Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: ಭಾರತದಲ್ಲಿ ಆರಾಧಿಸಬಹುದಾದ ಶ್ರೇಷ್ಠ ಗ್ರಂಥ ಸಂವಿಧಾನ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಪ್ರಜಾಪ್ರಭುತ್ವ ಮತ್ತು ಭಾರತೀಯ ಸಂವಿಧಾನದ ಅಡಿಪಾಯ ಎಂದು ಖ್ಯಾತ ವಕೀಲರು ಹಾಗೂ ವಾಗ್ಮಿ ಸುಧೀರ್‌ಕುಮಾರ್ ಮುರೋಳಿ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾದ ಮಾಧ್ಯಮ ಮತ್ತು ಕಾನೂನು ಎಂಬ ವಿಷಯದ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ‍್ಯಕ್ರಮದಲ್ಲಿ ಮಾತನಾಡಿದರು. ಪತ್ರಕರ್ತರು ಯಾವಾಗಲೂ ಮಾಧ್ಯಮ ಕಾನೂನು ಮತ್ತು ಕಾಯ್ದೆಗಳ ಬಗ್ಗೆ ತಿಳಿದುಕೊಂಡಿರಬೇಕು. ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ಸುದ್ದಿಗಳ ನೈಜತೆಯನ್ನು ಅರಿತು ಪ್ರಸಾರ ಮಾಡಬೇಕು. ಕೆಲವೊಮ್ಮೆ ಸುದ್ದಿಗಳನ್ನು ಕೊಡುವುದರಿಂದ ಆಗುವ ಅಪಾರ್ಥಕ್ಕೆ ಇಡೀ ಸಮಾಜ ಬೆಲೆ ತೆರಬೇಕಾಗುತ್ತದೆ. ಏಕಾಧಿಪತ್ಯದಲ್ಲಿ ಜನರಿಗೆ ಪ್ರಶ್ನಿಸುವಂತಹ ಅವಕಾಶಗಳಿರುವುದಿಲ್ಲ. ನಮ್ಮಲ್ಲಿನ ಅಂತರಂಗದ ಸಿದ್ಧಾಂತಗಳು ಬದಲಾಗಬೇಕಿದೆ ಎಂದರು. ಅನುವಾದಕರಾದವರು ಪ್ರತಿಯೊಂದು ವಿಷಯವನ್ನು ಅರಿತು ಅನುವಾದಿಸಬೇಕು. ಎರಡನೇ ಮಹಾಯುದ್ಧದ ಸಂಧರ್ಭದಲ್ಲಿ ಜಪಾನ್‌ನ ವಿರುದ್ದ ದೇಶಗಳು ಜಪಾನ್ ಯುದ್ದ ಮಾಡುತ್ತದೋ ಅಥವಾ ಶರಣಾಗುತ್ತದೋ ಎಂದು ಕೇಳಿದಾಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಂii ಇಲಾಖೆ ಬೆಂಗಳೂರು ಮತ್ತು ಸಿಡಾಕ್ ಧಾರವಾಡ ಇವರ ಜಂಟಿ ಆಶ್ರಯದಲ್ಲಿ ಸ್ವಉದ್ಯೋಗಾಂಕ್ಷಿಗಳಿಗೆ ಉಚಿತ ಉದ್ಯೋಗ ಅಭಿವೃದ್ಧಿ ತರಬೇತಿ ಶಿಬಿರವನ್ನು ಸೆಪ್ಟಂಬರ್ 27 ಮತ್ತು 28 ರಂದು ಉಡುಪಿಯಲ್ಲಿ ಏರ್ಪಡಿಸಲಾಗಿದೆ. ಸರಕಾರದ ವಿವಿಧ ಇಲಾಖೆಗಳಲ್ಲಿ ಸ್ವಯಂ ಉದ್ಯೋಗಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯವಿದ್ದು, ಸ್ವಉದ್ಯೋಗಾಂಕ್ಷಿಗಳಿಗೆ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. ಈ ಶಿಬಿರದಲ್ಲಿ ಸ್ವಂತ ಉದ್ಯೋಗಕ್ಕೆ ಬೇಕಾಗುವ ನಾಯಕತ್ವದ ಗುಣಗಳು, ಸರಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ವಿವಿಧ ಯೋಜನೆಗಳು, ಸಣ್ಣ ಮತ್ತು ಮದ್ಯಮ ಉದ್ದಿಮೆಗಳಿಗೆ ವಿವಿಧ ಕ್ಷೇತ್ರಗಳಲ್ಲಿರುವ ಅವಕಾಶಗಳು, ಜಿ.