Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ಮೂಲಕ ಪರಿಶಿಷ್ಟ ಜಾತಿಯ ಯುವಕ/ ಯುವತಿಯರು ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಡಿ ವಿವಾಹವಾದಲ್ಲಿ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮವನ್ನು ಅನುಷ್ಟಾನ ಮಾಡಲಾಗುತ್ತಿದ್ದು, ಈ ಯೋಜನೆಯ ಅರ್ಹ ಫಲಾನುಭವಿಗಳಿಗೆ ತಲಾ 50,000 ರೂ. ಗಳ ಪ್ರೋತ್ಸಾಹಧನ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಇಲಾಖಾ ವೆಬ್ಸೈಟ್ https://www.sw.kar.nic.in/ ನಲ್ಲಿ ಸಲ್ಲಿಸಿ, ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ರಜತಾದ್ರಿ, ಮಣಿಪಾಲ, ಉಡುಪಿ (ದೂ.ಸಂಖ್ಯೆ: 0820-2574892) ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರನ್ನು ಸಂಪರ್ಕಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ. ಮರು ಮದುವೆಯಾಗುವ ಪ.ಜಾತಿಯ ವಿಧವೆಯರಿಗೆ ಪ್ರೋತ್ಸಾಹ ಧನ: ಅರ್ಜಿ ಆಹ್ವಾನ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಮರು ಮದುವೆಯಾಗುವ ಪರಿಶಿಷ್ಟ ಜಾತಿಯ ವಿಧವೆಯರಿಗೆ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮವನ್ನು ಅನುಷ್ಟಾನ ಮಾಡಲಾಗುತ್ತಿದ್ದು, ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ತಲಾ 3 ಲಕ್ಷ ರೂ.ಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶ್ರೀ ನಾರಾಯಣಗುರು ಯುವಕ ಮಂಡಲದ ಪದಾಧಿಕಾರಿಗಳು ಲಾಕ್ ಡೌನ್’ನಲ್ಲಿ ಕುಂದಾಪುರ ಪರಿಸರದಲ್ಲಿ ಹಸಿದವರಿಗೆ, ವಿಕಲ ಚೇತನರಿಗೆ, ಲಾರಿ ಚಾಲಕರಿಗೆ, ಕೂಲಿಕಾರ್ಮಿಕರಿಗೆ ಸುಮಾರು 250 ಮಂದಿಗೆ ಊಟ ವಿತರಿಸಿದರು. ಈ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ಯುವಕ ಮಂಡಲ ರಿ. ಅಧ್ಯಕ್ಷ ಶ್ರೀನಾಥ್ ಕಡ್ಗಿಮನೆ, ಕಾರ್ಯದರ್ಶಿ ವಿಜಯ್ ಪೂಜಾರಿ, ಕಿರಣ್ ಪೂಜಾರಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 977 