Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸೋದ ಮಠ ಸ್ವಾಮೀಜಿ ಅನುಗ್ರಹದಲ್ಲಿ ಗುರುಸಾರ್ವಭೌಮ ಶ್ರೀ ವಾದಿರಾಜ ಜೀವನ ಆಧಾರಿತ ಕನ್ನಡ ಚಲನಚಿತ್ರ ನಿರ್ಮಾಣವಾಗುತ್ತಿದ್ದು, ಅನುಭವಿ ನಿರ್ದೇಶಕ, ವಾದಿರಾಜರ ಭಕ್ತ ಹಯವದನ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಉತ್ತಮ ರೀತಿಯಲ್ಲಿ ಚಿತ್ರಿಸುವ ಭರವಸೆ ಸಿಕ್ಕಿರುವುದರಿಂದ ಸಿನಿಮಾ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಸೋದೆ ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಗುರುವಾರ ಹೂವಿನಕರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ವಾದಿರಾಜರು ಸಮಾಜಕ್ಕೆ ಕೊಟ್ಟ ಕೊಡುಗೆ, ಅವರ ವ್ಯಕ್ತಿತ್ವ ಹಾಗೂ ಹಿನ್ನೆಲೆಯಲ್ಲಿ ಇಟ್ಟುಕೊಂಡು ಸಿನಿಮಾ ನಿರ್ಮಾಣ ಆಗಬೇಕು ಎನ್ನುವ ಆಶಯ ವ್ಯಕ್ತಪಡಿಸಿದಾಗ ನಿರ್ದೇಶಕರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ನಮಗೆ ಚಲನಚಿತ್ರದ ಬಗ್ಗೆ ಗಂಧಗಾಳಿಯೂ ಇಲ್ಲ, ಹೇಳಿಸಿದ ಕೆಲಸವೂ ಅಲ್ಲ. ಹೀಗೆ ಆಗಬೇಕು ಅಂಥ ಹೇಳಬಹುದು ಅಷ್ಟೇ ಎಂದರು. ಶ್ರೀ ವಾದಿರಾಜ ಗುರು ಸಾರ್ವಭೌಮರು 15, 16ನೇ ಶತಮಾನದಲ್ಲಿ ಬಂದ ಮೇರು ವ್ಯಕ್ತಿ. 120 ವರ್ಷ ಜೀವಿಸಿದ್ದು, ಬಹುಮುಖ ವ್ಯಕ್ತಿತ್ವದ ಜತೆಗೆ ಸಂದೇಶ ನೀಡಿದ್ದಾರೆ. ಅನೇಕ ಭಾಷೆಗಳ ಪಾಂಡಿತ್ಯ, 120 ವರ್ಷದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದಾಗ ಮಾತ್ರ ಪ್ರತಿಯೊಂದು ಸಮಾಜವು ರಾಜಕೀಯವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಪ್ರೀತಿ, ವಿಶ್ವಾಸ, ಸಹಬಾಳ್ವೆಯ ಬದುಕು ಸಂಘಟನೆಗಳ ಧ್ಯೇಯವಾಗಬೇಕು. ಸಂಘಟಿತರಾಗಿ ಬಾಳುವುದರಿಂದ ಸಮಾಜದ ಏಳಿಗೆ ಸಾಧಿಸಬಹುದು ಎಂದು ಮಹಿಳಾ ಸಂರಕ್ಷಣಾ ಸಮಿತಿ ಮತ್ತು ರಾಜ್ಯ ಪ್ರಜಾತತ್ವ ಮಾನವ ಹಕ್ಕುಗಳ ರಾಜ್ಯಾಧ್ಯಕ್ಷೆ ಪ್ರೇಮಾ ರಾಮಮೂರ್ತಿ ಹೇಳಿದರು. ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಭಾನುವಾರ ನೂತನ ಅಸ್ತಿತ್ವದ ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಸಬಲೀಕರಣದಿಂದ ಸ್ವಾವಲಂಬಿ ಜೀವನ ಸಾಧ್ಯ. ಸಮಾಜಮುಖಿ ವ್ಯಕ್ತಿತ್ವದೊಂದಿಗೆ ಮಾನವೀಯ ಗುಣದಿಂದ ಸಂಸ್ಕೃತಿ ರಕ್ಷಣೆ ಮಾಡಬಹುದು. ಮಹಿಳೆಯರು ಸಮಾಜ ಸೇವೆ ಮಾಡುವುದರ ಮೂಲಕ ಸಮಷ್ಠಿಯ ಹಿತ ಕಾಪಾಡುವ ಜವಾಬ್ದಾರಿಯ ಜ್ಞಾನ ಬೆಳೆಯುತ್ತದೆ ಎಂದರು. ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಮೋಹನ ಸುಬ್ರಾಯ ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. 2021-22ನೇ ಸಾಲಿನ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್, ಶಿವಮೊಗ್ಗದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ತಾಲೂಕಿನ ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಿವಾಸಿ ನಾಗರಾಜ ಖಾರ್ವಿ ಮತ್ತು ಕೃಪಾ ದಂಪತಿ ಚಿನ್ನದ ಪದಕದೊಂದಿಗೆ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಪದವೀಧರ ಪ್ರಾಥಮಿಕ ಶಿಕ್ಷಕ ನಾಗರಾಜ ಖಾರ್ವಿ 50 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ, 100 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ, 200 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ, 4×50 ಮೀ. ಫ್ರೀ ಸ್ಟೈಲ್ ರಿಲೇ ಚಿನ್ನದ ಪದಕ ಪಡೆದಿದ್ದಾರೆ. ಅವರ ಪತ್ನಿ, ಶಿಕ್ಷಕಿ ಕೃಪಾ ಖಾರ್ವಿ 50 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ, 100 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ, 200 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ 4×50 ಮೀ. ಮೆಡ್ಲೆ ರೀಲೆಯಲ್ಲಿ ಬೆಳ್ಳಿಪದಕ ಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 2020ರಲ್ಲಿ ನಾಗರಾಜ ಖಾರ್ವಿಯವರು ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು, ಬೀಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಮೈ ಒವ್ನ್ ಗಾರ್ಮೆಂಟ್ಸ್‌ನ 3ನೇ ಮಳಿಗೆಯನ್ನು ಇಂದು ಗಂಗೊಳ್ಳಿಯ ಮುಖ್ಯ ರಸ್ತೆಯ್ಲಲಿರುವ ಸೆಂಟ್ರಲ್ ಪ್ಲಾಜಾದಲ್ಲಿ ಶುಭಾರಂಭಗೊಂಡಿತು. ಈ ವೇಳೆ ಜರುಗಿದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕುಂದಾಪುರ ಖ್ಯಾತ ವಕೀಲರಾದ ರವಿಕಿರಣ್ ಮುರುಡೇಶ್ವರ ಅವರು ಕಲ್ಪವೃಕ್ಷಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಗಂಗೊಳ್ಳಿಯ ಜಮತುಲ್ ಮುಸ್ಲಿಮೀನ್ ಕಮೀಟಿಯ ಅಧ್ಯಕ್ಷರಾದ ಜನಾಬ್ ಹಸೈನಾರ್ ಪಿಎಂ ರವರು ಮಾತನಾಡಿ ಶುಭಹಾರೈಸಿದರು. ಮೈ ಒವ್ನ್ ಗ್ರಾಮೆಂಟ್ಸ್ ಗಂಗೊಳ್ಳಿಯ ಮಳಿಗೆಯ ಉದ್ಘಾಟನೆಯನ್ನು ಗಂಗೊಳ್ಳಿ ಜುಮಾ ಮಸೀದಿಯ ಖತೀಬರಾದ ಮುಝಮ್ಮಿಲ್ ಮೌಲಾನಾ, ಗಂಗೊಳ್ಳಿ ಚರ್ಚ್ ನ ಧಾರ್ಮ ಗುರುಗಳಾದ ರೇ.ಫಾ.