ಎಸ್.ಟಿ., ಯೋಜನಾ ವರದಿ ತಯಾರಿಕೆ, ಲೆಕ್ಕಪತ್ರ ನಿರ್ವಹಣೆ ಇತ್ಯಾದಿ ವಿಚಾರಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸಮಗ್ರ ಮಾಹಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, ಅಲೆವೂರು ರಸ್ತೆ, ಶಿವಳ್ಳಿ ಕೈಗಾರಿಕಾ ವಸಾಹತು, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 9483120937 / 8217530146 ನ್ನು ಸಂಪರ್ಕಿಸುವಂತೆ ಪ್ರಕಟಣೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕ್ರೀಡೆಗಳಲ್ಲಿ ಸೋಲು ಗೆಲುವು ಸಮಾನ್ಯ. ಆದರೆ ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ನಿರಂತರವಾಗಿ ಮುನ್ನುಗ್ಗುವ ಛಲವನ್ನು ಆಳವಡಿಸಿಕೊಂಡಾಗ ಜೀವನದಲ್ಲಿ ಸತತ ಯಶಸ್ಸು ಪಡೆಯಲು ಸಾಧ್ಯ ಎಂದು ಜಿ.ಎಸ್.ವಿ.ಎಸ್ ಅಸೋಷಿಯೇಷನ್ನಿನ ಕಾರ‍್ಯದರ್ಶಿ ಹೆಚ್ ಗಣೇಶ್ ಕಾಮತ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದ ಸಭಾ ಕಾರ‍್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಎಲ್ಲಾ ಕ್ರೀಡೆಗಳನ್ನು ಸಮಾನ ದೃಷ್ಟಿಯಿಂದ ನೋಡುವ ಪ್ರೋತ್ಸಾಹಿಸುವ ಮನೋಭಾವ ನಮ್ಮದಾಗಬೇಕು ಎಂದು ಹೇಳಿದರು. ಬೈಂದೂರು ತಾಲೂಕಿನ ಕ್ರೀಡಾ ಸಂಯೋಜನಾಧಿಕಾರಿ ಜೀವನ್‌ಕುಮಾರ್ ಶೆಟ್ಟಿ ಶುಭ ಹಾರೈಸಿದರು. ಸರಸ್ವತಿ ವಿದ್ಯಾಲಯ ಸಂಸ್ಥೆಗಳ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್ ಉಪಸ್ಥಿತರಿದ್ದರು. ಸರಸ್ವತಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಥಾಮಸ್ ಪಿ ಎ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಸಿದರು. ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಕಾರ‍್ಯಕ್ರಮ ನಿರ್ವಹಿಸಿದರು. ಇತಿಹಾಸ ಉಪನ್ಯಾಸಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ,ಸೆ.20: ಜಿಲ್ಲೆಯಲ್ಲಿ ಸೆಪ್ಟಂಬರ್ ೨೫ ರಂದು ನಡೆಯುವ ಜಂತುಹುಳು ನಿವಾರಣಾ ದಿನದಂದು 1 ರಿಂದ 19 ವರ್ಷದೊಳಗಿನ 2,67450 ಮಕ್ಕಳಿಗೆ ಉಚಿತವಾಗಿ ಜಂತುಹುಳು ನಿವಾರಣಾ ಅಲ್ಬೇಂಡಾಝೋಲ್ ಮಾತ್ರೆ ವಿತರಿಸುವ ಗುರಿ ಹೊಂದಿದ್ದು, ಸಂಬಂದಪಟ್ಟ ಎಲ್ಲಾ ಇಲಾಖೆಗಳು 100% ಗುರಿ ಸಾಧನೆಗೆ ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ೬೩೯೧೦ ಅಂಗನವಾಡಿ ಮಕ್ಕಳು, ೧ ರಿಂದ ೧೦ ನೇ ತರಗತಿವರೆಗಿನ ೧೫೯೫೨೧ , ಪಿಯುಸಿಯ ೨೯೦೪೦, ಶಾಲೆಯಿಂಧ ಹೊರಗುಳಿದಿರುವ ೧೮೨೯ , ಡಿಪ್ಲಮೋದ ೨೨೧೦, ಐಟಿಐ ಕಾಲೇಜಿನ ೧೮೭೦, ನರ್ಸಿಂಗ್ ಕಾಲೇಜಿನ ೧೧೩೫ ಹಾಗೂ ೭೭೪೫ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡುವ ಗುರಿ ಹೊಂದಲಾಗಿದೆ ಎಂದು ಡಿಸಿ ಹೇಳಿದರು. ಜಂತುಹುಳು ಸಮಸ್ಯೆಯಿಂದ ಮಕ್ಕಳಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ರಕ್ತಹೀನತೆ ಅಪೌಷ್ಠಿಕತೆ, ಓದಿನಲ್ಲಿ ಏಕಾಗ್ರತೆ ಕಡಿಮೆ, ಅನಾರೋಗ್ಯದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸ್ವಾತಂತ್ರ್ಯ ಹೋರಾಟಗಾರರಾಗಿ ಗಾಂಧೀಜಿಯವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನದ ಕೊನೆಯ ಕ್ಷಣದವರೆಗೂ ಸಂತನಂತೆ ಬದುಕಿದ್ದ ಡಾ.ಸಂಜೀವನಾಥ ಈಕಳರ ಬದುಕು ಅನುಕರಣೀಯ ಎಂದು ಶಿಕ್ಷಣ ತಜ್ಞ ಹಿರಿಯ ಸಮಾಜ ಶಾಸ್ತ್ರಜ್ಞ ಪ್ರೊ.ಶ್ರೀಪತಿ ತಂತ್ರಿಯವರು ಹೇಳಿದರು. ಅವರು ಮೂಲ್ಕಿ ರೋಟರಿಭವನದಲ್ಲಿ ಕಾರ್ನಾಡ್ ಸದಾಶಿವರಾವ್ ಸ್ಮಾರಕ ಸೇವಾಶ್ರಮ ಟ್ರಸ್ಟ್ ಆಶ್ರಯದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಾಜಿ ಶಾಸಕ, ಅಕ್ಷರ ಸಂತ ಡಾ.ಸಂಜೀವನಾಥ ಐಕಳ ಕುರಿತಾಗಿ ಡಾ. ರೇಖಾ ವಿ. ಬನ್ನಾಡಿ ರಚಿಸಿರುವ ಖಾದಿಯಲ್ಲಿ ಅರಳಿರುವ ಸಂತ ಸಂಜೀವನಾಥ ಐಕಳ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಡಾ.ಸಂಜೀವನಾಥ ಈಕಳ ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನ್ ವೈದ್ಯವೃತ್ತಿಯನ್ನು ತ್ಯಜಿಸಿ ಜನಸೇವೆ ಮಾಡುತ್ತಾ ರಾಜಕೀಯ ಪ್ರವೇಶಿಸಿ ಶಾಸಕರಾಗಿ ಗ್ರಾಮೀಣ ಕೃಷಿಗಾಗಿ ನೀಡಿದ ಕೊಡುಗೆ ಅವಿಸ್ಮರಣೀಯವಾದುದು. ಗ್ರಾಮೀಣ ಬಡವರ್ಗದ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯೊಂದನ್ನು ಆರಂಭಿಸಿ ಅವರ ಅಭಿವೃದ್ಧಿಗಾಗಿ ತನ್ನ ಸರ್ವಸ್ವವನ್ನು ವ್ಯ ಮಾಡಿರುವ ಮಹಾನ್ ತ್ಯಾಗಿ ಅಪ್ಪಟ ಗಾಂಧಿವಾದಿ ಅವರು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ…

Read More

ಕುಂದಾಪ್ರ ಡಾಟ್ ಕಾಂ’ ಸುದ್ದಿ ಸುಣ್ಣಾರಿಯಲ್ಲಿ ನಡೆದ ಪದವಿ ಪೂರ್ವ ವಿದ್ಯಾರ್ಥಿಗಳ ತಾಲೂಕು ಮಟ್ಟದ ತ್ರೋ ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು.ಕಾರ್ತಿಕ್, ಪ್ರಜ್ವಲ್, ನಿಶಾಂತ್, ಹರೀಶ್, ಅಖಿಲೇಶ್, ಸಚಿನ್, ಹಿತೇಶ್, ನಿಖಿಲ್, ಕಾರ್ತಿಕೇಶ್, ವಿವೇಕ್, ಧನುಷ್, ನಿಶಾಲ್, ಶ್ರೇಯಸ್,ಆದರ್ಶ್, ದೀಕ್ಷಿತ್ ಪ್ರಭಾರ ಪ್ರಾಂಶುಪಾಲ ಥಾಮಸ್ ಪಿ ಎ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ಟ್ರೋಫಿಯೊಂದಿಗೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ‘ಸಮಾಜಸೇವೆ ಜತೆಯಲ್ಲಿ ಕೃಷಿಯನ್ನು ತಮ್ಮ ಜೀವನಾಭ್ಯಾಸವನ್ನಾಗಿಸಿಕೊಂಡಿದ್ದ ದಿ.ಸಬ್ಲಾಡಿ ಶೀನಪ್ಪ ಶೆಟ್ಟಿ ಅವರು ಗ್ರಾಮೀಣ ಭಾಗದಲ್ಲಿ ತೋರಿದ್ದ ಕೃಷಿ ಸಾಧನೆಗಾಗಿ ಆ ದಿನಗಳಲ್ಲಿಯೇ ಮಂಗಳೂರು ಬಂಟರ ಮಾತೃ ಸಂಘದಿಂದ ಚಿನ್ನದ ಪದಕ ಪಡೆದುಕೊಂಡಿದ್ದರು’ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು. ಆರ್‌.ಎನ್‌.ಶೆಟ್ಟಿ ಸಭಾಭವನದಲ್ಲಿ ಶುಕ್ರವಾರ ವಂಡ್ಸೆಯ ಸಬ್ಲಾಡಿ ಕೆ.ಶೀನಪ್ಪ ಶೆಟ್ಟಿ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಸಬ್ಲಾಡಿ ಕೆ.ಶೀನಪ್ಪ ಶೆಟ್ಟಿ ಕೃಷಿ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ ಹಾಗೂ ವೈದ್ಯಕೀಯ ಸಹಾಯಧನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಸಾಮಾಜಿಕ ಸಾಮರಸ್ಯದ ಬಗ್ಗೆ ಅತ್ಯಂತ ಆಸಕ್ತಿ ಇದ್ದ ಅವರ ಮಾತುಗಳಿಗೆ ಗ್ರಾಮೀಣ ಭಾಗದಲ್ಲಿ ತುಂಬ ಗೌರವ ಇತ್ತು. ಉತ್ತಮ ಪಂಚಾಯಿತಿದಾರರಾಗಿದ್ದ ಅವರ ನ್ಯಾಯಪರ ಚಿಂತನೆಗಳಿಂದಾಗಿ ಹಳ್ಳಿ ಭಾಗದ ನ್ಯಾಯಧೀಶರಾಗಿ ಅವರು ಗುರುತಿಸಿಕೊಂಡಿದ್ದರು. ಸಾಮಾಜಿಕ ನ್ಯಾಯದ ಜತೆಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾಳಜಿ ಹೊಂದಿದ್ದರು. ಹಾಗಾಗಿ, ಅವರ ಕುಟುಂಬದವರು ಅವರ ಹೆಸರಿನಲ್ಲಿ ಪ್ರಶಸ್ತಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮೊನಚು ಬರಹಗಳಿಂದ ಸಾರಸ್ವತ ಲೋಕದಲ್ಲಿ ಹೆಸರಾಗಿದ್ದ ಹಿರಿಯ ಸಾಹಿತಿ ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ಜಿ.ಕೆ. ಐತಾಳ್ (68) ಗುರುವಾರ ಕೋಟೇಶ್ವರದ ಸ್ವಗೃಹದಲ್ಲಿ ನಿಧನರಾದರು. 1951ನೇ ಜೂ.25ರಂದು ಜನಿಸಿದ್ದ ಅವರು ಕೋಟೇಶ್ವರ ಹಾಗೂ ಕುಂದಾಪುರದಲ್ಲಿ ಶಿಕ್ಷಣಾಭ್ಯಾಸ ಮುಗಿಸಿದ್ದರು. ನಂತರ ಕರ್ಣಾಟಕ ಬ್ಯಾಂಕ್ ಸೇರಿದ್ದ ಜಿ.ಗೋಪಾಲಕೃಷ್ಣ ಐತಾಳರು ವಿಜ್ಞಾನ ಪದವೀಧರರಾಗಿದ್ದರೂ ಕೂಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಅವರು ಮೊದಮೊದಲು ಸಾಮಾನ್ಯ ನಾಟಕ ವಿಮರ್ಶೆಗಳ ಮೂಲಕ ಹವ್ಯಾಸಿ ಬರಹಗಾರರಾಗಿ ಗುರುತಿಸಿಕೊಂಡಿದ್ದರು. ಸಾಹಿತ್ಯ ಕ್ಷೇತ್ರದಲ್ಲಿನ ಆಸಕ್ತಿ, ರಂಗ ಚಟುವಟಿಕೆಯ ಮೇಲೆ ಅವರಿಗಿದ್ದ ಮೋಹ ಬಹು ಬೇಗನೆ ಅವರನ್ನು ವೃತ್ತಿಪರ ಬರಹಗಾರರನ್ನಾಗಿಸಿತ್ತು. ಜಿ.ಕೆ. ಐತಾಳರ ಬರಹಗಳಲ್ಲಿನ ವಾಕ್ಯಗಳು ಕ್ಲಿಷ್ಟವಾಗಿದ್ದರೂ, ಓದುಗರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತಿದ್ದವು. ಈ ಕಾರಣಕ್ಕಾಗಿಯೇ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಅವರದೇ ಆದ ಅಭಿಮಾನಿ ಬಳಗವಿತ್ತು. ‘ನವಭಾರತ’ ಪತ್ರಿಕೆಯಲ್ಲಿ ‘ಕಡಲ ತಡಿಯ ಕಲಾವಿದರು’ ಎನ್ನುವ ಬರಹದ ಮೂಲಕ ಎಲೆಮರೆಯ ಕಲಾವಿದರನ್ನು ಸಮಾಜದ ಮುಖ್ಯಭೂಮಿಕೆಯಲ್ಲಿ ಕರೆ ತರುವ ಪ್ರಯತ್ನ ಮಾಡಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗುಜ್ಜಾಡಿಯ ಮಾರಿಕಾಂಬ ಮಹಿಳಾ ಸಹಕಾರಿ ಸಂಘದ ೨ನೇ ವಾರ್ಷಿಕ ಮಹಾಸಭೆ ತ್ರಾಸಿಯ ಅಂಬೇಡ್ಕರ್ ಸಭಾಭವನದಲ್ಲಿ ಭಾನುವಾರ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ನಿರ್ದೇಶಕರಾದ ಸುರೇಖಾ ಕಾನೋಜಿ, ಮಹಾಲಕ್ಷ್ಮೀ, ಶಾರದಾ, ಶಾಂತಾ, ರೇಖಾ, ಚೌಕಿ ಪುಷ್ಪ ಖಾರ್ವಿ, ಲಲಿತಾ ಖಾರ್ವಿ, ಶ್ಯಾಮಲಾದೇವಿ, ರತ್ನಾ ಟಿ.ದೇವಾಡಿಗ, ಸುನೀತಾ ಪೂಜಾರಿ, ಶಾಂತಾ ಮರಾಠಿ ನಾಯ್ಕ್ ಉಪಸ್ಥಿತರಿದ್ದರು. ಉಡುಪಿ ಮಹಿಳಾ ಅಭಿವೃದ್ಧಿ ನಿಗಮದ ಸಂಯೋಜಕ ಅವಿನಾಶ್ ಅವರು ಮಹಿಳೆಯರ ಅಭಿವೃದ್ಧಿ ಹಾಗೂ ಸ್ವ ಉದ್ಯೋಗದ ಮಾಹಿತಿ ನೀಡಿದರು. ಶ್ರೀಲವಿ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವಾಮಿಲಿಂಗೇಶ್ವರ ವರದಿ ವಾಚಿಸಿದರು. ಭಾಸ್ಕರ ಗಾಣಿಗ ಕೊಡಪಾಡಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ವಿಜಯಾ ಬಿ.ಗಾಣಿಗ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ಸೆ.19: ಕುಂದಾಪುರ ಕಂದಾಯ ಉಪವಿಭಾಗದ ನೂತನ ಉಪವಿಭಾಗಾಧಿಕಾರಿಗೆ ಎರಡು ದಿನದ ಹಿಂದೆ ಅಧಿಕಾರ ಹಸ್ತಾಂತರ ಮಾಡಿದ್ದ ಉಪವಿಭಾಗಾಧಿಕಾರಿ ಡಾ.ಎಸ್.ಎಸ್.ಮಧುಕೇಶ್ವರ ಮನೆಯ ಮೇಲೆ ಗುರುವಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಎಎಸ್ ಶ್ರೇಣಿ ಅಧಿಕಾರಿಯಾಗಿದ್ದ ಮಧುಕೇಶ್ವರ ಮಂಗಳವಾರ ನೂತನ ಉಪವಿಭಾಗಾಧಿಕಾರಿಯಾಗಿ ಬಂದಿದ್ದ ಎ. ರಾಜು ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದರು. ಆಧಿಕಾರ ಹಸ್ತಾಂತರ ಮಾಡಿದ ಬಳಿಕವೂ ಉಪವಿಭಾಗಾಧಿಕಾರಿ ಕಚೇರಿಗೆ ಸಂಬಂಧಿಸಿದ ಕಡತಗಳನ್ನು ಮಿನಿ ವಿಧಾನಸೌಧಕ್ಕೆ ಸಮೀಪದಲ್ಲಿ ಇರುವ ಉಪವಿಭಾಗಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ವಿಲೆವಾರಿ ಮಾಡುತ್ತಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಎಸಿಬಿ ತಂಡ ದಾಳಿ ನಡೆಸಿದೆ. ಎಸಿಬಿ ಡಿವೈಎಸ್‌ಪಿ ಮಂಜುನಾಥ ಕವರಿ ನೇತ್ರತ್ವದ ತಂಡ ನಡೆಸಿದ ದಾಳಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 24 ಅಧಿಕೃತ ಕಡತ ಹಾಗೂ 1.28 ಲಕ್ಷ ರೂ. ಆರಂಭದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಸಂಜೆಯವರೆಗೂ ಎಸಿಬಿ ತಂಡ ದಾಖಲೆಗಳ ಪರಿಶೀಲನೆ ಮುಂದುವರಿಸಿ ಸುಮಾರು 1,80,000 ಹಣವನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ. ಈ…

Read More