವರ ಕಲ್ಲುಗಳನ್ನು ಪ್ರತಿಷ್ಠಾಪಿಸಿ ಪೂಜಿಸಲ್ಪಡುತ್ತಿದ್ದರು. ಕ್ರಮೇಣ ಮೂರೂರಿನ ಎರಡು ಕಡೆಗಳಲ್ಲಿ ಮರಗಳು ಬಿದ್ದುಹೋಗಿದ್ದವು. ಮೂರೂರಿನಲ್ಲಿ ನೆಲೆಸಿದ್ದ ಹಾಗೂ ವಲಸೆ ಹೋಗಿದ್ದ ಕುಟುಂಬಗಳು ಒಂದಿಲ್ಲೊಂದು ಕಾರಣಕ್ಕೆ ತೊಂದರೆ ಅನುಭವಿಸುತ್ತಿದ್ದರು ಎಂಬುದನ್ನು ಅರಿತು ಗುಂಡ್ವಾಣ ಕಾಡ್ಯಾನಾಗದ ಮೂಲ ಸ್ಥಾನದ ಸಮೀಪವಿರುವ ಶ್ರೀ ನಂದಿಕೇಶ್ವರ ದೇವರಲ್ಲಿ ಪ್ರಶ್ನೆಯನ್ನಿತ್ತು ಪರಿಹಾರ ಮಾರ್ಗದ ಸಲಹೆಯನ್ನು ಪಡೆದಿದ್ದಾರೆ.

ಅದರಂತೆ ಮೇ.20 ಸೋಮವಾರದಿಂದ ಮೊದಲ್ಗೊಂಡು ಮೇ. 22ರ ಬುಧವಾರದ ತನಕ ಪುನರ್ ಪ್ರತಿಷ್ಠಾ ಮಹೋತ್ಸವ ಜರುಗುತ್ತಿದೆ.

ಕೊರಗ ಸಮುದಾಯದವರು ದೈವವಾದ ಕಾಡ್ಯಾನಗ ಹಾಗೂ ಪರಿವಾರ ದೈವಸ್ಥಾನವನ್ನು ನಂಬಿದ ಕುಟುಂಬಗಳು ಸುತ್ತಲಿನ ಮೂರು ಜಿಲ್ಲೆಯಲ್ಲಿದ್ದು, ಪುನರ್ ಪ್ರತಿಷ್ಠೆಯ ಸಂದರ್ಭ ಎಲ್ಲರೂ ಆಗಮಿಸಲಿದ್ದಾರೆ. ಕೊರಗ ಸಮುದಾಯದವರೇ ನೂರಾರು ವರ್ಷಗಳಿಂದ ಪೂಜಿಸಿಕೊಂಡು ಬರುತ್ತಿದ್ದು, ವರ್ಷಂಪ್ರತಿ ಉತ್ಸವ ನಡೆಯುತ್ತದೆ. – ಸುರೇಶ್ ಎಳಜಿತ

 

Leave a Reply