ಕುಂದಾಪ್ರ ಡಾಟ್ ಕಾಂ ಸುದ್ದಿ. ದೋಹಾ, ಕತಾರ್: ಫೆ.18ರ ಸಂಜೆ 7 ಘಂಟೆಗೆ ಟಿ.ಸಿ.ಎ (ಸೃಜನ ಕಲೆ) ಆವರಣದಲ್ಲಿ ಸುಮಾರು ೫೦ ಜನರು ಸೇರಿ, ಭಾರತದಲ್ಲಿ ನಡೆದ ಘೋರ ಕೃತ್ಯದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶ್ರದ್ದಾಂಜಲಿ ಸಮರ್ಪಿಸಿದರು. ೪೦ ಸಿ.ಆರ್.ಪಿ.ಎಫ಼್ ಸೈನಿಕರ ಭಾವಚಿತ್ರದ ಎದುರು ನೆರೆದವರೆಲ್ಲರೂ ಒಬ್ಬೊಬ್ಬರಾಗಿ ಬಂದು ದೀಪ ಹತ್ತಿಸಿ, ವೀರ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು. ಈ ಕಾರ್ಯಕ್ರಮವನ್ನು ’ಗಂಧದ ಗುಡಿ’ ಎಂಬುವ ಕನ್ನಡಿಗರ ಬಳಬಳಗ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ನೇತೃತ್ವದಲ್ಲಿ ಅಯೋಜಿಸಿತ್ತು. ನೆರೆದವರಲ್ಲಿ ಕೆಲವರು ನಡೆದ ಘಟನೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಸೂರ್ಯದೇವರಿಂದ ಕರ್ಣನಿಗೆ ದೊರೆತ ಕವಚದಂತೆ ಸೈನಿಕರು ನಮ್ಮ ಭಾರತ ದೇಶ ಕವಚವಿದ್ದಂತೆ, ಉಗ್ರಗಾಮಿಗಳ ಇಂತಹ ದುಷ್ಕೃತ್ಯ ದೇಶದ ಕವಚಕ್ಕೆ ಆಘಾತವಾದಂತೆ. ಸೈನಿಕರು ನಮ್ಮ ದೇಶವನ್ನು ಕಾಪಾಡುತ್ತಿರುವರು ಎಂಬ ನಂಬಿಕೆಯಿಂದ ಎಲ್ಲರೂ ಸಕುಟುಂಬ ಸಮೇತ ಶಾಂತಿ-ನೆಮ್ಮದಿಯಿಂದ ಮಲಗಲು ಸಾಧ್ಯ. ಇಂತಹ ಭೀಕರ ಅಮಾನವೀಯ ಘಟನೆಗಳು ನಮ್ಮ ಜೀವನದಲ್ಲೆ ಮರೆಯಲಾಗದ ಗಾಯವನ್ನುಂಟು ಮಾಡುತ್ತದೆ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಂಬದಕೋಣೆಯ ಸಂವೇದನಾ ಪದವಿ ಕಾಲೇಜಿನಲ್ಲಿ ಮಾ ೨ರಂದು ನಡೆಯುವ ಬೈಂದೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಅವರನ್ನು ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮಂಗಳವಾರ ಅವರ ಮನೆಗೆ ತೆರಳಿ ಸಮ್ಮೇಳನಕ್ಕೆ ಆಮಂತ್ರಿಸಿದರು. ಆ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಾಹಿತ್ಯವೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಹಿರಿಯರಾದ ಅವರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅದರಿಂದ ಹೊಸ ತಾಲ್ಲೂಕಿನ ಪ್ರಥಮ ಸಮ್ಮೇಳನಕ್ಕೆ ವಿಶೇಷ ಅರ್ಥ ಬರುತ್ತದೆ. ಸಮ್ಮೇಳನದ ಸಿದ್ಧತೆಗಳು ನಡೆಯುತ್ತಿದ್ದು ತಾಲ್ಲೂಕಿನ ಪದಾಧಿಕಾರಿಗಳು, ಸ್ಥಳೀಯ ಸಂಘಟನೆಗಳು ಸೇರಿ ಅದನ್ನು ಯಶಸ್ವಿಯಾಗಿ ನಡೆಸಲು ಮುಂದಾಗಿದ್ದಾರೆ ಎಂದರು. ತಾಲ್ಲೂಕು ಪರಿಷತ್ತಿನ ಅಧ್ಯಕ್ಷ ಎಚ್, ರವೀಂದ್ರ, ಜಿಲ್ಲಾ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಸುಬ್ರಹ್ಮಣ್ಯ ಭಟ್, ತಾಲ್ಲೂಕು ಗೌರವ ಕಾರ್ಯದರ್ಶಿಗಳಾದ ಪ್ರಕಾಶ ಹೆಬ್ಬಾರ್, ಗಣಪತಿ ಹೋಬಳಿದಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಪುಂಡಲೀಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಅರಾಟೆ ಸೇತುವೆ ರಾ.ಹೆ-66ರಲ್ಲಿ ಅಪರಿಚಿತ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದು ಎಳೆದೊಯ್ದ ಪರಿಣಾಮ ಬೈಕ್ ಸವಾರ ಚಿಂದಿಯಾಗಿ ಸಾವನ್ನಪ್ಪಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಸಾವನ್ನಪ್ಪಿದ ಬೈಕ್ ಸವಾರನನ್ನು ಗಂಗೊಳ್ಳಿ ಸಮೀಪದ ಬಾವಿಕಟ್ಟೆ ನಿವಾಸಿ ಗಣೇಶ್ ಎಂಬವರ ಪುತ್ರ ವಿಖ್ಯಾತ್ (24) ಎಂದು ಗುರುತಿಸಲಾಗಿದೆ. ತಡ ರಾತ್ರಿ ಹೈವೇ ಪೆಟ್ರೋಲ್ ವಾಹನ ಸಂಚಾರದ ಸಂದರ್ಭ ಅನಾಥವಾಗಿ ಚಿಂದಿಯಾದ ಸ್ಥಿತಿಯಲ್ಲಿ ವಿಖ್ಯಾತ್ ದೇಹ ಹಾಗೂ ಬೈಕ್ ಬಿದ್ದಿರುವುದು ಪತ್ತೆಯಾಗಿದ್ದು, ಛಿದ್ರಗೊಂಡಿದ್ದ ಮೃತದೇಹವನ್ನು ಕುಂದಾಫುರ ಸರ್ಕಾರೀ ಆಸ್ಪತ್ರೆಗೆ ಸಾಗಿಸಲಾಯಿತು. ಕುಂದಾಪುರದ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಖ್ಯಾತ್ ಸೋಮವಾರ ರಾತ್ರಿ ಕೆಲಸ ಮುಗಿಸಿ ತನ್ನ ಹೀರೋ ಬೈಕಿನಲ್ಲಿ ಮನೆ ಕಡೆಗೆ ಪ್ರಯಾಣಿಸುತ್ತಿದ್ದರು. ರಾತ್ರಿ ರಾ. ಹೆ-66ರಲ್ಲಿ ಅರಾಟೆ ಸೇತುವೆ ಮೇಲೆ ಬರುತ್ತಿದ್ದಾಗ ಭಟ್ಕಳ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಅಪರಿಚಿತ ಘನ ವಾಹನವೊಂದು ವಿಖ್ಯಾತ್ ಬೈಕಿಗೆ ಡಿಕ್ಕಿ ಹೊಡೆದಿದ್ದು, ವಿಖ್ಯಾತ್ ಧರಿಸಿದ್ದ ಹೆಲ್ಮೆಟ್ ಸೇತುವೆ ಮೇಲೆ ಬಿದ್ದಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರಾವಳಿ ವಾಯ್ಸ್ ಆಫ್ ಬೈಂದೂರು ಇವರ ಆಶ್ರಯದಲ್ಲಿ ಕರಾವಳಿ ವಾಯ್ಸ್ ಆಫ್ ಬೈಂದೂರು ಇದರ ಫಿನಾಲೆ ಸ್ಪರ್ಧೆ -2019 ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಿತು. ಹೋಟೆಲ್ ಅಂಬಿಕಾ ಇಂಟರ್ ನ್ಯಾಷನಲ್ ಆಡಳಿತ ನಿರ್ದೇಶಕ ಜಯಾನಂದ ಹೋಬಳಿದಾರ್ ಡ್ರಮ್ ಬಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತಿಭಾವಂತರಿಗೆ ಸೂಕ್ತ ವೇದಿಕೆ ದೊರೆತಾಗ ಉತ್ತಮ ಸಾಧನೆ ಮಾಡಲು ಸಾಧ್ಯ. ಪಟ್ಟಣ ಪ್ರದೇಶಗಳಲ್ಲಿ ಹಲವು ಅವಕಾಶಗಳಿರುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ ಕಾರ್ಯಕ್ರಮ ಆಯೋಜಿಸುವುದು ಕ್ಲಿಷ್ಟಕರವಾದ ಕೆಲಸ. ಪ್ರಪ್ರಥಮ ಬಾರಿಗೆ ಬಂದೂರಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಪ್ರತಿಭಾವಂತರು ರಾಜ್ಯಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದರು. ಮುಖ್ಯ ಅತಿಥಿಗಳಾಗಿ ಹಿನ್ನೆಲೆ ಗಾಯಕಿ ಅನನ್ಯ ಭಟ್, ಚಲನಚಿತ್ರ ನಿರ್ದೇಶಕ ಡಾ| ಸುರೇಶ್ ಚಿತ್ರಾಪು, ಬಹುಭಾಷ ಚಿತ್ರನಟ ಓಂಗುರು ಬಸ್ರೂರು, ಸಂಗೀತ ನಿರ್ದೇಶಕ ಉತ್ತಮ ಸಾರಂಗ್, ಉದ್ಯಮಿ ರಾಮ ಮೇಸ್ತ, ಶಿರೂರು ಗ್ರಾ.ಪಂ ಸದಸ್ಯರಾದ ರಘುರಾಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬಂದೂರು; ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಕರಾವಳಿ ವಾಯ್ಸ್ ಆಫ್ ಬಂದೂರು ಇದರ ಫಿನಾಲೆ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಲಿಷಾ ಕೊಕ್ಕರ್ಣೆ ಪ್ರಥಮ, ಗ್ರೀಷ್ಮಾ ಕಟೀಲು ದ್ವಿತೀಯ, ಧಾರಿಣಿ ಕೆ. ಎಸ್ ಕುಂದಾಪುರ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹಿನ್ನೆಲೆ ಗಾಯಕಿ ಅನನ್ಯ ಭಟ್, ಚಲನಚಿತ್ರ ನಿರ್ದೇಶಕ ಡಾ| ಸುರೇಶ್ ಚಿತ್ರಾಪು, ಬಹುಭಾಷ ಚಿತ್ರನಟ ಓಂಗುರು ಬಸ್ರೂರು, ಸಂಗೀತ ನಿರ್ದೇಶಕ ಉತ್ತಮ ಸಾರಂಗ್, ನಿರೂಪಕ ನಾಗರಾಜ ಭಟ್ಕಳ, ಸಾತ್ವಿಕ್ ಮೇಸ್ತ ದೊಂಬೆ ಮೊದಲಾದವರು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಮರವಂತೆಯ ಉಷಾ ಪೂಜಾರಿ ಅವರನ್ನು ಬೈಂದೂರು ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಪ್ರಧಾನ ಕಛೇರಿಯಲ್ಲಿ ಭಾನುವಾರ ಜರುಗಿದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ್ ಕಾರಂತ್ ಉಪ್ಪಿನಕುದ್ರು, ಸಹಕಾರ ಅಭಿವೃದ್ಧಿ ಅಧಿಕಾರಿ ಅರುಣಕುಮಾರ್ ಎಸ್.ವಿ., ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ವಿನಾಯಕ ರಾವ್, ನಿರ್ದೇಶಕ ಶಿವರಾಮ ಪೂಜಾರಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ನಾಗರಾಜ ಪಿ. ಯಡ್ತರೆ ಮೊದಲಾದವರು ಇದ್ದರು.
