Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಸಿಐಟಿಯು ಹಾಗೂ ವಿವಿಧ ಸಂಘಟನೆ ಆಶ್ರಯದಲ್ಲಿ ಕಾರ್ಮಿಕ ದಿನಾಚರಣೆಯ ಅಂಗವಾಗಿ ಬುಧವಾರ ಪುರಮೆರವಣಿಗೆ ಹಾಗೂ ಬಹಿರಂಗ ಸಮಾವೇಶ ಜರುಗಿತು. ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ. ಶಂಕರ್ ಮಾತನಾಡಿ ಸಾಮ್ರಾಜ್ಯಶಾಹಿ, ಬಂಡವಾಳಶಾಹಿ ಧೋರಣೆಯಿಂದ ಕಾರ್ಮಿಕರ ಶೋಷಣೆ ಇಂದಿಗೂ ನಿಂತಿಲ್ಲ. ಸಾಮಾಜ್ಯಶಾಹಿ, ಬಂಡವಾಳಶಾಹಿ ನಡುವೆ ಸಿಲುಕಿದ ಕಾರ್ಮಿಕ ಇನ್ನೂ ಕಷ್ಟ ಕೂಲಿ ಪಡೆಯಲಾಗಿಲ್ಲ ಎಂದರೆ ಅದಕ್ಕಿಂತ ದೊಡ್ಡ ದೌರ್ಭಾಗ್ಯ ಮತ್ತೊಂದಿಲ್ಲ. ಇದರೊಟ್ಟಿಗೆ ನೌಕರಶಾಹಿ ಆಡಳಿತ ಕಾರ್ಮಿಕ ವಲಯಕ್ಕೆ ದೊಡ್ಡ ಅಪಾಯ ತರಲಿದೆ ಎಂದ ಅವರು ಕಾರ್ಮಿಕ ಸಂಘಟನೆಗಳು ಕನಿಷ್ಟ ಕೂಲಿ ಸೌಲಭ್ಯಗಳ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಕಾರ್ಮಿಕರ ಸಂಘಟನೆಗಳಲ್ಲಿ ಹೆಚ್ಚು ಹೆಚ್ಚು ಕಾರ್ಮಿಕರು ತೊಗಸಿಕೊಳ್ಳುವ ಮೂಲಕ ಕಾರ್ಮಿಕ ವಲಯದಲ್ಲಿ ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿದರು. ಸಿಐಟಿಯು ತಾಲೂಕು ಅಧ್ಯಕ್ಷ ಹೆಚ್.ನರಸಿಂಹ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಪುರಸಭೆ ಮಾಜಿ ಅಧ್ಯಕ್ಷ ವಿ.ನರಸಿಂಹ, ಕಟ್ಟಡ ಕಾರ್ಮಿಕ ಸಂಘಟನೆ ಅಧ್ಯಕ್ಷ ಯು.ದಾಸ ಭಂಡಾರಿ, ಬೀಡಿ ಕಾರ್ಮಿಕ ಸಂಘಟನೆ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಕ್ಕಳ ರಂಗ ತರಬೇತಿಯನ್ನು ಆಯೋಜಿಸುವ ಮೂಲಕ ಲಾವಣ್ಯವೇ ಹುಟ್ಟುಹಾಕಿದ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ದಾಟಿಸುವ ಕೆಲಸವನ್ನು ಹಲವು ವರ್ಷದಿಂದ ಯಶಸ್ವಿಯಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಹೇಳಿದರು. ಅವರು ಮಂಗಳವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಲಾವಣ್ಯ ರಿ. ಬೈಂದೂರು ಸಂಸ್ಥೆಯ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ಸಿದ್ಧಗೊಂಡ ಗುಬ್ಬಿ ಹಾಡು ಹಾಗೂ ತಾಯಿಯ ಕಣ್ಣು ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಲಾವಣ್ಯದ ನಿರ್ದೇಶಕರಾದ ಶ್ರೀನಿವಾಸ ಪ್ರಭು ಉಪ್ಪುಂದ ಉಪಸ್ಥಿತರಿದ್ದರು. ಈ ಸಂದರ್ಭ ಗುಬ್ಬಿ ಹಾಡು ನಾಟಕದ ನಿರ್ದೇಶಕ ನಾಗೇಂದ್ರ ಬಂಕೇಶ್ವರ ಹಾಗೂ ತಾಯಿಯ ಕಣ್ಣು ನಾಟಕದ ನಿರ್ದೇಶಕ ರೋಶನ್ ಕುಮಾರ್ ಅವರನ್ನು ಗೌರವಿಸಲಾಯಿತು. ಇತ್ತಿಚೆಗೆ ವಿವಾಹವಾದ ಲಾವಣ್ಯ ಕಲಾವಿದೆ ಚೈತ್ರಾ ಹಾಗೂ ಸತೀಶ್ ದಂಪತಿಗಳನ್ನು ಅಭಿನಂದಿಸಲಾಯಿತು. ಲಾವಣ್ಯ ರಿ. ಬೈಂದೂರು ಅಧ್ಯಕ್ಷ ಎಚ್. ಉದಯ ಆಚಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮೂರ್ತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಸಂಜನಾ ಉಡುಪ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 620 ಅಂಕ ಪಡೆದ ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣಳಾಗಿದ್ದಾಳೆ. ಈಕೆ ಕೋಟ ವಿವೇಕ ಕಾಲೇಜು ಪ್ರಾಂಶುಪಾಲರಾದ ಜಗದೀಶ್ ನಾವಡ ಹಾಗೂ ಸುವರ್ಣ ದಂಪತಿಗಳ ಪುತ್ರಿಯಾಗಿದ್ದು ಪಿಯುಸಿಯಲ್ಲಿ ಸೈನ್ಸ್ ವ್ಯಾಸಂಗ ಮಾಡಿ ಮುಂದೆ ವೈದ್ಯಕೀಯ ಪದವಿ ಪಡೆಯುವ ಹಂಬಲದಲ್ಲಿದ್ದಾಳೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಲ್ಲಿನ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿನಿ ಅನಘ ಉಡುಪ 625ರಲ್ಲಿ 623 ಅಂಕ ಪಡೆದು ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಈಕೆ ಕೋಟ ಮಣೂರು ವಿನಯಾ ನಾಗೇಶ್ ಉಡುಪ ದಂಪತಿಗಳ ಪುತ್ರಿಯಾಗಿದ್ದು, ಮುಂದೆ ಏರೋಸ್ಪೆಸ್ ಇಂಜಿನಿಯರ್ ಆಗುವ ಬಯಕೆ ಹೊಂದಿದ್ದಾಳೆ. .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸ್ತುತಿ ತೋಳಾರ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ರಲ್ಲಿ 619 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣಳಾಗಿದ್ದಾಳೆ. ಈಕೆ ತಾಲೂಕಿನ ಕನ್ಯಾನ ಗ್ರಾಮದ ಕಬ್ಬೈಲು ನಿವಾಸಿ ಸುರೇಶ್ ತೋಳಾರ್ ಹಾಗೂ ಜ್ಯೋತಿ ಎಸ್. ತೋಳಾರ್ ದಂಪತಿಗಳ ಪುತ್ರಿಯಾಗಿದ್ದಾಳೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: 29ರಿಂದ ನಾಲ್ಕು ದಿನ ನಡೆಯಲಿರುವ ಬೈಂದೂರು ತಾಲ್ಲೂಕು ಉಳ್ಳೂರಿನ ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರಷ್ಟಬಂಧ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಕ್ಕೆ ಎಲ್ಲ ಸಿದ್ಧತೆಗಳು ಮುಗಿದಿದ್ದು, ಸೋಮವಾರ ಆರಂಭಿಕ ವಿಧಿಗಳನ್ನು ನಡೆಸಲಾಗಿದೆ. 