ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಒಂದೂವರೆ ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ಆಕ್ಸಿಜನ್ ಸಿಲಿಂಡರ್ ಅಳವಡಿಸಿ ಉಸಿರಾಡುತ್ತಿರುವ ಇಲ್ಲಿನ ಹಟ್ಟಿಯಂಗಡಿ ಹನೆಮನೆ ಬಚ್ಚಿ ಎನ್ನುವರಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದು, ಸಹೃದಯಿ ದಾನಿಗಳ ಸಹಕಾರದ ಅಗತ್ಯವಿದೆ.
ಬಚ್ಚಿ ಅವರನ್ನು ಪರಿಶೀಲಿಸಿದ ವೈದ್ಯರು ಶ್ವಾಸಕೋಶದಲ್ಲಿ ನೀರು ನಿಲ್ಲುತ್ತಿದ್ದು, ಸಂಪೂರ್ಣ ವಿಫಲವಾಗಿದ್ದರಿಂದ ಉಸಿರಾಟದ ಸಮಸ್ಯೆ ಉಂಟಾಗಿದೆ. ಉಸಿರಾಟ ಸಮಸ್ಯೆ ಹೃದಯಕ್ಕೆ ಒತ್ತಡ ಹಾಕುತ್ತಿದೆ. ಬ್ರೈನ್ ಟೂಮರ್ ಇದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಹೋಗಲು ಸೂಚಿಸಿದ್ದಾರೆ.
ನೆರವಿಗೆ ಮನವಿ: ಚಿಕ್ಕ ಕುಟುಂಬದಲ್ಲಿ ನಾಲ್ಕು ಜನ ಸದಸ್ಯರಿದ್ದು, ಮಗಳ ಕೂಲಿಯೇ ಮನೆಯ ಜೀವನಾಧಾರವಾಗಿದ್ದು, ಬಚ್ಚಿ ಪತಿ ಕೂಡಾ ಅಡಕೆ ಮರದಿಂದ ಬಿದ್ದು ಕಾಲು ಆಪರೇಶನ್ ಆಗಿದ್ದರಿಂದ ಕೆಲಸ ಮಾಡಲು ಆಗುತ್ತಿಲ್ಲ. ಪ್ರಸ್ತುತ ಹೆಚ್ಚಿನ ಚಿಕಿತ್ಸೆ ಕೊಡಿಸಲು ಹಣಕಾಸಿನ ತೊಂದರೆಯಿಂದ ಪ್ರಸಕ್ತ ಬಚ್ಚಿ ಅವರಿಗೆ ಮನೆಯಲ್ಲಿಯೇ ಆರೈಕೆ ಮಾಡಲಾಗುತ್ತಿದೆ, ಮನೆಯಲ್ಲಿಯೇ ಆಕ್ಸಿಜನ್ ನಿರಂತರ 24 ಗಂಟೆ ನೀಡಲು ವೈದ್ಯರು ಕಡ್ಡಾಯ ಸೂಚಿಸಿದ್ದಾರೆ. ಆಕ್ಸಿಜನ್ ಪೂರೈಕೆಗೆ ತಿಂಗಳಿಗೆ 24 ಸಾವಿರ ಬೇಕಿದ್ದು, ಔಷದಗಳಿಗೆ 12 ಸಾವಿರ ಬೇಕಾಗುತ್ತದೆ. ಮಣಿಪಾಲದಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಸಲು ಅಸಹಾಯಕರಾಗಿದ್ದು, ದಾನಿಗಳ ನೆರವಿನ ಮೊರೆ ಹೋಗಿದ್ದಾರೆ
ದಾನಿಗಳು ಅವರಿಗೆ ಸಾಹಾಯಮಾಡಲಿಚ್ಚಿಸುವರು ಕರ್ನಾಟಕ ಬ್ಯಾಂಕ್ ಹಟ್ಟಿಯಂಗಡಿ, ಅಕೌಂಟ್ ನಂ.2982500100142701, ಐಎಫ್‌ಎಸ್‌ಸಿ ಕೋಡ್ ಕೆಎಆರ್‌ಬಿ0000298, ಎಂಐಸಿಆರ್ ಕೋಡ್ 576052520ಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9449048216ನ್ನು ಸಂಪರ್ಕಿಸಬಹುದಾಗಿದೆ