ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕೋಟೇಶ್ವರ ಗ್ರಾಮ ಪಂಚಾಯತಿಯ ಮೊದಲ ಹಂತದ ೩೦ ತಿಂಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಕೃಷ್ಣ ಗೊಲ್ಲ, ಉಪಾಧ್ಯಕ್ಷರಾಗಿ ರಾಗಿಣಿ ದೇವಾಡಿಗ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕೋಟೇಶ್ವರ ಗ್ರಾಮ ಪಂಚಾಯತಿ ಕಚೇರಿಯಲ್ಲಿ ನಡೆಯಿತು. ಚುನಾವಣಾಧಿಕಾರಿಯಾಗಿ ಕುಸುಮಾಕರ ಶೆಟ್ಟಿ ಭಾಗವಹಿಸಿದ್ದರು. ಕೋಟೇಶ್ವರ ಗ್ರಾಮ ಪಂಚಾಯತಿ ಒಟ್ಟು 26 ಸದಸ್ಯ ಸ್ಥಾನವನ್ನು ಹೊಂದಿದ್ದು, ಇದರಲ್ಲಿ 20 ಬಿಜೆಪಿ ಬೆಂಬಲಿತರು, 5 ಕಾಂಗ್ರೆಸ್ ಬೆಂಬಲಿತರು, 1 ಪಕ್ಷೇತರರು ಇದ್ದಾರೆ. ಮೀಸಲಾತಿ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಅ’ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಯಿತು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮರವಂತೆ ಗ್ರಾಮ ಪಂಚಾಯಿತಿಯಲ್ಲಿ 30 ತಿಂಗಳ ಅವಧಿಗೆ ಅಧ್ಯಕ್ಷೆಯಾಗಿ ಪ್ರಥಮ ಬಾರಿಗೆ ಅನುಸೂಚಿತ ಪಂಗಡದ ಮಹಿಳೆ ರುಕ್ಮಿಣಿ ಮತ್ತು ಉಪಾಧ್ಯಕ್ಷರಾಗಿ ಲೋಕೇಶ ಖಾರ್ವಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ–ಅಗೆ ಮೀಸಲಾಗಿತ್ತು. ಬುಧವಾರ ಬೈಂದೂರು ವಲಯ ಶಿಕ್ಷಣಾಧಿಕಾರಿ ಜಿ. ಎಂ. ಮುಂದಿನಮನಿ ಆಯ್ಕೆ ಪ್ರಕ್ರಿಯೆ ನಡೆಸಿದರು.ಮರವಂತೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಇದೇ ಮೊದಲ ಬಾರಿಗೆ ಅನುಸೂಚಿತ ಪಂಗಡದ ಮಹಿಳೆಗೆ ಮೀಸಲಾಯಿತು. ಪ್ರಥಮ ಬಾರಿ ಸದಸ್ಯೆಯಾದ ರುಕ್ಮಿಣಿ ಅವರಿಗೆ ಅಧ್ಯಕ್ಷ ಸ್ಥಾನ ಅವಿರೋಧವಾಗಿ ಒಲಿಯಿತು. ಅವರಿಗೆ ಯಾವುದೇ ಪಕ್ಷದ ಬೆಂಬಲ ಪಡೆಯುವ ಅಗತ್ಯ ಉದ್ಭವಿಸಲಿಲ್ಲ. ಆದರೂ ಅವರು ಸಲ್ಲಿಸಿದ ಎರಡು ಪ್ರತ್ಯೇಕ ನಾಮಪತ್ರಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರು ಅನುಮೋದಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಬೆಂಬಲಿಸಿದರು.ಬಿಜೆಪಿ ಬೆಂಬಲಿತ ಲೋಕೇಶ ಖಾರ್ವಿ ಎರಡನೇ ಅವಧಿಗೆ ಸದಸ್ಯರಾಗಿದ್ದಾರೆ. ಇಲ್ಲಿನ 14 ಸ್ಥಾನಗಳಲ್ಲಿ 11 ಬಿಜೆಪಿ ಬೆಂಬಲಿತರು ಮತ್ತು 2 ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದರು.ನಿಕಟಪೂರ್ವ ಅಧ್ಯಕ್ಷೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬಿಜೂರು ಗ್ರಾಮ ಪಂಚಾಯತ್ನ ಅಧ್ಯಕ್ಷ ಸ್ಥಾನಕ್ಕೆ 2ಎ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿಯ ಪ್ರಕಾರ ಅಧ್ಯಕ್ಷರಾಗಿ ರಮೇಶ ವಿ. ದೇವಾಡಿಗ, ಉಪಾಧ್ಯಕ್ಷರಾಗಿ ಶ್ರೀಮತಿ ಶೆಟ್ಟಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ರಮೇಶ ದೇವಾಡಿಗ 3ನೇ ಭಾರೀ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾಗಿದ್ದು, ಶ್ರೀಮತಿ ಶೆಟ್ಟಿ ಮೊದಲ ಬಾರಿಗೆ ವಿಜೇತರಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದಲ್ಲಿ ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಸಚಿವಾಲಯದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಸಪ್ತಪದಿ ಸಾಮೂಹಿಕ ವಿವಾಹ ನಡೆಯಿತು. 10 ಜೋಡಿಗಳು ಹಸಮಣೆ ಏರಿದರು. ಮಧುಸೂದನ್ ಬಾಯರಿ, ರಾಜೇಂದ್ರ ಅಡಿಗ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ವಿಪ್ರ ಮಹಿಳೆಯರು ಸೋಭಾನಿ ಹಾಡುವುದರ ಮೂಲಕ ವಿವಾಹ ಮಹೋತ್ಸವದ ಉದ್ದಕ್ಕೂ ಗಮನ ಸೆಳೆದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ನವವಧುವರರಿಗೆ ಶುಭ ಹಾರೈಸಿದರು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ್ ಸಿ. ಕುಂದರ್, ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಲಲಿತಾ, ದೇವಳದ ಟ್ರಸ್ಟಿ ಸುಶೀಲಾ ಸೋಮಶೇಖರ್, ಜ್ಯೋತಿ.ಬಿ.ಶೆಟ್ಟಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಪತ್ನಿ ಶಾರದಾ ಆರತಿ ಬೆಳಗಿ ವಧುವರರನ್ನು ಶುಭಹಾರೈಸಿದರು. ಜುಲೈವರೆಗೆ ಸಪ್ತಪದಿ: ರಾಜ್ಯದಲ್ಲಿ ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಸಪ್ತಪದಿಗೆ ಈಗ ಮತ್ತೆ ಚಾಲನೆ ನೀಡಲಾಗಿದೆ. ಹಲವು ಕಡೆ ನಡೆದ ಸಪ್ತಪದಿಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮೀಣ ಪ್ರದೇಶದ ಸಂಪರ್ಕ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಅಗತ್ಯವಿರುವ ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ತ್ರಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಣದಮಕ್ಕಿ-ದೇವಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೋಟೆಮಕ್ಕಿ ಕ್ರಾಸ್ನಿಂದ ಮೊವಾಡಿ ಕ್ರಾಸ್ವರೆಗೆ ಎಸ್ಸಿಪಿ ಯೋಜನೆಯ ಅಡಿಯಲ್ಲಿ ₹ 38.21 ಲಕ್ಷ ಅಂದಾಜು ವೆಚ್ಚದಲ್ಲಿ 800 ಮೀಟರ್ ಕಾಂಕ್ರೀಟ್ ರಸ್ತೆಯಾಗುವುದರಿಂದ ಮಣ್ಣಿನ ರಸ್ತೆ ಮೇಲ್ದರ್ಜೆಗೇರಲಿದೆ ಎಂದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟ ಪೂಜಾರಿ, ಸದಸ್ಯ ರೇನ್ಸಮ್ ಪಿರೇರಾ, ರಮೇಶ ಆಚಾರ್ಯ ಅರಾಟೆ, ಸೀತಾರಾಮ ಶೆಟ್ಟಿ ಕೋಟೆಮಕ್ಕಿ, ಬಿಜೆಪಿ ಮುಖಂಡ ಶಿವರಾಮ ಶೆಟ್ಟಿ ಕಮ್ಮಾರಕೊಡ್ಲು, ಮಂಜು ಶೆಟ್ಟಿ, ನಾಗರಾಜ ಅರಾಟೆ, ರಾಘವೇಂದ್ರ ಆಚಾರ್ಯ, ಮಂಜುನಾಥ್, ಗುತ್ತಿಗೆದಾರ ಗುರುಪ್ರಸಾದ್ ಶೆಟ್ಟಿ ಯಡೇರಿ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಕಾಶವಾಣಿಯು ಸಮಾಜದಲ್ಲಿ ಬೆರೆತು, ಆಯಾ ಪ್ರದೇಶದ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಾಧ್ಯಮವಾಗಿ ಜನರಿಗೆ ಹತ್ತಿರವಾಗಿದೆ ಎಂದು ಆಕಾಶವಾಣಿ ಹಾಗೂ ದೂರದರ್ಶನದ ಇಂಜಿನಿಯರ್ಗಳ ನೌಕರರ ಸಂಘದ ವಕ್ತಾರ ಚಂದ್ರಶೇಖರ್ ಶೆಟ್ಟಿ ಹೇಳಿದರು. ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವತಿಯಿಂದ ವಿಶ್ವರೇಡಿಯೋ ದಿನದ ಪ್ರಯುಕ್ತ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ರೇಡಿಯೋ – ಏನ್ಎವರ್ಗ್ರೀನ್ ಆಡಿಯೋ ವಿಷಯದ ಹಿನ್ನಲೆಯಲ್ಲಿ ಮಾತನಾಡಿದ ಅವರು, ಕಾಲಕ್ಕೆ ತಕ್ಕಂತೆ ರೇಡಿಯೋ ಸಹ ಬದಲಾಗುತ್ತಿದೆ. ಈ ಇಂಟರ್ನೆಟ್ ಯುಗದಲ್ಲಿ ರೇಡಿಯೋ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಹೊರದೇಶದ ಸ್ಟೇಶನ್ಗಳನ್ನೂ ನಾವು ನಮ್ಮ ಮನೆಯಲ್ಲೆ ಕುಳಿತು ಕೇಳಬಹುದಾಗಿದೆ ಎಂದರು. ಟಿವಿ ಬಂದಾಗ ರೇಡಿಯೋತನ್ನ ಮಹತ್ವ ಕಳೆದುಕೊಳ್ಳುತ್ತದೆ ಎಂದು ಹಲವರು ಭಾವಿಸಿದ್ದರು. ಆದರೆ, ಪ್ರಸ್ತುತದಲ್ಲಿ ಟಿವಿ ಚಾನೆಲ್ಗಳು ತಮ್ಮ ನಂಬಿಕೆ ಹಾಗೂ ವಿಶ್ವಾಸವನ್ನು ಕಳೆದುಕೊಳ್ಳುತ್ತಿವೆಯೇ ವಿನಃ ಆಕಾಶವಾಣಿ ಅಲ್ಲ. ಖಾಸಗೀ ರೇಡಿಯೋ ಸ್ಟೇ?ನ್ಗಳು ತಮ್ಮ ಅಸ್ತಿತ್ವ ಉಳಿಸಲು ಪರದಾಡುತ್ತಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ…
