ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗಲಾರದು. ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿದ್ದರೆ ಸಾಧನೆ ಮಾಡಲು ಸಾಧ್ಯವಿದೆ. ಆದರೆ ನಿರಂತರ ಪರಿಶ್ರಮವಿಲ್ಲದೇ ಏನನ್ನೂ ಸಾಧಿಸಲಾಗದು ಎಂದು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ಗೋವಿಂದ ಬಾಬು ಪೂಜಾರಿ ಹೇಳಿದರು. ಸೋಮವಾರ ಬೈಂದೂರು ರತ್ತುಬಾಯಿ ಜನತಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನೀಡಲಾದ ಉಚಿತ ಸಮವಸ್ತ್ರವನ್ನು ವಿತರಿಸಿ ಮಾತನಾಡಿ ಯಶಸ್ಸನ್ನು ಕಾಣಲು ಮುನ್ನಡೆಯುವವರಿಗೆ ಯಾವುದಾದರೂ ರೂಪದಲ್ಲಿ ಸಹಕಾರ ಸಿಕ್ಕೇ ಸಿಗುತ್ತದೆ. ಅದನ್ನು ಸದುಪಯೋಗಪಡಿಸಿಕೊಳ್ಳುವ ಜಾಣ್ಮೆ ಇರಬೇಕು ಎಂದರು. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ದೇಣಿಗೆ ನೀಡಲಾಗುತ್ತಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬುದು ನನ್ನ ಉದ್ದೇಶವಾಗಿದೆ ಎಂದರು. ರತ್ತುಬಾಯಿ ಜನತಾ ಪ್ರೌಢಶಾಲೆಯ 155 ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸಿದರು. ಸಂಸ್ಥೆಯ ವತಿಯಿಂದ ಡಾ. ಗೋವಿಂದ ಬಾಬು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ವಿವಿವಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕಶ್ವಿ ಚೆಸ್ ಸ್ಕೂಲ್‌ನಲ್ಲಿ ಓಪನ್ ರ‍್ಯಾಪಿಡ್ ಚೆಸ್ ಪಂದ್ಯಾವಳಿ ನಡೆಯಿತು. ಮುಕ್ತ ವಿಭಾಗದ ಚೆಸ್ ಪಂದ್ಯಾಟದಲ್ಲಿ ಕಶ್ವಿ ಚೆಸ್ ಸ್ಕೂಲ್‌ನ ವಿದ್ಯಾರ್ಥಿಗಳಾದ ನಿಶಾಂತ್ ಡಿಸೋಜ್ ಪ್ರಥಮ ಸ್ಥಾನ, ದಿವ್ಯ ದ್ವೀತಿಯ ಸ್ಥಾನ ಕಾರ್ತಿಕ್ ತೃತೀಯ ಸ್ಥಾನಗಳಿಸಿದರು. ಗೋಲ್ಡನ್ ಗ್ರೂಪ್ನ ಮುಕ್ತ ವಿಭಾಗದಲ್ಲಿ ಮನನ್ ಶೆಟ್ಟಿ ಪ್ರಥಮ ಸ್ಥಾನ, ಸನತ್ ಎಸ್. ಸಿರಿಯಾನ್ ದ್ವಿತೀಯ ಸ್ಥಾನ, ಹರಿದಾಸ್ ಆರ್. ಮಲ್ಯ ತೃತೀಯ ಸ್ಥಾನಗಳಿಸಿದರು. ಹಾಗೂ ಸ್ಟಾರ್ ಗ್ರೂಪ್‌ನ ಮುಕ್ತ ವಿಭಾಗದಲ್ಲಿ ರೀತೇಶ್ ವಿ. ಪ್ರಭು ಪ್ರಥಮ ಸ್ಥಾನ, ತೇಜಸ್ ದ್ವಿತೀಯ ಸ್ಥಾನ, ನವಮ್ ಹೆಗ್ಡೆ ತೃತೀಯ ಸ್ಥಾನ ಪಡೆದರು. ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅಥಿತಿಯಾಗಿ ಕೋಟೇಶ್ವರ ಅಂಕದಕಟ್ಟೆಯ ಸುಧನ್ವ ಮಲ್ಟಿ ಕಲ್ಚರಲ್ ಅಂಡ್ ಕೋಚಿಂಗ್ ಸೆಂಟರ್ ಸಂಸ್ಥಾಪಕರಾದ ಸುಮಲತಾ ಶೆಟ್ಟಿ ಅವರು ಮಾತನಾಡಿ, ಚೆಸ್ ಕಲಿಕೆ ಮತ್ತು ಆಟವು ವಿದ್ಯಾರ್ಥಿಗಳನ್ನು ಬೌದ್ಧಿಕ ಮತ್ತು ಶಾರೀರಿಕವಾಗಿ ಉತ್ತಮಗೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು. ಕಶ್ವಿ ಚೆಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಟ್ರಸ್ಟ್‌ನ ಬೆಳ್ಳಿ ಹಬ್ಬದ ಸಂಭ್ರಮ (1995-2020) ಹಾಗೂ ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಜನ್ಮ ಶತಮಾನೋತ್ಸವ (1921-2021)ದ ಅಂಗವಾಗಿ ಗೊಂಬೆಮನೆಯಲ್ಲಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ನಿರಂತರ ಸರಣಿ ಕಾರ್ಯಕ್ರಮದಡಿ 66ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಸೂತ್ರಕ್ರೀಡೆಯ ಗಾರುಡಿಗರಾದ ದೇವಣ್ಣ ಪದ್ಮನಾಭ ಕಾಮತ್ ಮತ್ತು ಕೊಗ್ಗ ದೇವಣ್ಣ ಕಾಮತ್ರ ತೈಲಚಿತ್ರ ಗಳನ್ನು ಅತಿಥಿಗಳು ಅನಾವರಣಗೊಳಿಸಿದರು . ನನ್ನ ದೃಷ್ಟಿಯಲ್ಲಿ ಉಪ್ಪಿನಕುದ್ರು ಗೊಂಬೆಯಾಟಆನ್ ಲೈನ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪೂಜಾ ತೀರ್ಥಹಳ್ಳಿ, ದ್ವಿತೀಯ ಸ್ಥಾನ ಸೃಗ್ವಿ ಸತೀಶ, ನನ್ನ ಸೂತ್ರದ ಗೊಂಬೆ ಆನ್ ಲೈನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪೂರ್ವಿಕ ಆರ್. ತಾಳಿಕೋಟಿ, ದ್ವಿತೀಯ ಸ್ಥಾನ ಶ್ರೇಯಸ್ ಪೈ, ಸಮಾಧಾನಕರ ಬಹುಮಾನವಾಗಿ ಸಂಜನಾ ಶೆಟ್ಟಿ , ಸೀಮಾ ಬಾಳಿಗಾ ಕಾಮತ್ ಮತ್ತು ಶತಮಾನೋತ್ಸವದ ವಿಶೇಷ ಬಹುಮಾನವಾಗಿ ಮಂಡ್ಯ ಗೊಂಬೆಯಾಟ ತಂಡದ ರೂವಾರಿ ಮೂರ್ತಾಚಾರ್ಯ ಎನ್ ಟಿ. ರವರಿಗೆ ಪ್ರಶಸ್ತಿ ಪತ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಾನೂನಿನ ಚೌಕಟ್ಟಿನಲ್ಲಿ ಶೋಷಣೆಗೆಗೆ ಒಳಗಾದವರಿಗೆ ಪ್ರಾಮಾಣಿಕವಾಗಿ ನ್ಯಾಯ ದೊರಕುವಂತಗಾಬೇಕು ಸಮಾಜದ ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಕಾರ್ಯವೆಸಗಿದಾಗ ಅನ್ಯಾಯದ ವಿರುದ್ದ ಧ್ವನಿ ಎತ್ತಿದಾಗ ಇದು ಸಾಧ್ಯ, ಕಾನೂನಿನ ರ್ದುಬಳಕೆ ಮಾಡಿಕೊಳ್ಳದೇ ಕಾನೂನಿನ ಮೂಲಕ ಸುಸ್ಥಿರ ಸಮಾಜ ನಿರ್ಮಾಣಕ್ಕೆ ನಾಗರಿಕರು ಮುಂದೆ ಬಂದು , ಕಾನೂನಿನ ಉದ್ದೇಶದ ತಿಳುವಳಿಕೆ ಪಡೆದುಕೊಂಡು ಅದರ ಸಂರಕ್ಷಣೆಗೆ ಸಹಕರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸಮಿತಿ , ಕುಂದಾಪುರ ಅಧ್ಯಕ್ಷರಾದ ರಂಗೇಗೌಡ ಅವರು ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರ, ವಕೀಲರ ಸಂಘ ರಿ. ಕುಂದಾಪುರ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಸಿಟಿ ರೋಟರಿ ಕೋಟ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ 75 ನೇ ಸ್ವಾತಂತ್ರೋತ್ಸವದ ಆಚರಣೆ ಅಂಗವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸೃಷ್ಟಿ ಹಾಗೂ ಚರ್ಪ್ ಕ್ಲಬ್ ವತಿಯಿಂದ ಸರ್ಫಿಂಗ್ ಸ್ವಾಮಿ ಫೌಂಡೇಶನ್ ಹಾಗೂ ಕಾನ್ಫೆಡೆರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಭಾಗವಾಗಿರುವ ‘ಯಂಗ್ ಇಂಡಿಯನ್ಸ್’ ಸಹಯೋಗದಲ್ಲಿ ‘ಸಸಿಹಿತ್ಲು ಮಂತ್ರ ಬೀಚ್ ಸ್ವಚ್ಛತಾ ಕಾರ್ಯಕ್ರಮ’ ಹಮ್ಮಿಕೊಳ್ಳಲಾಯಿತು. ಸುಮಾರು104 ಚೀಲಗಳಲ್ಲಿ ಸುಮಾರು 1.5 ಟನ್ ಕಸವನ್ನು ಸ್ವಚ್ಛಗೊಳಿಸಿ ಬೈಕಂಪಾಡಿ ಕಸ ಪುನರ್ವಿಲೇವಾರಿ ಘಟಕಕ್ಕೆ ನೀಡಲಾಯಿತು. ಸ್ವಚ್ಛತೆಯಲ್ಲಿ ಸೃಷ್ಟಿ ಹಾಗೂ ಚರ್ಪ್ ಕ್ಲಬ್‌ನ 80 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸರ್ಫಿಂಗ್ ಸ್ವಾಮಿ ಫೌಂಡೇಶನ್ ನಿರ್ದೇಶಕ ಗೌರವ್ ಹೆಗ್ಡೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಸೃಷ್ಟಿ ಹಾಗೂ ಚರ್ಪ್ ಕ್ಲಬ್ ಸಂಯೋಜಕರು, ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜನರ ಬೇಜವಬ್ದಾರಿಯಿಂದ ಪ್ಲಾಸ್ಟಿಕ್, ರಬ್ಬರ್, ಔಷಧೀಯ ತ್ಯಾಜ್ಯ, ಫೋಮ್, ಮದ್ಯದ ಬಾಟಲಿಗಳು ಸೇರಿದಂತೆ ಅನೇಕ ವಿಷಕಾರಿ ವಸ್ತುಗಳು ನದಿಯ ಒಡಲು ಸೇರಿ ಸಮುದ್ರದ ಮೂಲಕ ದಡದಲ್ಲಿ ಶೇಖರಣೆಗೊಳ್ಳುತ್ತಿವೆ. ಇದರಿಂದ ಹೆಜಮಾಡಿ ಕೋಡಿಯಂತಹ ಅಳಿವೆ ಪ್ರದೇಶಗಳ ಜಲಮೂಲ ಸಸ್ಯಗಳು,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಶ್ರೀ ಸರಸ್ವತಿ ವಿದ್ಯಾನಿಧಿ ವತಿಯಿಂದ ಜಿಎಸ್‌ಬಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ಸಂಸ್ಥೆಯ ಹಿರಿಯ ಸದಸ್ಯ ಯು.ನಾರಾಯಣ ಪಿ.ಪೈ, ಸಂಸ್ಥೆಯ ಈ ಕಾರ್ಯದ ಉದ್ದೇಶ ಉತ್ತಮವಾಗಿದ್ದು, ಹಿರಿಯರ ಆಶಯದಂತೆ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವು ಕಲ್ಪಿಸುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿವೇತನ ಪಡೆದುಕೊಂಡವರು ನಿಧಿಯ ಸದುಪಯೋಗಪಡಿಸಿಕೊಂಡು ಪರಿಶ್ರಮಪಟ್ಟು ಉತ್ತಮ ವಿದ್ಯಾರ್ಜನೆಗೈದು ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಗಳಾಗಿ ಸಮಾಜಕ್ಕೆ, ಊರಿಗೆ ಸಹಕಾರ ನೀಡಿ ಸತ್ಪ್ರಜೆಗಳಾಗುವಂತೆ ಕರೆ ನೀಡಿದರು. ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಬಿ. ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಗಂಗೊಳ್ಳಿ ಕೆನರಾ ಬ್ಯಾಂಕ್ ಸಿಬ್ಬಂದಿ ಜಿ.ಗಂಗಾಧರ ಪೈ ಶುಭಾಶಂಸನೆಗೈದರು. ಸುಮಾರು 87 ಸಾವಿರ ರೂಪಾಯಿ ವಿದ್ಯಾರ್ಥಿ ವೇತನವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಜಿ.ವೆಂಕಟೇಶ ಶೆಣೈ ಸ್ವಾಗತಿಸಿದರು. ಕೆ.ರಾಮನಾಥ್ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಬಿ.ರಾಘವೇಂದ್ರ ಪೈ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದಾವಣಗೆರೆಯ ಹರಿಹರದಲ್ಲಿ ನಡೆದ ರಾಜ್ಯಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ನಾಗರಾಜ ಖಾರ್ವಿ ಅವರು ಬ್ರೆಸ್ಟ್ ಸ್ಟ್ರೋಕ್ 50 ಮೀ ಚಿನ್ನ, ಬ್ರೆಸ್ಟ್ ಸ್ಟ್ರೋಕ್ 100 ಮೀ ಚಿನ್ನ, ಬ್ರೆಸ್ಟ್ ಸ್ಟ್ರೋಕ್ 200 ಮೀ ಬೆಳ್ಳಿ, 50×4 ಮೆಡ್ಲೆ ರಿಲೇ ಕಂಚು,100X4 ಫ್ರೀ ಸ್ಟೈಲ್ ರಿಲೇ ಕಂಚು ಪಡೆದು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು ಬೀಗ ಹಾಕಿ ಅರಬ್ಬಿ ಸಮುದ್ರದಲ್ಲಿ ಬ್ರೆಸ್ಟ್ ಸ್ಟ್ರೋಕ್ನಲ್ಲಿ ಒಂದು ಕಿ.ಮೀ. ದೂರವನ್ನು ಅತ್ಯಂತ ವೇಗವಾಗಿ ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದುಕೊಂಡಿದ್ದ ಅವರು, ರೇಷ್ಮೆ ಇಲಾಖೆಯ ಇನ್ಸ್ಪೆಕ್ಟರ್ ಬಿ.ಕೆ.ನಾಯ್ಕ್ ಅವರಿಂದ ತರಬೇತಿ ಪಡೆದುಕೊಂಡಿದ್ದಾರೆ. ಅವರು, ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಿವಾಸಿಯಾಗಿದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಚುಗೋಡು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ, ಸರಸ್ವತಿ ವಿದ್ಯಾಲಯ ಗಂಗೊಳ್ಳಿಯ ಹಳೆವಿದ್ಯಾರ್ಥಿಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ಕುಂಜೆ ಗ್ರಾಮದ ಖ್ಯಾತ ಉದ್ಯಮಿ, ಕೃಷಿಕ, ನೇರಳಕಟ್ಟೆ ರಂಗಪ್ಪ ನಾಯಕ್ (93) ನಿಧನರಾದರು. ಅವರು, ಕೃಷಿ , ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದು, ತಮ್ಮ ವಾಮನ ನಾಯಕ್ ರೈಸ್‌ಮಿಲ್ ಮೂಲಕ ಅಕ್ಕಿ ಉತ್ಪಾದನೆ, ವ್ಯವಹಾರ ನಡೆಸುತ್ತಿದ್ದರು , ಧಾರ್ಮಿಕ , ಸಾಮಾಜಿಕ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಮೃತರು, ಪತ್ನಿ ಹಾಗೂ ಖ್ಯಾತ ಸಾಮಾಜಿಕ ಧುರೀಣ ಎನ್.