Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ದಿ. ನಾರಾಯಣ ಪಡುಕೋಣೆ ಅವರ ಎರಡನೆಯ ಪುಣ್ಯತಿಥಿಯಂದು ಅವರ ’ಹಕ್ಕಿಗೂಡು’ ಮನೆಯಲ್ಲಿ ಮಂಗಳವಾರ ನಡೆದ ’ನಾರಾಯಣ ಶ್ರಮಶಕ್ತಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಉಪನ್ಯಾಸಕ, ಹಿರಿಯ ಪತ್ರಕರ್ತ ಎಸ್. ಜನಾರ್ದನ ಮರವಂತೆ ಮಾತನಾಡಿ ಶ್ರಮಜೀವಿಯಾಗಿ ಸಾರ್ಥಕ ಬದುಕು ರೂಪಿಸಿಕೊಂಡು ಕುಟುಂಬವನ್ನು ಉನ್ನತಿಗೆ ಒಯ್ದಿದ್ದ ಪಡುಕೋಣೆ ನಾರಾಯಣ ಗಾಣಿಗ ಅವರ ಪುಣ್ಯತಿಥಿಯಂದು ಅವರಂತೆ ಬದುಕಿದ್ದ ಒಬ್ಬರನ್ನು ಗುರುತಿಸಿ ಅವರಿಗೆ ಶ್ರಮಶಕ್ತಿ ಪ್ರಶಸ್ತಿ ನೀಡುತ್ತಿರುವುದು ಒಂದು ಅಪೂರ್ವದ ಮತ್ತು ಶ್ಲಾಘನೀಯ ಉಪಕ್ರಮ ಎಂದು ನಿ ಹೇಳಿದರು. ನಾರಾಯಣ ಗಾಣಿಗರು ವರ್ಷದ ಎಲ್ಲ ಕಾಲಗಳಲ್ಲೂ ಕಾಯಕವನ್ನು ಧಾರ್ಮಿಕ ಶ್ರದ್ಧೆಯಂತೆ ನಡೆಸಿದವರು. ತಮ್ಮ ಕೊನೆಗಾಲದ ವರೆಗೂ ಆರೋಗ್ಯಯುತ ಜೀವನ ನಡೆಸಿ ಕುಟುಂಬದ ಕಿರಿಯರಿಗೆ ಮೌಲ್ಯಾಧರಿತ ಜೀವನಪಥವನ್ನು ತೋರಿದವರು. ಅವರ ವಾರ್ಷಿಕ ಸ್ಮರಣೆಯನ್ನು ಕಳೆದ ವರ್ಷದಂತೆ ಈ ವರ್ಷವೂ ’ಶ್ರಮಶಕ್ತಿ ಪ್ರಶಸ್ತಿ’ ಪ್ರದಾನದ ಮೂಲಕ ನಡೆಸುತ್ತಿರುವುದರ ಹಿಂದೆ ಅವರು ತಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಕಂಬದಕೋಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರಂಜಾಲು ಜನತಾ ಕಾಲೋನಿ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತಿದ್ದು, ಈ ಹಿಂದಿನಂತೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಗ್ರಾಪಂ ಪಿಡಿಓ ಒಪ್ಪಿಗೆ ಸೂಚಿಸಿದ್ದಾರೆ. ಸೋಮವಾರ ಬೆಳಗ್ಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಕಂಬದಕೋಣೆ ತಾಲೂಕು ಪಂಚಾಯಿತಿ ಸದಸ್ಯ ಮಹೇಂದ್ರ ಪೂಜಾರಿ ತಾಪಂ ಇಒ ಕಿರಣ್ ಫೆಡ್ನೇಕರ್ ಜನತಾ ಕಾಲೋನಿಗೆ ಭೇಟಿ ನೀಡಿ, ಕಾಲನಿ ವಾಸಿಗಳಿಗೆ ನೀರು ಪೂರೈಕೆ ಮಾಡುವಂತೆ ಗ್ರಾಪಂ ಪಿಡಿಒ ಪೂರ್ಣಿಮಾ ಅವರಿಗೆ ತಾಕೀತು ಮಾಡಿದ್ದು, ಸೋಮವಾರ ಸಂಜೆಯಿಂದ ಟ್ಯಾಂಕರ್ ಮೂಲಕ ಜನತಾ ಕಾಲನಿಗೆ ನೀರು ಪೂರೈಕೆ ಆಗಲಿದೆ. ಶಾಸಕರು ಭೇಟಿ ಸಂದರ್ಭದಲ್ಲಿ ಕಾಲನಿ ವಾಸಿಗಳು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅವಲತ್ತುಕೊಂಡು ಚುನಾವಣೆ ನಂತರದ ದಿನದಿಂದ ನೀರು ಪೂರೈಕೆ ಮಾಡದೆ ಸತಾಯಿಸಿದ್ದು, ನೀರು ಕೊಡುವಂತೆ ಮನವಿ ಮಾಡಿದರೂ ನಿರಾಕರಿಸಲಾಗುತ್ತಿತ್ತು ಎಂದು ತಿಳಿಸಿದ್ದರು. ಪಿಡಿಒ ಪೂರ್ಣಿಮಾ ಜತೆ ಜನತಾ ಕಾಲನಿಗೆ…