ಥಾಮಸ್ ರೋಷನ್ ಡಿಸೋಜಾ, ಕುಂದಾಪುರದ ಉದಯ ಜ್ಯುವೆಲ್ಸ್ ಮಾಲಕರಾದ ಉದಯ ಶೇಟ್ ಹಾಗೂ ಜೈ ಭೀಮ್ ಗಂಗೊಳ್ಳಿಯ ಅಧ್ಯಕ್ಷರಾದ ಜಗದೀಶ್ ಗಂಗೊಳ್ಳಿ ಯವರು ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಗಂಗೊಳ್ಳಿಯ ಸುಲ್ತಾನ್ ಮಸೀದಿಯ ಖತೀಬರಾದ ಮೌಲಾನಾ ಮೊಹಮ್ಮದ್ ಷರೀಫ್ ಸಹಾದಿ, ಬೈಂದೂರು ಜನ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಸುಧಾಕರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಲೆ ಹಾಗೂ ಸಾಂಸ್ಕೃತಿಕ ರಂಗದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಬೈಂದೂರಿನ ಸುರಭಿ ಸಂಸ್ಥೆ ಪ್ರತಿವರ್ಷದಂತೆ ನಾಲ್ಕು ದಿನಗಳ ರಂಗ ಹಬ್ಬವನ್ನು ಆಯೋಜಿಸಿದೆ. ಫೆಬ್ರವರಿ 04ರಿಂದ 07ರ ವರೆಗೆ ಪ್ರತಿದಿನ ಸಂಜೆ ಗಂಟೆ 6-30ಕ್ಕೆ ಬೈಂದೂರು ಶಾರದಾ ವೇದಿಕೆಯಲ್ಲಿ ನಾಟಕೋತ್ಸವ ನಡೆಯಲಿದೆ. ಫೆ.04ರಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದು, ಸಾಹಿತ್ಯ ಸಮುದಾಯ ಶಿವಮೊಗ್ಗದ ಕಾರ್ಯದರ್ಶಿ ಕೆ. ಪ್ರಭಾಕರನ್ ಜ್ಯೋತಿ ಪ್ರಜ್ವಲನಗೈಯಲಿದ್ದಾರೆ. ಕಾರ್ಯಕ್ರಮದ ನಾಲ್ಕು ದಿನಗಳ ಕಾಲ ರಂಗಭೂಮಿ ಚಿತ್ರನಟಿ ಚಂದ್ರಕಲಾ ರಾವ್, ಹಿರಿಯ ರಂಗನಟ ಗಣೇಶ್ ಕಾರಂತ್, ರಂಗನಟ ಹಾಗೂ ಚಲನಚಿತ್ರ ನಟ ರಘು ಪಾಂಡೇಶ್ವರ, ರಂಗನಟ ಯತೀಶ್ ಕೊಳ್ಳೆಗಾಲ ಅವರನ್ನು ಸನ್ಮಾನಿಸಲಾಗುತ್ತದೆ. ಫೆಬ್ರವರಿ 04ರ ಶನಿವಾರ ನಟ ಮಿತ್ರರು ತೀರ್ಥಹಳ್ಳಿ (ರಿ.) ಪ್ರಸ್ತುತಿಯ ನಾಟಕ ತುರುಬ ಕಟ್ಟುವ ಹದನ’ (ರಚನೆ : ಪಂಪ – ರನ್ನ – ಕುಮಾರವ್ಯಾಸ – ಪುರಂದರದಾಸರು, ಪರಿಕಲ್ಪನೆ/ನಿರ್ದೇಶನ: ಶ್ರೀಕಾಂತ್ ಕುಮಟಾ), ಫೆಬ್ರವರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಪ್ರಾಯೋಜಿತ ಮಧುಸೂದನ ಡಿ ಕುಶೆ ಪ್ರೌಢಶಾಲೆ ವಡೆರಹೋಬಳಿ ಕುಂದಾಪುರ ಇದರ ಇಂಟರಾಕ್ಟ್ ಕ್ಲಬ್ ವತಿಯಿಮಧ ಹತ್ತನೆ ತರಗತಿಯ ವಿದ್ಯಾರ್ಥಿಯರಿಗೆ 2022-23ನೇ ಸಾಲಿನ ಪರಿಕ್ಷೆ ಎದುರಿಸುವ ಕುರಿತು ಮಾಹಿತಿ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ರೊ. ಕುಮಾರ್ ಎಸ್ ಕಾಂಚನ್ ಪರೀಕ್ಷೆ ಭಯ, ಪರೀಕ್ಷೆ ಎದುರಿಸುವ ರೀತಿ, ಪರೀಕ್ಷೆಗೆ ತಯಾರಿ ಮತ್ತು ಶಿಕ್ಷಣದ ಬಗ್ಗೆ ಸುದೀರ್ಘವಾಗಿ ಮಕ್ಕಳ ಮನಸ್ಸು ನಾಟುವ ರೀತಿಯಲ್ಲಿ ಮಾತನಾಡಿ ಶುಭ ಹಾರೈಸಿದರು. ರೋಟರಿ ಕುಂದಾಪುರದ ಅಧ್ಯಕ್ಷರು ರೊ.