1ರಂದು ಪುನರಷ್ಟಬಂಧ, 2ರಂದು ಬ್ರಹ್ಮಕಲಶೋತ್ಸವ ನಡೆಯುವುದು ಎಂದು ದೇವಸ್ಥಾನದ ಆಡಳಿತ ಧರ್ಮದರ್ಶಿ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ದೇವಾಲಯ ಇರುವ ಸ್ಥಳವನ್ನು ಮುನಿಕಟ್ಟೆ ಎಂದು ಕರೆಯಲಾಗುತ್ತಿತ್ತು. ಮುನಿ ತಪಸ್ಸು ಆಚರಿಸಿ, ದುರ್ಗಾಪರಮೇಶ್ವರಿಯನ್ನು ಒಲಿಸಿಕೊಂಡು ಅವಳು ಇಲ್ಲಿ ನೆಲೆ ನಿಲ್ಲುವಂತೆ ಮಾಡಿದರು ಎಂಬ ಹಿನ್ನೆಲೆಯ ಈ ಕ್ಷೇತ್ರವನ್ನು ಪರಿಸರದ ಜನರು ನೂರಾರು ವರ್ಷಗಳಿಂದ ಆರಾಧಿಸಿಕೊಂಡು ಬಂದಿರುವರು. ಕೆಂಪು ಕಲ್ಲಿನ ಗುಹೆಯಂತಹ ಈ ಶ್ರದ್ಧಾಕೇಂದ್ರವನ್ನು ವೈ. ಚಂದ್ರಶೇಖರ ಶೆಟ್ಟಿ ಅವರ ನೇತೃತ್ವದಲ್ಲಿ ೧೨ ವರ್ಷಗಳ ಹಿಂದೆ ಶಿಲಾಮಯ ದೇಗುಲವಾಗಿ ರೂಪಿಸಲಾಯಿತು. ಆ ಹಿನ್ನೆಲೆಯಲ್ಲಿ ಈಗ ಪುನರಷ್ಟಬಂಧ, ಬ್ರಹ್ಮಕಲಶೋತ್ಸವದ ಜತೆಗೆ ಶ್ರೀ ಗಣಪತಿ, ಶಾಸ್ತಾ, ನಾಗದೇವರ ಪ್ರತಿಷ್ಠೆ, ಸುತ್ತು ಪೌಳಿ,…

Read More

ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ತಾಲೂಕಿನ ಕಂಬದಕೋಣೆ ಗೋವಿಂದ ದೇವಸ್ಥಾನದ ಬಳಿ ಶನಿವಾರ ತಡರಾತ್ರಿ ಬೆಂಕಿಗೆ ತುತ್ತಾಗಿದ್ದ ಮಂಗಳಾ ಎಕ್ಸ್‌ಪ್ರೆಸ್ ರೈಲಿನ ಎಸಿ ಬೋಗಿಯಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ, ದೊಡ್ಡ ಬೆಂಕಿ ಅವಘಡವನ್ನು ತಪ್ಪಿಸುವಲ್ಲಿ ಸ್ಥಳೀಯ ಯುವಕರ ಸಮಯ ಪ್ರಜ್ಞೆ ಮತ್ತು ಕಾರ್ಯತತ್ಪರತೆಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿದೆ. ಕೊಂಕಣ್ ರೈಲ್ವೆ ವಿಭಾಗದಲ್ಲಿ ಮೊದಲ ಭಾರಿಗೆ ಆದ ರೈಲು ಬೆಂಕಿ ಅವಘಡದ ಬಗ್ಗೆ ತಡರಾತ್ರಿಯಲ್ಲಿ ಹರಸಾಹಸಪಟ್ಟು ಬೆಂಕಿ ನಂದಿಸಲು ಶ್ರಮಿಸಿದ್ದ ಯುವಕರ ತಂಡವನ್ನು ಕುಂದಾಪ್ರ ಡಾಟ್ ಕಾಂ ಸಂಪಾದಕರು ಸಂದರ್ಶಿಸಿದ್ದು, ಅವರು ತಡರಾತ್ರಿ ಘಟನೆಯ ವೇಳೆ ಬೆಂಕಿ ನಂದಿಸಿದ ಬಗೆಯನ್ನು ನಿಧಾನವಾಗಿ ಬಿಚ್ಚಿಟ್ಟರು. ಘಟನೆಯ ಬಗ್ಗೆ ಯುವಕರು ವಿವರಿಸಿದ್ದು ಹೀಗೆ: ರಾತ್ರಿ 1:15ರ ಹೊತ್ತಿಗೆ ಒಮ್ಮೆಲೇ ಜನರ ಕೂಗಾಟ ಕೇಳಿಸಿತು. ಅದರ ಬೆನ್ನಲ್ಲೇ ಮನೆಗಳ ದನಕರುಗಳು ಕೂಗಿಕೊಂಡುವು. ಎಚ್ಚರಗೊಂಡ ನಿವಾಸಿಗಳಿಗೆ ರೈಲಿನ ಒಂದು ಬೋಗಿಯ ಭಾಗ ಹೊತ್ತಿ ಉರಿಯುತ್ತಿರುವುದು ಗೋಚರಿಸಿತು. ಇಕ್ಕಡೆಯ ಎರಡೂ ಬಾಗಿಲುಗಳಿಂದ ಬೆಂಕಿ ಹೊರಸೂಸುತ್ತಿತ್ತು. ಸುತ್ತಲಿನ ಹದಿನೈದೂ ಮನೆಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಸ್ವಯಂಪ್ರೇರಿತ ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಿದ ಪುಣ್ಯ ದೊರಕುತ್ತದೆ. ಸ್ವಯಂಪ್ರೇರಿತ ರಕ್ತದಾನ ಮಾಡುವುದರಿಂದ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆ ಬಾರದಂತೆ ಮಾಡಬಹುದು ಎಂದು ಕುಂದಾಪುರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಚೇರ್‌ಮೆನ್ ಎಸ್. ಜಯಕರ ಶೆಟ್ಟಿ ಹೇಳಿದರು. ಶ್ರೀ ಇಂದುಧರ ಯುವಕ ಮಂಡಲ ಗಂಗೊಳ್ಳಿ, ಯಕ್ಷಾಭಿಮಾನಿ ಬಳಗ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಕ್ತನಿಧಿ ಕೇಂದ್ರ ಕುಂದಾಪುರ ಇವರ ಸಹಯೋಗದೊಂದಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಜರಗಿದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಗಂಗೊಳ್ಳಿಯ ಮತ್ಸ್ಯೋದ್ಯಮಿ ಮಂಜುನಾಥ ಜಿ.ಟಿ. ಶಿಬಿರ ಉದ್ಘಾಟಿಸಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸದಸ್ಯ ಗಣೇಶ ಆಚಾರ್ಯ, ಗಂಗೊಳ್ಳಿ ಗ್ರಾಪಂ ಸದಸ್ಯರಾದ ಬಿ.ಗಣೇಶ ಶೆಣೈ, ಮಹಮ್ಮದ್ ತಬ್ರೇಜ್, ರಕ್ತದಾನಿ ಗುರುಚರಣ್ ಖಾರ್ವಿ, ಗಂಗೊಳ್ಳಿ ಶಾಹಿ ಮಸೀದಿ ಅಧ್ಯಕ್ಷ ಮಹಮ್ಮದ್ ಅಫ್ಜಲ್, ಯಕ್ಷಾಭಿಮಾನಿ ಬಳಗದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆಧುನಿಕ ಯುಗದಲ್ಲಿ ಎಲ್ಲರೂ ಧಾವಂತದಲ್ಲಿದ್ದಾರೆ. ಪರಿಶ್ರಮದಿಂದ ಕೆಲಸ ಮಾಡುವ ಮನೋಭಾವ ಕಡಿಮೆ ಆಗುತ್ತಿದೆ. ಮಾಡುವ ಕೆಲಸದಲ್ಲಿ ಶ್ರದ್ಧೆ ವಹಿಸಿದರೆ ಬದುಕಿನಲ್ಲಿ ಯಶಸ್ಸು ಅರಸಿಕೊಂಡು ಬರುತ್ತದೆ ಎಂದು ನಟ, ನಿರ್ದೇಶಕ ರಘು ಪಾಂಡೇಶ್ವರ ಹೇಳಿದರು. ಅವರು ಭಾನುವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ನಡೆದ ಡಾ| ಬಿ. ಆರ್. ಅಂಬೇಡ್ಕರ್ ಸಂಘದ ಬೆಳ್ಳಿಹಬ್ಬ ಸಮಾರಂಭದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ ಎಲ್ಲರ ಬದುಕಿನಲ್ಲಿಯೂ ಉತ್ತಮ ಸಮಯ, ಅವಕಾಶಗಳು ಬಂದೆ ಬರುತ್ತದೆ. ಆದರೆ ಅದನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲರಾದರೆ ಮತ್ತೆ ಅದು ಸಿಗಲಾರದು. ಅವಕಾಶದೊಂದಿಗೆ ಪರಿಶ್ರಮವಿದ್ದರೆ ಗೆಲುವಿನ ದಾರಿ ಸುಲಭವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ ಬೈಂದೂರು ಚಂದ್ರಶೇಖರ ನಾವಡ ಮಾತನಾಡಿ ಉತ್ತಮ ಶಿಕ್ಷಣ, ಪರಿಶ್ರಮದ ಜೊತೆಗೆ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದಲಿತ ಸಮುದಾಯ ಆತ್ಮವಿಶ್ವಾಸದಿಂದ ಸಮಾಜದ ಮುಖ್ಯವಾಹಿನಿಯೊಂದಿಗೆ ಬೆರೆಯಬಹುದು. ಈ ನಿಟ್ಟಿನಲ್ಲಿ ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಶಿಸ್ತುಬದ್ಧ ಜೀವನ ಕ್ರಮ ಅಳವಡಿಸಿಕೊಳ್ಳಲು ಮಾರ್ಗದರ್ಶನ ಮಾಡಬೇಕಿದೆ ಎಂದರು.…

Read More