ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೆಸಿಐ ಶಿರೂರು ಇದರ ಸಾತ್ ಸುರ್ ಪರಿಸರ ಸ್ನೇಹಿ ಜೆಸಿಐ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮದ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಸರಕೊಡಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಾರಂಗ ಯೂಸೂಫ್ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜೆಸಿಐ ಶಿರೂರು ಇದರ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆಯವರು ಮಾತನಾಡಿ, ಸಾರಂಗ ಯೂಸೂಫ್ ರವರು ಆದರ್ಶ ಶಿಕ್ಷಕರಾಗಿ ಜನಾನುರಾಗಿಯಾಗಿ ಬಹುಮುಖ ಪ್ರತಿಭಾ ಸಂಪನ್ನರಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದವರು, ಇಂತಹ ಸರಳ ವ್ಯಕ್ತಿತ್ವದ ಆದರ್ಶ ಶಿಕ್ಷಕರನ್ನು ಗುರುತಿಸುವುದರಿಂದ ಅವರ ಮಾರ್ಗದರ್ಶನ ಎಲ್ಲರಿಗೂ ದೊರೆಯುವಂತೆ ಆಗುತ್ತದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಭಾರತೀಯ ಭೂ ಸೈನ್ಯದ ಸೈನಿಕ ಉಮೇಶ ಶೆಟ್ಟಿ ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದರು. ಮೋಹನ ರೇವಣ್ಕರ್, ಪ್ರಸಾದ ಪ್ರಭು , ಹರೀಶ ಶೇಟ್, ಗಿರೀಶ ಮೇಸ್ತ, ಪ್ರಕಾಶ ಮಾಕೋಡಿ, ನಾಗೇಶ ಕೆ, ನಾಗೇಂದ್ರ ಪ್ರಭು, ವಿನೋದ ಮೇಸ್ತ, ರಮೇಶ ನಾಯ್ಕ, ಹಾಲೇಶ ಇತರರು ಉಪಸ್ಥಿತರಿದ್ದರು.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೆಸಿಐ ಶಿರೂರು ವತಿಯಿಂದ ವಿಶ್ವದೀಪ ಕಲಾ ಸಂಸ್ಥೆಯ ಸಭಾಭವನದಲ್ಲಿ ಜೆಸಿಐ ಶಿರೂರು ಸಪ್ತ ಸ್ವರಗಳು ಪರಿಸರ ಸ್ನೇಹಿ ಜೆಸಿಐ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೊದಲ ಕಾರ್ಯಕ್ರಮವಾಗಿ ಯೋಗ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡು, ದೀಪ ಬೆಳಗುವುದರ ಮೂಲಕ ವಿಶ್ವದೀಪ ಕಲಾ ಸಂಸ್ಥೆಯ ಮುಖ್ಯಸ್ಥರಾದ ಹನುಮಂತ ನಾಯ್ಕ ಚಾಲನೆ ನೀಡಿದರು. ಶಿರೂರು ಜೆಸಿಐ ಅಧ್ಯಕ್ಷರಾದ ಪಾಂಡುರಂಗ ಅಳ್ವೆಗದ್ದೆ ಅಧ್ಯಕ್ಷತೆ ವಹಿಸಿ ಯೋಗ ಶಿಬಿರದ ಮಹತ್ವ, ದಿನನಿತ್ಯದ ಜೀವನದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ ಇದರ ಮಹತ್ವದ ಕುರಿತು ಸವಿವರವಾದ ಮಾಹಿತಿ ನೀಡಿ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಂಡು ಉತ್ತಮ ಆರೋಗ್ಯವಂತರಾಗಿ ಎಂದು ಕರೆ ನೀಡಿದರು. ಸುರೇಶ ಮಾಕೋಡಿ ವಿನೋದ ಮೇಸ್ತ, ನಾಗೇಂದ್ರ ಪ್ರಭು ವೇದಿಕೆಯಲ್ಲಿ ಮುಖ್ಯ ಅಥಿತಿಯಾಗಿ ಉಪಸ್ಥಿತರಿದ್ದರು. ಕೃಷ್ಣ ಪೂಜಾರಿ ಸ್ವಾಗತಿಸಿದರು. ಹರೀಶ ಗವಾಳಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದಲ್ಲಿ ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್‌ಗೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕುಂದಾಪುರ ಪೇಟೆ, ಬೈಂದೂರು ಪೇಟೆ ಸೇರಿದಂತೆ ಪ್ರಮುಖ ಜನನಿಬಿಡ ಸ್ಥಳಗಳಲ್ಲಿ ಬಂದ್ ಯಶಸ್ವಿಯಾಗಿದ್ದರೇ ಗ್ರಾಮೀಣ ಭಾಗಗಳಲ್ಲಿ ಜನಜೀವನ ಎಂದಿನಂತೆಯೇ ಸಾಗಿತ್ತು. ಖಾಸಗಿ ಹಾಗೂ ಸರಕಾರಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಸಂಘಟನೆಗಳಿಗೆ ಸೇರಿದ್ದ ರಿಕ್ಷಾ ಹಾಗೂ ಇತರ ಬಾಡಿಗೆ ವಾಹನಗಳು ಬಂದ್ ಬೆಂಬಲಿಸಿ ರಸ್ತೆಗೆ ಇಳಿದಿರಲಿಲ್ಲ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿ, ಟ್ರಕ್ ಹಾಗೂ ಪ್ರವಾಸಿ ವಾಹನಗಳ ಓಡಾಟ ಎಂದಿನಂತೆ ಇರುವುದು ಕಂಡುಬಂತು. ಕುಂದಾಪುರದಲ್ಲಿ ಭಾಗಶಃ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದು ಕಂಡುಬಂತು. ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ವಿದ್ಯಾರ್ಥಿಗಳ ಓಡಾಟವಿರಲಿಲ್ಲ. ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ತೆರೆದಿದ್ದರು ಜನಸಂಚಾರ ವಿರಳವಾಗಿತ್ತು. ಕುಂದಾಪುರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮೆರವಣಿಗೆ ನಡೆಸಿ ಅಂಗಡಿ, ಮುಗ್ಗಟ್ಟು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪೆಟ್ರೋಲ್. ಡೀಸಿಲ್, ಅನಿಲ ಸೇರಿದಂತೆ ಜೀವನಾವಶ್ಯಕ ಸಾಮಗ್ರಿಗಳ ಬೆಲೆ ಏರಿಕೆ ವಿರೋಧಿಸಿ ನೀಡಲಾದ ಭಾರತ್ ಬಂದ್ ಕರೆ ಅಂಗವಾಗಿ ಬೈಂದೂರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಸೋಮವಾರ ಕೆಲಕಾಲ ಹೆದ್ದಾರಿ ತಡೆ ನಡೆಸಿದರು. ಹೆದ್ದಾರಿ ಮೇಲೆ ಕುಳಿತು ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ಮೋದಿ ವಿರುದ್ಧ ಘೋಷಣೆ ಕೂಗಿದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್‌ಕುಮಾರ್, ಧುರೀಣರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ರಿಯಾಜ್ ಅಹಮದ್, ಎಸ್. ರಾಜು ಪೂಜಾರಿ, ಜೆಡಿಎಸ್ ನಾಯಕ ರವಿ ಶೆಟ್ಟಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರಿರುವುದರಿಂದ, ಅದರ ಫಲವಾಗಿ ಅನ್ಯ ಜೀವನಾವಶ್ಯಕ ವಸ್ತುಗಳ ಬೆಲೆಯೂ ಹೆಚ್ಚುತ್ತಿರುವುದರಿಂದ ಜನ ಸಾಮಾನ್ಯದ ಬದುಕು ದುಸ್ತರವಾಗಿದೆ. ದೇಶದ ಅಭಿವೃದ್ಧಿಯೊಂದಿಗೆ ಬೆಲೆ ಹತೋಟಿಯ ಭರವಸೆ ನೀಡಿ ಅಧಿಕಾರಕ್ಕೇರಿದ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಯಾವುದನ್ನೂ ಈಡೇರಿಸಿಲ್ಲ. ರೂಪಾಯಿ ಬೆಲೆ…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಪುರಸಭೆಯಲ್ಲಿ ೨೩ ವಾರ್ಡುಗಳ ಪೈಕಿ ೧೪ ವಾರ್ಡುಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ಬೀಗಿದ್ದ ಬಿಜೆಪಿ ಪಕ್ಷಕ್ಕೆ ಬಹುಮತ ಬಂದಿದ್ದರೂ ಪುರಸಭೆಯ ಅಧಿಕಾರ ಹಿಡಿಯಲು ವಿಫಲವಾಗಿದೆ. ಬದಲಾದ ಮೀಸಲಾತಿಯಿಂದಾಗಿ ೮ ವಾರ್ಡುಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಪಕ್ಷಕ್ಕೆ ನಿರಾಯಸವಾಗಿ ಅಧ್ಯಕ್ಷ ಸ್ಥಾನ ದೊರೆಯಲಿದೆ. ಚುನಾವಣೆ ಫಲಿತಾಂಶ ಪ್ರಕಟವಾದ ದಿನವೇ ಪ್ರಕಟಗೊಂಡಿದ್ದ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿದ್ದರಿಂದಾಗಿ ಸಹಜವಾಗಿ ಬಹುಮತ ಪಡೆದಿದ್ದ ಬಿಜೆಪಿ ಪಾಳಯದಲ್ಲಿ ಅಧ್ಯಕ್ಷಗಾದಿ ಯಾರು ಏರಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಆರು ಮಂದಿ ಅರ್ಹರಿದ್ದರಿಂದ ಯಾರಿಗೆ ಪಟ್ಟ ಒಲಿಯಲಿದೆ ಎಂಬ ಚರ್ಚೆ ಜೋರಾಗಿಯೇ ನಡೆದಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮೀಸಲಾತಿ ಬಂದಿದ್ದರಿಂದಾಗಿ ಯಾವುದೇ ಅವಿರೋಧವಾಗಿ ಇದ್ದ ಒಬ್ಬರೇ ಸದಸ್ಯರು ಆಯ್ಕೆಯಾಗುತ್ತಿದ್ದರು. ಆದರೆ ಬದಲಾದ ಮೀಸಲಾತಿಯಲ್ಲಿ ಹಿಂದೂಳಿದ ವರ್ಗ ಬಿ ಮಹಿಳೆಗೆ ಅಧ್ಯಕ್ಷ ಸ್ಥಾನ ದೊರೆತಿರುವುದರಿಂದ ಬಿಜೆಪಿ ಪಕ್ಷಕ್ಕೆ ಬಹುಮತವಿದ್ದರೂ ಅಧಿಕಾರ ಹಿಡಿಯಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಕಾಂಗ್ರೆಸ್‌ನಲ್ಲಿ ಓರ್ವ ಮಹಿಳೆ ಮಾತ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ವಚನಗಳು ಸಾರುವ ಉನ್ನತ ಜೀವನಧರ್ಮ ಸರಳ ವ್ಯಾವಹಾರಿಕ ನೀತಿಯ ಕಾರಣದಿಂದ ವಿಶ್ವ ಸಾಹಿತ್ಯದಲ್ಲಿ ಸ್ಥಾನ ಪಡೆದಿವೆ. ಭಾರತದ ಎಲ್ಲ ಭಾಷೆಗಳಿಗೆ, ಹಲವು ವಿದೇಶಿ ಭಾಷೆಗಳಿಗೆ ಅನುವಾದಗೊಂಡು ಎಲ್ಲೆಡೆಯ ಪ್ರಜ್ಞಾವಂತರ ಗಮನ ಸೆಳೆದಿವೆ ಎಂದು ಬೈಂದೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯು. ಚಂದ್ರಶೇಖರ ಹೊಳ್ಳ ಹೇಳಿದರು. ಶರಣ ಸಾಹಿತ್ಯ ಪರಿಷತ್ತು ಮತ್ತು ನಾಗೂರಿನ ಸಂದೀಪನ್ ಶಾಲೆಯ ಕನ್ನಡ ಸಾಹಿತ್ಯ ಸಂಘದ ಜಂಟಿ ಆಶ್ರಯದಲ್ಲಿ ಗುರುವಾರ ನಡೆದ ವಚನ ದಿನಾಚರಣೆಯಲ್ಲಿ ಅವರು ’ವಚನ ಸಾಹಿತ್ಯದಲ್ಲಿ ವಿಶ್ವ ಮೌಲ್ಯಗಳು’ ಕುರಿತು ಉಪನ್ಯಾಸ ನೀಡಿದರು. ಬಸವಣ್ಣನವರು ಯಜ್ಞಯಾಗಗಳನ್ನು, ಜಾತಿ ವ್ಯವಸ್ಥೆ ಮತ್ತು ಅಂಧಾನುಕರಣೆಯನ್ನು ವಿರೋಧಿಸಿದರು. ಸ್ತ್ರೀಪುರುಷ ಸಮಾನತೆಯನ್ನು ಪ್ರತಿಪಾದಿಸಿದರು. ಕಾಯಕದ ಬದುಕಿಗೆ ಆದ್ಯತೆ ನೀಡಿದರು. ಎಲ್ಲರೂ ಅನುಸರಿಸಬಹುದಾದ ಬದುಕಿನ ಸರಳ ಮಾರ್ಗವನ್ನು ಜನರಿಗೆ ಬೋಧಿಸಿದರು. ಪ್ರಖರ ವೈಚಾರಿಕತೆಯನ್ನು ಮೆರೆದರು. ಇವೆಲ್ಲವೂ ಅವರ, ಅಕ್ಕ ಮಹಾದೇವಿಯ, ಅಲ್ಲಮರ ಮತ್ತು ನೂರಾರು ವಚನಕಾರರ ವಚನಗಳಲ್ಲಿ ಪ್ರಕಟಗೊಂಡಿವೆ. ಎಲ್ಲರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬ್ಯಾರೀಸ್ ಪದವಿ ಕಾಲೇಜು ಕೋಡಿ, ಕುಂದಾಪುರ ಇದರ ವಾಣಿಜ್ಯ ವಿಭಾಗದ ವತಿಯಿಂದ ಪ್ಲಾಸ್ಟಿಕ್ ಮುಕ್ತ ಪರಿಸರ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಜರುಗಿತು. ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಠ ಶೆಟ್ಟಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬೀಡಲಾರದ ನಂಟಾಗಿದೆ, ಎಲ್ಲವೂ ಪ್ಲಾಸ್ಟಿಕ್ ಮಯಾವಾಗಿರುವ ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಬಳಸುವದರ ಮೂಲಕ ಪರಸರವನ್ನು ಉಳಿಸುವ ಕೆಲಸವನ್ನು ಇಂದಿನ ಯುವ ಪೀಳಿಗೆ ಮುಂದಾಗಬೇಕು. ಪರಿಸರ ಉಳಿವಿಗೆ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಹೆಚ್ಚೆಚ್ಚು ಹಮ್ಮಿಕೊಳ್ಳಬೇಕೆಂದು ಹೇಳಿದರು. ಅತಿಥಿ ಅಬ್ದುಲ್ ಕೋಟೆ, ಎಸ್.ಡಿ.ಎಂ.ಸಿ ಸದಸ್ಯ ಹಾಜಿ ಕೆ ಮೊಹಿದ್ದೀನ್ ಬ್ಯಾರಿ ಶಾಲೆ ಕೋಡಿ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಬ್ಯಾರೀಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ ವಹಿಸಿ ಪ್ಲಾಸ್ಟಿಕ್ ಬ್ಯಾಗ್‌ನ ಬದಲಿಗೆ ಬಟ್ಟೆ ಬ್ಯಾಗನ್ನು ಉಪಯೋಗಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರೋ. ಮಾಲತಿ ವಾಣಿಜ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಅವರ ಆಪ್ತ ಕಾರ್ಯದರ್ಶಿಯಾಗಿ ಕೆಎಎಸ್ ಅಧಿಕಾರಿ ಡಾ. ಬಿ. ಉದಯ ಕುಮಾರ್ ಶೆಟ್ಟಿ ನೇಮಕಗೊಂಡಿದ್ದಾರೆ. ಕುಂದಾಪುರ ತಾಲೂಕು ಶಂಕರನಾರಾಯಣ ಬಯಲೂರು ಹೆಬ್ಬಾಗಿಲು ಮನೆಯವರಾದ ಉದಯಕುಮಾರ್ ಶೆಟ್ಟಿ ಅವರು ಈ ಹಿಂದೆ ಉಡುಪಿ ತಹಸೀಲ್ದಾರರಾಗಿ, ಸೊರಬದ ಸಹಾಯಕ ಕಮೀಷನರ್‌ರಾಗಿ, ಕಾರವಾರ ನಗರಸಭೆ ಆಯುಕ್ತರಾಗಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯದರ್ಶಿಯಾಗಿ, ಅರಣ್ಯ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಬನ್ನಾಡಿಯ ಉಪ್ಲಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶ್ರೀ ಗೋಪಾಲಕೃಷ್ಣನಿಗೆ ವಿಶೇಷ ಪೂಜೆ ನೆರವೇರಿಸುವುದರೊಂದಿಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾ ಕೂಟಗಳನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆಯೋಜಿಸಿತ್ತು. ಉಡುಪಿಯ ನಾಗರಾಜ ಶೇಟ್ ಮತ್ತು ಬಳಗದವರಿಂದ ಭಕ್ತಿ ಲಹರಿ ಹಾಗೂ ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ವರ್ಷಂಪ್ರತಿಯಂತೆ ಈ ವರ್ಷವೂ ಕೂಡಾ 6 ವರ್ಷದೊಳಗಿನ ಪುಟಾಣಿ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಧ್ಯಾಪಕಿ ವಿದ್ಯಾ ಹೇರ್ಳೆ ಗಿಳಿಯಾರು, ನಿವೃತ್ತ ಅಧ್ಯಾಪಕರಾದ ಯಾಳಕ್ಲು ನಾರಾಯಣ ಶೆಟ್ಟಿ ಮತ್ತು ನಿವೃತ್ತ ಮುಖ್ಯೋಪಾಧ್ಯಾಯರಾದ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿಯವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು. ವಿಟ್ಲಪಿಂಡಿಯ ದಿನ ಶ್ರೀ ಗೋಪಾಲಕೃಷ್ಣನ ಪುರ ಮೆರವಣಿಗೆಯನ್ನು ವಿಜೃಂಭಣೆಯಿಂದ ಏರ್ಪಡಿಸಲಾಯ್ತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಹಿಂದಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿ.ಭೋಜ ಹೆಗ್ಡೆ, ಕಾರ್ಯದರ್ಶಿ ಯು.ವಸಂತ ಶೆಟ್ಟಿ, ಪ್ರಧಾನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 2018-19 ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲೆಯಲ್ಲಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪುರಸ್ಕೃತರಾದ ಶಿಕ್ಷಕರ ವಿವರಗಳು ಹೀಗಿವೆ. ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು: ಗಿರೀಶ್ ಶ್ಯಾನಭಾಗ್, ಸಹ ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಲಗೋಣ (ಬೈಂದೂರು ವಲಯ), ಸುಮನ ಎನ್., ಸಹ ಶಿಕ್ಷಕಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ (ಕುಂದಾಪುರ ವಲಯ) ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು: ಮೋಹಿನಿ ಬಾಯಿ, ಮುಖ್ಯ ಶಿಕ್ಷಕಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ (ಬೈಂದೂರು ವಲಯ), ಕಿಶನ್ ರಾಜ್ ದೈಹಿಕ ಶಿಕ್ಷಣ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ವೆ (ಕುಂದಾಪುರ ವಲಯ). ಪ್ರೌಢಶಾಲಾ ಶಿಕ್ಷಕರು: ಪ್ರಕಾಶಿನಿ ಸಹ ಶಿಕ್ಷಕಿ ಸರಕಾರಿ ಪ್ರೌಢಶಾಲೆ ಹೆಸ್ಕತ್ತೂರು (ಕುಂದಾಪುರ ವಲಯ), ಭಾಸ್ಕರ್ ಮಯ್ಯ ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಉಪ್ಪಿನಕುದ್ರು (ಬೈಂದೂರು…