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ರಾಜಕೀಯ ವೈಷಮ್ಯಕ್ಕಾಗಿ ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತಡೆಯೊಡ್ಡಿ ಜನರೊಂದಿಗೆ ಚಲ್ಲಾಟವಾಡುತ್ತಿರುವ ಗ್ರಾಮ ಪಂಚಾಯಿತಿ. ಪಂಚಾಯತ್ ಅಧ್ಯಕ್ಷರ ರಾಜಕೀಯದಾಟಕ್ಕೆ ಹೈರಾಣಾಗಿರುವ ಕಾಲೋನಿಯ ಜನತೆ. ಬೈಂದೂರು ತಾಲೂಕು ಕಂಬದಕೋಣೆ ಗ್ರಾಮ ಪಂಚಾಯಿತಿ ಹೆರಂಜಾಲು ಗುಡಿ ದೇವಸ್ಥಾನದ ಬಳಿಯ ಜನತಾ ಕಾಲನಿ ನಿವಾಸಿಗಳು ಕುಡಿಯುವ ನೀರಿನಿಂದಲೂ ವಂಚಿತರಾಗಿದ್ದು, ಇರುವ ಒಂದು ಬೋರ್‌ವೆಲ್ ಮುಂದೆ ಸಾಲುಗಟ್ಟಿ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ. ಈ ಬಗ್ಗೆ ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ ಸಿದ್ದಪಡಿಸಿದ್ದು, ವಿವರ ಕೆಳಗಿದೆ. ಲೋಕಸಭೆ ಚುನಾವಣೆ ಬಹಿಷ್ಕಾರ ಬ್ಯಾನರ್ ಹಾಕಿದ್ದರು ಎಂಬ ನೆಪವನ್ನಿಟ್ಟುಕೊಂಡು ಒಂದಿಡೀ ಕಾಲನಿಗೆ ಪೂರೈಕೆ ಮಾಡಬೇಕಿದ್ದ ನೀರನ್ನು ಕಂಬದಕೋಣೆ ಗ್ರಾಮ ಪಂಚಾಯಿತಿ ಏಕಾಏಕಿ ನಿಲ್ಲಿಸಿ ಜನಸಾಮಾನ್ಯರ ಬದುಕಿನೊಟ್ಟಿಗೆ ಚೆಲ್ಲಾಟವಾಡುತ್ತಿದೆ. ಜನತಾ ಕಾಲನಿಯಲ್ಲಿ ಎಪ್ಪತ್ತಕ್ಕೂ ಮಿಕ್ಕ ಮನೆಗಳಿದ್ದು, ಮಕ್ಕಳು ಮರಿ ಸೇರಿ ಏಳುನೂರರಷ್ಟು ಜನರಿದ್ದಾರೆ. ಪ್ರತಿದಿನ ಕುಡಿಯುವ ನೀರಿಗಾಗಿ ತಮ್ಮ ಶ್ರಮ ವ್ಯಯ ಮಾಡುತ್ತಿದ್ದಾರೆ. ಕೂಲಿಗೆ ಹೋದರೆ ನೀರಿಲ್ಲ. ನೀರು ಸಂಗ್ರಹಕ್ಕೆ ಇಳಿದರೆ ಹಿಟ್ಟಿಲ್ಲ. ಈ ಎರಡರಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಎಲ್ಲರಿಗೂ ಬದುಕಿಗಾಗಿ ದುಡಿಮೆ ಅನಿವಾರ್ಯ. ಅವರಲ್ಲಿ ಅಗತ್ಯಕ್ಕಿಂತ ಅಧಿಕ ಆದಾಯ ಇರುವವರು ಅದರ ಒಂದಂಶವನ್ನು ಸಮುದಾಯದಲ್ಲಿ ಕನಿಷ್ಠ ಸ್ಥಿತಿಯಲ್ಲಿರುವವರ ಬದುಕಿಗಾಗಿ ತ್ಯಾಗ ಮಾಡುವುದು ಮಾನವೀಯ ಔದಾರ್ಯ ಎನಿಸುತ್ತದೆ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ನಂದನವನ ದೇವಕಿ ಬಿ. ಆರ್. ಸಭಾಭವನದಲ್ಲಿ ಗುರುವಾರ ನಡೆದ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್‌ನ ಚತುರ್ಥ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಟ್ರ್ರಸ್ಟ್ ಗ್ರಾಮೀಣ ಭಾಗದ ಜನರ ಶಿಕ್ಷಣ, ಆರೋಗ್ಯದ ಅವಶ್ಯಕತೆಯನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿರುವುದು ಶ್ಲಾಘನೀಯ. ಈ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು. ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಟ್ರಸ್ಟ್ ಸ್ಥಾಪಿಸಿರುವ ಗೋವಿಂದ ಬಾಬು ಪೂಜಾರಿ ಬಡತನದಲ್ಲಿ ಹುಟ್ಟಿ ಬೆಳೆದರು. ಬಾಲ್ಯದಲ್ಲಿ ನೋವು ಅನುಭವಿಸಿದವರು. ಹೋಟೆಲ್ ನೌಕರನಾಗಿ ಬದುಕು ಆರಂಭಿಸಿದ ಅವರು ಸತತ ಕಠಿಣ ಶ್ರಮ, ಛಲದಿಂದ ಇಂದು ೪೫೦೦ ಜನರಿಗೆ ಉದ್ಯೋಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಎದುರಾಗಬಹುದಾದ ಯಾವುದೇ ಸಂಭಾವ್ಯ ಅನಾಹುತಗಳನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತುರ್ತು ವಿಪತ್ತು ನಿರ್ವಹಣೆಗಾಗಿ 24*7 ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದ್ದು, ಸಾರ್ವಜನಿಕರು ಈ ಮುಂದಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕುಂದಾಪ್ರ ಡಾಟ್ ಕಾಂ. ಉಡುಪಿ ಜಿಲ್ಲಾಧಿಕಾರಿ ಕಚೇರಿ ದೂ.ಸಂಖ್ಯೆ: 0820-2574802 , ಟೋಲ್ ಫ್ರೀ: 1077 ಪೊಲೀಸ್ ಇಲಾಖೆ ದೂ.ಸಂಖ್ಯೆ: 0820-2526444 ಜಿಲ್ಲಾ ಪಂಚಾಯತ್ ದೂ.ಸಂಖ್ಯೆ: 0820-2574945 ಆರೋಗ್ಯ ಇಲಾಖೆ ದೂ.ಸಂಖ್ಯೆ: 0820-2536650 ಮೆಸ್ಕಾಂ ಇಲಾಖೆ ದೂ.ಸಂಖ್ಯೆ: 0820-2521201 ಶಿಕ್ಷಣ ಇಲಾಖೆ ದೂ.ಸಂಖ್ಯೆ: 0820-2574970 ಉಡುಪಿ ತಾಲೂಕು ಕಚೇರಿ ದೂ.ಸಂಖ್ಯೆ: 0820-2520417 ಕಾರ್ಕಳ/ ಹೆಬ್ರಿ ತಾಲೂಕು ಕಚೇರಿ ದೂ.ಸಂಖ್ಯೆ: 08258-230201 ಕುಂದಾಪುರ ತಾಲೂಕು ಕಚೇರಿ ದೂ.ಸಂಖ್ಯೆ: 08254-230357 ಬೈಂದೂರು ತಾಲೂಕು ಕಚೇರಿ ದೂ.ಸಂಖ್ಯೆ: 08254-251657 ಬ್ರಹ್ಮಾವರ ತಾಲೂಕು ಕಚೇರಿ ದೂ.ಸಂಖ್ಯೆ: 0820-2560492 ಕಾಪು ತಾಲೂಕು ಕಚೇರಿ ದೂ.ಸಂಖ್ಯೆ:…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವ್ಯಕ್ತಿಯ ಪರಿವರ್ತನೆ ಆದರೆ ಊರು, ದೇಶದ ಪರಿವರ್ತನೆ ಆಗುತ್ತದೆ. ವ್ಯಕ್ತಿ ನಡೆಸುವ ಧಾರ್ಮಿಕ ಕಾರ್ಯಗಳು ಅವನ ಅಹಂಕಾರವನ್ನು ಅಳಿಸಿ ಅವನ ಪರಿವರ್ತನೆಗೆ ಕಾರಣವಾಗುತ್ತವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ನಾವುಂದ ಸಪರಿವಾರ ಶ್ರೀ ಪದ್ಮಾವತಿ ಅಮ್ಮನವರ ನೂತನ ಶಿಲಾ ದೇಗುಲ ಸಮರ್ಪಣೆ, ನೂತನ ಮೂರ್ತಿ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶಾಭಿಷೇಕದ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು. ನಾಲ್ಕು ದಶಕಗಳಿಂದ ನಾವುಂದ ಪರಿಸರದ ಜನರ ಸ್ಥಿತಿಗತಿಯ ನಿಕಟ ಪರಿಚಯ ತಮಗಿದೆ ಎಂದ ವೀರೇಂದ್ರ ಹೆಗ್ಗಡೆ ಆಗ ಇಲ್ಲಿ ಆರ್ಥಿಕ, ಶೈಕ್ಷಣಿಕ ಬಡತನ ಇತ್ತು. ೩೦ ವರ್ಷಗಳಿಂದೀಚೆಗೆ ಇಲ್ಲಿ ಅದ್ಭುತ ಪ್ರಗತಿ ಆಗಿದೆ. ಜನರ ಜೀವನ ಶೈಲಿ, ಆಹಾರ, ವಿಹಾರ, ಸಂಸ್ಕಾರಗಳಲ್ಲಿ ಧನಾತ್ಮಕ ಬದಲಾವಣೆ ಆಗಿದೆ. ಅದು ಮತ್ಸ್ಯಾವತಾರದ ಮತ್ಸ್ಯದ ಬೆಳವಣಿಗೆಯಂತೆ ಭಾಸವಾಗುತ್ತಿದೆ. ಇಲ್ಲಿಯ ಜನ ಹಳ್ಳಿಯಿಂದ ನಗರಗಳಿಗೆ ಹೋಗಿ ದುಡಿದು, ಊರಿನ ಕಾರ್ಯಗಳಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿನ ಯಶಸ್ವಿ ಕಲಾವೃಂದ ಹಾಗೂ ಕೈಲಾಸ ಕಲಾಕ್ಷೇತ್ರದ ನೇತೃತ್ವದಲ್ಲಿ ನಡೆಯುತ್ತಿರುವ ರಜಾರಂಗು 2019 ಇದರ 25ನೇ ದಿನ ಜ್ಞಾನ ರಂಜನಾ ಶಿಬಿರದಲ್ಲಿ ಯಕ್ಷಗಾನ ಕಾರ್ಯಾಗಾರ ಜರುಗಿತು. ಯಕ್ಷದೇಗುಲ ಬೆಂಗಳೂರು ವತಿಯಿಂದ ನಡೆದ ಕಾರ್ಯಾಗಾರವನ್ನು ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯೆ, ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಉದ್ಘಾಟಿಸಿ ಮಾತನಾಡಿ ಅಬ್ಬರದ ವೇಷಭೂಷಣ, ಪ್ರಬುದ್ಧ ಮಾತುಗಾರಿಕೆ, ನೃತ್ಯ, ಹಾವ-ಭಾವ-ತಾಳ-ಅಭಿನಯವನ್ನು ಒಳಗೊಂಡಿರುವ ಯಕ್ಷಗಾನ ಪರಿಪೂರ್ಣ ಕಲಾ ಪ್ರಾಕಾರ ಎಂದು ಹೇಳಿದರು. ಶಿಬಿರಾರ್ಥಿಗಳಿಗೆ ರಂಗದಲ್ಲಿ ಚೌಕಿ ಮನೆಯಲ್ಲಿ ವೇಷ ತಯಾರಾಗುವ ಬಗೆ ರಂಗದಲ್ಲಿಯೇ ತೋರಿಸುವ ಮೂಲಕ ಅಭಿನಯದಲ್ಲಿ ಪ್ರವೇಶ, ಮುದ್ರೆಗಳು, ತಾಳಗಳು, ಯಾವ ವೇಷಗಳನ್ನು ಹೇಗೆ ಬಳಸಬಹುದು ಎನ್ನುವ ಬಗ್ಗೆ ತರಬೇತಿ ನೀಡಲಾಯಿತು. ಯಕ್ಷದೇಗುಲ ಬೆಂಗಳೂರು ಇದರ ಸಂಘಟಕ ಕೋಟ ಸುದರ್ಶನ ಉರಾಳ, ಉಪನ್ಯಾಸಕ ಸುಜಯೀಂದ್ರ ಹಂದೆ, ಯಶಸ್ವಿ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ, ಹೆರಿಯ ಮಾಸ್ಟರ್, ಛಾಯಾಚಿತ್ರಗ್ರಾಹಕ ಪಾಂಡುರಂಗ ಕೋಮೆ ಉಪಸ್ಥಿತರಿದ್ದರು. ಪ್ರಣಮ್ಯಾ ಸ್ವಾಗತಿಸಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಪತ್ರಕರ್ತನಿಗೆ ಜರ್ನಲಿಸಂ ಮುಖ್ಯವಾಗಬೇಕೇ ಹೊರತು ಬೇರೆ ಯಾವುದೇ ಇಸಂಗಳಲ್ಲ. ಯಾವುದೇ ತತ್ವ ಸಿದ್ಧಾಂತಗಳಿದ್ದರೂ ಅವು ವೈಯಕ್ತಿಕವಾಗಿ ನೆಲೆಗೆ ಮಾತ್ರ ಸೀಮಿತವಾಗಿರಬೇಕು. ತನ್ನ ವೃತ್ತಿಯೊಳಗೆ ಅವು ಎಂದೂ ಪ್ರವೇಶಿಸಬಾರದು ಎಂದು ರಾಜ್ ನ್ಯೂಸ್‌ನ ಮುಖ್ಯ ಸಂಪಾದಕ ಹಮೀದ್ ಪಾಳ್ಯ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ನ್ಯೂಸ್ ಟೈಮ್‌ನ ಶತಕದ ಸಂಭ್ರಮದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಇಂದು ಪತ್ರಿಕೋದ್ಯಮದ ಮೇಲೆ ರಾಜಕೀಯ ಹೆಚ್ಚು ಪ್ರಭಾವ ಬೀರುತ್ತಿದೆ. ಆದ್ದರಿಂದ ಪತ್ರಕರ್ತ ಯಾವುದೇ ರಾಜಕೀಯ ಸಿದ್ಧಾಂತಗಳಿಗೆ ಸೀಮಿತವಾಗದೇ ಸ್ವಾತಂತ್ರ್ಯ ವಾಗಿ ಕೆಲಸ ಮಾಡಬೇಕು. ಅಲ್ಲದೆ ಪತ್ರಕರ್ತರು ಮಾಡುವ ಎಲ್ಲ ಚಟುವಟಿಕೆಗಳು ಮತ್ತು ಹೇರುವ ಅಲೋಚನೆಗಳು ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವುದರಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಪತ್ರಕರ್ತರಾದವನಿಗೆ ಅಹಂಕಾರವಿರಬೇಕು, ಅದು ವಿಷಯ ಜ್ಞಾನದ್ದಾಗಿರಬೇಕು. ಆದರೆ ಅದು ಎಂದೂ ದುರಂಕಾರದ ಸ್ವರೂಪ ಪಡೆಯಬಾರದು. ಅಧ್ಯಯನ ಹಾಗೂ ವಿದ್ವತ್ತಿನ ಹೊರತು ಬೇರೆ ಯಾವುದೂ ಪತ್ರಕರ್ತನಾದವನನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಹಕಾರಿ ಧುರೀಣ ಹಾಗೂ ಪ್ರಗತಿಪರ ಕೃಷಿಕ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ದಕ್ಷಿಣಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು ಇದರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಕಾಶ್ಚಂದ್ರ ಶೆಟ್ಟಿ ಅವರು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಮೇಕೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಹಕಾರಿ ಕೃಷಿ ಹಾಗೂ ಹೈನುಗಾರಿಕೆ ಕ್ಷೇತ್ರದಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡಿದ್ದಾರೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕರಾಗಿ, ಕುಂದಾಪುರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಮೈಸೂರಿನಲ್ಲಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಡಿಪ್ಲೋಮ ಮಟ್ಟದಲ್ಲಿ ತಾಂತ್ರಿಕ ಶಿಕ್ಷಣ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ, ಜೆಎಸ್‌ಎಸ್ ಮಹಾವಿದ್ಯಾಪೀಠವು ಜೆಎಸ್‌ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ಸ್ಥಾಪನೆ ಮಾಡಿದ್ದು, ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿನ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 35% ಅಂಕಗಳೊಂದಿಗೆ ತೇರ್ಗಡೆಗೊಂಡ ವಿಶೇಷಚೇತನ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಂದ 2019-20 ನೇ ಸಾಲಿಗೆ ಮೂರು ವರ್ಷಗಳ ಅವಧಿಯ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭಾಗಶಃ ಮತ್ತು ಪೂರ್ಣ ಅಂಧತ್ವವುಳ್ಳ ಅಭ್ಯರ್ಥಿಗಳು ಇಂಗ್ಲೀಷ್ ಬ್ರೈಲ್ ಭಾಷೆಯ ಜ್ಞಾನ ಹೊಂದಿದ್ದಲ್ಲಿ ಆದ್ಯತೆಯನ್ನು ನೀಡಲಾಗುವುದು. ಪಾಲಿಟೆಕ್ನಿಕ್‌ನ ಯಶಸ್ವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ತರಬೇತಿ ಕೇಂದ್ರದ ಮೂಲಕ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರುಗಳಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯದ ಸೌಲಭ್ಯವಿದೆ. ಪ್ರವೇಶಕ್ಕೆ ಅರ್ಜಿಗಳನ್ನು ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಚಯ, ಮೈಸೂರು (ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.100 ಹಾಗೂ ಎಸ್‌ಸಿ/ಎಸ್‌ಟಿ/ಸಿ1 ವರ್ಗದವರಿಗೆ ರೂ.50) ನಗದು ಅಥವಾ ಡಿಡಿ/ ಎಂಒ ಮೂಲಕ ಮೈಸೂರಿನಲ್ಲಿ ಸಂದಾಯವಾಗುವಂತೆ…

Read More