Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತ ರತ್ನ ಪಂಡಿತ್ ಭೀಮಸೇನ್ ಜೋಶಿಯವರ ಜನ್ಮ ಶತಮಾನೋತ್ಸವವನ್ನು ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಕ್ಷಮತಾ ಹುಬ್ಬಳ್ಳಿ ಸಂಸ್ಥೆಯು ಜೊತೆಯಾಗಿ ಆಚರಿಸುತ್ತಿದ್ದು, ಇದರ ಅಂಗವಾಗಿ ಅ.17ರ ಸಂಜೆ 5:30ಕ್ಕೆ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ನಾಡಿನ ಪ್ರಖ್ಯಾತ ಕಲಾವಿದ ಪಂಡಿತ್ ಗಣಪತಿ ಭಟ್ಟ ಹಾಸಣಗಿಯವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಲಾವಿದ ಪಂಡಿತ್ ಗಣಪತಿ ಭಟ್ಟ ಹಾಸಣಗಿಯವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನಕ್ಕೆ ತಬಲಾದಲ್ಲಿ ಶ್ರೀಧರ ಮಾಂಡ್ರೆ ಮತ್ತು ಹಾರ್ಮೋನಿಯಂನಲ್ಲಿ ಗುರುಪ್ರಸಾದ ಹೆಗಡೆ ಸಾಥ್ ನೀಡಲಿದ್ದಾರೆ. ಖ್ಯಾತ ಗಾಯಕ, ವಿದ್ವಾನ್ ಸತೀಶ್ ಭಟ್ ಮಾಳಕೊಪ್ಪ ಅವರ ಇವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕೂಡ ಇದ್ದು, ಇವರಿಗೆ ಶ್ರೀ ಗುರುರಾಜ ಹೆಗಡೆ ಆಡುಕಳ ಮತ್ತು ಸತೀಶ ಹೆಗ್ಗಾರ ತಬಲಾ ಮತ್ತು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆ, ಇನ್ಫೋಸಿಸ್ ಫೌಂಡೇಶನ್, ಭಾರತೀಯ ಜೀವ ವಿಮಾ ನಿಗಮ ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಗಂಗೊಳ್ಳಿ, ರೋಟರಿ ಕ್ಲಬ್ ಗಂಗೊಳ್ಳಿ ಹಾಗೂ ಆದರ್ಶ ಆಸ್ಪತ್ರೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಕಿಟ್ ವಿತರಣೆ ಕಾರ್ಯಕ್ರಮ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ, ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಕಿಟ್ ವಿತರಿಸಿ ಮಾತನಾಡಿದ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಆರೋಗ್ಯ ಎಲ್ಲರಿಗೂ ಮುಖ್ಯ. ಮನುಷ್ಯ ಆರೋಗ್ಯವಂತನಾದರೆ ಮಾತ್ರ ದೇಶ ಸದೃಢವಾಗಿ ಬೆಳೆದು ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಿದೆ. ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಆರೋಗ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ದೇಶದಾದ್ಯಂತ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ತೆರೆದು ಕಡಿಮೆ ಬೆಲೆಯಲ್ಲಿ ಔಷಧಗಳನ್ನು ದೊರೆಯುವಂತೆ ಮಾಡಿದ್ದಾರೆ. ಜನೌಷಧಿ ಕೇಂದ್ರಗಳ ಮೂಲಕ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಜನರ ಆರೋಗ್ಯ ಸುಧಾರಣೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಕೊರೋನಾ ಕಾರಣದಿಂದ ಸರಕಾರದಿಂದ ಅನುದಾನ ಒದಗಿಸಲು ಸದ್ಯದಮಟ್ಟಿಗೆ ಸಾಧ್ಯವಿಲ್ಲದೇ ಇರುವುದರಿಂದ ದಾನಿಗಳಿಂದ ಕಟ್ಟಡ ನಿರ್ಮಿಸಲು ಶಿಕ್ಷಣ ಸಚಿವರು ಸೂಚಿಸಿದ್ದಾರೆ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ನುಡಿದರು. ಅವರು ಚಿತ್ತೂರು ಸರಕಾರಿ ಹಿ.ಪ್ರಾಥಮಿಕ ಶಾಲೆಯಲ್ಲಿ ಅರ್ಚಕ ಶ್ರೀಧರ ಮಂಜ, ಹೈದರಬಾದ್ ಹೋಟೆಲ್ ಉದ್ಯಮಿ ಕೃಷ್ಣಮೂರ್ತಿ ಮಂಜ ಹಾಗೂ ಅರ್ಚಕ ನಾಗರಾಜ ಮಂಜ ಸಹೋದರರು ಎಂ.ಎಸ್.ಮಂಜ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿಕೊಡುತ್ತಿರುವ ರಂಗಮಂದಿರ ಹಾಗೂ ೪ ತರಗತಿ ಕೊಠಡಿಗಳಿಗೆ ಶಂಕುಸ್ಥಾಪನೆ ಸಂದರ್ಭ ಮಾತನಾಡಿದರು. ಯಾರೇ ಕೋಟ್ಯಾಂತರ ಹಣ ದುಡಿದರೂ ಅದನ್ನು ಕೊಂಡುಹೋಗಲು ಸಾಧ್ಯವಿಲ್ಲ. ಸಮಾಜಕ್ಕೆ ಅದನ್ನು ದಾನರೂಪದಲ್ಲಿ ಕೊಟ್ಟರೆ ಅದು ಚಿರಸ್ಥಾಯಿಯಾಗಿ ಉಳಿಯಲಿದೆ. ಕೊಡುಗೈ ದಾನಿ, ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಸಹೋದರರು ಈ ಸತ್ಯ ಅರಿತಿರುವುದರಿಂದ ಶಾಲೆಗಳ ಅಭಿವೃದ್ಧಿಗೆ ತಮ್ಮ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ. ಇವರಂತೆ ಉಳ್ಳವರು ಶಿಕ್ಷಣ ಸಂಸ್ಥೆಗಳಿಗೆ ದಾನ ನೀಡಬೇಕೆಂದರು. ಎಂ.ಎಸ್. ಮಂಜ ಚಾರಿಟೇಬಲ್ ಟ್ರಸ್ಟಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಭಾಷೆಯಿಂದ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯದ ಕುಲಸಚಿವರಾದ ಡಾ. ಸಂಪತ್ ಕುಮಾರ್ ಹೇಳಿದರು ಮಿಜಾರಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ಸಂಘದ ವತಿಯಿಂದ ನಡೆದ 2 ದಿನದ ‘ಕನ್ನಡ ಹಬ್ಬ – 2021’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸ್ತ್ರೀಯ ಸ್ಥಾನವಿರುವ ಕನ್ನಡ ಭಾಷೆಯಲ್ಲಿ ಉನ್ನತ ಮಟ್ಟದ ಜ್ಞಾನವಿದೆ. ಆದರೆ ಭಾಷೆಯ ಸರಿಯಾದ ಅಧ್ಯಯನ ಆಗುತ್ತಿಲ್ಲ. ನಾವಿರುವ ನಾಡು ಹಾಗೂ ಭಾಷೆಯ ಕುರಿತು ಹೆಮ್ಮೆಯಿರದೇ ಹೋದರೆ ವ್ಯಕ್ತಿತ್ವ ಬೆಳೆಯಲು ಸಾಧ್ಯವಿಲ್ಲ. ಸಾಹಿತ್ಯವು ತಪ್ಪನ್ನು ತಿದ್ದಿ, ಬಹುಮುಖಿ ಚಿಂತನೆಗಳನ್ನು ಬೆಳೆಸುತ್ತದೆ ಹಾಗೂ ಲಲಿತ ಕಲೆಗಳಿಂದ ಆತ್ಮಶಕ್ತಿ ವೃದ್ಧಿಯಾಗುತ್ತದೆ ಎಂದರು. ವಿದ್ಯಾರ್ಥಿಗಳಲ್ಲಿ ಸಾಹಿತ್ಯ-ಸಂಸ್ಕೃತಿಯನ್ನು ಪ್ರೀತಿಸುವ ಮನೋಭಾವ ಬೆಳೆಯಬೇಕು ಎಂದರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಮಾತನಾಡಿ, ಸಾಹಿತ್ಯದ ಚಿಂತನೆಗಳು ಮೂಡುವ ಮೊದಲು ನಮ್ಮಲ್ಲಿ ಆಂಗಿಕ ಭಾಷೆಯ ಬಳಕೆಯಿತ್ತು, ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಲಹರಿ ಇದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ -…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಷನ್ ರಿ. ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ರಿ. ಇದರ ಸಹಯೋಗದೊಂದಿಗೆ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ರಿ. ಕುಂದಾಪುರ ಮುಕ್ತ ಅಂತರ್ಜಾಲ ಚೆಸ್ ಪಂದ್ಯಾಟವು www.tornelo.com ಎಂಬ ಪ್ಲಾಟ್ಫಾರ್ಮ್ ಮುಖೇನ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಚೆಸ್ ಅಸೋಸಿಯೇಷನ್ ನ ಅಧ್ಯಕ್ಷ ಡಾ. ರಾಜಗೋಪಾಲ್ ಶೆಟ್ಟಿ, ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ, ಚೆಸ್ ಪಂದ್ಯಾಟದ ಮುಖ್ಯ ತೀರ್ಪುಗಾರರಾದ ವಸಂತ್ ಬಿ. ಎಚ್ ಹಾಗೂ ಇನ್ನಿತರ ಮುಖ್ಯ ಗಣ್ಯರು, ಸ್ಪರ್ಧಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ಚೆಸ್ ಪಂದ್ಯಾವಳಿ ಒಟ್ಟು ಒಂಭತ್ತು ಸುತ್ತು ಗಳಲ್ಲಿ ನಡೆಯಿತು. ಗ್ರಾಂಡ್ ಮಾಸ್ಟರ್ ಆರ್ .ಆರ್ ಲಕ್ಷ್ಮಣ್, ಅಂತಾರಾಷ್ಟ್ರೀಯ ಮಾಸ್ಟರ್ ಪಿ. ಡಿ. ಎಸ್ ಗಿರಿನಾಥ್, ತಮಿಳುನಾಡಿನ ಹರಿಕೃಷ್ಣನ್.ಎ ಹಾಗೂ ಹಲವಾರು ರಾಜ್ಯ, ರಾಷ್ಟ್ರ ಮಟ್ಟದ ಚೆಸ್ ಆಟಗಾರರು ಸೇರಿದಂತೆ ಒಟ್ಟು 196 ಸ್ಪರ್ಧಿಗಳು ಭಾಗವಹಿಸಿ ಸ್ಪರ್ಧೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ವಿಶ್ವಕರ್ಮ ಯುವಕ ಸಂಘ ರಿ ಬೈಂದೂರು ಇವರ ಮೂರನೇ ವರ್ಷದ ಅಂಗವಾಗಿ ಸಂಘದ ನೂತನ ಕಛೇರಿ ಉದ್ಘಾಟನಾ ಸಮಾರಂಭ ಭಾನುವಾರ ಬೈಂದೂರು ಪಟವಾಲ್ ಕಟ್ಟಡದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನ ಇದರ ಮಾಜಿ ಆಡಳಿತ ಮೊಕ್ತೇಸರರು ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿಶ್ವಕರ್ಮ ಒಕ್ಕೂಟ ರಿ ಇದರ ಗೌರವಾಧ್ಯಕ್ಷ ಯು.ಕೆ.ಎಸ್ ಸೀತಾರಾಮ ಆಚಾರ್ಯ ಸಂಘದ ಕಛೇರಿ ಉದ್ಘಾಟಿಸಿ ಮಾತನಾಡಿ, ಯುವ ಸಂಘಟನೆಯ ಮೂಲಕ ಹೆಚ್ಚು ಹೆಚ್ಚು ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ಪ್ರತಿಯೊಂದಕ್ಕೂ ಸಂಘಟನೆ ಬಹಳ ಮುಖ್ಯ ಸಂಘಟನೆ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ. ಅಲ್ಲದೇ ಸಂಘಟನೆಗಳು ನಿರ್ದಿಷ್ಟ ಗುರಿ ಉದ್ದೇಶ ಹೊಂದಿದ್ದರೆ ಯಶಸ್ಸು ಪಡೆಯಲು ಸಾಧ್ಯ ಎಂದರು. ಗೌರವ ಉಪಸ್ಥಿತಿಯಲ್ಲಿ ಬೈಂದೂರು ಪೊಲೀಸ್ ಎಸೈ ಪವನ್ ನಾಯ್ಕ್ ಮಾತನಾಡಿ, ಸಮಾಜದ ಬಲವರ್ಧನೆಯೊಂದಿಗೆ ಪರಸ್ಪರ ಪ್ರೀತಿ ಬೆಸೆಯುವ ಉದ್ದೇಶ ಸಂಘಟನೆಯಿಂದ ಈಡೇರಿಸಲು ಸಾಧ್ಯ. ಸಮಾಜದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಕ್ಕಳ ಹದಿಹರೆಯದ ಆರಂಭ ಹಂತದಲ್ಲಿ ಆಗುವ ಬದಲಾವಣೆಗಳು ಅವರ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಆನ್‌ಲೈನ್ ಆಟ, ಜಾಲತಾಣ ಜುಗಾರಿ ಮೊದಲಾದವುಗಳು ಮಕ್ಕಳಲ್ಲಿ ವ್ಯಸನಗಳಾಗಿ ಬೆಳೆಯುತ್ತಿರುವುದು ಈಚಿನ ದಿನಗಳ ವಿದ್ಯಮಾನ ಎಂದು ಉಡುಪಿಯ ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವಿಜ್ಞಾನಿ ನಾಗರಾಜ ಮೂರ್ತಿ ಹೇಳಿದರು. ತ್ರಾಸಿಯ ಡಾನ್ ಬಾಸ್ಕೊ ಸೀನಿಯರ್ ಸೆಕೆಂಡರಿ ಶಾಲೆಯ ಸ್ವಾಸ್ಥ್ಯ ವಿಭಾಗದ ಕ್ಲಬ್ ಆಫ್ ಲೈಫ್ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಆಟಗಳ ಅವಧಿ ನಿರ್ವಹಣೆ ಮೂಲಕ ಸ್ವನಿಯಂತ್ರಣ ಸಾಧಿಸಿ, ಆನ್‌ಲೈನ್ ವೇದಿಕೆಗಳಿಗೆ ಬಲಿಯಾಗುವುದನ್ನು ತಡೆಗಟ್ಟುವ ವಿವಿಧ ವಿಧಾನಗಳನ್ನು ವಿವರಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲ ಫಾ. ಮ್ಯಾಕ್ಸಿಮ್ ಡಿಸೋಜ, ಕೋವಿಡ್-19 ಕುಸಿತದ ಬಳಿಕ ಭೌತಿಕ ತರಗತಿಗಳ ಆರಂಭದೊಂದಿಗೆ ಮಕ್ಕಳಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಅವುಗಳನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮಾನಸಿಕ ಆರೋಗ್ಯ ಪರಿಣತರು ಮುಂದಿನ ವರ್ಷಗಳಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಾರಂತರು ಶೋಷಿತರ ಪರವಾಗಿ ಸಮಾಜದಲ್ಲಿ ಧ್ವನಿ ಎತ್ತಿದವರು, ಅವರ ಕಾದಂಬರಿಯಲ್ಲೂ ಇದರ ಬಗ್ಗೆ ಬೆಳಕು ಚೆಲ್ಲುವುದರ ಮೂಲಕ ಸಮಾಜದ ಅಂಕು ಡೊಂಕುಗಳಿಗೆ ತಿದ್ದುವ ಪ್ರಯತ್ನ ಮಾಡಿದ್ದಾರೆ. ಧನಾತ್ಮಕ ಚಿಂತನೆ, ಪರಿಸರದ ಬಗ್ಗೆ ಕಾಳಜಿ, ಮಾನವೀಯ ಮೌಲ್ಯಗಳನ್ನು ಒಳಗೊಂಡ ಕಾರಂತರು ವಿಶ್ವಮಾನವ ಸಂದೇಶ ಜಗತ್ತಿಗೆ ಸಾರಿದವರು ಅದರಂತೆ ಬದುಕಿದ ಅವರ ಬದುಕೆ ನಮಗೆಲ್ಲ ಮಾದರಿ ಎಂದು ಉಡುಪಿ ಜಿಲ್ಲಾ ಕ.ಸಾ.ಪ ನಿಕಟ ಪೂರ್ವಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಹೇಳಿದರು. ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ17ನೇ ವರುಷದ ಸಂಭ್ರಮದ ಸಾಹ್ಯಿತ್ಯಿಕ -ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿತ-2021(ಎಣೆಯಿಲ್ಲದ ಚಕಿತ) ಕಾರ್ಯಕ್ರಮದ ಎಂಟನೇ ದಿನದ ಕಾರಂತ ಚಿಂತನ ಹಾಗೂ ನೆನಪು ಫೌಂಡೇಶನ್ ರಿ. ಸಾಸ್ತಾನ ಇವರಿಂದ ಡಾ. ರಾಜ್ ಗಾನಾಮೃತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಫಿಟ್ ಇಂಡಿಯಾ ಅಭಿಯಾನಕ್ಕೆ ಪ್ರಧಾನಮಂತ್ರಿ ಕರೆಕೊಟ್ಟಿದ್ದು ಈ ಮೂಲಕ ಎಲ್ಲರೂ ಸದೃಢರಾಗಬೇಕಾದ ಅಗತ್ಯವನ್ನು ತಿಳಿಸಲಾಗಿದೆ. ಉತ್ತಮ ಆರೋಗ್ಯದೊಂದಿಗೆ ಜೀವನ ನಡೆಸುವುದು ಬಹುಮುಖ್ಯವಾದುದು ಎಂದು ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು ಹೇಳಿದರು. ಯುವ ಮೆರಿಡಿಯನ್ ಸಮೂಹ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಕುಂದಾಪುರ ಸೈಕ್ಲಿಂಗ್ ಕ್ಲಬ್ ಸಹಯೋಗದಲ್ಲಿ ಭಾನುವಾರ ನಡೆದ ‘ಯುವ ಸೈಕ್ಲೊತಾನ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೈಕಲ್ ಜಾಥಾಕ್ಕೆ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಯುವ ಮೆರಿಡಿಯನ್ ಸಂಸ್ಥೆ ಆಡಳಿತ ಪಾಲುದಾರರಾದ ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ಯುವ ಸಮುದಾಯವನ್ನು ಪಿಟ್ನೆಸ್’ನತ್ತ ಸೆಳೆಯುವಲ್ಲಿ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಕೊರೋನಾದಿಂದ ಒಂದೂವರೆ ವರ್ಷಗಳಿಂದ ಜನರು ಫಿಟ್ನೆಸ್ಸಿನಿಂದ ದೂರವಿದ್ದು ಅವರನ್ನು ಮತ್ತೆ ಆರೋಗ್ಯ ಕಾಳಜಿಯತ್ತ ಸೆಳೆಯುವ ಜೊತೆಗೆ ಮಾನಸಿಕವಾಗಿ, ದೈಹಿಕವಾಗಿ ಸದೃಢರನ್ನಾಗಿಸಿ ಫಿಟ್ನೆಸ್ ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು. ಕುಂದಾಪುರ ನಗರದಲ್ಲಿ ಸಂಚರಿಸಿದ ಸೈಕಲ್ ಜಾಥಾ ಕಾಳಾವರದ ಯುವ ಮೆರಿಡಿಯನ್ ಅಮ್ಯೂಸ್ಮೆಂಟ್ ಪಾರ್ಕ್ ತನಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಉಪ್ಪುಂದ ಸುಮುಖ ಕಾಂಪ್ಲೆಕ್ಸ್’ನ ನೆಲಮಹಡಿಗೆ ಸ್ಥಳಾಂತರಗೊಂಡ ರಿಶಾ ಡಯಾಗ್ನೋಸ್ಟಿಕ್ ಸೆಂಟರ್ ಕಛೇರಿ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವೈದ್ಯ ಡಾ. ಪ್ರವೀಣ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಬೈಂದೂರು ರೆಡ್ ಕ್ರಾಸ್ ಅಧ್ಯಕ್ಷರಾದ ನಿತಿನ್ ಶೆಟ್ಟಿ, ಕಾರ್ಯದರ್ಶಿ ಮನೋಹರ್ ಶೆಟ್ಟಿ, ಜೆಸಿಐ ಉಪ್ಪುಂದದ ಅಧ್ಯಕ್ಷರಾದ ಪುರುಷೋತ್ತಮ್ ದಾಸ್, ನಾಗರಾಜ್ ಹುಬ್ಬೆರಿ, ರಿಶಾ ಡಯಾಗ್ನೋಸ್ಟಿಕ್’ನ ರಮೇಶ್ ಜೋಗಿ ಹಳಗೇರಿ, ಮೊದಲಾದವರು ಉಪಸ್ಥಿತರಿದ್ದರು. ಉಚಿತ ಮಧುಮೇಹ ಹಾಗೂ ರಕ್ತದೋತ್ತಡ ತಪಾಸಣಾ ಶಿಬಿರದ ಪ್ರಯೋಜನವನ್ನು 80ಕ್ಕೂ ಅಧಿಕ ಮಂದಿ ಪಡೆದುಕೊಂಡರು. ಡಾ. ಪಲ್ಲವಿ ಶೆಟ್ಟಿ ಶಿಬಿರವನ್ನು ನಡೆಸಿದರು. ಶಿಕ್ಷಕ ಸುಬ್ರಹ್ಮಣ್ಯ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.

Read More