ಖಾದಿಯಲ್ಲಿ ಅರಳಿರುವ ಸಂತ ಸಂಜೀವನಾಥ ಐಕಳ ಕೃತಿ ಬಿಡುಗಡೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸ್ವಾತಂತ್ರ್ಯ ಹೋರಾಟಗಾರರಾಗಿ ಗಾಂಧೀಜಿಯವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನದ ಕೊನೆಯ ಕ್ಷಣದವರೆಗೂ ಸಂತನಂತೆ ಬದುಕಿದ್ದ ಡಾ.ಸಂಜೀವನಾಥ ಈಕಳರ ಬದುಕು ಅನುಕರಣೀಯ ಎಂದು ಶಿಕ್ಷಣ ತಜ್ಞ ಹಿರಿಯ ಸಮಾಜ ಶಾಸ್ತ್ರಜ್ಞ ಪ್ರೊ.ಶ್ರೀಪತಿ ತಂತ್ರಿಯವರು ಹೇಳಿದರು.

Call us

Click Here

ಅವರು ಮೂಲ್ಕಿ ರೋಟರಿಭವನದಲ್ಲಿ ಕಾರ್ನಾಡ್ ಸದಾಶಿವರಾವ್ ಸ್ಮಾರಕ ಸೇವಾಶ್ರಮ ಟ್ರಸ್ಟ್ ಆಶ್ರಯದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಾಜಿ ಶಾಸಕ, ಅಕ್ಷರ ಸಂತ ಡಾ.ಸಂಜೀವನಾಥ ಐಕಳ ಕುರಿತಾಗಿ ಡಾ. ರೇಖಾ ವಿ. ಬನ್ನಾಡಿ ರಚಿಸಿರುವ ಖಾದಿಯಲ್ಲಿ ಅರಳಿರುವ ಸಂತ ಸಂಜೀವನಾಥ ಐಕಳ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಡಾ.ಸಂಜೀವನಾಥ ಈಕಳ ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನ್ ವೈದ್ಯವೃತ್ತಿಯನ್ನು ತ್ಯಜಿಸಿ ಜನಸೇವೆ ಮಾಡುತ್ತಾ ರಾಜಕೀಯ ಪ್ರವೇಶಿಸಿ ಶಾಸಕರಾಗಿ ಗ್ರಾಮೀಣ ಕೃಷಿಗಾಗಿ ನೀಡಿದ ಕೊಡುಗೆ ಅವಿಸ್ಮರಣೀಯವಾದುದು. ಗ್ರಾಮೀಣ ಬಡವರ್ಗದ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯೊಂದನ್ನು ಆರಂಭಿಸಿ ಅವರ ಅಭಿವೃದ್ಧಿಗಾಗಿ ತನ್ನ ಸರ್ವಸ್ವವನ್ನು ವ್ಯ ಮಾಡಿರುವ ಮಹಾನ್ ತ್ಯಾಗಿ ಅಪ್ಪಟ ಗಾಂಧಿವಾದಿ ಅವರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ .ಎಚ್.ಅರವಿಂದ ಪುಂಜರವರು ಮಾತನಾಡಿ ಸರಳತೆ, ಪ್ರಾಮಾನಿಕತೆ, ನಿರಂತರ ಕ್ರೀಯಾಶೀಲತೆಯುಳ್ಳ ಐಕಳರು ನಿಜದ ಅರ್ಥದಲ್ಲಿ ಸಮಾಜಸೇವಕರು. ಅವರ ಬದುಕಿನ ಋಜುಮಾರ್ಗ ಮುಂದಿನ ಪೀಳಿಗೆಗೆ ಆದರ್ಶವಾಗಬೇಕು ಎಂದರು.

ಲೇಖಕಿ ರೇಖಾ ವಿ. ಬನ್ನಾಡಿ ಪ್ರಸ್ತಾವನೆಗೈದರು. ಪ್ರೊ. ವಿನೋಬ್‌ನಾಥ್ ಐಕಳ ಅತಿಥಿಗಳನ್ನು ಪರಿಚಯಿಸಿದರು. ಟ್ರಸ್ಟ ಅಧ್ಯಕ್ಷರಾದ ಶರೀಮತಿ ಬಾನು ಬಲ್ಲಾಳ್ ಧನ್ಯವಾದಗಳನ್ನು ಹೇಳಿದರು. ಹರ್ಷರಾಜ್ ಶೆಟ್ಟಿ ಜಿ.ಎಂ ಮತ್ತು ದಿನೇಶ್ ಕೊಲ್ನಾಡು ಕಾರ್ಯಕ್ರಮ ನಿರ್ವಹಿಸಿದರು.

Click here

Click here

Click here

Click Here

Call us

Call us

Leave a Reply