ಶ್ರೀನಗರ: ಜಮ್ಮು- ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿ ಬಳಿಕ ಸೈನಿಕರು ಭರ್ಜರಿಯಾಗಿ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ರಕ್ತ ರಕ್ಕಸ ಅಬ್ದುಲ್ ರಶೀದ್ ಘಾಸಿಯನ್ನು ಯೋಧರು ಇಂದು ಹತ್ಯೆ ಮಾಡಿದ್ದಾರೆ. ಅಬ್ದುಲ್ ರಶೀದ್ ಜೊತೆ ಜೈಷ್ ಸಂಘಟನೆಯ ಮತ್ತೋರ್ವ ಕಮಾಂಡರ್ ಕರಮ್ ನನ್ನು ಸಹ ಯೋಧರು ಹತ್ಯೆ ಮಾಡಿದ್ದಾರೆ. ಸುದೀರ್ಘ 9 ಗಂಟೆಗಳ ಗುಂಡಿನ ಚಕಮಕಿ ನಂತರ ಈ ಕಾರ್ಯಚರಣೆ ಯಶಸ್ವಿಯಾಗಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಪುಲ್ವಾಮಾ ಜಿಲ್ಲೆಯ ಪಿಂಗ್ಲಾನ್ ಪ್ರದೇಶದಲ್ಲಿ ಯೋಧರ ಹಾಗೂ ಉಗ್ರರ ನಡುವೆ ಅಹೋರಾತ್ರಿ ಭೀಕರ ಕಾಳಗ ನಡೆಯುತ್ತಿತ್ತು. 40 ಯೋಧರ ಬಲಿ ಪಡೆದ ಆದಿಲ್ ದಾರ್ ಗೆ ನೆರವು ನೀಡಿದ್ದ ಉಗ್ರರ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸೈನಿಕರು ಆ ಪ್ರದೇಶವನ್ನು ಸುತ್ತುವರಿದು ದಾಳಿ ನಡೆಸಿದಾಗ ಉಗ್ರರು ಪ್ರತಿ ದಾಳಿ ನಡೆಸಿದ್ದರು. ಈ ವೇಳೆ ಓರ್ವ ನಾಗರಿಕ ಸಹಿತ ನಾಲ್ವರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ತಾವು ಗವರ್ನರ್ ಆಗಿರುವ ಲಯನ್ಸ್ ಜಿಲ್ಲೆ ೩೧೭ಕ್ಕೆ ಸೇರಿದ ಉಡುಪಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಅತ್ಯಧಿಕ ನೂತನ ಕ್ಲಬ್ ಸ್ಥಾಪನೆಯ ಜತೆಗೆ ದಾಖಲೆ ಗಾತ್ರದ ಸಾಮಾಜಿಕ ಸೇವಾ ಕಾರ್ಯ ನಡೆಸಲಾಗಿದೆ ಎಂದು ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್ಗೆ ನೀಡಿದ ಅಧಿಕೃತ ಬೇಟಿ ಸಂದರ್ಭ ನಾಗೂರಿನ ಕುಸುಮಾ ಸಂಕೀರ್ಣದಲ್ಲಿ ಶನಿವಾರ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಮತನಾಡಿದರು. ಬ್ರಹ್ಮಗಿರಿ, ಬ್ರಹ್ಮಾವರ ಟೌನ್, ಉಡುಪಿ ನ್ಯೂಸಿಟಿ, ತಲ್ಲೂರು, ಶಂಕರನಾರಾಯಣದಲ್ಲಿ ನೂತನ ಲಯನ್ಸ್ ಕ್ಲಬ್, ಮಲ್ಪೆ, ಬ್ರಹ್ಮಗಿರಿ, ಕುಂದಾಪುರ ಸಿಟಿ ಸೆಂಟರ್, ಉಡುಪಿ ಸೌತ್ ಲಿಯೋ ಕ್ಲಬ್ ತೆರೆದುದಲ್ಲದೆ, ಇನ್ನೂ ೧೨ ಲಯನ್ಸ್ ಕ್ಲಬ್ ಸ್ಥಾಪನೆ ವಿವಿಧ ಹಂತದಲ್ಲಿದೆ. ಹದಿಹರೆಯದ ಮಕ್ಕಳಿಗೆ ಅಗತ್ಯವಾದ ಮಾಹಿತಿ ವರ್ಗಾಯಿಸುವ ನಿಟ್ಟಿನಲ್ಲಿ ೭೦ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ೨೦ ಶಾಲೆಗಳಲ್ಲಿ ಪೀಸ್ ಪೋಸ್ಟರ್ ಸ್ಪರ್ಧೆ, ಚರ್ಚ್ನಲ್ಲಿ ಗೂಡುದೀಪ ಸ್ಪರ್ಧೆ, ದೀಪಾವಳಿಯಂದು ಮೂರು ಧರ್ಮಗಳ ಗುರುಗಳ ಉಪಸ್ಥಿತಿಯಲ್ಲಿ ಸರ್ವಧರ್ಮ ದೀಪಾವಳಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗೌಡ ಸಾರಸ್ವತ ಸಮಾಜ ಸಾರವಂತವಾಗಬೇಕು. ಸಮಾಜ ಅಭಿವೃದ್ಧಿಯಾಗಬೇಕು ಎನ್ನುವ ಉದ್ದೇಶದಿಂದ ಸಮಾಜ ಹಿರಿಯರು ದೇವಾಲಯಗಳನ್ನು ನಿರ್ಮಿಸಿದ್ದಾರೆ. ೩೫೦ ವರ್ಷಗಳ ಹಿಂದೆ ಪಂಚಗಂಗಾವಳಿ ನದಿ ತೀರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವರು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಎಲ್ಲರಿಗೂ ಒಳಿತನ್ನು ಮಾಡಿದ್ದಾನೆ. ದೇವಾಲಯದ ಅಭಿವೃದ್ಧಿ ಕೂಡ ಕಾಲ ಕಾಲಕ್ಕೆ ನಡೆದಿದ್ದು, ಗುರುಗಳ ಮಾರ್ಗದರ್ಶನದಂತೆ ದೇವಾಲಯ ಹಾಗೂ ಸಮಾಜದ ಅಭಿವೃದ್ಧಿ ಸಾಧ್ಯವಿದೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು. ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಐದು ದಿನಗಳ ಮೊಕ್ಕಾಂಗೆ ದೇವಳಕ್ಕೆ ಚಿತ್ತೈಸಿದ ಶ್ರೀಗಳು ಆಶೀರ್ವಚನ ನೀಡಿದರು. ಸಮಾಜ ಬಾಂಧವರ ಅಪೇಕ್ಷೆಯಂತೆ ದೇವಳದ ವಠಾರದಲ್ಲಿ ಸುಸಜ್ಜಿತವಾದ ಕಲ್ಯಾಣ ಮಂಟಪ ನಿರ್ಮಾಣಗೊಂಡಿದೆ ಅಲ್ಲದೆ ನಾಗದೇವರ ಗುಡಿಯ ಜೀರ್ಣೋದ್ಧಾರ ಕಾರ್ಯ ನಡೆದಿದೆ. ಈ ಕಾರ್ಯಕ್ಕೆ ಅನೇಕ ಸಮಾಜಬಾಂಧವರು ಕೈಜೋಡಿಸಿದ್ದು ಶ್ರೀದೇವರು ಅವರಿಗೆ ಉತ್ತರೋತ್ತರ ಅಭಿವೃದ್ಧಿಯನ್ನು ಕರುಣಿಸಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಮುಖ್ಯ ಚುನಾವಣಾ ಅಧಿಕಾರಿಗಳ ಆದೇಶದಂತೆ ಮತದಾನದ ಬಗ್ಗೆ ಜನಜಾಗೃತಿ ಮೂಡಿಸಲು ಕುಂದಾಪುರದ ಸಂಗಮ್ಯಿಂದ ಆನಗಳ್ಳಿಯವರೆಗೆ ಅಭಿಯಾನ ನಡೆಸಲಾಯಿತು. ಕಾಲೇಜಿನ ನಿರ್ದೇಶಕ ಪ್ರೊ. ದೋಮ ಚಂದ್ರಶೇಖರ್ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಕುಂದಾಪುರದ ಕಂದಾಯ ಅಧಿಕಾರಿ ಭರತ್ ವಿ. ಶೆಟ್ಟಿ, ಕಾಲೇಜಿನ ಪ್ರಭಾರ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ಕುಂದಾಪುರದ ಟ್ರಾಫಿಕ್ ಎ.ಎಸ್.ಐ. ಜನಾರ್ದನ ಎಮ್. ಮತ್ತು ಯು ಸುಧಾ ಪ್ರಭು, ಕಾಲೇಜಿನ ಎನ್.ಎಸ್.ಎಸ್, ಅಧಿಕಾರಿ ಸತೀಶ್ ಶೆಟ್ಟಿ ಹೆಸ್ಕತ್ತೂರು, ಪೊಲೀಸ್ ಸಿಬ್ಬಂದಿಗಳಾದ ಪ್ರಸನ್ನ, ಚೇತನ್, ವಿಜಯ್ ಉಪಸ್ಥಿತರಿದ್ದರು. ಕಾಲೇಜಿನ 1250 ವಿದ್ಯಾರ್ಥಿಗಳು ಮತ್ತು ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿಯಾನದಲ್ಲಿ ಪಾಲ್ಗೊಂಡರು.