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು 6 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 383, ಕುಂದಾಪುರ, ಬೈಂದೂರು ತಾಲೂಕಿನ 280, ಕಾರ್ಕಳ, ಹೆಬ್ರಿ ತಾಲೂಕಿನ 310 ಮಂದಿಗೆ ಹಾಗೂ ಹೊರ ಜಿಲ್ಲೆಯಿಂದ ಬಂದ 4 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 977 ಪ್ರಕರಣಗಳಲ್ಲಿ 186 ಸಿಂಟಮಿಕ್ ಹಾಗೂ 791 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 29 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ 948 ಮಂದಿ ಹೋಮ್ ಐಸೊಲೇಷನ್ ಆಗಿದ್ದಾರೆ. ಇಂದು ಉಡುಪಿಯ 85 ವರ್ಷದ ವೃದ್ದ, 87 ವರ್ಷದ ವೃದ್ಧೆ, 72 ವರ್ಷದ ವೃದ್ದ, ಕಾರ್ಕಳದ 81 ವರ್ಷದ ವೃದ್ಧೆ, ಉಡುಪಿಯ 64 ವರ್ಷದ ಮಹಿಳೆ, 60 ವರ್ಷದ ಮಹಿಳೆ ಹಾಗೂ 58 ವರ್ಷದ ಪುರುಷ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು, ಮೇ.7: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂರ್ಣಪ್ರಮಾಣದ ಲಾಕ್‌ಡೌನ್ ಮಾಡಲು ಸರ್ಕಾರ ಮುಂದಾಗಿದ್ದು, ಸಚಿವರು, ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ ಬಳಿಕ ಸಿಎಂ ಯಡಿಯೂರಪ್ಪ ಮೇ 10 ರಿಂದ 14 ದಿನಗಳ ಕಾಲ ಲಾಕ್‌ಡೌನ್ ಮಾಡುವ ನಿರ್ಧಾರವನ್ನು ಪ್ರಕಟಿಸಿದರು. ಈ ಲಾಕ್‌ಡೌನ್ ಹೇಗಿರುತ್ತೆ? ಲಾಕ್ಡೌನ್ ಸಮಯದಲ್ಲಿ ಪಾಸ್ ಇದ್ದವರಿಗೆ ಮಾತ್ರ ಸಂಚರಿಸಲು ಅನುಮತಿ ನೀಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಶೀಘ್ರವೇ ಮಾರ್ಗಸೂಚಿ ಹೊರಡಿಸಲಿದೆ. ಅವಶ್ಯಕ, ತುರ್ತು ಸೇವೆ, ಸಂಚಾರಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ದಿನಸಿ, ಹಾಲು, ತರಕಾರಿ ಖರೀದಿಗೆ ಮಾತ್ರ ಸಮಯ ನಿಗದಿ ಮಾಡಿ ಅನುಮತಿ ನೀಡಲಾಗುತ್ತದೆ. ಅಂತರ್ ಜಿಲ್ಲಾ, ಅಂತಾರಾಜ್ಯ ಸಂಚಾರ ಸಂಪೂರ್ಣ ಬಂದ್ ಆಗಲಿದ್ದು, ಕೋವಿಡ್ ಸಂಬಂಧಿತ ಸರ್ಕಾರಿ ಇಲಾಖೆ, ಕಚೇರಿ-ಸಂಸ್ಥೆಗಳು ಬಿಟ್ಟು ಉಳಿದ ಎಲ್ಲಾ ಕಚೇರಿಗಳು ಬಂದ್ ಆಗಲಿದೆ. ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ. ಹೊಟೇಲ್, ರೆಸ್ಟೋರೆಂಟ್ ಗಳಿಂದ…

Read More

ತಂತ್ರಜ್ಞಾನವು ನಮ್ಮ ಜೀವನವನ್ನು ಸರಳಗೊಳಿಸಿರುವುದೇನೋ ನಿಜ. ಆದರೆ ಅಷ್ಟೇ ಅನಾನುಕೂಲಗಳು ಇವೆ. ಕಂಪ್ಯೂಟರ್, ಮೊಬೈಲ್ ಎಲ್ಲವೂ ಇಂದಿನ ಆಧುನಿಕ ಕಚೇರಿ ಕೆಲಸದಲ್ಲಿ ಅಗತ್ಯ. ದಿನಕ್ಕೆ ಎಂಟು- ಒಂಬತ್ತು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಕಂಪ್ಯೂಟರ್ ನೋಡುತ್ತೀರಿ. ಜೊತೆಗೆ ಯಾವುದಾದ್ರೂ ಇಂಪಾರ್ಟೆಂಟ್ ಮೆಸೇಜ್ ಬಂತಾ ಅಂತ ಮೊಬೈಲ್ ನೋಡುವುದು ಇದ್ದದ್ದೇ. ಇದೆಲ್ಲದರಿಂದ ಕಣ್ಣು ಉರಿಯಲು ಶುರುವಾಗಬಹುದು, ನೀರು ಬರಬಹುದು, ತಲೆನೋವು ಉಂಟಾಗಬಹುದು. ಒಂದು ಬದಿ ಮೈಗ್ರೇನ್ ಅಂತೂ ಕಚೇರಿ ಕೆಲಸದ ಒತ್ತಡಕ್ಕೇ ಸಂಬಂಧಪಟ್ಟದ್ದು. ಇದೆಲ್ಲದರ ಮೂಲ ಇರೋದು ನೀವು ಕಣ್ಣಿನ ಮೇಲೆ ಹೆಚ್ಚು ಒತ್ತಡ ಹಾಕೋದರಿಂದ. ಇನ್ನು ಕಂಪ್ಯೂಟರ್ ಹೊರಸೂಸುವ ವಿಕಿರಣಗಳು ತ್ವಚೆಯ ಮೇಲೆ ಕೂಡ ಪರಿಣಾಮ ಬೀರಲಿದ್ದು, ಅದರಿಂದ ರಕ್ಷಣೆ ಪಡೆಯುವುದು ಮುಖ್ಯ./ಕುಂದಾಪ್ರ ಡಾಟ್ ಕಾಂ/ ಆಗಾಗ, ಸಾಕೆನಿಸುವಷ್ಟು ನೀರು ಕುಡಿಯವುದು ಕಣ್ಣುಗಳು ಒಣಗದಂತೆ ಕಾಪಾಡಿಕೊಳ್ಳಲು ತುಂಬಾ ಮುಖ್ಯ. ಕಣ್ಣು ಒಣಗಿದಂತೆನಿಸಿದರೆ, ನೀರು ಚಿಮುಕಿಸುವುದು, ಮುಚ್ಚಿ ತೆರೆಯುವುದು, ಹಸಿರನ್ನು ದಿಟ್ಟಿಸುವುದು ಮಾಡುತ್ತಿರಿ. ಪ್ರತಿ ಮುಕ್ಕಾಲು ಗಂಟೆಗೊಮ್ಮೆ ಬ್ರೇಕ್ ಕೊಡಿ. ವಾಕ್ ಮಾಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ‘ಕಡಲಾಮೆಯ ಆಪ್ತಸಖ’ ಎಂಬ ಹೆಗ್ಗಳಿಕೆ ಪಡೆದಿರುವ ಸಹಸ್ರಾರು ಕಡಲಾಮೆಗಳ ಸಂರಕ್ಷಕ ಮರವಂತೆ ದಾಸಿ ವೆಂಕಟ ಖಾರ್ವಿ(86) ನಿಧನರಾದರು. ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಕಡಲಾಮೆಗಳ ಬಗೆಗಿನ ವಾತ್ಸಲ್ಯದಿಂದಾಗಿ ಸ್ವಯಂಪ್ರೇರಿತರಾಗಿ ಜೀವಿತದುದ್ದಕ್ಕೂ ಅವುಗಳ ರಕ್ಷಣೆ ಮಾಡಿಕೊಂಡು ಬಂದಿದ್ದರು. ಕಳೆದ ಕೆಲವು ಸಮಯದಿಂದ ಅನಾರೋಗ್ಯ ಪೀಡಿತರಾಗಿದ್ದರು. ಗಾಳಿಯ ಅಬ್ಬರ‍್ಕಕೆ ಮನೆಯೂ ಬಿದ್ದುಹೋಗಿತ್ತು. ಪುಟ್ಟ ಗುಡಿಸಲಿನಲ್ಲಿ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದರು. ಹೊಟ್ಟೆಪಾಡಿಗಾಗಿ ಮೀನು ಹಿಡಿಯುವ ಕಾಯಕ ಮಾಡಿಕೊಂಡಿದ್ದ ಇವರು ಕಡಲಾಮೆ ಸಂರಕ್ಷಣೆ ಪ್ರವೃತ್ತಿಯನ್ನಾಗಿಸಿಕೊಂಡವರು. ಕಡಲಾಮೆ ಮೊಟ್ಟೆ ಮರಿಗಳ ರಕ್ಷಣೆಗೆಂದೇ ಜೀವನ ಸೆವೆಸಿರುವ ಇವರದ್ದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಸೇವೆ. ಕಡಲತೀರದುದ್ದಕ್ಕೂ ಮೀನುಗಾರಿಕೆಯ ಕಸುಬಿನ ಬಳಿಕ ಪ್ರತಿದಿನ ಓಡಾಡುತ್ತಾ 45 ಸಾವಿರಕ್ಕೂ ಅಧಿಕ ಕಡಲಾಮೆ ಮೊಟ್ಟೆ ರಕ್ಷಿಸಿದ್ದಾರೆ. ನೂರಕ್ಕೂ ಹೆಚ್ಚು ಗಾಯಾಳು ಕಡಲಾಮೆಗಳ ಆರೈಕೆ ಮಾಡಿ ಕಡಲಿಗೆ ಮರಳಿಸಿದ್ದಾರೆ ಬಾಲ್ಯದಿಂದಲೂ ಕಡಲಾಮೆಗಳ ರಕ್ಷಣೆ ಮಾಡಿಕೊಂಡು ಬರುತ್ತಿದ್ದರು. ಕರಾವಳಿಯಲ್ಲಿ ಕಡಲಾಮೆ ಸಂರಕ್ಷಣೆಯಲ್ಲಿ ಮುಂಚೂಣಿಯ ಪಾತ್ರ ವಹಿಸಿದವರು. ಅನಾಥ ಶವಗಳ ಸಂಸ್ಕಾರ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಗುರುವಾರ 1526 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 6 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಈ ಪೈಕಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 682, ಕುಂದಾಪುರ, ಬೈಂದೂರು ತಾಲೂಕಿನ 595, ಕಾರ್ಕಳ, ಹೆಬ್ರಿ ತಾಲೂಕಿನ 242 ಮಂದಿಗೆ ಹಾಗೂ ಹೊರ ಜಿಲ್ಲೆಯಿಂದ ಬಂದ 7 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. 6 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು 1526 ಪ್ರಕರಣಗಳಲ್ಲಿ 342 ಸಿಂಟಮಿಕ್ ಹಾಗೂ 1184 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 33 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ 1493 ಮಂದಿ ಹೋಮ್ ಐಸೊಲೇಷನ್ ಆಗಿದ್ದಾರೆ. ಇಂದು ಉಡುಪಿಯ 87 ವರ್ಷದ ವೃದ್ದ, 69 ವರ್ಷದ ವೃದ್ದ, 72 ವರ್ಷದ ವೃದ್ದ, ಕಾರ್ಕಳದ 62 ವರ್ಷದ ವೃದ್ಧೆ, ಕುಂದಾಪುರದ 64 ವರ್ಷದ ವೃದ್ದ ಹಾಗೂ ಉಡುಪಿಯ 47 ವರ್ಷದ ಮಹಿಳೆ ಕೋವಿಡ್ನಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ತಾಲೂಕಿನ ನೂತನ ತಹಶೀಲ್ದಾರರಾಗಿ ಶೋಭಾಲಕ್ಷ್ಮೀ ಹೆಚ್. ಎಸ್ ಅವರನ್ನು ನಿಯುಕ್ತಿಗೊಳಿಸಿ ಸರಕಾರ ಆದೇಶಿಸಿದೆ. ಚನ್ನಗಿರಿ ತಾಲೂಕಿನ ಗ್ರೇಡ್ -2 ತಹಶೀಲ್ದಾರರಾಗಿದ್ದ ಶೋಭಾಲಕ್ಷ್ಮೀ ಅವರನ್ನು ಬೈಂದೂರಿನ ಖಾಲಿ ಇರುವ ಗೇಡ್-1 ತಹಶೀಲ್ದಾರ್ ಹುದ್ದೆಗೆ ನೇಮಕ ಮಾಡಿ ಕಂದಾಯ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ. ಕಳೆದ ಐದು ತಿಂಗಳಿನಿಂದ ತಹಶೀಲ್ದಾರ ಹುದ್ದೆ ಖಾಲಿಯಿದ್ದು, ಇಲಾಖಾ ಕೆಲಸಗಳಿಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಕೆಲ ದಿನಗಳ ಹಿಂದಷ್ಟೇ ಕುಮಟಾದ ಅಶೋಕ ಎನ್. ಭಟ್ ಅವರನ್ನು ತಹಶೀಲ್ದಾರರನ್ನಾಗಿ ನೇಮಿಸಿ ಆದೇಶಿಸಲಾಗಿತ್ತಾದರೂ ಬಳಿಕ ನೇಮಕಾತಿ ಆದೇಶ ರದ್ದಾಗಿತ್ತು. ತಹಶೀಲ್ದಾರ್ ಬಸಪ್ಪ ಪೂಜಾರಿ ಅವರು ವರ್ಗಾವಣೆಯ ಬಳಿಕ ಬ್ರಹ್ಮಾವರದ ತಹಶೀಲ್ದಾರ್ ಕಿರಣ ಗೌರಯ್ಯ ಅವರು ಬೈಂದೂರಿನ ಪ್ರಭಾರ ತಹಶೀಲ್ದಾರರರಾಗಿ ಸೇವೆ ಸಲ್ಲಿಸುತ್ತಿದ್ದರು. ► ಬೈಂದೂರು ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಉತ್ಪಾದನಾ ಘಟಕ ಮಂಜೂರು  – https://kundapraa.com/?p=47985 . ► ಉಡುಪಿ ಜಿಲ್ಲೆಗೆ ಅಗತ್ಯವಿರುವ ಆಕ್ಸಿಜಿನ್, ರೆಮ್ಡಿಸಿವರ್ ಸರಬರಾಜು ಮಾಡಲು ಕ್ರಮ: ಸಚಿವ ಬೊಮ್ಮಾಯಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಆನ್ ಸೈಟ್ ಆಕ್ಸಿಜನ್ ಉತ್ಪಾದನಾ ಘಟಕ ಮಂಜೂರಾಗಿದ್ದು, ಕೋವಿಡ್ ಹಾಗೂ ಇತರೆ ಆಕ್ಸಿಜನ್ ಆಗತ್ಯವಿರುವ ರೋಗಿಗಳ ಚಿಕಿತ್ಸೆಗೆ ನೆರವಾಗಲಿದೆ. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಈ ಘಟಕ ನಿರ್ಮಾಣವಾಗುತ್ತಿದ್ದು, ಪ್ರತಿನಿತ್ಯ 80 ಸಿಲಿಂಡರ್ನಷ್ಟು ಆಕ್ಸಿಜನ್ ಉತ್ಪಾದನೆಯಾಗಲಿದೆ. ರಾಜ್ಯದಲ್ಲಿ ಒಟ್ಟು 40 ಕಡೆಗಳಲ್ಲಿ ಆಕ್ಸಿಜನ್ ಘಟಕ ಸ್ಥಾಪನೆಗೆ ಮಂಜೂರಾತಿ ದೊರೆತಿದ್ದು, ಉಡುಪಿ ಜಿಲ್ಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ತಾಲೂಕು ಆಸ್ಪತ್ರೆಗೆ 390 ಎಲ್.ಪಿ.