Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಚಿತ್ರ ನಟ ನಿರ್ದೇಶಕ ರಕ್ಷಿತ್ ಶೆಟ್ಟಿ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ತಾವು ಹೊಸದಾಗಿ ಖರೀದಿಸಿದ ಆಡಿ ಕ್ಯೂ8 ಕಾರಿಗೆ ದೇವರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಒಂದು ಮುಡಿ ಅಕ್ಕಿ ಕಡುಬಿನ ಹರಕೆಯನ್ನು ದೇವರಿಗೆ ಸಮರ್ಪಿಸಿದರು. ಈ ಸಂದರ್ಭ ದೇವಳದ ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಅವರು ನಟ ರಕ್ಷಿತ್ ಶೆಟ್ಟಿಯನ್ನು ದೇವಳದ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಪರ್ಯಾಯ ಅರ್ಚಕ ವೆಂಕಟನಾರಾಯಣ ಉಪಾಧ್ಯಾಯ ಮತ್ತು ಸಹೋದರರು, ಮ್ಯಾನೇಜರ್ ನಟೇಶ್ ಕಾರಂತ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಆರಂಭಿಸುವ ಗುರಿ ಇರಿಸಿಕೊಂಡಿದ್ದೇವೆ. ಕಳೆದ ವರ್ಷ ಹಾಗೂ ಈ ವರ್ಷ ಸೇರಿ ಈಗಾಗಲೆ 10 ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಆರಂಭಿಸಲಾಗಿದೆ. ಕೋವಿಡ್ ಕಳೆದ ಒಂದೂವರೆ ವರ್ಷಗಳಿಂದ ಮಕ್ಕಳ ಶಿಕ್ಷಣವನ್ನು ಹಾಳು ಮಾಡಿದೆ. ಕೋವಿಡ್‌ನಿಂದ ಹೋಟೆಲ್ ಉದ್ಯಮಕ್ಕೆ, ಬಸ್ ಉದ್ಯಮಕ್ಕೆ ಹಾಗೂ ಶಾಲೆಗಳಿಗೆ ತುಂಬಲಾರದ ನಷ್ಟವಾಗಿದೆ. ಹೋಟೆಲ್ ಹಾಗೂ ಬಸ್ ಉದ್ಯಮ ಸರಿಪಡಿಸಿಕೊಳ್ಳಬಹುದು. ಆದರೆ ಮಕ್ಕಳ ಶಿಕ್ಷಣದಲ್ಲಾದ ನಷ್ಟ ಸರಿಪಡಿಸಿಕೊಳ್ಳುವುದೇ ಕಷ್ಟ ಎಂಬಂತಾಗಿದೆ. ಈ ನಷ್ಟವನ್ನು ಶಿಕ್ಷಕರು ವಿಶೇಷ ಕಾಳಜಿ ಇಟ್ಟು ಸರಿಪಡಿಸಬೇಕು. ಎಲ್ಲಾ ಶಿಕ್ಷಕರು ಮುಂದಿನ ಎರಡು ವರ್ಷಗಳಲ್ಲಿ ಮಕ್ಕಳನ್ನು ಪುನರ್ ಸಿದ್ದಪಡಿಸಬೇಕು. ಸಮಾಜದ ಕಟ್ಟಕಡೆಯ ಮಗು ಕೂಡ ಯೋಗ್ಯ ಶಿಕ್ಷಣ ಪಡೆದಲ್ಲಿ ದೇಶ ಬದಲಾಗಲಿದೆ ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ನುಡಿದರು. ಅವರು ಚಿತ್ತೂರು ಸರಕಾರಿ ಹಿರಿಯ ಪ್ರಥಮಿಕ ಶಾಲೆಯಲ್ಲಿ ನೋಟ್ ಪುಸ್ತಕ ವಿತರಣೆ, ಸುಸಜ್ಜಿತ ಶೌಚಾಲಯ, ಆಂಗ್ಲ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಭಟ್ಕಳ: ಇಲ್ಲಿನ ಹನುಮಾನನಗರದ ಮಮತಾ ದೇವೇಂದ್ರ ನಾಯ್ಕ್ ಅವರು ಮಂಡಿಸಿರುವ ‘ಕೆಲವು ಪ್ರಮುಖ ಆವರ್ತಕ ಸಂಯುಕ್ತಗಳ ಸಂಶ್ಲೇಷಣೆ, ಗುಣಲಕ್ಷಣ ಮತ್ತು ಜೈವಿಕ ಮೌಲ್ಯಮಾಪನ’ (Synthesis, Characterization And Biological Evaluation Of Some Novel Heterocyclic Compounds) ಸಂಶೋಧನಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ಪ್ರದಾನ ಮಾಡಿದೆ. ಅವರು ಕುವೆಂಪು ವಿಶ್ವವಿದ್ಯಾಲಯದ ರಸಾಯನಶಾಸ್ತ್ರದ ಸಂಶೋಧನೆ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗದ ಯಾದವ ಬೋಡ್ಕೆ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಮಮತಾ ನಾಯ್ಕ್ ಅವರು ಪ್ರಸ್ತುತ ಭಟ್ಕಳದ ಸಿದ್ದಾರ್ಥ ಪದವಿಪೂರ್ವ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಸಾಧನೆಗೆ ಕುಟುಂಬಸ್ಥರು, ಹನುಮಾನನಗರದ ನಾಮಧಾರಿ ಸಮಾಜ, ಯುವಕ ಮಂಡಲ, ಜೈ ಹನುಮಾನ್ ಯುವಕ ಮಂಡಲ, ಜೈ ಹನುಮಾನ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಊರಿನ ಮುಖಂಡರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿಬೈಂದೂರು: ತಾಲೂಕು ಕೊಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರಿಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರ ಸಮಾವೇಶ ಜರಗಿತು. ಅಖಿಲ ಭಾರತ ಕೃಷಿಕೂಲಿಕಾರರ ಸಂಘ(AIAWU)ದ ಜಿಲ್ಲಾ ಪ್ರಧಾನ ಕಾಯ೯ದಶಿ೯ ವೆಂಕಟೇಶ್ ಕೋಣಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕೊಲ್ಲೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಉದ್ಯೊಗ ಚೀಟಿಗಾಗಿ ಕೂಲಿಕಾರರು ಸಲ್ಲಿಸಿದ ಅಜಿ೯ಗೆ ಅನುಸಾರವಾಗಿ ಈ ಕೂಡಲೇ ಉದ್ಯೊಗ ಚೀಟಿ ಕೊಟ್ಟು,ನರೇಗಾ ಕೆಲಸ ಕೊಡಲು ಕ್ರಮ ವಹಿಸಬೇಕು ಎಂದು ಸ್ಥಳೀಯಾಡಳಿತವನ್ನು ಆಗ್ರಹಿಸಿದರು. ಈ ಸಂದರ್ಭ ಕೊಲ್ಲೂರು ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕ ಸಂಘದ ಅಧ್ಯಕ್ಷ ನರಸಿಂಹ ಆಚಾರ್, ಮಧು, ಅಂಬಿಕಾ ಬಾಳಿಗ, ಡಾ. ಬಿ. ವಿ. ಬೇಬಿ ಹಾಲ್ಕಲ್ ಉಪಸ್ಥಿತರಿದ್ದರು. ರೇಣುಕಾ ಧನ್ಯವಾದ ಗೈದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಪ್ರಸಿದ್ಧ ಮೂಡಗಲ್ಲು ಕೇಶವನಾಥೇಶ್ವರ ದೇವಸ್ಥಾನಕ್ಕೆ ಮಂಗಳವಾರ ಕನ್ನಡದ ಖ್ಯಾತ ನಟ, ನಿರ್ದೇಶಕರುಗಳಾದ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಭೇಟಿ ನೀಡಿದರು. ಕುಟುಂಬಿಕರೊಂದಿಗೆ ದೇವಸ್ಥಾನಕ್ಕೆ ಮೊದಲ ಭಾರಿಗೆ ಆಗಮಿಸಿದ್ದ ರಕ್ಷಿತ್ ಶೆಟ್ಟಿ ಪೂಜೆ ಸಲ್ಲಿಸಿದರು. ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ಕರೆಯ ಮೇರೆಗೆ ರಕ್ಷಿತ್ ಶೆಟ್ಟಿ ಆಗಮಿಸಿದ್ದರು. ಈ ಸಂದರ್ಭ ಪ್ರದೀಪ್ ಶೆಟ್ಟಿ, ದಿವ್ಯಾಧರ ಶೆಟ್ಟಿ, ಸುಹಾಸ್ ಶೆಟ್ಟಿ ಮೊದಲಾದವರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತ್ ಪೆಟ್ರೋಲಿಯಂ ಕಂಪೆನಿ ಲಿ. ನೂತನ ಗ್ರಾಹಕ ಅನುಕೂಲ ವ್ಯವಸ್ಥೆ ‘ಫ್ಯೂಯಲ್ ಕಾರ್ಟ್’ ವಾಹನದ ಮೂಲಕ ಡೀಸೆಲ್ ಇಂಧನ ಕರೆಯ ಮೇರೆಗೆ ಉದ್ಯಮಗಳಿಗೆ ತಲುಪಿಸುವ ಸೌಲಭ್ಯವನ್ನು ಬಿಪಿಸಿಎಲ್‌ನ ಜನರಲ್ ಮೆನೇಜರ್ ಟಿ. ಎನ್. ರಾಮಕೃಷ್ಣನ್ ಉದ್ಘಾಟಿಸಿದರು. ಕಾಲಕ್ಕೆ ಅನುಗುಣವಾಗಿ ಇಂಧನ ಸರಬರಾಜು ಮಾಡುವ ವ್ಯವಸ್ಥೆಯಲ್ಲೂ ಗ್ರಾಹಕರ ಅನುಕೂಲ ಸೌಲಭ್ಯದ ಕಡೆ ಗಮನ ಹರಿಸುತ್ತಿದ್ದೇವೆ. ಕೈಗಾರಿಕೋದ್ಯ ಮಿಗಳು ಸಹಿತ ಹೆಚ್ಚು ಇಂಧನ ಉಪಯೋಗಿಸುವವರಿಗೆ ತುಂಬ ಅನುಕೂಲ ಮಾಡಿಕೊಡುವ ‘ಫ್ಯೂಯಲ್ ಕಾರ್ಟ್’ ಎಂಬ ಸಂಚಾರಿ ಇಂಧನ ಸರಬರಾಜು ಮಾಡುವ ವ್ಯವಸ್ಥೆ ಪರಿಚಯಿಸುತ್ತಿದ್ದೇವೆ. ಮಹಾಲಸಾ ಮೋಟಾರ್ ಫ್ಯೂಯಲ್ಸ್ ಈ ಯೋಜನೆ ಅಳವಡಿಸುವಲ್ಲಿ ಮುತುವರ್ಜಿ ವಹಿಸಿ ಬಿಪಿಸಿಎಲ್ ಕಂಪೆನಿಯ ಉದ್ದೇಶ ಈಡೇರಿಸುತ್ತಿದೆ ಎಂದು ಹೇಳಿದರು. ಈ ಸಂದರ್ಭ ಕಂಪೆನಿಯ ಟೆರಿಟೆರಿ ಮೆನೇಜರ್ ಸಚಿನ್ ಕುಲಕರ್ಣಿ, ಕೋ ಒರ್ಡಿನೇಟರ್ ಗೋರಕ್‌ನಾಥ್, ಉಡುಪಿ ವಿಭಾಗದ ಸೇಲ್ಸ್ ಆಫೀಸರ್ ಶ್ರಾವ್ಯ, ಹಲವು ಉದ್ಯಮಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕುಂಭಾಸಿ ಪ್ರಭು ಕುಟುಂಬದವರು ಉಪಸ್ಥಿತರಿದ್ದರು. ಕೆ. ಪ್ರಜ್ಞೇಶ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಗ್ರಾಮ ಪಂಚಾಯಿತಿಗಳಿಗೆ ಕೇಂದ್ರದ 15ನೇ ಹಣಕಾಸು ಆಯೋಗ ನಿಗದಿಗೊಳಿಸಿದ ಅನುದಾನ ವೆಚ್ಚಕ್ಕೆ ವಿಧಿಸಿದ ನಿರ್ಬಂಧಗಳು ಗ್ರಾಮದ ಅಗತ್ಯಗಳಿಗೆ ವೆಚ್ಚ ಮಾಡಲು ತಡೆಯಾಗುವುದರಿಂದ ಅವುಗಳನ್ನು ಸಡಿಲಿಸಬೇಕು ಎಂದು ಶಿರೂರು ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ್ ಅಳ್ವೆಗದ್ದೆ ಆಗ್ರಹಿಸಿದ್ದಾರೆ. ಇದು ಗ್ರಾಮ ಪಂಚಾಯಿತಿಗಳ ಜನಸಂಖ್ಯೆ ಆಧರಿಸಿ ನಿಗದಿಯಾಗುವ ದೊಡ್ಡ ಮೊತ್ತದ ಅನುದಾನ. ಈ ಬಾರಿಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಇದರ ಶೇ40 ಅನಿರ್ಬಂಧಿತ ಮತ್ತು ಶೇ 60 ನಿರ್ಬಂಧಿತ ಅನುದಾನ. ನಿರ್ಬಂಧಿತ ಅನುದಾನದ ಶೇ30 ಕುಡಿಯುವ ನೀರು, ಶೇ 30 ನೈರ್ಮಲ್ಯ ಹಾಗೂ ತ್ಯಾಜ್ಯ ನಿರ್ವಹಣೆ ಹೊರತಾಗಿ ಅನ್ಯ ಉದ್ದೇಶಗಳಿಗೆ ವೆಚ್ಚ ಮಾಡುವಂತಿಲ್ಲ. ಶೇ 40ರ ಅನಿರ್ಬಂಧಿತ ಭಾಗವನ್ನು ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಾದರೂ ಅದರಲ್ಲಿ ಶೇ 25 ಪರಿಶಿಷ್ಟ ಜಾತಿ, ಪಂಗಡದ ಮೂಲ ಸೌಕರ್ಯ ಅಭಿವೃದ್ಧಿಗೆ ಮೀಸಲಿಡಬೇಕು. ರೂ 50 ಲಕ್ಷ ಅನುದಾನ ಪಡೆಯುವ ಗ್ರಾಮ ಪಂಚಾಯಿತಿ ರೂ 15ಲಕ್ಷವನ್ನು ಮಾತ್ರ ಗ್ರಾಮದ ಮೂಲ ಸೌಕರ್ಯ ಅಭಿವೃದ್ಧಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಬೆಂಗಾವಲು ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಂಕರ ಪೂಜಾರಿ ಕಾಡಿನತಾರು ಅವರು ಮುಖ್ಯಮಂತ್ರಿ ಚಿನ್ನದ ಪದಕದೊಂದಿಗೆ ಪಡೆದ 10,000 ರೂ. ಮೊತ್ತವನ್ನು ವಿಲ್ಸ್‌ನ್ ಡಿಸೀಸ್ ಖಾಯಿಲೆಯಿಂದ ಬಳಲುತ್ತಿರುವ ಕೋಟದ ಬಾಲಕಿಯ ಲಿವರ್ ಟ್ರಾನ್ಸ್‌ಪ್ಲ್ಯಾಂಟ್ ಚಿಕಿತ್ಸೆಗೆ ಮಂಗಳವಾರ ಹಸ್ತಾಂತರಿದರು. ಈ ಸಂದರ್ಭ ಕೋಟ ಅಮೃತೇಶ್ವರಿ ದೇವಸ್ಥಾನದ ಮೆನೇಜರ್ ಗಣೇಶ್ ಹೊಳ್ಳ, ಮಗುವಿನ ಅಜ್ಜಿ, ಅರ್ಚಕರಾದ ಅಮೃತ್ ಜೋಗಿ, ಪಡುಕೆರೆ ಪೊಲೀಸ್ ಸಿಬ್ಬಂದಿ ಪ್ರಶಾಂತ್ ಉಪಸ್ಥಿತರಿದ್ದರು. ಬಾಲಕಿಯ ಚಿಕಿತ್ಸೆಗೆ ಬೇಕಿದೆ ನೆರವುಕೋಟ ಅಮೃತೇಶ್ವರಿ ದೇವಸ್ಥಾನದ ಸಮೀಪ ವಾಸಿಸುತ್ತಿರುವ ದಾಮೋದರ ಹಾಗೂ ದೀಕ್ಷಾ ದಂಪತಿಗಳ ಪುತ್ರಿ ಮಾನ್ಯ ಜೋಗಿ (೬) ವಿಲ್ಸ್‌ನ್ ಡಿಸೀಸ್‌ನಿಂದ ಬಳಲುತ್ತಿದ್ದು, ಬೆಂಗಳೂರಿನ ಆಸ್ಟರ್ ಇಂಟಿಗ್ರೆಟೆಡ್ ಲಿವರ್ ಕೇರ್ ಆಸ್ಪತ್ರೆಯ ವೈದ್ಯರಲ್ಲಿ ತೋರಿಸಿದಾಗ ಲಿವರ್ ಟ್ರಾನ್ಸ್‌ಪ್ಲ್ಯಾಂಟ್ ಚಿಕಿತ್ಸೆಯ ಅಗತ್ಯವಿರುದಾಗಿ ತಿಳಿಸಿದ್ದಾರೆ. ಚಿಕಿತ್ಸೆಗೆ ಸುಮಾರು 15ರಿಂದ 20 ಲಕ್ಷ ರೂ. ಹಣದ ಅವಶ್ಯಕತೆಯಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ 15 ದಿನಗಳ ಒಳಗೆ ಭರಿಸುವುದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೊಳೆಗೆ ಸ್ನಾನಕ್ಕೆಂದು ತೆರಳಿದ ಯುವಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಆರ್ಡಿ ಗ್ರಾಮದ ಗಂಟುಬೀಳು ಎಂಬಲ್ಲಿ ಸೋಮವಾರ ನಡೆದಿದೆ. ಅಲ್ಬಾಡಿ ಗ್ರಾಮದ ನಿವಾಸಿ ಮೋಹನ ನಾಯ್ಕ್ (22) ಹಾಗೂ ಸುರೇಶ ನಾಯ್ಕ್ (19) ಮೃತ ದುರ್ದೈವಿಗಳು. ಅಲ್ಬಾಡಿ ಗ್ರಾಮದ ನಿವಾಸಿಗಳಾದ ದಿ. ಕಾಳ ನಾಯ್ಕ್ ಅವರ ಪುತ್ರ ಮೋಹನ ನಾಯ್ಕ್ (22) ಹಾಗೂ ಮಹಾಬಲ ನಾಯ್ಕ್ ಅವರ ಪುತ್ರ ಸುರೇಶ (19) ಸಾವನ್ನಪ್ಪಿದ ದುರ್ದೈವಿಗಳು. ಆಗಿದ್ದೇನು?ಅಲ್ಬಾಡಿ ಗ್ರಾಮದ ನಿವಾಸಿಗಳಾದ ದಿ. ಕಾಳ ನಾಯ್ಕ್ ಅವರ ಪುತ್ರ ಮೋಹನ ನಾಯ್ಕ್ (22) ಹಾಗೂ ಮಹಾಬಲ ನಾಯ್ಕ್ ಅವರ ಪುತ್ರ ಸುರೇಶ (19) ಅವರೊಂದಿಗೆ ಗಾರೆ ಕೆಲಸಕ್ಕೆ ಆರ್ಡಿ ಗ್ರಾಮದ ಗಂಟುಬೀಳು ಎಂಬಲ್ಲಿರುವ ಮನೆಯೊಂದಕ್ಕೆ ಕೆಲಸಕ್ಕೆಂದು ತೆರಳಿದ್ದರು. ಮಧ್ಯಾಹ್ನ ಸುಮಾರು 1.30ರ ವೇಳೆಗೆ ಕೆಲಸ ಮುಗಿಸಿ, ಸ್ನಾನಕ್ಕೆಂದು ಆ ಮನೆಯ ಸಮೀಪವೇ ಇದ್ದ ಹೊಳೆಗೆ ತೆರಳಿ ನೀರಿಗೆ ಇಳಿದ ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ. ಹೊಳೆ ಸುಮಾರು 15 ಅಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸದಸ್ಯತ್ವ ಅಭಿಯಾನವು ರಾಜ್ಯಾದ್ಯಂತ ‘ಒಗ್ಗಟ್ಟಿನಲ್ಲಿ ಬಲವರ್ಧನೆ, ಭಿನ್ನ ಧ್ವನಿಯ ರಕ್ಷಣೆ’ ಎಂಬ ಘೋಷಾ ವಾಕ್ಯದಡಿ ಪ್ರಾರಂಭವಾಗಿದ್ದು, ಇದರ ಭಾಗವಾಗಿ ಜಿಲ್ಲಾ ಸದಸ್ಯತ್ವ ಅಭಿಯಾನಕ್ಕೆ ಕುಂದಾಪುರದಲ್ಲಿ ಚಾಲನೆ ನೀಡಲಾಯಿತು. ಉಡುಪಿ ಜಿಲ್ಲಾ ಮುಖಂಡರಾದ ನವಾಜ್ ಶೇಕ್ ಸದಸ್ಯತ್ವ ಕೂಪನ್ ವಿದ್ಯಾರ್ಥಿಗಳಿಗೆ ನೀಡುವ ಮುಖಾಂತರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಝೀಶಾನ್ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

Read More