Author: ನ್ಯೂಸ್ ಬ್ಯೂರೋ

ಕಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಲಾವಣ್ಯ ರಿ. ಬೈಂದೂರು ಇದರ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು. ಸಂಸ್ಥೆಯ ನೂತನ ಅಧ್ಯಕ್ಷರಾಗಿ ಎಚ್. ಉದಯ ಆಚಾರ್, ಗೌರವಧ್ಯಕರಾಗಿ ಯು. ಶ್ರೀನಿವಾಸ ಪ್ರಭು, ಬಾಲಚಂದ್ರ ವಿ. ಆರ್., ಉಪಾಧ್ಯಕ್ಷರಾಗಿ ನರಸಿಂಹ ನಾಯಕ್, ನಾರಾಯಣ ಕೆ., ಪ್ರಧಾನ ಕಾರ್ಯದರ್ಶಿಯಾಗಿ ಮೂರ್ತಿ ಬೈಂದೂರು, ಜೊತೆ ಕಾರ್ಯದರ್ಶಿಗಳಾಗಿ ವಿಶ್ವನಾಥ ಆಚಾರ್ಯ, ಗಣೇಶ ಪರಮಾನಂದ, ರೋಶನ್ ಕುಮಾರ್, ಕೋಶಾಧ್ಯಕ್ಷರಾಗಿ ಸುರೇಶ್ ಹುದಾರ್, ಸಂಘಟನಾ ಕಾರ್ಯದರ್ಶಿಯಾಗಿ ರವೀಂದ್ರ ಶ್ಯಾನುಭಾಗ್, ಸುಮಂತ ಆಚಾರ್, ವ್ಯವಸ್ಥಾಪಕರಾಗಿ ಬಿ. ಗಣೇಶ ಕಾರಂತ್, ರಾಮ ಟೈಲರ್, ಗಣಪತಿ ಎಸ್., ಮುಖ್ಯ ಸಲಹೆಗಾರರಾಗಿ ಗಿರೀಶ್ ಬೈಂದೂರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸದಾಶಿವ ಡಿ, ಮೋಹನ್ ಕಾರಂತ್, ಕೃಷ್ಣಮೂರ್ತಿ ಕಾರಂತ್, ಸತ್ಯಪ್ರಸನ್ನ, ಸುನೀಲ್ ಬಿ. ಬಾಲಕೃಷ್ಣ, ವಿಶ್ವನಾಥ ಶೆಟ್ಟಿ, ನಾಗರಾಜ ಕಾರಂತ್, ನಾಗೇಂದ್ರ ಕುಮಾರ್ ಬಂಕೇಶ್ವರ, ರಾಮ ಕೆರೆಕೆಟ್ಟೆ, ನಿತೀನ್ ಶೆಟ್ಟಿ, ಬಿ. ವಿಶ್ವೇಶ್ವರ ಅಡಿಗ, ಮಂಜುನಾಥ್ ಶಿರೂರು, ಸುಬ್ರಹ್ಮಣ್ಯ ಜಿ., ನಾಗರಾಜ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : 50 ವರುಷಗಳನ್ನು ಪೂರೈಸಿರುವ ಗಂಗೊಳ್ಳಿಯ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಅಲ್ಲಿನ ಹಳೆ ವಿದ್ಯಾರ್ಥಿಗಳ ಪ್ರಾಥಮಿಕ ಸಭೆ ಇತ್ತೀಚೆಗೆ ಗಂಗೊಳ್ಳಿಯ ಚರ್ಚ್ ಹಾಲ್‌ನಲ್ಲಿ ನಡೆಯಿತು. ಸಭೆಯಲ್ಲಿ ಸುವರ್ಣ ಮಹೋತ್ಸವ ಕಾರ‍್ಯಕ್ರಮದ ರೂಪು ರೇಷೆಗಳನ್ನು ಚರ್ಚಿಸಲಾಯಿತು. ಶಾಲೆಯ ಸಂಚಾಲಕರಾದ ರೆ.ಫಾ. ಆಲ್ಬರ್ಟ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿದ್ದರು. ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯರಾದ ಝೀಟಾ ರೆಬೆರೊ ಸ್ವಾಗತಿಸಿದರು. ವಿವಿಯನ್ ಕ್ರಾಸ್ತಾ, ಹೆಲನ್ ನಝ್ರತ್, ರಾಮ್ ಸರ್ , ನಾಗಪ್ಪಯ ಪಟೇಲ್ , ಫಿಲೋಮಿನಾ , ಅಬ್ದುಲ್ ಸಲಾಂ ಮೊದಲಾದವರು ಭಾಗವಹಿಸಿದ್ದರು. ಸಹಾಯಕ ಶಿಕ್ಷಕಿ ಫೆಲ್ಸಿ ಡಿ ಸಿಲ್ವಾ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಾಂತ ವಾತಾವರಣದ ಪ್ರಾಕೃತಿಕ ಸೌಂದರ್ಯದ ಸುಂದರ ವಲಯ, ಆರ್ಥಿಕವಾಗಿ ಹಿಂದುಳಿದಿದ್ದರೂ, ಪ್ರೇಕ್ಷಣೀಯ ಪ್ರವಾಸಿತಾಣವಾಗಿ, ಧಾರ್ಮಿಕ ಕ್ಷೇತ್ರವಾಗಿ, ಜನಪದೀಯ ಹಾಗೂ ಸಾಂಸ್ಕೃತಿಕವಾಗಿ ಮುಂದಿದ್ದು ಜಿಲ್ಲೆಯ ಶಿರೂಭಾಗದ ಬೈಂದೂರು ತಾಲೂಕು ಗುರುತಿಸಿಕೊಂಡಿದೆ ಎಂದು ವಿಧಾನಪರಿಷತ್ ವಿರೋಧಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಬೈಂದೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೆಷನ್ ನೇತೃತ್ವದಲ್ಲಿ ಜಿಲ್ಲೆ ಹಾಗೂ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೆಷನ್ ಸಹಕಾರದಲ್ಲಿ ಬೆಸುಗೆ ಫೌಂಡೇಶನ್ ಬಂದೂರು, ಗ್ರಾಪಂ ಪಡುವರಿ, ಜಿಲ್ಲಾಡಳಿತ ಉಡುಪಿ ಮತ್ತು ಪ್ರವಾಸೋದ್ಯಮ ಇಲಾಖೆ ಇವರ ಸಹಯೋಗದಲ್ಲಿ ಸೋಮೇಶ್ವರ ಕಡಲತಡಿಯಲ್ಲಿ ನಡೆದ ೬ನೇ ಕರ್ನಾಟಕ ರಾಜ್ಯ ಜ್ಯೂನಿಯರ್ ಬಾಲಕ, ಬಾಲಕಿಯರ ಕಬಡ್ಡಿ ಚಾಂಪಿಯನ್‌ಶಿಪ್-೨೦೧೯ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಭಾಗದ ಕ್ರೀಡೆಯಾದ ಕಬಡ್ಡಿ ಇಂದು ಜಾಗತಿಕ ಮುನ್ನಣೆಗಳಿಸಿದೆ. ಯಶಸ್ಸು ಸುಲಭದಲ್ಲಿ ದಕ್ಕುವುದಿಲ್ಲ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದರೆ ಪೂರ್ವಭಾವಿ ತಯಾರಿ, ಕಠಿಣ ಪರಿಶ್ರಮ, ಧನತ್ಮಕ ಗುರಿ ಹಾಗೂ ಸಮರ್ಪಣಾ ಮನೋಭಾವ ಮತ್ತು ಸೋಲು-ಗೆಲುವನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಜನಸೇವಾ ಟ್ರಸ್ಟ್ (ರಿ) ಪ್ರಸ್ತುತಿಯಲ್ಲಿ ಮಾರ್ಚ್ 23ರ ಶನಿವಾರ ಮೂಡುಗಿಳಿಯಾರು ಶಾಲಾ ಮೈದಾನದಲ್ಲಿ ನಡೆಯುವ ಅಭಿಮತ ಸಂಭ್ರಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಿರಿಯಡ್ಕ ಸಮೀಪದಲ್ಲಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗುರುವ ಕೊರಗರ ಮನೆಯಲ್ಲಿ ಜರುಗಿತು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಗುರುವ ಕೊರಗರು ಶುಭ ಹಾರೈಸಿದರು. ಹೈಕಾಡಿ ವಿಜಯ್ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಟಿ. ಮಂಜುನಾಥ ಗಿಳಿಯಾರು, ಬೈಂದೂರು ವಲಯ ಸಿ.ಆರ್.ಪಿ. ಸಂತೋಷ್ ಕುಮಾರ್ ಶೆಟ್ಟಿ ಕೊತ್ತಾಡಿ, ಜನಸೇವಾ ಟ್ರಸ್ಟ್ ಕಾರ್ಯದರ್ಶಿ ಅಶೋಕ್ ಶೆಟ್ಟಿ ಬನ್ನಾಡಿ, ಶರತ್ ಶೆಟ್ಟಿ ಕೊತ್ತಾಡಿ, ಕಿರಣ್ ಆಚಾರ್ಯ, ಸಿದ್ದಾಪುರ ಚಕ್ರವರ್ತಿ ಬಳಗದ ಉದಯ ಮಡಿವಾಳ, ಗಣೇಶ್ ಶೆಟ್ಟಿ ತೊಂಬಟ್ಟು ಮತ್ತು ಪ್ರಶಾಂತ್ ಶೆಟ್ಟಿ ಕೊತ್ತಾಡಿ, ಮಂಜುನಾಥ ಶೆಟ್ಟಿ ಕೊತ್ತಾಡಿ, ಪ್ರವೀಣ್ ಯಕ್ಷಿಮಠ, ಸಫಲ್ ಶೆಟ್ಟಿ ಐರೋಡಿ ಉಪಸ್ಥಿತರಿದ್ದರು. ಶಶಿಕಾಂತ್ ಶೆಟ್ಟಿ ಎಣ್ಣೆಹೊಳೆ ಸ್ವಾಗತಿಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ಮಾರಿಕಾಂಬಾ ಯೂತ್ ಕ್ಲಬ್ ರಿ. ಕಳವಾಡಿ, ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ಬೈಂದೂರು ಜಂಟಿ ಆಶ್ರಯದಲ್ಲಿ ದಿ| ಪುನೀತ್ ಪೂಜಾರಿ ಸವಿ ನೆನಪಿಗಾಗಿ ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ ಕಳವಾಡಿ ಬೈಂದೂರು ಇಲ್ಲಿ ವರ್ಷಂಪ್ರತಿ ನಡೆಯುವ ಹಾಲು ಹಬ್ಬದ ಅಂಗವಾಗಿವಾಗಿ ವಿಕಲಚೇತನರಿಗೆ ಉಚಿತ ಸೈಕಲ್ ವಿತರಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಸಾಂಸ್ಕೃತಿಕ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸುರಭಿ ಸಂಸ್ಥೆ, ನೃತ್ಯ, ಕಲೆ, ಸಂಗೀತ, ರಂಗಭೂಮಿ ಮೊದಲಾದ ಕ್ಷೇತ್ರಗಳಲ್ಲಿ ಅವಿರತವಾಗಿ ತೊಡಗಿಕೊಂಡು ಜನರ ಅಭಿರುಚಿಯನ್ನು ಉನ್ನತೀಕರಿಸಿದೆ ಎಂದು ಪತ್ರಕರ್ತ ಎಸ್. ಜನಾರ್ದನ ಮರವಂತೆ ನುಡಿದರು.   ಅವರು 19ನೇ ವರ್ಷದ ಸಂಭ್ರಮದಲ್ಲಿರುವ ಬೈಂದೂರಿನ ಸಾಂಸ್ಕೃತಿಕ ಸೇವಾ ಪ್ರತಿಷ್ಠಾನ ‘ಸುರಭಿ ರಿ. ಬೈಂದೂರು’ ಸಂಸ್ಥೆಯ ಆಶ್ರಯದಲ್ಲಿ ದಿ. 23, 24 ಹಾಗೂ 25 ಜನವರಿ 2018ರಂದು ಮೂರು ದಿನಗಳ ಕಾಲ ಇಲ್ಲಿನ ಶಾರದಾ ವೇದಿಕೆಯಲ್ಲಿ ಜರುಗಲಿರುವ ಸುರಭಿ ಜೈಸಿರಿ ಹಾಗೂ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಈ ಸಂದರ್ಭ ಸುರಭಿ ರಿ. ಬೈಂದೂರು ಅಧ್ಯಕ್ಷ ಸತ್ಯನಾ ಕೊಡೇರಿ, ಕಾರ್ಯದರ್ಶಿ ರಾಮಕೃಷ್ಣ ಉಪ್ಪುಂದ, ಉಪಾಧ್ಯಕ್ಷ ಆನಂದ ಮದ್ದೋಡಿ, ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ವೈ. ಕೊರಗ, ನಿರ್ದೇಶಕ ಸುಧಾಕರ ಪಿ. ಬೈಂದೂರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹತ್ತೊಂಬತ್ತನೇ ವರ್ಷದ ಸಂಭ್ರಮದಲ್ಲಿರುವ ಬೈಂದೂರಿನ ಸಾಂಸ್ಕೃತಿಕ ಸೇವಾ ಪ್ರತಿಷ್ಠಾನ ‘ಸುರಭಿ ರಿ. ಬೈಂದೂರು’ ಸಂಸ್ಥೆಯ ಆಶ್ರಯದಲ್ಲಿ ದಿ. 23, 24 ಹಾಗೂ 25 ಜನವರಿ 2019ರಂದು ಮೂರು ದಿನಗಳ ಕಾಲ ಸುರಭಿ ಜೈಸಿರಿ ಹಾಗೂ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಪ್ರತಿದಿನ ಸಂಜೆ 6ಕ್ಕೆ ಇಲ್ಲಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ ಎಂದು ಸುರಭಿ ರಿ. ಬೈಂದೂರು ಅಧ್ಯಕ್ಷ ಸತ್ಯನಾ ಕೊಡೇರಿ ತಿಳಿಸಿದರು. ಬೈಂದೂರಿನಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ವಿವಿಧ ಕ್ಷೇತ್ರದ ಸಾಧಕರಿಗೆ ಪ್ರತಿವರ್ಷ ಕೊಡಮಾಡುತ್ತಿರುವ ಬಿಂದಶ್ರೀ ಪ್ರಶಸ್ತಿಗೆ ಈ ಭಾರಿ ಪ್ರಸಿದ್ಧ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ ರಮೇಶ್ ಭಟ್ ಆಯ್ಕೆಯಾಗಿದ್ದು ಜ.24ರಂದು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು ಚಿನ್ನದ ಪದಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಜನವರಿ 23ರ ಸಂಜೆ 6ಕ್ಕೆ ಚಾಲನೆಗೊಳ್ಳಲಿರುವ ಸುರಭಿ ಜೈಸಿರಿಯನ್ನು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಪರಸ್ತ್ರೀಯೊಂದಿಗಿನ ಪ್ರೇಮ ಪ್ರಸಂಗದಿಂದ ತನ್ನದೇ ಮಕ್ಕಳಿಬ್ಬರಿಗೆ ವಿಷವುಣಿಸಿ ಕೊಂದ ತಂದೆ, ಬೈಂದೂರು ಗಂಗನಾಡುಗೋಳಿ ಕಕ್ಕಾರಿನ ಶಂಕರನಾರಾಯಣ ಹೆಬ್ಟಾರ್‌ (48)ಗೆ ಗಲ್ಲು ಶಿಕ್ಷೆ ವಿಧಿಸಿ ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ| ಪ್ರಕಾಶ್‌ ಖಂಡೇರಿ ಶನಿವಾರ ಮಹತ್ವದ ತೀರ್ಪು ನೀಡಿದ್ದಾರೆ. ಜ. 3ರಂದು ಆರೋಪ ಸಾಬೀತಾಗಿದ್ದು, ಜ. 7ಕ್ಕೆ ತೀರ್ಪನ್ನು ಮುಂದೂಡಿದ್ದರು. ಬಳಿಕ ಮತ್ತೆ ನ್ಯಾಯಾಧೀಶರು ಅದನ್ನು ಜ. 19ಕ್ಕೆ ಮುಂದೂಡಿದ್ದರು. ಹಿರಿಯಡಕದ ಜಿಲ್ಲಾ ಕಾರಾಗೃಹದಲ್ಲಿದ್ದ ಅಪರಾಧಿಯನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಇದು ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸುತ್ತಿರುವ 3ನೇ ಮರಣದಂಡನೆ ತೀರ್ಪಾಗಿದೆ. ಪ್ರಕರಣದ ಹಿನ್ನೆಲೆ 2016ರ ಅ. 16ರಂದು ಪರಸ್ತ್ರೀ ವ್ಯಾಮೋಹದಿಂದ ಶಂಕರನಾರಾಯಣನು ತನ್ನಿಬ್ಬರು ಮಕ್ಕಳು ಮತ್ತು ಪತ್ನಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಪರಿಣಾಮ ಮಕ್ಕಳಾದ ಅಶ್ವಿ‌ನ್‌ ಕುಮಾರ್‌ ಹೆಬ್ಟಾರ್‌ (15) ಹಾಗೂ ಐಶ್ವರ್ಯಾ ಲಕ್ಷ್ಮೀ ಹೆಬ್ಟಾರ್‌ (13) ಸಾವಿಗೀಡಾಗಿದ್ದು, ಪತ್ನಿ ಮಹಾ ಲಕ್ಷಿ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಾಲಾ ಕಾಲೇಜುಗಳಲ್ಲಿ ಹೆಚ್ಚೆಚ್ಚು ಕ್ರೀಡಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿ ಮಕ್ಕಳನ್ನು ಕ್ರೀಡಾ ಕ್ಷೇತ್ರದಲ್ಲಿ ಬೆಳೆಸಬೇಕು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ತಮಗೆ ಆಸಕ್ತಿ ಇರುವ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು. ಪಡುವರಿ ಗ್ರಾಮದ ಸೋಮೇಶ್ವರ ಕಡಲ ತೀರದಲ್ಲಿ ಬೈಂದೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಕಾರದಲ್ಲಿ ಬೆಸುಗೆ ಫೌಂಡೇಶನ್ ಬಂದೂರು, ಗ್ರಾಪಂ ಪಡುವರಿ, ಜಿಲ್ಲಾಡಳಿತ ಉಡುಪಿ ಮತ್ತು ಪ್ರವಾಸೋದ್ಯಮ ಇಲಾಖೆ ಇವರ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆಯುವ ೬ನೇ ಕರ್ನಾಟಕ ರಾಜ್ಯ ಜ್ಯೂನಿಯರ್ ಕಬಡ್ಡಿ ಚಾಂಪಿಯನ್‌ಶಿಪ್-೨೦೧೯ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿರುವ ಸೃಜನಾತ್ಮಕ ಸಾಮರ್ಥ್ಯ ಹಾಗೂ ಸುಪ್ತ ಪ್ರತಿಭೆಯನ್ನು ಸ್ಪರ್ಧೆಯ ಮೂಲಕ ಹೊರಹೊಮ್ಮಿಸುವುದರ ಜತೆಗೆ ಅವರ ಅಭಿವೃದ್ಧಿಗಾಗಿ ಮತ್ತು ಗುಣಾತ್ಮಕ ಕಲಿಕೆಯನ್ನು ಪ್ರೋತ್ಸಾಹಿಸುವ ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳು ಸಹಕರಿಯಾಗಬಲ್ಲದು. ಮುಂದಿನ ದಿನಗಳಲ್ಲಿ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕ್ರೀಡೆಗಳ ಮೂಲಕ ಯುವ ಸಮುದಾಯವನ್ನು ಸಂಘಟಿಸಲು ಸಾಧ್ಯವಾಗುತ್ತದೆ. ಕ್ರೀಡಾಳುಗಳಿಗೆ ಅವಶ್ಯಕತೆಯಾಗಿರುವಂತ ಕ್ರೀಡಾಂಗಣದ ಪ್ರಗತಿ ಅತ್ಯವಶ್ಯಕವಾಗಿದ್ದು, ಮುಂದಿನ ದಿನದಲ್ಲಿ ಬೈಂದೂರು ಗಾಂಧಿ ಮೈದಾನದ ಪ್ರಗತಿ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಆದ್ಯತೆ ನೀಡುತ್ತೇನೆ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಹೇಳಿದರು. ಬಂದೂರು ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಮೂರು ದಿನಗಳ ಕಾಲ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಹೊನಲು ಬೆಳಕಿನ ೪೦ ಗಜಗಳ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ, ಕ್ರೀಡಾ ರಂಗದಲ್ಲಿ ಸಾಧನೆಗೈದವರನ್ನು ಸಮ್ಮಾನಿಸಿ ಮಾತನಾಡಿದರು. ದೇಶ ಮತ್ತು ಸಮಾಜವನ್ನು ಕಟ್ಟಬೇಕಾದರೆ ಸಂಘ ಸಂಸ್ಥೆಗಳ ಪಾತ್ರ ಪ್ರಮುಖವಾಗಿರುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಕ್ರೀಡಾಪಟುಗಳನ್ನು ಆಮಂತ್ರಿಸಿ ಸಂಘರ್ಷಕ್ಕೆ ಅವಕಾಶ ಕೊಡದೇ ಸೌಹಾರ್ದತೆಯಿಂದ ಪಂದ್ಯದ ಮೂಲಕ ತಂಡಗಳನ್ನು ಮುಖಾಮುಖಿಯಾಗಿಸಿ ಬಾಂಧವ್ಯ ಬೆಸೆಯುವ ಮೂಲಕ ಒಗ್ಗಟ್ಟನ್ನು ಸಾರುವ ಬೈಂದೂರು ಸ್ಪೋಟ್ಸ್ ಕ್ಲಬ್‌ನ ಪ್ರಯತ್ನ ಶ್ಲಾಘನೀಯ ಎಂದ ಅವರು ಕ್ರೀಡಾ ಸ್ಪೂರ್ತಿ, ಬದ್ದತೆ ಹಾಗೂ ಆತ್ಮವಿಶ್ವಾಸವಿದ್ದರೆ ಯಾವ…

Read More