ಎಂ ಸಾಮರ್ಥ್ಯದ ಆನ್ ಸೈಟ್ ಆಕ್ಸಿಜನ್ ಉತ್ಪಾದನಾ ಘಟಕ ದೊರೆತಿದೆ. ಬೈಂದೂರು ಸರಕಾರಿ ಆಸ್ಪತ್ರೆ ಆವರಣದ ಪ್ರತ್ಯೇಕ ಕಟ್ಟಡದಲ್ಲಿ ಆಕ್ಸಿಜನ್ ಘಟಕ ಸ್ಥಾಪನೆಗೆ ಈಗಾಗಲೇ ಸ್ಥಳ ಪರಿಶೀಲನೆ ನಡೆದಿದ್ದು, ವಿದ್ಯುತ್ ಹಾಗೂ ಗುತ್ತಿಗೆ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದೆ. ಒಂದು ತಿಂಗಳ ಒಳಗೆ ಆಕ್ಸಿಜನ್ ಘಟಕ ಸೇವೆಗೆ ಲಭ್ಯವಾಗಿದೆ. ಉತ್ಪಾದನೆಯಾಗಲಿರುವ ಆಕ್ಸಿಜನ್ ಬೇರೆಡೆ ಸಾಗಿಸಲು ಸಾಧ್ಯವಿಲ್ಲದ ಕಾರಣ ಪೂರ್ಣ ಪ್ರಮಾಣದಲ್ಲಿ ಆಸ್ಪತ್ರೆಗೆ ಈ ಘಟಕ ಲಭ್ಯವಾಗಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ…

Read More

ಕುಂದಾಪುರ: ಊರ್ಮನಿ ಅಂಗಡಿ.ಕಾಂ ಈಗ ಸ್ಥಳೀಯ ದಿನಸಿ ವಿತರಣೆ, ಹಣ್ಣುಗಳು, ತರಕಾರಿಗಳು ಮತ್ತು ದೈನಂದಿನ ಅಗತ್ಯತೆಗಳನ್ನು ತಮ್ಮ ಪೋಟೆಲ್‌ನಲ್ಲಿ ಪರಿಚಯಿಸಿದ್ದು ಕುಂದಾಪುರ ಪಟ್ಟಣದಿಂದ 5 ಕಿಲೋಮೀಟರ್ ಸುತ್ತಲಿನ ವಾಪ್ತಿಯಲ್ಲಿ ಡೆಲಿವರಿ ಸೇವೆ ನೀಡಲಾಗುತ್ತಿದೆ. ಪ್ರಸ್ತುತ ಕುಂದಾಪುರ ಪಟ್ಟಣ, ಕೋಡಿ, ಕೋಟೇಶ್ವರ, ಹೇರಿಕುದ್ರು ಮತ್ತು ತಲ್ಲೂರು ಪ್ರದೇಶಗಳಿಗೆ ದಿನಸಿ ವಿತರಣೆ ಸೇವೆ ಲಭ್ಯವಾಗಲಿದೆ. ಈ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಮನೆಯಲ್ಲಿ ಸುರಕ್ಷಿತವಾಗಿರಲು ಮತ್ತು ವಸ್ತುಗಳನ್ನು ಆರ್ಡರ್ ಮಾಡಲು ಸಹಾಯ ಮಾಡಲು ಉದ್ದೇಶಿಸಿದೆ. ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೋರ್ಟಲ್ 100% ಆನ್‌ಲೈನ್ / ನಗದು-ಕಡಿಮೆ ಪಾವತಿ ಮತ್ತು ZERO-TOUCH ವಿತರಣೆಯನ್ನು ಅನುಸರಿಸುತ್ತಿದೆ. ಪ್ರಸ್ತುತ ವಹಿವಾಟು ಸಮಯವು 1 ದಿನಕ್ಕಿಂತ ಕಡಿಮೆಯಿದೆ ಆದರೆ ಮುಂಬರುವ ದಿನಗಳಲ್ಲಿ ಟಿ-ಎ-ಟಿ ಅನ್ನು ಕಡಿಮೆ ಮಾಡಲು ಎಲ್ಲಾ ಕ್ರಮಗಳು ಪಾಲಿಸಲಾಗುತ್ತಿದೆ. ಎಲ್ಲಾ ವಸ್ತುಗಳನ್ನು ಪಟ್ಟಣದ ಜನಪ್ರಿಯ ಸೂಪರ್ ರ್ಮಾರ್ಕೆಟ್ಗಳಿಂದ ಮತ್ತು 100% ಇತ್ತೀಚಿನ / ತಾಜಾ ಸ್ಟಾಕ್ಗಳಿಂದ ಪಡೆಯಲಾಗುತ್ತದೆ. ಸಿಸ್ಟಮ್ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಪೋರ್ಟಲ್ ಪ್ರತಿ ಆರ್ಡರ್ ಮೇಲೆ ನಾಮಮಾತ್ರ…

Read More