ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಸುಜಾತ ಸದಾರಾಮ ಅವರ ಚೊಚ್ಚಲ ಕವನ ಸಂಕಲನ ’ಬಣ್ಣದ ಕುಡಿಕೆ’ಯನ್ನು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲದ ಆಡಳಿತಾಧಿಕಾರಿಯೂ ಹಾಗೂ ಶ್ರೀಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ, ಹಟ್ಟಿಯಂಗಡಿಯ ಉಪಾಧ್ಯಕ್ಷರೂ ಆದ ಡಾ. ಹೆಚ್. ಶಾಂತಾರಾಮ್ ಲೋಕಾರ್ಪಣೆ ಗೊಳಿಸಿದರು. ಬದುಕಿನ ಘಟ್ಟಿ ಅನುಭವದ ವಿವಿಧ ವಸ್ತು-ವಿಷಯಗಳನ್ನು ಆಯ್ದುಕೊಂಡು ರಚಿಸಲಾಗಿರುವ ಈ ಕವನ ಸಂಕಲನವು ವಿಭಿನ್ನ ಶೈಲಿಯ ಐವತ್ತೈದು ಕವನಗಳನ್ನು ಒಳಗೊಂಡಿದ್ದು ಇಂತಹ ಇನ್ನಷ್ಟು ಕೃತಿಗಳು ಅವರಿಂದ ಹೊರ ಬರಲಿ ಎಂದು ಗಣ್ಯರು ಶುಭ ಹಾರೈಸಿದರು. ಪಾಲಕ-ಪೋಷಕರಲ್ಲಿ ಮಕ್ಕಳು ಸಾಹಿತ್ಯದ ಕುರಿತು ಒಲವನ್ನು ಬೆಳೆಸಿಕೊಂಡು ಪುಸ್ತಕ ಪ್ರೇಮಿಗಳಾಗುವಂತೆ ಪ್ರೇರೇಪಿಸಲು, ಆ ಮೂಲಕ ವಿವಿಧ ಲೇಖಕರ ಅನುಭವದ ಸಿರಿಯನ್ನು ಪಡೆಯಲು ನೆರವಾಗುವಂತೆ ವಿನಂತಿಸಿದರು. ಈ ಕೃತಿಯಲ್ಲಿನ ’ಬೆಂಕಿಯಲ್ಲಿ ಅರಳಿದ ಹಾಡು’ ಎಂಬ ಕವನ ಒಂದನ್ನು ಕೃತಿಕಾರರು ವಾಚಿಸಿದರು. ಸಭೆಯ ಅಧ್ಯಕ್ಷತೆಯನ್ನು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಯು.ಕೆ.ಜಿ. ಮಕ್ಕಳ ಪದವಿ ಪ್ರದಾನ ಸಮಾರಂಭ ಗುರುವಾರ ಜರುಗಿತು. ಕುಂದಾಪುರದ ಅಮೃತೇಶ್ವರಿ ಆಸ್ಪತ್ರೆಯ ಆಯುರ್ವೇದಿಕ್ ವೈದ್ಯೆ ಸೋನಿ ಪುಟಾಣಿಗಳಿಗೆ ಪದವಿ ಪ್ರದಾನ ಮಾಡಿ ಶುಭ ಹಾರೈಸಿದರು ಬಳಿಕ ಮಾತನಾಡಿದ ಅವರು ನಾವು ಶಾಲೆಗೆ ಹೋಗುವಾಗ ಈ ರೀತಿಯ ಅವಕಾಶ ಇರಲಿಲ್ಲ ಆದರೆ ಪುಟಾಣಿಗಳಿಗೆ ಇಂತಹ ಒಂದು ಅವಕಾಶ ಈ ಶಾಲೆ ಮಾಡುತ್ತಿರುವುದು ನಿಜಕ್ಕೂ ಅವಿಸ್ಮರಣೀಯ ಎಂದರು. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಹೇಗೆ ನಾಲ್ಕು ಹಂತಗಳು ಇರುತ್ತದೆಯೋ ಹಾಗೆ ಮಕ್ಕಳಿಗೆ ದೇವರಲ್ಲಿ ಭಕ್ತಿ, ಗುರುಹಿರಿಯರಲ್ಲಿ ಗೌರವ, ಶಿಸ್ತು ಮತ್ತು ವಿದ್ಯೆ ಎಂಬ ಈ ನಾಲ್ಕು ಅಂಶಗಳನ್ನು ಸರಿಯಾದ ಸಮಯದಲ್ಲಿ ಸೂಕ್ತ ಮಾರ್ಗದರ್ಶನದಲ್ಲಿ ನೀಡಿದಾಗ ಅವರು ಮುಂದೆ ಉತ್ತಮ ಪ್ರಜೆಗಳಾಗಿ ಯಶಸ್ವಿ ಜೀವನವನ್ನು ನಡೆಸಲು ಸಹಕಾರಿಯಾಗುತ್ತದೆ. ಕೇವಲ ಮಕ್ಕಳನ್ನು ಶಾಲೆಗೆ ಕಳುಹಿಸಿದ ತಕ್ಷಣ ಪೋಷಕರ ಜವಾಬ್ಧಾರಿ ಮುಗಿಯುವುದಿಲ್ಲ. ಮಕ್ಕಳ ಅರ್ಧ ಜವಾಬ್ಧಾರಿಯ ಹೊಣೆಯನ್ನು ನೀವು ವಹಿಸಿದಾಗ ಉಳಿದರ್ಧ ಹೊಣೆಯನ್ನು ಶಿಕ್ಷಕರು ಹೊತ್ತಾಗ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಇಂದು ಶಂಕರನಾರಾಯಣದ ಕ್ಯಾನ್ಸರ್ ಪೀಡಿತ ಪಾರ್ವತಿ ದೇವಾಡಿಗರ ಮನೆಗೆ ತೆರಳಿ ರೂ ೧೭೦೦೦/ ರೂ ವೈದ್ಯಕೀಯ ನೆರವು ನೀಡಿದರು. ಈ ಸಂಧರ್ಭದಲ್ಲಿ ಸೇವಾದಾರರಾದ ಡಾ ಮಧುಕರ್ ದೇವಾಡಿಗ ಸೌದಿ ಅರೇಬಿಯಾ, ಉಮಾವತಿ ದೇವಾಡಿಗ, ಶಂಕರ್ ದೇವಾಡಿಗ ಅಂಕದಕಟ್ಟೆ, ಪುರುಷೋತ್ತಮದಾಸ್ ನಾಗರಾಜ್ ರಾಯಪ್ಪನಮಠ, ದಿನೇಶ್ ದೇವಾಡಿಗ, ಸತೀಶ್ ದೇವಾಡಿಗ, ಪ್ರವೀಣ್ ದೇವಾಡಿಗ, ಸುರೇಶ್ ದೇವಾಡಿಗ, ಶೇಖರ್ ದೇವಾಡಿಗ, ಮಹಾಲಿಂಗ ದೇವಾಡಿಗ, ಅಭಿಷೇಕ ದೇವಾಡಿಗ, ನಾಗೇಂದ್ರ ದೇವಾಡಿಗ, ಮದುಕರ್ ದೇವಾಡಿಗ, ರಾಜ್ ದೇವಾಡಿಗ, ಜಗದೀಶ್ ದೇವಾಡಿಗ, ರಾಮಚಂದ್ರ ದೇವಾಡಿಗ ಮೊದಲಾವರು ಉಪಸ್ಥಿತರಿದ್ದರು
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡಬಿದಿರೆ: ನಮ್ಮ ಸಂಸ್ಕೃತಿ ನಮಗೆ ಅರ್ಥವಾಗಬೇಕಾದರೆ ನಮ್ಮ ಭಾಷೆಯಲ್ಲಿ ನೆಲೆನಿಲ್ಲಬೇಕು. ಆಗ ಮಾತ್ರ ನಮ್ಮ ಪರಂಪರೆ ಸಂಸ್ಕೃತಿಯನ್ನು ನಾವು ಆಳವಾಗಿ ತಿಳಿದುಕೊಳ್ಳಲು ಸಾಧ್ಯ ಎಂದು ನಟಿ ಪದ್ಮಶ್ರೀ ಪುರಸ್ಕೃತೆ ಬಿ. ಜಯಶ್ರೀ ಹೇಳಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಿಜಾರು ಎಐಇಟಿ ಆವರಣದಲ್ಲಿ ನಡೆದ ಟ್ರಡಿಶ್‌ನಲ್ ಡೇ-೨೦೧೯’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ವೈವಿಧ್ಯತೆಯನ್ನು ನಾವು ಈ ಕಾಲೇಜಿನಲ್ಲಿ ಜೀವಂತವಾಗಿ ನೋಡಬಹುದು. ಈ ರೀತಿ ವಿವಿಧ ಸಂಸ್ಕೃತಿಗಳ ಆನಾವರಣದಿಂದ ಸಂಸ್ಕೃತಿ ಮತ್ತು ಪರಂಪರೆಯ ಕೊಡುಕೊಳ್ಳುವಿಕೆಯಾಗಿ ನಮ್ಮ ಭವ್ಯ ಪರಂಪರೆ ನೂರ್ಕಾಲ ಮುಂದುವರೆಯಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಮಾತನಾಡಿ ನಮ್ಮ ಪೂರ್ವಜರು ನಮಗೆ ನೀಡಿರುವ ಸಂಸ್ಕೃತಿಯನ್ನು ನಾವು ಜಾಗರೂಕತೆಯಿಂದ ಮುದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಮೂಲ ಕರ್ತವ್ಯ ಎಂದು ಹೇಳಿದರು. ಯುವಜನತೆ ಮೂಡನಂಬಿಕೆ ಮತ್ತು ನಂಬಿಕೆಯ ನಡುವೆ ಇರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು.…
ಘಟನೆಯಲ್ಲಿ ಪತಿ ಸಾವು, ಪತ್ನಿಗೆ ಗಂಭೀರ ಗಾಯ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪೂರ್ವ ಜರ್ಮನಿಯ ಮ್ಯೂನಿಚ್ ನಗರದಲ್ಲಿ ನಡೆದ ಗಲಾಟೆಯೊಂದರಲ್ಲಿ ವಿದೇಶಿಗನೋರ್ವನಿಂದ ಕುಂದಾಪುರ ಮೂಲದ ದಂಪತಿಗಳಾದ ಪ್ರಶಾಂತ್ ಬಸ್ರೂರು (47) ಹಾಗೂ ಸ್ಮಿತಾ ಬಸ್ರೂರು ಇರಿತಕ್ಕೊಳಗಾಗಿದ್ದು, ಘಟನೆಯಲ್ಲಿ ಪ್ರಶಾಂತ್ ಬಸ್ರೂರು ದಾರುಣವಾಗಿ ಮೃತಪಟ್ಟಿದ್ದಾರೆ. ಅವರ ಪತ್ನಿ ಸ್ಮಿತಾ ಬಸ್ರೂರು ಅವರಿಗೂ ಗಂಭೀರ ಹಲ್ಲೆಯಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಶಾಂತ್ ಹಾಗೂ ಸ್ಮಿತಾ ದಂಪತಿಗಳು ಜರ್ಮನಿಯ ಹಂಬರ್ಗ್ ನಗರದಲ್ಲಿ ವಾಸಿಸುತ್ತಿದ್ದು ಅಲ್ಲಿನ ಪೌರತ್ವ ಪಡೆದಿದ್ದರು. ಸ್ಮಿತಾ ಸಿದ್ಧಾಪುರದ ಡಾ. ಚಂದ್ರಮೌಳಿ ಎಂಬುವವರ ಪುತ್ರಿಯಾಗಿದ್ದು, ಮದುವೆಯ ಬಳಿಕ ಪತಿಯೊಂದಿಗೆ ಹಂಬರ್ಗ್ ನಗರದಲ್ಲಿ ವಾಸಿಸುತ್ತಿದ್ದರು. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಶಾಂತ್ ಶಿವಮೊಗ್ಗ ಜಿಲ್ಲೆಯ ಹೊಸನಗರದವರಾಗಿದ್ದು, ಹತ್ತು ವರ್ಷದ ಹಿಂದೆ ಕುಂದಾಪುರದಲ್ಲಿ ಮನೆ ಖರೀದಿಸಿದ್ದರು. ಅವರ ತಾಯಿ ಕುಂದಾಪುರದಲ್ಲಿ ನೆಲೆಸಿದ್ದರು. ಸಹೋದರ ಪ್ರಭಾತ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು ಎನ್ನಲಾಗಿದೆ. ಮುಂದಿನ ತಿಂಗಳು ೯ರಂದು ಅವರು ತಮ್ಮ ಹುಟ್ಟೂರಿಗೆ ಬರುವವರಿದ್ದು ಈ ನಡುವೆ ಪ್ರಶಾಂತ್ ಅವರ ತಾಯಿಯನ್ನು ಜಪಾನಿಗೆ ಕರೆದುಕೊಂಡು…
ಕುಂದಾಪ್ರ ಡಾಟ್ ಕಾಂ ಸುದ್ದಿ. ದಿ ಕನ್ಸರ‍್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ (ನಮ್ಮಭೂಮಿ) ಹಾಗೂ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮಲ್ಪೆ ಬಂದರಿನಲ್ಲಿ ಮೀನುಗಾರರೊಂದಿಗೆ ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ ಎನ್ನುವ ಮತದಾರರ ಸ್ವಾಭಿಮಾನಿ ಆಂದೋಲನ ನಡೆಯಿತು. ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ, ನನ್ನ ಮತ – ನನ್ನ ಹಕ್ಕು ಮುಂತಾದ ಸ್ಟಿಕ್ಕರ್‌ಗಳನ್ನು, ಬ್ಯಾಡ್ಜ್‌ಗಳನ್ನು ಹಾಗೂ ಮತದಾನದ ಮಹತ್ವವನ್ನು ಸಾರುವ ಪೋಸ್ಟರ್‌ಗಳೊಂದಿಗೆ ಮೀನುಗಾರರನ್ನು ಭೇಟಿಯಾಗಿ ಅವರೊಂದಿಗೆ ಮತದಾನದ ಪಾವಿತ್ರ್ಯತೆ, ಅದರ ಮಹತ್ವ ಹಾಗೂ ಮತದಾನ ಹೇಗಿರಬೇಕು ಎನ್ನುವ ವಿಷಯದ ಕುರಿತು ಮಾತುಕತೆ ನಡೆಸಿದರು. ಸುಮಾರು 400ಕ್ಕೂ ಹೆಚ್ಚು ಮೀನುಗಾರರು ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ ಎನ್ನುವ ಬ್ಯಾಡ್ಜ್‌ಗಳನ್ನು ಪಡೆದು ಹೆಮ್ಮೆಯಿಂದ ಧರಿಸಿ, ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ ಎಂದರು. ನಮ್ಮ ವಾಹನ ಬೇರೆ ಬೇರೆ ಕಡೆ ಹೋಗುತ್ತಿರುತ್ತದೆ, ಉಳಿದವರಿಗೂ ಇದರ ಬಗ್ಗೆ ಮಾಹಿತಿ ಹಂಚುತ್ತೇವೆ ಎಂದು 100ಕ್ಕೂ ಹೆಚ್ಚು…
ಚುನಾವಣಾ ಬಹಿಷ್ಕಾರ ಮುಂದಾದ ಜನ. ಮನವೊಲಿಸಿದ ಪೌರಾಡಳಿತ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಗರದ ನಾಲ್ಕೈದು ಕುಟುಂಬಗಳು ಕಳೆದ ಕೆಲವಾರು ವರ್ಷದಿಂದ ತ್ಯಾಜ್ಯದ ಕೊಂಪೆ, ವಿಪರೀತ ವಾಸನೆಯಿಂದ ಬಾಯಿಗೆ ತುತ್ತು ಇಡೋದಕ್ಕೆ ಆಗದ ಸ್ಥಿತಿಯಲ್ಲಿ ಬದುಕುತ್ತಿತ್ತು. ಮನೆಯ ಪಕ್ಕದ ರಜಾಕಾಲುವೆ ಮೇಲೊಂದು ಸ್ಲ್ಯಾಬ್ ಹಾಕಿಸಿ, ಮನೆಯ ಮುಂದೆ ನಿಲ್ಲುವ ಕೊಳಚೆ ನೀರಿಗೆ ಶಾಶ್ವತ ಪರಿಹಾರ ನೀಡಿ ಎಂಬ ಅಹವಾಲಿಗೆ ಕ್ಯಾರೆ ಎನ್ನದ ಆಡಳಿತದ ವಿರುದ್ಧ ಆಕ್ರೋಶಗೊಂಡ ಕುಟುಂಬಗಳು ತಮ್ಮ ಬೇಡಿಕೆಗೆ ಆಗ್ರಹಿಸಿ ಚುನವಾಣೆ ಬಹಿಷ್ಕಾರಕ್ಕೆ ಮುಂದಾದ ಘಟನೆ ನಡೆದಿದೆ. ಕೊನೆಗೂ ಕುಂದಾಪುರ ಪುರಸಭೆಯ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸದ್ಯದ ಮಟ್ಟಿಗೆ ಸುಖಾಂತ್ಯ ಕಂಡಿದೆ. ಕುಂದಾಪುರ ಮದ್ದುಗುಡ್ಡೆ ನಾಲ್ಕೇ ವಾರ್ಡ್‌ನಲ್ಲಿ ಐದು ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬ ಒಂದಕ್ಕೊಂದು ತಾಗಿಕೊಂಡು ಮನೆಗಳಿವೆ. ಜೊತೆಗೆ ಒಂದು ದೈವಸ್ಥಾನವಿದೆ. ಇದರ ಹಿಂಭಾಗವೇ ರಾಜ ಕಾಲುವೆ ಹಾದು ಹೋಗಿದೆ. ಈ ಕಾಲುವೆಯಲ್ಲಿ ತ್ಯಾಜ್ಯಗಳು ನಿಂತು ಗಬ್ಬುವಾಸನೆ ಬೀರುತ್ತಿದೆ. ಸಾಕಷ್ಟು ವರ್ಷಗಳಿಂದ ಈ ವಾಸನೆ ಸಹಿಸಿಕೊಂಡು ಬದುಕುತ್ತಿದ್ದಾರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಸಾಧನ ಕಲಾಸಂಗಮ ಸಂಸ್ಥೆಯು ಕಲಾಸಕ್ತರ ಆಸಕ್ತಿಗಳಿಗನುಗುಣವಾಗಿ ಹೊಸತನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ವರ್ಷದ ಬೇಸಿಗೆಯಲ್ಲಿ ಹೊಸ ವಿಷಯಗಳೊಂದಿಗೆ ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸಬೇಕು ಎನ್ನುವ ಆಶಯದೊಂದಿಗೆ ಏಪ್ರಿಲ್ 1 ರಿಂದ ಮೇ4 ರವರೆಗೆ ನಾಲ್ಕು ಹಂತಗಳಲ್ಲಿ ವಿಶೇಷ ಸಾಧನ ಕಿಶೋರ ವಿಕಾಸ ಶಿಬಿರಗಳನ್ನು ಹಮ್ಮಿಕೊಂಡಿದೆ. ಮೊದಲ ಬಾರಿಗೆ ‘ರಂಗಾಂತರಂಗ’ ನಾಟಕ ತರಬೇತಿ ಶಿಬಿರವು ಹಮ್ಮಿಕೊಂಡಿದ್ದು, ಎಪ್ರಿಲ್ 1ರಿಂದ ಎಪ್ರಿಲ್ 9ರವರೆಗೆ 9 ದಿನಗಳ ಕಾಲ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 3ರ ವರೆಗೆ ಶಿಬಿರ ನಡೆಯಲಿದೆ. 9 ವರ್ಷದಿಂದ ಮೇಲ್ಪಟ್ಟ ಮಕ್ಕಳಿಗೆ ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದ್ದು, ಹಾಡು, ಹರಟೆ, ರಂಗದ ಒಳ ಮತ್ತು ಹೊರಗಣ ಮಾಹಿತಿ, ಸಂಭಾಷಣೆ, ನಿರೂಪಣೆಗಳ ಜೊತೆಗೆ ನಾಟಕ ಸಿದ್ಧಪಡಿಸಿ ಪ್ರದರ್ಶನ ನೀಡಲಾಗುತ್ತದೆ. ಗರಿಷ್ಟ 30 ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ರಂಗ ತಜ್ಞ ಸಂತೋಷ್ ಕುಮಾರ್ ನಾಯಕ್ ಪಟ್ಲ ಹಾಗೂ ಸಂಯೋಜಕಿಯಾಗಿ ಮಧುಸ್ಮಿತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಪ್ರೇರಣಾ ಯುವ ವೇದಿಕೆ (ರಿ) ನೈಕಂಬ್ಳಿ ಚಿತ್ತೂರು ಇದರ ನಾಲ್ಕನೇ ಅವಧಿಗೆ ಅಧ್ಯಕ್ಷರಾಗಿ ರಾಘವೇಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ . ಸಂಸ್ಥೆಯ ಉಪಾಧ್ಯಕ್ಷರಾಗಿ ಪ್ರತಾಪ ಶೆಟ್ಟಿ , ಖಜಾಂಚಿಯಾಗಿ ಅಣ್ಣಪ್ಪ ಶೆಟ್ಟಿ, ಕಾರ್ಯಕಾರಿ ಸಮಿತಿಯಲ್ಲಿ ಅಶೋಕ ಕೊಡ್ಲಾಡಿ, ಉದಯ ಆಚಾರ್ಯ , ಚಂದ್ರ ಶೆಟ್ಟಿ, ದಿನೇಶ ಶೆಟ್ಟಿ, ನಾಗೇಂದ್ರ ಆಚಾರ್ಯ, ಮಂಜುನಾಥ ಪೂಜಾರಿ, ಅಕ್ಷಯ ಕುಮಾರ್, ಸಂತೋಷ ಶೆಟ್ಟಿ, ಪ್ರಶಾಂತ ಶೆಟ್ಟಿ, ನೀಲ ಕುಮಾರ್ ಹಾಗೂ ಇನ್ನು ಅನೇಕರು ಕಾರ್ಯ ಕಾರಿಣಿಯಲ್ಲಿದ್ದಾರೆ ಎಂದು ಪ್ರೇರಣಾ ವೇದಿಕೆ ಸಂಸ್ಥಾಪಕ ಕಾರ್ಯದರ್ಶಿ ನಾಗರಾಜ್ ನೈಕಂಬ್ಳಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಭಾರತದ ವೀರನಿಧಿಗೆ (ಭಾರತ್ ಕೆ ವೀರ್ ಫಂಡ್) ರೂ ೪೬,೧೮೯ ದೇಣಿಗೆ ನೀಡುವ ಮೂಲಕ ದೇಶದ ಶೌರ್ಯಾಳುಗಳ ಅಪ್ರತಿಮ ತ್ಯಾಗವನ್ನು ಗೌರವಿಸಿದುದಕ್ಕಾಗಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಕೇಂದ್ರ ಗೃಹ ಸಚಿವಾಲಯ ಅಭಿನಂದಿಸಿದೆ. ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಂಭವಿಸಿದ ದೇಶದ ಸೈನಿಕರ ಬಲಿದಾನದಿಂದ ರಾಷ್ಟ್ರಭಕ್ತಿ ಪ್ರೇರಿತರಾದ ಕಾಲೇಜಿನ ವಿದ್ಯಾಥಿಗಳು ಕಾಲೇಜಿನಲ್ಲಿ ಆಹಾರೋತ್ಸವ ನಡೆಸುವ ಮೂಲಕ ಮತ್ತು ಊರಿನ ವಾರದ ಸಂತೆಯಲ್ಲಿ ವಿವಿಧ ಖಾದ್ಯ ಸಾಮಗ್ರಿಗಳನ್ನು ಮಾರುವ ಮೂಲಕ ಗಳಿಸಿದ ಲಾಭವನ್ನು ಸೈನಿಕರ ನಿಧಿಗೆ ಕಳುಹಿಸಿಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಗೃಹ ಮಂತ್ರಾಲಯ ತನ್ನೆಲ್ಲ ಸಶಸ್ತ್ರಬಲ ಕುಟುಂಬದ ಪರವಾಗಿ ೨೧ರಂದು ನೀಡಿದ ದೃಢೀಕರಣ ಪತ್ರದಲ್ಲಿ ಕಾಲೇಜಿನ ಈ ಕೊಡುಗೆಯನ್ನು ಪ್ರಶಂಸಿಸಿದೆ.
