Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹಿರಿಯ ಸಾಹಿತಿಗಳು, ಮಾಣಿಕ್ಯ ವಿಠಲ ಎಂಬ ಕಾವ್ಯನಾಮದಿಂದ ಭಕ್ತಿ ಗೀತೆಗಳನ್ನು ರಚಿಸಿ ಆಧುನಿಕ ದಾಸ ಎಂದು ಹೆಸರು ಪಡೆದ ಬಿದರ್‌ನ ಡಾ. ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ ಇವರು ನಾವುಂದ ಶ್ರೀ ಬ್ರಹ್ಮ ಬೈದರ್ಕಳ ಗರಡಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗರಡಿಯ ಬಲ್ಲಾಳಿ ಚಂದ್ರಶೇಖರ ಶೆಟ್ಟಿ, ಗರಡಿ ಮನೆಯವರಾದ ಆಡಳಿತ ಮೋಕ್ತೇಸರಾದ ಶೇಖರ್ ಪೂಜಾರಿ ಶಾಲು ಹೊದಿಸಿ ಗರಡಿಯ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಟ್ರಷ್ಟಿಗಳಾದ ಎನ್ ಕೆ ಬಿಲ್ಲವ, ಆರ್ ಕೆ ಬಿಲ್ಲವ, ಮುತ್ತ ಬಿಲ್ಲವ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದಲ್ಲಿ ಉಪ ಚುನಾವಣಾ ಪ್ರಚಾರ ಮುಗಿಯುವ ತನಕ ಕರೋನಾ ಮಾರ್ಗಸೂಚಿಯನ್ನು ತಮಗೆ ಅನುಕೂಲವಾಗುವ ರೀತಿಯಲ್ಲಿ ಪ್ರಕಟಿಸಿಕೊಂಡು , ಉಪ ಚುನಾವಣಾ ಪ್ರಚಾರ ಮುಗಿಯುತ್ತಿದ್ದಂತೆ ತಮ್ಮ ಮನಸ್ಸಿಚ್ಚೆಯಂತೆ ಮಾರ್ಗಸೂಚಿ ಪ್ರಕಟಿಸಿತ್ತಿರುವುದು ಖಂಡನಾರ್ಹ ಎಲ್ಲಾ ಆಚರಣೆಗೆ ,ರಾಜಕೀಯ ಸಭೆಗೆ ಅವಕಾಶ ಮಾಡಿ ಕೊಟ್ಟು ಕೇವಲ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಆಚರಣೆಗಳನ್ನು ನಿಷೇಧಿಸಿರುವುದು ತೀವ್ರ ಖಂಡನೀಯ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ಆರೋಪಿಸಿದ್ದಾರೆ. ಕಳೆದ ವರ್ಷದ ಲಾಕ್ ಡೌನ್ ಕಾರಣದಿಂದ ಕರಾವಳಿ ಭಾಗದಲ್ಲಿ ಎಪ್ರಿಲ್, ಮೇ ತಿಂಗಳಲ್ಲಿ ನಡೆಯುವ ದೈವ ,ದೇವರುಗಳ ಎಲ್ಲಾ ಆಚರಣೆಗಳು ರದ್ದುಗೊಂಡಿದ್ದವು. ಈ ಬಾರಿ ದಿನಾಂಕ 16-4-2021 ರಂದು ಹೊರಡಿಸಿರುವ ಮಾರ್ಗ ಸೂಚಿಯಲ್ಲಿ ಎಲ್ಲಾ ಕಾರ್ಯಕ್ರಮಗಳಿಗೆ ಸೀಮಿತ ಜನರಿಗೆ ಅವಕಾಶ ಮಾಡಿಕೊಟ್ಟು ,ಕೇವಲ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಆಚರಣೆಗಳನ್ನು ನಿಷೇಧಿಸಿರುವುದು ಸರಿಯಾದ ಕ್ರಮವಲ್ಲ. ಹಿಂದೆ ಇಂತಹ ಮಾರಕ ರೋಗಗಳು ಬಂದಾಗ ಋುಷಿ ಮುನಿಗಳು , ಸ್ವಾಮಿಜಿಗಳು ಹೋಮ ಹವನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ಪೋರ್ಟ್ಸ್ ಕನ್ನಡ ವತಿಯಿಂದ ಕರ್ನಾಟಕ ರಾಜ್ಯ ಹಿರಿಯ ಕ್ರಿಕೆಟಿಗರ ಸಮಾಗಮ 40ರ ಮೇಲ್ಪಟ್ಟ ವಯೋಮಿತಿಯ ಕ್ರಿಕೆಟ್ ಹಿರಿಯ ಕ್ರಿಕೆಟಿಗರಾದ ದಿ. ಪ್ರತಾಪ್ ಚಂದ್ರ ಹೆಗ್ಡೆ ಸ್ಮರಣಾರ್ಥ ಲೆಜೆಂಡ್ಸ್ ಕಪ್ 2021 ಮೂರು ದಿನಗಳ ಕಾಲ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟ ಬೈಂದೂರಿನ ಯುವ ಕ್ರಿಕೆಟ್ ಪ್ರೋತ್ಸಾಹಕ ರಾಜೇಶ್ ಆಚಾರ್ ಬೈಂದೂರು ಇವರನ್ನು ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರಿನ ಜ್ಯೋತಿಷಿ ಡಾ ಮಹೇಂದ್ರ ಭಟ್, ದಿವಂಗತ ಪ್ರತಾಪ್ ಚಂದ್ರ ಹೆಗ್ಡೆ ಅವರ ಧರ್ಮಪತ್ನಿ ವೇದಾವತಿ ಹೆಗ್ಡೆ ಸಂತೆಕಟ್ಟೆ, ಮಗಳು ಆರುಂಧತಿ ಪಿ ಹೆಗ್ಡೆ ಉಡುಪಿ, ಬೆಂಗಳೂರು ಕೆಪಿಸಿಸಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ, ಕುಂದಾಪುರ ಟಾರ್ಪೋಡೇಸ್ ಸಂಸ್ಥಾಪಕ ಗೌತಮ್ ಶೆಟ್ಟಿ, ಬನ್ನಂಜೆ ಪ್ಯಾರಡೈಸ್ ಶ್ರೀಧರ್ ಶೆಟ್ಟಿ, ಬೈಂದೂರು ವಿಕ್ರಂ ಕ್ರಿಕೆಟ್ ಕ್ಲಬ್ ಹಿರಿಯ ಆಟಗಾರ ಗಿರೀಶ್ ಬೈಂದೂರು, ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ನವದೆಹಲಿ ಇದರ ಕರ್ನಾಟಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಿಯ ಸನ್ನಿ ಧಿಯಲ್ಲಿ ಬಳ್ಳಾರಿಯ ಮುಸ್ಲಿಂ ಕುಟುಂಬವೊಂದು ಕಳೆದ ಹಲವು ವರ್ಷಗಳಿಂದ ವರ್ಷ ಕ್ಕೊಮ್ಮೆ ಚಂಡಿಕಾಹೋಮ ನೆರವೇರಿಸುವ ಮೂಲಕ ಗಮನ ಸೆಳೆದಿದೆಯಲ್ಲದೇ ಭಕ್ತಿ, ಶ್ರದ್ಧೆಯಿಂದ ಈ ಸೇವೆಯನ್ನು ನೀಡುತ್ತಿದೆ. ಬಳ್ಳಾರಿ ಸನಿಹದ ಗ್ರಾಮವೊಂದರ ನಿವಾಸಿ ಗುತ್ತಿಗೆದಾರ ಎಚ್. ಇಬ್ರಾಹಿಂ, ಸಾಜುದ್ದೀನ್ ಹಾಗೂ ಜರೀನಾ ಅವರ ಕುಟುಂಬದವರು ಹಲವು ವರ್ಷಗಳಿಂದ ಕೊಲ್ಲೂರಿಗೆ ಆಗಮಿಸಿ ಶ್ರೀದೇವಿಯ ದರ್ಶನ, ವಿಶೇಷ ಪೂಜೆ ಮತ್ತು ಚಂಡಿಕಾಹೋಮ ನೆರವೇರಿಸುತ್ತಿದ್ದಾರೆ. ಹಿರಿಯರ ಸೇವೆ, ತಾಯಿ ಮೂಕಾಂಬಿಕೆಯ ಅನುಗ್ರಹದಿಂದಾಗಿ ಬದುಕಿನಲ್ಲಿ ಶ್ರೇಯಸ್ಸಾಗಿದೆ ಎಂಬ ನಂಬಿಕೆಯೊಂದಿಗೆ ಇದೀಗ ಈ ಕುಟುಂಬದ ಕಿರಿಯ ಪುತ್ರ ಮನ್ಸೂರ್ ಹಾಗೂ ಅವರ ಪತ್ನಿ ಮಕ್ಕಳು ಕಳೆದ 5 ವರ್ಷಗಳಿಂದ ವರ್ಷಕ್ಕೊಮ್ಮೆ ಇಲ್ಲಿ ಚಂಡಿಕಾಹೋಮ ನಡೆಸುತ್ತಿದ್ದಾರೆ. ಎಲ್ಲಾ ದೇವರು ಕೂಡ ಒಂದೇ. ತಾಯಿ ಮೂಕಾಂಬಿಕೆಯ ಸನ್ನಿಧಿಯಲ್ಲಿ ಚಂಡಿಕಾಹೋಮ ನಡೆಸುವ ಮೂಲಕ ಆತ್ಮಸಂತೃಪ್ತಿ ಹೊಂದಿದ್ದೇವೆ. ಕ್ಷೇತ್ರದಲ್ಲಿ ವಿಶೇಷ ಶಕ್ತಿ ಇದೆ. – ಮನ್ಸೂರ್, ಕೊಲ್ಲೂರು ದೇವಳದ ಭಕ್ತ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಸಮಾಜ ಸೇವಕ, ಕೊಂಕಣಿ ಖಾರ್ವಿ ಸಮಾಜದ ಹಿರಿಯ ಮುಖಂಡ ಜಿ. ಗಣಪತಿ ಶಿಪಾ (77) ಅಲ್ಪಕಾಲದ ಅಸೌಖ್ಯದಿಂದ ಗಂಗೊಳ್ಳಿಯ ಸ್ವಗೃಹದಲ್ಲಿ ನಿಧನರಾದರು. ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಇವರು ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸುಮಾರು 36 ವರ್ಷ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದರು. ಕೊಂಕಣಿ ಖಾರ್ವಿ ವಿದ್ಯಾ ಪ್ರಸಾರಕ ಸಂಘ ಕುಂದಾಪುರ ಇದರ ಸ್ಥಾಪಕ ಸದಸ್ಯರಾಗಿ, ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದಲ್ಲಿ ಅಧ್ಯಕ್ಷರಾಗಿ, ಅಖಿಲ ಕರ್ನಾಟಕ ಕೊಂಕಣ ಖಾರ್ವಿ ಮಹಾಜನ ಸಂಘದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಅನೇಕ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಇವರು ಕೊಂಕಣಿ ಖಾರ್ವಿ ಸಮಾಜದ ಏಳಿಗೆಗೆ ಶ್ರಮಿಸಿದ್ದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಇವರಿಗೆ ಕೊಂಕಣಿ ನಕ್ಷತ್ರ ಪ್ರಶಸ್ತಿ ಮತ್ತು ಕುಂದಾಪುರದ ವಿದ್ಯಾರಂಗ ಮಿತ್ರಮಂಡಳಿ ಸಮಾಜ ಸೇವಕ ಪ್ರಶಸ್ತಿ ನೀಡಿ ಗೌರವಿಸಿತ್ತು. ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜನಾನುರಾಗಿದ್ದರು. ಮೃತರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ ವತಿಯಿಂದ ಈ ವರ್ಷದ ಚಾಂದ್ರಮಾನ ಯುಗಾದಿ ಆಚರಣೆಯನ್ನು ಬಿಜೂರು ಗ್ರಾಮದ ಮಕ್ಕಿದೇವಸ್ಥಾನದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಚರಿಸಲಾಯಿತು. ನಿವೃತ್ತ ಶಿಕ್ಷಕ ವಿದ್ವಾನ್ ಶಂಕರನಾರಾಯಣ ಭಟ್ ಅವರು ಪಂಚಾಂಗ ಶೃವಣ ಮಾಡಿ ಯುಗಾದಿ ಆಚರಣೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಲಯಾಧ್ಯಕ್ಷ ಯು. ಸಂದೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿದ್ವಾನ್ ಶಂಕರನಾರಾಯಣ ಭಟ್ಟರಿಗೆ ವಿದ್ವತ್ ಸನ್ಮಾನ ಮಾಡಲಾಯಿತು. ಕೊಲ್ಲೂರು ಮುಕಾಂಬಿಕಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಮ್. ನಾಗರಾಜ ಭಟ್, ಗೌರವಾಧ್ಯಕ್ಷ ಬಿ. ವಿಶ್ವೇಶ್ವರ ಅಡಿಗ ಉಪಸ್ಥಿತರಿದ್ದರು. ವಲಯ ಮಹಿಳಾ ವೇದಿಕೆಯ ಸದಸ್ಯರಿಂದ ವಿಷ್ಣು ಸಹಸ್ರನಾಮ ಪಠಣ ಪಠಿಸಲಾಯಿತು. ಕಾರ್ಯದರ್ಶಿ ಕೆ. ಅರುಣ್ ಕುಮಾರ್ ಶ್ಯಾನಭಾಗ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಕೋಶಾಧ್ಯಕ್ಷ ಜಗದೀಶ್ ರಾವ್ ವಂದಿಸಿದರು, ಕೊನೆಯಲ್ಲಿ ಶಾಂತಿ ಮಂತ್ರ ಪಠಿಸಲಾಯಿತು

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಎಲ್ಲರೊಳಗೂ ಅನನ್ಯವಾದ ಪ್ರತಿಭೆ ನಲೆಸಿದ್ದು, ಅದನ್ನು ಅನಾವರಣಗೊಳಿಸುವ ಪ್ರಯತ್ನ ನಡೆಯಬೇಕು ಎಂದು ಆಳ್ವಾಸ್ ಪದವಿಪೂರ್ವ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥೆ ಝಾನ್ಸಿ ಹೇಳಿದರು. ಶಿವರಾಮ ಕಾರಂತ ಸಭಾಂಗಣದಲ್ಲಿ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಕವಿತೆಗೊಂದು ಲಯವಿದ್ದು, ಹಾಡಲು ಸಹಕಾರಿಯಾಗಿರಬೇಕು. ಕವನಗಳು ಸನ್ನಿವೇಷಗಳಿಗೆ ಅನುಗುಣವಾಗಿ ಸೃಷ್ಟಿಯಾಗುವ ಸಾಹಿತ್ಯವಾಗಿದೆ ಎಂದರು. ಕವಿಗೋಷ್ಠಿಯ ಸಮನ್ವಯಕಾರರಾಗಿ ಭಾಗವಹಿಸಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ರೋಶನ್ ಫ್ರಾನ್ಸಿಸ್, ಮನಸ್ಸಿಗೆ ಮುದ ನೀಡುವ ಕ್ಷಣಗಳನ್ನು ಕವನಗಳಲ್ಲಿ ಪ್ರಸ್ತುತ ಪಡಿಸಲಾಗುತ್ತದೆ. ಆಳವಾದ ಆಧ್ಯಯನ ಮತ್ತು ಅಲೋಚನಾ ಶಕ್ತಿಯಿಂದ ಕವನ ಬರೆಯಲು ಸಾಧ್ಯ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿನಿ ನಂದಿತ ಸ್ವಾಗತಿಸಿ, ದಿಯಾ ವಂದಿಸಿದರು. ವಿದ್ಯಾರ್ಥಿ ಶಶಾಂಕ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾಲೇಜಿನ ಸಾಹಿತ್ಯ ಸಂಘದ ಸಂಯೋಜಕಿ ಡಾ ಸುಲತಾ ಉಪಸ್ಥಿತರಿದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಯಶ್, ಶ್ರೀಧರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೋವಿಡ್ 2 ಅಲೆ ಯನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಜಿಲ್ಲಾ ತಜ್ಞರ ಸಮಿತಿ ಸಭೆಯು ಜಿಲ್ಲಾಧಿಕಾರಿ ಜಿ.ಜಗದೀಶ್ ಅಧ್ಯಕ್ಷತೆಯಲ್ಲಿ ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ರಾಜ್ಯದೆಲ್ಲಡೆ ಕೋವಿಡ್ 2 ಅಲೆ ವ್ಯಾಪಕವಾಗಿದ್ದು, ಜಿಲ್ಲೆಯಲ್ಲಿಯೂ ಸಹ ಹರಡುತ್ತಿದೆ, ಇದನ್ನು ನಿಯಂತ್ರಿಸುವ ಕುರಿತಂತೆ ಜಿಲ್ಲೆಯಲ್ಲಿ , ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೆ, ಪತ್ತೆ ಹಚ್ಚುವಿಕೆ , ಚಿಕಿತ್ಸೆ ನೀಡುವುದನ್ನು ಶೀಘ್ರವಾಗಿ ಕೈಗೊಳ್ಳಬೇಕು, ಹೈದಯ ಸಂಬAದಿ ರೋಗಿಗಳು, ಕಿಡ್ನಿ ಸಮಸ್ಯೆಯಿರುವವರು, ಕ್ಯಾನ್ಸರ್ ರೋಗಿಗಳು ಕೋವಿಡ್ ನಿಂದ ಮರಣ ಹೊಂದುವುದು ಅಧಿಕವಾಗಿದ್ದು, ಇಂತಹ ರೋಗಿಗಳನ್ನು 15 ದಿನಗಳಿಗೊಮ್ಮೆ ನಿಯಮಿತವಾಗಿ ತಪಾಸಣೆ ಮಾಡುವುದರ ಮೂಲಕ ಬೇಗ ರೋಗ ಪತ್ತೆ ಹಚ್ಚಿ ಚಕಿತ್ಸೆ ನೀಡುವುದರಿಂದ ಸಾವು ಸಂಭವಿಸುವುದನ್ನು ತಪ್ಪಿಸಬಹುದಾಗಿದೆ, ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಕೋವಿಡ್ ಸೊಂಕಿಗೆ ಒಳಗಾಗದಂತೆ ಆಸ್ಪತ್ರೆಗಳಲ್ಲಿ ಇನ್ಫೆಕ್ಷನ್ ಕಂಟ್ರೋಲ್ ಮಾಡುವ ಕುರಿತು ತರಬೇತಿ ನೀಡಬೇಕು ಎಂದು ತಜ್ಞರ ಸಮಿತಿ ತಿಳಿಸಿತು. ಇದನ್ನೂ ಓದಿ: ►…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಕರ್ನಾಟಕದಲ್ಲಿ ದಾಖಲೆ ಪ್ರಮಾಣದಲ್ಲಿ ಕೊರೊನಾ ಸೋಂಕು ವರದಿಯಾಗುತ್ತಿರುವ ಹಿನ್ನೆಲೆಯುಲ್ಲಿ ಸಾರ್ವಜನಿಕ ಸಮಾರಂಭ/ ಆಚರಣೆ/ ಮನರಂಜನೆ ಕಾರ್ಯಕ್ರಮಗಳಿಗೆ ಮಾರ್ಗಸೂಚಿ ಪ್ರಕಟಗೊಂಡಿದೆ. ಧಾರ್ಮಿಕ ಆಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಕರ್ನಾಟಕ ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಆದೇಶ ಪ್ರಕಟಿಸಿದ್ದಾರೆ. ಈ ಆದೇಶವನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ಹಾಗೂ ಐಪಿಸಿ ಸೆಕ್ಷನ್ ಮತ್ತು ಇತರ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಯಾವುದಕ್ಕೆ ಎಷ್ಟು ಜನ? ಮದುವೆ: ತೆರೆದ ಪ್ರದೇಶದಲ್ಲಿ ಗರಿಷ್ಠ 200 ಮಂದಿಗೆ ಅನುಮತಿ. ಕಲ್ಯಾಣ ಮಂಟಪ/ ಸಭಾಂಗಣ/ ಹಾಲ್ ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ ಗರಿಷ್ಟ 100 ಮಂದಿಗೆ ಮಾತ್ರ ಅವಕಾಶ. ಜನ್ಮದಿನ ಇತರೇ ಆಚರಣೆ: ತೆರೆದ ಪ್ರದೇಶದಲ್ಲಿ 50 ಮಂದಿಗೆ ಅನುಮತಿ. ಸಭಾಂಗಣ, ಹಾಲ್, ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ 25 ಮಂದಿಗೆ ಅನುಮತಿ. ನಿಧನ/ ಶವಸಂಸ್ಕಾರ: ತೆರೆದ ಪ್ರದೇಶದಲ್ಲಿ 50…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇವರನ್ನು ಯಾವುದೇ ರೂಪದಲ್ಲಿ ಆರಾಧಿಸಿದರೂ ಪರಮಾತ್ಮನೊಬ್ಬನೇ ಎಂಬ ಸತ್ಯ ಪ್ರತಿಯೊಬ್ಬರಿಗೂ ಅರಿವಿರಬೇಕು. ನಾವು ಬೇಡಿದ ರೂಪದಲ್ಲಿ ಕಾಣಿಸುವ ಭಗವಂತನಿಗೆ ತೋರಿಕೆ ಭಕ್ತಿಯ ಬದಲಿಗೆ ಶ್ರದ್ಧಾಭಕ್ತಿಯಿಂದ ಪೂಜಿಸುವುದು ಬಹುಮುಖ್ಯವಾಗುತ್ತದೆ. ನಮ್ಮ ಹೃದಯದಲ್ಲಿ ಜ್ಞಾನದೀಪ ಬೆಳಗದಿದ್ದರೆ ಭಕ್ತಿಯು ಕೂಡ ಮೂಢನಂಬಿಕೆಯ ಕಡೆಗೆ ತಿರುಗುತ್ತದೆ ಎಂದು ಎಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರು ಹೇಳಿದರು.ಅವರು ಗುಜ್ಜಾಡಿ ಬೆಣ್ಗೇರಿ ಶ್ರೀ ನಾಗ ದೇವಸ್ಥಾನದಲ್ಲಿ ಜರುಗಿದ 46ನೇ ನಾಗಮಂಡಲೋತ್ಸವ ಹಾಗೂ ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮದ ಬಳಿಕ ಬುಧವಾರ ನಡೆದ ಶ್ರೀ ಸುಬ್ರಹ್ಮಣ್ಯ ಯುತ್ ಕ್ಲಬ್’ನ 46ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ ಭಾರತದ ಸುವರ್ಣಯುಗ ಎಂಬ ಕಾಲದಲ್ಲಿ ನಾಗರಾಧನೆಗೆ ವಿಶೇಷ ಪ್ರಾಮುಖ್ಯತೆ ಇತ್ತು. ಹಾಗಾಗಿ ವಿಕ್ರಮಾದಿತ್ಯ ಬಿರುದಾಂಕಿತ ರಾಜರು ಬಹುಕಾಲ ತಮ್ಮ ಸಾಮ್ರಾಜ್ಯವನ್ನು ಮುನ್ನಡೆಸಿದರು ಎಂದ ಅವರು ಮುಂದಿನ ಪೀಳಿಗೆಯಲ್ಲಿ ಭಕ್ತಿಯ ಜೊತೆಗೆ ಸಂಸ್ಕಾರವನ್ನು ಕಲಿಸುವ ಕಾರ್ಯವಾಗಬೇಕಿದೆ ಎಂದರು. ಉಡುಪಿ ಜಿಲ್ಲಾ ಶ್ರೀ ಭಗವದ್ಗೀತಾ ಆಚರಣಾ ಸಮಿತಿ ಸಂಚಾಲಕರಾದ…

Read More