ನಾರಾಯಣ ನಾಯಕ್ ಸೇರಿದಂತೆ ಮೂವರು ಪುತ್ರರು ಐವರು ಪುತ್ರಿಯರನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಜಡ್ಕಲ್ ಇದರ ಜಂಟಿ ಆಶ್ರಯದಲ್ಲಿ ರೈತ ಸದಸ್ಯರಿಗೆ ಕೃಷಿ ಉದ್ದೇಶ ಸಾಲ -ಮೇಳ ಕಾರ್ಯಕ್ರಮವನ್ನು ಸಂಘದ ವ್ಯಾಪ್ತಿಯ ಜಡ್ಕಲ್ ಸೆಂಟ್ ಜೋರ್ಜ್ ಚರ್ಚ್ ಸಭಾಂಗಣದಲ್ಲಿ ನಡೆಯಿತು. ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಇದರ ನಿರ್ದೇಶಕರಾದ ರಾಜು ಪೂಜಾರಿ ಅವರು ಕಾರ್ಯಕ್ರಮನ್ನು ಉದ್ಘಾಟಿಸಿದರು. ಈ ಸಂದರ್ಭ ಜಡ್ಕಲ್ ವ್ಯ. ವ. ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಮಹೇಶ್ ಹೆಗ್ಡೆ, ಜಡ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವನಜಾಕ್ಷಿ ಶೆಟ್ಟಿ, ಜಡ್ಕಲ್ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಅಡಿಗ, ದ. ಕ. ಜಿ.ಕೇಂದ್ರ ಸಹಕಾರಿ ಬ್ಯಾಂಕ್ ಸ. ಸಂಘಗಳ ವಲಯ ಮೇಲ್ವಿಚಾರಕರಾದ ಶಿವರಾಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಭತ್ತದ ಕಟಾವು ಆರಂಭಗೊಳ್ಳುತ್ತಿದ್ದು, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಲ್ಲಿ, ಉಡುಪಿ, ಕಾರ್ಕಳ ಮತ್ತು ಕುಂದಾಪುರದಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವ ಕುರಿತಂತೆ ತಕ್ಷಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು. ಅವರು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ನಡೆದ, ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸಾಮಾನ್ಯ ಭತ್ತಕ್ಕೆ ಪ್ರತೀ ಕ್ವಿಂಟಾಲ್ ಗೆ ರೂ.1940 ಮತ್ತು ಗ್ರೇಡ್ ಎ ಭತ್ತಕ್ಕೆ ರೂ. 1960 ದರ ನಿಗಧಿಪಡಿಸಿದ್ದು, ಜಿಲ್ಲೆಯ ರೈತರಿಂದ ಭತ್ತ ಖರೀದಿಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಭತ್ತ ಖರೀದಿ ಕೇಂದ್ರಗಳಿಗೆ ಗ್ರೇಡರ್ ಗಳನ್ನು ನೇಮಿಸುವಂತೆ ಮತ್ತು ಗೋದಾಮು ಗಳನ್ನು ಸಿದ್ದಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಜಿಲ್ಲೆಯ 20 ಅಕ್ಕಿ ಮಿಲ್ಲುಗಳ ಮಾಲೀಕರು ಭತ್ತವನ್ನು ಹಲ್ಲಿಂಗ್ ಮಾಡಿಕೊಡಲು…
