ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ : 2018ರಲ್ಲಿ ನಡೆದ ರಾಷ್ಟ್ರೀಯ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆಗೆ ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 3,648 ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 3,284 ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆಯುವ ಮೂಲಕ ಶೇ.90.02 ದಾಖಲೆಯ ಫಲಿತಾಂಶವನ್ನು ದಾಖಲಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 26 ವಿದ್ಯಾರ್ಥಿಗಳು 500ಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ. ಇದಲ್ಲದೆ 224 ವಿದ್ಯಾರ್ಥಿಗಳು 400ಕ್ಕಿಂತಲೂ ಅಧಿಕ ಅಂಕಗಳನ್ನು ಪಡೆದಿರುತ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ ಕೆಟಗೆರೆ ವಿಭಾಗದಲ್ಲಿ ಪದ್ಮಾವತಿ (33), ಯತೀಶ (140), ಗುಣಶೀಲ (195), ವಂಶಿತೇಜ(305), ವೆಂಕಟೇಶ ದೊರೆ (409), ಗೌತಮ ಬುದ್ಧ (457), ನಂದೀಶ್ (458) ಮತ್ತು ನೇತ್ರೇಶ್ (561) ರ‍್ಯಾಂಕ್‌ಗಳನ್ನು ಪಡೆದಿರುತ್ತಾರೆ. ಭಿನ್ನಚೇತನರ ಪಟ್ಟಿಯಲ್ಲಿ ಮಂಜುನಾಥ್ ದೊಂಬಾರ್ (286), ರಕ್ಷಿತಾ ಬಿ.ಪಿ (295), ಭಾಗ್ಯಶ್ರೀ (271), ಅಜಯ್ ಕುಮಾರ್ (519) ನೇಯ ರ‍್ಯಾಂಕ್ ರಾಷ್ಟ್ರೀಯ ಮಟ್ಟದಲ್ಲಿ ಪಡೆದಿರುತ್ತಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂ. 8ರಂದು ನಡೆಯಲಿದ್ದು, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮತಯಾಚನೆ ನಡೆಸಿದರು. ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತಯಾಚನೆ ನಡೆಸುವ ಸಂದರ್ಭ ಬಿಜೆಪಿ ಮುಖಂಡ ಕಿಶೋರ್‌ಕುಮಾರ್, ರಾಜೇಶ್ ಕಾವೇರಿ, ಗಿರೀಶ್ ಮೊದಲಾದವರು ಜೊತೆಗಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಜಾಗೃತಿ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಭಂಡಾರ್‌ಕರ್ಸ್ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿ ಶಾಲಿನಿ ಉಡುಪ ಮಾತನಾಡಿ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಸಮಾಜ ಎನ್ನುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ. ಆದರೆ ನಾವು ನಮ್ಮ ದಿನನಿತ್ಯದ ಬಳಕೆಯಲ್ಲಿ ಪ್ಲಾಸ್ಟಿಕನ್ನು ಮಿತವಾಗಿ ಬಳಸಿ ಪರಿಸರಕ್ಕೆ ಸಾಧ್ಯವಾದಷ್ಟು ಹಾನಿಯಾಗದ ರೀತಿಯಲ್ಲಿ ನೋಡಿಕೊಳ್ಳುವಂತಹ ಕಾರ‍್ಯವನ್ನು ತಪ್ಪದೇ ಮಾಡಬೇಕಿದೆ.ಆ ಮೂಲಕ ಮತ್ತಷ್ಟು ಸುಂದರ ಪರಿಸರದ ನಿರ್ಮಾಣಕ್ಕೆ ಕಾರಣರಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಪರಿಸರದ ರಕ್ಷಣೆ ಎಂದರೆ ಅದು ನಮ್ಮ ರಕ್ಷಣೆ. ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಆ ನಿಟ್ಟಿನಲ್ಲಿ ಪ್ರತೀ ಮನೆಯಲ್ಲೂ ಮನಸುಗಳಲ್ಲೂ ಈ ಬಗೆಗೆ ಜಾಗೃತಿ ಮೂಡಬೇಕಿದೆ ಎಂದು ಅವರು ಹೇಳಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ದರ್ಶನ್, ಮಂಜುನಾಥ, ಶ್ವೇತಾ, ಸೃಷ್ಟಿ, ರುತು,…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವಿಶ್ವಪರಿಸರ ದಿನದ ಅಂಗವಾಗಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧೆಡೆಗಳಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಕುಂದಾಪುರದಲ್ಲಿ ಜರುಗಿದ ಕಾರ್ಯಕ್ರಮಕ್ಕೆ ಸಹಾಯಕ ಕಮಿಷನರ್ ಭೂಬಾಲನ್ ಅವರು ಚಾಲನೆ ನೀಡಿದರು. ಕುಂದಾಪುರ ಪುರಸಭೆಯ ಸದಸ್ಯರು, ಪೌರಕಾರ್ಮಿಕರು, ಕಾಲೇಜು ವಿಧ್ಯಾರ್ಥಿಗಳು, ಸ್ವಸಹಾಯ ಸಂಘದ ಸದಸ್ಯರಗಳು, ಕುಂದಾಪುರದಲ್ಲಿ ವಿಶ್ವಪರಿಸರ ದಿನದ ಅಂಗವಾಗಿ ಜನಜಾಗೃತಿ ಜಾಥಾ ನಡೆಸಿದರು.
ಶಿಕ್ಷಣ ವಂಚಿತ ಮಕ್ಕಳ ಭವಿಷ್ಯ ರೂಪಿಸುತ್ತಿರುವ ಆರ್‌ಎಸ್‌ಎಸ್ ಉದ್ದೇಶ ಸಾಕಾರ ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು: ದೂರದ ಮಣಿಪುರದಿಂದ ಬೈಂದೂರು ತಾಲೂಕಿನ ಗಂಟಿಹೊಳೆಗೆ ಬಂದು, ಕನ್ನಡ ಕಲಿತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 83.04 ಅಂಕ ಗಳಿಸುವ ಮೂಲಕ ಬಾಲಕನೊಬ್ಬ ಗಮನಸೆಳೆದಿದ್ದಾನೆ. ರಾಜ್ಯಕ್ಕೆ ಬಂದಾಗ ಕನ್ನಡದಲ್ಲಿ ವ್ಯವಹರಿಸಲು ಪರದಾಡುತ್ತಿದ್ದ ಈ ಬಾಲಕ ಕನ್ನಡ ಪರೀಕ್ಷೆಯಲ್ಲೇ 108 ಅಂಕ ಗಳಿಸಿದ್ದಾನೆ. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ರಾಜ್ಯದಲ್ಲೇ ಅಗ್ರ ಫಲಿತಾಂಶ ಪಡೆಯುವ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಡಿಸ್ಟಿಂಕ್ಷನಲ್ಲಿ ತೇರ್ಗಡೆ ಹೊಂದುವುದು ಅಚ್ಚರಿ ವಿಷಯವೇನಲ್ಲ. ಆದರೆ ಮಣಿಪುರ ವಿದ್ಯಾರ್ಥಿಯ ಸಾಧನೆ ಕಡಿಮೆ ಇಲ್ಲ. ಮಣಿಪುರ ರಾಜ್ಯದ ಹೈರೋಕ್ ಎಂಬ ಪುಟ್ಟ ಹಳ್ಳಿಯಲ್ಲಿ ಬಡ ಕೃಷಿ ಕೂಲಿ ಕಾರ್ಮಿಕರ ಮನೆಯಲ್ಲಿ ಹುಟ್ಟಿದ ಕುಂದ್ರಕ್ಟಮ್ ಬಿದ್ಯಾಸುನ್ ಸಿಂಗ್ ಈ ಸಾದನೆ ಮಾಡಿದ ಬಾಲಕ. ಹತ್ತಾರು ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ವು ಈಶಾನ್ಯ ರಾಜ್ಯಗಳಲ್ಲಿ ನಾನಾ ಕಾರಣಗಳಿಂದ ಶಿಕ್ಷಣ ವಂಚಿತರಾದ ಸಾವಿರಾರು ವಿದ್ಯಾರ್ಥಿಗಳನ್ನು ಕರ್ನಾಟಕ, ಆಂಧ್ರಪ್ರದೇಶ, ಕೇರಳ ರಾಜ್ಯಗಳಿಗೆ ಕರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತಾಲೂಕಿನ ಕೋಟೇಶ್ವರದ ಸಹನಾ ಕನ್ವೆನ್ಶನ್ ಸೆಂಟರ್ನಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಕೃತಜ್ಞತಾ ಸಭೆ ಜರುಗಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಉಡುಪಿ ಚಿಕ್ಕಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ರಾಜ್ಯದಲ್ಲಿ ಜನಾದೇಶವಿಲ್ಲದ ಜೆಡಿಎಸ್ ಜತೆಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಮಂಡಿಯೂರಿ ನಿಲ್ಲುವ ಪರಿಸ್ಥಿತಿಯಲ್ಲಿದೆ. ಮುಂದಿನ ಪ್ರಧಾನಿಯಾಗಿ ರಾಹುಲ್ ಗಾಂಧಿ ಅವರನ್ನು ಬಿಂಬಿಸಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ಯಾವ ನೈತಿಕತೆ ಇದೆ? ದೇಶ – ವಿದೇಶಗಳಲ್ಲಿ ಭಾರತವನ್ನು ನಂ. 1 ರಾಷ್ಟ್ರವಾಗಿ ಗುರುತಿಸುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರೊಡನೆ ರಾಹುಲ್ ಗಾಂಧಿ ಅವರನ್ನು ತುಲನೆ ಮಾಡಲು ಸಾಧ್ಯವೇ ಎಂದರು. ಹಾಲಾಡಿ ಶ್ರೀನಿವಾಸ ಶೆಟ್ಟಿ 5ನೇ ಬಾರಿ ದಾಖಲೆಯ ಮತಗಲಿಂದ ಜಯ ಸಾಧಿಸಿ, ಬಿಜೆಪಿಯ ಪ್ರಾಬಲ್ಯವನ್ನು ಹೆಚ್ಚಿಸಿದ್ದಾರೆ. ಇದರಲ್ಲಿ ಬಿಜೆಪಿ ಕಾರ್ಯಕರ್ತರ ಹೋರಾಟ ಅಭೂತಪೂರ್ವ. ಫೇಸ್ಬುಕ್ನಲ್ಲಿ ಬಂದ ವಿಚಾರಗಳಿಗೆ ಮತದಾರರೇ ಉತ್ತರ ನೀಡುವುದರ ಮೂಲಕ ಶೆಟ್ಟರ ವರ್ಚಸ್ಸನ್ನು ಹೆಚ್ಚಿಸಿದ್ದಾರೆ ಎಂದರು. ಉಭಯ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಕುಂದಾಪುರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ದೊಡ್ಡ ಗುಂಡಿ ಮಾಡಲಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಮುಖ್ಯ ರಸ್ತೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತಿರುಗುವ ರಸ್ತೆ ಬದಿಯಲ್ಲಿ ಇಂತಹ ಗುಂಡಿ ತೋಡಲಾಗಿದೆ. ಇದರಿಂದ ಅಚಾನಕ್ಕಾಗಿ ಬಸ್ ಚಾಲಕರಿಗೂ ಗೊಂದಲ ಉಂಟಾಗುವ ಸಂಭವವಿದೆ. ಮುಖ್ಯ ರಸ್ತೆಯ ಸಮೀಪವೇ ಈ ಗುಂಡಿ ಇರುವ ಕಾರಣ ದ್ವಿಚಕ್ರ ವಾಹನ ಅಥವಾ ಯಾವುದೇ ವಾಹನ ಚಾಲಕರಿಗೆ ಈ ಗುಂಡಿ ಅರಿವಿಲ್ಲದೇ ಅಪಾಯ ತಂದೊಡ್ಡುವ ಸಾಧ್ಯತೆಯಿದೆ. ಪಕ್ಕದಲ್ಲೇ ಸರ್ವಿಸ್ ರಸ್ತೆ ಕಾಮಗಾರಿ ನಡೆದಿದ್ದು ಅಲ್ಲಿ ವಾಹನಗಳ ಓಡಾಟ ಇದೆ. ಆದ್ದರಿಂದ ಸರ್ವಿಸ್ ರಸ್ತೆಗೂ ಅಪಾಯ ಕಟ್ಟಿಟ್ಟ ಬುತ್ತಿ. ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಅದು ಇನ್ನೊಂದು ಉಪಟಳಕಾರಿ ರೋಗ ಹರಡಲು ಕಾರಣವಾದೀತೇ ಎಂಬ ಭಯವೂ ಇದೆ. ಇಷ್ಟು ನಿಧಾನಗತಿಯ ಕಾಮಗಾರಿ ಮಾಡಿದರೆ ಒಟ್ಟು ಕಾಮಗಾರಿ ಮುಗಿಯುವುದು ಯಾವಾಗ, ಜನತೆಗೆ ಉಪಯೋಗಕ್ಕೆ ದೊರೆಯುವುದು ಯಾವಾಗ ಎಂದು ಜನ ಕೇಳುತ್ತಿದ್ದಾರೆ. ಕೆಲ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕಳೆದ 5 ವರ್ಷಗಳ ಹಿಂದೆ ವಂಡ್ಸೆ ಸಮೀಪದ ನೂಜಾಡಿಯ ಕೈಕಣ ಎಂಬಲ್ಲಿ ಶಿಕಾರಿ ನೆಪ ಹೇಳಿ ಪ್ರಭಾಕರ ಆಚಾರ್ಯ ಎನ್ನುವವರನ್ನು ಕರೆದೊಯ್ದು ಬಳಿಕ ಗುಂಡು ಹೊಡೆದು ಕೊಲೆ ಮಾಡಿದ ಆರೋಪ ಹೊತ್ತಿದ್ದ ಐವರನ್ನು ಕುಂದಾಪುರದ ಜಿಲ್ಲಾ ಮತ್ತು ಹೆಚ್ಚುವರಿ ಸತ್ಯ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ. ಸುಂದರ ಪೂಜಾರಿ, ನಾಗರಾಜ ಪೂಜಾರಿ, ಸಂತೋಷ ಪೂಜಾರಿ, ನಾಗರಾಜ್ ಅಲಿಯಾಸ್ ರಾಜ್ ಹಾಗೂ ಬಾಬು ಪೂಜಾರಿ ವಿರುದ್ಧ ಹೊರಿಸಲಾದ ಆರೋಪ ಋಜುವಾತುಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಐವರನ್ನೂ ನ್ಯಾಯಾಧೀಶರಾದ ಪ್ರಕಾಶ್ ಖಂಡೇರಿ ದೋಷಮುಕ್ತಗೊಳಿಸಿದ್ದರು. ಆರೋಪಿಗಳ ಪರ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು. ಘಟನೆ ವಿವರ: ಟವರ್ ಕಂಪನಿಯಲ್ಲಿ ಫೀಲ್ಡ್ ಆಫೀಸರ್ ಆಗಿದ್ದ ಪ್ರಭಾಕರ ಆಚಾರ್ಯ 2013ರ ಆಗಸ್ಟ್ 11ರಂದು ರಾತ್ರಿ ಮನೆಯಲ್ಲಿದ್ದು ಬಳಿಕ ಮನೆಯಿಂದ ತೆರಳಿದ್ದರು. ಮರುದಿನ ಬೆಳಗ್ಗೆ ಅವರ ಮೃತದೇಹ ಪತ್ತೆಯಾಗಿತ್ತು. ಸ್ನೇಹಿತರೇ ಆದ ಸುಂದರ ಪೂಜಾರಿ ಹಾಗೂ ಮತ್ತಿತರರು ಪ್ರಭಾಕರ ಆಚಾರ್ಯ ಅವರನ್ನು ಶಿಕಾರಿಗೆಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಗ್ರಾಮ ಜಟ್ಟಿಗ ಮತ್ತು ಹೋಬಳಿದಾರ್ ಮನೆ ದೊಡ್ಡ ನಾಗರ ಬನ ಹಾಗೂ ಸಪರಿವಾರ ಇದರ ಪುನ: ಪ್ರತಿಷ್ಠಾ ಮಹೋತ್ಸವ ಮತ್ತು ಆಶ್ಲೇಷಾ ಬಲಿ ಪೂಜೆ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಖ್ಯಾತ ಹರಿದಾಸರಾದ ಬಿ.