ರಾತ್ರಿ ಲೇಟಾಗಿ ಮಲಗಿರುತ್ತೀರಿ. ಬೆಳಗ್ಗೆ ಏಳುವಾಗ ಫ್ರೆಶ್ ಮೂಡ್ನಲ್ಲಿಇದ್ದರೆ ಆ ದಿನವಿಡೀ ಸೊಗಸಾಗಿರುತ್ತದೆ..ಇಲ್ಲವಾದರೆ ಇಡೀ ದಿನ ಕಿರಿಕಿರಿ ತಪ್ಪಿದ್ದಲ್ಲ. ಈ ಕಿರಿಕಿರಿಯಿಂದ ಪಾರಾಗಿ ಇಡೀ ದಿನ ಫ್ರೆಶ್ ಆಗಿರೋಕೆ ಕೆಲವು ಟಿಪ್ಸ್ ಇಲ್ಲಿವೆ. ಅಲಾರಂ ಬದಲು ಮೆಲೊಡಿ ಹಾಡು ರಾಗವಿರಲಿ: ಜಪಾನಿನ ಒಂದು ಸಂಶೋಧನೆ ಪ್ರಕಾರ ಅಲಾರಂನ ಕೆಟ್ಟ ಸೌಂಡಿಗೂ ಹೃದಯಾಘಾತಗಳಿಗೆ ಸಂಬಂಧವಿದೆ. ಅಲಾರಂನ ಕರ್ಕಶ. ಧ್ವನಿಯೇ ನಮ್ಮ ಮೂಡನ್ನು ಹಾಳು ಮಾಡುತ್ತದೆ. ಅದರ ಬದಲು, ನಿಮಗೆ ಅತ್ಯಂತ ಇಷ್ಟವಾದ ಒಂದು ಹಾಡನ್ನೋ, ರಾಗವನ್ನೋ ಅಲಾರಂ ಧ್ವನಿಯ ಜಾಗದಲ್ಲಿ ಪ್ರೋಗ್ರಾಂ ಮಾಡಿಟ್ಟುಕೊಳ್ಳಿ. ಆಗ ಮನಸ್ಸು ಪ್ರಫುಲ್ಲವಾಗಿರುತ್ತದೆ. ಅದು ನಿಮ್ಮ.ಬೆಳಗಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮುಂಜಾನೆಯನ್ನು ಆಸ್ಪಾದಿಸಿ: ಎದ್ದ ಕೂಡಲೇ ಗಡಿಬಿಡಿಯಲ್ಲಿ ಮನೆಕೆಲಸ, ಅಡುಗೆ ಕೆಲಸ ಎಂದು ಓಡಾಡುವದು ಬೇಡ. ಸ್ವಲ್ಪ ನಿಧಾನಿಸಿ. ಮುಂಜಾನೆಯ ಮಧುರ ವಾತಾವರಣವನ್ನು, ಮೌನವನ್ನು ಆಸ್ವಾದಿಸಿ. ಹಕ್ಕಿಪಕ್ಷಿಗಳ ಧ್ವಳಿ. ನಿಮಗಾಗಿ ಒಂದರ್ಧ ಗಂಟೆ ತೆಗೆದಿಡಿ. ಅಲ್ಲಿ ನೀವಲ್ಲದೆ ಇನ್ಯಾರೂ ಇರದಿರಲಿ. ಅದನ್ನು ಯೋಗ, ವ್ಯಾಯಾಮ, ಧ್ಯಾನ- ಹೀಗೆ ಯಾವುದಕ್ಕಾದರೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿಯ ರೋಬೋಸಾಪ್ಟ್ ಟೆಕ್ನಾಲಜೀಸ್ ಸಂಸ್ಥೆಯಿಂದ ಕೋಟೇಶ್ವರದ ಸರಕಾರಿ ಪದವಿಪೂರ್ವ ಕಾಲೇಜಿಗೆ ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿಗಳಾಗಿ ರೋಬೋಸಾಪ್ಟ್ ಟೆಕ್ನೋಲಜೀಸ್ನ ಶ್ರೀಕಾಂತ ಭಂಡಾರಿ ಮಾತನಾಡಿ, ಸಂಸ್ಥೆಯ ಪರಿಚಯ, ಕಾರ್ಯವೈಖರಿ ಹೇಳುತ್ತಾ 1996ರಲ್ಲಿ ಆರಂಭವಾದ ನಮ್ಮ ಸಂಸ್ಥೆಯಲ್ಲಿ ಇಂದು ಸುಮಾರು ಸಾವಿರ ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತಿಚಿನ ದಿನಗಳಲ್ಲಿ ಸ್ಥಳೀಯವಾದ ಪ್ರತಿಭೆಗಳ ಕೊರತೆಯಿಂದ ಬೇರೆ ರಾಜ್ಯಗಳಿಂದ ಕೆಲಸಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಅದರಂತೆಯೇ ಇಂದು ನೀಡಿದ ಕಂಪ್ಯೂಟರ್ನ ಮೂಲಕ ವಿಧ್ಯಾರ್ಥಿಗಳು ಹೊಸ ತಂತ್ರಜ್ಞಾನವನ್ನು ಕಲಿತು ಸ್ಥಳೀಯವಾಗಿ ಕೆಲಸ ಸಿಗುವಂತಾಗಲಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡೆನ್ನಿಸ್ ಬಾಂಜಿ ವಹಿಸಿದ್ದರು. ಉಪ ಪ್ರಾಂಶುಪಾಲ ಪ್ರದೀಪ ಶೆಟ್ಟಿ, ಕಂಪ್ಯೂಟರ್ ವಿಭಾಗದ ನಿತಿನ್, ಕೋಟೇಶ್ವರ ತಾಲೂಕು ಪಂಚಾಯತ್ ಸದಸ್ಯರಾದ ರೂಪಾ ಪೈ, ರೋಬೋಸಾಪ್ಟ್ ಟೆಕ್ನಾಲಜೀಸ್ನ ಶರತ್ ಅಚಾರ್ಯ, ವಿಘ್ನೇಶ್ ಶೇಟ್ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಲಿಕೆ ಹಂತದಲ್ಲೇ ಉದ್ಯೋಗ ಸಂಬಂಧಿ ಪೂರ್ವ ಸಿದ್ಧತೆ ನಡೆಸಿದರೆ, ಮುಂದೆ ಯಶಸ್ಸು ಪಡೆಯಲು ಸಾಧ್ಯ ಎಂದು ಬೈಂದೂರು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಹೇಳಿದರು. ನಮ್ಮ ನಾಡ ಒಕ್ಕೂಟದ ಬೈಂದೂರು ಘಟಕ ಹಾಗೂ ಸ್ಥಳೀಯ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸರ್ಕಾರಿ ಉದ್ಯೋಗ ಮಾಹಿತಿ ಹಾಗೂ ಮಾದಕ ವ್ಯಸನ ವಿರುದ್ಧ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಘಟಕದ ಅಧ್ಯಕ್ಷ ಅಬ್ದುಲ್ ಸಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಹಂಝತ್ ಹೆಜಮಾಡಿ, ಅಬ್ದುಲ್ ರಝಾಕ್ ಮತ್ತು ಅಹ್ಮದ್ ನೌಝಲ್ ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ಜಾಗೃತಿ ಹಾಗೂ ಸರ್ಕಾರಿ ಉದ್ಯೋಗಗಳ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ಒಕ್ಕೂಟದ ಹೆಬ್ರಿ ಘಟಕದ ಅಧ್ಯಕ್ಷ ಮೊಹಮ್ಮದ್ ರಫೀಕ್, ಬೈಂದೂರು ಘಟಕದ ಉಪಾಧ್ಯಕ್ಷ ಮಾಮ್ಡು ಇಬ್ರಾಹೀಂ ಮಾಸ್ಟರ್, ಸಲಹೆಗಾರ ಉಸ್ಮಾನ್ ಜಾಫರ್, ಬೈಂದೂರು ಜುಮಾ ಮಸೀದಿಯ ಖತೀಬ್ ಫೈಝುಲ್ ಬಾರಿ ಮೌಲಾನ, ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭೂಮಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿ. ಸೊಸೈಟಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್. ರಾಜು ಪೂಜಾರಿ ಉದ್ಘಾಟಿಸಿದರು. ಭದ್ರತಾ ಕೋಶವನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರಾದ ಮಂಜುನಾಥ್ ಎಸ್ ಕೆ. ಉದ್ಘಾಟಿಸಿ, ಉಡುಪಿ ಜಿಲ್ಲಾ ಸೌಹಾರ್ದ ಸಂಯೋಜಕರಾದ ವಿಜಯ್ ಬಿ.ಎಸ್ ಇ ಬ್ಯಾಂಕಿಂಗ್ ಸೌಲಭ್ಯಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯದಲ್ಲಿ ಮಾತನಾಡಿದ ಎಸ್. ರಾಜು ಪೂಜಾರಿ, ಭೂಮಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸುಸಜ್ಜಿತವಾಗಿ ರೂಪುಗೊಂಡಿದ್ದು, ಬಡವರಿಗೆ ಉತ್ತಮ ರೀತಿಯಲ್ಲಿ ನೆರವಾಗಲಿದೆ ಎಂದರು. ಸೊಸೈಟಿಯ ಅಧ್ಯಕ್ಷರಾದ ವೀರೇಂದ್ರ ಎಸ್. ಪೂಜಾರಿ ಮಾತನಾಡಿ, ಉತ್ತಮ ಕೆಲಸಕ್ಕೆ ಕೈ ಹಾಕಿದ್ದು,ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ಮಂಜುನಾಥ್ ಎಸ್ ಕೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿಭಿನ್ನ ಆಲೋಚನೆ ಮೂಲಕ ಸಹಕಾರಿ ಕ್ರಾಂತಿ ಮಾಡುವ ಕೆಲಸ ಪ್ರಶಂಸನಾರ್ಹ. ಉತ್ತಮ ಸೇವೆ…
