ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಅರ್.ಎಲ್ ಜಾಲಪ್ಪ ಇನ್ಸ್‌ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ, ದೊಡ್ಡಬಳ್ಳಾಪುರದಲ್ಲಿ ನಡೆದ ವಿಟಿಯು ಅಂತರ್ ವಲಯ ಬಾಲ್ ಬ್ಯಾಡ್ಮಿಂಟನ್ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಚಾಂಪಿಯನ್‌ಶಿಪ್ ಮುಡಿಗೆರಿಸಿಕೊಳ್ಳುವ ಮೂಲಕ ಆಳ್ವಾಸ್ ಇನ್ಸ್‌ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಹ್ಯಾಟ್ರಿಕ್ ಪ್ರಶಸ್ತಿಯನ್ನು ಪಡೆಯಿತು. ಫೈನಲ್‌ನಲ್ಲಿ ಮಹಿಳಾ ವಿಭಾಗದಲ್ಲಿ ಮಲ್ನಾಡ್ ಕಾಲೇಜ್ ಅಫ್ ಇಂಜಿನಿಯರಿಂಗ್, ಹಾಸನವನ್ನು ೩೫-೧೫, ೩೫-೧೨ ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ತನ್ನದಗಿಸಿಕೊಂಡಿತು, ಪುರುಷರ ವಿಭಾಗದಲ್ಲಿ ಫೈನಲ್ ಅತ್ಯಂತ ರೋಚಕ ಘಟ್ಟವನ್ನು ತಲುಪಿದ್ದು , ಅತಿಥೇಯ ಅರ್.ಎಲ್ ಜಾಲಪ್ಪ ಇನ್ಸ್‌ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ, ದೊಡ್ಡಬಳ್ಳಾಪುರ ಕಾಲೇಜ ಅನ್ನು ೩೫-೩೨, ೩೫-೨೮, ೩೫-೩೦ ಅಂಕಗಳೊಂದಿಗೆ ಸೋಲಿಸಿ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿತು. ವಿಜೇತರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಮ್ಯಾನೆಜಿಂಗ್ ಟ್ರಸ್ಟೀ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ತರಬೇತುದಾರ ಪ್ರವೀಣ್ ಮತ್ತು ದೈಹಿಕ ಶಿಕ್ಷಣ ನೀರ್ದೆಶಕ ದಿಲೀಪ್ ಶೆಟ್ಟಿ ಅಭಿನಂದಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ’ ಸುದ್ದಿ ಕುಂದಾಪುರ: ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ 9ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಬುಧವಾರ ಶ್ರೀ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಜರುಗಿತು. ಬಿಲ್ಲವ ಸಮಾಜದ ಗುರು–ಹಿರಿಯದ ಸಮ್ಮುಖದಲ್ಲಿ 6 ಜೋಡಿ ವಿವಾಹಿತರಾದರು. ವಧೂವರರಿಗೆ ಉಚಿತವಾಗಿ ನೀಡಲಾದ ದೋತಿ, ಶಾಲು, ಪೇಟಾ, ರವಿಕೆ ಕಣ, ಧಾರೆ ಸೀರೆ, ಬಾಸಿಂಗ ಹಾಗೂ ಮಂಗಳ ಸೂತ್ರಗಳನ್ನು ದಾನಿ ಯಶೋಧಾ ಸುಭಾಷ್ ಪೂಜಾರಿ ಸಂಗಮ್ ವಿತರಿಸಿದರು. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬಿಜೆಪಿ ಮುಖಂಡ ಕಿರಣ್ ಕುಮಾರ್ ಕೊಡ್ಗಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಕ್ಷ್ಮೀ ಮಂಜು ಬಿಲ್ಲವ, ಶ್ರೀಲತಾ ಸುರೇಶ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಜ್ಯೋತಿ ಉದಯ್ ಪೂಜಾರಿ, ಸೂರ್ಗೋಳಿ ಚಂದ್ರಶೇಖರ ಶೆಟ್ಟಿ, ಪುರಸಭಾ ಸದಸ್ಯರಾದ ಕೆ.ಮೋಹನ್‌ದಾಸ್ ಶೆಣೈ, ಶೇಖರ ಪೂಜಾರಿ ಹುಂಚಾರು ಬೆಟ್ಟು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿ ತನ್ನ ಅಣ್ಣನನ್ನೇ ಒಡಹುಟ್ಟಿದ ತಮ್ಮ ಕೊಲೆ ಮಾಡಿದ ಘಟನೆ ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಬವಳಾಡಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಬವಳಾಡಿ ಮೇಲ್ಮಕ್ಕಿಚೌಕಿ ನಿವಾಸಿ ನಾಗರಾಜ (47) ಕೊಲೆಗೀಡಾದ ದುರ್ದೈವಿಯಾಗಿದ್ದು, ಆರೋಪಿ ಆತನ ಸಹೋದರ ಸಂತೋಷ (20) ಕೊಲೆಗೈದ ಆರೋಪಿ. ಘಟನೆಯನ್ನು ಸಹಜ ಸಾವು ಎಂದು ಬಿಂಬಿಸಲು ಹೊರಟಿದ್ದು, ಸ್ಥಳೀಯರು ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಕೊಲೆಯ ಬಗ್ಗೆ ತಿಳಿದುಬಂದಿದ್ದು, ಆರೋಪಿ ಪರಾರಿಯಾಗಿದ್ದಾನೆ. ಆಗಿದ್ದೇನು?: ಬವಳಾಡಿ ಮೇಲ್ಮಕ್ಕಿಚೌಕಿ ನಿವಾಸಿಯಾದ ಕುಪ್ಪ ಕೊರಗ ಎಂಬುವವರಿಗೆ ೧೨ ಮಕ್ಕಳ ಪೈಕಿ ನಾಗರಾಜ ಹಾಗೂ ಸಂತೋಷ ಇಬ್ಬರು ಕೂಲಿ ಕೆಲಸ ಮಾಡಿ ಒಟ್ಟಿಗೆ ಬದುಕುತ್ತಿದ್ದರು. ಇಬ್ಬರು ಗುರುವಾರ ಆಲೂರಿನಲ್ಲಿ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬರುವಾಗ ಕುಡಿದು ಬಂದಿದ್ದರು. ರಾತ್ರಿ 9:30ರ ಸುಮಾರಿಗೆ ತಮ್ಮ ಸಂತೋಷ ಕೇವಲ ಒಳ ಉಡುಪಿನಲ್ಲಿ ಮನೆಯ ಸನಿಹದಲ್ಲಿ ತಿರುಗುತ್ತಿದ್ದು, ಇದನ್ನು ಆಕ್ಷೇಪಿಸಿದ ಅಣ್ಣ ನಾಗರಾಜನು, ಹೆಂಗಸರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮನೆಗಳಲ್ಲಿ, ಗುಡಿಗಳಲ್ಲಿ ನಡೆಸುವ ಅಲ್ಪಕಾಲದ ಆರಾಧನೆ ಸಾಂಕೇತಿಕ. ಉಳಿದ ಅವಧಿಯಲ್ಲಿ ಸಮಾಜದ ಎಲ್ಲರಲ್ಲಿರುವ ದೇವರ ಆರಾಧನೆ ನಡೆಸಬೇಕು. ದೇವರನ್ನು ಪುಷ್ಪಗಳಿಂದ ಪೂಜಿಸುವ ನಾವು ಸಹಜೀವಿಗಳನ್ನು ಅಹಿಂಸೆ, ಪ್ರೀತಿ, ದಯೆ, ಕರುಣೆಗಳೆಂಬ ಭಾವಪುಷ್ಪಗಳಿಂದ ಪೂಜಿಸಬೇಕು ಎಂದು ಉಡುಪಿ ಪೇಜಾವರ ಮಠದ ಶೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಉಳ್ಳೂರು ಗ್ರಾಮದ ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರಷ್ಟಬಂಧ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನಗೈದರು. ಗುಡಿಗೋಪುರಗಳಲ್ಲಿ ಮಾಡುವ ದೇವತಾರಾಧನೆಯಿಂದ ಪೂರ್ಣ ಫಲ ದೊರೆಯದು. ಎಲ್ಲ ಜೀವಿಗಳ ಹೃದಯದಲ್ಲಿ ದೇವರು ಇದ್ದಾನೆ ಎಂದು ಭಗವಂತನೇ ಭಗವದ್ಗೀತೆಯಲ್ಲಿ ಸಾರಿದ್ದಾನೆ. ಎಲ್ಲರಿಗೂ ಸುಖ, ಸಂತಸ ಬೇಕು. ಕಷ್ಟ, ದು:ಖ ಬೇಡ. ಆದರೆ ಒಬ್ಬ ತನ್ನ ಸುಖ, ಸಂತೋಷದ ಗಳಿಕೆಗಾಗಿ ನಡೆಸುವ ಕೃತ್ಯಗಳಿಂದ ಬೇರೆಯವರಿಗೆ ಕಷ್ಟ, ದು:ಖ ಆಗಬಾರದು. ಅದನ್ನು ಭಗವಂತ ಮೆಚ್ಚುವುದಿಲ್ಲ ಎಂಬ ಎಚ್ಚರವೂ ಎಲ್ಲರಿಗಿರಬೇಕು ಎಂದರು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕಿರಿಮಂಜೇಶ್ವರ : ಶುಭದಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ೨೦೧೮-೧೯ ನೇ ಸಾಲಿನಲ್ಲಿ ಅತ್ಯತ್ತಮ ಸರಾಸರಿ ಅಂಕಗಳೊಂದಿಗೆ ಬೈಂದೂರು ವಲಯದಲ್ಲಿ ಶೇಕಡಾ ೧೦೦ ಫಲಿತಾಂಶವನ್ನು ದಾಖಲಿಸಿರುತ್ತದೆ .ಈ ಸಂದರ್ಭದಲ್ಲಿ ಶುಭದಾ ಎಜ್ಯುಕೇಶನಲ್ ಟ್ರಸ್ಟಿನ ಸ್ಥಾಪಕ ಅಧ್ಯಕ್ಷರಾದ ಡಾ|| ಎನ್.ಕೆ. ಬಿಲ್ಲವ ಮತ್ತು ಸಲಹಾ ಸಮಿತಿಯ ಸದಸ್ಯರಾದ ರಾಜೀವ ಶೆಟ್ಟಿ ಇವರು ಶಾಲಾ ಮುಖ್ಯ ಶಿಕ್ಷಕರಾದ ರವಿದಾಸ ಶೆಟ್ಟಿ ಅವರಿಗೆ ಪುಷ್ಪಗುಚ್ಚ ನೀಡಿ ಅಭಿನಂದಿಸಿದರು. ಶಾಲೆಯ ನಿರ್ದೇಶಕರಾದ ಕೆ.ಪುಂಡಲೀಕ್ ನಾಯಕ್, ಸಂಯೋಜಕಿ ಗೀತಾದೇವಿ ಅಡಿಗ, ಸಂಚಾಲಕ ಶಂಕರ ಪೂಜಾರಿ, ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಐತಿಹಾಸಿಕ ಮಹತೋಭಾರ ಶ್ರೀ ಸೇನೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ಮೇ.03ರಿಂದ ಮೊದಲ್ಗೊಂಡು ಮೇ.11ರ ತನಕ ಜರುಗಲಿದ್ದು, ಆ ಪ್ರಯುಕ್ತ ಶುಕ್ರವಾರ ಮಧ್ಯಾಹ್ನ ದೇವಳದ ತಂತ್ರಿ ಕೃಷ್ಣ ಸೋಮಯಾಜಿ ಆಚಾರ್ಯತ್ವದಲ್ಲಿ ಧ್ವಜಾರೋಹಣ ನೆರವೇರಿತು. ಬೆಳಿಗ್ಗೆ ದೇವಳದಲ್ಲಿ ಕಲಶಪ್ರತಿಷ್ಠೆ, ಕಂಕಣ ಧಾರಣೆಯ ನಂತರ ರುಜ್ಜು ಬಂಧನ ಮುಂತಾದ ಧಾರ್ಮಿಕ ವಿಧಾನಗಳು ನಡೆಯಿತು. ಈ ಸಂದರ್ಭ ದೇವಳದ ಅಧ್ಯಕ್ಷ ಚೆನ್ನಕೇಶವ ಉಪಾಧ್ಯಾಯ, ಅರ್ಚಕ ವೃಂದ, ಸ್ಥಳೀಯ ಜನಪ್ರತಿನಿಧಿಗಳು, ದೇವಳದ ಸಿಬ್ಬಂದಿವರ್ಗ ಹಾಗೂ ಊರಿನ ಹತ್ತು ಸಮಸ್ತರು ಭಾಗವಹಿಸಿದ್ದರು. ಮೇ.