ಸಿ.ರಾವ್ ಶಿವಪುರರವರು ಮಾತನಾಡಿ ಕರಾವಳಿಯಾದ್ಯಂತ ನಾಗಾರಾಧನೆಯು ಪ್ರಾಮುಖ್ಯತೆ ಪಡೆದಿದ್ದು ಪ್ರಕೃತಿ ಮಾತೆಗೆ ಭಕ್ತರು ಪೂಜನೀಯ ಗೌರವ ಸಲ್ಲಿಸುತ್ತಿದ್ದಾರೆ ಭಕ್ತಿ ನಿಷ್ಟೆ ಧೃಢ ನಂಬಿಕೆಯಿಂದ ಬದುಕಿನುದ್ದಕ್ಕೂ ಉತ್ತಮ ಬಾಳ್ವೆ ನಡೆಸಲು ಸಾಧ್ಯ ಎಂದು ಹೇಳಿ ನಾಗಾರಾಧನೆಯ ಮಹತ್ವದ ಬಗ್ಗೆ ಸುವಿಸ್ತಾರವಾಗಿ ಹರಿಕಥೆಯ ಮೂಲಕ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಿಕಾ ಇಂಟರ್ ನ್ಯಾಷನಲ್ ಹೋಟೆಲ್ ಮಾಲಿಕರು ಹಾಗೂ ಕೋಲ್ಲೂರು ದೇವಳದ ಮಾಜಿ ಧರ್ಮದರ್ಶಿಗಳಾದ ಶ್ರೀ ಜಯಾನಂದ ಹೋಬಳಿದಾರ್ ವಹಿಸಿದ್ದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀಅನಂತ ಹೋಬಳಿದಾರ್ ಇವರು ಸದ್ರಿ ಕ್ಷೇತ್ರದಿಂದ ಜೈನ ಮತಾವಲಂಬಿಯಾದ ಶ್ರೀ 108 ಸಂಭವಸಾಗರ ಮಹಾರಾಜರ ಕುರಿತಾದ ಪುಸ್ತಕ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಎ.ಶ್ರೀನಿವಾಸ ನಿವೃತ್ತ ಶಿಕ್ಷಕರು, ಬಾಲಯ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಪುರಸಭೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೋಡಿ ಬೀಚಿನಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪುರಸಭಾ ಅಧ್ಯಕ್ಷರಾದ ವಸಂತಿ ಮೋಹನ್ ಸಾರಂಗ, ಉಪಾಧ್ಯಕ್ಷರಾದ ರಾಜೇಶ್ ಕಾವೇರಿ, ಪುರಸಭಾ ಮುಖ್ಯಾಧಿಕಾರಿಯಾದ ವಾಣಿ ವಿ. ಆಳ್ವ, ಪುರಸಭಾ ಸದ್ಯರಾದ ಪುಷ್ಪ ಶೇಟ್, ಜ್ಯೋತಿ , ಗುಣರತ್ನ, ಮಂಜುನಾಥ ಶೆಟ್ಟಿ ಪರಿಸರ ಅಭಿಯಂತರು, ಆರೋಗ್ಯ ನಿರೀಕ್ಷಕರಾದ ಶರತ್ ಎಸ್ ಖಾರ್ವಿ, ಕಿರಿಯ ಆರೋಗ್ಯ ನಿರೀಕ್ಷಕರಾದ ರಾಘವೇಂದ್ರ ಮಂಜುನಾಥ ನಾಯ್ಕ, ಪೌರಕಾರ್ಮಿಕರು ಮತ್ತು ಸದ್ರಿ ವಾರ್ಡಿನ ಸಾರ್ವಜನಿಕರು ಭಾಗವಹಿಸಿ ಉತ್ತಮ ಪ್ರತಿಕ್ರಿಯೆ ನೀಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ಕೋಡಿ ಬ್ಯಾರೀಸ್ ಶಾಲೆ ರಾಮ ವಿದ್ಯಾಕೇಂದ್ರ ವಿಧ್ಯಾರ್ಥಿಗಳಿಗೆ ಮಂಜುನಾಥ ಶೆಟ್ಟಿ ಪರಿಸರ ಅಭಿಯಂತರು ಕುಂದಾಪುರ ಪುರಸಭೆ ಇವರು ವಿಶ್ವ ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ವಿವರಣೆಯನ್ನು ನೀಡಿದರು.