ವೆಂಕಟೇಶ್ ನಾವುಂದ ಇಂಟರಾಕ್ಟ್ ಚೇರ್ಮನ್ ರೊ ರಾಘವೇಂದ್ರ ಗೋಪಾಡಿ ಶುಭಾಶಯಗೈದರು. ಮುಖ್ಯ ಶಿಕ್ಷಕಿ ತೇಜಸ್ವಿನಿ ಸ್ವಾಗತಿಸಿದರು, ಶಿಕ್ಷಕಿ ಜ್ಯೋತಿ ಧನ್ಯವಾದ ಮಾಡುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಿವಿಧ ಕಾರಣಗಳಿಗಾಗಿ ಜನರು ಹಿಂದೂ ಧರ್ಮವನ್ನು ತೊರೆದು ಬೇರೆ ಮತದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಮಾತೃ ಧರ್ಮವನ್ನು ತೊರೆಯುತ್ತಿರುವುದಕ್ಕೆ ನಾನಾ ಕಾರಣಗಳಿರಬಹುದು. ವಿಶೇಷವಾಗಿ ಮಕ್ಕಳು ಈ ಮತಾಂತರಕ್ಕೆ ಒಳಗಾಗುತ್ತಿದ್ದು, ಇದನ್ನು ತಡೆಯುವ ಪ್ರಯತ್ನವನ್ನು ಎಲ್ಲರೂ ಮಾಡಬೇಕು ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು. ತೆಂಕಬೆಟ್ಟು ನವೀಕೃತ ಶ್ರೀ ಕಾಲಭೈರವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಹಿಂದುತ್ವ ರಾಷ್ಟ್ರೀಯತೆಯ ಮೂಲಮಂತ್ರ. ಸಂಸ್ಕೃತಿ, ಸಂಸ್ಕಾರ ಮತ್ತು ಸಂಸ್ಕೃತದಿಂದ ನಮ್ಮ ದೇಶ ಜಗತ್ತಿನ ವಿಶ್ವಗುರುವಾಗಿದೆ. ಹಿಂದು ಸಮಾಜವನ್ನು ಸಂಕುಚಿತಗೊಳಿಸುವ, ವಿಕೃತಗೊಳಿಸುವ ಕೆಲಸಗಳು ನಿತ್ಯ ನಿರಂತರವಾಗಿ ನಡೆಯುತ್ತಿದೆ. ಹಿಂದುಗಳು ಪ್ರತಿಯೊಂದು ಕ್ಷಣದಲ್ಲೂ ಒಗ್ಗಟ್ಟು ಪ್ರದರ್ಶಿಸಬೇಕು. ಎಲ್ಲಿಯವರೆಗೆ ಹಿಂದುಗಳು ಜೀವಂತವಾಗಿರುತ್ತಾರೋ ಅಲ್ಲಿಯವರೆಗೆ ಜಾಗೃತವಾಗಿರುವ ಹಿಂದು ಸಮಾಜವನ್ನು ನಾಶ ಮಾಡಲು ಯಾವ ಶಕ್ತಿಗಳಿಂದಲೂ ಸಾಧ್ಯವಿಲ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾದ ಬಳಿಕ ನಮ್ಮ ರಾಷ್ಟ್ರ ಹಿಂದು ರಾಷ್ಟ್ರವಾಗಲಿದೆ ಎಂದು ಭವಿಷ್ಯ ನುಡಿದರು. ನಂತರ ಮಾತನಾಡಿದ ಕರ್ನಾಟಕ ಹಿಂದುಳಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಫೆ.01: ಪರಿಸರ ಸ್ವಚ್ಚತೆ ಪ್ರತಿಯೊಬ್ಬ ನಾಗರಿಕರ ಜವಬ್ದಾರಿಯಾಗಬೇಕು. ವೈಯಕ್ತಿಕ ಸ್ವಚ್ಚತೆ ಜೊತೆಗೆ ಪರಿಸರದ ಕಾಳಜಿ ಮೈಗೂಡಿಸಿಕೊಂಡಾಗ ಉತ್ತಮ ಆರೋಗ್ಯದ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ಹುಸೇನ್ ರಹೀಮ್ ಶೇಖ್ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ, ಕುಂದಾಪುರ ವಕೀಲರ ಸಂಘ, ಪುರಸಭೆ ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ, ತಾಲ್ಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸ್ವಚ್ಚತಾ ಕಾರ್ಯಕ್ರಮದ ಅಂಗವಾಗಿ ಸೋಮವಾರದಂದು ಕುಂದಾಪುರದಲ್ಲಿ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದೇ ಸಂದರ್ಭ ನ್ಯಾಯಾಧೀಶರು, ನ್ಯಾಯಾಲಯ, ಕಂದಾಯ ಇಲಾಖೆ, ಪುರಸಭೆಯ ಸಿಬ್ಬಂದಿಗಳು, ಪೌರ ಕಾರ್ಮಿಕರು ಕುಂದಾಪುರದ ನ್ಯಾಯಾಲಯದ ಆವರಣ ಹಾಗೂ ಬ್ಲೂವಾಟರ್ ಬಳಿಯಿಂದ ಫೆರ್ರಿ ಪಾರ್ಕ್ ತನಕ ಪಂಚ ಗಂಗಾವಳಿ ನದಿ ತೀರದಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು. ಈ ಸಂದರ್ಭ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜು ಎನ್., ಹೆಚ್ಚುವರಿ ಸಿವಿಲ್ ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ನಾವಾಡುವ ಭಾಷೆಗಳು ನಮ್ಮ ಪ್ರಾದೇಶಿಕ ಸಂಸ್ಕೃತಿಯ ಭಾಗವೇ ಆಗಿರುತ್ತದೆ. ಭಾಷೆಯ ಬಗ್ಗೆ ಕೀಳರಿಮೆ ತೋರಿಸದೆ ಉಪಯೋಗಿಸಿದಷ್ಟು ಸಮೃದ್ಧವಾಗಿ ಭಾಷೆಯ ಬೆಳವಣಿಗೆ ಸಾಧ್ಯ. ಕುಂದಾಪ್ರ ಭಾಷೆಗೆ ತನ್ನದೇ ಸ್ಥಾನಮಾನ ಹೊಂದಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಖ್ಯಾತಿ ಹೊಂದಿರುವುದು ಹೆಮ್ಮೆಯ ವಿಷಯ ಎಂದು ಹಾಸ್ಯ ಕಲಾವಿದ, ರಂಗಕರ್ಮಿ ನಾಗರಾಜ್ ತೆಕ್ಕಟ್ಟೆ ಅವರು ಹೇಳಿದರು. ಅವರು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆದ ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಇವರ ಆಶ್ರಯದಲ್ಲಿ ನಡೆದ ವಿಚಾರ ಸಂಕಿರಣ, ದತ್ತಿ ಪುರಸ್ಕಾರ, ನಾಟಕ ಪ್ರದರ್ಶನ ಆಹ್ಲಾದ-೨೦೨೩ (ಸಂತಸದ ಕರೆಗಾಳಿ) ಕಾರ್ಯಕ್ರಮದಲ್ಲಿ ದಿ. ಮಂಜುನಾಥ ಕೋಟ ಸ್ಮಾರಕ ದತ್ತಿ ಪುರಸ್ಕಾರ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉದ್ಯಮಿ ಇಬ್ರಾಹೀಂ ಸಾಬೇಬ್ ಕೋಟ ಅವರು ಸಾಂಸ್ಕೃತಿಕ -ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿರುವ ಕಾರಂತ ಥೀಮ್ ಪಾರ್ಕ್ ದತ್ತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಫೆ.01: ನಾವು ಹಿಂದುಳಿದಿದ್ದೇವೆ ಎಂಬ ಮನ:ಸ್ಥಿತಿಯಿಂದ ಹೊರಬಂದು ವಿದ್ಯಾವಂತರಾಗಿ ಧನಾತ್ಮಕ ಯೋಚನೆ, ಯೋಜನೆಗಳೊಂದಿಗೆ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಇಂದು ನಗರದ ಅಂಬಲಪಾಡಿ ಜಿಲ್ಲಾ ಸವಿತಾ ಸಮಾಜ ಸಮುದಾಯ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಸವಿತಾ ಸಮಾಜ ಉಡುಪಿ ಇವರ ಸಹಯೋಗದಲ್ಲಿ ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸವಿತಾ ಸಮುದಾಯಕ್ಕೆ ಸದಾ ಸಹಕಾರ ನೀಡುವುದಾಗಿ ತಿಳಿಸಿದರು. ಉಡುಪಿ ಜಿಲ್ಲಾ ಸವಿತಾ ಸಮಾಜದ ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು ಸವಿತಾ ಮಹರ್ಷಿಗಳ ಬಗ್ಗೆ ಉಪನ್ಯಾಸ ನೀಡಿದರು. ಕುಂದಾಪುರ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸುಭಾಸ್ ಭಂಡಾರಿ…

Read More