೯ರಂದು ಮನ್ಮಹಾರಥೋತ್ಸವ ಜರುಗಲಿದ್ದು, ರಥೋತ್ಸವದ ಪ್ರಯುಕ್ತ ಪ್ರತಿದಿನ ಸಂಜೆ ಅಪ್ಪಿಕಟ್ಟೆ ಉತ್ಸವ, ಬಿಯಾರಕಟ್ಟೆ ಉತ್ಸವ, ಜಟ್ಕನಕಟ್ಟೆ ಉತ್ಸವ, ನಾಕಟ್ಟೆ ಉತ್ಸವ, ಪಡುವರಿ ಕಟ್ಟೆ ಉತ್ಸವ, ಬಂಕೇಶ್ವರ ಕಟ್ಟೆ ಉತ್ಸವ, ಅವಭೃತೋತ್ಸವ, ನಗರೋತ್ಸವ ನಡೆಯಲಿದೆ. ಉತ್ಸವದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಾಸ್ತವ ಒಪ್ಪಿಕೊಂಡರೆ ವಾಸ್ತುಬೇಕಿಲ್ಲ. ಸತ್ಯ ಹೇಳುವವನಿಗೆ ಅಂಜಿಕೆ ಇಲ್ಲ. ಮನುಷ್ಯನ ಕಣ್ಣು ತಪ್ಪಿಸಿ ತಪ್ಪು ಮಾಡಿದರೂ ಭಗವಂತನ ಕಣ್ಣನ್ನು ಮುಚ್ಚಿಸಲು ಸಾಧ್ಯವಿಲ್ಲ. ಸೃಷ್ಠಿ ಇರುವುದು ಎಷ್ಟು ಸತ್ಯವೋ ಹಾಗೆ ಸೃಷ್ಠಿಕರ್ತ ಇರುವುದೂ ಅಷ್ಟೇ ಸತ್ಯ ಎಂದು ಸ್ವರ್ಣ ಪೀಠಿಕಾಪುರ ಗೌರಿಗದ್ದೆ ದತ್ತ ಆಶ್ರಮದ ಶ್ರೀ ವಿನಯ ಗುರೂಜಿ ಹೇಳಿದರು. ಗುರುವಾರ ಇಲ್ಲಿನ 11ನೇ ಉಳ್ಳೂರು ಮೇಕೋಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪುನರಷ್ಟಬಂಧ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಎಲ್ಲರ ಹಾಗೆ ಇದ್ದು, ಎಲ್ಲರ ಹಾಗೆ ಬದುಕಿ ಪ್ರಪಂಚಕ್ಕೆ ಒಳ್ಳೆಯದನ್ನು ಕೊಟ್ಟು ಹೋಗುವವನು ಅವತಾರಿ. ಆತ ಅವದೂತನಲ್ಲ. ತನ್ನದೂ ಅದೇ ಮಾರ್ಗ. ಸಮಾಜದ ಕಟ್ಟಕಡೆಯ ಜನರಿಗೆ ಉತ್ತಮ ಜೀವನ ಕಲ್ಪಿಸುವುದು ತನ್ನು ಗುರಿ ಎಂಬುದನ್ನು ಪ್ರತಿಪಾದಿಸಿದ ಅವರು ಮೂಡನಂಬಿಕೆ, ಕಂದಾಚಾರಗಳಿಗೆ ಬಲಿ ಬೀಳಬೇಡಿ. ದೇಶ, ಸಮಾಜ, ಹಳ್ಳಿ ಜನರ ಸೇವೆ ಮಾಡಿ. ಹೊಟ್ಟೆಕಿಚ್ಚು, ಸುಳ್ಳು ಹೇಳುವುದನ್ನು ಬಿಟ್ಟು ಸಮಾಜಕ್ಕಾಗಿ ಕೆಲಸ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲಾ ದಂಡಾಧಿಕಾರಿಗಳ ಅಧಿಸೂಚನೆಯನ್ವಯ ಉಡುಪಿ ಹಾಗೂ ಕುಂದಾಪುರ ತಾಲೂಕು ವ್ಯಾಪ್ತಿಯ ಆಟೋರಿಕ್ಷಾಗಳಿಗೆ ಕಲರ್ ಕೋಡಿಂಗ್ (ವಲಯವಾರು) ನೀಡಲಾಗುತ್ತಿದ್ದು, ಈ ಬಗ್ಗೆ ಆಟೋರಿಕ್ಷಾ ಮಾಲಕರು ಪರವಾನಿಗೆ ಮತ್ತು ವಾಹನದ ಮೂಲ ದಾಖಲೆಗಳನ್ನು ಹಾಜರುಪಡಿಸಿ, ವಲಯವಾರು ಸ್ಟಿಕ್ಕರ್‌ನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಸಾರಿಗೆ ಸೌಧ, ಮಣಿಪಾಲ ಇಲ್ಲಿ ಕಚೇರಿಯ ಸಮಯದಲ್ಲಿ ಪಡೆಯುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ಎ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದಿರುವ ಕಡೆಗಳಲ್ಲಿ ಶಾಶ್ವತವಾಗಿ ದುರಸ್ತಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಏಪ್ರಿಲ್ 1 ರಿಂದ 30 ರ ವರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ಆದರೆ ನಿಗದಿತ ಸಮಯದಲ್ಲಿ ಕಾಮಗಾರಿ ದುರಸ್ತಿ ಆಗದ ಕಾರಣ ಹಾಗೂ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ವಾಹನ ಸಂಚಾರ ನಿಷೇಧ ಆದೇಶವನ್ನು ಮೇ 15 ರ ವರೆಗೆ ವಿಸ್ತರಿಸಿ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿರುತ್ತಾರೆ. ಈ ಅವಧಿಯಲ್ಲಿ ಸಾಮಾನ್ಯ ಬಸ್ಸ್‌ಗಳು, ಜೀಪು, ವ್ಯಾನ್, ಎಲ್.ಸಿ.ವಿ(ಮಿನಿ ವ್ಯಾನ್), ದ್ವಿಚಕ್ರ ವಾಹನಗಳು ಉಡುಪಿ-ಕಾರ್ಕಳ-ಮಾಳಾಘಾಟ್-ಶೃಂಗೇರಿ-ಕೊಪ್ಪ-ತೀರ್ಥಹಳ್ಳಿ ಮಾರ್ಗವಾಗಿ ಹಾಗೂ ರಾಜಹಂಸ, ಐರಾವತ ಬಸ್ಸ್‌ಗಳು, ಖಾಸಗಿ ಲಕ್ಸುರಿ ಬಸ್‌ಗಳು, ಬುಲೆಟ್ ಟ್ಯಾಂಕರ‍್ಸ್, ಷಿಪ್ ಕಾರ್ಗೋ ಕಂಟೈನರ‍್ಸ್, ಲಾಂಗ್ ಚಾಸೀಸ್ ವಾಹನಗಳು ಉಡುಪಿ-ಕುಂದಾಪುರ-ಸಿದ್ಧಾಪುರ-ಹೊಸಗಂಡಿ- ಮಾಸ್ತಿಕಟ್ಟೆ- ತೀರ್ಥಹಳ್ಳಿ ಮೂಲಕ ಸಂಚರಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 2019-20 ನೇ ಸಾಲಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ವರಮಾನ 2 ಲಕ್ಷ ರೂ. ಮಿತಿಗೊಳಪಟ್ಟ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇಲಾಖಾ ವತಿಯಿಂದ ಗುರುತಿಸಲಾಗಿರುವ ಪ್ರತಿಷ್ಟಿತ ಶಾಲೆಯಲ್ಲಿ 6 ನೇ ತರಗತಿಗೆ ಹೊಸದಾಗಿ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಲು ಸರ್ಕಾರವು ಅವಕಾಶ ಕಲ್ಪಿಸಿದೆ. 5 ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಶೇ. 60 ಕ್ಕಿಂತ ಹೆಚ್ಚಿನ ಅಂಕ ಪಡೆದಿರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು 6 ನೇ ತರಗತಿಗೆ ಒಟ್ಟು 25 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಅರ್ಜಿಯನ್ನು ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ರಜತಾದ್ರಿ, ಮಣಿಪಾಲ, ಉಡುಪಿ ಇಲ್ಲಿ ಮೇ 2 ರಿಂದ ಪಡೆದು ಭರ್ತಿ ಮಾಡಿ ಅರ್ಹ ದಾಖಲಾತಿಗಳೊಂದಿಗೆ ಅರ್ಜಿಯನ್ನು ಮೇ 13 ರ ಒಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ: 0820-2574814 ಅನ್ನು…
